Author: kannadanewsnow05

ಬೆಂಗಳೂರು : ರಾಜ್ಯದಲ್ಲಿ ಮಳೆ ಬಾರದೆ ಇರುವುದರಿಂದ ರೈತರು ತೀವ್ರವಾದ ಸಂಕಷ್ಟವನ್ನು ಎದುರಿಸಿದ್ದು ಈವರೆಗೆ ರಾಜ್ಯ ಸರ್ಕಾರ ಸೂಕ್ತವಾದ ರೀತಿಯಲ್ಲಿ ರೈತರಿಗೆ ಪರಿಹಾರವನ್ನು ಒದಗಿಸಿಲ್ಲ. ಆದ್ದರಿಂದ ಸಂಕಷ್ಟದಲ್ಲಿರುವ ರೈತರಿಗೆ ರಾಜ್ಯ ಸರ್ಕಾರ ತಕ್ಷಣವೇ ಪರಿಹಾರ ಒದಗಿಸಬೇಕು ಎಂದು ವಿಪಕ್ಷ ನಾಯಕ ಆರ್ ಅಶೋಕ್ ಆಗ್ರಹಿಸಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ರೈತ ವಿರೋಧಿ ಸರ್ಕಾರವಿದೆ.ಎನ್ ಡಿ ಆರ್ ಎಫ್ ನಿಯಮ ಪ್ರಕಾರ ಈ ಹಿಂದೆ ನಮ್ಮ ಸರ್ಕಾರ ಪರಿಹಾರ ನೀಡಿತ್ತು.ಹೆಕ್ಟರ್ ಗೆ 26 ಸಾವಿರ ರೂಪಾಯಿ ಪರಿಹಾರ ನೀಡಿದ್ದೆವು.ಈಗಿನ ಸರ್ಕಾರ ಬರಿ 2 ಸಾವಿರ ನೀಡುವುದಾಗಿ ಹೇಳುತ್ತಿದೆ ಎಂದರು. ಸರ್ಕಾರದ ಈ ನಡೆಯಿಂದ ರೈತರಿಗೆ ಮಾಡುತ್ತಿರುವ ಅಪಮಾನವಾಗಿದೆ. ಕಳೆದ ನಾಲ್ಕು ತಿಂಗಳಿಂದ ಸರ್ಕಾರ ರೈತರಿಗೆ ಬರ ಪರಿಹಾರ ನೀಡಿಲ್ಲ. ರಾಜ್ಯ ಸರ್ಕಾರದ ಖಜಾನೆ ಖಾಲಿಯಾಗಿದೆ.ಸಂಕಷ್ಟದಲ್ಲಿರುವ ರೈತರಿಗೆ ಕೂಡಲೇ ಬರ ಪರಿಹಾರ ನೀಡಬೇಕು ಎಂದು ರಾಜ್ಯ ಸರ್ಕಾರಕ್ಕೆ ವಿಪಕ್ಷ ನಾಯಕ ಆರ್ ಅಶೋಕ್ ಆಗ್ರಹಿಸಿದ್ದಾರೆ. ಇನ್ನೂ ಹುಬ್ಬಳ್ಳಿ ಗಲಭೆ ಪ್ರಕರಣದ ಆರೋಪಿ…

Read More

ಬೆಂಗಳೂರು : ಕರಸೇವಕ ಶ್ರೀಕಾಂತ್ ಪೂಜಾರಿ ಬಂದಿಸಿದ ಪೊಲೀಸ್ ಅಧಿಕಾರಿ ಯಾವುದೇ ರೀತಿಯಾದಂತಹ ಕಾನೂನನ್ನು ಉಲ್ಲಂಘಿಸಿಲ್ಲ ಎಂದು ಬೆಂಗಳೂರಿನಲ್ಲಿ ಗೃಹ ಸಚಿವ ಡಾ. ಜಿ ಪರಮೇಶ್ವರ್ ತಿಳಿಸಿದರು. ಇಂದು ನಗರದಲ್ಲಿ ಸುಧಿಕಾರದೊಂದಿಗೆ ಮಾತನಾಡಿದ ಅವರು, ಕರಸೇವಕ ಶ್ರೀಕಾಂತ್ ಪೂಜಾರಿಯನ್ನು ಬಂಧನಕ್ಕೊಳಪಡಿಸಿದ ಇನ್ಸ್ ಪೆಕ್ಟರ್ ಯಾವುದೇ ಕಾನೂನನ್ನು ಉಲ್ಲಂಘಿಸಿಲ್ಲ .16 ಪ್ರಕರಣಗಳಲ್ಲಿ ಭಾಗಿಯಾಗಿದ್ದು, ಆ ಬಗ್ಗೆ ದಾಖಲೆ ಇದೆ. ಆ ಪೈಕಿ ಕೆಲ ಪ್ರಕರಣಗಳಲ್ಲಿ ಖುಲಾಸೆಯಾಗಿದ್ದಾನೆ. ಅಂತಹ ವ್ಯಕ್ತಿಗಾಗಿ ಬಿಜೆಪಿ ಹೋರಾಟ ಮಾಡುತ್ತಿದೆ. ಅವನೊಬ್ಬನೇ ಹಿಂದೂನಾ? ಬೇರೆ ಹಿಂದೂಗಳೂ‌ ಇದ್ದಾರೆ. ಅವರು ನಿಮ್ಮ‌‌ ಕಣ್ಣಿಗೆ ಕಾಣುತ್ತಿಲ್ಲವೇ? ಎಂದು ಪ್ರಶ್ನಿಸಿದ್ದಾರೆ. ಇದೇ ವೇಳೆ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಬಿಜೆಪಿಯನ್ನು ತಿರಸ್ಕರಿಸಿ ನಮ್ಮ ಕಾಂಗ್ರೆಸ್‌ ಸರ್ಕಾರವನ್ನು ಆಯ್ಕೆ ಮಾಡಿರುವ ಜನರಲ್ಲಿ ಹೆಚ್ಚಿನ ಅಂಶ ಹಿಂದೂಗಳೇ ಇದ್ದಾರೆ. ನಾವು ಹೇಗೆ ಹಿಂದೂ ವಿರೋಧಿ ಆಗುತ್ತೇವೆ? ಸುಮ್ಮನೇ ಬಿಜೆಪಿ ನಾಯಕರು ಬಾಯಿಗೆ ಬಂದಂಗೆ ಮಾತನಾಡುತ್ತಾರೆ ಎಂದು ತಿರುಗೇಟು ನೀಡಿದರು. ಶ್ರೀಕಾಂತ್ ಬಂಧಿಸಿದ ಪೊಲೀಸ್ ನನ್ನು ಅಮಾನತುಗೊಳಿಸಬೇಕೆಂಬ…

Read More

ಹುಬ್ಬಳ್ಳಿ : ರಾಮಮಂದಿರ ನಿರ್ಮಾಣಕ್ಕೆ ನಾವು ಕೊಟ್ಟ ಇಟ್ಟಿಗೆ ಎಲ್ಲಿ? ರಾಮಮಂದಿರ ಪಕ್ಕದ ಜಮೀನಿನ ವಿಚಾರವಾಗಿ ಭ್ರಷ್ಟಾಚಾರ ಆಗಿದೆ.ಜಮೀನಿನ ಬೆಲೆ ಹೆಚ್ಚಳ ಮಾಡಿ ಭ್ರಷ್ಟಾಚಾರ ಮಾಡಿದ್ದಾರೆ ಎಂದು ಹುಬ್ಬಳ್ಳಿಯಲ್ಲಿ ಕಾರ್ಮಿಕ ಸಚಿವ ಆರೋಪ ಮಾಡಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪದಾಧಿಕಾರಿಗಳು ಕೋಟ್ಯಾಂತರರು ಲಾಭ ಮಾಡಿಕೊಂಡಿದ್ದಾರೆ 17 ಲಕ್ಷಕ್ಕೆ ಭೂಮಿ ಪಡೆದು ಮೂರು ಕೋಟಿಗೆ ಮಾರಾಟ ಮಾಡಿದ್ದಾರೆ.ಇದರ ಬಗ್ಗೆ ಯಾರೂ ಹೋರಾಟ ಮಾಡಬೇಕು ಎಂದು ಸಂತೋಷ್ ಲಾಡ್ ಪ್ರಶ್ನಿಸಿದ್ದಾರೆ.ರಾಮನು ನಮ್ಮದೇವರು ದುರ್ಗಮ್ಮ ಕೂಡ ನಮ್ಮ ದೇವರು ಎಂದು ಹುಬ್ಬಳ್ಳಿಯಲ್ಲಿ ಕಾರ್ಮಿಕ ಸಚಿವ ಸಂತೋಷ ಲಾಡ್ ತಿಳಿಸಿದರು. ಹತ್ತು ವರ್ಷದಲ್ಲಿ ಹಿಂದುಗಳಿಗೆ ಏನಾದರೂ ಲಾಭ ಆಗಿದೆಯಾ? ಎಂದು ಹುಬ್ಬಳ್ಳಿಯಲ್ಲಿ ಕಾರ್ಮಿಕ ಸಚಿವ ಸಂತೋಷ್ ಲಾಡ್ ಪ್ರಶ್ನಿಸಿದ್ದಾರೆ. ನಾನು ಹಿಂದೂ ನೀವು ಹಿಂದೂ ಏನಾದರೂ ಲಾಭ ಆಗಿದೆಯಾ ಏನಾದ್ರೂ ವಿಶೇಷ ಲಾಭ ಆಗಿದೆಯಾ? ಎಂದು ಪ್ರಶ್ನಿಸಿದರು. ಇದರಿಂದ ಬಿಜೆಪಿ ಅವರಿಗೆ ಅಷ್ಟೇ ಲಾಭವಾಗಿದೆ. ಶ್ರೀಕಾಂತ್ ಪೂಜಾರಿ ವಿರುದ್ಧ ಕೇಸ್ ಹಾಕಿದರೆ ನಮಗೇನು ಲಾಭವಾಗುತ್ತದೆ?ಅಷ್ಟು ಕೇಸ್ ಆಗಿದೆ…

Read More

ಸಾಲದ ಸಮಸ್ಯೆಯನ್ನು ಪರಿಹರಿಸಲು ರಾಯಲ್ ಲೀಫ್ ಲ್ಯಾಂಪ್ ಪರಿಹಾರ ಪ್ರತಿಯೊಂದು ಮರಕ್ಕೂ ವಿಭಿನ್ನ ಶಕ್ತಿಗಳಿವೆ. ಈ ಶಕ್ತಿಗಳಿಂದಾಗಿ ಮರಕ್ಕೆ ಔಷಧೀಯ ಗುಣಗಳು ಉಂಟಾಗುತ್ತವೆ. ದೈಹಿಕ ಕಾಯಿಲೆಗಳನ್ನು ಹೋಗಲಾಡಿಸಲು ನಾವು ಆ ಔಷಧೀಯ ಗುಣಗಳನ್ನು ಬಳಸುತ್ತೇವೆ. ಈ ಆಧ್ಯಾತ್ಮಿಕ ಪೋಸ್ಟ್ನಲ್ಲಿ, ನಾವು ಕೇವಲ ದೈಹಿಕ ಕಾಯಿಲೆಗಳನ್ನು ಮಾತ್ರವಲ್ಲದೆ ನಮ್ಮ ಜೀವನದಲ್ಲಿ ಅನೇಕ ಸಮಸ್ಯೆಗಳನ್ನು ತೊಡೆದುಹಾಕಲು ರಾಜ ಮರದ ಎಲೆಯಿಂದ ಹೇಗೆ ಪೂಜಿಸಬೇಕು ಎಂಬುದನ್ನು ನೋಡಲಿದ್ದೇವೆ . ವಾಕ್ಯ ಸಿದ್ದಿ, ಮಂತ್ರಸಿದ್ದಿ ಯಂತ್ರ ಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕ್ಕೈಕ ಜೋತಿಷ್ಯರು ವಿದ್ವಾನ್ ವಿದ್ಯಾಧರ್ 9686268564 ಇಷ್ಟ ಪಟ್ಟವರು ನೀಮ್ಮಂತೇ ಆಗಲು, ಪ್ರೀತಿಯಲ್ಲಿ ಮೋಸ ಹೋಗಿದ್ದರೆ ಮದುವೆ ವಿಳಂಬ, ಸತಿ ಪತಿ ಕಲಹ, ಸಂತಾನ, ಅತ್ತೆ ಸೋಸೆ ಕಲಹ, ಶತ್ರು ಭಾದೆ, ಅನಾರೋಗ್ಯ, ಸಾಲದ ಭಾದೆ, ಮನೆಯಲ್ಲಿ ಅಶಾಂತಿ, ಬೀಜೀನೇ‍ಸ್ಸ ನಲ್ಲಿ ನಷ್ಟ , ಕೋರ್ಟ್ ಕೇಸ್, ಎಷ್ಟೇ ಪ್ರಯತ್ನ ಜೀವನದಲ್ಲಿ ಏಳಿಗೆ ಅಭಿವೃದ್ಧಿ ಆಗದೆ ನೋಂದಿದ್ದರೆ ಇನ್ನೂ ನಿಮ್ಮ ಸಮಸ್ಯೆ ಯಾವುದೇ ಇರಲಿ…

Read More

ಬೆಂಗಳೂರು : ಹುಲಿ ಉಗುರು, ಆನೆ ದಂತ, ಜಿಂಕೆಕೊಂಬು ಸೇರಿದಂತೆ ಅಕ್ರಮವಾಗಿಟ್ಟುಕೊಂಡಿರುವ ಯಾವುದೇ ವನ್ಯ ಜೀವಿಯ ಅಂಗಾಂಗ,ಟ್ರೋಫಿಯನ್ನು ಸರ್ಕಾರಕ್ಕೆ ಹಿಂತಿರುಗಿಸಲು ಒಂದು ಬಾರಿ ಕಾಲಾವಕಾಶ ನೀಡಲು ಇಂದು ನಡೆದ ಸಚಿವ ಸಂಪುಟ ಸಭೆ ನಿರ್ಧರಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಪ್ರಸ್ತಾಪಕ್ಕೆ ಅನುಮೋದನೆ ನೀಡಲಾಯಿತು.ಅಕ್ರಮವ ಸಂರಕ್ಷಣಾ ಅಧಿನಿಯಮ 1972 ಮತ್ತು ಇತ್ತೀಚೆಗೆ ಅಂದರೆ 2022ರಲ್ಲಿ ಕೇಂದ್ರ ಸರ್ಕಾರ ಈ ಕಾಯಿದೆಗೆ ಮಾಡಿರುವ ತಿದ್ದುಪಡಿಯನ್ವಯ ಯಾವುದೇ ವನ್ಯಜೀವಿಯ ಅಂಗಾಂಗವನ್ನು ಅಕ್ರಮವಾಗಿ ದಾಸ್ತಾನು ಮಾಡುವುದು, ಸಾಗಾಟ ಮಾಡುವುದು, ಮನೆಯಲ್ಲಿ ಇಟ್ಟುಕೊಳ್ಳುವುದು, ಮಾರಾಟ ಮಾಡುವುದು, ಧರಿಸುವುದು, ವನ್ಯಜೀವಿಗಳ ಮಾಂಸ ಭಕ್ಷಿಸುವುದು ಶಿಕ್ಷಾರ್ಹ ಅಪರಾಧವಾಗಿದೆ. ವನ್ಯಜೀವಿ (ಸಂರಕ್ಷಣಾ) (ಕರ್ನಾಟಕ ನಿಯಮಗಳು) 1973 ರ ನಿಯಮ 34 (1) ರಡಿಯಲ್ಲಿ ನಿಯಮ ಜಾರಿಯಾದ ಸಂದರ್ಭದಲ್ಲಿ 1973ರಲ್ಲಿ 30 ದಿನಗಳ ಕಾಲ ನಂತರ 2003 ರಲ್ಲಿ ಮತ್ತೊಮ್ಮೆ 180 ದಿನಗಳ ಕಾಲಾವಕಾಶ ನೀಡಿ ತಲತಲಾಂತರದಿಂದ ತಮ್ಮಲ್ಲಿರುವ ವನ್ಯಜೀವಿ/ಪ್ರಾಣಿಗಳ ಅಂಗಾಂಗಗಳ ಪದಾರ್ಥಗಳು, ಟ್ರೋಫಿಗಳು ಮತ್ತು…

Read More

ಬೆಂಗಳೂರು : ಇತ್ತೀಚಿಗೆ ಬೆಂಗಳೂರಿನಲ್ಲಿ ಮೇಲಿಂದ ಮೇಲೆ ಹುಸಿ ಬಾಂಬ್​ ಬೆದರಿಕೆ ಕರೆಗಳು ಬರುತ್ತಿವೆ. ಕಳೆದ ಹಲವು ದಿನಗಳ ಹಿಂದೆ ಸರ್ಕಾರಿ ಹಾಗೂ ಖಾಸಗಿ ಶಾಲೆಗಳಿಗೆ ಹೊಸ ಇಮೇಲ್ ಸಂದೇಶ ಬಂದಿತ್ತು. ನಿನ್ನೆ ವಿಶ್ವೇಶ್ವರಯ್ಯ ಮುಸ್ಯಿಯಂಗೆ ಬಾಂಬ್ ಬೆದರಿಕೆ ಮೇಲ್​​ ಬಂದಿತ್ತು. ಇದಾದ ಬೆನ್ನಲ್ಲೇ ಇದೀಗ ಕನ್ನಿಂಗ್ ಹ್ಯಾಮ್ ರಸ್ತೆಯಲ್ಲಿರುವ ರಾಷ್ಟ್ರೀಯ ಷೇರು ವಿನಿಮಯ ಕೇಂದ್ರಕ್ಕೆ ಬಾಂಬ್ ಬೆದರಿಕೆ ಕರೆ ಬಂದಿದೆ. ಆರೋಪಿಗಳು ಜನವರಿ 3ರಂದು ಮುಂಬೈನ ರಾಷ್ಟ್ರೀಯ ಷೇರು ವಿನಿಮಯ ಕೇಂದ್ರ ಕಚೇರಿಗೆ ಕರೆ ಮಾಡಿ, ಬೆಂಗಳೂರಿನ ಕಚೇರಿಯಲ್ಲಿ ಬಾಂಬ್​ ಇಡಲಾಗಿದೆ ಎಂದು ಹೇಳಿದ್ದಾರೆ. ಕೂಡಲೇ ಮುಂಬೈನ ಎನ್​ಎಸ್​ಇ ಕಚೇರಿ ಅಧಿಕಾರಿಗಳು ಮಧ್ಯರಾತ್ರಿ ಒಂದು ಗಂಟೆಗೆ ಸುಮಾರಿಗೆ ವಿಧಾನಸೌಧ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದರು. ತಕ್ಷಣ ಪೊಲೀಸರು ಬಾಂಬ್ ನಿಷ್ಕ್ರಿಯ ದಳದೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪರಿಶೀಲನೆ ವೇಳೆ ಯಾವುದೇ ಸ್ಪೋಟಕ‌ವಸ್ತು ಪತ್ತೆಯಾಗಿಲ್ಲ. ಸದ್ಯ ವಿಧಾನಸೌಧ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವಿಶ್ವೇಶ್ವರಯ್ಯ ಮ್ಯೂಸಿಯಂಗೆ ‘ಬಾಂಬ್ ಬೆದರಿಕೆ’…

Read More

ಯಾದಗಿರಿ : ಚಾಲಕನ ನಿಯಂತ್ರಣ ತಪ್ಪಿ ಬಸ್ ಒಂದು ಕಂದಕಕ್ಕೆ ಉರುಳಿದ ಪರಿಣಾಮ ಓರ್ವ ಪ್ರಯಾಣಿಕ ಸ್ಥಳದಲ್ಲೇ ಸಾವನ್ನಪ್ಪಿದ್ದು 25ಕ್ಕೂ ಹೆಚ್ಚು ಜನರು ಗಾಯಗೊಂಡಿರುವ ಘಟನೆ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನಲ್ಲಿ ನಡೆದಿದೆ. ಈ ವೇಳೆ ಬಸ್ ನಲ್ಲಿದ್ದ 25 ಜನರು ಗಾಯಗೊಂಡವರನ್ನು ಕಲಬುರ್ಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ದೇವಾಪುರ ಬಳಿ ಘಟನೆ ಸಂಭವಿಸಿದೆ. ಬಸ್ನಲ್ಲಿದ್ದ ಪ್ರಯಾಣಿಕ ಬಾಲು ಕುಮಾರ್ (36) ಸಾವನ್ನಪ್ಪಿದ್ದಾನೆ ಎಂದು ಹೇಳಲಾಗುತ್ತಿದ್ದು ಬೀದರ್ ಜಿಲ್ಲೆ, ಹುಮ್ನಾಬಾದ್ ತಾಲೂಕಿನ ಹಳ್ಳಿಕೇಡ ನಿವಾಸಿಯಾಗಿದ್ದಾರೆ ಎಂದು ಹೇಳಲಾಗುತ್ತಿದೆ. ನಿನ್ನೆ ರಾತ್ರಿ ಬೀದರ್ ನಿಂದ ಬೆಂಗಳೂರಿಗೆ ಖಾಸಗಿ ಬಸ್ ತೆರಳುತ್ತಿತ್ತು ಈ ವೇಳೆ ಚಾಲಕನ ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿದ್ದು ಈ ಸಂದರ್ಭದಲ್ಲಿ ಓರ್ವ ಪ್ರಯಾಣಿಕ ಸಾವನ್ನಪ್ಪಿದ್ದಾನೆ. ಸುರಪುರ ತಾಲೂಕು ಪೊಲೀಸ್ ಠಾಣೆಯಲ್ಲಿ ಘಟನೆ ಕುರಿತು ಪ್ರಕರಣ ದಾಖಲಾಗಿದೆ.

Read More

ಬೆಂಗಳೂರು : ನಿನ್ನೆ ಬೆಂಗಳೂರಿನ ವಿಶ್ವೇಶ್ವರಯ್ಯ ಮ್ಯೂಸಿಯಂಗೆ ಇ-ಮೇಲ್ ಮುಖಾಂತರ ಬಾಂಬ್ ಬೆದರಿಕೆ ಸಂದೇಶ ರವಾನಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಸಂದೇಶ ಕಳುಹಿಸಿದ ಕಿಡಿಗೇಡಿಗಳ ವಿರುದ್ಧ ಬೆಂಗಳೂರಿನ ಕಬ್ಬನ್ ಪಾರ್ಕ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಇಮೇಲ್ ಬೆದರಿಕೆ ಸಂದೇಶ ಕಳಿಸಿದ್ದ ಕಿಡಿಗೇಡಿಗಳ ವಿರುದ್ಧ ಇದೀಗ ಎಫ್ ಐ ಆರ್ ದಾಖಲಾಗಿದ್ದು, ನಿನ್ನೆ ಉಗ್ರಸಘಟನೆ ಎಂದು ಉಲ್ಲೇಖಿಸಿ ಬಾಂಬ್ ಬೆದರಿಕೆ ಸಂದೇಶ ಕಳುಹಿಸಲಾಗಿತ್ತು. ವಿಶ್ವೇಶ್ವರಯ್ಯ ಇಮೇಲ್ ಮೂಲಕ ಬೆದರಿಕೆ ಸಂದೇಶ ಬಂದಿತ್ತು ಹಲವು ಸ್ಪೋಟಕಗಳನ್ನು ಬಚ್ಚಿಡಲಾಗಿದೆ ಎಂದು ಇಮೇಲ್ ನಲ್ಲಿ ಮೂಲಕ ರವಾನಿಸಲಾಗಿದ್ದು ಎಲ್ಲವೂ ಸ್ಪೋಟಗೊಳಲ್ಲಿದೆ ಎಂದು ಕಿಡಿಗೇಡಿಗಳು ಮೇಲ್ನಲ್ಲಿ ಸಂದೇಶ ಕಳುಹಿಸಿದ್ದರು. ಮೇಲ್ ಸಂದೇಶ ನೋಡಿದ ತಕ್ಷಣ ಕೂಡಲೇ ಮ್ಯೂಸಿಯಂ ಸಿಬ್ಬಂದಿ ಈ ಕುರಿದಂತೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ವಿಶ್ವೇಶ್ವರಯ್ಯ ಮ್ಯೂಸಿಯಂ ಗೆ ಪೊಲೀಸರು ಬಂದು ಸ್ಥಳ ಪರಿಶೀಲನೆ ನಡೆಸಿದ್ದಾರೆ.ಬಾಂಬ್ ನಿಷ್ಕ್ರಿಯದಳ ಶ್ವಾನದಳದಿಂದಲೂ ಪರಿಶೀಲನೆ ನಡೆಸಿದ್ದಾರೆ. ಪರಿಶೀಲನೆ ಬಳಿಕ ಹಸಿಬಾಂಬ ಬೆದರಿಕೆ ಸಂದೇಶ ಎಂಬುವುದು ಪತ್ತೆಯಾಗಿದೆ.ಈ ಘಟನೆ ಕುರಿತಂತೆ ಕಬ್ಬನ್ ಪಾರ್ಕ್…

Read More

ದಕ್ಷಿಣ ಕನ್ನಡ : ಶಾಲೆಗಳಲ್ಲಿ ಮಕ್ಕಳಿಗಾಗಿ ಇರುವ ಶೌಚಾಲಯವನ್ನು ಸೂಕ್ತ ಸ್ವಚ್ಛತಾ ಪರಿಕರ ಉಪಯೋಗಿಸಿಕೊಂಡು ಮಕ್ಕಳೇ ಸ್ವಚ್ಛಗೊಳಿಸುವುದರಲ್ಲಿ, ಶಾಲಾ ಆವರಣದ ಕಸ ಗುಡಿಸುವುದರಲ್ಲಿ ತಪ್ಪಿಲ್ಲ. ಇಂತಹ ಸಣ್ಣ ಪುಟ್ಟ ಕೆಲಸಗಳನ್ನು ಮಕ್ಕಳು ಚಿಕ್ಕಂದಿನಲ್ಲೇ ಕಲಿತರೆ ಒಳ್ಳೆಯದು. ಇದು ಕೂಡ ಶಿಕ್ಷಣದ ಒಂದು ಭಾಗ ಎಂದು ವಿಧಾನಸಭೆಯ ಅಧ್ಯಕ್ಷ ಯು.ಟಿ ಖಾದರ್ ಹೇಳಿದರು. ಶುಕ್ರವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರಿ ಶಾಲೆಯೊಂದರಲ್ಲಿ ಮಕ್ಕಳಿಂದ ಶೌಚಾಲಯ ಸ್ವಚ್ಛಗೊಳಿಸಿದ ಶಾಲಾ ಮುಖ್ಯಶಿಕ್ಷಕರ ವಿರುದ್ಧ ಸರ್ಕಾರ ಶಿಸ್ತುಕ್ರಮ ಕ್ರಮ ಕೈಗೊಂಡಿರುವ ಬಗ್ಗೆ ಮತ್ತು ಈ ವಿಚಾರದಲ್ಲಿ ಹೊಸ ನಿಯಮ ರೂಪಿಸಿದ ಬಗ್ಗೆ ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದರು. ಸರ್ಕಾರಿ ಶಾಲೆಯಲ್ಲಿ ಶೌಚಾಲಯ ಸ್ವಚ್ಛಗೊಳಿಸುವುದಕ್ಕೆ ಹಾಗೂ ಕಸ ಗುಡಿಸುವುದಕ್ಕೆ ಪ್ರತ್ಯೇಕ ಸಿಬ್ಬಂದಿ ಇಲ್ಲ. ಅಂತಹ ಕೆಲಸಗಳನ್ನು ಶಿಕ್ಷಕರು ಅಥವಾ ಶಾಲಾಭಿವೃದ್ಧಿ ಸಮಿತಿಯವರು ಮಾಡುವುದಿಲ್ಲ. ಆ ಕೆಲಸವನ್ನು ಮಕ್ಕಳು ಮಾಡುತ್ತಾರೆ. ಕೈಗವಸು ಹಾಕಿಕೊಂಡು, ಬ್ರಷ್‌ ಉಪಯೋಗಿಸಿ ಮಕ್ಕಳು ಶೌಚಾಲಯ ಸ್ವಚ್ಛಗೊಳಿಸುವುದು ತಪ್ಪು ಅನಿಸುವುದಿಲ್ಲ ಚಿಕ್ಕವನಿದ್ದಾಗ ನಾನೂ ಶಾಲೆಯಲ್ಲಿ ಕಸ ಗುಡಿಸಿದ್ದೆ…

Read More

ಬೆಂಗಳೂರು : ಗ್ಯಾಂರಂಟಿ ಯೋಜನೆಗಳ ಘೋಷಣೆ ಮೂಲಕ ಅಧಿಕಾರದ ಚುಕ್ಕಾಣಿ ಹಿಡಿದಿರುವ ಕಾಂಗ್ರೆಸ್ ಸರ್ಕಾರ, ಎರಡು ನೂರು ಯೂನಿಟ್ ಉಚಿತ ವಿದ್ಯುತ್ ಗ್ಯಾರಂಟಿಯೊಂದಿಗೆ ಅಧಿಕಾರಕ್ಕೆ ಬಂದ ಬಂದು ಈಗ ಅನಧಿಕೃತ ಲೋಡ್ ಶೆಡ್ಡಿಂಗ್ ಆರಂಭಿಸಿದ್ದು, ರೈತಾಪಿ ವರ್ಗವನ್ನು ಕಂಗೆಡಿಸಿದೆ. ಕೃಷಿ ಪಂಪ್‌ಸೆಟ್‌ಗಳಿಗೆ 7 ತಾಸು ನೀಡಲಾಗುತ್ತಿದ್ದ ವಿದ್ಯುತ್ ದಿಢೀರ್ 3 ತಾಸು ಕಡಿತದ ಅನುಮಾನ ಮೂಡಿದೆ.ಇದರಿಂದ ಹಲವು ರೈತಾಪಿ ವರ್ಗದ ಹಲವು ಸಂಘಟನೆಗಳು ಪ್ರತಿಭಟನೆಗೆ ಸಜ್ಜಾಗಿವೆ. ಬೇಸಿಗೆಗೆ ಮುನ್ನವೇ ಲೋಡ್‌ ಶೆಡ್ಡಿಂಗ್ ಜಾರಿಗೆ ಮೌಖಿಕವಾಗಿ ಅಧಿಕಾರಿಗಳಿಗೆ ನಿರ್ದೇಶನ ರವಾನೆಯಾಗುತ್ತಿದೆ ಎನ್ನಲಾಗಿದೆ. ವಿದ್ಯುತ್ ಪರಿವರ್ತಕಗಳ ನಾತು ರಿಪೇರಿ, ಫೀಡರ್ ಕಾರಣ ನೀಡುತ್ತಿರುವ ಅಧಿಕಾರಿಗಳು ರೈತರ ಕಣ್ಮರೆಸುವ ಕೆಲಸಕ್ಕೆ ಮುಂದಾಗಿದ್ದಾರೆ. ಪ್ರಸ್ತುತ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಈಗಾಗಲೇ ಪ್ರಾಯೋಗಿಕವಾಗಿ 2 ತಾಸು ವಿದ್ಯುತ್ ಕಡಿತಗೊಳ್ಳುತ್ತಿದ್ದು, ಹಂತ-ಹಂತವಾಗಿ ಇತರ ಜಿಲ್ಲೆಗಳಿಗೂ ವಿಸ್ತರಣೆಯಾಗುವ ಲಕ್ಷಣ ಕಂಡುಬರುತ್ತಿದೆ. ರಾಜ್ಯದಲ್ಲಿ ಸುಮಾರು 32 ಲಕ್ಷ ಕೃಷಿ ಪಂಪ್‌ಸೆಟ್‌ಗಳಿದ್ದು, ಕೃಷಿ ವಲಯಕ್ಕೆ ಶೇ.35 ವಿದ್ಯುತ್ ಬಳಕೆಯಾಗುತ್ತಿದೆ. ಮಳೆ ಕೊರತೆಯಿಂದ ಎಲ್ಲೆಡೆ ಪಂಪ್…

Read More