Author: kannadanewsnow09

ಮಂಡ್ಯ : ಮದ್ದೂರು ಪಟ್ಟಣದಲ್ಲಿ ಇತ್ತಿಚೆಗೆ ನಡೆದ ಗಲಭೆ ಖಂಡಿಸಿ ಸೌಹಾರ್ದ ಸಾಮರಸ್ಯ ನಡಿಗೆ ನಡೆಸಲು ಮುಂದಾಗಿದ್ದ ವಿವಿಧ ಸಂಘಟನೆಗಳ ಜಾಥಾ ಕಾರ್ಯಕ್ರಮಕ್ಕೆ ಪೋಲೀಸರು ನಿರಾಕರಿಸಿದ ಹಿನ್ನೆಲೆಯಲ್ಲಿ ಜನಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿದ ಘಟನೆ ಸೋಮವಾರ ಜರುಗಿತು. ಮಳವಳ್ಳಿ ರಸ್ತೆಯಲ್ಲಿರುವ ಪ್ರೊ.ನಂಜುಂಡಸ್ವಾಮಿ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡುವುದರ ಮೂಲಕ ಸಾಮರಸ್ಯ ನಡಿಗೆಗೆ ಚಾಲನೆ ನೀಡಲಾಯಿತು. ಶಿವಪುರದ ಧ್ವಜ ಸತ್ಯಾಗ್ರಹ ಸೌಧದವರೆಗೆ ಕಾಲ್ನಡಿಗೆ ಜಾಥಾ ಮಾಡಲು ಪೊಲೀಸ್ ಇಲಾಖೆ ನಿರಾಕರಣೆ ಮಾಡಿದ ಹಿನ್ನೆಲೆಯಲ್ಲಿ ಪ್ರತಿಮೆಯ ಬಳಿಯೇ ಸೌಹಾರ್ದ ಸಾಮರಸ್ಯದ ಸಭೆ ನಡೆಸಲಾಯಿತು. ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ, ಪುರಸಭಾ ಮಾಜಿ ಅಧ್ಯಕ್ಷ ಎಂ.ಸಿ.ಬಸವರಾಜು, ಜಿಲ್ಲೆಯು ಶಾಂತಿ, ಸಾಮರಸ್ಯ ಹಾಗೂ ಸಹಬಾಳ್ವೆಗೆ ಹೆಸರಾಗಿದೆ. ಇಂತಹ ಜಿಲ್ಲೆಯಲ್ಲಿ ಕೆಲವರು ಕೋಮು ಗಲಭೆ ಉಂಟು ಮಾಡುವ ಮೂಲಕ ಮುಂದೆ ಅಧಿಕಾರ ಹಿಡಿಯಲು ಹುನ್ನಾರ ನಡೆಸಿದ್ದಾರೆ. ಆ ಪಿತೂರಿ ವಿರುದ್ಧ ವಿವಿಧ ಜನಪರ ಸಂಘಟನೆಗಳ ನಾವೆಲ್ಲರೂ ಸೌಹಾರ್ದ ಸಾಮರಸ್ಯ ನಡಿಗೆಯನ್ನು ಸೋಮವಾರ ನಡೆಸುವ ಮೂಲಕ ಸಮಾಜದಲ್ಲಿ ಶಾಂತಿ, ಸೌಹಾರ್ದತೆ…

Read More

ಮುಂಬೈ : ಭಾರತವು ಹಬ್ಬದ ಋತುವಿಗೆ ಕಾಲಿಡುತ್ತಿದ್ದಂತೆ – ಸಂತೋಷ, ಒಗ್ಗಟ್ಟು ಮತ್ತು ಆಚರಣೆಯ ಸಮಯ. ಜಿಯೋಮಾರ್ಟ್ ಸೆಪ್ಟೆಂಬರ್ 22 ರಿಂದ ಆರಂಭವಾಗಿರುವ ಜಿಯೋ ಉತ್ಸವ್ 2025 ಅನ್ನು ಇನ್ನಷ್ಟು ವಿಶೇಷವಾಗಿಸಲು ಸಜ್ಜಾಗಿದೆ. ದೇಶಾದ್ಯಂತ ಹಬ್ಬದ ಉತ್ಸಾಹವನ್ನು ಆಚರಿಸುತ್ತಾ, ಜಿಯೋಮಾರ್ಟ್ ಗ್ರಾಹಕರಿಗೆ ಸಾಟಿಯಿಲ್ಲದ ಉಳಿತಾಯ, ವ್ಯಾಪಕ ಉತ್ಪನ್ನ ಆಯ್ಕೆ ಮತ್ತು ಯಾವುದೇ ಗುಪ್ತ ಶುಲ್ಕಗಳಿಲ್ಲದೆ (ಹಿಡನ್ ಚಾರ್ಜಸ್) ಮನೆ ಬಾಗಿಲಿಗೆ ಅಗತ್ಯ ವಸ್ತುಗಳನ್ನು ವಿತರಣೆ ಮಾಡುತ್ತದೆ. ಜಿಯೋ ಉತ್ಸವ್‌ದಲ್ಲಿ ಐಫೋನ್ 16 ಇ ಅತ್ಯಂತ ಕಡಿಮೆ ಬೆಲೆಗೆ 44,870 ರೂಗೆ ಸಿಗಲಿದೆ. ಈ ಸೇಲ್‌ನಲ್ಲಿ ಐಫೋನ್ 16 ಪ್ಲಸ್ 61,700 ರೂ. ನಿಂದ ಪ್ರಾರಂಭವಾಗಲಿದೆ. ಜೊತೆಗೆ, ಶಾಪರ್‌ಗಳು ಬ್ಲಾಕ್ ಬಸ್ಟರ್ ಎಲೆಕ್ಟ್ರಾನಿಕ್ಸ್ ಡೀಲ್‌ಗಳನ್ನು ಆನಂದಿಸಬಹುದು. ಪ್ರಮುಖ ಡೀಲ್‌ಗಳೆಂದರೆ: * ಇನ್ಫಿನಿಕ್ಸ್ ಜಿಟಿ 30 ರೂ.17,499 ರಿಂದ ಪ್ರಾರಂಭವಾಗುತ್ತದೆ * ₹ 49,590 ರಿಂದ ಪ್ರಾರಂಭವಾಗುವ ಮ್ಯಾಕ್ ಬುಕ್‌ಗೆ ಅಪ್ ಗ್ರೇಡ್ ಮಾಡಿ * ಸ್ಯಾಮ್ ಸಂಗ್ 32 ಇಂಚಿನ ಟಿವಿ 10,490…

Read More

ಮೈಸೂರು : ಮುಂದಿನ ಒಲಂಪಿಕ್ಸ್ ಪದಕ ವಿಜೇತರಿಗೆ ಕರ್ನಾಟಕ ಸರ್ಕಾರ 6 ಕೋಟಿ ರೂ. ನಗದು ಬಹುಮಾನ ನೀಡಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಅವರು ಇಂದು ಮೈಸೂರಿನ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ರಾಜ್ಯ ದಸರಾ ಸಿಎಂ ಕಪ್ ಕ್ರೀಡಾಕೂಟ ವನ್ನು ಉದ್ಘಾಟಿಸಿ ಮಾತನಾಡಿದರು. ಈ ಕ್ರೀಡಾಕೂಟದಲ್ಲಿ ಒಂದು ವಿಭಾಗದಿಂದ 720 ಕ್ರೀಡಾಪಟುಗಳಂತೆ 5 ವಿಭಾಗಗಳಿಂದ ಒಟ್ಟು 3600 ಕ್ರೀಡಾಪಟುಗಳು ಭಾಗವಹಿಸುತ್ತಿದ್ದಾರೆ. ಕ್ರೀಡಾಕೂಟದಲ್ಲಿ ಭಾಗವಹಿಸುವ ಎಲ್ಲಾ ಕ್ರೀಡಾಪಟುಗಳಿಗೆ ಶುಭಕೋರಿದ ಮುಖ್ಯಮಂತ್ರಿಗಳು, ಸೋಲುಗೆಲುವುಗಳಿಗಿಂತ, ಕ್ರೀಡಾಮನೋಭಾವ ಮುಖ್ಯ. ಇಂದು ಚಾಮುಂಡಿವಿಹಾರ ಕ್ರೀಡಾಂಗಣದ ಗ್ಯಾಲರಿ ಹಾಗೂ ಈಜುಕೊಳಗಳಿಗೆ ಅತ್ಯಾಧುನಿಕ ಟೆನ್ಸೈಲ್ ಮೆಂಬ್ರೇನ್ ಛಾವಣಿ ಅಳವಡಿಸುವ ಮತ್ತು ಫುಟ್ಬಾಲ್ ಅಂಕಣ ನಿರ್ಮಿಸುವ ಕಾಮಗಾರಿಯನ್ನು ರೂ. 20.78 ಕೋಟಿ ವೆಚ್ಚದಲ್ಲಿ ಕೈಗೊಳ್ಳಲಾಗುತ್ತಿದೆ ಎಂದರು. ವಿನೇಶ್ ಫೋಗಟ್ ಅವರು ಅಂತರಾಷ್ಟ್ರೀಯ ಮಟ್ಟದ ಕ್ರೀಡಾಪಟು ಸಮಾರಂಭದಲ್ಲಿ ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿ ಪುರಸ್ಕೃತ ಅಂತರರಾಷ್ಟ್ರೀಯ ಮಹಿಳಾ ಕುಸ್ತಿಪಟು ಶ್ರೀಮತಿ ವಿನೇಶ್ ಫೋಗಟ್ ಭಾಗವಹಿಸಿರುವುದು ವಿಶೇಷ. ಕುಸ್ತಿ ಕೇವಲ…

Read More

ಬೆಂಗಳೂರು: ವೈದ್ಯಕೀಯ, ದಂತ ವೈದ್ಯಕೀಯ ಕೋರ್ಸ್ ಗಳ ಎರಡನೇ ಸುತ್ತು ಹಾಗೂ ಆಯುಷ್ ಕೋರ್ಸ್ ಗಳ ಮೂರನೇ ಸುತ್ತಿನ ಸೀಟು ಹಂಚಿಕೆ ಹಂಚಿಕೆಯ ಅಂತಿಮ ಫಲಿತಾಂಶ ಸೆ.23ರಂದು ಪ್ರಕಟವಾಗಲಿದ್ದು, ಆ ಬಳಿಕ ಪ್ರವೇಶ ಪ್ರಕ್ರಿಯೆ ಆರಂಭವಾಗಲಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ತಿಳಿಸಿದ್ದಾರೆ. ಅಂತಿಮ ಸುತ್ತಿನ‌ ಫಲಿತಾಂಶ ಪ್ರಕಟಣೆ ನಂತರ ಸೆ.26ರೊಳಗೆ ಶುಲ್ಕ ಪಾವತಿಸಿ ಸೀಟು ಖಾತರಿ ಚೀಟಿ ಡೌನ್‌ಲೋಡ್ ಮಾಡಿಕೊಂಡು ಸೆ.28ರೊಳಗೆ ಕಾಲೇಜುಗಳಿಗೆ ವರದಿ ಮಾಡಿಕೊಳ್ಳಬೇಕು ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ. ಅಖಿಲ ಭಾರತ ಕೋಟಾ (ಎಂಸಿಸಿ) ಹಾಗೂ ಕೆಇಎ ಎರಡೂ ಕಡೆ ವೈದ್ಯಕೀಯ ಸೀಟು ಹಂಚಿಕೆಯಾದ 774 ಅಭ್ಯರ್ಥಿಗಳ ಪೈಕಿ, ಎಂಸಿಸಿ ಸೀಟು ಉಳಿಸಿಕೊಳ್ಳಲು ಇಚ್ಚಿಸುವ ಅಭ್ಯರ್ಥಿಗಳಿಗೆ ಕೆಇಎ ಸೀಟು ಬಿಟ್ಟು ಹೊರ ಹೋಗಲು ಇಂದು ಇಡೀ ದಿನ ಅವಕಾಶ ನೀಡಲಾಗಿತ್ತು. ಈ ಪ್ರಕ್ರಿಯೆ ನಂತರ ರದ್ಧಾದ ಸೀಟುಗಳನ್ನು ಇದೇ ಸುತ್ತಿಗೆ ತೆಗೆದುಕೊಂಡು ಪುನಃ ಸೀಟು ಹಂಚಿಕೆ ಫಲಿತಾಂಶ ಪ್ರಕಟಿಸಲಾಗುವುದು ಎಂದು ಅವರು ಹೇಳಿದ್ದಾರೆ. ಕೆಇಎ…

Read More

ಶಿವಮೊಗ್ಗ : ರಾಜ್ಯ ಸರ್ಕಾರ ಕೈಗೊಂಡಿರುವ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಸಮೀಕ್ಷ್ಷೆಗೆ ರಾಜ್ಯಾದ್ಯಾಂತ ಎಲ್ಲಾ ರೀತಿ ತಯಾರಿ ನಡೆಸಲಾಗಿದ್ದು, ಈ ಸಮೀಕ್ಷೆಗಾಗಿ ರಾಜ್ಯದಲ್ಲಿ ಶಿಕ್ಷಣ ಇಲಾಖೆಯಿಂದ ಒಟ್ಟು 1.60 ಲಕ್ಷ ಶಿಕ್ಷಕರನ್ನು ನೇಮಿಸಲಾಗಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಮಧುಬಂಗಾರಪ್ಪ ತಿಳಿಸಿದರು. ಸೋಮವಾರ ನಗರದ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಆವರಣದಲ್ಲಿ ಸಾಮಾಜಿ, ಆರ್ಥಿಕ ಹಾಗೂ ಶೈಕ್ಷಣಿಕ ಗಣತಿಯ ಸಮೀಕ್ಷೆ ನಡೆಸುವ ಶಿಕ್ಷಕರಿಗೆ ಗಣತಿ ಕಾರ್ಯ ಕಿಟ್ ಅನ್ನು ವಿತರಿಸಿ ಅವರು ಮಾತನಾಡಿದರು. ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆಯುತ್ತಿದೆ. ಚುನಾವಣೆ ಸಂದರ್ಭದಲ್ಲಿ ನಮ್ಮ ಪ್ರಣಾಳಿಕೆ ನೀಡಿದ ಭರವಸೆಯಂತೆ ಒಳಮೀಸಲಾತಿ ಜಾರಿಗೆ ತಂದೆವು. ಈಗ ಹಿಂದುಳಿದ ವರ್ಗಗಳ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯನ್ನು ಮಾಡಲು ಮುಂದಾಗಿದ್ದೇವೆ. ಈ ಮೂಲಕ ಮತದಾರರಿಗೆ ಕೊಟ್ಟ ಮಾತನ್ನು ಉಳಿಸಿಕೊಳ್ಳುತ್ತಿದೆ ಎಂದರು. ಈಗಾಗಲೇ ಸರ್ಕಾರದ ಆದೇಶದಂತೆ ಸಮೀಕ್ಷೆಗೆ ನನ್ನ ಇಲಾಖೆಯಿಂದ ಎಲ್ಲಾ ರೀತಿಯ ತಯಾರಿ ಮಾಡಿಕೊಳ್ಳಲಾಗಿದೆ. ರಾಜ್ಯದಲ್ಲಿ 1…

Read More

ಶಿವಮೊಗ್ಗ: ರಾಜ್ಯದ 2ನೇ ಅತಿದೊಡ್ಡ ದಸರಾ ಎಂದೇ ಖ್ಯಾತಿಯಾಗಿರುವಂತ ಶಿವಮೊಗ್ಗ ದಸರಾಕ್ಕೆ ನಿವೃತ್ತ ಲೆಫ್ಟಿನೆಂಟ್ ಜನರಲ್ ಬಿಎಸ್ ರಾಜು ಅವರು ಚಾಲನೆ ನೀಡಿದರು. ಇಂದು ಶಿವಮೊಗ್ಗ ದಸರಾಕ್ಕೆ ಬೆಳ್ಳಿ ಮಂಟಪದಲ್ಲಿರುವ ಚಾಮುಂಡೇಶ್ವರಿ ದೇವಿಗೆ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಲಾಯಿತು. ಇಂದಿನಿಂದ ಅಕ್ಟೋಬರ್.4ರವರೆಗೆ ಶಿವಮೊಗ್ಗದಲ್ಲಿ ನವರಾತ್ರಿ ಉತ್ಸವ ದೇವಾಲಯದಲ್ಲಿ ಸಂಭ್ರಮದಿಂದ ನಡೆಯಲಿದೆ. ಶಿವಮೊಗ್ಗ ಪಾಲಿಕೆಯಿಂದ 650 ಕೆಜಿ ತೂಕದ ಬೆಳ್ಳಿ ಅಂಬಾರಿಯನ್ನು ಲಾರಿಯ ಮೇಲೆ ಮೆರವಣಿಗೆ ಮಾಡಿ ಕೋಟೆ ಚಂಡಿಕಾ ದುರ್ಗಾ ಪರಮೇಶ್ವರಿ ದೇವಾಲಯಕ್ಕೆ ಕೊಂಡೊಯ್ಯಲಾಯಿತು. ಅಂದಹಾಗೇ ಶಿವಮೊಗ್ಗ ದಸರಾ ಉದ್ಘಾಟಿಸಿದಂತ ಬಿಎಸ್ ರಾಜು ಅವರು, ಭಾರತೀಯ ಸೇನೆಯಲ್ಲಿ ಕರ್ತವ್ಯ ನಿರ್ವಹಿಸಿ, ರಾಷ್ಟ್ರಪತಿಗಳಿಂದ ಪ್ರಶಸ್ತಿಯನ್ನು ಪಡೆದಿದ್ದಂತ ನಿವೃತ್ತ ಯೋಧರಾಗಿದ್ದಾರೆ. https://kannadanewsnow.com/kannada/cyber-fraud-attempt-against-infosys-chief-sudha-murthy-complaint-filed/ https://kannadanewsnow.com/kannada/watch-video-congress-releases-ai-against-pm-modi-another-video/

Read More

ಬೆಂಗಳೂರು: ಇನ್ಫೋಸಿಸ್ ಮುಖ್ಯಸ್ಥೆ ಸುಧಾಮೂರ್ತಿಗೂ ಸೈಬರ್ ವಂಚಕರು ಕಾಟಕೊಟ್ಟಿದ್ದಾರೆ. ದೂರ ಸಂಪರ್ಕ ಸಚಿವಾಲಯದ ಉದ್ಯೋಗಿ ಎಂದು ವಂಚನೆಗೆ ಯತ್ನಿಸಿರುವಂತ ಘಟನೆ ನಡೆದಿದೆ. ಸೆಪ್ಟೆಂಬರ್.5ರಂದು ಕರೆ ಮಾಡಿದಂತ ಸೈಬರ್ ವಂಚಕನೊಬ್ಬ ತಾನು ದೂರ ಸಂಪರ್ಕ ಸಚಿವಾಲಯದ ಉದ್ಯೋಗಿ ಎಂಬುದಾಗಿ ಪರಿಚಯಿಸಿಕೊಂಡಿದ್ದಾನೆ. ಆ ಬಳಿಕ ನಿಮ್ಮ ನಂಬರ್ ಆಧಾರ್ ಗೆ ಲಿಂಕ್ ಮಾಡದೇ ನೋಂದಾಯಿಸಲಾಗಿದೆ ಎಂದು ಹೇಳಿದ್ದಾನೆ. ಇನ್ನೂ ಇನ್ಫೋಸಿಸ್ ಮುಖ್ಯಸ್ಥೆ ಸುಧಾಮೂರ್ತಿಯವರ ವೈಯಕ್ತಿಕ ಮಾಹಿತಿ ಪಡೆಯಲು ಸೈಬರ್ ವಂಚಕ ಯತ್ನಿಸಿದ್ದಾನೆ. ಅಲ್ಲದೇ ನಿಮ್ಮ ನಂಬರ್ ಗೆ ಅಶ್ಲೀಲ ವೀಡಿಯೋ ಕಳಿಸಲಾಗ್ತಿದೆ. ಅದನ್ನು ನಿಲ್ಲಿಸಲಾಗಿದೆ ಎಂದು ಬೆದರಿಕೆ ಹಾಕಿದ್ದಾನೆ. ಹೀಗಾಗಿ ಸೈಬರ್ ವಂಚಕನ ವಿರುದ್ಧ ದೂರು ನೀಡಲಾಗಿದೆ. https://kannadanewsnow.com/kannada/power-outage-in-these-areas-of-bellary-district-from-tomorrow-to-september-30/ https://kannadanewsnow.com/kannada/watch-video-congress-releases-ai-against-pm-modi-another-video/

Read More

ಬಳ್ಳಾರಿ : ಸಿರುಗುಪ್ಪ ಪಟ್ಟಣದ ವೈಷ್ಣವಿ ಹೋಟೆಲ್ ನಿಂದ ರಿಲಾಯನ್ಸ್ ಟ್ರೆಂಡ್‌ವರೆಗೆ ಎನ್‌ಹೆಚ್ 150ಎ ದ ರಸ್ತೆ ಅಗಲೀಕರಣ ಕಾಮಗಾರಿ ನಡೆಯುತ್ತಿರುವುದರಿಂದ ರಸ್ತೆ ಬದಿಯ ವಿದ್ಯುತ್ ಮಾರ್ಗಗಳನ್ನು ಸ್ಥಳಾಂತರಿಸುವ ಕಾರ್ಯ ಕೈಗೊಳ್ಳಲಾಗುತ್ತಿದ್ದು, ಸೆ.23 ರಿಂದ 30 ರ ವರೆಗೆ 110/33/11ಕೆವಿ ಸಿರುಗುಪ್ಪ ವಿದ್ಯುತ್ ವಿತರಣಾ ಕೇಂದ್ರದಿಂದ ಹಾದು ಹೋಗುವ ಎಫ್‌ಐಬಿ ಎಪಿಎಂಸಿ ಫೀಡರ್ ನಿಂದ ವಿದ್ಯುತ್ ಪೂರೈಕೆಯಾಗುವ ಸಿರುಗುಪ್ಪ ಪಟ್ಟಣದ ವಿವಿಧೆಡೆ ವಿದ್ಯುತ್ ವ್ಯತ್ಯಯವಾಗಲಿದೆ. ವಿದ್ಯುತ್ ವ್ಯತ್ಯಯವಾಗುವ ಪ್ರದೇಶಗಳು ಸಿರುಗುಪ್ಪ ಪಟ್ಟನದ ವಿಶ್ವಜ್ಯೋತಿ ಶಾಲೆ ಹತ್ತಿರ, ಮುರಾರಿ ಬಡಾವಣೆ, ಮಹಾವೀರ ಬಡಾವಣೆ, ಸಿರಿ ನಗರ, ದೇವಲಾಪುರ ಕ್ರಾಸ್, ಮಹಾವೀರ ಎನ್‌ಕ್ಲೇವ್, ವಿವೈ ಸಿಟಿ, ಹೈದರ್ ಅಲಿ ಕಾಲೋನಿ, ಎವಿಎಸ್ ಫಂಕ್ಷನ್ ಹಾಲ್, ಸಿದ್ದಪ್ಪ ನಗರ, ಸಾಯಿಬಾಬಾ ದೇವಸ್ಥಾನ, ದೇವಲಾಪುರ ಗ್ರಾಮ, ಲಕ್ಷ್ಮಿ ವೆಂಕಟೇಶ್ವರ ನಗರ, ರಾಘವಯ್ಯ ಕಾಲೋನಿ, ಎಪಿಎಂಸಿ ಆವರಣ, ಕುವೆಂಪು ನಗರ, ತ್ಯಾಗರಾಜ ನಗರ, ನೀಲಾಂಜನೇಯ ಬಡಾವಣೆ, ವಿನಾಯಕ ನಗರ, ಕೃಷ್ಣ ನಗರ, ಸೌಭಾಗ್ಯ ನಗರ, ಹನುಮಂತ ನಗರ, ಆಶ್ರಯ…

Read More

ಮಂಡ್ಯ: ಮುಖ್ಯಮಂತ್ರಿ ಸಿದ್ದರಾಮಯ್ಯನವರು ಡಿಕ್ಟೇಟ್ ಮಾಡಿ ಬರೆಸುವ ಜಾತಿ ಸಮೀಕ್ಷೆ ಅಧಿಕೃತವಲ್ಲ. ಇದು ಜಾತಿಗಳನ್ನು ಒಡೆಯುವ ಸಮೀಕ್ಷೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಜಾತಿ ಸಮೀಕ್ಷೆಯಲ್ಲಿ ಮತಾಂತರಕ್ಕೆ ಪ್ರೋತ್ಸಾಹ ನೀಡಲಾಗಿದೆ. ಮತಾಂತರ ಮಾಡಲು ಸಿಎಂ ಸಿದ್ದರಾಮಯ್ಯ ವೇದಿಕೆ ಸೃಷ್ಟಿಸಿದ್ದಾರೆ. ಒಕ್ಕಲಿಗ, ದಲಿತ, ವಿಶ್ವಕರ್ಮರನ್ನು ಕ್ರೈಸ್ತ ಧರ್ಮಕ್ಕೆ ಸೇರಿಸಲು 52 ಹೊಸ ಜಾತಿಗಳನ್ನು ಸೃಷ್ಟಿ ಮಾಡಲಾಗಿದೆ. ತಮಗೆ ಬೇಕಾದ ಜಾತಿಗಳ ಸಂಖ್ಯೆಯನ್ನು ಕಡಿಮೆ ಅಥವಾ ಹೆಚ್ಚು ಎಂದು ತೋರಿಸಬಹುದು. ಮುಸ್ಲಿಮರು ಹಾಗೂ ಕ್ರೈಸ್ತರಲ್ಲಿ ಅನೇಕ ಜಾತಿಗಳಿದ್ದು, ಅದನ್ನು ಬಹಿರಂಗ ಮಾಡುತ್ತಿಲ್ಲ. ಆದರೆ ಹಿಂದೂಗಳಲ್ಲಿ ತಾರತಮ್ಯ ಇದೆ ಎಂದು ಸಿಎಂ ಸಿದ್ದರಾಮಯ್ಯ ಹೇಳುತ್ತಾರೆ. ಮಸೀದಿಗಳಿಗೆ ಮಹಿಳೆಯರಿಗೆ ಪ್ರವೇಶವಿಲ್ಲ, ಮಹಿಳೆಯರಿಗೆ ಬುರ್ಕಾ ಧರಿಸಬೇಕು. ಹೀಗೆ ಎಲ್ಲ ಧರ್ಮಗಳಲ್ಲಿ ತಾರತಮ್ಯ ಇದೆ ಎಂದರು. ರಾಜ್ಯದಲ್ಲಿ ಲಿಂಗಾಯತರ ಸಂಖ್ಯೆ ಅತ್ಯಧಿಕ, ನಂತರ ಒಕ್ಕಲಿಗರ ಸಂಖ್ಯೆ ಇದೆ. ಸಿಎಂ ಸಿದ್ದರಾಮಯ್ಯ ಈ ಪ್ರಮಾಣವನ್ನೇ ಬದಲಿಸಲು ಮುಂದಾಗಿದ್ದಾರೆ. ಒಕ್ಕಲಿಗ ಸಮುದಾಯವನ್ನೇ ಒಡೆಯುತ್ತಿದ್ದಾರೆ. ಹೊಸ ಜಾತಿಗಳನ್ನು ಹುಟ್ಟುಹಾಕಿದ್ದಾರೆ ಎಂದರು. ಹದಿನೈದು…

Read More

ಹುಬ್ಬಳ್ಳಿ: ದಸರಾ ಹಬ್ಬ ಮತ್ತು ಶಬರಿಮಲೆ ಯಾತ್ರೆಯ ಪ್ರಯುಕ್ತ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿವಾರಿಸಲು, ನೈಋತ್ಯ ರೈಲ್ವೆಯು ಹುಬ್ಬಳ್ಳಿ ಮತ್ತು ಕೊಲ್ಲಂ ನಡುವೆ 14 ಟ್ರಿಪ್ ವಿಶೇಷ ಎಕ್ಸ್ ಪ್ರೆಸ್ ರೈಲನ್ನು ಓಡಿಸಲಿದೆ. ರೈಲು ಸಂಖ್ಯೆ 07313 ಎಸ್ಎಸ್ಎಸ್ ಹುಬ್ಬಳ್ಳಿ – ಕೊಲ್ಲಂ ವಿಶೇಷ ಎಕ್ಸ್ ಪ್ರೆಸ್ ರೈಲು ಸೆಪ್ಟೆಂಬರ್ 28, 2025 ರಿಂದ ಡಿಸೆಂಬರ್ 28, 2025 ರವರೆಗೆ ಪ್ರತಿ ಭಾನುವಾರ ಸಂಜೆ 3:15ಕ್ಕೆ ಹುಬ್ಬಳ್ಳಿಯಿಂದ ಹೊರಟು, ಮರುದಿನ ಮಧ್ಯಾಹ್ನ 12:55 ಕ್ಕೆ ಕೊಲ್ಲಂ ತಲುಪಲಿದೆ. ವಾಪಸು, ರೈಲು ಸಂಖ್ಯೆ 07314 ಕೊಲ್ಲಂ – ಎಸ್ಎಸ್ಎಸ್ ಹುಬ್ಬಳ್ಳಿ ವಿಶೇಷ ಎಕ್ಸ್ ಪ್ರೆಸ್ ರೈಲು ಸೆಪ್ಟೆಂಬರ್ 29, 2025 ರಿಂದ ಡಿಸೆಂಬರ್ 29, 2025 ರವರೆಗೆ ಪ್ರತಿ ಸೋಮವಾರ ಸಂಜೆ 5:00ಕ್ಕೆ ಕೊಲ್ಲಂನಿಂದ ಹೊರಟು, ಮರುದಿನ ಸಂಜೆ 6:30ಕ್ಕೆ ಹುಬ್ಬಳ್ಳಿ ಆಗಮಿಸಲಿದೆ. ಈ ವಿಶೇಷ ರೈಲು ಒಟ್ಟು 22 ಬೋಗಿಗಳನ್ನು ಒಳಗೊಂಡಿದ್ದು, ಇದರಲ್ಲಿ 01 ಎಸಿ 2-ಟೈರ್, 02 ಎಸಿ 3-ಟೈರ್, 12…

Read More