Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ನಾಳೆಯಿಂದ `ಗ್ಯಾಸ್ ಸಿಲಿಂಡರ್’ ಬುಕಿಂಗ್‌ ಗೆ ಹೊಸ ರೂಲ್ಸ್ ಜಾರಿ : ಈ 5 ನಿಯಮಗಳ ಪಾಲನೆ ಕಡ್ಡಾಯ.!

30/04/2026 8:17 AM

‘ಪಾಕಿಸ್ತಾನದ ಮಧ್ಯಸ್ಥಿಕೆ ಅಗತ್ಯವಿಲ್ಲ’: ಇರಾನ್ ಜೊತೆ ನೇರ ಫೋನ್ ಮಾತುಕತೆಗೆ ಟ್ರಂಪ್ ಒತ್ತು; ರಾಜತಾಂತ್ರಿಕ ಹಾದಿಯಲ್ಲಿ ಅಮೆರಿಕದ ಹೊಸ ನಡೆ!

30/04/2026 8:17 AM

BIG NEWS : ರಾಜ್ಯದಲ್ಲಿ ಇನ್ನು ‘ಕಾಗದರಹಿತ’ ಆಸ್ತಿ ನೋಂದಣಿ: ಇಂದು ಪ್ರಾಯೋಗಿಕ ಚಾಲನೆ.!

30/04/2026 8:10 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಹಿಂದುಳಿದ ಸಮಾಜದ ಎಂ.ಡಿ.ಆನಂದ್, ಸಾಗರದ ಮಾರಿ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ: ಸೃಷ್ಟಿಯಾಗಲಿದೆಯೇ ಹೊಸ ಇತಿಹಾಸ?
KARNATAKA

ಹಿಂದುಳಿದ ಸಮಾಜದ ಎಂ.ಡಿ.ಆನಂದ್, ಸಾಗರದ ಮಾರಿ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ: ಸೃಷ್ಟಿಯಾಗಲಿದೆಯೇ ಹೊಸ ಇತಿಹಾಸ?

By kannadanewsnow0914/03/2026 10:41 PM

ಶಿವಮೊಗ್ಗ: ಮಲೆನಾಡಿನ ಪ್ರಸಿದ್ಧ ಧಾರ್ಮಿಕ ಕೇಂದ್ರವಾದ ಸಾಗರದ ಶ್ರೀ ಮಾರಿಕಾಂಬಾ ದೇವಿ ನ್ಯಾಸ ಪ್ರತಿಷ್ಠಾನದ ಅಧ್ಯಕ್ಷೀಯ ಚುನಾವಣಾ ಕಣ ಈಗ ರಂಗೇರಿದೆ. ಮಾರಿಕಾಂಬಾ ಹಿತರಕ್ಷಣಾ ಸಮಿತಿಯು ತನ್ನ ಅಧಿಕೃತ ಅಧ್ಯಕ್ಷ ಅಭ್ಯರ್ಥಿಯಾಗಿ 8 ಸಮಾಜವನ್ನು ಪ್ರತಿನಿಧಿಸುವ ಹಿಂದುಳಿದ ವರ್ಗಗಳ ಪ್ರಬಲ ನಾಯಕ ಎಂ.ಡಿ. ಆನಂದ್ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಿದ್ದು, ಈ ಬಾರಿಯ ಚುನಾವಣೆ ಭಾರಿ ಕುತೂಹಲ ಮೂಡಿಸಿದೆ.

ಹಿಂದುಳಿದ ವರ್ಗಗಳ ಧ್ವನಿಯಾಗಿ ಆನಂದ್

ಎಂಟು ಸಮಾಜಗಳ ಹಿಂದುಳಿದ ವರ್ಗಗಳ ನಾಯಕನಾಗಿ ಗುರುತಿಸಿಕೊಂಡಿರುವ ಎಂ.ಡಿ. ಆನಂದ್, ಸಮಾಜದ ವಿವಿಧ ಸ್ತರಗಳ ಜನರನ್ನು ಪ್ರತಿನಿಧಿಸುತ್ತಿದ್ದಾರೆ. ಒಂದು ವೇಳೆ ಇವರು ಅಧ್ಯಕ್ಷರಾಗಿ ಆಯ್ಕೆಯಾದಲ್ಲಿ, ಅದು ಮಾರಿಕಾಂಬಾ ದೇವಿ ನ್ಯಾಸದ ಇತಿಹಾಸದಲ್ಲೇ ಒಂದು ಹೊಸ ದಾಖಲೆಯಾಗಲಿದೆ. ಶೋಷಿತ ಮತ್ತು ಹಿಂದುಳಿದ ವರ್ಗಗಳ ನಾಯಕನೊಬ್ಬ ಇಂತಹ ಪ್ರತಿಷ್ಠಿತ ಧಾರ್ಮಿಕ ಸಂಸ್ಥೆಯ ಉನ್ನತ ಸ್ಥಾನ ಅಲಂಕರಿಸುವುದು ಸಾಮಾಜಿಕ ನ್ಯಾಯದ ದೃಷ್ಟಿಯಿಂದಲೂ ಮಹತ್ವದ್ದಾಗಿದೆ.

ಚುನಾವಣಾ ಫಲಿತಾಂಶ ಮತ್ತು ಸಮಿತಿಯ ಸಾಧನೆ

ಇತ್ತೀಚೆಗಷ್ಟೇ ನಡೆದ ನ್ಯಾಸ ಪ್ರತಿಷ್ಠಾನದ 36 ಸ್ಥಾನಗಳ ಚುನಾವಣೆಯಲ್ಲಿ ಮಾರಿಕಾಂಬಾ ಹಿತರಕ್ಷಣಾ ಸಮಿತಿಯು ಅಭೂತಪೂರ್ವ ಯಶಸ್ಸು ಕಂಡಿದೆ.

15 ಅಭ್ಯರ್ಥಿಗಳು ಜಯಗಳಿಸುವ ಮೂಲಕ ಸಮಿತಿಯು ಅಗ್ರಸ್ಥಾನವನ್ನು ಪಡೆದುಕೊಂಡಿದೆ. ಕಳೆದ 13 ವರ್ಷಗಳಿಂದ ದೇವಿಯ ಭಕ್ತರ ಧ್ವನಿಯಾಗಿ ಹೋರಾಡುತ್ತಾ ಬಂದಿರುವ ಸಮಿತಿಯು, ಈ ಬಾರಿ ತನ್ನ ತಂಡವನ್ನು ಗೆಲ್ಲಿಸುವಲ್ಲಿ ಯಶಸ್ವಿಯಾಗಿದೆ. ಕೇವಲ ನಾಲ್ಕು ಸ್ಥಾನಗಳ ಕೊರತೆಯಿಂದ ಸ್ಪಷ್ಟ ಬಹುಮತದಿಂದ ವಂಚಿತವಾಗಿದ್ದರೂ, ಅತಿ ದೊಡ್ಡ ತಂಡವಾಗಿ ಹೊರಹೊಮ್ಮಿರುವ ಸಮಿತಿಯು ಅಧ್ಯಕ್ಷ ಸ್ಥಾನವನ್ನು ತನ್ನದಾಗಿಸಿಕೊಳ್ಳಲು ಪಣ ತೊಟ್ಟಿದೆ.

ಮಾರ್ಚ್.29ರಂದು ಅಧ್ಯಕ್ಷರ ಆಯ್ಕೆಗೆ ಕಸರತ್ತು, ನಿರ್ಣಾಯಕ ದಿನ

ಮಾರಿಕಾಂಬ ನ್ಯಾಸ ಪ್ರತಿಷ್ಠಾನದ ಅಧ್ಯಕ್ಷ ಸ್ಥಾನದ ಚುನಾವಣೆ ಬಹುತೇಕ ಮಾರ್ಚ್ 29 ರಂದು ನಡೆಸಲು ನಿಗದಿ ಪಡಿಸಲಾಗಿದೆ. ಇತರ ತಂಡಗಳಿಂದಲೂ ಅಧ್ಯಕ್ಷ ಸ್ಥಾನದ ಬಗ್ಗೆ ಚರ್ಚೆಗಳು ನಡೆಯುತ್ತಿರುವಾಗಲೇ, ಹಿತರಕ್ಷಣಾ ಸಮಿತಿಯು ಎಂ.ಡಿ ಆನಂದ್ ಅವರನ್ನು ಕಣಕ್ಕಿಳಿಸಿರುವುದು ಎದುರಾಳಿಗಳಿಗೆ ಪ್ರಬಲ ಪೈಪೋಟಿ ನೀಡುವ ಮುನ್ಸೂಚನೆ ನೀಡಿದೆ.

ಮಾರಿಕಾಂಬಾ ದೇವಿಯ ಭಕ್ತರ ಹಿತ ಕಾಪಾಡಲು ಕಳೆದ ಒಂದು ದಶಕಕ್ಕೂ ಹೆಚ್ಚು ಕಾಲದಿಂದ ನಾವು ಶ್ರಮಿಸಿದ್ದೇವೆ. ಎಂ.ಡಿ. ಆನಂದ್ ಅವರ ನಾಯಕತ್ವದಲ್ಲಿ ನ್ಯಾಸ ಪ್ರತಿಷ್ಠಾನವನ್ನು ಮತ್ತಷ್ಟು ಅಭಿವೃದ್ಧಿಪಡಿಸುವ ಆಶಯ ನಮ್ಮದು ಎಂದು ಸಮಿತಿಯು ವಿಶ್ವಾಸ ವ್ಯಕ್ತಪಡಿಸಿದೆ.

ಒಟ್ಟಾರೆಯಾಗಿ, ಮಾರ್ಚ್.29ರಂದು ಶ್ರೀ ಮಾರಿಕಾಂಬಾ ದೇವಿ ನ್ಯಾಸ ಪ್ರತಿಷ್ಠಾನಕ್ಕೆ ಅಧ್ಯಕ್ಷರ ಆಯ್ಕೆಯ ಕಸರತ್ತು ನಡೆಯಲಿದೆ. ಅಂದು ಮೂರು ತಂಡಗಳಾಗಿ ಚುನಾವಣೆಗೆ ಸ್ಪರ್ಧಿಸಿ, ಗೆಲುವು ಕಂಡಿರುವಂತ 36 ಅಭ್ಯರ್ಥಿಗಳಲ್ಲಿ ಯಾರು ಅಧ್ಯಕ್ಷರಾಗಲಿದ್ದಾರೆ ಎಂಬುದು ತೀವ್ರ ಕುತೂಹಲ ಮೂಡಿಸಿದೆ. ಒಂದು ವೇಳೆ ಹಿತರಕ್ಷಣಾ ಸಮಿತಿಯ ಎಂ.ಡಿ ಆನಂದ್ ಅವರು ನ್ಯಾಸ ಪ್ರತಿಷ್ಠಾನದ ಅಧ್ಯಕ್ಷರಾಗಿದ್ದೇ ಆದಲ್ಲಿ, ಅದು 8 ಸಮಾಜಗಳಿಗೆ ಸಮಿತಿಯ ಸದಸ್ಯರು ಕೊಟ್ಟ ಗೌರವವೇ ಆಗಲಿದೆ. ಜೊತೆ ಜೊತೆಗೆ ಸಾಗರದಲ್ಲಿ ಹೊಸ ಇತಿಹಾಸವೇ ಸೃಷ್ಠಿಯಾದಂತೆ ಆಗಲಿದೆ. ಆ ನಿಟ್ಟಿನಲ್ಲಿ ಶ್ರೀ ಮಾರಿಕಾಂಬ ದೇವಿ ನ್ಯಾಸ ಪ್ರತಿಷ್ಠಾನದ ಅಧ್ಯಕ್ಷರ ಆಯ್ಕೆಯ ಚದುರಂಗದಾಟದಲ್ಲಿ ಎಂ.ಡಿ. ಆನಂದ್ ಅವರು ಇತಿಹಾಸ ಬರೆಯುತ್ತಾರೆಯೇ ಎಂಬುವುದನ್ನು ಕಾದು ನೋಡಬೇಕಿದೆ.

ವರದಿ; ವಸಂತ ಬಿ ಈಶ್ವರಗೆರೆ, ಸಂಪಾದಕರು…

Share. Facebook Twitter LinkedIn WhatsApp Email

Related Posts

BIG NEWS : ರಾಜ್ಯದಲ್ಲಿ ಇನ್ನು ‘ಕಾಗದರಹಿತ’ ಆಸ್ತಿ ನೋಂದಣಿ: ಇಂದು ಪ್ರಾಯೋಗಿಕ ಚಾಲನೆ.!

30/04/2026 8:10 AM2 Mins Read

ಖಾಸಗಿ ಶಾಲೆಯ ಸಿಬ್ಬಂದಿಗಳು ಜನಗಣತಿಯಲ್ಲಿ ಭಾಗಿಯಾಗುವುದು ಕಡ್ಡಾಯ : ಹೈಕೋರ್ಟ್ ಮಹತ್ವದ ನಿರ್ದೇಶನ

30/04/2026 8:01 AM2 Mins Read

PPF v/s NPS: ಹೆಚ್ಚಿನ ಆದಾಯಕ್ಕಾಗಿ ನೀವು ಯಾವುದರಲ್ಲಿ ಹೂಡಿಕೆ ಮಾಡುವುದು ಬೆಸ್ಟ್? ಇಲ್ಲಿದೆ ಮಾಹಿತಿ

30/04/2026 7:51 AM2 Mins Read
Recent News

ನಾಳೆಯಿಂದ `ಗ್ಯಾಸ್ ಸಿಲಿಂಡರ್’ ಬುಕಿಂಗ್‌ ಗೆ ಹೊಸ ರೂಲ್ಸ್ ಜಾರಿ : ಈ 5 ನಿಯಮಗಳ ಪಾಲನೆ ಕಡ್ಡಾಯ.!

30/04/2026 8:17 AM

‘ಪಾಕಿಸ್ತಾನದ ಮಧ್ಯಸ್ಥಿಕೆ ಅಗತ್ಯವಿಲ್ಲ’: ಇರಾನ್ ಜೊತೆ ನೇರ ಫೋನ್ ಮಾತುಕತೆಗೆ ಟ್ರಂಪ್ ಒತ್ತು; ರಾಜತಾಂತ್ರಿಕ ಹಾದಿಯಲ್ಲಿ ಅಮೆರಿಕದ ಹೊಸ ನಡೆ!

30/04/2026 8:17 AM

BIG NEWS : ರಾಜ್ಯದಲ್ಲಿ ಇನ್ನು ‘ಕಾಗದರಹಿತ’ ಆಸ್ತಿ ನೋಂದಣಿ: ಇಂದು ಪ್ರಾಯೋಗಿಕ ಚಾಲನೆ.!

30/04/2026 8:10 AM

ಬಾಯಾರಿಕೆ ಎಂದು 5 ಲೀಟರ್ ನೀರು ಕುಡಿದ ವ್ಯಕ್ತಿ ಐಸಿಯು ಪಾಲು! ಅತಿಯಾದ ನೀರು ಜೀವಕ್ಕೆ ಕಂಟಕವಾಗಿದ್ದು ಹೇಗೆ? ವೈದ್ಯರ ವಿವರಣೆ

30/04/2026 8:09 AM
State News
KARNATAKA

BIG NEWS : ರಾಜ್ಯದಲ್ಲಿ ಇನ್ನು ‘ಕಾಗದರಹಿತ’ ಆಸ್ತಿ ನೋಂದಣಿ: ಇಂದು ಪ್ರಾಯೋಗಿಕ ಚಾಲನೆ.!

By kannadanewsnow5730/04/2026 8:10 AM KARNATAKA 2 Mins Read

ಬೆಂಗಳೂರು: ರಾಜ್ಯದ ಜನತೆಗೆ ಆಸ್ತಿ ನೋಂದಣಿ ಪ್ರಕ್ರಿಯೆಯಲ್ಲಿ ದೊಡ್ಡ ಬದಲಾವಣೆಯೊಂದು ಎದುರಾಗಲಿದೆ. ಸಬ್ ರಿಜಿಸ್ಟ್ರಾರ್ ಕಚೇರಿಗಳಲ್ಲಿ ಇನ್ನು ಮುಂದೆ ದಸ್ತಾವೇಜುಗಳ…

ಖಾಸಗಿ ಶಾಲೆಯ ಸಿಬ್ಬಂದಿಗಳು ಜನಗಣತಿಯಲ್ಲಿ ಭಾಗಿಯಾಗುವುದು ಕಡ್ಡಾಯ : ಹೈಕೋರ್ಟ್ ಮಹತ್ವದ ನಿರ್ದೇಶನ

30/04/2026 8:01 AM

PPF v/s NPS: ಹೆಚ್ಚಿನ ಆದಾಯಕ್ಕಾಗಿ ನೀವು ಯಾವುದರಲ್ಲಿ ಹೂಡಿಕೆ ಮಾಡುವುದು ಬೆಸ್ಟ್? ಇಲ್ಲಿದೆ ಮಾಹಿತಿ

30/04/2026 7:51 AM

BREAKING : ಬೆಂಗಳೂರಿನ ಬೌರಿಂಗ್ ಆಸ್ಪತ್ರೆ ದುರಂತಕ್ಕೆ ಪ್ರಧಾನಿ ಮೋದಿ ಸಂತಾಪ : ಮೃತರ ಕುಟುಂಬಕ್ಕೆ ತಲಾ 2 ಲಕ್ಷ ರೂ. ಪರಿಹಾರ ಘೋಷಣೆ.!

30/04/2026 7:23 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.