Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಆಸ್ತಿ ವಿವರ ಘೋಷಣೆಯಲ್ಲಿ ಲೋಪ : ನಟ ವಿಜಯ್‌ಗೆ ಮದ್ರಾಸ್ ಹೈಕೋರ್ಟ್ ನೋಟಿಸ್ !

20/04/2026 8:28 PM

ಚುನಾವಣಾ ನೀತಿ ಉಲ್ಲಂಘನೆ ಆರೋಪ: ಪ್ರಧಾನಿ ಮೋದಿ ವಿರುದ್ಧ ಆಯೋಗಕ್ಕೆ 700 ನಾಯಕರು, ಕಾರ್ಯಕರ್ತರಿಂದ ದೂರು

20/04/2026 8:27 PM

ಕೇಜ್ರಿವಾಲ್ ಮನವಿ ತಿರಸ್ಕರಿಸಿದ ದೆಹಲಿ ಹೈಕೋರ್ಟ್: ಮದ್ಯ ನೀತಿ ಹಗರಣದ ವಿಚಾರಣೆಯಿಂದ ಹಿಂದೆ ಸರಿಯಲು ನ್ಯಾಯಾಧೀಶರ ನಿರಾಕರಣೆ

20/04/2026 8:21 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » 20 ಕೋಟಿ ವೆಚ್ಚದಲ್ಲಿ ಕೃತಕ ಬುದ್ಧಿಮತ್ತೆ ಶ್ರೇಷ್ಠತಾ ಕೇಂದ್ರ ಸ್ಥಾಪನೆಗೆ ರಾಜ್ಯ ಸರ್ಕಾರದ ಅನುಮೋದನೆ
KARNATAKA

20 ಕೋಟಿ ವೆಚ್ಚದಲ್ಲಿ ಕೃತಕ ಬುದ್ಧಿಮತ್ತೆ ಶ್ರೇಷ್ಠತಾ ಕೇಂದ್ರ ಸ್ಥಾಪನೆಗೆ ರಾಜ್ಯ ಸರ್ಕಾರದ ಅನುಮೋದನೆ

By kannadanewsnow0922/01/2026 7:19 PM

ಬೆಂಗಳೂರು: ವಿವಿಧ ಕ್ಷೇತ್ರಗಳಾದ್ಯಂತ ಕೃತಕ ಜಾಣ್ಮೆ (ಎಐ) ಅಳವಡಿಕೆ, ಉದ್ಯಮ 4.0 ನಾವೀನ್ಯತೆ ಮತ್ತು ಡಿಜಿಟಲ್‌ ಪರಿವರ್ತನೆಗೆ ವೇಗ ನೀಡಲು ಅನ್ವಯಿಕ ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಪರಿಹಾರಗಳ ಕೇಂದ್ರ (ಸಿಎಟಿಎಸ್‌) ಹೆಸರಿನ ಕೃತಕ ಬುದ್ಧಿಮತ್ತೆಯ ಶ್ರೇಷ್ಠತಾ ಕೇಂದ್ರ ಸ್ಥಾಪನೆಗೆ ರಾಜ್ಯ ಸರ್ಕಾರವು ಅನುಮೋದನೆ ನೀಡಿದೆ.

ಕರ್ನಾಟಕ ಸರ್ಕಾರದ ಎಲೆಕ್ಟ್ರಾನಿಕ್ಸ್, ಐಟಿ, ಜೈವಿಕ ತಂತ್ರಜ್ಞಾನ ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯಡಿ ಈ ಕೇಂದ್ರವನ್ನು ಸ್ಥಾಪಿಸಲಾಗುವುದು. ರಾಷ್ಟ್ರೀಯ ಸಾಫ್ಟ್‌ವೇರ್‌ ಹಾಗೂ ಸೇವಾ ಸಂಸ್ಥೆಯ ಒಕ್ಕೂಟದ (ನಾಸ್ಕಾಂ) ಸಹಭಾಗಿತ್ವದಲ್ಲಿ ಬೆಂಗಳೂರಿನ ಎಚ್‌ಎಸ್‌ಆರ್‌ ಲೇಔಟ್‌ನಲ್ಲಿರುವ ಕಿಯೊನಿಕ್ಸ್‌ ತಾಣದಲ್ಲಿ ನಾಲ್ಕು ವರ್ಷಗಳಲ್ಲಿ ಒಟ್ಟು ₹ 20 ಕೋಟಿ ವೆಚ್ಚದಲ್ಲಿ ಈ ಕೇಂದ್ರವು ಅಸ್ತಿತ್ವಕ್ಕೆ ಬರಲಿದೆ. ಕೇಂದ್ರ ಸ್ಥಾಪನೆಗೆ ಬಳಕೆಯಾಗಲಿರುವ ಹಣಕಾಸು ನೆರವು- ಕೇಂದ್ರ ಸರ್ಕಾರದ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ (ಎಂಇಐಟಿವೈ), ಕರ್ನಾಟಕ ಸರ್ಕಾರ ಮತ್ತು ಉದ್ಯಮ ಪಾಲುದಾರರ 40:40:20 ಕೊಡುಗೆ ಮಾದರಿಯಲ್ಲಿ ಇರಲಿದೆ.

ಈ ಎಐ ಶ್ರೇಷ್ಠತಾ ಕೇಂದ್ರವು ಕೃತಕ ಬುದ್ಧಿಮತ್ತೆ, ರೋಬೊಟಿಕ್ಸ್, ಸ್ವಯಂಚಾಲನೆ, ಪೂರೈಕೆ ಸರಪಳಿ ಗರಿಷ್ಠ ಸದ್ಬಳಕೆ ಮತ್ತು ಡಿಜಿಟಲ್ ಪರಿವರ್ತನೆ ಸೇರಿದಂತೆ ಆದ್ಯತೆಯ ಕ್ಷೇತ್ರಗಳ ಮೇಲೆ ಗಮನ ಕೇಂದ್ರೀಕರಿಸಲಿದೆ. ಈ ಉಪಕ್ರಮವು ನವೋದ್ಯಮಗಳು, ಎಂಎಸ್‌ಎಂಇಗಳು, ಉದ್ಯಮ ಸಂಸ್ಥೆಗಳು, ಸಂಶೋಧನಾ ಸಂಸ್ಥೆಗಳು ಮತ್ತು ಶೈಕ್ಷಣಿಕ ಸಂಸ್ಥೆಗಳಿಗೆ ಅಗತ್ಯ ಬೆಂಬಲ ನೀಡುವ ಮೂಲಕ ರಾಜ್ಯದಲ್ಲಿನ ನಾವೀನ್ಯತೆ ವ್ಯವಸ್ಥೆಯನ್ನು ಬಲಪಡಿಸುವ ಗುರಿ ಹೊಂದಿದೆ.

ಮುಂದಿನ ನಾಲ್ಕು ವರ್ಷಗಳಲ್ಲಿ, ಈ ಕೇಂದ್ರವು ಅತ್ಯಾಧುನಿಕ ಪ್ರಯೋಗಾಲಯಗಳು ಮತ್ತು ಪರೀಕ್ಷಾ ಸೌಲಭ್ಯಗಳನ್ನು ಸ್ಥಾಪಿಸುವ, ಡೀಪ್-ಟೆಕ್ ಸ್ಟಾರ್ಟ್-ಅಪ್‌ಗಳನ್ನು ಬೆಂಬಲಿಸುವ ಮತ್ತು ಪರಿಕಲ್ಪನೆಗಳ ಪುರಾವೆ, ಉದ್ಯಮ ಸಹಯೋಗಗಳು ಮತ್ತು ತಂತ್ರಜ್ಞಾನ ಸದ್ಬಳಕೆ ಸುಗಮಗೊಳಿಸುವ ನಿರೀಕ್ಷೆಯಿದೆ.

ಈ ಉಪಕ್ರಮದ ಮಹತ್ವವನ್ನು ತಿಳಿಸಿರುವ ಎಲೆಕ್ಟ್ರಾನಿಕ್ಸ್, ಐಟಿ, ಜೈವಿಕ ತಂತ್ರಜ್ಞಾನ ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಅವರು, “ಇದು ಕರ್ನಾಟಕದ ಡೀಪ್-ಟೆಕ್ ದಶಕವಾಗಿದ್ದು, ಈ ಶ್ರೇಷ್ಠತಾ ಕೇಂದ್ರವು ಡೀಪ್-ಟೆಕ್ ಸ್ಟಾರ್ಟ್-ಅಪ್‌ಗಳು ಮತ್ತು ಕೈಗಾರಿಕಾ ಸಹಯೋಗಗಳಿಗೆ ಒಂದು ಚಿಮ್ಮು ಹಲಗೆಯಾಗಿ ಕಾರ್ಯನಿರ್ವಹಿಸಲಿದೆ. ಸರ್ಕಾರ, ಶೈಕ್ಷಣಿಕ ಸಂಸ್ಥೆಗಳು ಮತ್ತು ಉದ್ಯಮವನ್ನು ಒಟ್ಟಿಗೆ ತರುವ ಮೂಲಕ, ನಾವು ಸಂಶೋಧನೆಯಿಂದ ಮಾರುಕಟ್ಟೆ-ಸಿದ್ಧ ನಾವೀನ್ಯತೆಗೆ ಹೊಸ ಪಥ ನಿರ್ಮಿಸುತ್ತಿದ್ದೇವೆ” ಎಂದು ಹೇಳಿದ್ದಾರೆ.

ಈ ಉಪಕ್ರಮವು ಸರ್ಕಾರಿ ಇಲಾಖೆಗಳು ಮತ್ತು ಸರ್ಕಾರಿ ಸ್ವಾಮ್ಯದ ಉದ್ಯಮಗಳ ಜೊತೆಗೆ ಜಾಗತಿಕ ತಂತ್ರಜ್ಞಾನ ಮತ್ತು ಪ್ರಮುಖ ಉದ್ಯಮಗಳ ಮಧ್ಯೆ ಸಹಯೋಗಕ್ಕೆ ಅವಕಾಶ ಕಲ್ಪಿಸಿಕೊಡಲಿದೆ. ಕೇಂದ್ರದ ಪ್ರಮುಖ ಕಾರ್ಯಕ್ಷಮತೆಯ ಮಾನದಂಡಗಳಲ್ಲಿ ನೆರವು ಕಲ್ಪಿಸಿದ / ಪೋಷಿಸಿದ ನವೋದ್ಯಮಗಳ ಸಂಖ್ಯೆ, ಅಭಿವೃದ್ಧಿಪಡಿಸಿದ ಮೂಲಮಾದರಿಗಳು, ಬೌದ್ಧಿಕ ಆಸ್ತಿಗೆ ಸಲ್ಲಿಸಿದ ಮನವಿಗಳು, ಉದ್ಯಮ ಸಹಯೋಗಗಳು ಮತ್ತು ತರಬೇತಿ ಪಡೆದ ಪರಿಣತ ವೃತ್ತಿಪರರು, ಫಲಿತಾಂಶಗಳನ್ನು ಖಚಿತಪಡಿಸಿಕೊಳ್ಳಲು ವಾರ್ಷಿಕ ಬೆಳವಣಿಗೆಯ ಗುರಿಗಳನ್ನು ಒಳಗೊಂಡಿರಲಿದೆ.

ಕೇಂದ್ರ ಸ್ಥಾಪಿಸುವ ಪ್ರಸ್ತಾವನೆಗೆ ಹಣಕಾಸು ಇಲಾಖೆಯಿಂದ ಒಪ್ಪಿಗೆ ಮತ್ತು ಯೋಜನಾ ಇಲಾಖೆಯಿಂದ ತಾತ್ವಿಕ ಅನುಮೋದನೆ ದೊರೆತಿದೆ. ಉದ್ಯಮ 4.0 ತಂತ್ರಜ್ಞಾನಗಳು ಮತ್ತು ಡೀಪ್-ಟೆಕ್ ನಾವೀನ್ಯತೆಗಾಗಿ ದೇಶದ ಪ್ರಮುಖ ಕೇಂದ್ರವಾಗುವ ನಿಟ್ಟಿನಲ್ಲಿ ಸಾಗಿರುವ ಕರ್ನಾಟಕದ ಯಶಸ್ಸಿನ ಪ್ರಯಾಣದಲ್ಲಿ ಈ ನಿರ್ಧಾರವು ಮಹತ್ವದ ಮೈಲಿಗಲ್ಲು ಆಗಿದೆ.

GOOD NEWS: ರಾಜ್ಯದಲ್ಲಿ ಸರ್ಕಾರಿ ಹುದ್ದೆ ನಿರೀಕ್ಷೆಯಲ್ಲಿದ್ದವರಿಗೆ ಭರ್ಜರಿ ಸಿಹಿಸುದ್ದಿ: ಎಲ್ಲಾ ವರ್ಗಕ್ಕೂ ವಯೋಮಿತಿ 5 ವರ್ಷ ಸಡಿಲಿಕೆ

ಸದನದಲ್ಲಿನ ಗೂಂಡಾಗಿರಿ ಹೊಣೆ ಹೊತ್ತು ಸಿಎಂ ಸಿದ್ಧರಾಮಯ್ಯ ರಾಜೀನಾಮೆಗೆ ಛಲವಾದಿ ನಾರಾಯಣಸ್ವಾಮಿ ಆಗ್ರಹ

Share. Facebook Twitter LinkedIn WhatsApp Email

Related Posts

ಗಮನಿಸಿ : ನೀವು ಮಲಗುವ ಭಂಗಿಯಿಂದಲೂ ತಿಳಿಯಬಹುದು ನಿಮ್ಮ ವ್ಯಕ್ತಿತ್ವ.! ಇಲ್ಲಿದೆ ಮಾಹಿತಿ

20/04/2026 8:13 PM2 Mins Read

ನಾಳೆ ಸಾಗರದ ಜೋಸೆಫ್ ನಗರದಲ್ಲಿ ಬಾಕ್ಸ್ ಚರಂಡಿ ನಿರ್ಮಾಣ ಕಾಮಗಾರಿಗೆ ಶಾಸಕ ಗೋಪಾಲಕೃಷ್ಣ ಬೇಳೂರು ಚಾಲನೆ

20/04/2026 8:10 PM1 Min Read

ಹುಬ್ಬಳ್ಳಿಯಲ್ಲಿ ‘ಹಾವಿನ ಮಳೆ’ ಎಂಬ ಸುಳ್ಳು ಸುದ್ದಿ: ಸೋಷಿಯಲ್ ಮೀಡಿಯಾ ಕಿಡಿಗೇಡಿಗಳ ವಿರುದ್ಧ ಸಾರ್ವಜನಿಕರ ಆಕ್ರೋಶ

20/04/2026 7:54 PM3 Mins Read
Recent News

ಆಸ್ತಿ ವಿವರ ಘೋಷಣೆಯಲ್ಲಿ ಲೋಪ : ನಟ ವಿಜಯ್‌ಗೆ ಮದ್ರಾಸ್ ಹೈಕೋರ್ಟ್ ನೋಟಿಸ್ !

20/04/2026 8:28 PM

ಚುನಾವಣಾ ನೀತಿ ಉಲ್ಲಂಘನೆ ಆರೋಪ: ಪ್ರಧಾನಿ ಮೋದಿ ವಿರುದ್ಧ ಆಯೋಗಕ್ಕೆ 700 ನಾಯಕರು, ಕಾರ್ಯಕರ್ತರಿಂದ ದೂರು

20/04/2026 8:27 PM

ಕೇಜ್ರಿವಾಲ್ ಮನವಿ ತಿರಸ್ಕರಿಸಿದ ದೆಹಲಿ ಹೈಕೋರ್ಟ್: ಮದ್ಯ ನೀತಿ ಹಗರಣದ ವಿಚಾರಣೆಯಿಂದ ಹಿಂದೆ ಸರಿಯಲು ನ್ಯಾಯಾಧೀಶರ ನಿರಾಕರಣೆ

20/04/2026 8:21 PM

ಭಾರತ-ಅಮೆರಿಕ ವ್ಯಾಪಾರ ಒಪ್ಪಂದಕ್ಕೆ ಮರುಜೀವ: ವಾಷಿಂಗ್ಟನ್‌ನಲ್ಲಿ ಇಂದಿನಿಂದ ನಿರ್ಣಾಯಕ ಮಾತುಕತೆ; ಸುಂಕ ಕಡಿತದ ಮೇಲೆ ಎಲ್ಲರ ಕಣ್ಣು!

20/04/2026 8:20 PM
State News
KARNATAKA

ಗಮನಿಸಿ : ನೀವು ಮಲಗುವ ಭಂಗಿಯಿಂದಲೂ ತಿಳಿಯಬಹುದು ನಿಮ್ಮ ವ್ಯಕ್ತಿತ್ವ.! ಇಲ್ಲಿದೆ ಮಾಹಿತಿ

By kannadanewsnow5720/04/2026 8:13 PM KARNATAKA 2 Mins Read

ನಮ್ಮ ದಿನನಿತ್ಯದ ಹವ್ಯಾಸಗಳು ನಮ್ಮ ವ್ಯಕ್ತಿತ್ವದ ಬಗ್ಗೆ ಸಾಕಷ್ಟು ವಿಷಯಗಳನ್ನು ಬಿಚ್ಚಿಡುತ್ತವೆ. ಅದರಲ್ಲಿ ಪ್ರಮುಖವಾದುದು ನಾವು ಮಲಗುವ ರೀತಿ. ಪ್ರತಿಯೊಬ್ಬರೂ…

ನಾಳೆ ಸಾಗರದ ಜೋಸೆಫ್ ನಗರದಲ್ಲಿ ಬಾಕ್ಸ್ ಚರಂಡಿ ನಿರ್ಮಾಣ ಕಾಮಗಾರಿಗೆ ಶಾಸಕ ಗೋಪಾಲಕೃಷ್ಣ ಬೇಳೂರು ಚಾಲನೆ

20/04/2026 8:10 PM

ಹುಬ್ಬಳ್ಳಿಯಲ್ಲಿ ‘ಹಾವಿನ ಮಳೆ’ ಎಂಬ ಸುಳ್ಳು ಸುದ್ದಿ: ಸೋಷಿಯಲ್ ಮೀಡಿಯಾ ಕಿಡಿಗೇಡಿಗಳ ವಿರುದ್ಧ ಸಾರ್ವಜನಿಕರ ಆಕ್ರೋಶ

20/04/2026 7:54 PM

ಮಂಡ್ಯದಲ್ಲಿ ಬಸವಣ್ಣರವರ ಜಯಂತಿ ಆಚರಣೆಯಲ್ಲಿ ನಿರ್ಲಕ್ಷ್ಯ; ಮದ್ದೂರು ತಾಲೂಕು ಕಛೇರಿ ಮುಂದೆ ಪ್ರತಿಭಟನೆ

20/04/2026 7:49 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.