Subscribe to Updates
Get the latest creative news from FooBar about art, design and business.
Author: ವಸಂತ ಬಿ ಈಶ್ವರಗೆರೆ
ವಸಂತ ಬಿ ಈಶ್ವರಗೆರೆ (Vasantha B Eshwaragere) ಅವರು ಕರ್ನಾಟಕದ ಪತ್ರಕರ್ತರು ಮತ್ತು ಕವಿ. ಉದಯ ನ್ಯೂಸ್, ಟಿವಿ5 ಕನ್ನಡ ಸೇರಿದಂತೆ ವಿವಿಧ ಸುದ್ದಿ ಮಾಧ್ಯಮಗಳಲ್ಲಿ ಸುಮಾರು 15 ವರ್ಷಗಳ ಅನುಭವವನ್ನು ಹೊಂದಿದ್ದಾರೆ. ಪ್ರಸ್ತುತ ಅವರು Kannada News Now ಡಿಜಿಡಿಲ್ ಮಾಧ್ಯಮದಲ್ಲಿ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ತಾಜಾ ಸುದ್ದಿ, ಸಾಹಿತ್ಯ, ಸಾಮಾಜಿಕ ವರದಿಗಾರಿಕೆ, ನ್ಯಾಯಾಂಗ ಸಂಬಂಧಿತ ವರದಿ ಮತ್ತು ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದ ಸುದ್ದಿಗಳ ವರದಿಯಲ್ಲಿ ಸಕ್ರಿಯರಾಗಿದ್ದಾರೆ. ಗುಡವಿ ಪಕ್ಷಿಧಾಮದಂತಹ ಪ್ರವಾಸಿ ತಾಣಗಳ ಕುರಿತು ಲೇಖನಗಳನ್ನು ಬರೆದಿದ್ದಾರೆ.
ಶಿವಮೊಗ್ಗ: ವಿದ್ಯಾರ್ಥಿಗಳ ಭವಿಷ್ಯದ ಜೊತೆ ಚೆಲ್ಲಾಟವಾಡುತ್ತಿರುವ ವಿಶ್ವವಿದ್ಯಾಲಯದ ಆಡಳಿತ ವೈಫಲ್ಯವನ್ನು ಖಂಡಿಸಿ ಎನ್.ಎಸ್.ಯು.ಐ (NSUI) ಕಾರ್ಯಕರ್ತರು ನಡೆಸಿದ ಪ್ರತಿಭಟನೆ ಇಂದು ತೀವ್ರ ಸ್ವರೂಪ ಪಡೆದುಕೊಂಡಿದೆ. ಕುವೆಂಪು ವಿಶ್ವವಿದ್ಯಾಲಯದ ಕುಲಪತಿ ಶರತ್ ಅನಂತಮೂರ್ತಿ ಅವರ ಕಚೇರಿಗೆ ನುಗ್ಗಿದ ಪ್ರತಿಭಟನಾಕಾರರು ಪೀಠೋಪಕರಣಗಳನ್ನು ಧ್ವಂಸಗೊಳಿಸಿ ಆಕ್ರೋಶ ಹೊರಹಾಕಿದ್ದಾರೆ. ಕಚೇರಿ ಧ್ವಂಸ, ರಣರಂಗವಾದ ವಿವಿ ಆವರಣ: ವಿಶ್ವವಿದ್ಯಾಲಯದ ಆಡಳಿತಾತ್ಮಕ ಎಡವಟ್ಟುಗಳಿಂದ ರೊಚ್ಚಿಗೆದ್ದ ಕಾರ್ಯಕರ್ತರು ಕುಲಪತಿಗಳ ಕಚೇರಿಗೆ ನುಗ್ಗಿ ಅಲ್ಲಿದ್ದ ಕುರ್ಚಿಗಳು, ಗ್ಲಾಸ್ ಹಾಗೂ ಕುಂಡಗಳನ್ನು (ಪಾಟ್) ಒಡೆದು ಹಾಕಿದ್ದಾರೆ. ಅಷ್ಟೇ ಅಲ್ಲದೆ, ವಿಶ್ವವಿದ್ಯಾಲಯದ ಬೋರ್ಡ್‌ಗಳಿಗೆ ಪೈಂಟ್ ಸ್ಪ್ರೇ ಮಾಡುವ ಮೂಲಕ ತಮ್ಮ ಪ್ರತಿರೋಧ ದಾಖಲಿಸಿದರು. ಈ ವೇಳೆ ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ನೂಕಾಟ-ತಳ್ಳಾಟ ನಡೆದು ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು. ವಿದ್ಯಾರ್ಥಿಗಳ ಆಕ್ರೋಶಕ್ಕೆ ಕಾರಣವೇನು? ಕಳೆದ ಹಲವು ಸಮಯದಿಂದ ಕುವೆಂಪು ವಿಶ್ವವಿದ್ಯಾಲಯದಲ್ಲಿ ಆಡಳಿತಾತ್ಮಕ ಕಲಹ ತಾರಕಕ್ಕೇರಿದ್ದು, ಇದು ನೇರವಾಗಿ ವಿದ್ಯಾರ್ಥಿಗಳ ಮೇಲೆ ಪರಿಣಾಮ ಬೀರುತ್ತಿದೆ. ಪ್ರತಿಭಟನಾಕಾರರು ಮುಖ್ಯವಾಗಿ ನಾಲ್ಕು ಅಂಶಗಳನ್ನು ಮುಂದಿಟ್ಟುಕೊಂಡು ಹೋರಾಟ ನಡೆಸುತ್ತಿದ್ದಾರೆ: ಅಂಕಪಟ್ಟಿ…
ಬೆಂಗಳೂರು: “ಮುಂದಿನ ಆರು ತಿಂಗಳ ಕಾಲ ತಿರುಪತಿ ತಿರುಮಲ ಸನ್ನಿಧಾನಕ್ಕೆ ಬಮುಲ್ ನಿಂದ ತಿಂಗಳಿಗೆ 2 ಲಕ್ಷ ಕೆ.ಜಿ ತುಪ್ಪವನ್ನು ಸರಬರಾಜು ಮಾಡಲಾಗುತ್ತದೆ. ಪ್ರತಿವರ್ಷ ಕೆಎಂಎಫ್ ನಿಂದ ತುಪ್ಪ ಸರಬರಾಜು ಮಾಡಲಾಗುತ್ತಿತ್ತು” ಎಂದು ಬಮುಲ್ ಅಧ್ಯಕ್ಷರು, ನಿಕಟಪೂರ್ವ ಸಂಸದ ಡಿ.ಕೆ. ಸುರೇಶ್ ಅವರು ತಿಳಿಸಿದರು. ಬೆಂಗಳೂರು ಸಹಕಾರ ಹಾಲು ಒಕ್ಕೂಟ (ಬಮೂಲ್) ಕಚೇರಿಯಲ್ಲಿ ಸುರೇಶ್ ಅವರು ಬುಧವಾರ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದರು. ಇದಕ್ಕೂ ಮೊದಲು ತಿರುಪತಿಗೆ ತುಪ್ಪ ಪೂರೈಕೆ ವಾಹನಕ್ಕೆ ಬಮುಲ್ ನಿರ್ದೇಶಕರು, ಅಧಿಕಾರಿಗಳ ಜತೆಗೆ ಹಸಿರು ಬಾವುಟ ತೋರಿ ಬೀಳ್ಕೊಟ್ಟರು. “ತಿರುಪತಿಗೆ ನಂದಿನಿ ತುಪ್ಪ ಪೂರೈಕೆಗೆ ನಾವು ಟೆಂಡರ್ ಪಡೆದಿದ್ದು, ಇದರ ಮೊತ್ತ 136 ಕೋಟಿ ರೂಪಾಯಿಗಳು. ಪ್ರತಿನಿತ್ಯ 12.5 ಟನ್ ನಂತೆ ಮುಂದಿನ ಆರು ತಿಂಗಳು ತುಪ್ಪ ಸರಬರಾಜಾಗಲಿದೆ. ಬಮುಲ್ ಒಕ್ಕೂಟ ಟಿಟಿಡಿ ಜೊತೆ ಪ್ರತ್ಯೇಕವಾಗಿ ಒಪ್ಪಂದ ಮಾಡಿಕೊಂಡು ಈ ಸರಬರಾಜು ಮಾಡುತ್ತಿದೆ. ಗುಣಮಟ್ಟದಲ್ಲಿ, ರುಚಿಯಲ್ಲಿ ನಂದಿನಿ ತುಪ್ಪ ರಾಷ್ಟ್ರ ಮಟ್ಟದಲ್ಲಿ ಹೆಸರನ್ನು ಗಳಿಸಿದೆ” ಎಂದರು. ಸಾಗಾಣಿಕೆಗೆ ಡಿಜಿಟಲ್ ಲಾಕ್…
ಬೆಂಗಳೂರು: ಬುದ್ಧ ಪೂರ್ಣಿಮೆಯ ಪವಿತ್ರ ದಿನದ ಪ್ರಯುಕ್ತ ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಪ್ರಾಣಿವಧೆ ಹಾಗೂ ಮಾಂಸ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಿ ಬಿಬಿಎಂಪಿ (ಪಶುಪಾಲನಾ ವಿಭಾಗ) ಆದೇಶ ಹೊರಡಿಸಿದೆ. ಪ್ರಮುಖ ಅಂಶಗಳು: ದಿನಾಂಕ: ಮೇ 1, 2026, ಶುಕ್ರವಾರ. ಕಾರಣ: ಬುದ್ಧ ಪೂರ್ಣಿಮಾ ಆಚರಣೆ. ನಿರ್ಬಂಧ: ಕಸಾಯಿಖಾನೆಗಳಲ್ಲಿ ಪ್ರಾಣಿವಧೆ ಮತ್ತು ಮಳಿಗೆಗಳಲ್ಲಿ ಮಾಂಸ ಮಾರಾಟವನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಸಂಪೂರ್ಣ ವಿವರ: ಅಹಿಂಸೆಯ ಹರಿಕಾರ ಗೌತಮ ಬುದ್ಧನ ಜನ್ಮದಿನವಾದ ‘ಬುದ್ಧ ಪೂರ್ಣಿಮಾ’ ಹಿನ್ನೆಲೆಯಲ್ಲಿ ಪ್ರತಿ ವರ್ಷದಂತೆ ಈ ಬಾರಿಯೂ ಗ್ರೇಟರ್ ಬೆಂಗಳೂರು ಪ್ರಾಧಿಕಾರದ (BBMP) ವ್ಯಾಪ್ತಿಯಲ್ಲಿ ಮಾಂಸ ಮಾರಾಟಕ್ಕೆ ತಡೆ ನೀಡಲಾಗಿದೆ. ಈ ಕುರಿತು ಮಾಹಿತಿ ನೀಡಿರುವ ಪಶುಪಾಲನಾ ವಿಭಾಗದ ಉಪ ನಿರ್ದೇಶಕರು, “ಶುಕ್ರವಾರದಂದು ನಗರದ ಎಲ್ಲಾ ಕಸಾಯಿಖಾನೆಗಳು ಬಂದ್ ಆಗಿರಲಿವೆ ಹಾಗೂ ಚಿಲ್ಲರೆ ಮಾಂಸ ಮಾರಾಟ ಮಳಿಗೆಗಳಲ್ಲಿಯೂ ವ್ಯಾಪಾರ ಮಾಡುವಂತಿಲ್ಲ” ಎಂದು ತಿಳಿಸಿದ್ದಾರೆ. ಈ ಆದೇಶವನ್ನು ಉಲ್ಲಂಘಿಸುವವರ ವಿರುದ್ಧ ಕಾನೂನು ರೀತ್ಯಾ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ಸಾರ್ವಜನಿಕರು…
ಶಿವಮೊಗ್ಗ: ಸಾಗರದ ಲಯನ್ಸ್ ಕ್ಲಬ್ ಅಧ್ಯಕ್ಷರಾದ ಡಾ. ಪ್ರಸನ್ನ ಟಿ. ಅವರು 2025-26ನೇ ಸಾಲಿನಲ್ಲಿ ಸಲ್ಲಿಸಿದ ಅತ್ಯುತ್ತಮ ಸೇವೆ ಮತ್ತು ಸಮರ್ಥ ನಾಯಕತ್ವವನ್ನು ಗುರುತಿಸಿ ಅವರಿಗೆ ಲಯನ್ಸ್ ಸಂಸ್ಥೆಯ ಅತ್ಯುನ್ನತ ‘ಅಂತರಾಷ್ಟ್ರೀಯ ಅಧ್ಯಕ್ಷ ಪದಕ’ (International President’s Medal) ನೀಡಿ ಗೌರವಿಸಲಾಗಿದೆ. ಸೇವೆಯ ವಿವರ: 2025ರ ಜುಲೈ ತಿಂಗಳಿನಲ್ಲಿ ಸಾಗರ ಲಯನ್ಸ್ ಕ್ಲಬ್‌ನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಡಾ. ಪ್ರಸನ್ನ ಅವರು, ಅಲ್ಪಾವಧಿಯಲ್ಲೇ ಕ್ಷೇತ್ರ ವ್ಯಾಪ್ತಿಯಲ್ಲಿ ಗಮನಾರ್ಹ ಸಾಮಾಜಿಕ ಮತ್ತು ಶೈಕ್ಷಣಿಕ ಕಾರ್ಯಕ್ರಮಗಳನ್ನು ರೂಪಿಸಿದ್ದರು. ಇವರ ನೇತೃತ್ವದಲ್ಲಿ ನಡೆದ ವಿವಿಧ ಸೇವಾ ಯೋಜನೆಗಳು ಹಾಗೂ ಕ್ಲಬ್ ಅನ್ನು ಮುನ್ನಡೆಸಿದ ರೀತಿಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ. ಪ್ರಶಸ್ತಿ ಪ್ರದಾನ: ಇತ್ತೀಚೆಗೆ ನಡೆದ ಸಮಾರಂಭದಲ್ಲಿ ಲಯನ್ಸ್ ಅಂತರಾಷ್ಟ್ರೀಯ ಮಾಜಿ ನಿರ್ದೇಶಕಿ ಜೆ.ಪಿ. ಸಿಂಗ್ ಅವರು ಡಾ. ಪ್ರಸನ್ನ ಅವರಿಗೆ ಪದಕ ತೊಡಿಸಿ ಅಭಿನಂದಿಸಿದರು. ಲಯನ್ಸ್ ಸಂಸ್ಥೆಯ ಈ ಪ್ರತಿಷ್ಠಿತ ಗೌರವವು ಸಾಗರ ಕ್ಲಬ್‌ನ ಘನತೆಯನ್ನು ಹೆಚ್ಚಿಸಿದೆ ಎಂದು ಗಣ್ಯರು ಅಭಿಪ್ರಾಯಪಟ್ಟರು. ಈ ಸಂದರ್ಭದಲ್ಲಿ…
ಮುಂಬೈ: ಜಾಗತಿಕ ಮಟ್ಟದಲ್ಲಿ ಕಚ್ಚಾ ತೈಲ ಬೆಲೆ ಏರಿಕೆಯಾಗುತ್ತಿದ್ದರೂ, ದೇಶೀಯ ಮಾರುಕಟ್ಟೆಯಲ್ಲಿ ಕಂಪನಿಗಳ ಉತ್ತಮ ತ್ರೈಮಾಸಿಕ ಫಲಿತಾಂಶದ ಹಿನ್ನೆಲೆಯಲ್ಲಿ ಬುಧವಾರ ಭಾರತೀಯ ಷೇರು ಮಾರುಕಟ್ಟೆಗಳು ಭರ್ಜರಿ ಲಾಭದೊಂದಿಗೆ ವಹಿವಾಟು ಮುಗಿಸಿವೆ. ಮಾರುಕಟ್ಟೆಯ ಅಂಕಿ-ಅಂಶಗಳು: ಬಿಎಸ್‌ಇ ಸೆನ್ಸೆಕ್ಸ್ (Sensex): 609.45 ಅಂಕಗಳ (0.79%) ಏರಿಕೆಯೊಂದಿಗೆ 77,496.36 ಮಟ್ಟದಲ್ಲಿ ಸ್ಥಿರವಾಯಿತು. ಎನ್‌ಎಸ್‌ಇ ನಿಫ್ಟಿ (Nifty 50): 181.95 ಅಂಕಗಳ (0.76%) ಲಾಭದೊಂದಿಗೆ 24,177.65 ಮಟ್ಟ ತಲುಪಿತು. ತೈಲ ಬೆಲೆ ಏರಿಕೆಯ ಆತಂಕ ಇರಾನ್ ಬಂದರುಗಳ ಮೇಲೆ ಅಮೆರಿಕ ದಿಗ್ಬಂಧನ ಮುಂದುವರಿಸುವ ವರದಿಗಳ ಹಿನ್ನೆಲೆಯಲ್ಲಿ ಜಾಗತಿಕ ತೈಲ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ. ಇದರಿಂದಾಗಿ ಬ್ರೆಂಟ್ ಕಚ್ಚಾ ತೈಲ ಬೆಲೆ ಪ್ರತಿ ಬ್ಯಾರೆಲ್‌ಗೆ 114.43 ಡಾಲರ್ ತಲುಪಿದ್ದು, ಶೇ. 2.85 ರಷ್ಟು ಏರಿಕೆಯಾಗಿದೆ. ಇಂತಹ ಪ್ರತಿಕೂಲ ಪರಿಸ್ಥಿತಿಯ ನಡುವೆಯೂ ಹೂಡಿಕೆದಾರರು ಉತ್ತಮ ಫಲಿತಾಂಶ ನೀಡಿದ ಕಂಪನಿಗಳ ಷೇರುಗಳ ಖರೀದಿಗೆ ಒಲವು ತೋರಿದರು. ವಲಯವಾರು ಪ್ರವೃತ್ತಿ: ಇಂದಿನ ವಹಿವಾಟಿನಲ್ಲಿ FMCG ಮತ್ತು ಆಟೋ ವಲಯಗಳು ಮುಂಚೂಣಿಯಲ್ಲಿದ್ದವು: ಲಾಭದತ್ತ: FMCG…
ವಾಷಿಂಗ್ಟನ್: ಇರಾನ್ ಮತ್ತು ಅಮೆರಿಕ ನಡುವಿನ ಸಂಘರ್ಷ ಈಗ ಡಿಜಿಟಲ್ ಯುದ್ಧದ ರೂಪ ಪಡೆದಿದೆ. ಪಶ್ಚಿಮ ಏಷ್ಯಾದಲ್ಲಿ ಕಾರ್ಯನಿರ್ವಹಿಸುತ್ತಿರುವ ಸುಮಾರು 2,379 ಅಮೆರಿಕನ್ ಮರೀನ್ ಯೋಧರ ವೈಯಕ್ತಿಕ ವಿವರಗಳನ್ನು ಇರಾನ್ ಬೆಂಬಲಿತ ಹ್ಯಾಕರ್‌ಗಳ ಗುಂಪು ಸೋರಿಕೆ ಮಾಡಿದೆ. ಈ ಬೆಳವಣಿಗೆಯಿಂದಾಗಿ ಅಮೆರಿಕದ ರಕ್ಷಣಾ ಇಲಾಖೆ (ಪೆಂಟಗನ್) ತೀವ್ರ ಆತಂಕಕ್ಕೆ ಒಳಗಾಗಿದ್ದು, ತನಿಖೆ ಆರಂಭಿಸಿದೆ. ಹ್ಯಾಕಿಂಗ್ ನಡೆದಿದ್ದು ಹೇಗೆ? ‘ಹಂದಾಲಾ’ (Handala) ಎಂಬ ಹೆಸರಿನ ಹ್ಯಾಕರ್ ಗುಂಪು ಈ ಕೃತ್ಯದ ಹೊಣೆ ಹೊತ್ತುಕೊಂಡಿದೆ. ಟೆಲಿಗ್ರಾಂನಲ್ಲಿ ಮಾಹಿತಿ ಲಭ್ಯ: ಹ್ಯಾಕರ್‌ಗಳು ತಮ್ಮ ಟೆಲಿಗ್ರಾಂ ಚಾನಲ್‌ನಲ್ಲಿ ಯೋಧರ ಹೆಸರು ಮತ್ತು ಇತರ ಸಂವೇದನಾಶೀಲ ಮಾಹಿತಿಯನ್ನು ಪ್ರಕಟಿಸಿದ್ದಾರೆ. ಬೆದರಿಕೆ ಸಂದೇಶಗಳು: ಈ ಭಾಗದಲ್ಲಿ ನಿಯೋಜನೆಗೊಂಡಿರುವ ಅಮೆರಿಕದ ಸೈನಿಕರಿಗೆ ವಾಟ್ಸಾಪ್ ಮೂಲಕ ಬೆದರಿಕೆ ಸಂದೇಶಗಳು ಬರುತ್ತಿವೆ. “ನೀವು ನಮ್ಮ ನಿಗಾದಲ್ಲಿದ್ದೀರಿ, ನಿಮ್ಮನ್ನು ಟಾರ್ಗೆಟ್ ಮಾಡುವುದು ನಮಗೆ ಸುಲಭ” ಎಂಬ ಎಚ್ಚರಿಕೆಯನ್ನು ಹ್ಯಾಕರ್‌ಗಳು ನೀಡುತ್ತಿದ್ದಾರೆ. ಕುಟುಂಬಕ್ಕೂ ಆಪತ್ತು: ಯೋಧರ ಕುಟುಂಬದ ವಿವರಗಳು, ಮನೆ ವಿಳಾಸ ಮತ್ತು ಅವರ ದಿನಚರಿಯ ಮಾಹಿತಿಯೂ…
ಬೆಂಗಳೂರು: ಸ್ವಂತ ಮನೆಯ ಕನಸು ಕಂಡು ರಾಜೀವ್ ಗಾಂಧಿ ವಸತಿ ನಿಗಮದ ಮೂಲಕ ಮನೆ ಪಡೆದಿದ್ದರೂ, ನಿಗದಿತ ಹಣ ಪಾವತಿಸದ ಫಲಾನುಭವಿಗಳ ವಿರುದ್ಧ ಸರ್ಕಾರ ಕಠಿಣ ಕ್ರಮಕ್ಕೆ ಮುಂದಾಗಿದೆ. ಪದೇ ಪದೇ ನೋಟಿಸ್ ನೀಡಿದರೂ ಸ್ಪಂದಿಸದವರ ಮನೆ ಹಂಚಿಕೆಯನ್ನು ರದ್ದುಗೊಳಿಸಲು ವಸತಿ ಇಲಾಖೆ ಅಧಿಕೃತ ಆದೇಶ ಹೊರಡಿಸಿದೆ. ಏನಿದು ಪ್ರಕರಣ? ಸರ್ಕಾರದ ಮಹತ್ವಾಕಾಂಕ್ಷೆಯ ‘ಮುಖ್ಯಮಂತ್ರಿ 1 ಲಕ್ಷ ಮನೆ ಯೋಜನೆಯಡಿ’ ಬೆಂಗಳೂರು ನಗರ ಜಿಲ್ಲೆಯ 20 ವಿವಿಧ ಕಡೆಗಳಲ್ಲಿ ವಸತಿ ಸಮುಚ್ಚಯಗಳನ್ನು ನಿರ್ಮಿಸಲಾಗಿದೆ. ಈ ಯೋಜನೆಯಡಿ ಬಡವರಿಗೆ ಮನೆ ಹಂಚಿಕೆ ಮಾಡಲಾಗಿದ್ದು, ಫಲಾನುಭವಿಗಳು ಪ್ರಾರಂಭಿಕವಾಗಿ 1 ಲಕ್ಷ ರೂಪಾಯಿ ಠೇವಣಿ ಕಟ್ಟಿ ಮನೆಗಳನ್ನು ಆಯ್ಕೆ ಮಾಡಿಕೊಂಡಿದ್ದರು. ನಿಗಮದ ವತಿಯಿಂದ ಪ್ರತಿ ಮನೆಯ ಬೆಲೆಯನ್ನು 12.5 ಲಕ್ಷ ರೂಪಾಯಿ ಎಂದು ನಿಗದಿಪಡಿಸಲಾಗಿತ್ತು. ನೋಟಿಸ್ ನೀಡಿದರೂ ಕ್ಯಾರೆ ಎನ್ನದ ಜನ: ಮನೆ ಹಂಚಿಕೆಯಾದ ಬಳಿಕ ಬಾಕಿ ಮೊತ್ತವನ್ನು ಪಾವತಿಸುವಂತೆ ಫಲಾನುಭವಿಗಳಿಗೆ ರಾಜೀವ್ ಗಾಂಧಿ ವಸತಿ ನಿಗಮವು ಮೂರು ಹಂತಗಳಲ್ಲಿ ನೋಟಿಸ್ ಜಾರಿ ಮಾಡಿತ್ತು. ಹಣ…
ಶಿವಮೊಗ್ಗ: ಜಿಲ್ಲೆಯ ಸಾಗರ ನಗರದ ಆರಾಧ್ಯ ದೈವ ಶ್ರೀ ಮಾರಿಕಾಂಬಾ ದೇವಿಯ ಎರಡನೇ ವರ್ಷದ ವರ್ಧಂತಿ ಉತ್ಸವವು ಮೇ 3ರಂದು ಅತ್ಯಂತ ಸಂಭ್ರಮದಿಂದ ನಡೆಯಲಿದೆ. ಈ ಪ್ರಯುಕ್ತ ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಶ್ರೀ ಮಾರಿಕಾಂಬಾ ದೇವಿ ನ್ಯಾಸ ಪ್ರತಿಷ್ಠಾನದ ಅಧ್ಯಕ್ಷ ಎಂ. ನಾಗರಾಜ್ ತಿಳಿಸಿದ್ದಾರೆ. ಇಂದು ಶಿವಮೊಗ್ಗ ಜಿಲ್ಲೆಯ ಸಾಗರದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಾರಿಯ ವರ್ಧಂತಿ ಉತ್ಸವದ ಸಿದ್ಧತೆಗಳ ಕುರಿತು ಮಾಹಿತಿ ನೀಡಿದರು. ಹೀಗಿದೆ ಧಾರ್ಮಿಕ ಕಾರ್ಯಕ್ರಮಗಳ ವಿವರ ಮೇ 3ರ ಭಾನುವಾರ ಬೆಳಿಗ್ಗೆ 8 ಗಂಟೆಯಿಂದಲೇ ದೇವಸ್ಥಾನದಲ್ಲಿ ಧಾರ್ಮಿಕ ವಿಧಿವಿಧಾನಗಳು ಆರಂಭವಾಗಲಿವೆ. ವರ್ಧಂತಿ ಉತ್ಸವದ ಅಂಗವಾಗಿ ಈ ಕೆಳಗಿನ ಕಾರ್ಯಕ್ರಮಗಳು ನಡೆಯಲಿವೆ: ಕಲಾಭಿವೃದ್ಧಿ ಹವನ ಹಾಗೂ ಕಲಶಾಭಿಷೇಕ. ಸಾರ್ವಜನಿಕ ದುರ್ಗಾ ಹವನ: ಲೋಕಕಲ್ಯಾಣಾರ್ಥವಾಗಿ ಹಮ್ಮಿಕೊಳ್ಳಲಾಗಿರುವ ಈ ಹವನದಲ್ಲಿ ಭಕ್ತರು 250 ರೂ. ಪಾವತಿಸಿ ಹೆಸರು ನೋಂದಾಯಿಸಿಕೊಳ್ಳಬಹುದು. ಪೂರ್ಣಾಹುತಿ: ಮಧ್ಯಾಹ್ನ 12:30ಕ್ಕೆ ದುರ್ಗಾ ಹವನದ ಪೂರ್ಣಾಹುತಿ…
ನವದೆಹಲಿ: ದೆಹಲಿ ಹೈಕೋರ್ಟ್‌ನಲ್ಲಿ ಬುಧವಾರ ನಡೆದ ವರ್ಚುವಲ್ (ವಿಡಿಯೋ ಕಾನ್ಫರೆನ್ಸ್) ವಿಚಾರಣೆಯ ವೇಳೆ ಅತ್ಯಂತ ಮುಜುಗರದ ಮತ್ತು ಆಘಾತಕಾರಿ ಘಟನೆಯೊಂದು ನಡೆದಿದೆ. ನ್ಯಾಯಾಲಯದ ಕಲಾಪ ನಡೆಯುತ್ತಿದ್ದ ಸಮಯದಲ್ಲೇ ಸ್ಕ್ರೀನ್ ಮೇಲೆ ಅಶ್ಲೀಲ ವಿಡಿಯೋವೊಂದು ಪ್ರಸಾರವಾಗಿದ್ದು, ಕಲಾಪಕ್ಕೆ ಅಡ್ಡಿವುಂಟಾಗಿದೆ. ಘಟನೆಯ ವಿವರ: ನ್ಯಾಯಮೂರ್ತಿಗಳ ನೇತೃತ್ವದ ಪೀಠವು ಪ್ರಕರಣವೊಂದರ ವಿಚಾರಣೆ ನಡೆಸುತ್ತಿದ್ದಾಗ, ವರ್ಚುವಲ್ ಲಿಂಕ್ ಮೂಲಕ ಯಾರೋ ಅಪರಿಚಿತರು ಈ ಅಶ್ಲೀಲ ವಿಡಿಯೋವನ್ನು ಪ್ಲೇ ಮಾಡಿದ್ದಾರೆ ಎನ್ನಲಾಗಿದೆ. ಘಟನೆಯಿಂದ ನ್ಯಾಯಾಧೀಶರು, ವಕೀಲರು ಹಾಗೂ ಕಲಾಪದಲ್ಲಿ ಭಾಗಿಯಾಗಿದ್ದ ಗಣ್ಯರು ಕ್ಷಣಕಾಲ ಅವಕ್ಕಾದರು. ತಕ್ಷಣವೇ ಎಚ್ಚೆತ್ತ ತಾಂತ್ರಿಕ ತಂಡವು ವಿಡಿಯೋವನ್ನು ಸ್ಥಗಿತಗೊಳಿಸಿತು. ಹ್ಯಾಕಿಂಗ್ ಶಂಕೆ: ನ್ಯಾಯಾಲಯದ ವರ್ಚುವಲ್ ವಿಚಾರಣೆಯ ಲಿಂಕ್ ಅನ್ನು ಯಾರೋ ದುರುದ್ದೇಶಪೂರ್ವಕವಾಗಿ ಹ್ಯಾಕ್ ಮಾಡಿರುವ ಸಾಧ್ಯತೆಯಿದೆ ಎಂದು ಶಂಕಿಸಲಾಗಿದೆ. ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ನ್ಯಾಯಾಲಯವು, ಕೂಡಲೇ ತನಿಖೆ ನಡೆಸುವಂತೆ ದೆಹಲಿ ಪೊಲೀಸರ ಸೈಬರ್ ಕ್ರೈಂ ವಿಭಾಗಕ್ಕೆ ಸೂಚನೆ ನೀಡಿದೆ. ಈ ಕೃತ್ಯದ ಹಿಂದೆ ಯಾರಿದ್ದಾರೆ ಮತ್ತು ನ್ಯಾಯಾಲಯದ ಗೌರವಕ್ಕೆ ಧಕ್ಕೆ ತಂದವರು ಯಾರು…
ವಾರಾಣಸಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ತಮ್ಮ ಸಂಸದೀಯ ಕ್ಷೇತ್ರವಾದ ವಾರಾಣಸಿಗೆ ಎರಡು ದಿನಗಳ ಭೇಟಿ ನೀಡಿದ್ದು, ಮೊದಲ ದಿನವೇ ಐತಿಹಾಸಿಕ ರೋಡ್‌ಶೋ ಮತ್ತು ದೇವಸ್ಥಾನದ ಭೇಟಿಯ ಮೂಲಕ ಕ್ಷೇತ್ರದ ಜನಮನ ಗೆದ್ದಿದ್ದಾರೆ. 14 ಕಿಲೋಮೀಟರ್ ಮೆಗಾ ರೋಡ್‌ಶೋ: ಲೋಕೋಮೋಟಿವ್ ವರ್ಕ್ಸ್‌ನಿಂದ ಆರಂಭವಾದ ಪ್ರಧಾನಿಯವರ ರೋಡ್‌ಶೋ ಲಹರ್ತಾರಾ, ಕಚಹರಿ, ಅಂಬೇಡ್ಕರ್ ಚೌರಾಹಾ, ಚೌಕಾಘಾಟ್, ತೆಲಿಯಾಬಾಗ್, ಲಹುರಾಬೀರ್ ಮತ್ತು ಮೈದಾಗಿನ್ ಸೇರಿದಂತೆ ನಗರದ ಪ್ರಮುಖ ರಸ್ತೆಗಳ ಮೂಲಕ ಸಾಗಿತು. ಸುಮಾರು 14 ಕಿಲೋಮೀಟರ್ ಉದ್ದದ ಈ ಮಾರ್ಗದುದ್ದಕ್ಕೂ ಹೂವಿನ ಮಳೆಗರೆಯಲಾಯಿತು. ಬಿಜೆಪಿ ಕಾರ್ಯಕರ್ತರು ಹಾಗೂ ಸ್ಥಳೀಯ ನಿವಾಸಿಗಳು ‘ಹರ ಹರ ಮಹಾದೇವ್’ ಮತ್ತು ‘ಜೈ ಶ್ರೀ ರಾಮ್’ ಘೋಷಣೆಗಳೊಂದಿಗೆ ಪ್ರಧಾನಿಯನ್ನು ಅದ್ಧೂರಿಯಾಗಿ ಸ್ವಾಗತಿಸಿದರು. https://twitter.com/ANI/status/2049341201258889520 ಡಮರು ನಾದ, ಶಂಖನಾದದ ಸ್ವಾಗತ: ಸಮಾರು 14 ಕಿಮೀ ಮಾರ್ಗದಲ್ಲಿ ನೂರಾರು ಸ್ವಾಗತ ಕೇಂದ್ರಗಳನ್ನು ನಿರ್ಮಿಸಲಾಗಿತ್ತು. ಡೊಳ್ಳು-ನಾದ, ಶಂಖನಾದ ಮತ್ತು ಗುಲಾಬಿ ಹೂವುಗಳ ಮಳೆಯೊಂದಿಗೆ ಮೋದಿ ಅವರಿಗೆ ಅಭೂತಪೂರ್ವ ಸ್ವಾಗತ ಕೋರಲಾಯಿತು. ಇದು ವಾರಾಣಸಿ ನಗರದ ಇತಿಹಾಸದಲ್ಲೇ…














