Subscribe to Updates
Get the latest creative news from FooBar about art, design and business.
Author: kannadanewsnow05
ಮೈಸೂರು : ಮುಡಾ ಪ್ರಕರಣವನ್ನು ತನಿಖೆ ನಡೆಸುತ್ತಿರುವ ಲೋಕಾಯುಕ್ತ ಅಧಿಕಾರಿಗಳ ನಡೆ ಹಲವು ಅನುಮಾನಗಳಿಗೆ ಕಾರಣವಾಗಿದೆ. ಇದೀಗ ಈ ಒಂದು ಪ್ರಕರಣಕ್ಕೆ ಸ್ಪೋಟಕ ತಿರುವು ಸಿಕ್ಕಿದ್ದು, ಲೋಕಾಯುಕ್ತ ಡಿವೈಎಸ್ಪಿ ಎಸ್. ಕೆ ಮಾಲತೇಶ್ ಅವರು ಲೋಕಾಯುಕ್ತ ಸರ್ಚ್ ವಾರೆಂಟ್ ಜಾರಿಯಾದ ಕೂಡಲೇ, ಮುಡಾಗೆ ಬಂದು ಸುಮಾರು 144 ದಾಖಲೆಗಳ ಇರುವಂತಹ ಕಡತಗಳನ್ನು ತೆಗೆದುಕೊಂಡು ಹೋಗಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಹೌದು ಜೂನ್ 28ರಂದು ಲೋಕಾಯುಕ್ತ ಕಚೇರಿ ಮೇಲೆ ದಾಳಿ ನಡೆಸಲು ಸರ್ಚ್ ವಾರಂಟ್ ಜಾರಿಯಾಗಿದ್ದರೂ ಡಿವೈಎಸ್ಪಿ ಮಾಲತೇಶ್ ಎಸ್ ಕೆ ಆದೇಶವನ್ನು ಪಾಲಿಸಿಲ್ಲ, ದಾಳಿಗೆ ಮೊದಲೇ ವಿಷಯವನ್ನು ನಗರಾಭಿವೃದ್ಧಿ ಸಚಿವರಿಗೆ ವಿಷಯವನ್ನು ತಿಳಿಸಲಾಗಿದೆ, ಅಲ್ಲದೆ ಡಿ ವೈ ಎಸ್ ಪಿ ಎಸ್ ಕೆ ಮಾಲತೇಶ್ ಅವರು ಮೈಸೂರು ಪ್ರಾಧಿಕಾರಕ್ಕೆ ಬಂದಿದ್ದರು. ಒಟ್ಟು 144 ಕಡತಗಳನ್ನ ತೆಗೆದುಕೊಂಡು ಹೋಗಿದ್ದರು ಎಂದು ಲೋಕಾಯುಕ್ತವೇ ತನ್ನ ರಿಪೋರ್ಟ್ನಲ್ಲಿ ಉಲ್ಲೇಖಿಸಿತ್ತು. ಮುಡಾದಲ್ಲಿನ ದಾಖಲೆ ಜಪ್ತಿಗೆ ಲೋಕಾಯುಕ್ತ ಸರ್ಚ್ ವಾರೆಂಟ್ ಸಿದ್ಧಪಡಿಸಿಕೊಂಡಿತ್ತು. ಜೂನ್ 28ರ ಸಂಜೆ ಸರ್ಚ್…
ಬೆಂಗಳೂರು : ಇತ್ತೀಚಿಗೆ ಎಲ್ಲೆಡೆ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದೆ. ಅದರಲ್ಲೂ ಮಕ್ಕಳ ಮೇಲೆ ನಾಯಿಗಳು ದಾಳಿ ಮಾಡುತ್ತಿರುವ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ. ಇದೀಗ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ನಗರದಲ್ಲಿ ಶಾಲೆಗೆ ತೆರಳುತ್ತಿದ್ದ ಬಾಲಕನ ಮೇಲೆ ಬೀದಿ ನಾಯಿಗಳು ದಾಳಿ ಮಾಡಿವೆ. ಹೌದು ಶಾಲಾ ಬಾಲಕನ ಬೆಲೆ ಬೀದಿ ನಾಯಿಗಳು ದಾಳಿ ಮಾಡಿವೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ನಗರದಲ್ಲಿ ಈ ಒಂದು ಘಟನೆ ನಡೆದಿದೆ. ಕೂದಲೇಳೆ ಅಂತರದಲ್ಲಿ ಶ್ವಾನ ದಾಳಿಯಿಂದ ಬಾಲಕ ಪಾರಾಗಿದ್ದಾನೆ. ನಾಯಿಗಳ ದಾಳಿಯ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಬೆಳಿಗ್ಗೆ ಶಾಲೆಗೆ ನಡೆದುಕೊಂಡು ಹೋಗುವಾಗ ಬಾಲಕನ ಮೇಲೆ ನಾಯಿ ದಾಳಿ ಮಾಡಿದೆ. ಏಕಾಎಕಿ ಎರಡು ಬೀದಿ ನಾಯಿಗಳು ಬಾಲಕನ ಮೇಲೆ ದಾಳಿ ಮಾಡಿವೆ. ಕೂಡಲೇ ಬಾಲಕ 2 ನಾಯಿಗಳನ್ನು ಶಾಲಾ ಬಾಲಕ ಬೆದರಿಸಿ ಓಡಿಸಿದ್ದಾನೆ.
ಬೆಂಗಳೂರು : ಕಳೆದ ನವೆಂಬರ್ 17ರಂದು ನೆಲಮಂಗಲದ ಗೊಲ್ಲರಹಟ್ಟಿಯ ಬಳಿ ಮಹಿಳೆ ಕರಿಯಮ್ಮನನ್ನು ಬಲಿ ಪಡದಿದ್ದ ಚಿರತೆಯನ್ನು ಅರಣ್ಯ ಅಧಿಕಾರಿಗಳು ಕೊನೆಗೂ ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಹೌದು ನೆಲಮಂಗಲದಲ್ಲಿ ಕೊನೆಗೂ ಚಿರತೆ ಬೋನಿಗೆ ಬಿದ್ದಿದೆ. ಮಹಿಳೆಯನ್ನು ಬಲಿ ಪಡೆದು ಭೀತಿ ಹುಟ್ಟಿಸಿದ ಚಿರತೆಯನ್ನು ಇದೀಗ ಅರಣ್ಯ ಇಲಾಖೆಯ ಕಾರ್ಯಾಚರಣೆಯಲ್ಲಿ ಇದೀಗ ಚಿರತೆ ಸೆರೆಯಾಗಿದೆ. ಗೊಲ್ಲರಹಟ್ಟಿಯ ಕರಿಯಮ್ಮಳನ್ನು ಚಿರತೆ ಬಳಿ ಪಡೆದಿತ್ತು. ನವೆಂಬರ್ 17ಕ್ಕೆ ಮಹಿಳೆ ಬಲಿಯಾಗಿದ್ದಳು. ನೆಲಮಂಗಲದ ಸುತ್ತಮುತ್ತಲು ಈ ಒಂದು ಚಿರತೆ ಭಯ ನಿರ್ಮಾಣ ಮಾಡಿತ್ತು. ಕಳೆದ ಹಲವು ದಿನಗಳಿಂದ ಜಾಗದಲ್ಲಿ ಎಸಿಎಫ್ ಮೊಕ್ಕಂ ಹೂಡಿತ್ತು. ಸುಮಾರು 40 ಜನ ಸಿಬ್ಬಂದಿ ಜೊತೆ ಸೆರೆ ಹಿಡಿಯಲು ಕಾದು ಕುಳಿತಿದ್ದರು. ಇದೀಗ ಎಸಿಎಫ್ ನಿಜಾಮುದ್ದೀನ್ ಚಿರತೆ ಹಿಡಿಯಲು ಯಶಸ್ವಿಯಾಗಿದ್ದಾರೆ. ಆದರೂ ಈ ಪ್ರದೇಶದಲ್ಲಿ ಹಲವಾರು ಚರಿತೆಗಳ ಹಾವಳಿ ಇದೆ ಎನ್ನಲಾಗಿದೆ.
ಬೆಂಗಳೂರು : ಬೆಂಗಳೂರಿನಲ್ಲಿ ನಿನ್ನೆ ಘೋರ ದುರಂತ ಒಂದು ಸಂಭವಿಸಿದ್ದು, ಬಿಬಿಎಂಪಿ ಪಾರ್ಕ್ ನಲ್ಲಿ ಮರ ಬಿದ್ದು ವ್ಯಕ್ತಿ ಸಾವನ್ನಪ್ಪಿರುವ ಘಟನೆ ರಾಜಾಜಿನಗರದ ನವರಂಗ ಪಾರ್ಕ್ ಬಳಿ ಒಂದು ಘಟನೆ ನಡೆದಿದೆ. ಪಾರ್ಕ್ ನಲ್ಲಿ ಮಲಗಿದ್ದ ವೇಳೆ ಮರ ಬಿದ್ದು ಲಕ್ಷ್ಮಣ್ (31) ಎನ್ನುವ ವ್ಯಕ್ತಿ ಸಾವನ್ನಪ್ಪಿದ್ದಾರೆ. ಬೆಂಗಳೂರಿನಲ್ಲಿ ಮೃತ ಲಕ್ಷ್ಮಣ ಸಹೋದರ ಮೂರ್ತಿ ಈ ಒಂದು ಹೇಳಿಕೆ ನೀಡಿದ್ದಾರೆ. ನಿನ್ನೆ ಸಂಜೆ ಮನೆಯಲ್ಲಿ ಊಟ ಮಾಡಿ ಪಾರ್ಕ್ ಗೆ ಹೋಗಿದ್ದರು.ಪಾರ್ಕ್ ನಲ್ಲಿ ಮಲಗಿದ್ದ ವೇಳೆ ಲಕ್ಷ್ಮಣ್ ಮೇಲೆ ಮರ ಬಿದ್ದಿದೆ. ಆಗ ಸ್ಥಳೀಯರು ಕೂಡಲೇ ಲಕ್ಷ್ಮಣನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ನಾವು ಆಸ್ಪತ್ರೆಗೆ ಹೋದಾಗ ಸಹೋದರ ಲಕ್ಷ್ಮಣ ಮೃತಪಟ್ಟಿದ್ದ. ಮತ್ತು ಲಕ್ಷ್ಮಣ್ ಕುಟುಂಬಕ್ಕೆ ಸರ್ಕಾರ ಪರಿಹಾರ ನೀಡಬೇಕು. ಎಂದು ಬೆಂಗಳೂರಿನಲ್ಲಿ ಮೃತ ಲಕ್ಷ್ಮಣ್ ಸಹೋದರ ಮೂರ್ತಿ ಆಗ್ರಹಿಸಿದ್ದಾರೆ. ಇದೀಗ ಸ್ಥಳೀಯರು ಬಿಬಿಎಂಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಬೆಳಗಾವಿ : ಚಲಿಸುತ್ತಿದ್ದ ಕಾರಿನ ಮೇಲೆ ಕಬ್ಬು ಸಾಗಿಸುತ್ತಿದ್ದ ಟ್ರ್ಯಾಕ್ಟರ್ ಪಲ್ಟಿಯಾಗಿ ಕಾರಿನಲ್ಲಿ ಚಲಿಸುತ್ತಿದ್ದ ಮೂವರು ಪ್ರಯಾಣಿಕರಲ್ಲಿ ಓರ್ವ ವ್ಯಕ್ತಿ ಸಾವನ್ನಪ್ಪಿದ್ದು ಇನ್ನೂ ಇಬ್ಬರಿಗೆ ಗಂಭೀರ ಗಾಯಗಳಾಗಿರುವ ಘಟನೆ ಬೆಳಗಾವಿ ಹೊರವಲಯದ ಸುವರ್ಣ ವಿಧಾನಸೌಧದ ಬಳಿ ಈ ಒಂದು ಘಟನೆ ನಡೆದಿದೆ. ಮಧ್ಯರಾತ್ರಿ ಬೆಳಗಾವಿಯಿಂದ ಕಾರಿನಲ್ಲಿ ಹುಬ್ಬಳ್ಳಿಗೆ 3 ಜನರು ಪ್ರಯಾಣಿಸುತ್ತಿದ್ದರು. ಚಲಿಸುತ್ತಿದ್ದ ಕಾರಿನ ಮೇಲೆ ಏಕಾಏಕಿ ಟ್ರ್ಯಾಕ್ಟರ್ ಉರುಳಿ ಬಿದ್ದಿದೆ. ಹುಬ್ಬಳ್ಳಿಯ ಲಕ್ಷ್ಮಿ ನಗರದ ನಿವಾಸಿ ಗಿರೀಶ್ ಕುಲಕರ್ಣಿ (24) ಸಾವನ್ನಪ್ಪಿದ್ದಾರೆ. ಪ್ರಥಮ್ ಎಂಬುವರ ಸ್ಥಿತಿ ಗಂಭೀರವಾಗಿದ್ದು, ಇನ್ನೊರ್ವ ಗಿರೀಶ್ ಗೆ ಸಣ್ಣಪುಟ್ಟ ಗಾಯಗಳಾಗಿವೆ.ಟ್ರ್ಯಾಕ್ಟರ್ ನಲ್ಲಿ ಓವರ್ ಲೋಡ್ ಕಬ್ಬು ತುಂಬಿದ್ದರಿಂದ ಈ ಒಂದು ಅಪಘಾತ ಸಂಭವಿಸಿದೆ ಅಪಘಾತದ ಕುರಿತಂತೆ ಹಿರಿಯ ಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಗಳೂರು : ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಈಗಾಗಲೇ ನಟ ದರ್ಶನ್ ಅವರು ಮಧ್ಯಂತರ ಜಾಮೀನು ಪಡೆದುಕೊಂಡು ಬೆನ್ನು ನೋವಿನ ಚಿಕಿತ್ಸೆಗಾಗಿ ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇದರ ಮಧ್ಯೆ ಕಳೆದ ಎರಡು ದಿನಗಳ ಹಿಂದೆ ಎಸಿಪಿ ಚಂದನ್ ಅವರು ಹೆಚ್ಚುವರಿ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ. ಇದೀಗ ಪೊಲೀಸರು ಮತ್ತಷ್ಟು ತನಿಖೆಯನ್ನು ಚುರುಕುಗೊಳಿಸಿದ್ದು, ಕೊಲೆಗೆ ಸಂಬಂಧಿಸಿದಂತೆ ಹಣದ ವ್ಯವಹಾರ ಆಗಿದೆ ಎಂದು ವಿವಿಧ ಬ್ಯಾಂಕ್ಗಳನ್ನು ತನಿಖೆ ಮಾಡುತ್ತಿದ್ದಾರೆ. ಹೌದು ದರ್ಶನ್ ಅವರು ಕೊಲೆ ಮುಚ್ಚಿ ಹಾಕಲು ದೊಡ್ಡ ಮೊತ್ತದ ಹಣ ನೀಡಿದ್ದಾರೆ ಎನ್ನುವ ಆರೋಪ ಇದೆ. ಒಂದಷ್ಟು ಹಣದ ವ್ಯವಹಾರ ಕ್ಯಾಶ್ ಮೂಲಕ ಆಗಿದೆ. ಒನ್ನೊಂದಷ್ಟು ಹಣದ ವ್ಯವಹಾರ ಆನ್ಲೈನ್ ಮೂಲಕ ಆಗಿರೋ ಸಾಧ್ಯತೆ ಇರುತ್ತದೆ. ಈ ಬಗ್ಗೆ ಪೊಲೀಸರಿಗೆ ಅನುಮಾನ ಬಂದಿದೆ. ಹಾಗಾಗಿ ಪೊಲೀಸರು ಆರೋಪಿಗಳಿಗೆ ಸಂಬಂಧಿಸಿದಂತೆ ಆಧಾರ್ ಕಾರ್ಡ್ ಹಾಗೂ ಖಾತೆಯ ಲಿಂಕ್ ಗಳನ್ನು ನೀಡುವಂತೆ ಬ್ಯಾಂಕ್ಗಳಿಗೆ ಮನವಿ ಮಾಡಿತ್ತು. ಅದರ ಭಾಗವಾಗಿ ಇದೀಗ ಸಂಪೂರ್ಣ…
ಬೆಂಗಳೂರು : ಪತ್ನಿಯ ಶೀಲ ಶಂಕಿಸಿ ಪತಿಯೊಬ್ಬ ವೆಲ್ ನಿಂದ ಕುತ್ತಿಗೆ ಬಿಗಿದು ಪತ್ನಿಯನ್ನು ಭೀಕರವಾಗಿ ಕೊಂದು ಎಸ್ಕೇಪ್ ಆಗಿರುವ ಘಟನೆ ನಗರದ ಗಂಗೊಂಡನಹಳ್ಳಿಯಲ್ಲಿ ನಡೆದಿದೆ. ಗೌಸಿಯ ಬಿ ಕೊಲೆಯಾದ ಮಹಿಳೆ. ಇಮ್ರಾನ್ ಎಂಬಾತನೇ ಪತ್ನಿಯನ್ನ ಕೊಲೆಗೈದು ಎಸ್ಕೇಪ್ ಅದ ಆರೋಪಿಯಾಗಿದ್ದಾನೆ. ಶುಕ್ರವಾರ ಈ ಒಂದು ಕೊಲೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಚಂದ್ರಾ ಲೇಔಟ್ ನಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿ ಇಮ್ರಾನ್ ಫ್ಯಾಬರಿಕ್ ಕೆಲಸ ಮಾಡಿಕೊಂಡಿದ್ದನು. ಕೊಲೆ ಮಾಡಿ ಎಸ್ಕೇಪ್ ಆಗುವಾಗ ಸಹೋದ್ಯೋಗಿಗಳ ಜೊತೆ ಹಣ ಕೇಳಿದ್ದ ಆರೋಪಿ ಇಮ್ರಾನ್. ಆತನ ಸಹೋದ್ಯೋಗಿಗಳು ತುಮಕೂರಿನಲ್ಲಿ ಕೆಲಸ ಮಾಡುತ್ತಿದ್ದರು. ಈ ವಿಚಾರವನ್ನು ಕೆಲಸಗಾರರು ಮಾಲೀಕರಿಗೆ ಹೇಳಿದ್ದರು. ಇಮ್ರಾನ್ ಹಣ ಕೇಳಿಕೊಂಡು ಬಂದಿರುವುದಾಗಿ ಹೇಳಿದ್ರು. ಹಣ ಕೇಳಿಕೊಂಡು ಬಂದಿರುವ ವಿಚಾರವನ್ನು ಮಾಲೀಕ ಕೊಲೆಯಾದ ಗೌಸಿಯಾ ಕುಟುಂಬಸ್ಥರಿಗೆ ಹೇಳಿದ್ದರು. ಈ ವೇಳೆ ಗೌಸಿಯ ಸಹೋದರ ಮನೆಗೆ ಹೋದಾಗ ಮನೆಯ ಚಿಲಕ ಹಾಕಿದರಿಂದ ಎಲ್ಲೋ ಹೊರಗಡೆ ಹೋಗಿರಬೇಕು ಎಂದು ಅವರು ವಾಪಸ್ ಆಗಿದ್ದಾರೆ.…
ಚಿಕ್ಕಮಗಳೂರು : ಚನ್ನಪಟ್ಟಣ ವಿಧಾನಸಭಾ ಉಪಚುನಾವಣೆಯಲ್ಲಿ ನಿಖಿಲ್ ಕುಮಾರಸ್ವಾಮಿ ಸೋತಿದ್ದಕ್ಕೆ ಈಗಾಗಲೇ ಅಭಿಮಾನಿ ಒಬ್ಬರು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಇಂದು ನಿಖಿಲ್ ಕುಮಾರಸ್ವಾಮಿ ಆತ್ಮಹತ್ಯೆಗೆ ಯತ್ನಿಸಿದ ಅಭಿಮಾನಿ ಮಂಜುನಾಥ್ ಅವರ ಮನೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು. ಇದರ ಬೆನ್ನಲ್ಲೇ ನಿಖಿಲ್ ಕುಮಾರಸ್ವಾಮಿ ಅವರ ಮತ್ತೊಬ್ಬ ಅಭಿಮಾನಿ ರಕ್ತದಲ್ಲಿ ಪತ್ರ ಬರೆದು ಧೈರ್ಯ ತುಂಬಿದ್ದಾರೆ. ಹೌದು ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲ್ಲೂಕಿನ ಹರ್ಷಿತ್ ಎಂಬವರು ಪತ್ರ ಬರೆದಿದ್ದಾರೆ. ಪತ್ರದಲ್ಲಿ, ನೀವು ಸೋತಿರಬಹುದು, ಆದರೆ ಜನರ ಮನಸ್ಸಿನಲ್ಲಿದ್ದೀರಿ ಎಂದಿದ್ದಾರೆ. ಎಷ್ಟೋ ನಮ್ಮಂತಹ ನಿಷ್ಠಾವಂತ ಕಾರ್ಯಕರ್ತರಲ್ಲಿ ನಮ್ಮ ಪಕ್ಷದ ಉಸಿರಿದೆ. ಒಂದಲ್ಲ ಒಂದು ದಿನ ಒಳ್ಳೆತನ ಗೆದ್ದೆ ಗೆಲ್ಲಲಿದೆ. ನಿಮ್ಮ ಜೊತೆಗೆ ನಾವಿದ್ದೇವೆ ಜೈ ಜೆಡಿಎಸ್ ಎಂದು ಉಲ್ಲೇಖಿಸಿದ್ದಾರೆ. ಇನ್ನು ನಿನ್ನೆ ಬಂದಂತಹ ಫಲಿತಾಂಶದಲ್ಲಿ, ಚನ್ನಪಟ್ಟಣದಲ್ಲಿ ಎನ್ಡಿಎ ಅಭ್ಯರ್ಥಿ ನಿಖಿಲ್ 87,229 ಮತ ಪಡೆದು ಸೋತಿದ್ದರೆ, ಕಾಂಗ್ರೆಸ್ನಿಂದ ಸಿ.ಪಿ ಯೋಗೇಶ್ವರ್ 1,12,642 ಮತಗಳನ್ನು ಪಡೆದು ಗೆಲವು ಪಡೆದಿದ್ದರು. ನಿಖಿಲ್ ಕುಮಾರಸ್ವಾಮಿ ಸೋಲುತ್ತಿದ್ದಂತೆ ಚನ್ನಪಟ್ಟಣದ ಶ್ರೀರಾಮಪುರದ ನಿಖಿಲ್…
ರಾಯಚೂರು : ರಾಜ್ಯದಲ್ಲಿ ಮತ್ತೊಂದು ಅಮಾನವೀಯ ಘಟನೆ ನಡೆದಿದ್ದು ಹಾಸ್ಟೆಲ್ ವಾರ್ಡನ್ ಒಬ್ಬರು, ಹಾಸ್ಟೆಲ್ ನಲ್ಲಿ ಇರುವಂತಹ ವಿದ್ಯಾರ್ಥಿನಿಯರಿಂದ ಶೌಚಾಲಯ ಸ್ವಚ್ಛಗೊಳಿಸಿದ ಘಟನೆ ರಾಯಚೂರು ಜಿಲ್ಲೆಯ ಮಾನ್ವಿ ಪಟ್ಟಣದ ಬಿಸಿಎಂ ಹಾಸ್ಟೆಲ್ ನಲ್ಲಿ ಈ ಒಂದು ಘಟನೆ ಬೆಳಕಿಗೆ ಬಂದಿದೆ. ರಾಯಚೂರು ಜಿಲ್ಲೆಯ ಮಾನ್ವಿ ಪಟ್ಟಣದ ಮೆಟ್ರಿಕ್ ನಂತರ ಬಿಸಿಎಂ ಬಾಲಕಿಯರ ಹಾಸ್ಟೆಲ್ ಅಲ್ಲಿ ಒಂದು ಘಟನೆ ನಡೆದಿದೆ. ನಿತ್ಯವೂ ಕಾಲೇಜು ವಿದ್ಯಾರ್ಥಿನಿಯರಿಗೆ ವಾರ್ಡನ್ ಕಿರುಕುಳ ನೀಡುತ್ತಿದ್ದಾರೆ. ವಾರ್ಡನ್ ರಜಿಯಾ ಸುಲ್ತಾನ ವಿರುದ್ಧ ಇದೀಗ ವಿದ್ಯಾರ್ಥಿನಿಯರು ಗಂಭೀರವಾದ ಆರೋಪ ಮಾಡಿದ್ದಾರೆ. ಓದಬೇಕೆಂದು ವಿಧ್ಯಾರ್ಥಿಗಳು ಹೇಳಿದರು ವಾರ್ಡನ್ ಕಿರಿಕಿರಿ ಮಾಡುತ್ತಿದ್ದಾರೆ ಕಿರಿಕಿರಿ ತಾಳಲಾರದೆ ಸಂಬಂಧಪಟ್ಟ ಅಧಿಕಾರಿಗಳಿಗೆ ಹಾಸ್ಟೆಲಿನ ವಿದ್ಯಾರ್ಥಿಗಳು ಪತ್ರ ಬರೆದಿದ್ದಾರೆ. ಪತ್ರದಲ್ಲಿ ಸ್ಟೂಡೆಂಟ್ಸ್ ಅಳಲು ತೋಡಿಕೊಂಡಿದ್ದಾರೆ. ಸದ್ಯ ಶೌಚಾಲಯ ತೊಳಿಯುತ್ತಿರುವ ವಿಡಿಯೋ ಸದ್ಯ ವೈರಲ್ ಆಗಿದೆ.
ಮಂಗಳೂರು : ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯ ಅಕ್ರಮ ಹಣಕಾಸು ಬಗ್ಗೆ ಕಾಂಗ್ರೆಸ್ ಎಂಎಲ್ಸಿ ಹರಿಪ್ರಸಾದ್ ಆರೋಪ ಮಾಡಿದ್ದಾರೆ. ಕಂಟೇನರ್ಗಳಲ್ಲಿ ಹಣ ಬಂದಿದ್ದು, ತೂಕದ ಮೂಲಕ ಖರ್ಚು ಮಾಡಲಾಗಿದೆ ಎಂದು ಗಂಭೀರವಾಗಿ ಆರೋಪಿಸಿದ್ದಾರೆ. ಮಂಗಳೂರಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಮಹಾ ವಿಕಾಸ ಅಘಾಡಿ ಸೋಲಾಗಿದೆ. ಬಿಜೆಪಿಯಿಂದ ಮಹಾರಾಷ್ಟ್ರಕ್ಕೆ ಕಂಟೈನರ್ನಲ್ಲಿ ಹಣ ಬಂದಿದೆ. ಹಣ ಎಣಿಸುವ ಮಷಿನ್ ಬಿಟ್ಟು ತೂಕದ ಲೆಕ್ಕದಲ್ಲಿ ಖರ್ಚು ಮಾಡಿದ್ದಾರೆ ಎಂದು ಕಾಂಗ್ರೆಸ್ ಎಂಎಲ್ಸಿ ಹರಿಪ್ರಸಾದ್ ಆರೋಪ ಮಾಡಿದ್ದಾರೆ. ಕರ್ನಾಟಕದಲ್ಲಿ ಎಲ್ಲೂ ಸಹ ಕೋಮು ಸೌಹಾರ್ದ ಕದಡಲು ಅವಕಾಶ ನೀಡಿಲ್ಲ. ರಾಜ್ಯದಲ್ಲಿ ಬೇರೆ ಪಕ್ಷಗಳು ಭಾರಿ ಹಣದ ಹೊಳೆ ಹರಿಸಿತ್ತು. ನಾವು ಕೂಡ ಅವರಿಗಿಂತ ಹೆಚ್ಚು ಪೈಪೋಟಿ ನೀಡಿದ್ದೇವೆ. ನಾವೇನು ಖಾವಿ ತೊಟ್ಟ ಸನ್ಯಾಸಿಗಳಲ್ಲ.ಅವರ ಹಣ, ಹೆಂಡಕ್ಕೆ ನಾವು ತಕ್ಕ ಉತ್ತರ ಕೊಟ್ಟಿದ್ದೇವೆ. ಆ ಮೂಲಕ ಕರ್ನಾಟಕದಲ್ಲಿ ಹಣ, ಹೆಂಡ ನೀಡಿದ್ದಾಗಿ ಒಪ್ಪಿಕೊಂಡರು. ನಮ್ಮ ಕೆಲಸದ ಮೂಲಕ ಕೂಡ ಉತ್ತರ ಕೊಟ್ಟಿದ್ದೇವೆ. ಬಿಜೆಪಿ ಚುನಾವಣೆಗೂ…














