Author: kannadanewsnow05

ನವದೆಹಲಿ : ವಾಹನ ಸವಾರರಿಗೆ ಕೇಂದ್ರ ಸರ್ಕಾರ ಇದೀಗ ಮತ್ತೊಂದು ಸಿಹಿ ಸುದ್ದಿ ನೀಡಿದ್ದು, ಆಗಸ್ಟ್ 15 ರಂದು ದೇಶದಲ್ಲಿ ವಾರ್ಷಿಕ ಟೋಲ್ ಪಾಸ್ ನಿಯಮ ಜಾರಿಯಾಗುತ್ತಿದೆ. ಹೆಚ್ಚಾಗಿ ಪ್ರಯಾಣ ಮಾಡುವರು ಅಥವಾ ತಿಂಗಳಲ್ಲಿ ಒಂದು ಬಾರಿ ಪ್ರಯಾಣ ಮಾಡುವರಿಗೂ ಕೇಂದ್ರ ರಸ್ತೆ ಸಾರಿಗೆ ಸಚಿವಾಲಯ ತಂದಿರುವ ಹೊಸ ಟೋಲ್ ವಾರ್ಷಿಕ ಪಾಸ್ ಸಾವಿರಾರು ರೂಪಾಯಿ ಉಳಿತಾಯ ಮಾಡಲಿದೆ. ಹಾಗಾಗಿ ಮುಂದಿನ ಆಗಸ್ಟ್ 15 ರಿಂದ ದೇಶದಲ್ಲಿ ವಾರ್ಷಿಕ ಟೋಲ್ ಪಾಸ್ ನಿಯಮ ಜಾರಿಯಾಗುತ್ತಿದೆ. ಹೌದು ಫಾಸ್ಟ್ಯಾಗ್ ಮೂಲಕ ಭಾರತದಲ್ಲಿ ಟೋಲ್ ಪಾವತಿ ವ್ಯವಸ್ಥೆ ಜಾರಿಯಲ್ಲಿದೆ. ಹೆಚ್ಚಿನ ಸಮಯ ವಿಳಂಬವಿಲ್ಲದೆ ಟೋಲ್ ಗೇಟ್‌ಗಳಲ್ಲಿ ಟೋಲ್ ಪಾವತಿ ಮಾತಿ ಪ್ರಯಾಣ ಮುಂದುವರಿಸಬಹುದು. ಹೆದ್ದಾರಿ ಸೇರಿಂತೆ ಟೋಲ್ ರಸ್ತೆಗಳಲ್ಲಿ ಸಂಚರಿಸುವ ವಾಹನಗಳು ಟೋಲ್ ಪಾವತಿ ಮಾಡಬೇಕು. ಹಾಗಾಗಿ ಹೆಚ್ಚಿನ ಹಣ ಉಳಿತಾಯಕ್ಕೆ ಅಗಸ್ಟ್ 15 ರಿಂದ ಕೇಂದ್ರ ರಸ್ತೆ ಸಾರಿಗೆ ಸಚಿವಾಲಯ ಟೂರ್ ಪಾಸ್ ಜಾರಿ ಮಾಡಲಿದೆ. ವಾರ್ಷಿಕ ಟೋಲ್ ಪಾಸ್ ಬೆಲೆ ಎಷ್ಟು?…

Read More

ಬೆಂಗಳೂರು : ಬೆಂಗಳೂರು ಸೇರಿದಂತೆ ರಾಜ್ಯದ ಎಲ್ಲ ಭಾಗಗಳಲ್ಲಿ ಸಣ್ಣ ವ್ಯಾಪಾರಿಗಳಿಗೆ ವಾಣಿಜ್ಯ ತೆರಿಗೆ ಇಲಾಖೆ ನೋಟಿಸ್ ನೀಡಿರುವ ವಿಚಾರವಾಗಿ ಇದು ರಾಜ್ಯ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳಿಂದ ತಪ್ಪು ಎಂದು ಬೆಂಗಳೂರಿನಲ್ಲಿ ಬಿಜೆಪಿ ಎಂಎಲ್ಸಿ ರವಿಕುಮಾರ್ ಹೇಳಿಕೆ ನೀಡಿದರು. ರಾಜ್ಯದಲ್ಲಿ ಯಾರಿಗೆ ತೆರಿಗೆ ಹಾಕಬೇಕೆಂಬ ಹುಡುಕಾಟ ನಡೆದಿದೆ. ಬೀದಿ ಬದಿ ವ್ಯಾಪಾರಿಗಳಿಗೆ ನೋಟಿಸ್ ಕೊಟ್ಟು ಹಣ ವಸೂಲಿ ಮಾಡುತ್ತಿದ್ದಾರೆ. ಕೇಂದ್ರ ಸರ್ಕಾರವೇ ತಪ್ಪು ಮಾಡಿದೆ ಎಂದು ಸಿಎಂ ಹೇಳುತ್ತಿದ್ದಾರೆ ಅದು ರಾಜ್ಯದ ವಾಣಿಜ್ಯ ತೆರಿಗೆ ಇಲಾಖೆಗಳ ಅಧಿಕಾರಿಗಳಿಂದ ಆದ ತಪ್ಪು ಎಂದರು. ಅದಕ್ಕಾಗಿ ಅಧಿಕಾರಿಗಳು ವಿರುದ್ಧ ಕ್ರಮ ತೆಗೆದುಕೊಳ್ಳಬೇಕು. ಕೇಂದ್ರ ಸರ್ಕಾರಕ್ಕೆ ನೀವು ಪತ್ರ ಬರೆಯುವ ಅವಶ್ಯಕತೆ ಇಲ್ಲ. ವ್ಯಾಪಾರಿಗಳು ಮಾಡುವ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡುತ್ತೇವೆ. ರಾಜ್ಯ ಸರ್ಕಾರದಿಂದ ಆಗಿರುವ ತಪ್ಪುಗಳನ್ನು ಎಚ್ಚರಿಸುತ್ತೇವೆ. ಕೂಡಲೇ ಸಿಎಂ ಸಿದ್ದರಾಮಯ್ಯ ಸಣ್ಣ ವ್ಯಾಪಾರಿಗಳನ್ನು ಕರೆದು ಮಾತನಾಡಬೇಕು ಎಂದು ರವಿಕುಮಾರ್ ಹೇಳಿಕೆ ನೀಡಿದರು.

Read More

ಉತ್ತರಪ್ರದೇಶ : ಇತ್ತೀಚಿಗೆ ಕೌಟುಂಬಿಕ ಕಲಹಗಳಿಂದ ಕೊಲೆಗಳು ಹಾಗೂ ಆತ್ಮಹತ್ಯೆ ಪ್ರಕರಣಗಳು ಹೆಚ್ಚಿನ ಸಂಖ್ಯೆಯಲ್ಲಿ ನಡೆಯುತ್ತಿವೆ. ಇದೀಗ ಉತ್ತರ ಪ್ರದೇಶದಲ್ಲಿ ಬೆಚ್ಚಿ ಬೀಳಿಸುವ ಘಟನೆ ನಡೆದಿದ್ದು, ಮಹಿಳೆ ಒಬ್ಬಳು ತನ್ನದೇ ಕುಟುಂಬದ 8 ಜನ ಸದಸ್ಯರನ್ನು ಕೊಲ್ಲಲು ಗೋಧಿ ಹಿಟ್ಟಿನಲ್ಲಿ ವಿಷ ಬೆರೆಸಿದ್ದ ಪ್ರಕರಣ ಬೆಳಕಿಗೆ ಬಂದಿದೆ. ಹೌದು ಉತ್ತರ ಪ್ರದೇಶದ ಕೌಶಾಂಬಿಯಲ್ಲಿ ಗೋಧಿ ಹಿಟ್ಟಿಗೆ ವಿಷ ಹಾಕಿರುವ ಘಟನೆ ನಡೆದಿದೆ. ಮಹಿಳೆ ಎಲ್ಲರನ್ನೂ ಕೊಲ್ಲುವ ಉದ್ದೇಶದಿಂದ ತಂದೆ ಜತೆಗೆ ಸೇರಿ ಈ ಕೃತ್ಯವೆಸಗಿದ್ದಳು. ಗೋಧಿ ಹಿಟ್ಟಿಗೆ ಸಲ್ಫೋಸ್ ಬೆರೆಸಿದ್ದಳು. ಈ ಸಂಚು ಸಕಾಲದಲ್ಲಿ ಬಯಲಾಗಿದ್ದು, ಎಲ್ಲರ ಜೀವ ಉಳಿದಿವೆ, ಮಹಿಳೆ ಮತ್ತೆ ಆಕೆಯ ತಂದೆಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮಲಕಿಯಾ ಬಾಜಾ ಖುರ್ರಂ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಬ್ರಿಜೇಶ್ ಕುಮಾರ್ ಅವರ ಪತ್ನಿ ಮಾಲತಿದೇವಿ ನಿರಂತರ ನಡೆಯುತ್ತಿದ್ದ ಕೌಟುಂಬಿಕ ಕಲಹದಿಂದಾಗಿ ತನ್ನ ತಂದೆ ಜತೆ ಸೇರಿ ಯೋಜನೆ ರೂಪಿಸಿದ್ದಳು. ಮಾಲತಿ ತನ್ನ ಅತ್ತಿಗೆ ಮಂಜು ದೇವಿ ಜತೆಗೆ ದೀರ್ಘಕಾಲದಿಂದ…

Read More

ರಾಯಚೂರು : ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಹಾಗೂ ಯುವಜನ ಮತ್ತು ಕ್ರೀಡಾ ಸಚಿವರಾದ ಡಾ. ಮನ್ಸುಖ್ ಮಾಂಡವೀಯ ಅವರ ಅಧ್ಯಕ್ಷತೆಯಲ್ಲಿ ಹಿಮಾಚಲ ಪ್ರದೇಶದ ಶಿಮ್ಲಾದಲ್ಲಿ ನಡೆದ ಕಾರ್ಮಿಕರ ರಾಜ್ಯ ವಿಮಾ ನಿಗಮದ 196ನೇ ಸಭೆಯಲ್ಲಿ ಕಾರ್ಮಿಕರ ರಾಜ್ಯ ವಿಮಾ ನಿಗಮವು (ಇಎಸ್‌ಐಸಿ) ಉದ್ಯೋಗದಾತರು ಮತ್ತು ಉದ್ಯೋಗಿಗಳ ನೋಂದಣಿಯನ್ನು ಉತ್ತೇಜಿಸುವ ಯೋಜನೆ–2025ರ ಎಂಬ ನವೀಕೃತ ಯೋಜನೆಯನ್ನು ಇತ್ತೀಚೆಗೆ ಅನುಮೋದಿಸಲಾಯಿತು. ಕಾರ್ಮಿಕರ ರಾಜ್ಯ ವಿಮಾ ನಿಗಮವು ಸಾಮಾಜಿಕ ಭದ್ರತಾ ವ್ಯಾಪ್ತಿಯನ್ನು ವಿಸ್ತರಿಸಲು ಅನುಮೋದಿಸಿದ ಒಂದು ವಿಶೇಷ ಉಪಕ್ರಮವಾಗಿದೆ. 2025ರ ಜುಲೈ 1ರಿಂದ 2025ರ ಡಿಸೆಂಬರ್ 31ರವರೆಗೆ ಸಕ್ರಿಯವಾಗಿದ್ದು, ಗುತ್ತಿಗೆ ಹಾಗೂ ತಾತ್ಕಾಲಿಕ ಕಾರ್ಮಿಕರು ಸೇರಿದಂತೆ ಇಎಸ್‌ಇ ಅಡಿಯಲ್ಲಿ ಇನ್ನೂ ನೋಂದಾವಣೆಯಾಗದ ಉದ್ಯೋಗದಾತರು ಮತ್ತು ಉದ್ಯೋಗಿಗಳು ಯಾವುದೇ ಪರಿಶೀಲನೆ ಅಥವಾ ಹಿಂದಿನ ಅವಧಿಯ ಯಾವುದೇ ಬಾಕಿಯ ಬೇಡಿಕೆ ಇಲ್ಲದೇ ನೋಂದಾಯಿಸಿಕೊಳ್ಳಲು ಒಂದು ಬಾರಿಯ ಅವಕಾಶವನ್ನು ಒದಗಿಸಲಾಗಿದೆ. ಎಸ್‌ಪಿಆರ್‌ಇಇ 2025ರ ಅಡಿಯಲ್ಲಿ: ಉದ್ಯೋಗದಾತರು ತಮ್ಮ ಘಟಕಗಳು ಮತ್ತು ಉದ್ಯೋಗಿಗಳನ್ನು ಇಎಸ್‌ಐಸಿ ಪೋರ್ಟಲ್, ಶ್ರಮ್ ಸುವಿಧಾ, ಮತ್ತು…

Read More

ಬೆಂಗಳೂರು : ಬೆಂಗಳೂರಿನಲ್ಲಿ ಚಾಲಕರ ಅಜಾಗರೂಕತೆ ಹಾಗೂ ನಿರ್ಲಕ್ಷತನದಿಂದ ಬಿಎಂಟಿಸಿಗೆ ಅನೇಕರು ಬಳಿಯಾಗಿದ್ದಾರೆ ಕಳೆದ ಶುಕ್ರವಾರ ವಷ್ಟೇ ಪೀಣ್ಯದ ಎರಡನೇ ಹಂತದಲ್ಲಿ ರಸ್ತೆ ಬದಿಯಲ್ಲಿ ನಿಂತಿದ್ದ ಐವರ ಮೇಲೆ ಚಾಲಕ ಬಿಎಂಟಿಸಿ ಬಸ್ ಹತ್ತಿಸಿದ್ದ ಪರಿಣಾಮ 25 ವರ್ಷದ ಸುಮ ಎನ್ನುವ ಮಹಿಳೆ ಸಾವನಪ್ಪಿದ್ದಾರೆ. ಇಂದು ಬಿಎಂಟಿಸಿಗೆ ಮತ್ತೋರ್ವ ಮಹಿಳೆ ಬಲಿಯಾಗಿದ್ದು, ಪ್ರಯಾಣಿಕರು ಬಿಎಂಟಿಸಿ ಚಾಲಕರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಇದೀಗ ಇಂದು ಬಿಎಂಟಿಸಿಗೆ ಮತ್ತೊಂದು ಬಲಿಯಾಗಿದ್ದು, ಬಿಎಂಟಿಸಿ ಬಸ್ ಡಿಕ್ಕಿಯಾಗಿ ಬೈಕ್ ಹಿಂಬದಿ ಕುಳಿತಿದ್ದ ಮಹಿಳೆಯೊಬ್ಬರು ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ರೇಷ್ಮೆ ಸಂಸ್ಥೆಯ ಮೆಟ್ರೋ ಸ್ಟೇಷನ್ ಬಳಿ ಈ ಒಂದು ಘಟನೆ ನಡೆದಿದೆ. ಬೈಕ್ ಸವಾರನಿಗೆ ಗಂಭೀರವಾದ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಗೆ ಆತನನ್ನು ಶಿಫ್ಟ್ ಮಾಡಲಾಗಿದೆ. ಕೆಆರ್ ಮಾರ್ಕೆಟ್ ನಿಂದ ಹಂಚಿಪುರ ಕಾಲೋನಿಗೆ ಬಿಎಂಟಿಸಿ ಬಸ್ ತೆರಳುತ್ತಿತ್ತು. KA 01 F 4168 ಸಂಖ್ಯೆಯ ಬಿಎಂಟಿಸಿ ಬಸ್ ನಿಂದ ಈ ಅಪಘಾತ ಸಂಭವಿಸಿದೆ.

Read More

ಚಿಕ್ಕಮಗಳೂರು : 21ನೇ ಶತಮಾನದಲ್ಲೂ ಕೂಡ ಇಂದಿಗೂ ಭಾರತದ ಗ್ರಾಮೀಣ ಪ್ರದೇಶಗಳಲ್ಲಿ ಮೂಡನಂಬಿಕೆ ಪಾಲಿಸುವ ಅದೆಷ್ಟೋ ಘಟನೆಗಳು ನಡೆದಿದೆ. ಇದೀಗ ಚಿಕ್ಕಮಂಗಳೂರಲ್ಲೂ ಕೂಡ ಅಂತಹ ಘಟನೆ ನಡೆದಿದ್ದು, ಬಾಲ್ಯ ವಿವಾಹದ ಕುರಿತು ಮಾಹಿತಿ ನೀಡಿದ್ದಕ್ಕೆ ಗ್ರಾಮದ ಅಂಗನವಾಡಿ ಶಿಕ್ಷಕಿಯನ್ನು ಗ್ರಾಮಸ್ಥರು ಬಹಿಷ್ಕಾರ ಹಾಕಿರುವ ಘಟನೆ ಚಿಕ್ಕಮಂಗಳೂರು ಜಿಲ್ಲೆಯ ಕಡೂರು ತಾಲೂಕಿನ ಎರೇಹಳ್ಳಿ ಎಂಬ ಗ್ರಾಮದಲ್ಲಿ ನಡೆದಿದೆ. ಯರೆಹಳ್ಳಿ ಅಂಗನವಾಡಿ ಶಿಕ್ಷಕಿ ಕುಟುಂಬಕ್ಕೆ ಬಹಿಷ್ಕಾರ ಹಾಕಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸದ್ಯ ಬೀರೂರು ಠಾಣೆ ಪೊಲೀಸರು ಗ್ರಾಮಸ್ಥರ ಜೊತೆ ಸಭೆ ನಡೆಸಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಎರೇಹಳ್ಳಿ ಗ್ರಾಮದಲ್ಲಿ ತರೀಕೆರೆ ಡಿವ ಎಸ್ ಪಿ ಹಾಲಮೂರ್ತಿ ರಾವ್ ನೇತೃತ್ವದಲ್ಲಿ ಇದೀಗ ಸಭೆ ನಡೆಸಲಾಗುತ್ತಿದೆ ಅಂಗನವಾಡಿ ಶಿಕ್ಷಕಿ ಕುಟುಂಬ ಸೇರಿ ಮೂರು ಕುಟುಂಬಕ್ಕೆ ಗ್ರಾಮಸ್ಥರು ಬಹಿಷ್ಕಾರ ಹಾಕಿದ್ದಾರೆ.ತೇಜಸ್ವಿನಿ ಕುಟುಂಬಕ್ಕೆ ಗ್ರಾಮದ ಮುಖಂಡರು ಬಹಿಷ್ಕಾರ ಹಾಕಿದ್ದಾರೆ ಬಾಲ್ಯ ವಿವಾಹದ ಬಗ್ಗೆ ಮಾಹಿತಿ ನೀಡಿದ್ದಕ್ಕೆ ತೇಜಸ್ವಿನಿ ಕುಟುಂಬಕ್ಕೆ ಗ್ರಾಮಸ್ಥರು ಬಹಿಷ್ಕಾರ ಹಾಕಿದ್ದರು. ಇದೀಗ ಗ್ರಾಮಕ್ಕೆ ಭೇಟಿ ನೀಡಿ…

Read More

ಬೆಂಗಳೂರು : ಬೆಂಗಳೂರಿನಲ್ಲಿ ಸಿಸಿಬಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಅಕ್ರಮವಾಗಿ ನೆಲೆಸಿದ ಒಟ್ಟು 8 ವಿದೇಶಿ ಪ್ರಜೆಗಳನ್ನು ಅರೆಸ್ಟ್ ಮಾಡಿದ್ದಾರೆ ಎಂದು ತಿಳಿದುಬಂದಿದೆ. ನೈಜೀರಿಯಾದ ನಾಲ್ವರು ಪ್ರಜೆಗಳು, ಘಾನಾದ ಇಬ್ಬರು ಪ್ರಜೆಗಳು, ಸುಡಾನ್ ದೇಶದ ಓರ್ವ ಪ್ರಜೆ ಸೇರಿದಂತೆ ಒಟ್ಟು ಒಂಬತ್ತು ವಿದೇಶಿಗರನ್ನು ಸಿಸಿಬಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಬಂಧಿತ 9 ಪ್ರಜೆಗಳನ್ನು ಸ್ವದೇಶಕ್ಕೆ ಕಳುಹಿಸುವ ಪ್ರಕ್ರಿಯೆ ನಡೆಸುತ್ತಿದ್ದು ಆರೋಪಿಗಳನ್ನು ಡಿಟೆನ್ಷನ್ ಸೆಂಟರ್ ನಲ್ಲಿ ಇರಿಸಲಾಗಿದೆ.

Read More

ತುಮಕೂರು : ತುಮಕೂರಿನಲ್ಲಿ ಘೋರ ದುರಂತ ಒಂದು ಸಂಭವಿಸಿದ್ದು, ಚಾಲಕನ ನಿಯಂತ್ರಣ ತಪ್ಪಿ ಬ್ಯಾಂಗಲ್ಸ್ ಸ್ಟೋರ್ ಗೆ ಹಾಗು ಬೇಕರಿಗೆ ಲಾರಿಯೊಂದು ನುಗ್ಗಿದೆ. ಪರಿಣಾಮ ಘಟನೆಯಲ್ಲಿ ಇಬ್ಬರು ಸಾವನ್ನಪ್ಪಿದ್ದು, ಮೂವರಿಗೆ ಗಂಭೀರ ಗಾಯಗಳಾಗಿವೆ. ತುಮಕೂರು ತಾಲೂಕಿನ ಕೊಳ್ಳಲ ಸರ್ಕಲ್ ನಲ್ಲಿ ಒಂದು ಘಟನೆ ನಡೆದಿದೆ. ಮೃತರನ್ನು ರಂಗಧಾಮಯ್ಯ (65) ಬೈಲಪ್ಪ (65) ಎಂದು ತಿಳಿದು ಬಂದಿದೆ. ಗಾಯಗೊಂಡ ನಾಲ್ವರಿಗೆ ತುಮಕೂರು ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನಾ ಸ್ಥಳಕ್ಕೆ ಕೊಳ್ಳಲ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

Read More

ಬಾಗಲಕೋಟೆ : ಬಾಗಲಕೋಟೆಯಲ್ಲಿ ಬೆಚ್ಚಿ ಬೀಳಿಸುವ ಘಟನೆ ಒಂದು ನಡೆದಿದ್ದು, ಅಂಗನವಾಡಿಗೆ ಹೋಗಿದ್ದ ಸಹೋದರನ ಮಗುವನ್ನ ಕೊಲೆ ಮಾಡಲಾಗಿದೆ. ಹುನಗುಂದ ತಾಲೂಕಿನ ಬೆನಕನವಾರಿ ಗ್ರಾಮದಲ್ಲಿ ಒಂದು ಘಟನೆ ನಡೆದಿದೆ. ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಬೆನಕನವಾರಿಯಲ್ಲಿ ಚಾಕುವಿನಿಂದ ಕತ್ತು ಕೊಯ್ದು 3 ವರ್ಷದ ಮಗುವಿನ ಕೊಲೆ ಮಾಡಲಾಗಿದೆ. ಮಾರುತಿ ವಾಲಿಕರ್ ಎಂಬುವವರ ಮಗುಬಿನ ಕೊಲೆ ನಡೆದಿದೆ. ಮಾರುತಿ ಸಹೋದರ ಭೀಮಪ್ಪ ವಾಲೀಕಾರನಿಂದಲೇ ಈ ಒಂದು ಕೃತ್ಯ ನಡೆದಿದೆ. ಅಮಿನಗಡ ಪೊಲೀಸ್ ಠಾಣೆಯಲ್ಲಿ ಘಟನೆ ಕುರಿತಂತೆ ಪ್ರಕರಣ ದಾಖಲಾಗಿದೆ.

Read More

ಕೋಲಾರ : ಕೋಲಾರದಲ್ಲಿ ವಿದ್ಯಾರ್ಥಿಯ ಮೇಲೆ ಕ್ರೌರ್ಯ ಮೆರೆದಿದ್ದು, ದೆವ್ವ ಇದೆ ಎಂದು ತಮಾಷೆ ಮಾಡಿದ್ದಕ್ಕೆ 6ನೇ ತರಗತಿಯ ಮೇಲೆ ಮನಬಂದಂತೆ ಹಲ್ಲೆ ನಡೆಸಲಾಗಿದೆ. ಬಾಸುಂಡೆ ಬರುವಂತೆ ಹಾಸ್ಟೆಲ್ ವಾರ್ಡನ್ ಹಲ್ಲೆ ಮಾಡಿದ್ದಾನೆ. ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿಯ ಮೇಲೆ ವಾರ್ಡನ್ ಈ ರೀತಿ ಕ್ರೌರ್ಯ ಮೆರೆದಿದ್ದಾನೆ. ಅನಂತಪುರ ಗ್ರಾಮದ 6ನೇ ತರಗತಿಯ ವಿದ್ಯಾರ್ಥಿಯ ಮೇಲೆ ವಸತಿ ಶಾಲೆಯಲ್ಲಿ ದೆವ್ವ ಇದೆ ಎಂದು ತಮಾಷೆ ಮಾಡುತ್ತಿದ್ದ. ತಮಾಷೆ ಮಾಡಿದ್ದಕ್ಕೆ ವಾರ್ಡನ್ ಹಲ್ಲೆ ಮಾಡಿದ್ದಾನೆ. ಮುಳಬಾಗಿಲು ತಾಲೂಕು ಬಾಳಸಂದ್ರ ಮೊರಾರ್ಜಿ ವಸತಿ ಶಾಲೆಯಲ್ಲಿ ಈ ಒಂದು ಘಟನೆ ನಡೆದಿದ್ದು ಮೊರಾರ್ಜಿ ವಸತಿ ಶಾಲೆಯಲ್ಲಿ 6ನೇ ತರಗತಿ ವಿದ್ಯಾರ್ಥಿಯ ಮೇಲೆ ವಾರ್ಡನ್ ಮನಬಂದಂತೆ ಥಳಿಸಿದ್ದಾನೆ. ಕೋಲು ಬೆಲ್ಟ್ ನಿಂದ ಹಲ್ಲೆ ಮಾಡಿದ್ದಾನೆ. ಇತ್ತೀಚಿಗೆ ವಿದ್ಯಾರ್ಥಿ ತನ್ನ ತಂದೆಯನ್ನು ಕೂಡ ಕಳೆದುಕೊಂಡಿದ್ದ. ದೆವ್ವ ಇದೆ ಎಂದು ತಮಾಷೆ ಮಾಡುತ್ತಿದ್ದ. ವಿದ್ಯಾರ್ಥಿ ತಮಾಷೆ ಮಾಡುತ್ತಿದ್ದ ಈ ವಿಚಾರವನ್ನು ಉಳಿದ ವಿದ್ಯಾರ್ಥಿಗಳು ವಾರ್ಡನಿಗೆ ತಿಳಿಸಿದ್ದಾರೆ. ಹಾಗಾಗಿ ವಾರ್ಡನ್…

Read More