Author: ವಸಂತ ಬಿ ಈಶ್ವರಗೆರೆ

ವಸಂತ ಬಿ ಈಶ್ವರಗೆರೆ (Vasantha B Eshwaragere) ಅವರು ಕರ್ನಾಟಕದ ಪತ್ರಕರ್ತರು ಮತ್ತು ಕವಿ. ಉದಯ ನ್ಯೂಸ್, ಟಿವಿ5 ಕನ್ನಡ ಸೇರಿದಂತೆ ವಿವಿಧ ಸುದ್ದಿ ಮಾಧ್ಯಮಗಳಲ್ಲಿ ಸುಮಾರು 15 ವರ್ಷಗಳ ಅನುಭವವನ್ನು ಹೊಂದಿದ್ದಾರೆ. ಪ್ರಸ್ತುತ ಅವರು Kannada News Now ಡಿಜಿಡಿಲ್‌ ಮಾಧ್ಯಮದಲ್ಲಿ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ತಾಜಾ ಸುದ್ದಿ, ಸಾಹಿತ್ಯ, ಸಾಮಾಜಿಕ ವರದಿಗಾರಿಕೆ, ನ್ಯಾಯಾಂಗ ಸಂಬಂಧಿತ ವರದಿ ಮತ್ತು ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದ ಸುದ್ದಿಗಳ ವರದಿಯಲ್ಲಿ ಸಕ್ರಿಯರಾಗಿದ್ದಾರೆ. ಗುಡವಿ ಪಕ್ಷಿಧಾಮದಂತಹ ಪ್ರವಾಸಿ ತಾಣಗಳ ಕುರಿತು ಲೇಖನಗಳನ್ನು ಬರೆದಿದ್ದಾರೆ.

ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಅಸಹಾಯಕರಾಗಿದ್ದಾರೆ ಎಂಬ ಮಾಜಿ ಸಚಿವ ರಾಜಣ್ಣ ಅವರ ಹೇಳಿಕೆಗೆ ವಸತಿ ಹಾಗೂ ಅಲ್ಪಸಂಖ್ಯಾತ ಕಲ್ಯಾಣ ಸಚಿವ ಜಮೀರ್ ಅಹ್ಮದ್ ಖಾನ್ ಅವರು ಬೆಂಗಳೂರಿನಲ್ಲಿ ಖಡಕ್ ಪ್ರತಿಕ್ರಿಯೆ ನೀಡಿದ್ದಾರೆ. ಸಿದ್ದರಾಮಯ್ಯ ಅವರ ವ್ಯಕ್ತಿತ್ವ ಮತ್ತು ಶೈಲಿ ಎಂದಿಗೂ ಬದಲಾಗಿಲ್ಲ ಎಂದು ಅವರು ಸಮರ್ಥಿಸಿಕೊಂಡಿದ್ದಾರೆ. ವರದಿಯ ಮುಖ್ಯಾಂಶಗಳು: ಟಗರು ಎಂದಿಗೂ ಟಗರೆ: ಸಿದ್ದರಾಮಯ್ಯ ಅವರು ಅಸಹಾಯಕರಾಗಿದ್ದಾರೆ ಎಂಬ ಮಾತನ್ನು ತಳ್ಳಿಹಾಕಿದ ಜಮೀರ್, “ಸಿದ್ದರಾಮಯ್ಯ ಅವರು ಈಗಲೂ ಟಗರು. ಅವರು ಮುಂಚೆ ಹೇಗಿದ್ದರೋ ಈಗಲೂ ಹಾಗೆಯೇ ಇದ್ದಾರೆ,” ಎಂದು ಬಣ್ಣಿಸಿದರು. ಅಗತ್ಯವಿದ್ದಾಗ ಸದ್ದು: “ಸಿಎಂ ಈಗ ಸೈಲೆಂಟ್ ಆಗಿರಬಹುದು. ಆದರೆ ಅವರು ಮಾತನಾಡಿದರೆ ಅದರ ಸೌಂಡ್ ಬೇರೆ ತರಹ ಇರುತ್ತದೆ. ಸುಮ್ಮನೆ ಅನಗತ್ಯವಾಗಿ ಮಾತನಾಡಲು ಸಾಧ್ಯವಿಲ್ಲ, ಸಮಯ ಬಂದಾಗ ಅವರೇ ಮಾತನಾಡುತ್ತಾರೆ,” ಎಂದು ವಿರೋಧಿಗಳಿಗೆ ತಿರುಗೇಟು ನೀಡಿದರು. ಪಕ್ಷದಲ್ಲಿ ಎಲ್ಲರೂ ಆಪ್ತರು: ಕಾಂಗ್ರೆಸ್‌ನಲ್ಲಿರುವ ಎಲ್ಲರೂ ಸಿದ್ದರಾಮಯ್ಯ ಅವರಿಗೆ ಆಪ್ತರೇ ಆಗಿದ್ದಾರೆ. ಅವರು ನಮ್ಮ ಮುಖ್ಯಮಂತ್ರಿ ಎಂದು ಜಮೀರ್ ಒಗ್ಗಟ್ಟಿನ ಮಂತ್ರ…

Read More

ನವದೆಹಲಿ: ಕಳೆದ ವರ್ಷ ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭೀಕರ ಭಯೋತ್ಪಾದಕ ದಾಳಿಯ ಹಿಂದಿನ ಸಂಚುಕೋರ ಯಾರು ಎಂಬುದು ಈಗ ಜಗತ್ತಿನ ಮುಂದೆ ಅನಾವರಣಗೊಂಡಿದೆ. ಇಂಡಿಯಾ ಟುಡೇ ಟಿವಿ ನಡೆಸಿರುವ ವಿಶೇಷ ತನಿಖೆಯು ಈ ದಾಳಿಯ ಮಾಸ್ಟರ್‌ಮೈಂಡ್ ಸಜಿದ್ ಜತ್ ಅಲಿಯಾಸ್ ಹಬೀಬುಲ್ಲಾ ತಬಸ್ಸುಮ್‌ನ ಪಾಕಿಸ್ತಾನದ ಸಂಪರ್ಕಗಳನ್ನು ಸಾಕ್ಷಿ ಸಮೇತ ಬಯಲಿಗೆಳೆದಿದೆ. ತನಿಖೆಯಲ್ಲಿ ಪತ್ತೆಯಾದ ಪ್ರಮುಖ ಅಂಶಗಳು ಇಲ್ಲಿವೆ: 1. ಗುರುತು ಬದಲಿಸಿ ಪಾಕಿಸ್ತಾನದಲ್ಲಿ ಆಶ್ರಯ ಪಹಲ್ಗಾಮ್ ದಾಳಿಯ ಸಂಚುಕೋರ ಸಜಿದ್ ಜತ್ (ಸೈಫುಲ್ಲಾ ಸಜಿದ್ ಎಂದೂ ಕರೆಯಲ್ಪಡುವ) ಪ್ರಸ್ತುತ ಪಾಕಿಸ್ತಾನದಲ್ಲಿ ಅಡಗಿ ಕುಳಿತಿದ್ದಾನೆ. ಈತ ಪದೇ ಪದೇ ತನ್ನ ಗುರುತು, ವಾಸಸ್ಥಾನ ಮತ್ತು ರೂಪವನ್ನು ಬದಲಿಸುವ ಮೂಲಕ ಭಾರತೀಯ ತನಿಖಾ ಸಂಸ್ಥೆಗಳಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾನೆ ಎಂದು ವರದಿ ತಿಳಿಸಿದೆ. 2. ಸಾಕ್ಷಿಯಾಗಿ ಸಿಕ್ಕ ಪಾಕಿಸ್ತಾನಿ ಐಡಿ ಕಾರ್ಡ್ ಇಂಡಿಯಾ ಟುಡೇ ತನಿಖಾ ತಂಡವು ಈತನ ಅಸಲಿ ಗುರುತಿನ ಚೀಟಿಯನ್ನು (ID Card) ಪತ್ತೆಹಚ್ಚಿದೆ. ಈ ದಾಖಲೆಗಳ ಪ್ರಕಾರ: ಅಸಲಿ…

Read More

ಬೆಂಗಳೂರು: ಕಟ್ಟಡ ನಿರ್ಮಾಣ ಕಾರ್ಯದಲ್ಲಿ ಸಿಮೆಂಟ್ ಅತ್ಯಗತ್ಯ ವಸ್ತು. ಆದರೆ, ಹಗಲಿರುಳು ಸಿಮೆಂಟ್ ಜೊತೆಗೆ ಕೆಲಸ ಮಾಡುವ ಕಾರ್ಮಿಕರ ಆರೋಗ್ಯದ ಮೇಲೆ ಇದು ಗಂಭೀರ ಪರಿಣಾಮ ಬೀರಬಹುದು ಎಂಬುದು ನಿಮಗೆ ತಿಳಿದಿದೆಯೇ? ಸಿಮೆಂಟ್ ಕೇವಲ ಧೂಳಲ್ಲ, ಅದು ರಾಸಾಯನಿಕಯುಕ್ತ ಮಸೃಣವಾಗಿದ್ದು, ಸರಿಯಾದ ಮುನ್ನೆಚ್ಚರಿಕೆ ವಹಿಸದಿದ್ದರೆ ಪ್ರಾಣಾಪಾಯವನ್ನೂ ತಂದೊಡ್ಡಬಹುದು. ಕರ್ನಾಟಕ ಸರ್ಕಾರದ ಕಾರ್ಮಿಕ ಇಲಾಖೆಯು ಕಾರ್ಮಿಕರ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ ಕೆಲವು ಮಹತ್ವದ ಎಚ್ಚರಿಕೆಗಳನ್ನು ನೀಡಿದೆ. ಸಿಮೆಂಟ್ ಆರೋಗ್ಯಕ್ಕೆ ಎಷ್ಟು ಅಪಾಯಕಾರಿ? ಸಿಮೆಂಟ್ ನೇರವಾಗಿ ದೇಹದ ಸಂಪರ್ಕಕ್ಕೆ ಬಂದಾಗ ಈ ಕೆಳಗಿನ ಸಮಸ್ಯೆಗಳು ಎದುರಾಗಬಹುದು: ಚರ್ಮದ ಕಾಯಿಲೆಗಳು: ಸಿಮೆಂಟ್ ಕಣಗಳು ಚರ್ಮದ ಮೇಲೆ ಬಿದ್ದಾಗ ತುರಿಕೆ, ಅಲರ್ಜಿ ಅಥವಾ ಗಂಭೀರವಾದ ಚರ್ಮದ ಕಾಯಿಲೆಗಳು ಕಾಣಿಸಿಕೊಳ್ಳಬಹುದು. ದೃಷ್ಟಿ ದೋಷ: ಸಿಮೆಂಟ್ ಧೂಳು ಅಥವಾ ಮಿಶ್ರಣ ಕಣ್ಣಿಗೆ ಸೇರಿದರೆ ಕಣ್ಣು ಉರಿಯುವುದು ಮಾತ್ರವಲ್ಲದೆ, ದೃಷ್ಟಿ ಮಂದವಾಗುವ ಅಪಾಯವಿರುತ್ತದೆ. ಉಸಿರಾಟದ ತೊಂದರೆ: ನಿರಂತರವಾಗಿ ಸಿಮೆಂಟ್ ಧೂಳನ್ನು ಉಸಿರಾಡುವುದರಿಂದ ಶ್ವಾಸಕೋಶಕ್ಕೆ ಹಾನಿಯಾಗಿ ದೀರ್ಘಕಾಲದ ಉಸಿರಾಟದ ಸಮಸ್ಯೆಗಳು ಬರಬಹುದು.…

Read More

ಬೆಂಗಳೂರು: ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆಗಳಾದ ಕೆ-ಸೆಟ್ (K-SET) ಮತ್ತು ಯುಜಿಸಿ-ನೆಟ್ (UGC-NET) ಎದುರಿಸಲು ಸಿದ್ಧತೆ ನಡೆಸುತ್ತಿರುವ ಅಭ್ಯರ್ಥಿಗಳಿಗೆ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯವು (KSOU) ಭರ್ಜರಿ ಅವಕಾಶವೊಂದನ್ನು ನೀಡಿದೆ. ಮೈಸೂರಿನ ಕರಾಮುವಿ ಕೇಂದ್ರ ಕಚೇರಿಯಲ್ಲಿ ಆಯೋಜಿಸಲಾಗಿರುವ 45 ದಿನಗಳ ತೀವ್ರತರದ ತರಬೇತಿ ಶಿಬಿರಕ್ಕೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ತರಬೇತಿಯ ಮುಖ್ಯಾಂಶಗಳು: ಯಾವ ಪರೀಕ್ಷೆಗಳಿಗೆ ತರಬೇತಿ?: 1. ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ನಡೆಸಲಿರುವ ರಾಜ್ಯಮಟ್ಟದ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ (K-SET). 2. ರಾಷ್ಟ್ರಮಟ್ಟದ ಸಹಾಯಕ ಪ್ರಾಧ್ಯಾಪಕರ (UGC-NET) ಮತ್ತು ಕಿರಿಯ ಶಿಷ್ಯವೇತನ ಸಂಶೋಧನ ಸಹಾಯಕರ (JRF) ಅರ್ಹತಾ ಪರೀಕ್ಷೆಗಳು. ತರಬೇತಿ ಅವಧಿ: 45 ದಿನಗಳು. ಸ್ಥಳ: ಕರಾಮುವಿ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರ, ಮೈಸೂರು. ಅರ್ಜಿ ಸಲ್ಲಿಸುವ ವಿಧಾನ ಮತ್ತು ದಿನಾಂಕ: ಆಸಕ್ತ ಅಭ್ಯರ್ಥಿಗಳು ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಲು ಏಪ್ರಿಲ್ 24, 2026 ಕೊನೆಯ ದಿನವಾಗಿದೆ ಎಂದು ಕರಾಮುವಿ ಕುಲಸಚಿವ ಪ್ರೊ. ನವೀನ್ ಕುಮಾರ್ ಎಸ್.ಕೆ. ಅವರು…

Read More

ಬೆಂಗಳೂರು: ಕರ್ನಾಟಕದ ಸಾರಿಗೆ ಇಲಾಖೆಯ ಇಂದಿನ ಪರಿಸ್ಥಿತಿಗೆ ಹಿಂದಿನ ಸರ್ಕಾರವೇ ನೇರ ಹೊಣೆ ಎಂದು ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಅವರು ತೀವ್ರ ವಾಗ್ದಾಳಿ ನಡೆಸಿದ್ದಾರೆ. ಸಾಮಾಜಿಕ ಜಾಲತಾಣ ಎಕ್ಸ್ (X) ನಲ್ಲಿ ಸರಣಿ ಅಂಶಗಳನ್ನು ಪ್ರಸ್ತಾಪಿಸಿರುವ ಅವರು, “ಹಿಂದಿನ ಸರ್ಕಾರದ ಸಾಧನೆ ಶೂನ್ಯದಿಂದ ವಿನಾಶದತ್ತ ಸಾಗಿತ್ತು” ಎಂದು ಕಿಡಿಕಾರಿದ್ದಾರೆ. https://twitter.com/rlr_btm/status/2046504788255449483?s=46&t=9E85lAUU3X0e9lBlPt81WQ ಸಚಿವರು ಮಂಡಿಸಿರುವ ಪ್ರಮುಖ ಅಂಶಗಳು ಮತ್ತು ಸಾರಿಗೆ ಇಲಾಖೆಯ ಇಂದಿನ ಸ್ಥಿತಿಗತಿಯ ಸಂಪೂರ್ಣ ವರದಿ ಇಲ್ಲಿದೆ: 1. ಶೂನ್ಯ ನೇಮಕಾತಿ ಮತ್ತು ತಾಂತ್ರಿಕ ಸಿಬ್ಬಂದಿಯ ಕೊರತೆ ಸಾರಿಗೆ ಸಂಸ್ಥೆಗಳಲ್ಲಿ ಬಸ್‌ಗಳು ಸರಿಯಾದ ಸಮಯಕ್ಕೆ ಓಡಾಡದಿರಲು ಮುಖ್ಯ ಕಾರಣ ತಾಂತ್ರಿಕ ಸಿಬ್ಬಂದಿಯ ಕೊರತೆ. ಹಿಂದಿನ ಸರ್ಕಾರದ ಅವಧಿಯಲ್ಲಿ ತಾಂತ್ರಿಕ ಸಿಬ್ಬಂದಿಗಳ ನೇಮಕಾತಿಯ ಮೇಲೆ ಹೇರಲಾಗಿದ್ದ ನಿಷೇಧವೇ ಇಂದು ಸಾರಿಗೆ ವ್ಯವಸ್ಥೆ ಕುಸಿಯಲು ಪ್ರಮುಖ ಕಾರಣವಾಗಿದೆ ಎಂದು ಸಚಿವರು ದೂರಿದ್ದಾರೆ. 2. ಗುಜರಿ ಸ್ಥಿತಿಯಲ್ಲಿದ್ದ 60% ಬಸ್‌ಗಳು ಹಿಂದಿನ ಆಡಳಿತದ ಅವಧಿಯಲ್ಲಿ ಶೇಕಡಾ 60ಕ್ಕಿಂತ ಹೆಚ್ಚು ಬಸ್‌ಗಳು ಕಾರ್ಯಾಚರಣೆಗೆ ಯೋಗ್ಯವಾಗಿರಲಿಲ್ಲ.…

Read More

ನವದೆಹಲಿ: ಬೇಸಿಗೆ ರಜೆ ಬಂತೆಂದರೆ ಸಾಕು, ಊರಿಗೆ ಹೋಗುವವರ ಮತ್ತು ಪ್ರವಾಸ ಕೈಗೊಳ್ಳುವವರ ಸಂಖ್ಯೆ ಗಗನಕ್ಕೇರುತ್ತದೆ. ಈ ಸಂದರ್ಭದಲ್ಲಿ ರೈಲು ಟಿಕೆಟ್‌ಗಾಗಿ ಪರದಾಡುವುದು ಸಾಮಾನ್ಯ ಸಂಗತಿ. ಪ್ರಯಾಣಿಕರ ಈ ಸಂಕಷ್ಟವನ್ನು ಮನಗಂಡಿರುವ ಭಾರತೀಯ ರೈಲ್ವೆ, ಈ ಬಾರಿ ಬರೋಬ್ಬರಿ 908 ಬೇಸಿಗೆ ವಿಶೇಷ ರೈಲುಗಳನ್ನು (Summer Special Trains) ಓಡಿಸುವುದಾಗಿ ಘೋಷಿಸಿದೆ. ಈ ಕ್ರಮವು ಕೇವಲ ಪ್ರಯಾಣದ ಸುಗಮತೆಗಾಗಿ ಮಾತ್ರವಲ್ಲದೆ, ರೈಲ್ವೆ ವ್ಯವಸ್ಥೆಯ ಮೇಲಿನ ಒತ್ತಡವನ್ನು ಕಡಿಮೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ. 1. ಹೆಚ್ಚುತ್ತಿರುವ ಬೇಡಿಕೆ ಮತ್ತು ರೈಲ್ವೆಯ ಸಿದ್ಧತೆ ಪ್ರತಿ ವರ್ಷ ಏಪ್ರಿಲ್‌ನಿಂದ ಜೂನ್ ತಿಂಗಳವರೆಗೆ ರೈಲು ಪ್ರಯಾಣಕ್ಕೆ ಅತೀ ಹೆಚ್ಚು ಬೇಡಿಕೆ ಇರುತ್ತದೆ. ವಿದ್ಯಾರ್ಥಿಗಳ ರಜೆ, ಕೌಟುಂಬಿಕ ಕಾರ್ಯಕ್ರಮಗಳು ಮತ್ತು ಪ್ರವಾಸಿ ತಾಣಗಳಿಗೆ ಭೇಟಿ ನೀಡುವವರ ಸಂಖ್ಯೆ ಹೆಚ್ಚುವುದರಿಂದ ನಿಯಮಿತ ರೈಲುಗಳಲ್ಲಿ ವೇಟಿಂಗ್ ಲಿಸ್ಟ್ (Waiting List) ನೂರಾರು ದಾಟಿರುತ್ತದೆ. ಪರಿಹಾರ: ಈ ಹೆಚ್ಚುವರಿ 908 ರೈಲುಗಳು ಪ್ರಯಾಣಿಕರ ದಟ್ಟಣೆಯನ್ನು ಹಂಚಿಹಾಕಲು ಸಹಾಯ ಮಾಡುತ್ತವೆ. ಫಲಿತಾಂಶ: ಇದರಿಂದ…

Read More

ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಕಲ್ಮನೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಹಳೆ ಇಕ್ಕೇರಿಯ ಗಸಗಸೆಕೊಡ್ಲು ಗ್ರಾಮ ಜಯಂತ್ ಎಂಬುವರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರೋದಾಗಿ ತಿಳಿದು ಬಂದಿದೆ. ಅವರ ಸ್ಥಿತಿ ಗಂಭೀರವಾಗಿದ್ದು, ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ. ಅಧಿಕಾರಿಗಳ ಬೈಗುಳ, ಆತ್ಮಹತ್ಯೆಗೆ ಯತ್ನ ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಹಳೆ ಇಕ್ಕೇರಿಯ ಸಮೀಪದ ಜಯಂತ್ ಗಸಗಸೆಕೊಡ್ಲು ಅವರು ತಮ್ಮ ಮನೆಯ ಸಮೀಪದಲ್ಲಿ ಕುಸಿಯುವ ಸ್ಥಿತಿಯಲ್ಲಿದ್ದಂತ ಮಣ್ಣುನ್ನು ಸಾಗಾಣಿಕೆಯನ್ನು ಮಾಡಿದ್ದರು ಎಂದು ಹೇಳಲಾಗುತ್ತಿದೆ. ಹೀಗಾಗಿ ಅವರ ವಿರುದ್ಧ ಅಕ್ರಮವಾಗಿ ಮಣ್ಣು ಸಾಗಾಣಿಕೆ ಆರೋಪ ಕೇಳಿ ಬಂದಿತ್ತು. ಇದೇ ವಿಚಾರವಾಗಿ ಅಧಿಕಾರಿಗಳನ್ನು ಸ್ಥಳೀಯ ಆಡಳಿತಾಧಿಕಾರಿಗಳು, ಕಂದಾಯ ಇಲಾಖೆಯ ಅಧಿಕಾರಿಗಳನ್ನು ಭೇಟಿಯಾಗಿದ್ದಂತ ವೇಳೆಯಲ್ಲಿ ಜಯಂತ್ ಅವರನ್ನು ತರಾಟೆಗೆ ತೆಗೆದುಕೊಂಡು, ಬೈದಿದ್ದರು ಎನ್ನಲಾಗುತ್ತಿದೆ. ಸ್ಥಿತಿ ಗಂಭೀರ, ಶಿವಮೊಗ್ಗದಲ್ಲಿ ಮುಂದುವರೆದ ಚಿಕಿತ್ಸೆ ಇಂದು ಮಧ್ಯಾಹ್ನ ಇದೇ ವಿಚಾರವಾಗಿ ಮನನೊಂದಂತ ಜಯಂತ್ ಅವರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎನ್ನಲಾಗುತ್ತಿದೆ. ಅವರನ್ನು ಪುತ್ರ ಕೂಡಲೇ ಸಾಗರದ ಉಪವಿಭಾಗೀಯ ಆಸ್ಪತ್ರೆಗೆ…

Read More

ಬೆಂಗಳೂರು; ರಾಜ್ಯ ಸರ್ಕಾರದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು 2026–27ನೇ ಸಾಲಿನ ಮೊದಲ ಕಂತಿನ ಅನುದಾನ ಬಿಡುಗಡೆಗೆ ಸಂಬಂಧಿಸಿದಂತೆ ಜಿಲ್ಲಾವಾರು ಹಾಗೂ ತಾಲೂಕು ಪಂಚಾಯಿತಿಗಳವಾರು ವಿವರಗಳನ್ನು ಪ್ರಕಟಿಸಿದೆ. ಈ ಅನುದಾನವನ್ನು ಏಪ್ರಿಲ್ 2026ರಿಂದ ಜೂನ್ 2026ರವರೆಗೆ ಬಳಸಲು ಸೂಚಿಸಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಮಾಹಿತಿ ಮತ್ತು ಜೈವಿಕ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ. ಬೆಂಗಳೂರು ನಗರಕ್ಕೆ ಒಟ್ಟು 9322.48 ಲಕ್ಷ ರೂಪಾಯಿಗಳಲ್ಲಿ 2337.13 ಲಕ್ಷ ರೂಪಾಯಿಗಳನ್ನು ಬಿಡುಗಡೆ ಮಾಡಲಾಗಿದೆ. ಬೆಂಗಳೂರು ಗ್ರಾಮಾಂತರಕ್ಕೆ 2733.08 ಲಕ್ಷ ರೂಪಾಯಿಗಳಲ್ಲಿ 683.27 ಲಕ್ಷ ರೂಪಾಯಿಗಳನ್ನು ಬಿಡುಗಡೆ ಮಾಡಲಾಗಿದೆ. ಚಿತ್ರದುರ್ಗ ಜಿಲ್ಲೆಗೆ 6279.09 ಲಕ್ಷ ರೂಪಾಯಿಗಳಲ್ಲಿ 1569.77 ಲಕ್ಷ ರೂಪಾಯಿಗಳನ್ನು ಬಿಡುಗಡೆ ಮಾಡಲಾಗಿದೆ. ಕೋಲಾರ ಜಿಲ್ಲೆಗೆ 3998.09 ಲಕ್ಷ ರೂಪಾಯಿಗಳಲ್ಲಿ 999.53 ಲಕ್ಷ ರೂಪಾಯಿಗಳನ್ನು ಬಿಡುಗಡೆ ಮಾಡಲಾಗಿದೆ. ಶಿವಮೊಗ್ಗ ಜಿಲ್ಲೆಗೆ 8697.53 ಲಕ್ಷ ರೂಪಾಯಿಗಳಲ್ಲಿ 2174.49 ಲಕ್ಷ ರೂಪಾಯಿಗಳನ್ನು ಬಿಡುಗಡೆ ಮಾಡಲಾಗಿದೆ. ತುಮಕೂರು ಜಿಲ್ಲೆಗೆ 7904.25 ಲಕ್ಷ ರೂಪಾಯಿಗಳಲ್ಲಿ 1976.06…

Read More

ಉತ್ತಂಗರೈ : “ತಮಿಳುನಾಡಿನಲ್ಲಿ ಮಹಿಳೆಯರಿಗೆ ಪ್ರಸ್ತುತ 1 ಸಾವಿರ ಹಣ ನೀಡುತ್ತಿದ್ದು, ಈ ಚುನಾವಣೆ ಬಳಿಕ ಕರ್ನಾಟಕ ಮಾದರಿಯಂತೆ 2 ಸಾವಿರ ನೀಡಲಾಗುವುದು” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಹೇಳಿದರು. ತಮಿಳುನಾಡಿನ ಉತ್ತಂಗರೈ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕುಪ್ಪುಸ್ವಾಮಿ ಅವರ ಪರವಾಗಿ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಸೋಮವಾರ ಚುನಾವಣೆ ಪ್ರಚಾರ ಭಾಷಣ ಮಾಡಿದರು. “1.31 ಕೋಟಿ ಕುಟುಂಬದ ಮಹಿಳೆಯರಿಗೆ ಇದರಿಂದ ಪ್ರಯೋಜನವಾಗಲಿದೆ. ವಿದ್ಯುತ್ ಮೀಟರ್ ಇಲ್ಲದೆ ರೈತರ ಪಂಪ್ ಸೆಟ್ ಗಳಿಗೆ ಉಚಿತ ವಿದ್ಯುತ್ ನೀಡಲಾಗುವುದು. ಕುಟುಂಬದ ಅಗತ್ಯ ವಸ್ತುಗಳ ಖರೀದಿಗೆ 8 ಸಾವಿರ ನೀಡುವ ಭರವಸೆ ನೀಡಲಾಗಿದೆ. ವೃದ್ಧಾಪ್ಯ ವೇತನ ಸೇರಿದಂತೆ ಪಿಂಚಣಿ ಹಣಗಳ ಹೆಚ್ಚಳ ಮಾಡಲಾಗುವುದು” ಎಂದರು. ದಕ್ಷಿಣ ಭಾರತ ವಿಭಜಿಸುವ ಬಿಜೆಪಿ “ಸ್ಟಾಲಿನ್ ಅವರು ಮತ್ತೆ ತಮಿಳುನಾಡಿನ‌ ಮುಖ್ಯಮಂತ್ರಿಯಾಗಲಿದ್ದಾರೆ. ಅಣ್ಣಾ ಡಿಎಂಕೆಗೆ ಯಾವುದೇ ಅವಕಾಶವಿಲ್ಲ. ತನ್ನ ಅಸ್ತಿತ್ವ ಕಳೆದುಕೊಂಡಿರುವ ಅದು ಬಿಜೆಪಿ ಸೇರಿ ಛಿದ್ರವಾಗಿ ಹೋಗಿದೆ. ಇವರುಗಳು ದಕ್ಷಿಣ ಭಾರತವನ್ನ ಭಾಗ ಮಾಡಬೇಕು…

Read More

ಬೆಂಗಳೂರು; ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (KEA) ಪರೀಕ್ಷೆಯಲ್ಲಿ ಪಾರದರ್ಶಕತೆ ಕಾಪಾಡಲು ಈ ಬಾರಿಯ ಸಿಟಿಇ ಪರೀಕ್ಷೆಯಲ್ಲಿ ಕಟ್ಟುನಿಟ್ಟಿನ ವಸ್ತ್ರಸಂಹಿತೆ (Dress Code) ಮತ್ತು ನಿಯಮಗಳನ್ನು ಜಾರಿಗೊಳಿಸಿದೆ. ವಿದ್ಯಾರ್ಥಿಗಳ ಸುಲಭ ಓದಿಗಾಗಿ ಈ ಪ್ರಮುಖ ನಿಯಮಗಳನ್ನು ಇಲ್ಲಿ ಸಂಕ್ಷಿಪ್ತವಾಗಿ ನೀಡಲಾಗಿದೆ: ಪರೀಕ್ಷಾ ವೇಳಾಪಟ್ಟಿ ಮತ್ತು ಮಾಹಿತಿ ದಿನಾಂಕ: ಏಪ್ರಿಲ್ 22 (ಕನ್ನಡ ಭಾಷಾ ಪರೀಕ್ಷೆ), ಏಪ್ರಿಲ್ 23 ಮತ್ತು 24. ಅಭ್ಯರ್ಥಿಗಳ ಸಂಖ್ಯೆ: ಸುಮಾರು 3.30 ಲಕ್ಷ ವಿದ್ಯಾರ್ಥಿಗಳು. ಕೇಂದ್ರಗಳು: ರಾಜ್ಯಾದ್ಯಂತ 745 ಪರೀಕ್ಷಾ ಕೇಂದ್ರಗಳು. ಭದ್ರತೆ: ಪ್ರತಿ ಕೇಂದ್ರದಲ್ಲೂ ಸಿಸಿ ಕ್ಯಾಮರಾ ಮತ್ತು ಸ್ಕ್ಯಾನಿಂಗ್ ವ್ಯವಸ್ಥೆ ಇರಲಿದೆ. ಪ್ರಮುಖ ವಸ್ತ್ರಸಂಹಿತೆ (Dress Code) ವಿಭಾಗ ಪುರುಷ ಅಭ್ಯರ್ಥಿಗಳು ಮಹಿಳಾ ಅಭ್ಯರ್ಥಿಗಳು ಮೇಲಂಗಿ ಅರ್ಧ ತೋಳಿನ ಶರ್ಟ್ ಅಥವಾ ಟಿ-ಶರ್ಟ್ (ಕಾಲರ್ ಇಲ್ಲದಿದ್ದರೆ ಉತ್ತಮ). ಅರ್ಧ ತೋಳಿನ ಸರಳ ಬಟ್ಟೆಗಳು. ಕಸೂತಿ, ಹೂವು ಅಥವಾ ದೊಡ್ಡ ಬಟನ್ ಇರಬಾರದು. ಕೆಳಂಗಿ ಸರಳ ಪ್ಯಾಂಟ್ (ಜೀನ್ಸ್ ಅಥವಾ ಕುರ್ತಾ ಪೈಜಾಮ ನಿಷೇಧಿಸಲಾಗಿದೆ). ಸರಳ ಪ್ಯಾಂಟ್/ಉಡುಪು…

Read More