Author: kannadanewsnow05

ಬೆಂಗಳೂರು : ಮಾಜಿ ಸಂಸದ ಡಿಕೆ ಸುರೇಶ್ ಸಹೋದರಿ ಎಂದು ಹೇಳಿ ಚಿನ್ನ ವಂಚನೆ ಎಸಗಿದ್ದ ಪ್ರಕರಣ ಸಂಬಂಧ ಐಶ್ವರ್ಯ ಗೌಡ ಅವರ ಬೆಂಗಳೂರು ಹಾಗೂ ಮಂಡ್ಯದ ನಿವಾಸಗಳ ಮೇಲೆ ಜಾರಿ ನಿರ್ದೇಶನಾಲಯ ಅಧಿಕಾರಿಗಳು ಇಂದು ದಾಳಿ ನಡೆಸಿದರು. ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಕಿರುಗಾವಲು ಗ್ರಾಮದಲ್ಲಿರುವ ಮನೆ ಹಾಗೂ ಬೆಂಗಳೂರಿನ ನಿವಾಸದ ಮೇಲೆ ದಾಳಿ ನಡೆದಿದ್ದು, ಕಡತಗಳು ಹಾಗೂ ದಾಖಲೆಗಳ ಶೋಧ ಮಾಡಿದ್ದಾರೆ. ಶಾಸಕ ವಿನಯ್ ಕುಲಕರ್ಣಿಗೂ ED ಶಾಕ್! ಡಿಕೆ ಸುರೇಶ್ ಸಹೋದರಿ ಎಂದು ಹೇಳಿ ಐಶ್ವರ್ಯ ಗೌಡ ವಂಚನೆ ಎಸಗಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ನಿವಾಸದ ಮೇಲೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಬೆಂಗಳೂರಿನ ಡಾಲರ್ಸ್ ಕಾಲೋನಿಯಲ್ಲಿರುವ ಶಾಸಕ ವಿನಯ್ ಕುಲಕರ್ಣಿ ನಿವಾಸದ ಮೇಲು ಇಡಿ ಅಧಿಕಾರಿಗಳು ದಾಳಿ ಮಾಡಿ ಹಲವು ದಾಖಲೆಗಳನ್ನು ಪರಿಶೀಲನೆ ಮಾಡುತ್ತಿದ್ದಾರೆ. ಏನಿದು ಪ್ರಕರಣ? ವಾರಾಹಿ ವರ್ಲ್ಡ್ ಆಫ್ ಗೋಲ್ಡ್ ಅಂಗಡಿ ಬಾಲಕಿ ವನಿತಾ ಎಸ್…

Read More

ಬೆಂಗಳೂರು : ಕಾಂಗ್ರೆಸ್ ಶಾಸಕ ವಿನಯ್ ಕುಲಕರಣಿಗೆ ಜಾರಿ ನಿರ್ದೇಶನಾಲಯ ಅಧಿಕಾರಿಗಳು (ED) ಬಿಗ್ ಶಾಕ್ ನೀಡಿದ್ದು, ಬೆಂಗಳೂರಿನಲ್ಲಿರುವ ಶಾಸಕ ವಿನಯ್ ಕುಲಕರ್ಣಿ ನಿವಾಸದ ಮೇಲೆ ಇಂದು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲನೆ ನಡೆಸಿದರು. ಹೌದು ಡಿಕೆ ಸುರೇಶ್ ಸಹೋದರಿ ಎಂದು ಹೇಳಿ ಐಶ್ವರ್ಯ ಗೌಡ ವಂಚನೆ ಎಸಗಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ನಿವಾಸದ ಮೇಲೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದಾಳಿ ಮಾಡಿದ್ದಾರೆ.  ಕಾಂಗ್ರೆಸ್ ಶಾಸಕ ವಿನಯ್ ಕುಲಕರಣಿ ನಿವಾಸದ ಮೇಲೆ ಇಡಿ ದಾಳಿ ಮಾಡಿದ್ದು, ಬೆಂಗಳೂರಿನ ಡಾಲರ್ಸ್ ಕಾಲೋನಿಯಲ್ಲಿರುವ ವಿನಯ್ ಕುಲಕರ್ಣಿ ಮನೆ ಮೇಲೆ ಇಡಿ ಅಧಿಕಾರಿಗಳು ದಾಳಿ ಮಾಡಿದ್ದಾರೆ. ವಿನಯ್ ಕುಲಕರ್ಣಿ ನಿವಾಸದಲ್ಲಿ ಇದೀಗ ಜಾರಿ ನಿರ್ದೇಶಕರು ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ.

Read More

ನವದೆಹಲಿ : ಭಾರತದಲ್ಲಿ ಅಬಿರ್ ಗುಲಾಲ್ ಚಿತ್ರ ಪ್ರದರ್ಶನಕ್ಕೆ ಇದೀಗ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಅನುಮತಿ ನಿರಾಕರಿಸಿದೆ. ಪಾಕ್ ನಟ ಫವಾದ್ ಖಾನ್ ನಟಿಸಿರುವ ಅಬಿರ್ ಗುಲಾಲ್ ಚಿತ್ರ ಭಾರತದಲ್ಲಿ ಚಿತ್ರ ಬಿಡುಗಡೆ ಮಾಡಲು ಅನುಮತಿ ನೀಡಲಾಗುವುದಿಲ್ಲ ಎಂದು ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಮೂಲಗಳಿಂದ ಮಾಹಿತಿ ತಿಳಿದು ಬಂದಿದೆ. ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಕಳೆದ ಎರಡು ದಿನಗಳ ಹಿಂದೆ ಉಗ್ರರು ಪ್ರವಾಸಿಗರ ಮೇಲೆ ಭೀಕರವಾಗಿ ಗುಂಡಿನ ದಾಳಿ ನಡೆಸಿದರು. ಈ ಒಂದು ಗುಂಡಿನ ದಾಳಿಯಲ್ಲಿ ಕನ್ನಡಿಗರು ಸೇರಿದಂತೆ ಪ್ರವಾಸಿಗರು ಬಲಿಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಇದೀಗ ಪಾಕಿಸ್ತಾನ ಚಿತ್ರಗಳನ್ನು ನಿಷೇಧಿಸುವ ಕುರಿತು ಚಿಂತನೆ ನಡೆಯುತ್ತಿದ್ದು, ಹಾಗಾಗಿ ಈ ಒಂದು ಸಿನಿಮಾ ಮೇ 9 ರಂದು ಭಾರತದಲ್ಲಿ ಬಿಡುಗಡೆಯಾಗಬೇಕಿತ್ತು. ಆದರೆ ಉಗ್ರರ ದಾಳಿಯ ಘಟನೆ ಯಿಂದ ಇದೀಗ ಪಾಕಿಸ್ತಾನ ಚಿತ್ರ ಭಾರತದಲ್ಲಿ ಪ್ರದರ್ಶನಕ್ಕೆ ಅನುಮತಿ ನೀಡಿಲ್ಲ ಎಂದು ತಿಳಿದುಬಂದಿದೆ. ಹೌದು ಚಿತ್ರ ಬಿಡುಗಡೆ ದಿನಾಂಕ ಘೋಷಣೆಯಾದಾಗಿನಿಂದಲೂ ತೊಂದರೆಯಲ್ಲಿತ್ತು. ಈ ಭಯೋತ್ಪಾದಕ…

Read More

ಬಿಹಾರ್ : ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 25 ಪ್ರವಾಸಿಗರು ಮತ್ತು ಕಾಶ್ಮೀರಿ ಕ್ರೂರವಾಗಿ ಸಾವನ್ನಪ್ಪಿದ ಎರಡು ದಿನಗಳ ನಂತರ ಪ್ರಧಾನಿ ನರೇಂದ್ರ ಮೋದಿ ಅವರು ಪ್ರತಿಯೊಬ್ಬ ಭಯೋತ್ಪಾದಕ ಮತ್ತು ಅವರ ಬೆಂಬಲಿಗರನ್ನು ಗುರುತಿಸುತ್ತೇವೆ ಪತ್ತೆಹಚ್ಚುತ್ತೇವೆ ಮತ್ತು ಶಿಕ್ಷಿಸುತ್ತೇವೆ ಮತ್ತು ನಮ್ಮ ಮನೋಭಾವವನ್ನು ಎಂದಿಗೂ ಮುರಿಯುವುದಿಲ್ಲ ಎಂದು ಹೇಳಿದರು. ಬಿಹಾರದ ಮಧುಬನಿ ಸಮಾವೇಶದಲ್ಲಿ ಮಾತನಾಡಿದ ಅವರು, ಉಗ್ರರನ್ನು ಹುಡುಕಿ ಹುಡುಕಿ ಹೊಡೆಯುತ್ತೇವೆ. ಕನ್ನಡಿಗರು ಸೇರಿದಂತೆ ಎಲ್ಲರನ್ನೂ ಹತ್ಯೆಗೈದಿದ್ದಾರೆ. ಉಗ್ರರು ಊಹಿಸಲಾಗದಂತಹ ಶಿಕ್ಷೆ ಆಗೋದು ನಿಶ್ಚಿತ. ಉಗ್ರರಿಗೆ ಈಗಿರುವ ಸ್ವಲ್ಪ ಜಾಗವು ಇರುವುದಿಲ್ಲ. ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಗುಡುಗಿದ್ದಾರೆ. ಯಾವುದೇ ಕಾರಣಕ್ಕೂ ನಾವು ಬಿಡುವುದಿಲ್ಲ. ಭಾರತದ ಆತ್ಮ ಸ್ಥೈರ್ಯವನ್ನು ಕುಗ್ಗಿಸಲು ಆಗಲ್ಲ. ಯಾವುದೇ ಕಾರಣಕ್ಕೂ ಉಗ್ರರು ತಪ್ಪಿಸಿಕೊಳ್ಳಲು ಆಗಲ್ಲ ಬಿಹಾರದ ಈ ಮಣ್ಣಿನ ಮೇಲೆ ನಿಂತು ಜಗತ್ತಿಗೆ ಹೇಳುತ್ತಿದ್ದೇನೆ ಭಾರತದ ಪ್ರತಿಯೊಬ್ಬ ಉಗ್ರನನು ಮತ್ತು ಉಗ್ರರಿಗೆ ಬೆಂಬಲಿಸಿದವರನ್ನು ಹುಡುಕಿ ಹೋಗಿ ಹೊಡೆಯುತ್ತೇವೆ ಎಂದರು. ನಾವು ಅವರನ್ನು ಭೂಮಿಯ…

Read More

ಮಂಗಳೂರು : ರಾಜ್ಯದಲ್ಲಿ ಮತ್ತೊಂದು ಹೇಯ ಕೃತ್ಯವೊಂದು ನಡೆದಿದ್ದು, ಕೆ.ಎಸ್.ಆರ್.ಟಿ.ಸಿ ಬಸ್ ಕಂಡಕ್ಟರ್ ಯುವತಿಗೆ ಲೈಂಗಿಕ ಕಿರುಕುಳ ನೀಡಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ.ಇದೀಗ ಯುವತಿಗೆ ಲೈಂಗಿಕ ಕಿರುಕುಳ ನೀಡಿರುವ ಕೆಎಸ್ಆರ್‌ಟಿಸಿ ಬಸ್ ಕಂಡಕ್ಟರ್‌ನನ್ನು ನೌಕರಿಯಿಂದ ಅಮಾನತುಗೊಳಿಸಲಾಗಿದ್ದು, ಇದೀಗ ಕೊಣಾಜೆ ಪೊಲೀಸರು ಬಂಧಿಸಿದ್ದಾರೆ. ಹೌದು, ಮಂಗಳೂರಿನ ಮುಡಿಪು ಸ್ಟೇಟ್ ಬ್ಯಾಂಕ್ ಭಾಗದ ಕೆ.ಎಸ್.ಆರ‍್.ಟಿ.ಸಿ ಬಸ್ ನಲ್ಲಿ ಕಂಡಕ್ಟರ್, ಯುವತಿಗೆ ಲೈಂಗಿಕ ಕಿರುಕುಳ ನೀಡಿದ್ದಾನೆ. ಪ್ರಯಾಣಿಕರೊಬ್ಬರ ಮೊಬೈಲ್ ನಲ್ಲಿ ಈ ವಿಡಿಯೋ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಬಾಗಲಕೋಟೆ ಮೂಲದ ಪ್ರದೀಪ್ (40) ಯುವತಿಗೆ ಲೈಂಗಿಕ ಕಿಕುಕುಳ ನೀಡಿದ್ದಾನೆ. ಯುವತಿ ಬಸ್ ನಲ್ಲಿ ನಿದ್ರೆಗೆ ಜಾರಿದ್ದ ವೇಳೆ ಆಕೆ ಪಕ್ಕದಲ್ಲಿಯೇ ನಿಂತಿದ್ದ ಕಂಡಕ್ಟರ್ ಆಕೆಗೆ ಕಿರುಕುಳ ನೀಡಿದ್ದಾನೆ. ವಿಡಿಯೋ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತ ಪೊಲೀಸರು ಆರೋಪಿ ಕಂಡಕ್ಟರ್ ನನ್ನು ವಶಕ್ಕೆ ಪಡೆದಿದ್ದಾರೆ. ಸದ್ಯಕ್ಕೆ ಪೋಲಿ ಕಂಡಕ್ಟರ್‌ನ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದ್ದು, ತಕ್ಷಣವೇ ಕಂಡಕ್ಟರ್‌ನನ್ನು ನೌಕರಿಯಿಂದ ಅಮಾನತುಗೊಳಿಸಲಾಗಿದ್ದು, ಇದೀಗ ಕೊಣಾಜೆ ಪೊಲೀಸರು…

Read More

ಶ್ರೀನಗರ : ನಿನ್ನೆ ಜಮ್ಮು ಕಾಶ್ಮೀರದಲ್ಲಿ ಉಗ್ರರ ದಾಳಿಗೆ ಹುತಾತ್ಮರಾದ ಲೆಫ್ಟಿನೆಂಟ್ ವಿನಯ್ ನರ್ವಾಲ್ ಪಾರ್ಥಿವ ಶರೀರ ದೆಹಲಿಗೆ ಆಗಮಿಸಿದ್ದು, ಪಾರ್ಥಿವ ಶರೀರದ ಎದುರು ಅವರ ಪತ್ನಿ ರೋಧಿಸಿದ್ದಾರೆ. ಏಪ್ರಿಲ್ 16 ರಂದು ಮದುವೆಯಾಗಿ ಹನಿಮೂನ್ ಗೆಂದು ಅವರು ಕಾಶ್ಮೀರಕ್ಕೆ ತೆರಳಿದಾಗ ಈ ಒಂದು ಘೋರವಾದ ದುರಂತ ಸಂಭವಿಸಿದೆ. ಉಗ್ರರು ಗುಂಡಿನ ದಾಳಿ ನಡೆಸುವ ಮುನ್ನ ವಿನಯ್ ಗುಂಡಿನ ದಾಳಿಗೆ ಯಾವ ಸ್ಥಳದಲ್ಲಿ ಸಾವನಪ್ಪಿದ್ದರು ಅದೇ ಸ್ಥಳದಲ್ಲಿ ವಿನಯ್ ತಮ್ಮ ಪತ್ನಿ ಹಿಮಾಂಶು ಅವರನ್ನು ತಬ್ಬಿಕೊಂಡು ಎತ್ತಿಕೊಂಡು ವಿಡಿಯೋ ಮಾಡಿದ್ದರು ಎನ್ನಲಾಗುತ್ತಿದೆ. ಇದೀಗ ವಿನಯ್ ಅವರು ಮಾಡಿದ ಕೊನೆಯ ವಿಡಿಯೋ ವೈರಲ್ ಆಗಿದೆ. ಪತ್ನಿಯನ್ನು ಎತ್ತಿಕೊಂಡು ತಬ್ಬಿಕೊಂಡು ವಿಡಿಯೋ ಮಾಡಿದ್ದು ನೋಡುಗರ ಕರಳು ಕಿವುಚುವಂತಿದೆ. ಪಹಲ್ಗಾಮ್ ನಲ್ಲಿ ನಡೆದ ಉಗ್ರರ ದಾಳಿಯಲ್ಲಿ ಶಿವಮೊಗ್ಗ ಮೂಲದ ಮಂಜುನಾಥ್ ರಾವ್ ಹಾಗೂ ಹಾವೇರಿ ಮೂಲದ ಬೆಂಗಳೂರು ನಿವಾಸಿ ಭರತ್ ಭೂಷಣ್ ಮೃತಪಟ್ಟಿದ್ದಾರೆ. ಕನ್ನಡಿಗರ ಮೃತದೇಹವನ್ನು ಜಮ್ಮು-ಕಾಶ್ಮೀರದಿಂದ ಬೆಂಗಳೂರಿಗೆ ತರಲು ವ್ಯವಸ್ಥೆ ಮಾಡಲಾಗಿದ್ದು, ಇಂದು ಸಂಜೆ…

Read More

ನವದೆಹಲಿ : ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್​ನಲ್ಲಿ ನಿನ್ನೆ ಉಗ್ರರ ಗುಂಡಿನ ದಾಳಿ ನಡೆದಿತ್ತು. ಅದರ ಬೆನ್ನಲ್ಲೇ, ಇಂದು ಪ್ರಧಾನಮಂತ್ರಿ ನರೇಂದ್ರ ಮೋದಿ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಗ್ರಹಮಂತ್ರಿ ಅಮಿತ್ ಶಾ, ಸೇರಿದಂತೆ ಹಲವು ಅಧಿಕಾರಿಗಳು ಹಾಗು ಸಚಿವರೊಂದಿಗೆ ಸೇರಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮಹತ್ವದ ಸಭೆ ನಡೆಸಿದರು. ಈ ಒಂದು ಸಭೆಯಲ್ಲಿ ಭಾರತ ಪಾಕಿಸ್ತಾನಕ್ಕೆ ರಾಜತಾಂತ್ರಿಕ ತಿರುಗೇಟು ನೀಡಿದ್ದು ತಕ್ಷಣವೇ ಅಟಾರಿ ಮತ್ತು ವಾಘಾ ಗಡಿ ಬಂದ್ ಗೆ ಮಹತ್ವದ ನಿರ್ಧಾರ ತೆಗೆದುಕೊಂಡಿದ್ದಾರೆ ಹೌದು ದೆಹಲಿಯಲ್ಲಿ ಪ್ರಧಾನಿ ಮೋದಿ ನೇತೃತ್ವದ ಸಭೆಯಲ್ಲಿ ಈ ಒಂದು ಮಹತ್ವದ ನಿರ್ಧಾರ ಕೈಗೊಂಡಿದ್ದು, ಪಾಕಿಸ್ತಾನದ ಪ್ರಜೆಗಳಿಗೆ ವೀಸಾ ನೀಡದಿರಲು ಭಾರತ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಕಾಶ್ಮೀರದಲ್ಲಿ ಉಗ್ರರ ದಾಳಿಗೆ ಭಾರತದಿಂದ ಇದೀಗ ರಾಜತಾಂತ್ರಿಕ ತಿರುಗೇಟು ನೀಡಿದ್ದು ಪಾಕಿಸ್ತಾನದಲ್ಲಿರುವ ಭಾರತದ ರಾಯಭಾರಿ ವಾಪಸ್ ಕರೆಸಿಕೊಳ್ಳಲು ನಿರ್ಧರಿಸಲಾಗಿದೆ. ಅದೇ ರೀತಿಯಾಗಿ ಭಾರತದಲ್ಲಿರುವ ಪಾಕಿಸ್ತಾನ ರಾಯಭಾರಿ ಗಡಿಪಾರು ಮಾಡಲು ಮೋದಿ ನೇತೃತ್ವದ ಸಭೆ ನಿರ್ಧರಿಸಿದೆ.…

Read More

ಮುಂಬೈ : ಪಹಲ್ಗಾಮ್ ನಲ್ಲಿ ಭಯೋತ್ಪಾದಕರ ಹೇಯ ಕೃತ್ಯದಿಂದ 28 ಜನರ ಪ್ರಾಣ ಹೋಗಿದ್ದು, ದೇಶಾದ್ಯಂತ ಶೋಕದ ವಾತಾವರಣ ನಿರ್ಮಾಣ ಆಗಿದೆ. ಉಗ್ರರ ದಾಳಿಯನ್ನು ಸೆಲೆಬ್ರಿಟಿಗಳು ಕೂಡ ಖಂಡಿಸಿದ್ದಾರೆ. ನಿನ್ನೆ ನಡೆದ ಭಯೋತ್ಪಾದಕ ದಾಳಿಯಿಂದಾಗಿ ಎಲ್ಲರಲ್ಲೂ ಆತಂಕ ಮೂಡಿದೆ. ಭೂಮಿ ಮೇಲಿನ ಸ್ವರ್ಗದ ರೀತಿ ಇರುವ ಕಾಶ್ಮೀರವನ್ನು ನೋಡಲು ತೆರಳಿದ್ದ ಪ್ರವಾಸಿಗರನ್ನೇ ಗುರಿಯಾಗಿಸಿ ಉಗ್ರರು ದಾಳಿ ಮಾಡಿದ್ದಾರೆ. ಈ ಬಗ್ಗೆ ಸಲ್ಮಾನ್ ಖಾನ್ ಅವರು ಸಂತಾಪ ಸೂಚಿಸಿದ್ದಾರೆ. ಈ ಕುರಿತಂತೆ ಸಾಮಾಜಿಕ ಜಾಲತಾಣ X ನಲ್ಲಿ ಖಂಡನೆ ವ್ಯಕ್ತಪಡಿಸಿದ ಅವರು, ಕಾಶ್ಮೀರ, ಭೂಮಿಯ ಮೇಲಿನ ಸ್ವರ್ಗ ನರಕವಾಗಿ ಬದಲಾಗುತ್ತಿದೆ. ಅಮಾಯಕರನ್ನು ಗುರಿಯಾಗಿಸಲಾಗುತ್ತಿದೆ, ನನ್ನ ಹೃದಯವು ಅವರ ಕುಟುಂಬಗಳಿಗೆ ಮಿಡಿಯುತ್ತಿದೆ. ‘ಏಕ್ ಭೀ ಮುಗ್ಧ ಕೋ ಮರ್ನಾ ಪುರಿ ಕೈನಾಥ ಕೋ ಮರ್ನೆ ಕೆ ಬರಾಬರ್ ಹೈ’ (ಓರ್ವ ಅಮಾಯಕನನ್ನು ಕೊಲ್ಲುವುದು ಎಂದರೆ ಇಡೀ ಜಗತ್ತನ್ನು ಕೊಂದಂತೆ) ಎಂದು ಬರೆದುಕೊಂಡಿದ್ದಾರೆ. https://twitter.com/BeingSalmanKhan/status/1914981209525846083?t=Top2uWS6_iyLxMjtSCjNWw&s=19

Read More

ಜಮ್ಮು ಕಾಶ್ಮೀರ : ನಿನ್ನೆ ತಾನೆ ಕಾಶ್ಮೀರದ ಫಹಲ್ಗಾಮ್ ನಲ್ಲಿ ಪ್ರವಾಸಿಗರ ಮೇಲೆ ಉಗ್ರರು ಭೀಕರವಾದ ಗುಂಡಿನ ದಾಳಿ ನಡೆಸಿ 30ಕ್ಕೂ ಹೆಚ್ಚು ಪ್ರವಾಸಿಗರನ್ನು ಹತ್ಯೆ ಮಾಡಿದ್ದರು. ಈ ದಾಳಿಯನ್ನು TRF ಉಗ್ರ ಸಂಘಟನೆ ಹೊತ್ತುಕೊಂಡಿತ್ತು. ಇದರ ಬೆನ್ನಲ್ಲೇ ಇದೀಗ ಭಾರತೀಯ ಸೇನೆ ಅಲರ್ಟ್ ಆಗಿದ್ದು ಭಾರತೀಯ ಸೇನೆ ಸಿಆರ್ಪಿಎಫ್ ಹಾಗೂ ಪೊಲೀಸರು TRF ಕಮಾಂಡರ್ ಅನ್ನು ಸುತ್ತುವರಿದಿದ್ದಾರೆ. ಹೌದು ದಕ್ಷಿಣ ಕಾಶ್ಮೀರದ ಕುಲ್ಗಾಮ್ ತಂಗ್ ಮಾರ್ಗ್ ನಲ್ಲಿ ಟಿ ಆರ್ ಎಫ್ ಭಯೋತ್ಪಾದಕ ಸಂಘಟನೆ ಹಾಗೂ ಭಾರತೀಯ ಸೇನೆ ಸಿಆರ್ಪಿಎಫ್ ಹಾಗೂ ಪೊಲೀಸರ ಜಂಟಿ ಕಾರ್ಯಾಚರಣೆಯಲ್ಲಿ ಗುಂಡಿನ ಚಕಮಕಿ ನಡೆದಿದೆ. ದಕ್ಷಿಣ ಕಾಶ್ಮೀರದ ಕುಲ್ಗಾಮ್ ತಂಗ್ ಮಾರ್ಗ್ ನಲ್ಲಿ ಪೊಲೀಸರು, ಸೇನೆ CRPF ಜಂಟಿ ಕಾರ್ಯಾಚರಣೆ ನಡೆಸಿದ್ದು, ಈ ವೇಳೆ TRF ಕಮಾಂಡರ್ ನನ್ನು ಇದೀಗ ಸೇನೆ ಸುತ್ತುವರೆದಿದೆ ಎಂದು ಮಾಹಿತಿ ತಿಳಿದು ಬಂದಿದೆ.

Read More

ಬೆಂಗಳೂರು : ನಿನ್ನೆ ಜಮ್ಮು ಕಾಶ್ಮೀರದಲ್ಲಿ ಪಹಾಲ್ಗಾಮ್ ನಲ್ಲಿ ನಡೆದಂತಹ ಉಗ್ರರ ಗುಂಡಿನ ದಾಳಿಯಲ್ಲಿ ಕರ್ನಾಟಕದ ಇಬ್ಬರು ಪ್ರವಾಸಿಗರು ಸಾವನಪ್ಪಿದ್ದಾರೆ. ಶಿವಮೊಗ್ಗದ ಮಂಜುನಾಥ್ ಹಾಗೂ ಬೆಂಗಳೂರಿನ ಭರತ್ ಭೂಷಣ್ ಅವರು ಉಗ್ರರ ಗುಂಡಿನ ದಾಳಿಗೆ ಬಲಿಯಾಗಿದ್ದರು. ಇದೀಗ ಮೃತರ ಕುಟುಂಬಕ್ಕೆ ರಾಜ್ಯ ಸರ್ಕಾರ 10 ಲಕ್ಷ ಪರಿಹಾರ ಘೋಷಣೆ ಮಾಡಿದೆ. ಹೌದು ಮೃತರ ಕುಟುಂಬಗಳಿಗೆ ರಾಜ್ಯ ಸರ್ಕಾರ 10 ಲಕ್ಷ ರೂಪಾಯಿ ಪರಿಹಾರ ಘೋಷಿಸಿದೆ. ಮಂಜುನಾಥ್ ಮತ್ತ್ತು ಭರತ್ ಭೂಷಣ ರನ್ನು ಉಗ್ರರು ಕಾಶ್ಮೀರದಲ್ಲಿ ಭೀಕರವಾಗಿ ಕೊಲೆ ಮಾಡಿದ್ದರು. ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ಗೆ ಪ್ರವಾಸಕ್ಕೆ ತೆರಳಿದ್ದಾಗ ಇಬ್ಬರನ್ನು ಭೀಕರವಾಗಿ ಕೊಲೆ ಮಾಡಿದ್ದಾರೆ. ಹತ್ಯೆಯಾದ ಮಂಜುನಾಥ್ ಮತ್ತು ಭರತ್ ಭೂಷಣ ಕುಟುಂಬಸ್ಥರಿಗೆ ಇದೀಗ ರಾಜ್ಯ ಸರ್ಕಾರ ತಲಾ 10 ಲಕ್ಷ ರೂಪಾಯಿ ಪರಿಹಾರ ಘೋಷಣೆ ಮಾಡಿದೆ.

Read More