Subscribe to Updates
Get the latest creative news from FooBar about art, design and business.
Author: ಸುರೇಶ್
"ಕನ್ನಡ ನ್ಯೂಸ್ ನೌ ಜಾಲತಾಣದ ಮುಖ್ಯ ಸಂಪಾದಕರಾದ ಸುರೇಶ್ ಅವರು ಕಳೆದ 4 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದಾರೆ. ಸರ್ಕಾರದ ಯೋಜನೆಗಳು, ಶಿಕ್ಷಣ ಮತ್ತು ಪ್ರಚಲಿತ ವಿದ್ಯಮಾನಗಳನ್ನು ಸಾಮಾನ್ಯ ಜನರಿಗೂ ಅರ್ಥವಾಗುವಂತೆ ವಿವರಿಸುವುದು ಇವರ ವಿಶೇಷತೆ. ಈ ಮೊದಲು ವಿವಿಧ ವೆಬ್‌ಸೈಟ್‌ಗಳಲ್ಲಿ ನಾಗರಿಕ ಸಮಸ್ಯೆಗಳ ಬಗ್ಗೆ ವರದಿಗಾರರಾಗಿ ಕೆಲಸ ಮಾಡಿರುವ ಇವರು, ಸಮಯೋಚಿತ ಹಾಗೂ ವಿಶ್ವಾಸಾರ್ಹ ಮಾಹಿತಿ ನೀಡುವ ಮೂಲಕ ಓದುಗರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಡಿಜಿಟಲ್ ಸಾಕ್ಷರತೆ ಇವರ ನೆಚ್ಚಿನ ವಿಷಯಗಳಲ್ಲೊಂದು
ಧಾರವಾಡ : ಮುಡಾ ಹಗರಣಕ್ಕೆ ಸಂಬಂಧಪಟ್ಟಂತೆ ಜಾರಿ ನಿರ್ದೇಶನಲಯದ ಅಧಿಕಾರಿಗಳು ಸಿಎಂ ಸಿದ್ದರಾಮಯ್ಯ ಪತ್ನಿ ಪಾರ್ವತಿ ಹಾಗೂ ನಗರಾಭಿವೃದ್ಧಿ ಇಲಾಖೆಯ ಸಚಿವ ಭೈರತಿ ಸುರೇಶ್ ಗೆ ಸಮನ್ಸ್ ಜಾರಿ ಮಾಡಿದ್ದು, ಈ ಒಂದು ಸಮನ್ಸ್ ಪ್ರಶ್ನಿಸಿ, ಹೈಕೋರ್ಟ್ ಗೆ ರಿಟ್ ಅರ್ಜಿ ಸಲ್ಲಿಸಿದ್ದರು. ಇದೀಗ ಹೈಕೋರ್ಟ್ ನಲ್ಲಿ ಅರ್ಜಿಯ ವಿಚಾರಣೆ ನಡೆದಿದ್ದು, ನ್ಯಾ.ಎಂ.ನಾಗಪ್ರಸನ್ನ ಅವರು ಫೆಬ್ರವರಿ 20ರಂದು ವಿಚಾರಣೆ ನಿಗದಿಪಡಿಸಿದ್ದು 20ರವರೆಗೆ ಸಿಎಂ ಪತ್ನಿ ಪಾರ್ವತಿ ಹಾಗೂ ಬೈರತಿ ಸುರೇಶ್ ಅವರ ED ಸಮನ್ಸ್ ತಡೆಯಾಜ್ಞೆ ವಿಸ್ತರಿಸಿ ಆದೇಶ ಹೊರಡಿಸಿದರು. ವಿಚಾರಣೆ ಆರಂಭದಲ್ಲಿ ಸಿಎಂ ಪತ್ನಿ ಪಾರ್ವತಿ ಸಿದ್ದರಾಮಯ್ಯ ಅವರ ಪರವಾಗಿ ವಕೀಲ ಸಂದೇಶ್ ಚೌಟ ಅವರು ವಾದ ಆರಂಭಿಸಿದರು. ಈ ಪ್ರಕರಣದಲ್ಲಿ ಅಪರಾಧದಿಂದ ಗಳಿಸಿದ ಹಣವಿಲ್ಲ. ಅಕ್ರಮ ಹಣದ ಗಳಿಕೆ ಇದ್ದರೆ ಮಾತ್ರ ಇಡಿಗೆ ಅಧಿಕಾರವಿದೆ. ಆಗ ಮಾತ್ರ ಇಡಿ ಸರ್ಚ್ ಮತ್ತು ಸೀಜ್ ಮಾಡಬಹುದು. ಮುಡಾದ ಮಾಜಿ ಆಯುಕ್ತ ಡಿಬಿ ನಟೇಶ್ ಪ್ರಕರಣದಲ್ಲಿ ಇಡಿ ಸರ್ಚ್ ಮತ್ತು ಸೀಜ್…
ಧಾರವಾಡ : ಮುಡಾ ಹಗರಣಕ್ಕೆ ಸಂಬಂಧಪಟ್ಟಂತೆ ಜಾರಿ ನಿರ್ದೇಶನಲಯದ ಅಧಿಕಾರಿಗಳು ಸಿಎಂ ಸಿದ್ದರಾಮಯ್ಯ ಪತ್ನಿ ಪಾರ್ವತಿ ಹಾಗೂ ನಗರಾಭಿವೃದ್ಧಿ ಇಲಾಖೆಯ ಸಚಿವ ಭೈರತಿ ಸುರೇಶ್ ಗೆ ಸಮನ್ಸ್ ಜಾರಿ ಮಾಡಿದ್ದು ಈ ಒಂದು ಸಮನ್ಸ್ ಪ್ರಶ್ನಿಸಿ, ಹೈಕೋರ್ಟ್ ಗೆ ರಿಟ್ ಅರ್ಜಿ ಸಲ್ಲಿಸಿದ್ದರು. ಇದೀಗ ಹೈಕೋರ್ಟ್ ನಲ್ಲಿ ಬೈರತಿ ಸುರೇಶ್ ಪರವಾಗಿ ಹಿರಿಯ ವಕೀಲ ಸಿವಿ ನಾಗೇಶ್ ಅವರು ವಾದ ಮಂಡಿಸುತ್ತಿದ್ದಾರೆ. ED ನೀಡಿದ್ದ ಸಮನ್ಸ್ ರದ್ದು ಕೋರಿದ ಭೈರತಿ ಸುರೇಶ್ ಅರ್ಜಿ ವಿಚಾರಣೆ ಇದೀಗ ಧಾರವಾಡ ಹೈಕೋರ್ಟ್ ಪೀಠದಲ್ಲಿ ಆರಂಭವಾಗಿದೆ. ಸಚಿವ ಭೈರತಿ ಸುರೇಶ್ ಪರವಾಗಿ ಹಿರಿಯ ವಕೀಲ ಸೀವಿ ನಾಗೇಶ್ ಅವರು ವಾದ ಮಂಡಿಸುತ್ತಿದ್ದು, ಮುಡಾದಲ್ಲಿ ಭೈರತಿ ಸುರೇಶ್ ಯಾವುದೇ ಹುದ್ದೆ ವಹಿಸಿಕೊಂಡಿಲ್ಲ ಹೀಗಾಗಿ ಇಡಿ ಸಮನ್ಸ್ ಕಾನೂನು ಬಾಹಿರವಾಗಿದೆ. ಈ ವೇಳೆ ಭೈರತಿ ಸುರೇಶ್ ಯಾವ ಇಲಾಖೆ ಸಚಿವರು ಎಂದು ಈ ವೇಳೆ ಹೈಕೋರ್ಟ್ ಪ್ರಶ್ನಿಸಿದೆ. ಭೈರತಿ ಸುರೇಶ್ ನಗರಾಭಿವೃದ್ಧಿ ಇಲಾಖೆಯ ಸಚಿವರು ಎಂದು ವಕೀಲರು ಪ್ರಶ್ನೆಗೆ…
ಹಾವೇರಿ : ಹಾವೇರಿಯಲ್ಲಿ ಅಚ್ಚರಿಯ ಘಟನೆ ಒಂದು ನಡೆದಿದ್ದು ಮೃತ ವ್ಯಕ್ತಿಯನ್ನು ಆಂಬುಲೆನ್ಸ್ ನಲ್ಲಿ ಮನೆಗೆ ಕರೆದ ಯುದ್ಧ ಸಂದರ್ಭದಲ್ಲಿ ನಡುವೆ ಒಂದು ಡಾಬಾ ಬಂದಿದೆ ಈ ವೇಳೆ ಪತ್ನಿ ಡಾಬಾ ಬಂತು ಊಟ ಮಾಡುತ್ತೀಯಾ ಎಂದು ಕಣ್ಣೀರುತ್ತಾ ಕೇಳಿದಾಗ ಸತ್ತಿದ್ದ ಪತಿ ತಕ್ಷಣ ಎಂದು ಕುಳಿತಿರುವ ಘಟನೆ ಹಾವೇರಿ ಜಿಲ್ಲೆಯ ಬಳಿಕ ಬಂಕಾಪುರದಲ್ಲಿ ಈ ಘಟನೆ ನಡೆದಿದೆ. ಹೌದು ಹಾವೇರಿ ಜಿಲ್ಲೆಯ ಬಂಕಾಪುರ ಗ್ರಾಮದ ಬಿಷ್ಣಪ್ಪ ಅಶೋಕ ಗುಡಿಮನಿ (45) ಸತ್ತಿದ್ದ ಎಂದು ಸ್ವಗ್ರಾಮಕ್ಕೆ ಮೃತದೇಹ ತೆಗೆದುಕೊಂಡು ಹೋಗುತ್ತಿದ್ದರು. ಈ ವೇಳೆ ಬಂಕಾಪುರ ಹತ್ತಿರ ಬರುತ್ತಿದ್ದಂತೆ ಪತ್ನಿ “ಡಾಬಾ ಬಂತು ನೋಡು ಊಟ ಮಾಡುತ್ತೀಯಾ?’ ಎಂದು ಗೋಳಾಡಿ ಕಣ್ಣೀರಿಟ್ಟಾಗ, ಮೃತವ್ಯಕ್ತಿ ಉಸಿರಾಡಿರುವುದು ಕಂಡುಬಂದಿದೆ. ಅದಕ್ಕೂ ಮುನ್ನ ಆತನನ್ನು ಧಾರವಾಡದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು. ಈ ವೇಳೆ ವ್ಯಕ್ತಿ ಮೃತಪಟ್ಟಿದ್ದಾನೆ ಎಂದು ಖಾಸಗಿ ವೈದ್ಯರು ತಿಳಿಸಿದ್ದರು. ಈ ವೇಳೆ ಆತನ ಮೃತದೇಹವವನ್ನು ಊರಿಗೆ ತೆಗೆದುಕೊಂಡು ಹೋಗುತ್ತಿದ್ದ ವೇಳೆ ಬದುಕಿರುವ ಅಂಶ…
ಬೆಳಗಾವಿ : ಜಮೀನು ವಿಚಾರಕ್ಕೆ ದಾಯಾದಿಗಳ ನಡುವೆ ಕಲಹ ಉಂಟಾಗಿ, ವ್ಯಕ್ತಿಯ ಎದೆಗೆ ಸಹೋದರನೊಬ್ಬ ಕೊಡಲಿ ಇಂದ ಹಲ್ಲೆ ಮಾಡಿದ್ದು ಉದಗಟ್ಟಿ ಗ್ರಾಮದಲ್ಲಿ ನಡೆದಿದೆ. ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಉದಗಟ್ಟಿ ಎಂಬ ಗ್ರಾಮದಲ್ಲಿ ಈ ಒಂದು ಘಟನೆ ನಡೆದಿದೆ. ಹಲ್ಲೆಗೆ ಒಳಗಾದ ವ್ಯಕ್ತಿಯನ್ನು ಸಿದ್ದಪ್ಪ ಗೋಡೆರ್ ಎಂದು ತಿಳಿದುಬಂದಿದೆ. ಸಿದ್ದಪ್ಪನ ಎದೆಗೆ ಆತನ ಸಹೋದರರು ಕೊಡಲಿ ಇಂದ ಭೀಕರವಾಗಿ ಹಲ್ಲೆ ನಡೆಸಲಾಗಿದೆ. ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಗ್ರಾಮದಲ್ಲಿ ಈ ಒಂದು ಘಟನೆ ನಡೆದಿದ್ದು, ಜಮೀನು ವಿಚಾರಕ್ಕೆ ಗಲಾಟೆ ನಡೆದಿದೆ ಕೊಡಲಿಯಿಂದ ಹಲ್ಲೆ ಮಾಡಿ ದಾಯಾದಿಗಳು ಕೊಲೆಗೆ ಯತ್ನಿಸಿದ್ದಾರೆ. ಕಬ್ಬು ಬೆಳೆದಿರುವ ಜಮೀನು ಬಿಟ್ಟು ಕೊಡುವಂತೆ ಸಿದ್ದಪ್ಪಗೆ ಸಹೋದರರು ಒತ್ತಡ ಹೇರಿದ್ದಾರೆ. ಕಬ್ಬು ಕಟಾವು ಮಾಡಿ ಬಿಟ್ಟುಕೊಡುವುದಾಗಿ ಸಿದ್ದಪ್ಪ ಗೋಡೆರ್ ಹೇಳಿದ್ದಾರೆ. ಕಬ್ಬು ಬೆಳೆಗೆ ನೀರು ಹಾಯಿಸಲು ಬಂದಿದ್ದ ಸಿದ್ದಪ್ಪನ ಮೇಲೆ ಏಕಾಏಕಿ ಕೊಡಲಿಯಿಂದ ದಾಳಿ ಮಾಡಿದ್ದಾರೆ. ಸಿದ್ದಪ್ಪಗೋಡೆರ್ ಎದೆಗೆ ಕೊಡಲಿಯಿಂದ ಹೊಡೆದು ಕೊಲೆಗೆ ಯತ್ನಿಸಿದ್ದಾರೆ. ಸಿದ್ದಪ್ಪನ ಸಹೋದರನಿಂದ ಹಲ್ಲೆ…
ಬೆಂಗಳೂರು : ಬೆಂಗಳೂರಿನ ಯಲಹಂಕದ ವಾಯು ನೆಲೆಯಲ್ಲಿ ಇಂದು ಏರ್ ಶೋ 2025ಗೆ ರಕ್ಷಣಾ ಸಚಿವ ರಾಜನಾಥ ಸಿಂಗ್ ಚಾಲನೆ ನೀಡಿದರು. ಏರೋ ಇಂಡಿಯಾ ಏರ್ ಶೋ ನಡೆಯುತ್ತಿದ್ದು, ಭದ್ರತೆಗೆ ನಿಯೋಜಿಸಿದ್ದ ಪೊಲೀಸರಿಗೆ ನೀಡಿದ್ದ ಊಟದಲ್ಲಿ ಜಿರಳೆ ಪತ್ತೆಯಾಗಿದೆ. ನಿನ್ನೆ ಊಟದಲ್ಲಿ ಜಿರಳೆ ಪತ್ತೆಯಾಗಿತ್ತು. ಇದೀಗ ಇಂದು ಮತ್ತೆ ಊಟದಲ್ಲಿ ಹುಳ ಪತ್ತೆಯಾಗಿರುವ ಘಟನೆ ವರದಿಯಾಗಿದೆ. ಹೌದು ನಿನ್ನೆ ತಾನೆ ಪೊಲೀಸರಿಗೆ ನೀಡಿದ್ದ ಬೆಳಗಿನ ಉಪಹಾರದಲ್ಲಿ ಜಿರಳೆ ಪತ್ತೆಯಾಗಿದ್ದು ಕೆಲವು ಪೊಲೀಸರು ತಿಂಡಿ ತಿನ್ನುವುದನ್ನೇ ಬಿಟ್ಟುಬಿಟ್ಟಿದ್ದರು. ಇದೀಗ ಇಂದು ಮತ್ತೆ ಊಟದಲ್ಲಿ ಹುಳ ಪತ್ತೆಯಾಗಿದ್ದು, ಪೊಲೀಸ್ ಸಿಬ್ಬಂದಿಗಳು ಆಕ್ರೋಶ ಹೊರಹಾಕಿದ್ದಾರೆ. ಇನ್ನು, ಎರಡು ವರ್ಷಗಳ ಹಿಂದೆ 2023ರಲ್ಲೂ ಇಂತಹದ್ದೇ ಘಟನೆ ನಡೆದಿತ್ತು. 2023ರ ಸೆಪ್ಟೆಂಬರ್ 26ರಂದು ವಿವಿಧ ಸಂಘಟನೆಗಳು ಬೆಂಗಳೂರು ಬಂದ್ಗೆ ಕರೆ ಕೊಟ್ಟಿದ್ದವು. ಈ ಹಿನ್ನೆಲೆಯಲ್ಲಿ ಅಂದು ಬೆಳಗ್ಗೆ ಯಾರ್ಡ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಭದ್ರತೆಗೆ ಯಶವಂತಪುರ ಟ್ರಾಫಿಕ್ ಪೊಲೀಸರನ್ನು ನಿಯೋಜಿಸಲಾಗಿತ್ತು. ಯಶವಂತಪುರ ಟ್ರಾಫಿಕ್ ಪೊಲೀಸರಿಗೆ ತಂದಿದ್ದ ಉಪಾಹಾರದಲ್ಲಿ (ರೈಸ್…
ಬೆಂಗಳೂರು : ಕಳೆದ ಎರಡು ದಿನಗಳ ಹಿಂದೆ ಬೆಂಗಳೂರಿನ ನಮ್ಮ ಮೆಟ್ರೋ ಪ್ರಯಾಣದ ಟಿಕೆಟ್ ಅದರ ಹೆಚ್ಚಳ ಮಾಡಿ ಬಿಎಮ್ಆರ್‌ಸಿಎಲ್ ಆದೇಶ ಹೊರಡಿಸಿದೆ. ಈ ವಿಚಾರವಾಗಿ ಸರಿವ ಪ್ರಿಯಾಂಕ ಖರ್ಗೆ ಪ್ರತಿಕ್ರಿಯಿಸಿದ್ದು, ನಾವು ಬಸ್ ಟಿಕೆಟ್ ದರ ಹೆಚ್ಚಳ ಮಾಡಿದ್ದಕ್ಕೆ ಗುಲಾಬಿ ಹೂ ಕೊಟ್ಟು ಕ್ಷಮೆ ಕೇಳಿದ ಬಿಜೆಪಿ ನಾಯಕರು, ಈಗ ಮೋದಿ ಪರವಾಗಿ ಗುಲಾಬಿ ಹೂವು ಕ್ಷಮೆ ಕೇಳಲ್ವಾ? ಎಂದು ವ್ಯಂಗ್ಯವಾಡಿದರು. ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮೆಟ್ರೋ ಪ್ರಯಾಣದ ದರ ಏರಿಕೆಗೆ ಕೇಂದ್ರ ಸರ್ಕಾರವೇ ಹೊಣೆಯಾಗಿದೆ. ತಾತ್ಕಾಲಿಕವಾಗಿ ಇದರ ಏರಿಕೆ ನಿಲ್ಲಿಸಿದರೆ ಅದು ಕೇಂದ್ರ ಸರ್ಕಾರದ್ದು. ಮೋದಿ ಪರವಾಗಿ ಬಿಜೆಪಿಗರು ಮೆಟ್ರೋ ನಿಲ್ದಾಣದಲ್ಲಿ ಕ್ಷಮೆ ಕೇಳಲಿ. ಬೇಕಿದ್ದರೆ ನಾವೇ ಬಿಜೆಪಿ ಗಳಿಗೆ ಗುಲಾಬಿ ಖರೀದಿ ಮಾಡಿಕೊಡುತ್ತೇವೆ. ಬಸ್ ಪ್ರಯಾಣದರ ಏರಿಸಿದಾಗ ನಮ್ಮ ವಿರುದ್ಧ ಪ್ರತಿಭಟನೆ ಮಾಡಿದರು. ಈಗ ಯಾಕೆ ಕೇವಲ ಮನವಿ ಕೊಡ್ತೀರಾ? ಮೋದಿ ಪರವಾಗಿ ಗುಲಾಬಿ ಕೊಟ್ಟು ಕ್ಷಮೆ ಕೇಳಲ್ವಾ? ಎಂದು ಬೆಂಗಳೂರಿನಲ್ಲಿ ಐಟಿಬಿಟಿ ಸಚಿವ ಪ್ರಿಯಾಂಕ…
ಬೆಂಗಳೂರು : ಬಾಕಿ ಬಿಲ್ ಪಾವತಿ ಮಾಡದೇ ಕಳೆದ ಒಂದೂವರೆ ವರ್ಷದಿಂದ ಕಿರುಕುಳ ನೀಡುತ್ತಿದ್ದಾರೆ. ಇದರಿಂದ 400-500 ಕಿಯೋನಿಕ್ಸ್ ವಂಡರ್ಸ್ಗಳು ಬೇಸತ್ತು ಹೋಗಿದ್ದಾರೆ. ಹಾಗಾಗಿ ಇಂದು ಶಿವಾನಂದ ಸರ್ಕಲ್ ಬಳಿ ಇರುವ ಕಿಯೋನಿಕ್ಸ್ ಸಂಸ್ಥೆ ಬಳಿ ವೆಂಡರ್ಸ್ ಗಳು ಪ್ರತಿಭಟನೆಗೆ ಸಜ್ಜಾಗಿದ್ದಾರೆ. ಈ ಕುರಿತಾಗಿ ಸಚಿವ ಪ್ರಿಯಾಂಕ ಖರ್ಗೆ ಪ್ರತಿಕ್ರಿಯೆ ನೀಡಿದ್ದು ಕಿಯೋನಿಕ್ಸ್ ವೆಂಡರ್ಸ್ ಗಳದ್ದು ಯಾಕೋ ಸ್ವಲ್ಪ ಅತಿಯಾಯಿತು ಎಂದು ಕಿಡಿ ಕಾರಿದರು. ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಹಿಂದಿ ಸರ್ಕಾರದ ಕಾಲದ ಸಿಎಜಿ ರಿಪೋರ್ಟ್ ಬಂದಿದೆ. ನಾವು ವೆಂಡರ್ಸ್ ಗಳ ಪ್ರತಿಭಟನೆಯನ್ನು ಹತ್ತಿಕ್ಕುತಿಲ್ಲ. ನಾವೇನು ಮಾಡಿದ್ದೇವೆ ಅಂತ ಅವರು ಬ್ಲಾಕ್ ಮೇಲ್ ಮಾಡುತ್ತಿದ್ದಾರೆ? ಎಂದು ತಿಳಿಯುತ್ತಿಲ್ಲ. ಪ್ರತಿಭಟನೆ ಮಾಡೋದೇ ಆಗಿದ್ರೆ ಬಿಜೆಪಿ ಕಚೇರಿ ಮುಂದೆ ಹೋಗಿ ಅವರು ಪ್ರತಿಭಟನೆ ಮಾಡಬೇಕು. ಅವರಿಂದಾಗಿಯೇ ತಾನೇ ಕೀಯೊನಿಕ್ಸ್ ಗೆ ಪ್ರಾಬ್ಲಮ್ ಆಗಿದ್ದು? ಕಿಯೋನಿಕ್ಸ್ ವೆಂಡರ್ಸ್ ದು ಸ್ವಲ್ಪ ಅತಿಯಾಗಿದೆ ಎಂದು ಕಿಡಿ ಕಾರಿದರು. ಪ್ರಕರಣ ಹಿನ್ನೆಲೆ? ಕಿಯೋನಿಕ್ಸ್ ರಾಜ್ಯದಲ್ಲಿ ಸುಮಾರು 48…
ಬೆಂಗಳೂರು : ಬೆಂಗಳೂರಿನ ಯಲಹಂಕ ವಾಯುಸೇನಾ ನೆಲೆಯಲ್ಲಿ ಏರೋ ಇಂಡಿಯಾ-2025 ಏರ್ ಶೋ ನಡೆಯುತ್ತಿದೆ. ಏರ್ಶೋಗೆ ತೆರಳುವ ವಾಹನಗಳನ್ನು ತಪಾಸಣೆಗೆ ಒಳಪಡಿಸಿ ಪ್ರವೇಶಕ್ಕೆ ಅವಕಾಶ ನೀಡುತ್ತಿರುವ ಹಿನ್ನೆಲೆಯಲ್ಲಿ ಕಿಮೀಗಟ್ಟಲೇ ವಾಹನಗಳು ರಸ್ತೆಯಲ್ಲಿ ಸಾಲುಗಟ್ಟಿ ನಿಂತಿವೆ. ಇದರಿಂದ ವಿಮಾನ ನಿಲ್ದಾಣದ ಕಡೆ ಹೋಗುವ ವಾಹನ ಸವಾರರು ಟ್ರಾಫಿಕ್ ಜಾಮ್ನಿಂದ ಪರದಾಡಿದರು. ಏರ್ ಶೋ ಹಿನ್ನೆಲೆಯಲ್ಲಿ ಹೌದು ಯಲಹಂಕದ ಬಳಿ ಫುಲ್ ಟ್ರಾಫಿಕ್ ಜಾಮ್ ಉಂಟಾಗಿದೆ. ಯಲಹಂಕದ ಸುತ್ತಮುತ್ತಲು ಟ್ರಾಫಿಕ್ ಜಾಮ್ ಉಂಟಾಗಿದ್ದು ಸವಾರರು ಪರದಾಟ ನಡೆಸುತ್ತಿದ್ದಾರೆ. ಸುಮಾರು ಮೂರರಿಂದ ನಾಲ್ಕು ಕಿಲೋಮೀಟರ್ ವರೆಗೆ ರಸ್ತೆಯುದ್ದಕ್ಕೂ ವಾಹನಗಳು ನಿಂತಿವೆ. ಹೀಗಾಗಿ ಟ್ರಾಫಿಕ್ ಜಾಮ್ ಉಂಟಾಗಿದೆ. ಅಲ್ಲದೇ ಹೆಬ್ಬಾಳದ ಫ್ಲೈ ಓವರ್ ಮೇಲೆ ವಾಹನಗಳು ಸಾಲುಗಟ್ಟಿ ನಿಂತಿವೆ.
ಚಾಮರಾಜನಗರ : ಸಾಮಾನ್ಯವಾಗಿ ಕಳ್ಳರು ಮನೆ, ಬ್ಯಾಂಕ್ ಗಳನ್ನು ದರೋಡೆ ಮಾಡುವುದನ್ನು ಕೇಳಿದ್ದೇವೆ. ಆದರೆ ಚಾಮರಾಜನಗರದಲ್ಲಿ ಅಚ್ಚರಿ ಘಟನೆ ನಡೆದಿದ್ದು, ಪೊಲೀಸ್ ಠಾಣೆ ನಿಲ್ಲಿಸಿದ ಬೈಕ್ ಒಂದನ್ನೇ ಚಾಲಾಕಿ ಕಳ್ಳನೊಬ್ಬ ಕದ್ದು ಪರಾರಿಯಾಗಿರುವ ಘಟನೆ ಚಾಮರಾಜನಗರದ ಸಿಇಎನ್ ಪೊಲೀಸ್ ಠಾಣೆಯಲ್ಲಿ ಈ ಘಟನೆ ನಡೆದಿದೆ. ಹೌದು ಕಳ್ಳನೊಬ್ಬ ಪೊಲೀಸ್ ಠಾಣೆಯಲ್ಲಿ ನಿಲ್ಲಿಸಿದ್ದ ಬೈಕ್ ನ್ನೇ ಕದ್ದು ಪರಾರಿಯಾಗಿರುವ ಘಟನೆ ಚಾಮರಾಜನಗರದ ಸಿಇಎನ್ ಪೊಲೀಸ್ ಠಾಣೆಯಲ್ಲಿ ನಡೆದಿದೆ. ಚಾಲಾಕಿ ಕಳ್ಳ ಬೈಕ್ ಕದಿಯುತ್ತಿರುವ ದೃಶ್ಯ ಪೊಲೀಸ್ ಠಾಣೆಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ತಡರಾತ್ರಿ ಸುಮಾರು 2 ಗಂಟೆಗೆ ಈ ಒಂದು ಘಟನೆ ನಡೆದಿದ್ದು, ನಗರದ CEN ಠಾಣೆಗೆ ನುಗ್ಗಿದ್ದಾನೆ. ಅಲ್ಲೇ ಇದ್ದಂತಹ ಬೈಕ್ ಅನ್ನು ಕದ್ದು ಪರಾರಿ ಆಗಿದ್ದಾನೆ.ಈ ಬೈಕ್ ಎನ್ ಡಿ ಪಿಎಸ್ ಪ್ರಕರಣದಲ್ಲಿ ವಶಕ್ಕೆ ಪಡೆದುಕೊಂಡಿದ್ದ ಬೈಕ್ ಆಗಿತ್ತು. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಚಾಲಾಕಿ ಕಳ್ಳನ ಪತ್ತೆಗೆ ಬಲೆ ಬೀಸಿದ್ದಾರೆ ಎಂದು ತಿಳಿದುಬಂದಿದೆ.
ಬೆಂಗಳೂರು : ಇಂದು ಬೆಂಗಳೂರಿನ ಯಲಹಂಕದ ವಾಯು ನೆಲೆಯಲ್ಲಿ 15ನೇ ಆವೃತ್ತಿಯ ಏರ್ ಶೋ 2025 ಕಾರ್ಯಕ್ರಮ ಹಮ್ಮಿಕೊಂಡಿದ್ದು, ಈ ಒಂದು ಕಾರ್ಯಕ್ರಮದಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಚಾಲನೆ ನೀಡಿದ್ದು ಡಿಕೆ ಶಿವಕುಮಾರ್ ಸೇನಾ ಮುಖ್ಯಸ್ಥರು ಸೇರಿದಂತೆ ಹಲವು ಗಣ್ಯರು ಭಾಗಿಯಾಗಿದ್ದಾರೆ. ಹಿರಿಬೆಳೆ ಡಿಸಿಎಂ ಡಿಕೆ ಶಿವಕುಮಾರ್ ಏರ್ ಫೋರ್ಸ್ ನಲ್ಲಿ ಮಹಿಳೆಯರ ಭಾಗವಹಿಸುವಿಕೆ ಹೆಚ್ಚಾಗಿದೆ ಎಂದು ತಿಳಿಸಿದರು. 15ನೇ ಆವೃತ್ತಿಯ ಏರಿಸುವ ಕಾರ್ಯಕ್ರಮದಲ್ಲಿ ಭಾಗಿಯಾಗದಕ್ಕೆ ಸಂತೋಷವಾಗುತ್ತಿದೆ. ಬೆಂಗಳೂರಿನ ಯಲಹಂಕದ ವಾಯುನೆಲೆಯಲ್ಲಿ ಏರ್ ಶೋ 2025 ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಬೆಂಗಳೂರು ಭಾರತದ ಏರ್ ಫೋರ್ಸ್ ನ ರಾಜಧಾನಿ ಇಲ್ಲಿನ ಏರ್ ಫೋರ್ಸ್ ನಲ್ಲಿ ಒಂದು 1.5 ಲಕ್ಷ ಜನರು ಕೆಲಸ ಮಾಡುತ್ತಿದ್ದಾರೆ. ಇದು ಬರೀ ಪ್ರದರ್ಶನವಲ್ಲ ನಮ್ಮ ಭದ್ರತಾ ಸಮರ್ಥ್ಯದ ಪ್ರದರ್ಶನ ಎಂದು ತಿಳಿಸಿದರು. ಏರ್ ಫೋರ್ಸ್ ನಲ್ಲಿ ಮಹಿಳೆಯರ ಭಾಗವಹಿಸುವಿಕೆ ಹೆಚ್ಚಾಗಿದೆ. ಹೆಲಿಕ್ಯಾಪ್ಟರ್ ತಯಾರಿಕೆಯಲ್ಲಿ ಬೆಂಗಳೂರು ಮುಂಚೂಣಿಯಲ್ಲಿದೆ. ಏರ್ ಕ್ರಾಫ್ಟ್ ಅಧ್ಯಯನಕ್ಕೆ ಸಂಬಂಧಿಸಿದ ಅನೇಕ ಕಾಲೇಜು…













