Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING: ​ಭಾರತದ ರಕ್ಷಣಾ ವಲಯಕ್ಕೆ ಆನೆ ಬಲ: ಡಿಆರ್‌ಡಿಒದ ULPGM-V3 ಕ್ಷಿಪಣಿ ಅಂತಿಮ ಪರೀಕ್ಷೆ ಯಶಸ್ವಿ

BREAKING : ಬೆಂಗಳೂರಲ್ಲಿ ಮತ್ತೊಂದು ದರೋಡೆ : ಫೋಟೋ ನೆಪದಲ್ಲಿ 3 ಕೋಟಿ ಚಿನ್ನಾಭರಣ ದೋಚಿ ಪರಾರಿ!

BIG NEWS : ‘GBA’ ಚುನಾವಣೆ: ಮೈತ್ರಿ ಇಲ್ಲದಿದ್ದರೆ ಒಂಟಿ ಸ್ಪರ್ಧೆಗೆ ಜೆಡಿಎಸ್ ಮಾಸ್ಟರ್ ಪ್ಲಾನ್!

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಎಜಿಆರ್, ಆದಾಯದಲ್ಲಿ ಶೇ 43ರಷ್ಟು ಪಾಲಿನೊಂದಿಗೆ ಬಲವಾದ ಬೆಳವಣಿಗೆಯೊಂದಿಗೆ ಜಿಯೋ ಮುಂಚೂಣಿಯಲ್ಲಿ
INDIA

ಎಜಿಆರ್, ಆದಾಯದಲ್ಲಿ ಶೇ 43ರಷ್ಟು ಪಾಲಿನೊಂದಿಗೆ ಬಲವಾದ ಬೆಳವಣಿಗೆಯೊಂದಿಗೆ ಜಿಯೋ ಮುಂಚೂಣಿಯಲ್ಲಿ

By ವಸಂತ ಬಿ ಈಶ್ವರಗೆರೆ

ನವದೆಹಲಿ : ಟೆಲಿಕಾಂ ವಲಯದ ಕುರಿತು ಐಸಿಐಸಿಐ ಸೆಕ್ಯೂರಿಟೀಸ್ ಮತ್ತು ಸಿಎಲ್ಎಸ್ಎ (CLSA) ಇತ್ತೀಚಿನ ವರದಿಯು ರಿಲಯನ್ಸ್ ಜಿಯೋದ ಪ್ರಗತಿಯನ್ನು ಸ್ಪಷ್ಟವಾಗಿ ಎತ್ತಿ ತೋರಿಸುತ್ತದೆ. ಮೂರನೇ ತ್ರೈಮಾಸಿಕದಲ್ಲಿ (Q3FY26) ಜಿಯೋ ಉದ್ಯಮದ ಹೊಂದಾಣಿಕೆಯ ಒಟ್ಟು ಆದಾಯ (AGR – Adjusted Gross Revenue) ಮತ್ತು ಆದಾಯದ ಪಾಲು(Revenue share) ಎರಡರಲ್ಲೂ ತನ್ನ ಪ್ರತಿಸ್ಪರ್ಧಿಗಳನ್ನು ಮೀರಿಸಿದೆ.

ಐಸಿಐಸಿಐ ಸೆಕ್ಯೂರಿಟೀಸ್ ಪ್ರಕಾರ, ಜಿಯೋ, ಏರ್‌ಟೆಲ್ ಮತ್ತು ವೊಡಾಫೋನ್ ಐಡಿಯಾ – ಮೂರು ಖಾಸಗಿ ಸಂಸ್ಥೆಯೂ ಸೇರಿ ಸಂಯೋಜಿತ ಎಜಿಆರ್ (AGR) – Q3FY26ರಲ್ಲಿ ಶೇ 2.9ರಷ್ಟು ತ್ರೈಮಾಸಿಕದಿಂದ ತ್ರೈಮಾಸಿಕಕ್ಕೆ (QoQ) ಮತ್ತು ಶೇಕಡಾ 8.9ರಷ್ಟು ವರ್ಷದಿಂದ ವರ್ಷಕ್ಕೆ (YoY) 72,000 ಕೋಟಿ ರೂಪಾಯಿಗೆ ಏರಿದೆ. ಈ ಅವಧಿಯಲ್ಲಿ, ರಿಲಯನ್ಸ್ ಜಿಯೋದ ಎಜಿಆರ್ 32,000 ಕೋಟಿ ರೂಪಾಯಿ ಆಗಿದ್ದು, ಇದು ತ್ರೈಮಾಸಿಕದಿಂದ ತ್ರೈಮಾಸಿಕಕ್ಕೆ (QoQ) ಶೇ 3.9ರಷ್ಟು ಮತ್ತು ವರ್ಷಕ್ಕೆ ಶೇ 11.2ರಷ್ಟು ಬೆಳವಣಿಗೆಯನ್ನು ಪ್ರತಿನಿಧಿಸುತ್ತದೆ. ಇದು ಜಿಯೋದ ಎಜಿಆರ್ ಮಾರುಕಟ್ಟೆ ಪಾಲನ್ನು ಶೇ 43ಕ್ಕೆ ಒಯ್ಯುತ್ತದೆ.

ಹೋಲಿಕೆ ಮಾಡಿದಲ್ಲಿ ಭಾರ್ತಿ ಏರ್‌ಟೆಲ್‌ನ ಎಜಿಆರ್ 29,900 ಕೋಟಿ ರೂಪಾಯಿ ಮತ್ತು ಮಾರುಕಟ್ಟೆ ಪಾಲು ಶೇ 39.9ರಷ್ಟಿದ್ದರೆ, ವೊಡಾಫೋನ್ ಐಡಿಯಾದ ಎಜಿಆರ್ 9900 ಕೋಟಿ ರೂಪಾಯಿ ಮತ್ತು ಮಾರುಕಟ್ಟೆ ಪಾಲು ಸುಮಾರು ಶೇ 13ರಷ್ಟಿದೆ. ವರದಿಯ ಪ್ರಕಾರ, ಜಿಯೋ ತನ್ನ ಮಾರುಕಟ್ಟೆ ಪಾಲನ್ನು ತ್ರೈಮಾಸಿಕದಲ್ಲಿ 41 ಬೇಸಿಸ್ ಪಾಯಿಂಟ್‌ಗಳಷ್ಟು ಮತ್ತು ವರ್ಷದಿಂದ ವರ್ಷಕ್ಕೆ 114 ಬೇಸಿಸ್ ಪಾಯಿಂಟ್‌ಗಳಷ್ಟು ಹೆಚ್ಚಿಸಿದೆ.

ವೃತ್ತ ಮಟ್ಟದಲ್ಲಿ ಜಿಯೋದ ಎಜಿಆರ್ ಮಾರುಕಟ್ಟೆ ಪಾಲು 16 ವಲಯಗಳಲ್ಲಿ, ವಿಶೇಷವಾಗಿ ಗುಜರಾತ್, ಉತ್ತರಪ್ರದೇಶ ಪೂರ್ವ, ಉತ್ತರಪ್ರದೇಶ ಪಶ್ಚಿಮ, ಕರ್ನಾಟಕ, ಈಶಾನ್ಯ ಮತ್ತು ಹಿಮಾಚಲ ಪ್ರದೇಶಗಳಂತಹ ಪ್ರದೇಶಗಳಲ್ಲಿ ಹೆಚ್ಚಾಗಿದೆ. ಮೆಟ್ರೋ ಮಾರುಕಟ್ಟೆಗಳಲ್ಲಿ, ದೆಹಲಿ, ಮುಂಬೈ ಮತ್ತು ಕೋಲ್ಕತ್ತಾದಲ್ಲಿ ಜಿಯೋ ಪಾಲು ಗಮನಾರ್ಹವಾಗಿ ಹೆಚ್ಚಾಗಿದೆ.

ಈ ಮಧ್ಯೆ, ಸಿಎಲ್ಎಸ್ಎ ವರದಿ ಪ್ರಕಾರ Q3FY26ರಲ್ಲಿ ಜಿಯೋದ ಆದಾಯದ ಪಾಲು ಶೇ 42.5ರಷ್ಟು ಆಗಿದ್ದು, ಇದು ತ್ರೈಮಾಸಿಕದಲ್ಲಿ 47 ಬೇಸಿಸ್ ಪಾಯಿಂಟ್‌ಗಳ ಹೆಚ್ಚಳವನ್ನು ಪ್ರತಿನಿಧಿಸುತ್ತದೆ. ಜಿಯೋ ಮತ್ತು ಏರ್‌ಟೆಲ್ ಕಳೆದ 12 ತಿಂಗಳಲ್ಲಿ ಮಾರುಕಟ್ಟೆ ಪಾಲನ್ನು ಹೆಚ್ಚಿಸಿಕೊಂಡಿದ್ದರೂ ವೊಡಾಫೋನ್ ಐಡಿಯಾ ಕುಸಿತವನ್ನು ಅನುಭವಿಸಿದೆ. ಸದ್ಯದ ಡೇಟಾವನ್ನು ಆಧರಿಸಿ, ಜಿಯೋ ಆದಾಯದ ಬೆಳವಣಿಗೆ, ವಲಯ ಮಟ್ಟದ ವಿಸ್ತರಣೆ ಮತ್ತು ಮಾರುಕಟ್ಟೆ ಪಾಲನ್ನು ಬಲಪಡಿಸುವತ್ತ ಗಮನ ಹರಿಸಿದ್ದು, ಇದು ಸ್ಪರ್ಧಾತ್ಮಕ ಪ್ರಯೋಜನವನ್ನು ನೀಡುತ್ತದೆ.

ಅಡುಗೆ ಮನೆಯ ‘ಶುಂಠಿ’ ಕೇವಲ ಸಾಂಬಾರ ಪದಾರ್ಥವಲ್ಲ, ಇದು ಸರ್ವರೋಗ ನಿವಾರಕ! | Ginger Health Benefits

Share. Facebook Twitter LinkedIn WhatsApp Email

Related Posts

BREAKING: ​ಭಾರತದ ರಕ್ಷಣಾ ವಲಯಕ್ಕೆ ಆನೆ ಬಲ: ಡಿಆರ್‌ಡಿಒದ ULPGM-V3 ಕ್ಷಿಪಣಿ ಅಂತಿಮ ಪರೀಕ್ಷೆ ಯಶಸ್ವಿ

1 Min Read

Shocking: ಪ್ರಧಾನಿ ಮೋದಿಯನ್ನು ‘ಹಾವಾಡಿಗ’ ಎಂದು ಬಿಂಬಿಸಿದ ಕಾರ್ಟೂನ್ ಪ್ರಕಟಣೆ: ನಾರ್ವೆ ಪತ್ರಿಕೆಯ ವಿರುದ್ಧ ಜಾಗತಿಕ ಆಕ್ರೋಶ

2 Mins Read

Twisha Sharma Case: ಟ್ವಿಶಾ ಶರ್ಮಾ ಸಾವು ಕೊಲೆಯಲ್ಲ, ಆತ್ಮಹತ್ಯೆ! ಡ್ರಗ್ಸ್ ಸೇವನೆ ಆರೋಪಕ್ಕೂ ಸಿಗಲಿಲ್ಲ ಸಾಕ್ಷಿ; ಭೋಪಾಲ್ ಪೊಲೀಸರ ಬಿಗ್ ಅಪ್ಡೇಟ್!

2 Mins Read
Recent News

BREAKING: ​ಭಾರತದ ರಕ್ಷಣಾ ವಲಯಕ್ಕೆ ಆನೆ ಬಲ: ಡಿಆರ್‌ಡಿಒದ ULPGM-V3 ಕ್ಷಿಪಣಿ ಅಂತಿಮ ಪರೀಕ್ಷೆ ಯಶಸ್ವಿ

BREAKING : ಬೆಂಗಳೂರಲ್ಲಿ ಮತ್ತೊಂದು ದರೋಡೆ : ಫೋಟೋ ನೆಪದಲ್ಲಿ 3 ಕೋಟಿ ಚಿನ್ನಾಭರಣ ದೋಚಿ ಪರಾರಿ!

BIG NEWS : ‘GBA’ ಚುನಾವಣೆ: ಮೈತ್ರಿ ಇಲ್ಲದಿದ್ದರೆ ಒಂಟಿ ಸ್ಪರ್ಧೆಗೆ ಜೆಡಿಎಸ್ ಮಾಸ್ಟರ್ ಪ್ಲಾನ್!

Shocking: ಪ್ರಧಾನಿ ಮೋದಿಯನ್ನು ‘ಹಾವಾಡಿಗ’ ಎಂದು ಬಿಂಬಿಸಿದ ಕಾರ್ಟೂನ್ ಪ್ರಕಟಣೆ: ನಾರ್ವೆ ಪತ್ರಿಕೆಯ ವಿರುದ್ಧ ಜಾಗತಿಕ ಆಕ್ರೋಶ

State News
KARNATAKA

BREAKING : ಬೆಂಗಳೂರಲ್ಲಿ ಮತ್ತೊಂದು ದರೋಡೆ : ಫೋಟೋ ನೆಪದಲ್ಲಿ 3 ಕೋಟಿ ಚಿನ್ನಾಭರಣ ದೋಚಿ ಪರಾರಿ!

By ಸುರೇಶ್‌ KARNATAKA 1 Min Read

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಖದೀಮರ ಕೈಚಳಕ ಮುಂದುವರಿದಿದ್ದು, ಹೋಲ್‌ಸೇಲ್ ಆಗಿ ಚಿನ್ನ ಖರೀದಿಸುವ ನೆಪದಲ್ಲಿ ಬರೋಬ್ಬರಿ 3 ಕೋಟಿ ರೂಪಾಯಿ…

BIG NEWS : ‘GBA’ ಚುನಾವಣೆ: ಮೈತ್ರಿ ಇಲ್ಲದಿದ್ದರೆ ಒಂಟಿ ಸ್ಪರ್ಧೆಗೆ ಜೆಡಿಎಸ್ ಮಾಸ್ಟರ್ ಪ್ಲಾನ್!

Rain Alert : ಬೆಂಗಳೂರು ಸೇರಿ ಹಲವೆಡೆ ಆಲಿಕಲ್ಲು ಮಳೆ ಮುನ್ನೆಚ್ಚರಿಕೆ: ಹವಾಮಾನ ಇಲಾಖೆಯಿಂದ ಹೈ ಅಲರ್ಟ್!

SHOCKING : ಕೋಲಾರದಲ್ಲಿ ಘೋರ ದುರಂತ : ತಿಥಿ ಕಾರ್ಯಕ್ರಮದಲ್ಲಿ ಊಟ ಮಾಡುವಾಗ, ಕರೆಂಟ್ ಶಾಕ್ ನಿಂದ ಬಾಲಕ ಸಾವು

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.