Author: kannadanewsnow09

ಬೆಂಗಳೂರು: ನಿನ್ನೆ ನಗರದ ಹೆಬ್ಬಾಳ ಫ್ಲೈಓವರ್ ಬಳಿಯ ಎಸ್ಟೀಮ್ ಮಾಲ್ ಬಳಿಯಲ್ಲಿ ಬಿಎಂಟಿಸಿ ಬಸ್ ಚಾಲಕನ ಅಜಾಗರೂಕತೆಯ ಚಾಲನೆಯಿಂದ ಸರಣಿ ಅಪಘಾತ ಸಂಭವಿಸಿತ್ತು. ಈ ಘಟನೆಯಲ್ಲಿ ಹಲವು ವಾಹನ ಸವಾರರು ಗಂಭೀರವಾಗಿ ಗಾಯಗೊಂಡಿದ್ದರು. ಅಲ್ಲದೇ ವಾಹನಗಳು ಜಖಂ ಕೂಡ ಆಗಿದ್ದವು. ಈ ಘಟನೆಗೆ ಕಾರಣವಾದಂತ ಚಾಲಕನನ್ನು ಅಮಾನತುಗೊಳಿಸಿ ಸಂಸ್ಥೆ ಆದೇಶಿಸಿದೆ. ಈ ಕುರಿತಂತೆ ಪತ್ರಿಕಾ ಪ್ರಕಟಣೆಯಲ್ಲಿ ಬಿಎಂಟಿಸಿ ಮಾಹಿತಿ ನೀಡಿದ್ದು, ದಿನಾಂಕ 12.08.2024 ರಂದು ಘಟಕ 25 ಕ್ಕೆ ಸೇರಿದ ವಾಹನ ಸಂಖ್ಯೆ ಕೆಎ 57 ಎಫ್ 1797 ರ ವಾಹನ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಎಚ್ಎಸ್ಆರ್ ಲೇಔಟ್ ಕಡೆಗೆ ಹೋಗುತ್ತಿರಬೇಕಾದರೆ ಸಮಯ 9.25 ರಲ್ಲಿ ಎಸ್ಟೀಮ್ ಮಾಲ್ ಬಳಿ ಬಸ್ಸಿನ ಮುಂದಿನ ಭಾಗದಿಂದ ಕಾರಿನ ಹಿಂದಿನ ಭಾಗಕ್ಕೆ ಡಿಕ್ಕಿ ಆದ ಪರಿಣಾಮ ಕಾರು ಮುಂದೆ ಚಲಿಸಿ ಅದರ ಮುಂದೆ ಇದ್ದಂತಹ ಇನ್ನು ಎರಡು ಕಾರುಗಳಿಗೆ ಹಾಗೂ ದ್ವಿಚಕ್ರ ವಾಹನಕ್ಕೆ ಡಿಕ್ಕಿಯಾಗಿರುತ್ತದೆ. ಈ ಅಪಘಾತದಿಂದ ದ್ವಿಚಕ್ರ ವಾಹನ ಓರ್ವ ಸವಾರನ ಕಾಲಿಗೆ…

Read More

ಬೆಂಗಳೂರು: ಮುಡಾ ಹಗರಣದಲ್ಲಿ ರಾಜ್ಯಪಾಲರಿಗೆ ಸಿಎಂ ಸಿದ್ಧರಾಮಯ್ಯ ವಿರುದ್ಧ ಮತ್ತೊಂದು ದೂರು ನೀಡಲಾಗಿದೆ. ಈ ಹಿನ್ನಲೆಯಲ್ಲಿ ಮುಡಾ ಅಕ್ರಮದಲ್ಲಿ ಸಿಎಂ ಸಿದ್ಧರಾಮಯ್ಯ ಅವರಿಗೆ ಮತ್ತಷ್ಟು ಸಂಕಷ್ಟ ಎದುರಾದಂತೆ ಆಗಿದೆ. ಇಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರಿಗೆ ಪತ್ರಕರ್ತ ಮತ್ತು ಸಾಮಾಜಿಕ ಹೋರಾಟಗಾರ ಸ್ನೇಹಮಯಿ ಕೃಷ್ಣ ಎಂಬುವರು ಸಿಎಂ ಸಿದ್ಧರಾಮಯ್ಯ ವಿರುದ್ಧದ ಮುಡಾ ಹಗರಣ ಸಂಬಂಧ ಮತ್ತೊಂದು ದೂರು ನೀಡಿದ್ದಾರೆ. ಅವರು ನೀಡಿರುವಂತ ದೂರಿನಲ್ಲಿ ಸರ್ಕಾರದ ಆದೇಶಕ್ಕೆ ವಿರುದ್ಧವಾಗಿ ನಿಮ್ಮ ಹೆಸರಿನಲ್ಲಿ ಪರಿತ್ಯಾಜನ ಪತ್ರವನ್ನು ನೊಂದಾಯಿಸಿ ಕೊಂಡಿರುವುದನ್ನು ಗಂಭಿರವಾಗಿ ಪರಿಗಣಿಸಿ, ಕೂಡಲೇ “ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಪ್ರದ.ಸ.ರಾದ ಕೆ.ಸಿ.ಉಮೇಶ್ ಹಾಗೂ ಸಂಬಂಧಪಟ್ಟ ಇತರ ಅಧಿಕಾರಿಗಳನ್ನು ಕೆಲಸದಿಂದ ವಜಾಗೊಳಿಸಿ, ಸದರಿಯವರ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ಕಲಂ 223 ಮತ್ತು ಇತರ ಸೂಕ್ತ ಕಲಂಗಳ ಪ್ರಕಾರ ಮೊಕದ್ದಮೆ ದಾಖಲಿಸಿ, ಸದರಿ ಪರಿತ್ಯಾಜನ ಪತ್ರವನ್ನು, ಇದೇ ರೀತಿಯಲ್ಲಿ “ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ”ದಿಂದ ನಿಮ್ಮ ಪರವಾಗಿ ನೊಂದಾಯಿಸಿಕೊಂಡಿರುವ ಎಲ್ಲಾ ಪರಿತ್ಯಾಜನ ಪತ್ರಗಳನ್ನು ಕೂಡಲೇ ರದ್ದು ಪಡಿಸುವಂತೆ…

Read More

ಪ್ಯಾರಿಸ್: ಪ್ಯಾರಿಸ್ ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತೆ ಹಿ ಬಿಂಗ್ಜಿಯಾವೊ ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್ಗೆ ನಿವೃತ್ತಿ ಘೋಷಿಸಿದ್ದಾರೆ ಎಂದು ಬ್ಯಾಡ್ಮಿಂಟನ್ ವರ್ಲ್ಡ್ ಫೆಡರೇಶನ್ (ಬಿಡಬ್ಲ್ಯೂಎಫ್) ಮಂಗಳವಾರ ಹೇಳಿಕೆಯಲ್ಲಿ ತಿಳಿಸಿದೆ. ಕಳೆದ ವಾರ ಒಲಿಂಪಿಕ್ಸ್ನಲ್ಲಿ ತನ್ನ ಮೊದಲ ಪ್ರಮುಖ ಟೂರ್ನಮೆಂಟ್ ಪದಕವನ್ನು ಗೆದ್ದ ಚೀನಾದ ಶಟ್ಲರ್ 27 ನೇ ವಯಸ್ಸಿನಲ್ಲಿ ಕ್ರೀಡೆಗೆ ವಿದಾಯ ಹೇಳಿದ್ದಾರೆ. ಆದಾಗ್ಯೂ, ಅವರು ದೇಶೀಯ ಪಂದ್ಯಾವಳಿಗಳಲ್ಲಿ ಆಡುವುದನ್ನು ಮುಂದುವರಿಸಲಿದ್ದಾರೆ ಎಂದು ಜಾಗತಿಕ ಬ್ಯಾಡ್ಮಿಂಟನ್ ಆಡಳಿತ ಮಂಡಳಿ ತಿಳಿಸಿದೆ. ಪ್ಯಾರಿಸ್ನಲ್ಲಿ ನಡೆದ ಮಹಿಳಾ ಸಿಂಗಲ್ಸ್ ಫೈನಲ್ನಲ್ಲಿ ಹಿ ಬಿಂಗ್ಜಿಯಾವೊ ದಕ್ಷಿಣ ಕೊರಿಯಾದ ಆನ್ ಸೆ ಯಂಗ್ ವಿರುದ್ಧ ಸೋತರು. ಚೀನಾದ ಶಟ್ಲರ್ 13-21, 16-21 ನೇರ ಗೇಮ್ ಗಳಿಂದ ಆನ್ ವಿರುದ್ಧ ಸೋಲನುಭವಿಸಿದರು. ವಿಶೇಷವೆಂದರೆ, ಹಿ ಬಿಂಗ್ಜಿಯಾವೊ ಕ್ವಾರ್ಟರ್ ಫೈನಲ್ನಲ್ಲಿ ಎರಡನೇ ಶ್ರೇಯಾಂಕದ ಚೆನ್ ಯುಫೆ ಅವರನ್ನು ಸೋಲಿಸುವ ಮೊದಲು ರೌಂಡ್ ಆಫ್ 16 ರಲ್ಲಿ ಭಾರತದ ಪಿವಿ ಸಿಂಧು ಅವರನ್ನು ಸೋಲಿಸಿದರು. ಸೆಮಿಫೈನಲ್ ಎದುರಾಳಿ ಕ್ಯಾರೊಲಿನಾ ಮರಿನ್ ಎರಡನೇ ಗೇಮ್…

Read More

ಕೋಲ್ಕತ್ತಾ: ಕೋಲ್ಕತ್ತಾದಲ್ಲಿ ವೈದ್ಯಕೀಯ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ, ಕೊಲೆ ಪ್ರಕರಣ ಸಂಬಂಧ ವಿದ್ಯಾರ್ಥಿಗಳ ಪ್ರತಿಭಟನೆ ಹೆಚ್ಚಾದ ಬೆನ್ನಲ್ಲೇ, ಸಿಬಿಐ ತನಿಖೆಗೆ ವಹಿಸಿ ಕೊಲ್ಕತ್ತಾ ಹೈಕೋರ್ಟ್ ಆದೇಶಿಸಿದೆ.  ಕೋಲ್ಕತಾದ ಆರ್ಜಿ ಕಾರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ 31 ವರ್ಷದ ವೈದ್ಯೆಯ ಅತ್ಯಾಚಾರ ಮತ್ತು ಕೊಲೆಯ ಬಗ್ಗೆ ರಾಷ್ಟ್ರವ್ಯಾಪಿ ಪ್ರತಿಭಟನೆಗಳ ಮಧ್ಯೆ, ಕಲ್ಕತ್ತಾ ಹೈಕೋರ್ಟ್ ಇಂದು ತನಿಖೆಯನ್ನು ಕೇಂದ್ರ ತನಿಖಾ ದಳಕ್ಕೆ (ಸಿಬಿಐ) ವರ್ಗಾಯಿಸುವಂತೆ ಆದೇಶಿಸಿದೆ. ಆರ್ ಜಿ ಕಾರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಅತ್ಯಾಚಾರ-ಕೊಲೆ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸುವಂತೆ ಕಲ್ಕತ್ತಾ ಹೈಕೋರ್ಟ್ ಆದೇಶಿಸಿದೆ. ಎಲ್ಲಾ ದಾಖಲೆಗಳನ್ನು ತಕ್ಷಣ ಸಿಬಿಐಗೆ ಹಸ್ತಾಂತರಿಸುವಂತೆ ನ್ಯಾಯಾಲಯ ಕೇಳಿದೆ. https://kannadanewsnow.com/kannada/shivamogga-power-outages-in-these-areas-of-the-district-from-august-16-to-18/ https://kannadanewsnow.com/kannada/alert-heres-another-shocking-news-for-smokers/ https://kannadanewsnow.com/kannada/paralympic-leader-pramod-bhagat-banned-for-18-months-for-doping-violations/

Read More

ಶಿವಮೊಗ್ಗ: ಜಿಲ್ಲೆಯಲ್ಲಿ ಕೆಲ ವಿದ್ಯುತ್ ನಿರ್ವಹಣಾ ಕಾಮಗಾರಿಯನ್ನು ಕೈಗೊಳ್ಳುತ್ತಿರುವ ಹಿನ್ನಲೆಯಲ್ಲಿ, ಆಗಸ್ಟ್.16ರಿಂದ 18ರವರೆಗೆ ವಿವಿಧ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಶಿವಮೊಗ್ಗ ಹೊಳಲೂರು 66/11 ಕೆ.ವಿ. ವಿದ್ಯುತ್ ವಿತರಣಾ ಕೇಂದ್ರದ ವ್ಯಾಪ್ತಿಯಲ್ಲಿ ವಿದ್ಯುತ್ ಮಾರ್ಗಗಳ ಲಿಂಕ್‌ಲೈನ್ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಆ. 16 ರಿಂದ 18 ರವರೆಗೆ 3 ದಿನಗಳ ಕಾಲ ಬೆಳಗ್ಗೆ 10.00 ರಿಂದ ಸಂಜೆ 6.00ರವರೆಗೆ ಹಾಡೋನಹಳ್ಳಿ, ಹಳೆ/ಹೊಸ ಮಡಿಕೆಚೀಲೂರು, ಬಿ.ಕೆ.ತಾವರೆ ಗ್ರಾಮಗಳ ವ್ಯಾಪ್ತಿಯಲ್ಲಿ ಬರುವ ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆ ತಿಳಿಸಿದೆ. https://kannadanewsnow.com/kannada/fire-breaks-out-at-amusement-park-in-visakhapatnam/ https://kannadanewsnow.com/kannada/alert-heres-another-shocking-news-for-smokers/ https://kannadanewsnow.com/kannada/paralympic-leader-pramod-bhagat-banned-for-18-months-for-doping-violations/

Read More

ವಿಶಾಖಪಟ್ಟಣಂ: ಇಲ್ಲಿನ ಅಮ್ಯೂಸ್ಮೆಂಟ್ ಪಾರ್ಕ್ನಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡಿದೆ. ಆರ್.ಕೆ.ಬೀಚ್ ರಸ್ತೆಯಲ್ಲಿರುವ ‘ಡಿನೋ ಪಾರ್ಕ್’ ಮನರಂಜನಾ ಕೇಂದ್ರದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ರೆಸ್ಟೋರೆಂಟ್ ಸಂಪೂರ್ಣವಾಗಿ ಸುಟ್ಟುಹೋಗಿದೆ ಎಂದು ವರದಿಯಾಗಿದೆ. ವಿಶಾಖಪಟ್ಟಣಂನಲ್ಲಿನ ಅಮ್ಯೂಸ್ಮೆಂಟ್ ಪಾರ್ಕ್ ನಲ್ಲಿ ಇರುವಂತ ಡಿನೋ ಪಾರ್ಕ್ ನಲ್ಲಿ ಭೀಕರ ಅಗ್ನಿ ಅವಘಟ ಸಂಭವಿಸಿದೆ. ಈ ಅಗ್ನಿ ಅವಘಡದಲ್ಲಿ ಅಮ್ಯೂಸ್ಮೆಂಟ್ ಪಾರ್ಕ್ ಧಗಧಗಿಸಿ ಹೊತ್ತಿ ಉರಿಯುತ್ತಿರುವುದಾಗಿ ತಿಳಿದು ಬಂದಿದೆ. https://twitter.com/jsuryareddy/status/1823286177908003096 https://kannadanewsnow.com/kannada/paralympic-leader-pramod-bhagat-banned-for-18-months-for-doping-violations/ https://kannadanewsnow.com/kannada/siddaramaiah-visits-tungabhadra-reservoir-says-gate-to-be-repaired-soon/ https://kannadanewsnow.com/kannada/alert-heres-another-shocking-news-for-smokers/

Read More

ವಿಜಯನಗರ: ಇಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ತುಂಗಭದ್ರಾ ಡ್ಯಾಂಗೆ ಭೇಟಿ ನೀಡಿದರು. ಅಲ್ಲದೇ ಕೊಚ್ಚಿ ಹೋಗಿದ್ದಂತ 19ನೇ ಗೇಟ್ ಬಳಿಗೆ ತೆರಳಿ ಪರಿಶೀಲನೆ ನಡೆಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಹೊಸಪೇಟೆಯ ತುಂಗಭದ್ರಾ ಅಣೆಕಟ್ಟಿನ ಗೇಟ್ ಮುರಿದಿರುವ ಸ್ಥಳವನ್ನು ಪರಿಶೀಲನೆ ಮಾಡಿ ನಂತರ ಮಾಧ್ಯಮ ದವರೊಂದಿಗೆ ಮಾತನಾಡಿದರು. ನಾನು ನಿನ್ನೆಯೇ ಬರಬೇಕಾಗಿತ್ತು. ಆದರೇ ಅದು ಸಾಧ್ಯವಾಗಲಿಲ್ಲ. ಆಗಸ್ಟ್.10ನೇ ತಾರೀಕಿನಂದು ಚೈನ್ ಕಟ್ಟ್ ಆಗಿದೆ. ನಾವು ನೀರನ್ನು 10 ಗೇಟ್ ಗಳ ಮೂಲಕ ಬಿಡಲಾಗುತ್ತಿದೆ. 19ನೇ ಗೇಟ್ ಕೂಡ ಅದರಲ್ಲಿ ಸೇರಿದೆ ಎಂದರು. 19ನೇ ಗೇಟ್ ನಲ್ಲಿ ಚೈನ್ ಕಟ್ಟಾಗಿ ಗೇಟ್ ಕೊಚ್ಚಿ ಹೋಗಿದೆ. ಗೇಟ್ ಇರುವುದು ನೀರನ್ನು ಕಂಟ್ರೋಲ್ ಮಾಡುವುದಕ್ಕೆ. ಡ್ಯಾಂ ಸೇಫ್ಟಿ ಎಕ್ಸ್ ಪರ್ಟ್ ಕಮಿಟಿಯನ್ನು ಸಂಪರ್ಕಿಸಿದ್ದೇವೆ. ಅವರ ಸಲಹೆಯ ಮೇರೆಗೆ ತುಂಗಭದ್ರಾ ಡ್ಯಾಂ ಗೇಟ್ ರಿಪೇರಿ ಕಾರ್ಯವನ್ನು ನಡೆಸಲಾಗುತ್ತದೆ ಎಂದರು. ಕರ್ನಾಟಕ, ತೆಲಂಗಾಣ, ಆಂಧ್ರಪ್ರದೇಶದ ಸದಸ್ಯರು ಈ ಕಮಿಟಿಯಲ್ಲಿ ಇರುತ್ತಾರೆ. 1948ರಲ್ಲಿ ಪ್ರಾರಂಭವಾಗಿ, 53ನೇ ಇಸಲಿಗೆ ತುಂಗಭದ್ರಾ ಡ್ಯಾಂ…

Read More

ಬೆಂಗಳೂರು: ಕರ್ನಾಟಕಕ್ಕೆ ಮತ್ತೆ ಬಿಗ್ ರಿಲೀಫ್ ಅನ್ನು CWRC ನೀಡಿದೆ. ತಮಿಳುನಾಡಿಗೆ ಕಾವೇರಿ ನದಿ ನೀರು ಹರಿಸುವ ಸಂಬಂಧ ಯಾವುದೇ ಆದೇಶವನ್ನು ಮಾಡಿಲ್ಲ. ದಿನಾಂಕ: 13-08-2024ರ ಇಂದು CWRCಯ 101ನೇ ಸಭೆ ದೆಹಲಿಯ ಕಚೇರಿಯಲ್ಲಿ ನಡೆಯಿತು. ಅದರ ಸಾರಾಂಶ ಈ ಕೆಳಗಿನಂತಿದೆ. 1. ಕರ್ನಾಟಕವು CWRC ಮುಂದೆ ಈ ಕೆಳಕಂಡ ಅಂಶಗಳನ್ನು ಸಲ್ಲಿಸಿತು i) ದಿನಾಂಕ 11.08.2024 ರಂತೆ ನಿಗದಿಪಡಿಸಿದ ನೀರಿನ ಹರಿವಾದ 56.73 ಟಿಎಂಸಿ ಗೆ ಬದಲಾಗಿ ಬಿಳಿಗುಂಡ್ಲುವಿನಲ್ಲಿ 153.802 ಟಿಎಂಸಿ ನೀರು ಹರಿದಿರುತ್ತದೆ. ii) ಬಿಳಿಗುಂಡ್ಲುವಿನಲ್ಲಿ ಹರಿದ ಹೆಚ್ಚುವರಿ ನೀರಿನ ಪ್ರಮಾಣವನ್ನು ಮುಂಬರುವ ತಿಂಗಳುಗಳಲ್ಲಿ ಕರ್ನಾಟಕ ರಾಜ್ಯವು ಹರಿಸಬೇಕಾದ ನೀರಿನ ಮೊತ್ತಕ್ಕೆ ಜಮೆ ಮಾಡಿಕೊಳ್ಳತಕ್ಕದ್ದು. iii) ಮುಂದಿನ ಮಾನ್ಸೂನ್ ತಿಂಗಳುಗಳಲ್ಲಿಯೂ ಸಹ ಒಳ್ಳೆಯ ಮಳೆಯ ನಿರೀಕ್ಷೆ ಇದ್ದು, ಎರಡೂ ರಾಜ್ಯದ ರೈತರು ಸಹ ಲಾಭ ಪಡೆದುಕೊಳ್ಳಬಹುದೆಂದು ಆಶಿಸುತ್ತೇವೆ. 2. ತಮಿಳುನಾಡು ರಾಜ್ಯವು ಈ ಕೆಳಕಂಡ ಅಂಶಗಳನ್ನು ಸಲ್ಲಿಸಿತು i) ಬಿಳಿಗುಂಡ್ಲುವಿನಲ್ಲಿ ಹರಿದ ನೀರಿನ ಪ್ರಮಾಣವು ಕರ್ನಾಟಕದ ಜಲಾಶಯಗಳಲ್ಲಿನ ಹೆಚ್ಚುವರಿ…

Read More

ಬೆಳಗಾವಿ: ಜಿಲ್ಲೆಯ ಸವದತ್ತಿಯ ಯಲ್ಲಮ್ಮ ದೇವರಿಗೆ ತೆರಳಿದ್ದಂತ ವೇಳೆಯಲ್ಲಿ ಹೋಟೆಲ್ ನಲ್ಲಿ ತಂಗಿದ್ದ ಸಂದರ್ಭದಲ್ಲಿ ಕುಕ್ಕರ್ ಬ್ಲಾಸ್ಟ್ ಆಗಿದೆ. ಈ ಘಟನೆಯಲ್ಲಿ 9 ಭಕ್ತಾಧಿಗಳು ಗಂಭೀರವಾಗಿ ಗಾಯಗೊಂಡಿರುವುದಾಗಿ ತಿಳಿದು ಬಂದಿದೆ. ಬೆಳಗಾವಿ ಜಿಲ್ಲೆಯ ಸವದತ್ತಿ ಪಟ್ಟಣದ ಹೋಟೆಲ್ ಒಂದರಲ್ಲಿ ಎಲ್ಲಮ್ಮ ದೇವಸ್ಥಾನಕ್ಕೆ ಯಾದಗಿರಿ ಹಾಗೂ ಬೆಂಗಳೂರಿನಿಂದ ತೆರಳಿದ್ದಂತ ಭಕ್ತರು ಹೋಟೆಲ್ ಒಂದರಲ್ಲಿ ತಂಗಿದ್ದರು. ಸವದತ್ತಿ ಪಟ್ಟಣದ ಹೋಟೆಲ್ ನಲ್ಲಿ ತಂಗಿದ್ದಂತ ಸಂದರ್ಭದಲ್ಲಿ ಹೋಟೆಲ್ ನಲ್ಲಿಯೇ ಕುಕ್ಕರ್ ಇರಿಸಿ, ಹೋಳಿಗೆ ಮಾಡೋದಕ್ಕೆ ಬೇಯಿಸಲು ಇಟ್ಟಿದ್ದರು. ಈ ಸಂದರ್ಭದಲ್ಲಿ ಕುಕ್ಕರ್ ಏಕಾಏಕಿ ಬ್ಲಾಸ್ಟ್ ಆಗಿದೆ. ಇದರ ಪರಿಣಾಮ ಹೋಟೆಲ್ ರೂಮಿನಲ್ಲಿದ್ದಂತ ಯಾದಗಿರಿ ಹಾಗೂ ಬೆಂಗಳೂರಿನ ಮೂಲದ ಭಕ್ತರು ಗಂಭೀರವಾಗಿ ಗಾಯಗೊಂಡಿರುವುದಾಗಿ ತಿಳಿದು ಬಂದಿದೆ. ಸವದತ್ತಿ ಪಟ್ಟಣದಲ್ಲಿ ಕುಕ್ಕರ್ ಬ್ಲಾಸ್ಟ್ ನಿಂದ ಗಾಯಗೊಂಡಿದ್ದಂತ ಗಾಯಾಳು ಭಕ್ತರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ. https://kannadanewsnow.com/kannada/alert-heres-another-shocking-news-for-smokers/ https://kannadanewsnow.com/kannada/paralympic-leader-pramod-bhagat-banned-for-18-months-for-doping-violations/

Read More

ಬೆಳಗಾವಿ: ಜಿಲ್ಲೆಯ ಕುಕ್ಕರ್ ಬ್ಲಾಸ್ಟ್ ಆಗಿ ಹೋಟೆಲ್ ನಲ್ಲಿ ತಂಗಿದ್ದಂತ 9 ಮಂದಿ ಭಕ್ತರು ಗಾಯಗೊಂಡಿರುವುದಾಗಿ ತಿಳಿದು ಬಂದಿದೆ. ಬೆಳಗಾವಿಯ ಜಿಲ್ಲೆಯ ಸವದತ್ತಿ ಪಟ್ಟಣದ ಹೋಟೆಲ್ ರೂಂ ಒಂದರಲ್ಲಿ ಕುಕ್ಕರ್ ಬ್ಲಾಸ್ ಆಗಿ 9 ಭಕ್ತಾದಿಗಳು ಗಾಯಗೊಂಡಿರುವಂತ ಘಟನೆ ನಡೆದಿದೆ. ಬೆಳಗಾವಿ ಜಿಲ್ಲೆಯ ಸವದತ್ತಿ ಪಟ್ಟಣದ ಹೋಟೆಲ್ ರೂಂ ಒಂದರಲ್ಲಿ ತಂಗಿದ್ದಂತ ಭಕ್ತಾದಿಗಳು ಹೋಳಿಗೆ ಮಾಡೋದಕ್ಕೆ ಬೇಳೆ ಬೇಯಿಸಲು ಕುಕ್ಕರ್ ನಲ್ಲಿ ಇರಿಸಿದ್ದರು. ಇಂತಹ ಕುಕ್ಕರ್ ಬ್ಲಾಸ್ಟ್ ಆದಂತ ಪರಿಣಾಮ 9 ಮಂದಿಗೆ ಗಾಯವಾಗಿರುವುದಾಗಿ ತಿಳಿದು ಬಂದಿದೆ. https://kannadanewsnow.com/kannada/alert-heres-another-shocking-news-for-smokers/ https://kannadanewsnow.com/kannada/breaking-youth-stabs-pu-student-with-scissors-in-moodabidri/

Read More