Author: kannadanewsnow05

ನವದೆಹಲಿ : ಪಾಕಿಸ್ತಾನದ ಮೇಲೆ ಭಾರತ ಆಪರೇಷನ್ ಸಿಂಧೂರ ದಾಳಿ ಮಾಡಿದ್ದು ಈ ಒಂದು ದಾಳಿಯ ಕುರಿತಂತೆ ಇದೀಗ ಭೂಸೇನೆ, ವಾಯುಪಡೆ ಮತ್ತು ನೌಕಾಪಡೆಯ ಉನ್ನತ ಕಮಾಂಡರ್‌ಗಳು ಆಪರೇಷನ್ ಸಿಂಧೂರ್ ಕುರಿತು ಜಂಟಿ ಪತ್ರಿಕಾಗೋಷ್ಠಿ ನಡೆಸಿದ್ದು, ಭಾರತೀಯ ಸೇನೆಯ ಮಿಲಿಟರಿ ಕಾರ್ಯಾಚರಣೆಗಳ ಮಹಾನಿರ್ದೇಶಕರಾದ ಲೆಫ್ಟಿನೆಂಟ್ ಜನರಲ್ ರಾಜೀವ್ ಘಾಯ್ ಆಪರೇಷನ್ ಸಿಂಧೂರ್ ಕುರಿತಂತೆ ಮಾಹಿತಿ ನೀಡಿದರು. ನಮ್ಮ ಟಾರ್ಗೆಟ್ ಪಾಕಿಸ್ತಾನದ ಯೋಧರು ಆಗಿರಲಿಲ್ಲ. ನಮ್ಮ ಟಾರ್ಗೆಟ್ ಉಗ್ರರ ನೆಲೆ ದ್ವಂಸ ಮಾಡೋದು ಆಗಿತ್ತು ಎಲ್ ಒಸಿ ಬಳಿ 35 ರಿಂದ 40 ಯೋಧರನ್ನು ಕೊಂದಿದ್ದೇವೆ. ನಾವು ಬಳಸಿದ ಶತ್ರುಗಳ ಬಗ್ಗೆ ತಿಳಿಸುವುದಿಲ್ಲ. ಪಾಕಿಸ್ತಾನದ ಡಿಜಿಎಂ ಅವರ ಜೊತೆ ನಿನ್ನೆ ಮಾತುಕತೆ ಆಗಿದೆ. ನಮಗೆ ಕರೆ ಮಾಡಿ ಮಾತುಕತೆ ನಡೆಸಲು ತಿಳಿಸಿದ್ದರು. ಅವರು ಪ್ರಸ್ತಾಪಿಸಿದ ನಂತರವೇ ನಾವು ಕದನ ವಿರಾಮ ಗೋಪಿಸಿದ್ದೇವೆ ಪಾಕಿಸ್ತಾನದ ಡಿಜಿಎಂ ಕದನ ವಿರಾಮವನ್ನು ಪ್ರಸ್ತಾಪಿಸಿದ್ದರು ಮೇಹತ್ತರಂದು ಕರೆ ಮಾಡಿ ಕದನ ವಿರಾಮಗೊಳಿಸಿ ಎಂದು ಮನವಿ ಮಾಡಿದ್ದರು ಹಾಗಾಗಿ ನೆನ್ನೆ…

Read More

ನವದೆಹಲಿ : ಪಾಕಿಸ್ತಾನದ ಮೇಲೆ ಭಾರತ ಆಪರೇಷನ್ ಸಿಂಧೂರ ದಾಳಿ ಮಾಡಿದ್ದು ಈ ಒಂದು ದಾಳಿಯ ಕುರಿತಂತೆ ಇದೀಗ ಭೂಸೇನೆ, ವಾಯುಪಡೆ ಮತ್ತು ನೌಕಾಪಡೆಯ ಉನ್ನತ ಕಮಾಂಡರ್‌ಗಳು ಆಪರೇಷನ್ ಸಿಂಧೂರ್ ಕುರಿತು ಜಂಟಿ ಪತ್ರಿಕಾಗೋಷ್ಠಿ ನಡೆಸಿದ್ದು, ಭಾರತೀಯ ವಾಯುಪಡೆಯ ವಾಯು ಕಾರ್ಯಾಚರಣೆಗಳ ಮಹಾನಿರ್ದೇಶಕರಾದ ಏರ್ ಮಾರ್ಷಲ್ ಅವಧೇಶ್ ಕುಮಾರ್ ಭಾರ್ತಿ ಮಾತನಾಡಿ, ಆಪರೇಷನ್ ಸಿಂಧೂರ್ ದಾಳಿಯಲ್ಲಿ 35 ರಿಂದ 40 ಪಾಕಿಸ್ತಾನಿ ಸೈನಿಕರನ್ನು ಕೊಂದಿದ್ದೇವೆ ಎಂದು ಮಾಹಿತಿ ನೀಡಿದರು. ಆಪರೇಷನ್ ಸಿಂಧೂರ್ ಕುರಿತಂತೆ ಮಾತನಾಡಿದ ಅವರು, ಭಾರತದ ಸೇನಾ ನೆಲೆಯನ್ನು ಗುರಿಯಾಗಿಸಿ ಪಾಕಿಸ್ತಾನ 700 ಡ್ರೋನ್ ಗಳಿಂದ ದಾಳಿ ಮಾಡಿತ್ತು. ಗಡಿಯುದ್ದಕ್ಕೂ ಪಾಕಿಸ್ತಾನ ನಿರಂತರವಾಗಿ ದಾಳಿ ನಡೆಸಿದ್ದು, ಡ್ರೋನ್ ದಾಳಿಯ ವೇಳೆ ಪಾಕಿಸ್ತಾನದಲ್ಲಿ ನಾಗರೀಕರ ವಿಮಾನ ಹಾರಾಟ ನಡೆಸುತ್ತಿತ್ತು. ಭಾರತ ಪ್ರತಿ ದಾಳಿ ನಡೆಸಿದಾಗಳಲೂ ಪಾಕಿಸ್ತಾನ ನಾಗರೀಕರ ವಿಮಾನ ಹಾರಾಟ ನಡೆಸಿದೆ. ಆದರೆ ಪಾಕಿಸ್ತಾನದ ನಾಗರಿಕ ವಿಮಾನಕ್ಕೆ ಒಂದು ಹಾನಿಯೂ ಆಗಿಲ್ಲ ಎಂದು ತಿಳಿಸಿದರು. ಫೈಟರ್ ಜೆಟ್ ಮತ್ತು ಡೌನ್ ಗಳಿಂದ…

Read More

ನವದೆಹಲಿ : ಪಾಕಿಸ್ತಾನದ ಮೇಲೆ ಭಾರತ ಆಪರೇಷನ್ ಸಿಂಧೂರ ದಾಳಿ ಮಾಡಿದ್ದು ಈ ಒಂದು ದಾಳಿಯ ಕುರಿತಂತೆ ಇದೀಗ ಭೂಸೇನೆ, ವಾಯುಪಡೆ ಮತ್ತು ನೌಕಾಪಡೆಯ ಉನ್ನತ ಕಮಾಂಡರ್‌ಗಳು ಆಪರೇಷನ್ ಸಿಂಧೂರ್ ಕುರಿತು ಜಂಟಿ ಪತ್ರಿಕಾಗೋಷ್ಠಿ ನಡೆಸಿದ್ದು, ಭಾರತೀಯ ಸೇನೆಯ ಮಿಲಿಟರಿ ಕಾರ್ಯಾಚರಣೆಗಳ ಮಹಾನಿರ್ದೇಶಕರಾದ ಲೆಫ್ಟಿನೆಂಟ್ ಜನರಲ್ ರಾಜೀವ್ ಘಾಯ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಆಪರೇಷನ್ ಸಿಂಧೂರ್ ಕುರಿತಂತೆ ಡಿಜಿಎಂಒ ರಾಜೀವ್ ಘಾಯ್ ಮಾತನಾಡಿ, ಪಹಲ್ಗಾಂ ನಲ್ಲಿ 26 ಅಮಾಯಕರನ್ನು ಬಲಿಪಡೆದಿದ್ದ ಉಗ್ರರನ್ನು ಸದೆಬಡಿಯಲು, ಅದರ ಪ್ರತಿಕಾರವಾಗಿ ಭಾರತದಿಂದ ಆಪರೇಷನ್ ಸಿಂಧೂರ್ ನಡೆಸಲಾಗಿದೆ. ಉಗ್ರರನ್ನು ಸದೆಬಡಿಯಲು ಆಪರೇಷನ್ ಸಿಂಧೂರ್ ನಡೆಸಲಾಗಿತ್ತು. ಉಗ್ರರ ನೆಲೆಗಳನ್ನು ಧ್ವಂಸ ಮಾಡುವಲ್ಲಿ ನಾವು ಯಶಸ್ವಿಯಾಗಿದ್ದೇವೆ. ಆಪರೇಷನ್ ಸಿಂಧೂರ್ ಮೂಲಕ ತಕ್ಕ ಉತ್ತರ ನೀಡಿದ್ದೇವೆ. ಉಗ್ರರು ತಮ್ಮ ಶಿಬಿರಗಳಿಂದ ಪರಾರಿ ಯಾಗಿದ್ದರು. ನಮ್ಮ ದಾಳಿಗೆ ಹೆದರಿ ಉಗ್ರರು ಪರಾರಿಯಾಗಿದ್ದರು. ಖಚಿತ ಮಾಹಿತಿಯ ಮೇರೆಗೆ ಉಗ್ರರ ಅಡಗುತಾಣಗಳನ್ನು ನಾವು ನಾಶ ಮಾಡಿದ್ದೇವೆ. ನಮ್ಮ ಗುರಿ ಕೇವಲ ಉಗ್ರರ ಅಡಗುತಾಣವಾಗಿತ್ತೆ ಹೊರತು, ನಾಗರಿಕರು ಆಗಿರಲಿಲ್ಲ.…

Read More

ನವದೆಹಲಿ : ಭಾರತದ ಜೊತೆಗೂಡಿ ಪಾಕಿಸ್ತಾನದ ವಿರುದ್ಧ ಹೋರಾಟ ಮಾಡಲು ಬಲೂಚಿಸ್ತಾನ ಭಾರತಕ್ಕೆ ಬೆಂಬಲ ಘೋಷಿಸಿದೆ. ಭಾರತಕ್ಕೆ ಬಲೂಚ್ ಲಿಬರೇಷನ್ ಆರ್ಮಿ (BLA) ಇದೀಗ ಬೆಂಬಲ ಸೂಚಿಸಿದ್ದು, ಭಾರತದೊಂದಿಗೆ ಪಾಕಿಸ್ತಾನದ ವಿರುದ್ಧ ಹೋರಾಟ ಮಾಡುವುದಾಗಿ ತಿಳಿಸಿದೆ. ಈ ಕುರಿತು ಬಲೂಜ್ ಲಿಬರೇಷನ್ ಆರ್ಮಿ ಮಾಧ್ಯಮ ಪ್ರಕಟಣೆ ಹೊರಡಿಸಿದೆ ಪಾಕಿಸ್ತಾನ ವಿರುದ್ಧ ಭಾರತ ನಿರ್ಣಾಯಕ ಕ್ರಮ ಕೈಗೊಂಡರೆ ಅದಕ್ಕೆ ಬೆಂಬಲ ನೀಡುತ್ತೇವೆ. ಭಾರತದ ಜೊತೆ ಪಶ್ಚಿಮ ಗಡಿಯಲ್ಲಿ ಪಾಕಿಸ್ತಾನದ ವಿರುದ್ಧ ದಾಳಿ ನಡೆಸುತ್ತೇವೆ ಎಂದು ಪ್ರಕಟಣೆಯ ಮೂಲಕ ಬಲೂಚ್ ಆರ್ಮಿ ಬೆಂಬಲ ನೀಡಿದೆ. ಪಾಕ್ ವಿರುದ್ಧ ನಿರ್ಣಾಯಕ ಕ್ರಮ ಕೈಗೊಂಡರೆ ಸ್ವಾಗತಿಸುವುದು ಅಲ್ಲದೆ ಮಿಲಿಟರಿ ಶಕ್ತಿಯಾಗಿ ಅದರೊಂದಿಗೆ ನಿಲ್ಲುತ್ತೇವೆ. ಪಾಕಿಸ್ತಾನವನ್ನು ಭಯೋತ್ಪಾದಕ ರಾಷ್ಟ್ರ ಎಂದು ಬಲೂಚಿಸ್ತಾನ ಲಿಬರೇಷನ್ ಆರ್ಮಿ ಕರೆದಿದೆ. ಭಯೋತ್ಪಾದಕ ರಾಷ್ಟ್ರ ಪಾಕಿಸ್ತಾನದ ಭರವಸೆಗಳನ್ನು ನಂಬುವ ಸಮಯ ಮುಗಿದಿದೆ. ಪಾಕಿಸ್ತಾನವನ್ನು ಭಯೋತ್ಪಾದನೆಯ ಕೇಂದ್ರವೆಂದು ಪರಿಗಣಿಸಿ. ಪಾಕಿಸ್ತಾನದ ವಿರುದ್ಧ ದೃಢವಾದ ಕ್ರಮಗಳನ್ನು ತೆಗೆದುಕೊಳ್ಳುವಂತೆ ಇದೀಗ ಬಲೂಚ್ ಲಿಬರೇಷನ್ ಆರ್ಮಿ ಒತ್ತಾಯಿಸಿದೆ. ಭಾರತ ಸೇರಿದಂತೆ…

Read More

ಬೆಂಗಳೂರು : ಬೆಂಗಳೂರು ಮಹಿಳೆಯರಿಗೆ ಸೇಫ್ ಅಲ್ಲ ಅನ್ನೋದು ಮತ್ತೆ ಮತ್ತೆ ಸಾಬೀತು ಆಗ್ತಿದೆ. ಇದೀಗ ಮಹಿಳಾ ಸಹೋದ್ಯೋಗಿಗಳ ಭಾವಚಿತ್ರಗಳನ್ನು ಅಶ್ಲೀಲವಾಗಿ ಎಡಿಟ್ ಮಾಡಿ, ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುತ್ತಿದ್ದ ಮಾಜಿ ಉದ್ಯೋಗಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಆಶಿಶ್ ಮೊನ್ನಪ್ಪ ಎಂದು ತಿಳಿದುಬಂದಿದೆ. ಮಡಿಕೇರಿಯ ಈತ ಹೊಸೂರಿನಲ್ಲಿ ಹೆಂಡತಿ-ಮಕ್ಕಳೊಂದಿಗೆ ವಾಸವಾಗಿದ್ದ. ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಕಾರಣ ಜಕ್ಕೂರಿನ ಬಾಡಿಗೆ ಮನೆಯೊಂದರಲ್ಲಿ ಒಬ್ಬನೇ ನೆಲೆಸಿದ್ದ. ಯುವತಿಯರ ಫೋಟೋಗಳನ್ನು ಅಶ್ಲೀಲವಾಗಿ ಎಡಿಟ್ ಮಾಡಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡುತ್ತಿದ್ದ. 2023ರಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದ ಆರೋಪಿ, ಕಳೆದ ಜನವರಿಯಲ್ಲಿ ಕೆಲಸ ತೊರೆದಿದ್ದ. ಬೇರೆ ಕಂಪನಿಗಳಿಗೆ ರೆಸ್ಯೂಮ್ ಕಳುಹಿಸಲು ಹಳೆ ಕಂಪನಿಯ ಮಹಿಳಾ ಸಹೋದ್ಯೋಗಿಯಿಂದ ಲ್ಯಾಪ್​ಟಾಪ್ ಪಡೆದುಕೊಂಡಿದ್ದ. ಕೆಲ ದಿನಗಳ ನಂತರ ಆರೋಪಿಯು ಸ್ನೇಹಿತೆಗೆ ಲ್ಯಾಪ್​ಟಾಪ್ ವಾಪಸ್ ನೀಡಿದ್ದ. ಲ್ಯಾಪ್​ಟಾಪ್ ನೀಡುವಾಗ ಅಸಭ್ಯವಾಗಿ ಮಹಿಳೆಯರ ಫೋಟೋಗಳನ್ನು ಎಡಿಟ್ ಮಾಡಿಟ್ಟುಕೊಂಡಿದ್ದ ಫೋಲ್ಡರ್ ಡಿಲೀಟ್ ಮಾಡುವುದನ್ನು ಮರೆತಿದ್ದ. ಸ್ನೇಹಿತೆಯು ಲ್ಯಾಪ್​ಟಾಪ್ ನೋಡಿದಾಗ ಕಂಪನಿಯ ಸಹೋದ್ಯೋಗಿಗಳ ಅಶ್ಲೀಲ ಮಾರ್ಫ್ ಚಿತ್ರಗಳನ್ನು…

Read More

ನವದೆಹಲಿ : ಭಾರತ ಮತ್ತು ಪಾಕಿಸ್ತಾನದ ನಡುವೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದು, ನಿನ್ನೆ ಭಾರತ ಮತ್ತು ಪಾಕಿಸ್ತಾನ ಎರಡು ಕದನ ವಿರಾಮ ಘೋಷಿಸಿದ್ದವು. ಆದರೆ ತಡರಾತ್ರಿ ಪಾಕಿಸ್ತಾನ ಮತ್ತೆ ಕದನ ವಿರಾಮ ಉಲ್ಲಂಘಿಸಿ ಭಾರತದ ಮೇಲೆ ದಾಳಿ ನಡೆಸಿತ್ತು. ಅದಕ್ಕೆ ತಕ್ಕ ಪ್ರತ್ಯುತ್ತರ ಭಾರತೀಯ ಸೇನೆ ಸಹ ನೀಡಿದೆ. ಇದೀಗ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಅಮೇರಿಕಾ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಅವರ ಜೊತೆಗೆ ಫೋನ್ನಲ್ಲಿ ಮಾತನಾಡಿದ್ದು, ಯಾರ ಮಧ್ಯಸ್ಥಿಕೆಯು ನಮಗೆ ಇಷ್ಟವಿಲ್ಲ. ಪಾಕಿಸ್ತಾನ ಆಕ್ರಮಿತ ಕಾಶ್ಮೀರ ನಮಗೆ ಮರಳಬೇಕು ಎಂದು ಸ್ಪಷ್ಟ ಸಂದೇಶ ನೀಡಿದ್ದಾರೆ. ಹೌದು ಕಾಶ್ಮೀರ ವಿವಾದ ಬಗೆಹರಿಸಲು ಯಾರ ಮಧ್ಯಸ್ಥಿಕೆಯು ಬೇಡ. ಆದರೆ ಉಗ್ರರನ್ನು ನಮಗೆ ಹಸ್ತಾಂತರ ಮಾಡಬೇಕು. ಪಾಕ್ ಅಕ್ರಮಿತ ಕಾಶ್ಮೀರ ನಮಗೆ ಮರಳಬೇಕು. ಯಾರು ಈ ವಿಷಯದಲ್ಲಿ ಮಧ್ಯಸ್ಥಿಕೆ ವಹಿಸುವುದು ನಮಗೆ ಇಷ್ಟವಿಲ್ಲ. ಕಾಶ್ಮೀರದ ಬಗ್ಗೆ ನಮಗೆ ಸ್ಪಷ್ಟವಾದ ನಿಲುವು ಇದೆ. ಅದರ ಬಗ್ಗೆ ಮಾತನಾಡಲು ಸಿದ್ಧರಿದ್ದರೆ ಚರ್ಚೆಗೆ ರೆಡಿ. ಅದು ಬಿಟ್ಟರೆ ಮಾತನಾಡಲು…

Read More

ನವದೆಹಲಿ : ಭಾರತ ಮತ್ತು ಪಾಕಿಸ್ತಾನದ ನಡುವೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದು, ನಿನ್ನೆ ಭಾರತ ಮತ್ತು ಪಾಕಿಸ್ತಾನ ಎರಡು ಕದನ ವಿರಾಮ ಘೋಷಿಸಿದ್ದವು. ಆದರೆ ತಡರಾತ್ರಿ ಪಾಕಿಸ್ತಾನ ಮತ್ತೆ ಕದನ ವಿರಾಮ ಉಲ್ಲಂಘಿಸಿ ಭಾರತದ ಮೇಲೆ ದಾಳಿ ನಡೆಸಿತ್ತು. ಅದಕ್ಕೆ ತಕ್ಕ ಪ್ರತ್ಯುತ್ತರ ಭಾರತೀಯ ಸೇನೆ ಸಹ ನೀಡಿದೆ. ಇದೀಗ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಆಪರೇಷನ್ ಸಿಂಧೂರ ಇನ್ನೂ ಮುಗಿದಿಲ್ಲ ಪಾಕಿಸ್ತಾನಕ್ಕೆ ನುಗ್ಗಿ ಹೊಡಿತಿವಿ ಎಂದು ಪಾಕಿಸ್ತಾನಕ್ಕೆ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ. ಹೌದು ಪಾಕಿಸ್ತಾನ ಮತ್ತೆ ದಾಳಿ ನಡೆಸಿದರೆ ತಕ್ಕ ತಿರುಗೇಟು ನೀಡುತ್ತೇವೆ. ಕದನ ವಿರಾಮ ಉಲ್ಲಂಘಿಸಿದ ಪಾಕಿಸ್ತಾನಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಇದೀಗ ಖಡಕ್ ಎಚ್ಚರಿಕೆ ನೀಡಿದ್ದಾರೆ.ಅಮೆರಿಕಾ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಜೊತೆಗೆ ಚರ್ಚೆ ಮಾಡುವ ವೇಳೆ ಮೋದಿ ಹೇಳಿಕೆ ನೀಡಿದ್ದಾರೆ. ಫೋನ್ ನಲ್ಲಿ ಅಮೇರಿಕ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಜೊತೆ ಚರ್ಚಿಸಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ, ಪಾಕಿಸ್ತಾನಕ್ಕೆ ನುಗ್ಗಿ ಮತ್ತೆ ಹೊಡಿತೇವೆ ಎಂದು ಕದನ ವಿರಾಮ…

Read More

ನವದೆಹಲಿ : ಪಾಕಿಸ್ತಾನದಿಂದ ಏರ್ ಸ್ಟ್ರೈಕ್ ಹಿನ್ನೆಲೆ ಐಪಿಎಲ್ ಪಂದ್ಯಗಳನ್ನು ಮುಂದೂಡಲಾಗಿತ್ತು. ಇದೀಗ ಮೇ 16 ರಿಂದ ಐಪಿಎಲ್ ಮುಂದಿನ ಪಂದ್ಯಗಳು ಪುನಾರಂಭವಾಗುವ ಸಾಧ್ಯತೆ ಇದೆ. ಈ ಕುರಿತು ಬಿಸಿಸಿಐಯಿಂದ ಅಧಿಕೃತ ಮಾಹಿತಿಯಷ್ಟೇ ಹೊರಬೀಳಬೇಕಿದೆ. ಈಗಾಗಲೇ ಬಹುತೇಕ ಐಪಿಎಲ್ ಪಂದ್ಯಗಳು ಮುಗಿದಿದ್ದು ಇನ್ನೂ 16 ಪಂದ್ಯಗಳು ಮಾತ್ರ ಬಾಕಿ ಇವೆ. ಇದೀಗ ಮೇ 16ರಂದು ಮತ್ತೆ ಐಪಿಎಲ್ ಪಂದ್ಯಗಳು ಪುನರಾರಂಭ ಹಾಗೂ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಭಾರತ ಮತ್ತು ಪಾಕಿಸ್ತಾನ ನಡುವಿನ ಕದನ ವಿರಾಮ ಒಪ್ಪಂದದ ಒಂದು ದಿನದ ನಂತರ ಮತ್ತು ಒಂದು ವಾರದವರೆಗೆ ಸ್ಥಗಿತಗೊಳಿಸಿದ ಎರಡು ದಿನಗಳ ನಂತರ ಇಂಡಿಯನ್ ಪ್ರೀಮಿಯರ್ ಲೀಗ್‌ನ 18 ನೇ ಆವೃತ್ತಿಯನ್ನು ಪುನರಾರಂಭಿಸುವ ಸಾಧ್ಯತೆ ಇದೆ ಎಂದು ಬಲಮೂಲಗಳಿಂದ ತಿಳಿದು ಬಂದಿದೆ. ಭದ್ರತಾ ಕಾರಣಗಳಿಂದಾಗಿ ಧರ್ಮಶಾಲಾದಲ್ಲಿ ಪಂಜಾಬ್ ಕಿಂಗ್ಸ್ ಮತ್ತು ದೆಹಲಿ ಕ್ಯಾಪಿಟಲ್ಸ್ ಪಂದ್ಯವನ್ನು ಅರ್ಧಕ್ಕೆ ರದ್ದುಗೊಳಿಸಬೇಕಾದ ಕಾರಣ ಐಪಿಎಲ್ ಸ್ಥಗಿತಗೊಂಡಿದೆ. ಅಲ್ಲದೆ ಬಿಸಿಸಿಐ ವಿದೇಶಿ ಆಟಗಾರರಿಗೆ ತಮ್ಮ ತಾಯ್ನಾಡಿಗೆ ತೆರಳುವಂತೆ ಸೂಚನೆ ನೀಡಿತ್ತು.…

Read More

ಶ್ರೀನಗರ : ಭಾರತ ಮತ್ತು ಪಾಕಿಸ್ತಾನದ ನಡುವೆ ಪರಿಸ್ಥಿತಿ ಉದ್ವಿಗ್ನವಾಗಿದ್ದು ಇದೇ ವೇಳೆ ಪಾಕಿಸ್ತಾನ ನಿರಂತರವಾಗಿ ಕಾಶ್ಮೀರ, ಪಂಜಾಬ್, ರಾಜಸ್ಥಾನ್ ಮತ್ತು ಗುಜರಾತ್ ರಾಜ್ಯಗಳನ್ನು ಗುರಿಯಾಗಿಸಿ ದಾಳಿ ಮಾಡುತ್ತಿದೆ. ಇದೀಗ ಜಮ್ಮು ಕಾಶ್ಮೀರದ ಶ್ರೀನಗರದಲ್ಲಿ ಕೃಷಿ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದ ಕರ್ನಾಟಕದ 13 ವಿದ್ಯಾರ್ಥಿಗಳು ಸುರಕ್ಷಿತವಾಗಿ ತಾಯ್ನಾಡಿಗೆ ವಾಪಸ್ ಆಗಿದ್ದಾರೆ. ಹೌದು ಕಾಶ್ಮೀರದ ಕೃಷಿ ವಿಜ್ಞಾನ ವಿವಿಯ ವಿದ್ಯಾರ್ಥಿಗಳು ವಾಪಸ್ ಆಗಿದ್ದು, ವಿದ್ಯಾರ್ಥಿಗಳು ಕ್ಷೇಮವಾಗಿ ಬರಲು ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ವ್ಯವಸ್ಥೆ ಮಾಡಿದ್ದರು. ಶ್ರೀನಗರದಲ್ಲಿ ಕರ್ನಾಟಕದ 13 ವಿದ್ಯಾರ್ಥಿಗಳು ಕೃಷಿ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದರು. ದೆಹಲಿಯ ಕರ್ನಾಟಕ ಭವನ ಎರಡರಲ್ಲಿ ಎಲ್ಲರೂ ಉಳಿಯಲು ವ್ಯವಸ್ಥೆ ಮಾಡಲಾಗಿದೆ.ತಡರಾತ್ರಿ ರೈಲಿನ ಮೂಲಕ ವಿದ್ಯಾರ್ಥಿಗಳು ದೆಹಲಿಗೆ ತಲುಪಿದ್ದಾರೆ. ಹಿಂದೂ ದೆಹಲಿಯಿಂದ ಎಲ್ಲ ವಿದ್ಯಾರ್ಥಿಗಳು ತಾಯ್ನಾಡಿಗೆ ವಾಪಸಾಗಲಿದ್ದಾರೆ. ಇದೆ ವೇಳೆ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ವಿದ್ಯಾರ್ಥಿಗಳು ಧನ್ಯವಾದ ತಿಳಿಸಿದ್ದಾರೆ.

Read More

ರಾಮನಗರ : ವೇಗವಾಗಿ ಚಲಿಸುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ, ಕಾರಿನಲ್ಲಿದ್ದ ಓರ್ವ ಸಾವನಪ್ಪಿದ್ದು ಇನ್ನೂಳಿದ ನಾಲ್ವರಿಗೆ ಗಂಭೀರವಾದ ಗಾಯಗಳಾಗಿರುವ ಘಟನೆ ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಪಾಂಡುಪುರ ಎಂಬ ಗ್ರಾಮದಲ್ಲಿ ನಡೆದಿದೆ. ಬೆಂಗಳೂರಿನ ಹೆಬ್ಬಾಳ ಮೂಲದ ಮೋಹನ್ ಮೃತ ದುರ್ದೈವಿ ಎಂದು ತಿಳಿದುಬಂದಿದೆ. ಬೆಂಗಳೂರಿನಿಂದ ಕಬ್ಬಾಳು ದೇವಸ್ಥಾನಕ್ಕೆ ಐವರು ಸ್ನೇಹಿತರು ಬರುತ್ತಿದ್ದಮೋಹನ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಈ ವೇಳೆ ಸ್ಥಳದಲ್ಲೇ ಮೋಹನ್ ಸಾವನ್ನಪ್ಪಿದ್ದರೆ, ಇನ್ನುಳಿದ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಸ್ಥಳಕ್ಕೆ ಅಕ್ಕೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ತಾಲೂಕು ಆಸ್ಪತ್ರೆಗೆ ರವಾನಿಸಿ ಗಾಯಾಳುಗಳಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ. ಘಟನೆ ಸಂಬಂಧ ಅಕ್ಕೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More