Author: kannadanewsnow05

ದಾವಣಗೆರೆ : ಇಂದು ದೇಶದಾದ್ಯಂತ ರಂಜಾನ್ ಹಬ್ಬ ಆಚರಣೆ ಮಾಡುತ್ತಿದ್ದು ಆದರೆ ದಾವಣಗೆರೆಯಲ್ಲಿ ರಂಜಾನ್ ಹಿನ್ನೆಲೆಯಲ್ಲಿ ನಮಾಜ್ ಮಾಡುವ ಸಂದರ್ಭದಲ್ಲಿ ಏಕಾಏಕಿ ಹೆಜ್ಜೆನು ದಾಳಿ ನಡೆಸಿವೆ. ರಂಜಾನ್ ಪ್ರಾರ್ಥನೆ ವೇಳೆ ಹೆಜ್ಜೆನೂ ದಾಳಿ ಮಾಡಿದ್ದು, ಘಟನೆಯಲ್ಲಿ ಐವರ ಸ್ಥಿತಿ ಗಂಭೀರವಾಗಿದೆ. ನಮಾಜ್ ಮಾಡುವ ವೇಳೆ ಯುವಕರು ಹೆಜ್ಜೆನುಗೂಡಿಗೆ ಕಲ್ಲು ಎಸೆದಿದ್ದಾರೆ. ತಕ್ಷಣ ಗಾಯಗೊಂಡವರನ್ನು ದಾವಣಗೆರೆ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

Read More

ಬೆಂಗಳೂರು : ಬೆಂಗಳೂರಿನಲ್ಲಿ ಘೋರವಾದ ದುರಂತ ಒಂದು ಸಂಭವಿಸಿದ್ದು, ಮಾದನಾಯಕನಹಳ್ಳಿ ಬಳಿ ಲಾರಿಗೆ ಸಿಲುಕಿ ತಂದೆ ತಾಯಿಯ ಎದುರೇ ನಾಲ್ಕು ವರ್ಷದ ಮಗು ಸಾವನ್ನಪ್ಪಿರುವ ಘಟನೆ ವರದಿಯಾಗಿದೆ ನಾಲ್ಕು ವರ್ಷದ ಬಾಲಕಿ ನಿಶಿಕ ಸಾವನಪ್ಪಿದ್ದಾಳೆ. ತಂದೆ ತಾಯಿ ಎದುರುಗಡೆನೇ ನಾಲ್ಕು ವರ್ಷದ ಬಾಲಕಿ ನಿಷಿಕಾ ಸಾವನಪ್ಪಿದ್ದಾಳೆ. ಕೈ ಹಿಡಿದುಕೊಂಡು ರಸ್ತೆಯಲ್ಲಿ ಕರೆದುಕೊಂಡು ಬರುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ. ಇನ್ನೊಂದು ಮಗು ಕಂಕಗಳಲ್ಲಿ ಇಟ್ಟುಕೊಂಡಿರುತ್ತಾರೆ. ನೋಡು ನೋಡುತ್ತಿದ್ದಂತೆ ರಾಜೇಂದ್ರ ಮತ್ತು ಲಾವಣ್ಯ ದಂಪತಿಯ ಮೊದಲ ಮಗಳು ಲಾರಿ ಸಿಲುಕಿ ಸಾವನಪ್ಪಿದ್ದಾಳೆ. ತಾಯಿಯ ಜೊತೆಗೆ ದೇವಸ್ಥಾನಕ್ಕೆ ಬಾಲಕಿ ತೆರಳುತ್ತಿದ್ದ ವೇಳೆ ಈ ಒಂದು ಘಟನೆ ನಡೆದಿದ್ದು ಪೋಷಕರ ಆಕ್ರಂದನ ಮುಗಿಲುಮುಟ್ಟಿದೆ.

Read More

ರಾಯಚೂರು : ರಾಯಚೂರಿನಲ್ಲಿ ಯುಗಾದಿ ಹಬ್ಬದ ದಿನ ಘೋರ ದುರಂತ ಒಂದು ಸಂಭವಿಸಿದ್ದು ಯುಗಾದಿ ಹಬ್ಬ ಆಚರಣೆ ಮಾಡಿದ ನಂತರ ಹೋಳಿ ಬಣ್ಣ ಆಟ ಆಡಿ ಕಾಲುವೆಯಲ್ಲಿ ಸ್ನಾನಕ್ಕೆ ತೆರಳಿದ್ದ ಇಬ್ಬರು ಯುವಕರು ನಿರುಪಾಲ ಆಗಿರುವ ಘಟನೆ ಜಿಲ್ಲೆಯ ಅರಕೇರಾ ತಾಲೂಕಿನ ನಾಗೋಲಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಬಳಿ ನಾರಾಯಣಪೂರ ಬಲದಂಡೆ ಕಾಲುವೆಯಲ್ಲಿ ಸ್ನಾನಕ್ಕೆ ತೆರಳಿದ ಯುವಕ ಕಾಲು ಜಾರಿ ಬಿದ್ದು ಸಾವನ್ನಪ್ಪಿದ್ದಾನೆ. ಬುದ್ದಿನ್ನಿ ಗ್ರಾಮದ ನಿವಾಸಿ 20 ವರ್ಷದ ಗಂಗಾಧರ ಮೃತ ದುರ್ದೈವಿ. ಹೋಳಿ ಬಳಿಕ ಸ್ನೇಹಿತರೊಂದಿಗೆ ಸ್ನಾನ ಮಾಡಲು ಕಾಲುವೆಗೆ ತೆರಳಿದ್ದ ವೇಳೆ ಕಾಲು ಜಾರಿ ಬಿದ್ದು ನೀರು ಪಾಲಾಗಿದ್ದ. ಮಾಹಿತಿ ತಿಳಿದು ಗ್ರಾಮಸ್ಥರು ನಿರಂತರ ಶೋಧ ಕಾರ್ಯ ನಡೆಸಿದ್ದರು. ನಾಗೋಲಿ ಗ್ರಾಮದ ಬಳಿ ಕಾಲುವೆಯಲ್ಲಿ ಮೃತದೇಹ ಪತ್ತೆಯಾಗಿದ್ದು, ಗಬ್ಬೂರು ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಜಿಲ್ಲೆಯ ಮಾನ್ವಿ ತಾಲೂಕಿನ ಗೋವಿನದೊಡ್ಡಿ ಗ್ರಾಮದಲ್ಲಿ ಕೆರೆಯಲ್ಲಿ ಸ್ನಾನಕ್ಕೆ ತೆರಳಿದ್ದ ಯುವಕ ನೀರುಪಾಲಾಗಿದ್ದಾನೆ. ಯುಗಾದಿ ಹಬ್ಬದ ಕರಿ ಹಿನ್ನೆಲೆ ಹೋಳಿ ಆಟವಾಡಿದ್ದ…

Read More

ಹಾಸನ : ಜೂಜಾಟದ ವೇಳೆ ಪೊಲೀಸರು ದಾಳಿ ಮಾಡಿದ್ದಾರೆ ಈ ವೇಳೆ ಓಡುವಾಗ ಬಿದ್ದು ವ್ಯಕ್ತಿ ಸಾವನಪ್ಪಿರುವ ಘಟನೆ ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಅರಕೆರೆ ಗ್ರಾಮದಲ್ಲಿ ನಡೆದಿದೆ. ಯುಗಾದಿ ಹಿನ್ನೆಲೆ ನಿರ್ಜನ ಪ್ರದೇಶದಲ್ಲಿ ಯುವಕರು ಜೂಜು ಆಡುತ್ತಿದ್ದರು. ಈ ವಿಚಾರ ತಿಳಿದು ಅಡ್ಡಿಯ ಮೇಲೆ ದಾಳಿ ಮಾಡಿದ್ದಾರೆ. ಆಗ ಸ್ಥಳದಿಂದ ತಪ್ಪಿಸಿಕೊಳ್ಳಲು ಯುವಕರು ಕೂಡಿದರೆ ಈ ವೇಳೆ ಆಯತ ಬಿದ್ದು 34 ವರ್ಷದ ಪ್ರವೀಣ್ ಎನ್ನುವ ವ್ಯಕ್ತಿ ಸಾವನ್ನಪ್ಪಿದ್ದಾನೆ. ಘಟನೆ ಸಂಭಂದ ಜಾವಗಲ್ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ ಮರಣೋತ್ತರ ಪರೀಕ್ಷೆಗಾಗಿ ಪ್ರವೀಣ್ ಶಿವ ವನ್ನು ಹಾಸನದ ಹಿಂಸೆ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ ಶವದ ಮೇಲೆ ರಕ್ತದ ಕಲೆ ಹಿನ್ನೆಲೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.

Read More

ಬೆಂಗಳೂರು : ಕರ್ನಾಟಕ ಸರ್ಕಾರವು ಮಹಿಳೆಯರನ್ನು ಕೇವಲ ಮನೆಯ ಕೆಲಸಕ್ಕೆ ಸೀಮಿತಗೊಳಿಸದೆ, ಅವರನ್ನು ಯಶಸ್ವಿ ಉದ್ಯಮಿಗಳನ್ನಾಗಿ ಮಾಡುವ ಉದ್ದೇಶದಿಂದ ‘ಅಕ್ಕ ಕೆಫೆ’ (Akka Cafe) ಯೋಜನೆಯನ್ನು ಜಾರಿಗೆ ತಂದಿದೆ. ನೀವು ಅಥವಾ ನಿಮ್ಮ ಮನೆಯ ಮಹಿಳೆಯರು ಸ್ವಂತ ಉದ್ಯಮ ಆರಂಭಿಸುವ ಕನಸು ಕಂಡಿದ್ದರೆ, ಈ ಯೋಜನೆ ಅದಕ್ಕೆ ಭದ್ರ ಬುನಾದಿ ಹಾಕಿಕೊಡಲಿದೆ. 1. ಯೋಜನೆಯ ಉದ್ದೇಶ ಮತ್ತು ಗುರಿ: ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬಿಗಳಾಗಬೇಕು ಎಂಬುದು ಈ ಯೋಜನೆಯ ಮುಖ್ಯ ಉದ್ದೇಶ. ರಾಜ್ಯಾದ್ಯಂತ ಒಟ್ಟು 2,500 ಅಕ್ಕ ಕೆಫೆಗಳನ್ನು ಸ್ಥಾಪಿಸಲು ಸರ್ಕಾರ ಗುರಿ ಹೊಂದಿದ್ದು, ಈಗಾಗಲೇ ಹಲವು ಜಿಲ್ಲೆಗಳಲ್ಲಿ ಇವು ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿವೆ. 2. ಸರ್ಕಾರ ನೀಡುವ ಆರ್ಥಿಕ ಸಹಾಯ ಎಷ್ಟು?: ಒಂದು ಸುಸಜ್ಜಿತ ಕೆಫೆ ಅಥವಾ ಹೋಟೆಲ್ ಆರಂಭಿಸಲು ದೊಡ್ಡ ಮಟ್ಟದ ಬಂಡವಾಳ ಬೇಕಾಗುತ್ತದೆ. ಇದನ್ನು ಮನಗಂಡ ಸರ್ಕಾರವು: ಕೆಫೆ ಸ್ಥಾಪನೆಗೆ ಬೇಕಾದ ಫರ್ನಿಚರ್ (Furniture), ಪಾತ್ರೆಗಳು ಮತ್ತು ಇತರ ಪರಿಕರಗಳನ್ನು ಖರೀದಿಸಲು 15 ಲಕ್ಷ ರೂಪಾಯಿಗಳವರೆಗೆ ಆರ್ಥಿಕ ನೆರವು ನೀಡುತ್ತದೆ.…

Read More

ಬೆಂಗಳೂರು : ಯಾವುದೇ ಧರ್ಮ ದ್ವೇಷ ಮಾಡುವಂತೆ ಹೇಳಲ್ಲ ಎಂದು ಮಿಲ್ಲರ್ ರಸ್ತೆಯ ಮಸ್ಕಿದ್ ಈ ಖಾದರಿಯಲ್ಲಿ ರಂಜಾನ್ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆ ನೀಡಿದರು. ನಾವು ಪ್ರಾರ್ಥನೆ ಮಾಡುವುದು ದೇವರು ಹಾಗೂ ಮನುಕುಲಕ್ಕೆ. ನಾವೆಲ್ಲ ಮಾನವರಾಗಿ ಕೆಲಸ ಮಾಡಬೇಕು ಇದು ಬಹಳ ಅವಶ್ಯಕ. ಬದುಕಿನ ಸಾರ್ಥಕಕ್ಕೆ ಮಾನವೀಯತೆ ಮತ್ತು ವಿಶ್ವಾಸದಿಂದ ಇರಬೇಕು. ನಮ್ಮ ದೇಶ ಅನೇಕ ಜಾತಿ ಧರ್ಮ ಮತ್ತು ಸಂಸ್ಕೃತಿಗಳಿಂದ ಕೂಡಿದೆ. ಯಾವುದೇ ಜಾತಿ ಧರ್ಮ ಇದ್ದರೂ ಕೂಡ ನಾವೆಲ್ಲ ಒಟ್ಟಾಗಿ ಬಾಳಬೇಕು. ಯಾವುದೇ ಧರ್ಮ ದ್ವೇಷ ಬೋಧನೆ ಮಾಡಬಾರದು. ಇಸ್ಲಾಂ, ಕ್ರೈಸ್ತ, ಹಿಂದೂ ಧರ್ಮಗಳು ಪ್ರೀತಿಯನ್ನೇ ತೋರಿಸುತ್ತವೆ. ಯಾವುದೇ ಧರ್ಮ ದ್ವೇಷ ಮಾಡುವಂತೆ ಹೇಳಲ್ಲ ಸಾಮೂಹಿಕ ಪ್ರಾರ್ಥನೆಯಲ್ಲಿ ಭಾಗಿಯಾಗಿ ಸೇವೆಯ ಹೇಳಿಕೆ ನೀಡಿದರು

Read More

ಬೆಂಗಳೂರು : ಚಿನ್ನ ಪಾಲಿಶ್ ಮಾಡೋ ನೆಪದಲ್ಲಿ ಬಂದು ಚಿನ್ನ ಕಳ್ಳತನ ಮಾಡಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ವಿಜಯಪುರ ಪಟ್ಟಣದಲ್ಲಿ ಈ ಒಂದು ಘಟನೆ ನಡೆದಿದೆ. ಮಹಿಳೆಯನ್ನ ಯಾಮಾರಿಸಿ ಚಿನ್ನ ಎಗರಿಸಿ ಖದಿಮರು ಎಸ್ಕೇಪ್ ಆಗಿದ್ದಾರೆ. ಕಲೀಮ್ ಪಾಷಾ ಎನ್ನುವವರ ಮನೆಯಲ್ಲಿ ಈ ಒಂದು ಘಟನೆ ನಡೆದಿದ್ದು, 30 ಗ್ರಾಂ ಚಿನ್ನದ ಸರ ಮತ್ತು ಒಂದು ಡಾಲರ್ ಸಮೇತ ಕಳ್ಳರು ಪರಾರಿಯಾಗಿದ್ದಾರೆ. ಚಿನ್ನಾಭರಣ ಪಾಲಿಶ್ ಮಾಡುವ ನೆಪದಲ್ಲಿ ಮನೆಗೆ ಬಂದು ಪಾಲಿಶ್ ಮಾಡಿದ ಬಳಿಕ ಚಿನ್ನ ಎಗರಿಸಿಕೊಂಡು ಪರಾರಿಯಾಗಿದ್ದಾರೆ.

Read More

ನವದೆಹಲಿ : ಖ್ಯಾತ ಒಡಿಸ್ಸಿ ನೃತ್ಯ ಗಾತಿ ಮಧುಮಿತ ರಾವತ್ (59) ನವ ದೆಹಲಿಯಲ್ಲಿ ಇಂದು ಹೃದಯಾಘಾತದಿಂದ ನಿಧನರಾಗಿದ್ದಾರೆ.ದೆಹಲಿಯ ಖಾಸಗಿ ಆಸ್ಪತ್ರೆಯಲ್ಲಿ ಹೃದಯಘಾತದಿಂದ ಮಧುಮಿತ ರಾವತ್ ನಿಧನರಾಗಿದ್ದಾರೆ. ಹಲವು ಪ್ರತಿಷ್ಠಿತ ಪ್ರಶಸ್ತಿಗಳಿಗೆ ಮಧುಮಿತ ರಾವತ್ ಭಾಜನರಾಗಿದ್ದರು. ಮಧುಮಿತಾ ರಾವತ್ ಅವರು ಭಾರತೀಯ ಶಾಸ್ತ್ರೀಯ ನೃತ್ಯ ಪ್ರಕಾರವಾದ ಒಡಿಸ್ಸಿಯನ್ನು ಜಾಗತಿಕ ಮಟ್ಟದಲ್ಲಿ ಪಸರಿಸಿದ ಹಿರಿಯ ಕಲಾವಿದೆ. ಇವರು ಕೇವಲ ನೃತ್ಯಗಾರ್ತಿಯಾಗಿರದೆ, ಒಬ್ಬ ಸಮರ್ಥ ಗುರು ಮತ್ತು ಸಂಶೋಧಕಿಯಾಗಿಯೂ ಗುರುತಿಸಿಕೊಂಡಿದ್ದರು. ನೃತ್ಯ ಪರಂಪರೆ: ಅವರು ಖ್ಯಾತ ಗುರು ಕೇಲುಚರಣ್ ಮಹಾಪಾತ್ರ ಅವರ ಶಿಷ್ಯೆಯಾಗಿ ಒಡಿಸ್ಸಿಯ ಸೂಕ್ಷ್ಮತೆಗಳನ್ನು ಕರಗತ ಮಾಡಿಕೊಂಡಿದ್ದರು. ಸಾಧನೆ: ದೇಶ-ವಿದೇಶಗಳ ಪ್ರತಿಷ್ಠಿತ ವೇದಿಕೆಗಳಲ್ಲಿ ನೃತ್ಯ ಪ್ರದರ್ಶನ ನೀಡಿರುವ ಇವರು, ‘ಮಯಾಧರ್ ರಾವತ್ ಸ್ಕೂಲ್ ಆಫ್ ಒಡಿಸ್ಸಿ ಡ್ಯಾನ್ಸ್’ ಮೂಲಕ ನೂರಾರು ಶಿಷ್ಯರನ್ನು ಬೆಳೆಸಿದ್ದಾರೆ. ಪ್ರಶಸ್ತಿ-ಗೌರವ: ಕಲಾಕ್ಷೇತ್ರಕ್ಕೆ ಅವರು ನೀಡಿದ ಅನನ್ಯ ಕೊಡುಗೆಗಾಗಿ ಅವರಿಗೆ ಅನೇಕ ರಾಜ್ಯ ಮತ್ತು ರಾಷ್ಟ್ರ ಮಟ್ಟದ ಗೌರವಗಳು ಲಭಿಸಿವೆ. ವಿಶೇಷತೆ: ಒಡಿಸ್ಸಿ ನೃತ್ಯಕ್ಕೆ ಹೊಸ ಆಯಾಮ ನೀಡಿದ ಅವರು,…

Read More

ಮಂಗಳೂರು : ಮೂಡಬಿದಿರೆ ಪೊಲೀಸ್ ಇನ್ಸ್‌ಪೆಕ್ಟರ್ ಸಂದೇಶ್ ಅವರ ಆಡಿಯೋ ಮತ್ತು ವಿಡಿಯೋ ಹಗರಣಕ್ಕೆ ಸಂಬಂಧಿಸಿದಂತೆ ಇದೀಗ ಟ್ವಿಸ್ಟ್ ಸಿಕ್ಕಿದ್ದು, ಇನ್ಸ್‌ಪೆಕ್ಟರ್ ವರ್ತನೆಯಲ್ಲಿ ಲೋಪವಿರುವುದು ನಿಜವಾದರೂ, ಅವರ ವಿರುದ್ಧದ ಕೆಲವು ದೂರುಗಳು ಪೂರ್ವಗ್ರಹ ಪೀಡಿತ ಮತ್ತು ಸುಳ್ಳು ಎಂದು ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ. ಇಬ್ಬರು ಮಹಿಳೆಯರ ಆರೋಪ ಸುಳ್ಳು ಎಂದು ಪೊಲೀಸ್ ವರದಿಯಲ್ಲಿ ತಿಳಿದು ಬಂದಿದೆ. ಮಾಧ್ಯಮಗಳ ಮುಂದೆ ಬಂದಿದ್ದ ಆ ಮಹಿಳೆಯರಿಗೆ ಕಿರುಕುಳ ನೀಡಿಲ್ಲ. ಪ್ರಚೋದನೆಗೆ ಒಳಪಟ್ಟು ಇನ್ಸ್ಪೆಕ್ಟರ್ ವಿರುದ್ಧ ಸುಳ್ಳು ಆರೋಪ ಮಾಡಿದ್ದಾರೆ. ಮಹಿಳೆಯರ ಆರೋಪ ಸುಳ್ಳು ಮತ್ತು ಪ್ರೇರಿತ ಎಂದು ಸಾಬೀತು ಆಗಿದೆ ಎಂದು ಮಂಗಳೂರು ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಸ್ಪಷ್ಟಪಡಿಸಿದರು. ಇದೇ ಪ್ರಕರಣದಲ್ಲಿ ಇಬ್ಬರು ಮಹಿಳೆಯರು ನೀಡಿದ್ದ ಕಿರುಕುಳದ ದೂರುಗಳ ಬಗ್ಗೆ ಪ್ರಸ್ತಾಪಿಸಿರುವ ಸುಧೀರ್ ಕುಮಾರ್ ರೆಡ್ಡಿ, ತನಿಖೆಯಲ್ಲಿ ಈ ದೂರುಗಳು ಸುಳ್ಳು ಮತ್ತು ದುರುದ್ದೇಶಪೂರಿತ ಎಂಬುದು ಸಾಬೀತಾಗಿದೆ. ಆಡಿಯೋ/ವಿಡಿಯೋದಲ್ಲಿರುವ ಮಹಿಳೆಯರು ತಾವು ದೂರು ನೀಡುವುದಿಲ್ಲ ಎಂದು ಹೇಳಿದ್ದಾರೆ. ವಿಡಿಯೋ…

Read More

ಬಾಗಲಕೋಟೆ : ಟ್ರೆಡಿಂಗ್ ಹೆಸರಿನಲ್ಲಿ ವಂಚಿಸುತ್ತಿದ್ದ ಆರೋಪಿಯನ್ನು ಇದೀಗ ಬಾಗಲಕೋಟೆ ಸೆನ್ ಠಾಣೆ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಬಾಗಲಕೋಟೆ ಜಿಲ್ಲೆಯ ಜಮಖಂಡಿ ನಿವಾಸಿ ಪ್ರಜ್ವಲ್ (25) ಬಂಧಿತ ಆರೋಪಿ ಎಂದು ತಿಳಿದು ಬಂದಿದೆ. ಬಂದಿತ ಆರ್ ಪಿ ಬಳಿ ಇದ್ದ ಒಂದು ಮೊಬೈಲ್ ಒಂದು ಡೆಬಿಟ್ ಕಾರ್ಡ್ ಜಪ್ತಿ ಮಾಡಿಕೊಂಡಿದ್ದಾರೆ. ಉಜ್ಜೀವನ್ ಸ್ಮಾಲ್ ಫೈನಾನ್ಸ್ ಖಾತೆಯ ಮೂಲಕ 1.20 ಕೋಟಿ ಪಂಜನೆಯಾಗಿದ್ದಾನೆ. ತನಿಖೆಯ ವೇಳೆ ಬಾಗಲಕೋಟೆ ಜಿಲ್ಲೆಯ ಒಟ್ಟು 1296 ಮ್ಯೂಲ್ ಅಕೌಂಟ್ ಗಳು ಇರುವುದು ಪತ್ತೆಯಾಗಿದೆ. ಸದ್ಯ ಸೆನ್ ಠಾಣೆ ಪೊಲೀಸರು ಆತನು ಅರೆಸ್ಟ್ ಮಾಡಿ ವಿಚಾರಣೆಗೆ ಒಳಪಡಿಸಿದ್ದಾರೆ.

Read More