Author: kannadanewsnow05

ಗದಗ : ರಸ್ತೆ ಬದಿಯ ಡಿವೈಡರ್ ಗೆ ಕಾರು ಡಿಕ್ಕಿಯಾಗಿ ಸ್ಥಳದಲ್ಲೇ ಇಬ್ಬರು ವಿದ್ಯಾರ್ಥಿಗಳು ಸ್ಥಳದಲ್ಲೇ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಗದಗ ತಾಲೂಕಿನ ಹುಲಕೋಟಿಯಲ್ಲಿ ನಡೆದಿದೆ. ಹೌದು ಡಿವೈಡೆರ್ ಗೆ ಕಾರು ಡಿಕ್ಕಿಯಾಗಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದರೆ. ಗದಗ ತಾಲೂಕಿನ ಹುಲಕೋಟೆ ಗ್ರಾಮದ ಬಳಿ ಈ ಒಂದು ಘಟನೆ ನಡೆದಿದೆ. ಮೊಹಮ್ಮದ್ ಜಾಯಿದ್ ಹಾಗೂ ಸಂಜೀವ್ ಗಡ್ಡಿ ಮೃತ ದುರ್ದೈವಿಗಳು ಎಂದು ತಿಳಿದು ಬಂದಿದೆ. ಇನ್ನು ಅಪಘಾತದಲ್ಲಿ ಗಾಯಗೊಂಡಂತಹ ಆಶಿಶ್ ಗೂಡೂರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಹುಲಕೋಟೆಯಿಂದ ಗದಗಕ್ಕೆ ಬರುತ್ತಿದ್ದಾಗ ಈ ಒಂದು ಅಪಘಾತ ಸಂಭವಿಸಿದೆ. ಘಟನೆ ಕುರಿತಂತು ಹುಲಕೋಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ಕೈ ಕೊಟ್ಟಿದ್ದಾರೆ.

Read More

ಕಲಬುರ್ಗಿ : ಬೀದರ್ ನಲ್ಲಿ ಗುತ್ತಿಗೆದಾರ ಸಚಿನ್ ಪಂಚಾಳ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ವಿಪಕ್ಷ ಬಿಜೆಪಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಸಿಡಿದೆದ್ದಿದ್ದು, ಸಚಿವ ಪ್ರಿಯಾಂಕ ಖರ್ಗೆ ಅವರ ರಾಜೀನಾಮೆಗೆ ಆಗ್ರಹಿಸಿ ಎಂದು ಕಲಬುರ್ಗಿಯಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದೆ. ಈಗಾಗಲೇ ಕಲಬುರ್ಗಿ ನಗರಕ್ಕೆ ರಾಜ್ಯ ಬಿಜೆಪಿ ನಾಯಕರು ಆಗಮಿಸಿದ್ದು ಕಲ್ಬುರ್ಗಿ ನಗರದಲ್ಲಿರುವ ಖರ್ಗೆ ನಿವಾಸಕ್ಕೆ ಮುತ್ತಿಗೆ ಹಾಕಲು ಬಿಜೆಪಿ ನಾಯಕರು ಪ್ಲಾನ್ ಮಾಡಿದ್ದಾರೆ. ಆದರೆ ಇದಕ್ಕೆ ಕೌಂಟರ್ ಕೊಡಲು ಕಾಂಗ್ರೆಸ್ ಕಾರ್ಯಕರ್ತರು ಕೂಡ ಸಜ್ಜಾಗಿದ್ದು ಕಲಬುರ್ಗಿ ನಗರಕ್ಕೆ ಪ್ರತಿಭಟನೆ ಮಾಡಲು ಆಗಮಿಸಿದ ಬಿಜೆಪಿ ನಾಯಕರಿಗೆ ಕಾಂಗ್ರೆಸ್ ಕಾರ್ಯಕರ್ತರು ಎಳನೀರು, ಮಜ್ಜಿಗೆ, ಜ್ಯೂಸ್ ಹಾಗೂ ಚಹಾ ಕಾಫಿ ವ್ಯವಸ್ಥೆ ಮಾಡಿ ಕೌಂಟರ್ ನೀಡಲು ಸಜ್ಜಾಗಿದ್ದಾರೆ. ನಗರದ ಜಗತ್ ವಿರುದ್ಧ ದಿಂದ ಎಸ್ ವಿ ಪಿ ವಿರುದ್ಧದ ವರೆಗೆ ಬೃಹತ್ ಪ್ರತಿಭಟನೆ ನಡೆಯಲಿದೆ ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಸಂಚಾರ ನಿರ್ಭಂಧಿಸಲಾಗಿದ್ದು, ಬೇರೆ ರಸ್ತೆ ಮೂಲಕ ತೆರಳುವಂತೆ ವಾಹನ ಸವಾರರಿಗೆ ಸೂಚನೆ…

Read More

ಬೆಂಗಳೂರು : ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಅವರಿಗೆ ಈಗಾಗಲೇ ರೆಗ್ಯುಲರ್ ಬೇಲ್ ಸಿಕ್ಕಿದ್ದು, ಸದ್ಯ ಅವರು ತಮ್ಮ ಪತ್ನಿ, ಮಗ ಹಾಗೂ ಕುಟುಂಬದ ಸ್ನೇಹಿತರೊಂದಿಗೆ ಕಾಲ ಕಳೆಯುತ್ತಿದ್ದಾರೆ.ಅಲ್ಲದೆ ಸಂಕ್ರಾಂತಿ ಹಬ್ಬದ ವೇಳೆ ನಟ ದರ್ಶನ್ ಅವರು ಆಪರೇಷನ್ ಗೆ ಒಳಗಾಗುವ ಸಾಧ್ಯತೆಯಿದ್ದು ಈಗಾಗಲೇ ಆಪರೇಷನ್ ಮಾಡಿಸಿಕೊಳ್ಳುವ ಕುರಿತು ಗ್ರೀನ್ ಸಿಗ್ನಲ್ ನೀಡಿದ್ದಾರೆ. ನಟ ದರ್ಶನ್ ಗೆ ಆಪರೇಷನ್ ಮಾಡುವ ವೈದ್ಯರಾದಂತಹ ಅಜಯ್ ಅವರು ಈ ಕುರಿತು ಮಾಹಿತಿ ನೀಡಿದ್ದು, ಆಪರೇಷನ್ ಗೆ ನಟ ದರ್ಶನ್ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಸಂಕ್ರಾಂತಿ ಹಬ್ಬದ ವೇಳೆ ದರ್ಶನ್ ಆಪರೇಷನ್ ಫಿಕ್ಸ್ ಆಗಿದೆ. ಆಪರೇಷನ್ ಬಳಿಕ ಆರೋಗ್ಯದ ಬಗ್ಗೆ ನಿಗಾ ವಹಿಸಬೇಕು. ಒಂದುವರೆ ತಿಂಗಳುವರೆಗೂ ಫೈಟ್ ದೃಶ್ಯದಲ್ಲಿ ಭಾಗಿ ಆಗುವಂತೆ ಇಲ್ಲ ಆದರೆ ಕೇವಲ ಚಿತ್ರಿಕರಣದಲ್ಲಿ ಮಾತ್ರ ಭಾಗಿಯಾಗಬಹುದು. ಬಳಿಕ ಫೆಬ್ರವರಿಯಲ್ಲಿ ಚಿತ್ರೀಕರಣದಲ್ಲಿ ನಟ ದರ್ಶನ್ ಅವರು ಭಾಗಿಯಾಗಲಿದ್ದಾರೆ. ಚಿತ್ರೀಕರಣಕ್ಕೂ ಮುನ್ನ ಅವರು ಆಪರೇಷನ್ ಮಾಡಿಸಿಕೊಳ್ಳಲು ನಿರ್ಧಾರ ಕೈಗೊಂಡಿದ್ದಾರೆ. ಆಪರೇಷನ್ ಮಾಡಿಸಿಕೊಂಡು…

Read More

ಚಿಕ್ಕಬಳ್ಳಾಪುರ : ಚಿಕ್ಕಬಳ್ಳಾಪುರದಲ್ಲಿ ನಿನ್ನೆ ತಡರಾತ್ರಿ ಭೀಕರವಾದಂತಹ ಕೊಲೆಯಾಗಿದ್ದು, ಜೆಡಿಎಸ್ ಮುಖಂಡನನ್ನು ದುಷ್ಕರ್ಮಿಗಳು ಲಾಂಗು ಮತ್ತು ಮಚ್ಚುಗಳಿಂದ ಕೊಚ್ಚಿ ಬರ್ಬರವಾಗಿ ಹತ್ಯೆಗೈದಿರುವ ಘಟನೆ ತಮ್ಮನಾಯಕನಹಳ್ಳಿ ಗೇಟ್ ಬಳಿ ನಡೆದಿದೆ. ಕೊಲೆಯಾದ ಜೆಡಿಎಸ್ ಮುಖಂಡನನ್ನು ವೆಂಕಟೇಶ್ (50) ಹತ್ಯೆಗೀಡಾದ ದುರ್ದೈವಿ ಎಂದು ತಿಳಿದುಬಂದಿದೆ. ನಿನ್ನೆ ರಾತ್ರಿ ವೆಂಕಟೇಶ್ ತಮ್ಮ ಸ್ವಗ್ರಾಮ ತಮ್ಮನಾಯಕನಹಳ್ಳಿಯಿಂದ ಬೈಕ್ ನಲ್ಲಿ ಗೇಟ್ ಬಳಿಗೆ ಬಂದು ಮೆಡಿಕಲ್ ನಲ್ಲಿ ಔಷಧಿ ತೆಗೆದುಕೊಂಡು ಸ್ವಗ್ರಾಮಕ್ಕೆ ತೆರಳುತ್ತಿದ್ದರು. ಈ ವೇಳೆ ಸುಮಾರು ನಾಲ್ಕೈದು ದುಷ್ಕರ್ಮಿಗಳು ಅವರ ಬೈಕ್ ಗೆ ಅಡ್ಡ ಹಾಕಿ ಅವರನ್ನು ರಸ್ತೆಯಲ್ಲಿ ಅಡ್ಡಗಟ್ಟಿ ಮಚ್ಚು, ಲಾಂಗ್‌ಗಳಿಂದ ಕೊಚ್ಚಿ ಭೀಕರ ಕೊಲೆ ಮಾಡಿದ್ದಾರೆ. ಯಾರು ಹಾಗೂ ಯಾವ ಕಾರಣಕ್ಕಾಗಿ ವೆಂಕಟೇಶ್ ಅವರ ಕೊಲೆಯಾಗಿದೆ ಎಂಬುದು ತನಿಖೆ ಬಳಿಕ ಅಷ್ಟೇ ಗೊತ್ತಾಗಲಿದೆ ಗ್ರಾಮಾಂತರ ಪೊಲೀಸರು ಭೇಟಿ ನೀಡಿದ್ದು ತನಿಖೆ ಕೈಗೊಂಡಿದ್ದಾರೆ.

Read More

ರಾಮನಗರ : ಹೊಸ ವರ್ಷಕ್ಕೆ ಎಂದು ಪಾರ್ಟಿ ಮಾಡಲು ತೆರಳಿದ್ದ ವ್ಯಕ್ತಿಯನ್ನು ಭೀಕರವಾಗಿ ಕೊಂದು ದುಷ್ಕರ್ಮಿಗಳು ಬಾವಿಗೆ ಎಸೆದಿರುವ ಘಟನೆ ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಮ‌ಳೂರಿನಲ್ಲಿ ನಡೆದಿದೆ. ಮೃತ ವ್ಯಕ್ತಿಯನ್ನು ಚನ್ನಪಟ್ಟಣ ತಾಲೂಕಿನ‌ ಮ‌ಳೂರು ಪಟ್ಟಣ ಗ್ರಾಮದ ವಾಟರ್ ಮನ್ ಮಧು‌ಕುಮಾರ್ (31) ಎಂದು ಗುರುತಿಸಲಾಗಿದ್ದು, ಮಧು ಕುಮಾರ್ ನನ್ನು ಕೊಲೆ‌ಮಾಡಿ ಬಾವಿಗೆ ಎಸೆಯಲಾಗಿದೆ. ಜನವರಿ 1ರಂದು ಈ ಒಂದು ಕೊಲೆ ನಡೆದಿದ್ದು, ಎಂದು ತಡವಾಗಿ ಬೆಳಕಿಗೆ ಬಂದಿದೆ. ‌ಹೊಸವರ್ಷದ ಪಾರ್ಟಿ ಮಾಡಲೆಂದು ಹೆಂಡತಿಯ ದೊಡ್ಡಪ್ಪನ‌ ಮಗ ಸಾಗರ್ ಎಂಬಾತನ‌ ಜೊತೆ ತೆರಳಿದ್ದ ಮಧು, ಎರಡು ದಿನವಾದರೂ ಮನೆಗೆ ಬಾರದ ಹಿನ್ನೆಲೆ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲು ಮಾಡಲಾಗಿತ್ತು. ಶುಕ್ರವಾರ ಬೆಳಿಗ್ಗೆ ಕೊಡ್ಲೂರು ತೊರೆ ಬಳಿ ಬಾವಿಯಲ್ಲಿ ಶವ ಪತ್ತೆಯಾಗಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Read More

ಬೆಂಗಳೂರು : ನಿನ್ನೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಸಾರಿಗೆ ಬಸ್ ಪ್ರಯಾಣದ ಟಿಕೆಟ್ ದರ ಶೇಕಡ 15ರಷ್ಟು ಏರಿಕೆ ಮಾಡಿ ಅನುಮೋದನೆ ನೀಡಲಾಯಿತು. ಈ ವಿಚಾರವಾಗಿ ಬಿಜೆಪಿ ಪ್ರತಿಭಟನೆ ಮಾಡುತ್ತಿದ್ದೂ, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಪ್ರತಿಕ್ರಿಯೆ ನೀಡಿದ್ದು, ಈ ಹಿಂದೆ ಬಿಜೆಪಿಯವರು 5,900 ಕೋಟಿ ಸಾಲ ಬಿಟ್ಟು ಹೋಗಿದ್ದರು ಅವರು ಸಾಲ ಬಿಟ್ಟು ಹೋಗದೆ ಇದ್ದಿದ್ದರೆ ಬಸ್ ಟಿಕೆಟ್ ದರ ಹೆಚ್ಚಳ ಮಾಡುವ ಪ್ರಶ್ನೆ ಉದ್ಭವಿಸುತ್ತಿರಲಿಲ್ಲ ಎಂದರು. ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, 2020 ಜನವರಿ 26 ರಲ್ಲಿ ಅವರು 12 ಪರ್ಸೆಂಟ್ ಟಿಕೆಟ್ ದರ ಏರಿಕೆ ಮಾಡಿದರು.ಆಗ ಜನರಿಗೆ ತೊಂದರೆ ಆಗಲಿಲ್ಲವೇ? ಬಿಜೆಪಿಯವರು 5,900 ಕೋಟಿ ರೂಪಾಯಿ ಸಾಲ ಬಿಟ್ಟು ಹೋಗಿದ್ದಾರೆ.ಬಿಜೆಪಿಯವರು 5,900 ಕೋಟಿ ಸಾಲ ಬಿಟ್ಟು ಹೋಗದೆ ಇದ್ದಿದ್ದರೆ ನಾವು ಟಿಕೆಟ್ ದರ ಏರಿಕೆ ಮಾಡುವ ಪರಿಸ್ಥಿತಿ ಉದ್ಭವಿಸುತ್ತಿರಲಿಲ್ಲ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಇದೇ ವೇಳೆ ತಿಳಿಸಿದರು. ಸಂಬಳಕ್ಕೆ…

Read More

ಬೆಂಗಳೂರು : ಕುಡಿದ ನಶೆಯಲ್ಲಿ ಚರಂಡಿಗೆ ಬಿದ್ದು ಗಾರೆ ಮೇಸ್ತ್ರಿ ಸಾವನ್ನಪ್ಪಿರುವ ಘಟನೆ ಬೆಂಗಳೂರು ಉತ್ತರ ತಾಲೂಕಿನ ಲಕ್ಷ್ಮಿಪುರ ಗ್ರಾಮದಲ್ಲಿ ಈ ಒಂದು ಘಟನೆ ನಡೆದಿದೆ.ಗುಣಿ ಅಗ್ರಹಾರ ಗ್ರಾಮದ ನಿವಾಸಿ ಹರೀಶ್ (33) ಮೃತಪಟ್ಟ ಗಾರೆ ಮೇಸ್ತ್ರಿ ಎಂದು ತಿಳಿದು ಬಂದಿದೆ. ಕೆಲಸ ಮುಗಿಸಿ ತಡರಾತ್ರಿ ಮನೆಗೆ ತೆರಳುತ್ತಿದ್ದಾಗ ಈ ಒಂದು ದುರಂತ ಸಂಭವಿಸಿದೆ.ಹರೀಶ್ ಮದ್ಯ ಸೇವಿಸಿದ ಬಳಿಕ ಊಟ ಪಾರ್ಸೆಲ್ ಮಾಡಿಸಿಕೊಂಡಿದ್ದರು. ಮನೆಗೆ ತೆರಳುತ್ತಿದ್ದಾಗ ಆಯತಪ್ಪಿ ಚರಂಡಿಗೆ ಬಿದ್ದು ಸಾವನ್ನಪ್ಪಿದ್ದಾರೆ.

Read More

ಬೆಂಗಳೂರು : ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಇಂದು ಬೆಂಗಳೂರಿನ ನಿಮಾನ್ಸ್ ನ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸುವ ಸಲುವಾಗಿ ವಾಯುಸೇನೆಯ ವಿಶೇಷ ವಿಮಾನದ ಮೂಲಕ ಇಂದು ಬೆಳಿಗ್ಗೆ ಬೆಂಗಳೂರಿನ ಹೆಚ್.ಎ.ಎಲ್ ವಿಮಾನ ನಿಲ್ದಾಣಕ್ಕೆ ದ್ರೌಪದಿ ಮುರ್ಮು ಆಗಮಿಸಿದ್ದಾರೆ. ಬೆಂಗಳೂರಿನ ಹೆಚ್.ಎ.ಎಲ್ ಗೆ ಆಗಮಿಸಿದ ದ್ರೌಪದಿ ಮುರ್ಮು ಅವರಿಗೆ ಸಿಎಂ ಸಿದ್ದರಾಮಯ್ಯ ನವರು ಹೂಗುಚ್ಛ, ಶಾಲು ಹೊದಿಸುವ ಮೂಲಕ ಸ್ವಾಗತಿಸಿದ್ದಾರೆ. ಈ ವೇಳೆ ವೈದ್ಯಕೀಯ ಶಿಕ್ಷಣ ಸಚಿವರಾದ ಡಾ. ಶರಣಪ್ರಕಾಶ್ ಪಾಟೀಲ್, ಸೇರಿದಂತೆ ಅನೇಕರು ಭಾಗಿಯಾಗಿದ್ದರು.ನಿಮ್ಹಾನ್ಸ್ ಆಸ್ಪತ್ರೆಯಲ್ಲಿ ವಿವಿಧ ಸೌಲಭ್ಯಗಳನ್ನು ಲೋಕಾರ್ಪಣೆ ಮಾಡಲಿದ್ದಾರೆ. ಈ ಒಂದು ಕಾರ್ಯಕ್ರಮದಲ್ಲಿ ಭಾಗಿಯಾದ ಬಳಿಕ ರಾಷ್ಟ್ರಪತಿ ದ್ರೌಪದಿ ಅವರು ಬಳಿಕ 3 ಗಂಟೆಗೆ ಬೆಳಗಾವಿ ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದು, ವಿಮಾನ‌ ನಿಲ್ದಾಣದಂದ ಕೆ‌ಎಲ್‌ಇ ಕ್ಯಾನ್ಸರ್ ಆಸ್ಪತ್ರೆಗೆ ಭೇಟಿ ನೀಡಲಿದ್ದಾರೆ.ಕೆಎಲ್‌ಇ ಕ್ಯಾನ್ಸರ್ ಆಸ್ಪತ್ರೆ ಉದ್ಘಾಟನೆ ಮಾಡಲಿದ್ದು, ಕಾರ್ಯಕ್ರಮ ಮುಗಿಸಿ ಸಂಜೆ 5-30ಕ್ಕೆ ಬೆಳಗಾವಿ ಏರ್‌ಪೋರ್ಟ್‌ನಿಂದ ದೆಹಲಿಗೆ ವಾಪಾಸ್ಸಾಗಲಿದ್ದಾರೆ ಎಂದು ವರದಿಯಾಗಿದೆ. https://twitter.com/siddaramaiah/status/1875063721921478948?t=Cl-pCjwd_VsAO1M-Rb4fwg&s=19

Read More

ಬೆಂಗಳೂರು : ನಿನ್ನೆ ತಾನೆ ಸಾರಿಗೆ ಬಸ್ಗಳಲ್ಲಿ ಶೇ. 15 ರಷ್ಟು ಟಿಕೆಟ್ ದರ ಏರಿಕೆ ಮಾಡಿ ಸಚಿವ ಸಂಪುಟದಲ್ಲಿ ಅನುಮೋದನೆ ನೀಡಲಾಗಿದೆ. ಇದರ ಬೆನ್ನೆಲ್ಲಿ ರಾಜ್ಯದ ಜನತೆಗೆ ಮತ್ತೊಂದು ಶಾಕ್ ನೀಡಲು ರಾಜ್ಯ ಸರ್ಕಾರ ಮುಂದಾಗಿದ್ದು ಶೀಘ್ರದಲ್ಲಿ ನಂದಿನಿ ಹಾಲಿನ ದರ ಏರಿಕೆಗೆ ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ತಿಳಿದುಬಂದಿದೆ. ಹಾಲಿನ ದರ ಏರಿಕೆ ವಿಚಾರಕ್ಕೆ ಸಂಬಂಧಪಟ್ಟಂತೆ ಸಚಿವ ಕೆ ವೆಂಕಟೇಶ್ ಮಾತನಾಡಿದ್ದು, ರೈತರು ಹಾಲಿನ ಮೇಲೆ ಅವಲಂಬಿತರಾಗಿದ್ದಾರೆ. ದಿನೇ ದಿನೇ ಹಾಲಿನ ಉತ್ಪಾದನೆ ಹೆಚ್ಚಳ ಆಗುತ್ತಿದೆ. ರೈತರಿಗೆ ಅನ್ಯಾಯ ಆಗದಂತೆ ನೋಡಿಕೊಳ್ಳಬೇಕು. 5 ರೂ, 3 ರೂ, 10 ರೂ. ಮಾಡುತ್ತೇವೋ ಅದು ಇನ್ನೂ ತೀರ್ಮಾನ ಆಗಿಲ್ಲ ಎಂದು ತಿಳಿಸಿದರು. ಹಾಲಿನ ದರ ಹೆಚ್ಚಳ ಮಾಡಬೇಕು ಎಂದು ರೈತರ ಒತ್ತಾಯ ಇದೆ. ಯಾಕೆಂದರೆ ರೈತರು ಜಾನುವಾರುಗಳಿಗೆ ನೀಡುತ್ತಿರುವ ಆಹಾರ ಪದಾರ್ಥಗಳ ಬೆಲೆ ಏರಿಕೆ ಆಗಿದೆ. ಈ ಹಿನ್ನೆಲೆ ಹಾಲಿನ ದರ 10 ರೂ. ಏರಿಕೆ ಮಾಡಿ ಎಂದು ಬೇಡಿಕೆ…

Read More

ಬೆಂಗಳೂರು : ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವು ಜೆಡಿಎಸ್ ಪಕ್ಷವನ್ನು ಮುಗಿಸಲು ಆಪರೇಷನ್ ಹಸ್ತ ಮಾಡುತ್ತಿದೆ ಎಂದು ಕೇಂದ್ರ ಸಚಿವ ಹಾಗೂ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಹೊಸ ಬಾಂಬ್ ಸಿಡಿಸಿದ್ದಾರೆ. ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಆಪರೇಷನ್ ಹಸ್ತದ ಬಗ್ಗೆ ಜೆಡಿಎಸ್ ಶಾಸಕ ಜಿಟಿ ದೇವೆಗೌಡ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಅಂತಹ ಯಾವುದೆ ವರ್ಕೌಟ್ ಆಗಲ್ಲ ಬಿಡಿ ಎಂದು ಕೇಂದ್ರ ಸಚಿವ HD ಕುಮಾರಸ್ವಾಮಿ ತಿಳಿಸಿದರು. ಜೆಡಿಎಸ್ ಮುಗಿಸಬೇಕು ಅಂತ ಆಪರೇಷನ್ ಹಸ್ತ ಮಾಡುತ್ತಿದ್ದಾರೆ. 12 ರಿಂದ 13 ಶಾಸಕರನ್ನು ಕರೆತನ್ನಿ ಅಂತ ನಡೆಯುತ್ತಿರುವುದು ಗೊತ್ತಿದೆ.ಆದರೆ ಯಾವ ಶಾಸಕರು ಸಹ ಹೋಗುವ ಪರಿಸ್ಥಿತಿ ಇಲ್ಲ. ಕಾಂಗ್ರೆಸ್ನವರು ಏನೇನು ಮಾಡುತ್ತಿದ್ದಾರೆ ಎಲ್ಲವೂ ಗೊತ್ತಿದೆ. ದೇವರೇ ಅವರಿಗೆ ಶಿಕ್ಷೆ ಕೊಡುತ್ತಾನೆ ಅಂತ ನನಗೆ ನಂಬಿಕೆ ಇದೆ ಎಂದರು.

Read More