Author: kannadanewsnow09

ಹಾವೇರಿ: ಮಳೆಯಿಂದಾಗಿ ಶಿಥಿಲಾವಸ್ಥೆಗೊಂಡಿದ್ದಂತ ಪ್ರಾಥಮಿಕ ಆರೋಗ್ಯ ಕೇಂದ್ರದ ಹೊಸ ಕಟ್ಟಡಕ್ಕೆ ಮನವಿ ಮಾಡಿದ್ದರೂ, ಮಂಜೂರು ಮಾಡದ ಕಾರಣ ಅದೇ ಕಟ್ಟಡದಲ್ಲಿ ರೋಗಿಗಳ ಚಿಕಿತ್ಸೆ ಮುಂದುವರೆಸಲಾಗಿತ್ತು. ಶಿಥಿಲಾವಸ್ಥೆಯಲ್ಲಿದ್ದಂತ ಪಾಥಮಿಕ ಆರೋಗ್ಯ ಕೇಂದ್ರದ ಮೇಲ್ಛಾವಣಿ ವೈದ್ಯರ ಮೇಲೆಯೇ ಕುಸಿದು ಬಿದ್ದಿರುವಂತ ಘಟನೆ ಹಾವೇರಿಯಲ್ಲಿ ನಡೆದಿದೆ. ಹಾವೇರಿ ಜಿಲ್ಲೆಯ ಹಿರೇಕೆರೂರು ತಾಲ್ಲೂಕಿನ ಕೋಡಾ ಗ್ರಾಮದ ವ್ಯಾಪ್ತಿಯಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರ ಮಳೆಯಿಂದಾಗಿ ಶಿಥಿಲಾವಸ್ಥೆಯನ್ನು ತಲುಪಿತ್ತು. ಈ ಕಟ್ಟಡವನ್ನು ಬದಲಾಯಿಸಿ ಹೊಸ ಕಟ್ಟಡವನ್ನು ನೀಡುವಂತೆ ಆರೋಗ್ಯ ಇಲಾಖೆಗೆ ಮನವಿ ಸಲ್ಲಿಸಿದ್ದರೂ ಅದು ಸಾಧ್ಯವಾಗಿರಲಿಲ್ಲ. ಶಿಥಿಲಾವಸ್ಥೆಯಲ್ಲಿದ್ದಂತ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲೇ ರೋಗಿಗಳಿಗೆ ವೈದ್ಯರು ಚಿಕಿತ್ಸೆ ನೀಡುತ್ತಿದ್ದಂತ ವೇಳೆಯಲ್ಲೇ ಮೇಲ್ಛಾವಣಿ ಕುಸಿದು ಬಿದ್ದಿರುವುದಾಗಿ ತಿಳಿದು ಬಂದಿದೆ. ಕುಸಿತದ ನಂತ್ರ ಎಚ್ಚೆತ್ತುಕೊಂಡು ಪ್ರತ್ಯೇಕ ಶೆಡ್ ನಿರ್ಮಿಸಿ, ಅಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಕೋಟಾ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸುಮಾರು 25 ಗ್ರಾಮದ ಜನರು ಚಿಕಿತ್ಸೆಗಾಗಿ ಆಗಮಿಸುತ್ತಿರುವುದಾಗಿ ಹೇಳಲಾಗುತ್ತಿದೆ. ಸದ್ಯ ಎರಡೇ ಕೊಠಡಿಯಲ್ಲಿ ರೋಗಿಗಳಿಗೆ ಚಿಕಿತ್ಸೆ, ಔಷಧಿ, ಹಾರೈಕೆಯಲ್ಲಿ ಆರೋಗ್ಯ ಇಲಾಖೆಯ ಸಿಬ್ಬಂದಿಗಳು…

Read More

ಬೆಂಗಳೂರು: ಆಂಧ್ರಪ್ರದೇಶದ ಉಪ ಮುಖ್ಯಮಂತ್ರಿ ಹಾಗೂ ನಟ ಪವನ್ ಕಲ್ಯಾಣ್ ಅವರು ಇಂದು ವಿಧಾನಸೌಧಕ್ಕೆ ಆಗಮಿಸಿದ್ದರು. ಅಲ್ಲಿ ನಡೆದಂತ ಸಭೆಯಲ್ಲಿ ಭಾಗಿಯಾಗಿ ವಾಪಾಸ್ ತೆರಳುತ್ತಿದ್ದಂತ ವೇಳೆಯಲ್ಲಿ ನೂಕು ನುಗ್ಗಲು ಉಂಟಾದ ಪರಿಣಾಮ ಸಿಎಸ್ ಕಚೇರಿ ಗ್ಲಾಸ್ ಪುಡಿ ಪುಡಿಯಾಗಿರುವುದಾಗಿ ತಿಳಿದು ಬಂದಿದೆ. ಬೆಂಗಳೂರಿನ ವಿಧಾನಸೌಧದಲ್ಲಿನ ಸಭೆಯೊಂದರಲ್ಲಿ ಭಾಗಿಯಾಗುವುದಕ್ಕೆ ಆಂಧ್ರ ಪ್ರದೇಶದ ಡಿಸಿಎಂ ಪವನ್ ಕಲ್ಯಾಣ್ ಆಗಮಿಸಿದ್ದರು. ಇಂದಿನ ಸಭೆಯಲ್ಲಿ ಭಾಗಿಯಾದ ಬಳಿಕ, ವಿಧಾನಸೌಧದಲ್ಲಿ ತೆರಳುತ್ತಿದ್ದಂತ ವೇಳೆಯಲ್ಲಿ ಭಾರೀ ನೂಕು ನುಗ್ಗಲೇ ಉಂಟಾಗಿದೆ. ಪವನ್ ಕಲ್ಯಾಣ್ ವಿಧಾನಸೌಧದಿಂದ ಹೊರಗೆ ತೆರಳುತ್ತಿದ್ದಂತ ವೇಳೆಯಲ್ಲಿ ನೂಗು ನುಗ್ಗಲು ಉಂಟಾಗಿದೆ. ಈ ವೇಳೆಯಲ್ಲಿ ಸಿಎಸ್ ಕಚೇರಿಯ ಕಿಟಕಿಯ ಗ್ಲಾಸ್ ಪುಡಿ ಪುಡಿಯಾಗಿರುವುದಾಗಿ ತಿಳಿದು ಬಂದಿದೆ. ಅರಣ್ಯ ಸಂರಕ್ಷಣೆ- ಈಶ್ವರ ಖಂಡ್ರೆ ಕಾರ್ಯಕ್ಕೆ ಪವನ್ ಕಲ್ಯಾಣ್ ಮೆಚ್ಚುಗೆ ಬೆಂಗಳೂರು : ಪರಿಸರ, ಪ್ರಕೃತಿ ಮತ್ತು ಅರಣ್ಯ ಸಂರಕ್ಷಣೆಗೆ ಕರ್ನಾಟಕದ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರಿಗಿರುವ ಒಲವು ಪ್ರೀತಿ ಮತ್ತು ಬದ್ಧತೆಗೆ ಆಂಧ್ರಪ್ರದೇಶದ ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್…

Read More

ಬೆಂಗಳೂರು : ಅಂಬೇಡ್ಕರ್ ರವರು ಎಂದೆಂದಿಗೂ ಪ್ರಸ್ತುತ. ಈ ಬಾರಿಯ ಫಲಪುಷ್ಪ ಪ್ರದರ್ಶನ ಜನರು ಸಂವಿಧಾನಗಳ ಆಶಯಗಳನ್ನರಿಯಲು ಅಪೂರ್ವ ಅವಕಾಶ ಒದಗಿಸಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಅವರು ಇಂದು ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ವಿಷಯಾಧಾರಿತ ಸ್ವಾತಂತ್ರ್ಯೋತ್ಸವ 216ನೇ ಫಲಪುಷ್ಪ ಪ್ರದರ್ಶನ ಉದ್ಘಾಟಿಸಿ ಮಾಧ್ಯಮದವರೊಂದಿಗೆ ಮಾತನಾಡಿದರು. ಯಾವುದೇ ಜಾತಿ, ಧರ್ಮ,ಭಾಷೆ, ಪ್ರದೇಶಗಳಿಗೆ ಸೇರಿದ ಎಲ್ಲ ಜನರಿಗೂ ಸಮಾನ ಅವಕಾಶಗಳು ದೊರೆಯಬೇಕು. ಜನರಿಗೆ ಆರ್ಥಿಕ, ಸಾಮಾಜಿಕ ಸ್ವಾತಂತ್ರ್ಯ ದೊರೆತಾಗ ಮಾತ್ರ ರಾಜಕೀಯ ಸ್ವಾತಂತ್ರ್ಯ ಗಳಿಸಲು ಸಾಧ್ಯ ಎಂಬುದರಲ್ಲಿ ನಂಬಿಕೆಯಿರಿಸಿದ್ದರು. ಅಂಬೇಡ್ಕರ್ ರವರ ಬಾಲ್ಯದಿಂದ ತಮ್ಮ ಜೀವಿತಾವಧಿಯಲ್ಲಿನ ಪ್ರಮುಖ ಸಾಧನೆಗಳನ್ನು ವಿವಿಧ ರೂಪದಲ್ಲಿ ಪ್ರದರ್ಶನದಲ್ಲಿ ಬಿಂಬಿಸಲಾಗಿದ್ದು, ಜನರು ಅವರ ಆಶಯಗಳ ಬಗ್ಗೆ ಅರಿಯಬಹುದಾಗಿದೆ. ಜನರು ಸಂವಿಧಾನದ ಬಗ್ಗೆ ಅರಿವು ಪಡೆದಾಗ ಮಾತ್ರ ಸಂವಿಧಾನದ ರೀತ್ಯ ನಡೆದುಕೊಳ್ಳಲು ಸಾಧ್ಯ. ಸಂವಿಧಾನ ರಚನಾ ಸಮಿತಿಯ ಅಧ್ಯಕ್ಷರಾಗಿದ್ದ ಅಂಬೇಡ್ಕರ್ ರವರನ್ನು ಸಂವಿಧಾನ ಶಿಲ್ಪಿ ಎಂದು ಕರೆಯಲಾಗುತ್ತದೆ.ಅಂಬೇಡ್ಕರ್ ರವರು ಎಂದೆಂದಿಗೂ ಪ್ರಸ್ತುತ ಎಂದರು. ಆಗಸ್ಟ್ 8 ರಿಂದ 19 ವರೆಗೆ ಲಾಲ್…

Read More

ನವದೆಹಲಿ: ಒಲಿಂಪಿಕ್ ಕ್ರೀಡಾಕೂಟದಲ್ಲಿ ಅಶಿಸ್ತಿನ ವರ್ತನೆ ತೋರಿದ್ದಕ್ಕಾಗಿ ಕುಸ್ತಿಪಟು ಆಂಟಿಮ್ ಪಂಗಲ್ ಅವರನ್ನು ಭಾರತೀಯ ಒಲಿಂಪಿಕ್ ಸಂಸ್ಥೆ ಮೂರು ವರ್ಷಗಳ ಕಾಲ ನಿಷೇಧಿಸಿದೆ ಎಂದು ಪಿಟಿಐ ವರದಿ ಮಾಡಿದೆ. https://twitter.com/PTI_News/status/1821484667649876028 ಇದಕ್ಕೂ ಮೊದಲು, ಪ್ರಮುಖ ಶಿಸ್ತು ಉಲ್ಲಂಘನೆಗಾಗಿ ಅವರನ್ನು ಪ್ಯಾರಿಸ್ನಿಂದ ಗಡೀಪಾರು ಮಾಡಲಾಯಿತು. ಅಲ್ಲಿ ಯುವ ಕುಸ್ತಿಪಟು ತನ್ನ ಅಧಿಕೃತ ಮಾನ್ಯತೆ ಕಾರ್ಡ್ ಅನ್ನು ತನ್ನ ಸಹೋದರಿಗೆ ಹಸ್ತಾಂತರಿಸಿದರು. ಅವರು ಗೇಮ್ಸ್ ವಿಲೇಜ್ನಿಂದ ಹೊರಡುವಾಗ ಭದ್ರತಾ ಸಿಬ್ಬಂದಿಗೆ ಸಿಕ್ಕಿಬಿದ್ದರು. ಈ ಹಿನ್ನಲೆಯಲ್ಲಿ ಭಾರತೀಯ ಒಲಂಪಿಕ್ ಸಂಸ್ಥೆಯು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ಒಲಿಂಪಿಕ್ ಕ್ರೀಡಾಕೂಟದಲ್ಲಿ ಅಶಿಸ್ತಿನ ವರ್ತನೆ ತೋರಿದ್ದಕ್ಕಾಗಿ ಕುಸ್ತಿಪಟು ಆಂಟಿಮ್ ಪಂಗಲ್ ಅವರನ್ನು ಮೂರು ವರ್ಷಗಳ ಕಾಲ ನಿಷೇಧಿಸಿ ಆದೇಶ ಹೊರಡಿಸಿದೆ. https://kannadanewsnow.com/kannada/court-summons-110-congress-leaders-including-cm-deputy-cm-to-appear-before-it/ https://kannadanewsnow.com/kannada/big-news-karnataka-high-court-stays-mandatory-service-order-of-pg-doctors-karnataka-high-court/

Read More

ಬೆಂಗಳೂರು: ರಾಹುಲ್ ಗಾಂಧಿಗೆ ಇಡಿ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದನ್ನು ಖಂಡಿಸಿ ಬೆಂಗಳೂರಿನ ಇಡಿ ಕಚೇರಿಯ ಎದುರು ಸಿಎಂ, ಡಿಸಿಎಂ ಸೇರಿದಂತೆ ಹಲವು ಕಾಂಗ್ರೆಸ್ ನಾಯಕರು ಪ್ರತಿಭಟನೆ ನಡೆಸಿದ್ದರು. ಈ ಹಿನ್ನಲೆಯಲ್ಲಿ ಅವರ ವಿರುದ್ಧ ಕೇಸ್ ದಾಖಲಾಗಿತ್ತು. ಈ ಪ್ರಕರಣದಲ್ಲಿ ಸಿಎಂ ಸಿದ್ಧರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಸೇರಿದಂತೆ 110 ಕಾಂಗ್ರೆಸ್ ನಾಯಕರು ಖುದ್ಧು ವಿಚಾರಣೆಗೆ ಹಾಜರಾಗುವಂತೆ ಕೋರ್ಟ್ ಸಮನ್ಸ್ ನೀಡಿದೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ಇಡಿ ವಿಚಾರಣೆಗೆ ಹಾಜರಾಗುವಂತೆ ನೀಡಿದಂತ ನೋಟಿಸ್ ಖಂಡಿಸಿ ಮುಖ್ಯಮಂತ್ರಿ ಸಿದ್ಧರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ವಿವಿಧ ಸಚಿವರನ್ನು ಒಳಗೊಂಡು, ಕಾಂಗ್ರೆಸ್ ನಾಯಕರು, ಕಾರ್ಯಕರ್ತರು ಬೆಂಗಳೂರಲ್ಲಿ ಪ್ರತಿಭಟನೆಯನ್ನ ಇಡಿ ಕಚೇರಿ ಎದುರು ನಡೆಸಿದ್ದರು. ಈ ಪ್ರತಿಭಟನೆ ಸಂಬಂಧ ಕಾನೂನು ಬಾಹಿರವಾಗಿ ಪ್ರತಿಭಟನೆ ನಡೆಸಿದ್ದಕ್ಕಾಗಿ ದೂರು ದಾಖಲಾಗಿತ್ತು. ಈ ಹಿನ್ನಲೆಯಲ್ಲಿ ಸಿಎಂ ಸಿದ್ಧರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್, ಸಚಿವ ಎಂ.ಬಿ ಪಾಟೀಲ್ ಸೇರಿದಂತೆ 110 ಕಾಂಗ್ರೆಸ್ ಮುಖಂಡರಿಗೆ ಆಗಸ್ಟ್.29ರಂದು ಖುದ್ದು ವಿಚಾರಣೆಗೆ…

Read More

ಬೆಂಗಳೂರು; ಬೆಂಗಳೂರು ನಗರ ಹಾಗೂ ಗ್ರಾಮಾಂತರ ಜಿಲ್ಲೆಯ ವಿವಿಧ ಗ್ರಾಮ ಪಂಚಾಯ್ತಿಗಳ ಮೇಲೆ ಲೋಕಾಯುಕ್ತ ದಾಳಿ ನಡೆಸಲಾಗಿದೆ. ಇಂದಿನ ದಾಳಿಯಲ್ಲಿ ಅಕ್ರಮಕ್ಕೆ ಸಂಬಂಧಿಸಿದಂತೆ ಹಲವು ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆಯಲಾಗಿದೆ ಎಂಬುದಾಗಿ ತಿಳಿದು ಬಂದಿದೆ. ಬೆಂಗಳೂರು ನಗರ ಮತ್ತು ಗ್ರಾಮಾಂತರದ ವಿವಿಧ ಗ್ರಾಮ ಪಂಚಾಯ್ತಿಗಳ ಮೇಲೆ ಉಪ ಲೋಕಾಯುಕ್ತ ನ್ಯಾಯಮೂರ್ತಿ ಬಿ.ವೀರಪ್ಪ ನೇತೃತ್ವದಲ್ಲಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಬೆಂಗಳೂರಿನ ಅಣ್ಣೇಶ್ವರ, ಜಾಲಿಗೆ, ಮಜರಾ ಹೊಸಹಳ್ಳಿ, ಬೂದಿಹಾಳ, ಸೋಂಪುರ, ನಂದಗುಡಿ, ಸೂಲಿಬೆಲೆ ಗ್ರಾಮ ಪಂಚಾಯ್ತಿಗಳು ಸೇರಿದಂತೆ ವಿವಿಧ ಗ್ರಾಮ ಪಂಚಾಯ್ತಿಗಳ ಮೇಲೆ ಲೋಕಾಯುಕ್ತ ದಾಳಿ ನಡೆಸಲಾಗಿದೆ. ಇದಲ್ಲದೇ ಬೆಂಗಳೂರು ಗ್ರಾಮಾಂತರದ ಕಲಘಟ್ಟಪುರ, ಬನ್ನೇರುಘಟ್ಟ, ಕಲ್ಲುಬಾಳ, ಕಣ್ಣೂರು, ಕುಂಬಳಗೋಡು, ಅಗರ, ದಾಸನಪುರ, ಅಡಕಮಾರನಹಳ್ಳಿ ಸೇರಿದಂತೆ ವಿವಿಧ ಗ್ರಾಮ ಪಂಚಾಯ್ತಿಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ಬಗ್ಗೆ ದೇವನಹಳ್ಳಿಯಲ್ಲಿ ಉಪ ಲೋಕಾಯುಕ್ತ ನ್ಯಾಯಮೂರ್ತಿ ಬಿ.ವೀರಪ್ಪ ಮಾಹಿತಿ ನೀಡಿದ್ದು, ಇ-ಖಾತಾ ಸೇರಿದಂತೆ ಹಲವು ಅಕ್ರಮಗಳ ಸಂಬಂಧ ಗ್ರಾಮ ಪಂಚಾಯ್ತಿಗಳ ಮೇಲೆ ದಾಳಿಯನ್ನು ನಡೆಸಲಾಗಿದೆ ಅಂತ…

Read More

ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಕಸ್ಟಡಿಯನ್ನು ರೂಸ್ ಅವೆನ್ಯೂ ನ್ಯಾಯಾಲಯ ಆಗಸ್ಟ್ 20 ರವರೆಗೆ ವಿಸ್ತರಿಸಿದೆ ಎಂದು ಎಎನ್ಐ ವರದಿ ಮಾಡಿದೆ. ಕೇಜ್ರಿವಾಲ್ ಅವರನ್ನು ತಿಹಾರ್ ಜೈಲಿನಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ದೆಹಲಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ದೆಹಲಿ ಅಬಕಾರಿ ನೀತಿ ಸಿಬಿಐ ಪ್ರಕರಣ ಸಂಬಂಧ  ರೂಸ್ ಅವೆನ್ಯೂ ನ್ಯಾಯಾಲಯ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ನ್ಯಾಯಾಂಗ ಬಂಧನವನ್ನು ಆಗಸ್ಟ್ 20 ರವರೆಗೆ ವಿಸ್ತರಿಸಲಾಗಿದೆ. ತಿಹಾರ್ ಜೈಲಿನಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ಅವರನ್ನು ಹಾಜರುಪಡಿಸಲಾಯಿತು. ಈ ಮೂಲಕ ಜೈಲೇ ಗತಿ ಎನ್ನುವಂತಾಗಿದೆ. https://twitter.com/ANI/status/1821472579590541658 https://kannadanewsnow.com/kannada/deputy-cm-dk-shivakumar-visits-kanakapura-on-2nd-and-4th-saturday-of-every-month/ https://kannadanewsnow.com/kannada/big-news-karnataka-high-court-stays-mandatory-service-order-of-pg-doctors-karnataka-high-court/

Read More

ಬೆಂಗಳೂರು : ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿಸಿಎಂ ಡಿ ಕೆ ಶಿವಕುಮಾರ್ ಅವರು ಪ್ರತಿ ತಿಂಗಳು 2 ನೇ ಮತ್ತು 4 ನೇ ಶನಿವಾರ ಕನಕಪುರಕ್ಕೆ ಭೇಟಿ ನೀಡಲಿದ್ದಾರೆ. ಆ ದಿನಗಳಂದು ಬೆಂಗಳೂರು ದಕ್ಷಿಣ ಜಿಲ್ಲೆಯ ಜನರ ಸಮಸ್ಯೆ, ಅಹವಾಲುಗಳನ್ನು ಆಲಿಸಲಿದ್ದಾರೆ. ಅರ್ಜಿಗಳನ್ನು ಸ್ವೀಕರಿಸಲಿದ್ದಾರೆ. ಬೆಂಗಳೂರು ದಕ್ಷಿಣ ಜಿಲ್ಲೆಯ ನಾನಾ ವಿಧಾನಸಭೆ ಕ್ಷೇತ್ರಗಳ ಜನರು ತಮ್ಮನ್ನು ಭೇಟಿ ಮಾಡಲು ಬೆಂಗಳೂರಿಗೆ ಬರುವುದು ಬೇಡ. ತೊಂದರೆ ತೆಗೆದುಕೊಳ್ಳುವುದು ಬೇಡ. ನಾನೇ ಕನಕಪುರಕ್ಕೆ ಬಂದು ನಿಮ್ಮ ಕಷ್ಟ-ಸುಖ ವಿಚಾರಿಸಿ, ಅಹವಾಲು ಸ್ವೀಕರಿಸಲಿದ್ದೇನೆ ಎಂದು ಡಿಸಿಎಂ ಡಿ ಕೆ ಶಿವಕುಮಾರ್ ಅವರು ಮಾಧ್ಯಮ ಹೇಳಿಕೆಯಲ್ಲಿ ತಿಳಿಸಿದ್ದಾರೆ. https://kannadanewsnow.com/kannada/big-news-karnataka-high-court-stays-mandatory-service-order-of-pg-doctors-karnataka-high-court/ https://kannadanewsnow.com/kannada/court-summons-cm-deputy-cm-to-appear-before-it-in-person/

Read More

ಬೆಂಗಳೂರು: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ಇಡಿ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿ ಖಂಡಿಸಿ ಕಾಂಗ್ರೆಸ್ ನಿಂದ ಪ್ರತಿಭಟನೆ ನಡೆಸಲಾಗಿತ್ತು. ಈ ಸಂಬಂಧ ದಾಖಲಾಗಿದ್ದಂತ ಪ್ರಕರಣದಲ್ಲಿ ಖುದ್ದು ವಿಚಾರಣೆಗೆ ಹಾಜರಾಗುವಂತೆ ಸಿಎಂ ಸಿದ್ಧರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್ ಗೆ ಕೋರ್ಟ್ ಸಮನ್ಸ್ ಜಾರಿಗೊಳಿಸಿದೆ. ಈ ಸಂಬಂಧ ಬೆಂಗಳೂರಿನ 42ನೇ ಎಸಿಎಂಎಂ ಕೋರ್ಟ್ ಸಮನ್ಸ್ ಜಾರಿಗೊಳಿಸಿದೆ. ಡಿಸಿಎಂ ಡಿ.ಕೆ ಶಿವಕುಮಾರ್ ಹಾಗೂ ಸಿಎಂ ಸಿದ್ಧರಾಮಯ್ಯ ಅವರು ಖುದ್ದು ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ನಲ್ಲಿ ತಿಳಿಸಿದೆ. ಅಂದಹಾಗೇ ಸಿಎಂ ಸಿದ್ಧರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಇಡಿಯಿಂದ ವಿಚಾರಣೆಗೆ ಹಾಜರಾಗುವಂತೆ ರಾಹುಲ್ ಗಾಂಧಿ ಅವರಿಗೆ ನೋಟಿಸ್ ನೀಡಿದ್ದನ್ನು ಖಂಡಿಸಿ ಪ್ರತಿಭಟನೆ ನಡೆಸಿದ್ದರು. ಈ ಪ್ರತಿಭಟನೆಯ ಹಿನ್ನಲೆಯಲ್ಲಿ ಬೆಂಗಳೂರಿನ ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣ ಸಂಬಂಧ ಖುದ್ದು ವಿಚಾರಣೆಗೆ ಹಾಜರಾಗುವಂತೆ ಬೆಂಗಳೂರಿನ 42ನೇ ಎಸಿಎಂಎಂ ಕೋರ್ಟ್ ಸಿಎಂ ಸಿದ್ಧರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್ ಗೆ ಸಮನ್ಸ್ ನೀಡಿದೆ. https://kannadanewsnow.com/kannada/big-news-karnataka-high-court-stays-mandatory-service-order-of-pg-doctors-karnataka-high-court/ https://kannadanewsnow.com/kannada/good-news-for-govt-employees-awaiting-7th-pay-commission-7th-pay-commission/

Read More

ಬೆಂಗಳೂರು: ಭಾರತದಲ್ಲಿ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಶೇ.55ಕ್ಕಿಂತಲೂ ಹೆಚ್ಚು ಮಹಿಳಾ ಮಾನವ ಸಂಪನ್ಮೂಲ  ಅಧಿಕಾರಿಗಳನ್ನು ಹೊಂದಿದ  ರಾಜ್ಯ ಕರ್ನಾಟಕವಾಗಿದ್ದು, ಶೇ. 45% ಕ್ಕಿಂತಲೂ ಹೆಚ್ಚು ಜಾಗತಿಕ ಸಾಮರ್ಥ್ಯ ಕೇಂದ್ರಗಳನ್ನು (ಜಿ.ಸಿ.ಸಿ) ಹೊಂದಿರುವ ಹೆಗ್ಗಳಿಕೆಗೆ ಪಾತ್ರರಾಗಿದ್ದೇವೆ, 7 ಲಕ್ಷಕ್ಕೂ ಹೆಚ್ಚು ಉದ್ಯೋಗಿಗಳನ್ನು ಹೊಂದಿರುವ ಭಾರತದ ಉದ್ಯಮ ಎದುರಿಸುತ್ತಿರುವ ಕೌಶಲ್ಯದ ಅಂತರವನ್ನು ಪರಿಹರಿಸಲು ಮತ್ತು ಜಾಗತಿಕ ಉದ್ಯಮಕ್ಕೆ ಕರ್ನಾಟಕದ ನಾಯಕತ್ವದ ಸ್ಥಾನವನ್ನು ಕಾಪಾಡಿಕೊಳ್ಳಲು ನೆರವಾಗುವ ಸಲುವಾಗಿ ಭವಿಷ್ಯದ ತಂತ್ರಜ್ಞಾನಗಳ ಕೌಶಲ್ಯದ ಅಗತ್ಯತೆಗಳನ್ನು ಕೇಂದ್ರೀಕರಿಸಲು ಉದಯೋನ್ಮುಖ ತಂತ್ರಜ್ಞಾನಗಳ ಕೌಶಲ್ಯ ಸಲಹಾ ಮಂಡಳಿಯನ್ನು ಪ್ರಾರಂಭಿಸಿದ್ದೇವೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.  ಬೆಂಗಳೂರಿನ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಪ್ರತಿಭೆ ಮತ್ತು ಕೌಶಲ್ಯ ಅಭಿವೃದ್ಧಿಯನ್ನು ಹೆಚ್ಚಿಸಲು ಕರ್ನಾಟಕದಲ್ಲಿನ ಜಾಗತಿಕ ಕಂಪೆನಿಗಳ ಪ್ರಧಾನ ಮಾನವ ಸಂಪನ್ಮೂಲ ಅಧಿಕಾರಿಗಳ (CHRO) ದುಂಡುಮೇಜಿನ ಸಭೆಯನ್ನು ಉದ್ಘಾಟಿಸಿ ಸಚಿವರು ಮಾತನಾಡುತ್ತಿದ್ದರು. ಕರ್ನಾಟಕ ಸರ್ಕಾರವು ಜಯೊನ್ ಗ್ರೂಪ್, ನಾಸ್ಕಾಮ್, ಐಸಾ ಮತ್ತು ಎನ್.ಹೆಚ್.ಆರ್.ಡಿ (Zyoin…

Read More