Subscribe to Updates
Get the latest creative news from FooBar about art, design and business.
Author: kannadanewsnow09
ನವದೆಹಲಿ: ಮುಕೇಶ್ ಅಂಬಾನಿ ಅವರು ವಿವಿಧ ದೇವಾಲಯಗಳಿಗೆ ಭೇಟಿ ನೀಡಿ, ಕೋಟ್ಯಂತರ ರೂಪಾಯಿಯ ದೇಣಿಗೆಯನ್ನು ಘೋಷಣೆ ಮಾಡಿದ್ದಾರೆ. ಒಟ್ಟು ಮೂರು ತೀರ್ಥಕ್ಷೇತ್ರಗಳಿಗೆ ಭೇಟಿ ಕೊಟ್ಟಿದ್ದಾರೆ. ಮೊದಲಿಗೆ ಅಂಬಾನಿ ಅವರು ನಾಥದ್ವಾರಕ್ಕೆ ಭೇಟಿ ನೀಡಿ, ಅಲ್ಲಿ ಶ್ರೀನಾಥಜಿಯವರ ಭೋಗ್ ಆರತಿ ದರ್ಶನ ಪಡೆದು ಮತ್ತು ಗುರು ಶ್ರೀ ವಿಶಾಲ್ ಬಾವಾ ಸಾಹೇಬ್ ಅವರಿಂದ ಆಶೀರ್ವಾದ ಪಡೆದರು. ತಮ್ಮ ಭೇಟಿಯ ಸಮಯದಲ್ಲಿ, ಅವರು ನಾಥದ್ವಾರದಲ್ಲಿ ಆಧುನಿಕ, ಸುಸಜ್ಜಿತ “ಯಾತ್ರಿ ಏವಂ ವರಿಷ್ಠ ಸೇವಾ ಸದನ” (ಯಾತ್ರಿಕರು ಮತ್ತು ಹಿರಿಯ ನಾಗರಿಕ ಸೇವಾ ಕೇಂದ್ರ) ಸ್ಥಾಪನೆಯನ್ನು ಘೋಷಿಸಿದರು ಮತ್ತು ಶ್ರೀ ನಾಥದ್ವಾರ ದೇವಾಲಯಕ್ಕೆ ರೂ. 15 ಕೋಟಿ ದೇಣಿಗೆ ನೀಡಿದರು. ಈ ಸೇವಾ ಸದನದಲ್ಲಿ 100ಕ್ಕೂ ಹೆಚ್ಚು ಕೊಠಡಿ ಇದ್ದು, ವೃದ್ಧ ವೈಷ್ಣವರು ಮತ್ತು ಭೇಟಿ ನೀಡುವ ಭಕ್ತರಿಗೆ ಸುರಕ್ಷಿತ, ಆರಾಮದಾಯಕ ಮತ್ತು ಗೌರವಾನ್ವಿತ ವಸತಿ ಸೌಕರ್ಯವನ್ನು ಒದಗಿಸುತ್ತದೆ. ಇದು 24 ಗಂಟೆಗಳ ವೈದ್ಯಕೀಯ ಘಟಕ, ನರ್ಸಿಂಗ್ ಮತ್ತು ಭೌತಚಿಕಿತ್ಸೆಯ ಸೇವೆಗಳು, ಸತ್ಸಂಗ ಮತ್ತು ಪ್ರವಚನ…
ಪತಿ ಉದ್ಧಾರವಾದಾಗ ಮಾತ್ರ, ಪತ್ನಿ ಮತ್ತು ಮಕ್ಕಳನ್ನು ಚೆನ್ನಾಗಿ ಸಾಕಲು ಸಾಧ್ಯವಾಗುತ್ತದೆ. ಅವರಿಗೆ ಬೇಕಾದ್ದನ್ನು ತೆಗೆದುಕೊಡಲು, ಒಳ್ಳೆಯ ಬಟ್ಟೆ, ಹೊಟ್ಟೆ ತುಂಬ ಊಟ ಹಾಕಲು ಸಾಧ್ಯವಾಗುತ್ತದೆ. ಇನ್ನು ಹಿಂದೂ ಧರ್ಮದ ಪ್ರಕಾರ, ಪತಿ ಉದ್ಧಾರವಾಗಬೇಕು, ಶ್ರೀಮಂತನಾಗಬೇಕು ಅಂದ್ರೆ, ಪತ್ನಿ ಕೆಲ ಕೆಲಸಗಳನ್ನು ಮಾಡಬೇಕಾಗುತ್ತದೆ. ಹಾಗಾದ್ರೆ ಏನು ಆ ಕೆಲಸ ಅನ್ನೋ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ.. ವಾಕ್ಯ ಸಿದ್ದಿ, ಮಂತ್ರಸಿದ್ದಿ ಯಂತ್ರ ಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕ್ಕೈಕ ಜೋತಿಷ್ಯರು ವಿದ್ವಾನ್ ವಿದ್ಯಾಧರ್ 9686268564 ಇಷ್ಟ ಪಟ್ಟವರು ನೀಮ್ಮಂತೇ ಆಗಲು, ಪ್ರೀತಿಯಲ್ಲಿ ಮೋಸ ಹೋಗಿದ್ದರೆ ಮದುವೆ ವಿಳಂಬ, ಸತಿ ಪತಿ ಕಲಹ, ಸಂತಾನ, ಅತ್ತೆ ಸೋಸೆ ಕಲಹ, ಶತ್ರು ಭಾದೆ, ಅನಾರೋಗ್ಯ, ಸಾಲದ ಭಾದೆ, ಮನೆಯಲ್ಲಿ ಅಶಾಂತಿ, ಬೀಜೀನೇಸ್ಸ ನಲ್ಲಿ ನಷ್ಟ , ಕೋರ್ಟ್ ಕೇಸ್, ಎಷ್ಟೇ ಪ್ರಯತ್ನ ಜೀವನದಲ್ಲಿ ಏಳಿಗೆ ಅಭಿವೃದ್ಧಿ ಆಗದೆ ನೋಂದಿದ್ದರೆ ಇನ್ನೂ ನಿಮ್ಮ ಸಮಸ್ಯೆ ಯಾವುದೇ ಇರಲಿ ಎಷ್ಟೇ ಕಠಿಣವಾಗಿರಲಿ ಕೇವಲ 2 ದಿನದಲ್ಲಿ…
ಧಾರವಾಡ: ವಾಯವ್ಯ ಸಾರಿಗೆಯಲ್ಲಿ ಜನಪರ, ಕಾರ್ಮಿಕ ಸ್ನೇಹಿ ಹಲವು ಉಪಕ್ರಮಗಳಿಗೆ ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಚಾಲನೆ ನೀಡಿದರು. 1. ಧಾರವಾಡ ನೂತನ ನಗರ ಬಸ್ ನಿಲ್ದಾಣ ಉದ್ಘಾಟನೆ 2. ಹುಬ್ಬಳ್ಳಿಯ ನವೀಕೃತ ಕೇಂದ್ರ ಬಸ್ ನಿಲ್ದಾಣದ ಉದ್ಘಾಟನೆ 3. ಅಪಘಾತ/ ಅಪರಾಧ ರಹಿತ ಚಾಲಕರಿಗೆ ಬೆಳ್ಳಿ ಪದಕ ವಿತರಣಾ ಸಮಾರಂಭ 4. ಅನುಕಂಪ ಆಧಾರದಲ್ಲಿ ಕುಟುಂಬದವರಿಗೆ ನೇಮಕಾತಿ ಆದೇಶ ವಿತರಣೆ 5. ಹೊಸ ಬಸ್ಸುಗಳ ಸೇರ್ಪಡೆ 6. ನಗದು ರಹಿತ ಸೇವೆಗಾಗಿ ನೂತನ ಸ್ಮಾರ್ಟ್ ETM (Electronic ticket machine) ಅನುಷ್ಠಾನ 7. ಅಪಘಾತದಲ್ಲಿ ಮೃತಪಟ್ಟ ಸಿಬ್ಬಂದಿಗಳ ಕುಟುಂದವರಿಗೆ ರೂ.1 ಕೋಟಿ ವಿಮಾ ಚೆಕ್ ವಿತರಣೆ. 8. ನೌಕರರ ಕುಟುಂಬ ಕಲ್ಯಾಣ ನಿಧಿ ಯೋಜನೆಯಡಿಯಲ್ಲಿ ಮೃತ ಅವಲಂಬಿಥಿಗೆ ರೂ.5 ಲಕ್ಷ ವಿಮಾ ಚೆಕ್ ವಿತರಣೆ 9. ನೌಕರರು ನಿಧನರಾದ ಪ್ರಕರಣಗಳಲ್ಲಿ ( ಅಪಘಾತ ಹೊರತುಪಡಿಸಿ) ಮೃತರ ಅವಲಂಬಿತರಿಗೆ ತಲಾ ರೂ.6.00 ಲಕ್ಷ ವಿತರಣೆ 10. SBI ರವರಿಂದ Cash…
ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಿನಲ್ಲಿ ಖೈದಿಗಳಿಗೆ ರಾಜಾತಿಥ್ಯದ ವಿಷಯಗಳು ವೀಡಿಯೋಗಳ ಮೂಲಕ ದಿನಕ್ಕೊಂದು ಬಹಿರಂಗವಾಗುತ್ತಿವೆ. ಈಗ ನಾನ್ ವೆಜ್, ಎಣ್ಣೆ, ಪುಲ್ ಮೋಜು-ಮಸ್ತಿಯೊಂದಿಗೆ ಕೈದಿಗಳು ಭರ್ಜರಿ ಡ್ಯಾನ್ಸ್ ಮಾಡಿದಂತ ವೀಡಿಯೋ ವೈರಲ್ ಆಗಿದೆ. ಹೌದು.. ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಮದ್ಯ ಕುಡಿದು ಕೈದಿಗಳು ಭರ್ಜರಿ ಡ್ಯಾನ್ಸ್ ಮಾಡಿರುವಂತ ವೀಡಿಯೋ ವೈರಲ್ ಆಗಿದೆ. ಜೈಲಿನಲ್ಲಿರುವಂತ ಡ್ರಮ್, ತಟ್ಟೆಗಳನ್ನೇ ವಾದ್ಯದ ವಸ್ತುಗಳನ್ನಾಗಿ ಬಡಿದುಕೊಂಡು, ಕುಡಿದು ಡ್ಯಾನ್ಸ್ ಮಾಡಿರುವುದು ವೀಡಿಯೋದಲ್ಲಿನ ದೃಶ್ಯಗಳಲ್ಲಿ ಕಂಡು ಬಂದಿದೆ. ಜೈಲಿನ ವೈರಲ್ ವೀಡಿಯೋ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಪರಪ್ಪನ ಅಗ್ರಹಾರ ಜೈಲಿನದ್ದಾ ಅಥವಾ ಬೇರೆಯ ಜೈಲಿನದ್ದಾ ಎನ್ನುವ ಬಗ್ಗೆ ತನಿಖೆ ಪ್ರಗತಿಯಲ್ಲಿದೆ. ಇದೆಲ್ಲದರ ನಡುವೆ ಪರಪ್ಪನ ಅಗ್ರಹಾರದ ಕರ್ಮಕಾಂಡ ಮಾತ್ರ ಬಗೆದಷ್ಟು ಬಯಲಾಗುತ್ತಿದೆ. https://kannadanewsnow.com/kannada/it-is-illegal-to-label-children-in-conflict-with-law-as-juvenile-delinquents-child-protection-directorate/ https://kannadanewsnow.com/kannada/centers-ban-on-sharavati-pumped-storage-project-victory-for-environmentalists-fight/
ಮೈಸೂರು: ಅರಸೀಕೆರೆ ರೈಲು ನಿಲ್ದಾಣದ ಯಾರ್ಡ್‌ನಲ್ಲಿ ನಡೆಯಲಿರುವ ಪ್ಲಾಟ್‌ಫಾರ್ಮ್ ಶೆಲ್ಟರ್ ಕಾಮಗಾರಿಯ ಸಲುವಾಗಿ, ಕೆಲವು ರೈಲು ಸೇವೆಗಳನ್ನು ಭಾಗಶಃ ರದ್ದುಗೊಳಿಸಲಾಗುತ್ತಿದೆ ಎಂಬುದಾಗಿ ಮೈಸೂರಿನ ನೈರುತ್ಯ ರೈಲ್ವೆ ವಿಭಾಗವು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ. ನವೆಂಬರ್ 9 ರಿಂದ ಡಿಸೆಂಬರ್ 13 ರವರೆಗೆ ರೈಲು ಸಂಖ್ಯೆ 16214 ಎಸ್.ಎಸ್.ಎಸ್. ಹುಬ್ಬಳ್ಳಿ – ಅರಸೀಕೆರೆ ಎಕ್ಸ್‌ಪ್ರೆಸ್ ರೈಲು ಬೀರೂರು ಮತ್ತು ಅರಸೀಕೆರೆ ನಡುವೆ ರದ್ದಾಗಲಿದ್ದು, ಈ ರೈಲು ಬೀರೂರು ನಿಲ್ದಾಣದಲ್ಲಿ ತನ್ನ ಪ್ರಯಾಣವನ್ನು ಕೊನೆಗೊಳಿಸಲಿವೆ. ಅದೇ ರೀತಿ, ನವೆಂಬರ್ 10 ರಿಂದ ಡಿಸೆಂಬರ್ 14 ರವರೆಗೆ ಸಂಚರಿಸುವ ರೈಲು ಸಂಖ್ಯೆ 16213 ಅರಸೀಕೆರೆ – ಎಸ್.ಎಸ್.ಎಸ್. ಹುಬ್ಬಳ್ಳಿ ಎಕ್ಸ್‌ಪ್ರೆಸ್ ಸೇವೆಯು ಅರಸೀಕೆರೆ ಮತ್ತು ಬೀರೂರು ನಡುವೆ ರದ್ದಾಗಲಿದೆ; ಈ ರೈಲು ಅರಸೀಕೆರೆಗೆ ಬದಲು ಬೀರೂರು ನಿಲ್ದಾಣದಿಂದಲೇ ತನ್ನ ನಿಗದಿತ ಸಮಯದಲ್ಲಿ ಹೊರಡಲಿವೆ. ಇದರ ಜೊತೆಗೆ, ರೈಲು ಸಂಖ್ಯೆ 56267 ಅರಸೀಕೆರೆ – ಮೈಸೂರು ಪ್ಯಾಸೆಂಜರ್ ರೈಲು ಕೂಡ ನವೆಂಬರ್ 10 ರಿಂದ ಡಿಸೆಂಬರ್ 14 ರವರೆಗೆ…
ಕೂಡ್ಲಿಗಿ : 1,70,000 ಜನರಿಗೆ ಕುಡಿಯುವ ನೀರು ಒದಗಿಸುವ ಜೊತೆಗೆ ಕೂಡ್ಲಿಗಿಯ ಅಂತರ್ಜಲ ವೃದ್ಧಿಗೆ ಶ್ರಮಿಸಿ ಯಶಸ್ವಿಯಾದ ಶಾಸಕ ಶ್ರೀನಿವಾಸ್ ಅವರನ್ನು ಪಡೆದ ಕೂಡ್ಲಿಗಿ ಜನತೆ ಅತ್ಯಂತ ಅದೃಷ್ಟವಂತರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಪಾರವಾಗಿ ಶ್ಲಾಘಿಸಿದರು. ಕೂಡ್ಲಿಗಿ ವಿಧಾನಸಭಾ ಕ್ಷೇತ್ರದ 74 ಕೆರೆಗಳಿಗೆ ನೀರು ತುಂಬಿಸುವ ಯೋಜನೆಯನ್ನು ಉದ್ಘಾಟಿಸಿ, ಹಲವು ಅಭಿವೃದ್ಧಿ ಕಾರ್ಯಕ್ರಗಳಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು. ಬರಡು ನೆಲ ಕೂಡ್ಲಿಗಿಯನ್ನು ಹಸಿರಿನ ನೆಲವನ್ನಾಗಿ ಮಾಡಲು ಪಣತೊಟ್ಟು ಕೆಲಸ ಮಾಡುತ್ತಿರುವ ಶಾಸಕ ಶ್ರೀನಿವಾಸ್ ಅವರು ಅತ್ಯಂತ ಕ್ರಿಯಾಶೀಲರು. ಇವರಿಂದ ಕ್ಷೇತ್ರದ ಅಭಿವೃದ್ಧಿ ಅತ್ಯಂತ ವೇಗ ಪಡೆದುಕೊಂಡಿದೆ ಎಂದರು. ನಮ್ಮದು ಅಭಿವೃದ್ಧಿ ಪರವಾದ ನುಡಿದಂತೆ ನಡೆಯುತ್ತಿರುವ ಸರ್ಕಾರ. ಕಳೆದ ಎರಡು ವರ್ಷಗಳಲ್ಲಿ ಕೂಡ್ಲಿಗಿ ಕ್ಷೇತ್ರಕ್ಕೆ 1750 ಕೋಟಿಗೂ ಅಧಿಕ ಮೊತ್ತದ ಹಣದಲ್ಲಿ ಬೇರೆ ಬೇರೆ ಅಭಿವೃದ್ಧಿ ಕಾರ್ಯಗಳು ನಡೆದಿವೆ. ಜೊತೆಗೆ ಚುನಾವಣೆ ವೇಳೆ ಘೋಷಿಸಿದ್ದಂತೆ ಐದು ಗ್ಯಾರಂಟಿಗಳನ್ನು ಘೋಷಿಸಿ, ಐದಕ್ಕೆ ಐದನ್ನೂ ಜಾರಿ ಮಾಡಿದ್ದೇವೆ. ರಾಜ್ಯದ ಜನರ ಮನೆ ಬಾಗಿಲಿಗೆ ಪ್ರತೀ…
ಬೆಂಗಳೂರು: ಉಗ್ರಂ ಮಂಜು ವೈವಾಹಿಕ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಸಂಧ್ಯಾ ಎನ್ನುವವರ ಜೊತೆಗೆ ಉಗ್ರಂ ಮಂಜು ನಿಶ್ಚಿತಾರ್ಥ ಸದ್ದಿಲ್ಲದೇ ನೆರವೇರಿದೆ. ಬಿಗ್ ಬಾಸ್ ಸೀಸನ್ 11ರ ಸ್ಪರ್ಧಿ ಹಾಗೂ ನಟ ಉಗ್ರಂ ಮಂಜು ನಿಶ್ಚಿತಾರ್ಥ ಸದ್ದಿಲ್ಲದೇ ನೆರವೇರಿದೆ. ಸಂಧ್ಯಾ ಎಂಬುವರ ಕೈಯನ್ನು ಉಗ್ರಂ ಮಂಜು ಇಂದು ಸರಳವಾಗಿ ಹೂ ಮುಡಿಸುವ ಮೂಲಕ ಶಾಸ್ತ್ರದ ಜೊತೆಗೆ ನಿಶ್ಚಿತಾರ್ಥವನ್ನು ನೆರವೇರಿಸಿದ್ದಾರೆ. ಬೆಂಗಳೂರಿನ ಪೀಣ್ಯದಲ್ಲಿ ಕುಟುಂಬಸ್ಥರು ಹಾಗೂ ಕೆಲವೇ ಕೆಲವು ಆಪ್ತರ ಸಮ್ಮುಖದಲ್ಲಿ ನಟ ಉಗ್ರಂ ಮಂಜು ಹಾಗೂ ಸಂಧ್ಯಾ ನಿಶ್ಚಿತಾರ್ಥ ನೆರವೇರಿದೆ. 2026ರ ಜನವರಿಯಲ್ಲಿ ಉಗ್ರಂ ಮಂಜು ಹಾಗೂ ಸಂಧ್ಯಾ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಎನ್ನಲಾಗುತ್ತಿದೆ. ಇದೀಗ ಇವರಿಬ್ಬರ ನಿಶ್ಚಿತಾರ್ಥದ ಪೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. https://kannadanewsnow.com/kannada/a-tusk-cut-during-the-wild-boar-capture-operation-elephant-moaning/ https://kannadanewsnow.com/kannada/centers-ban-on-sharavati-pumped-storage-project-victory-for-environmentalists-fight/
ಹಾಸನ: ಜಿಲ್ಲೆಯಲ್ಲಿ ಭೀಮ ಆನೆ ಸೆರೆ ಕಾರ್ಯಾಚರಣೆಯ ವೇಳೆಯಲ್ಲಿ ಒಂದು ದಂತ ಕಟ್ ಆಗಿ, ರಕ್ತ ಸ್ತ್ರಾವದೊಂದಿಗೆ ಭಾರೀ ನರಳಾಟವನ್ನು ಮಾಡುತ್ತಿರುವುದಾಗಿ ತಿಳಿದು ಬಂದಿದೆ. ಹಾಸನದಲ್ಲಿ ಉಪಟಳ ನೀಡ್ತಿದ್ದ ಭೀಮ ಆನೆಯು ಒಂದು ದಂತ ಕಟ್ ಆಗಿರೋದರಿಂದ ನರಳಾಡುತ್ತಿದೆ. ದಂತ ಮುರಿದುಕೊಂಡು ಕಾಡಾನೆ ಭೀಮ ಘೀಳಿಡುತ್ತಾ ಓಡಾಡುತ್ತಿದೆ. ಹಾಸನ ಜಿಲ್ಲೆಯ ಜಗಬೋರನಹಳ್ಳಿಯಲ್ಲಿ ಭೀಮ ಒದ್ದಾಟ ನಡೆಸುತ್ತಿದೆ. ಸಾಕಾನೆ, ಕಾಡಾನೆ ಭೀಮನ ನಡುವೆ ಕಾಳಗ ನಡೆದಾಗ ಒಂದು ದಂತ ಕಟ್ ಆಗಿದೆ. https://kannadanewsnow.com/kannada/central-governments-ban-on-sharavati-pumped-storage-is-a-first-stage-victory-farmer-leader-dinesh-shirwala/ https://kannadanewsnow.com/kannada/centers-ban-on-sharavati-pumped-storage-project-victory-for-environmentalists-fight/
ಶಿವಮೊಗ್ಗ: ಕೇಂದ್ರ ಸರ್ಕಾರವು ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಗೆ ತಡೆ ನೀಡಿರುವುದಾಗಿ ತಿಳಿದು ಬಂದಿದೆ. ಇದು ನಮ್ಮ ಹೋರಾಟಕ್ಕೆ ಸಿಕ್ಕ ಮೊದಲ ಗೆಲುವು ಆಗಿದೆ. ಆದರೇ ನಮ್ಮ ಹೋರಾಟವನ್ನು ಇಲ್ಲಿಗೆ ನಿಲ್ಲಿಸುವುದಿಲ್ಲ. ಯೋಜನೆಯನ್ನು ರದ್ದುಗೊಳಿಸುವವರೆಗೂ ಮುಂದುವರೆಯಲಿದೆ ಎಂಬುದಾಗಿ ರೈತ ಮುಖಂಡ ದಿನೇಶ್ ಶಿರವಾಳ ತಿಳಿಸಿದ್ದಾರೆ. ಇಂದು ಕನ್ನಡ ನ್ಯೂಸ್ ನೌ ಜೊತೆಗೆ ಮಾತನಾಡಿದಂತ ಅವರು, ಇಂದು ಕೇಂದ್ರ ಸರ್ಕಾರ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಗೆ ತಡೆ ನೀಡಿರುವುದು ಒಂದು ಹಂತದ ನಮ್ಮ ಹೋರಾಟಕ್ಕೆ ಸಿಕ್ಕ ಗೆಲುವು ಆಗಿದೆ. ನಮ್ಮ ಹೋರಾಟ ಇಲ್ಲಿಗೆ ಕೈ ಬಿಡುವುದಿಲ್ಲ. ಯೋಜನೆಯನ್ನು ಸಂಪೂರ್ಣವಾಗಿ ರದ್ದುಗೊಳಿಸಬೇಕು. ಆಗ ಮಾತ್ರವೇ ನಮ್ಮ ಹೋರಾಟವು ಅಂತ್ಯವಾಗಲಿದೆ ಎಂದರು. ಇದೇ ನವೆಂಬರ್.11ರಂದು ಶಿವಮೊಗ್ಗದಲ್ಲಿ ದುಂಡುಮೇಜಿನ ಸಭೆ ಕರೆಯಲಾಗಿದೆ. ಈ ಸಭೆಯಲ್ಲಿ ರೈತ ನಾಯಕ ದರ್ಶನ್ ಪುಟ್ಟಣ್ಣಯ್ಯ, ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗೆಡೆ, ಎಟಿ ರಾಮಸ್ವಾಮಿ, ಗೋಪಾಲಕಗೌಡ, ಚೂನಪ್ಪ ಪೂಜಾರಿ, ಬಂಗಾರಮಕ್ಕಿ ಶ್ರೀ, ಮೂಲೆಗದ್ದೆ ಶ್ರೀಗಳು, ಮೌಲ್ವಿಗಳು, ಫಾದರ್ ಗಳು ಭಾಗಿಯಾಗಲಿದ್ದಾರೆ.…
ಬೆಂಗಳೂರು: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷರಾಗಿ ಶಿವಾನಂದ ತಗಡೂರ ಸೇರಿದಂತೆ ಇತರರು ಅವಿರೋಧವಾಗಿ ಆಯ್ಕೆಯಾಗಿರುವುದಾಗಿ ರಾಜ್ಯ ಮುಖ್ಯ ಚುನಾವಣಾಧಿಕಾರಿ ಎನ್.ರವಿಕುಮಾರ್ ಟೆಲೆಕ್ಸ್ ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ. ಈ ಕುರಿತಂತೆ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿರುವಂತ ಅವರು, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷರಾಗಿ ಶಿವಾನಂದ ತಗಡೂರು, ಉಪಾಧ್ಯಕ್ಷರಾಗಿ ಹೆಚ್ ಬಿ ಮದನ ಗೌಡ, ಅಜ್ಜಮಾಡ ರಮೇಶ್ ಕುಟ್ಟಪ್ಪ, ಮತ್ತಿಕೆರೆ ಜಯರಾಮ ಆಯ್ಕೆಯಾಗಿರುವುದಾಗಿ ತಿಳಿಸಿದ್ದಾರೆ. ಇನ್ನೂ ಕೆಯುಡಬ್ಲ್ಯೂಜೆಯ ಪ್ರಧಾನ ಕಾರ್ಯದರ್ಶಿಯಾಗಿ ಲೋಕೇಶ್ ಜಿ ಸಿ, ಕಾರ್ಯದರ್ಶಿಯಾಗಿ ನಿಂಗಪ್ಪ ಚಾವಡಿ, ಪುಂಡಲೀಕ ಬಾಲೋಜಿ, ಸೋಮಶೇಖರ ಕೆರೆಗೋಡು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಖಜಾಂಚಿಯಾಗಿ ವಾಸುದೇವ ಹೊಳ್ಳ ಅವರು ಅವಿರೋಧವಾಗಿ ಆಯ್ಕೆಯಾಗಿರುವುದಾಗಿ ಕೆಯುಡಬ್ಲ್ಯೂಜೆ ಮುಖ್ಯ ಚುನಾವಣಾಧಿಕಾರಿ ಎನ್ ರವಿಕುಮಾರ್ ಟೆಲೆಕ್ಸ್ ಘೋಷಿಸಿದ್ದಾರೆ. ಶಿವಾನಂದ ತಗಡೂರ ಯಾರು? ಬಾಗೂರು-ನವಿಲೆ ಸುರಂಗ ಸಂತ್ರಸ್ತರ ಪರವಾಗಿ ಹೋರಾಟ ಸಂಘಟಿಸಿದ್ದ ಅವರು, ಹಾಸನ ಜಿಲ್ಲಾ ನೀರಾವರಿ ಹೋರಾಟ ಸಮಿತಿಗಳ ಒಕ್ಕೂಟ, ರೈತ ಹಿತ ರಕ್ಷಣಾ ಸಮಿತಿ, ಹಾಸನ ಜಿಲ್ಲಾ ಸಾಕ್ಷರತಾ ಆಂದೋಲನ ಸಮಿತಿ ಸಂಚಾಲಕರಾಗಿ ದುಡಿದವರು. ಹಲವು ಜನಪರ…














