Author: kannadanewsnow05

ಚಿಕ್ಕಮಗಳೂರು : ಯುವಕನೊಬ್ಬ ಯುವತಿಯನ್ನು ಪ್ರೀತಿಸಿ 5 ಲಕ್ಷ ಹಣ ಪಡೆದು ಕೈ ಕೊಟ್ಟು ಬೇರೆ ಯುವತಿಯ ಜೊತೆಗೆ ಮದುವೆ ಆಗೋಕೆ ರೆಡಿ ಆಗಿದ್ದಾನೆ. ಈ ವೇಳೆ ಮದುವೆ ಮಂಟಪಕ್ಕೆ ನುಗ್ಗಿ ಪ್ರಿಯತಮೆ ಗಲಾಟೆ ಮಾಡಿದ್ದಾಳೆ. ಯುವಕನ ಮದುವೆಯ ವೇಳೆ ಯುವತಿ ರಂಪಾಟ ಮಾಡಿರುವ ಘಟನೆ ಚಿಕ್ಕಮಗಳೂರಲ್ಲಿ ನಡೆದಿದೆ. ಚಿಕ್ಕಮಗಳೂರಲ್ಲಿ ಯುವತಿ ಅಶ್ವಿನಿ ರಣಚಂಡಿ ಅವತಾರ ತಾಳಿದ್ದು, ದೊಡ್ಡೇಗೌಡ ಕಲ್ಯಾಣ ಮಂಟಪದಲ್ಲಿ ಯುವತಿ ಮದುವೆ ಮನೆಗೆ ನುಗ್ಗಿ ಗಲಾಟೆ ಮಾಡಿದ್ದಾಳೆ. ಪ್ರೀತಿಸಿ ಮೋಸ ಮಾಡಿದ್ದಾಗಿ ಶರತ್ ವಿರುದ್ಧ ಅಶ್ವಿನಿ ಆರೋಪ ಮಾಡಿದ್ದಾಳೆ ಶರತ್ ಮತ್ತು ಫ್ಯಾಮಿಲಿ ವಿರುದ್ಧ ಯುವತಿ ಅಶ್ವಿನಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಿನ್ನೆ ಮನೆಯ ಮುಂದೆ ಇವತ್ತು ನೇರವಾಗಿ ಮದುವೆ ಮಂಟಪಕ್ಕೆ ನುಗ್ಗಿ ಗಲಾಟೆ ಮಾಡಿದ್ದಾರೆ. ಚಿಕ್ಕಮಂಗಳೂರು ನಗರದ ಕಲ್ಯಾಣ ನಗರದ ಯುವಕ ಶರತ್ ಅಶ್ವಿನಿಯನ್ನು ಪ್ರೀತಿ ಮಾಡುತ್ತಿದ್ದನಂತೆ ಆದರೆ ಈಗ ಪ್ರೀತಿಸಿ ಕೈ ಕೊಟ್ಟು ಬೇರೆಯವರೊಂದಿಗೆ ಮದುವೆಯಾಗಲು ಶರತ್ ಮುಂದಾಗಿದ್ದ. ಅಲ್ಲದೇ ಅಶ್ವಿನಿ ಹತ್ತಿರ 5 ಲಕ್ಷ ಹಣ…

Read More

ಬೆಂಗಳೂರು : ನಗರದಲ್ಲಿ ಮೈ ಕೊರೆಯುವ ಚಳಿ ಮುಂದುವರಿದಿದ್ದು, ಜನ ಜೀವನದ ಮೇಲೆ ಪರಿಣಾಮ ಬೀರಿದೆ. ಕನಿಷ್ಠ ತಾಪಮಾನವು 14 ರಿಂದ 15 ಡಿಗ್ರಿ ಸೆಲ್ಸಿಯಸ್‌ಗೆ ಕುಸಿದಿದೆ. ವಿಶೇಷವಾಗಿ ಹೆಚ್‌ಎಎಲ್ ವ್ಯಾಪ್ತಿಯಲ್ಲಿ ನಿನ್ನೆ 13 ಡಿಗ್ರಿ ಸೆಲ್ಸಿಯಸ್ ಕನಿಷ್ಠ ತಾಪಮಾನ ದಾಖಲಾಗಿದೆ. ಚಳಿ ಹಾಗೂ ಶೀತಗಾಳಿಯಿಂದಾಗಿ ಬೆಳಗ್ಗೆ ವಾಕಿಂಗ್‌ಗೆ ಹೋಗಲು ಸಹ ಜನರು ಹಿಂದೇಟು ಹಾಕುತ್ತಿದ್ದಾರೆ. ಡಿಸೆಂಬರ್ 14, 15 ಮತ್ತು 16ರಂದು ರಾಜ್ಯಾದ್ಯಂತ ಇದೇ ರೀತಿಯ ಚಳಿ ಮುಂದುವರೆಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಉತ್ತರ ಕರ್ನಾಟಕದ ಬೀದರ್, ಕಲಬುರಗಿ, ಯಾದಗಿರಿ, ವಿಜಯಪುರ, ಬಾಗಲಕೋಟೆ, ಕೊಪ್ಪಳ, ಬೆಳಗಾವಿ, ಧಾರವಾಡ, ಹಾವೇರಿ ಹಾಗೂ ಗದಗ ಜಿಲ್ಲೆಗಳಲ್ಲಿ ಕನಿಷ್ಠ ತಾಪಮಾನ 9 ರಿಂದ 11 ಡಿಗ್ರಿ ಸೆಂಟಿಗ್ರೇಡ್ ತಲುಪುವ ಸಾಧ್ಯತೆಯಿದೆ. ದಕ್ಷಿಣ ಒಳನಾಡಿನ ಹೆಚ್ಚಿನ ಜಿಲ್ಲೆಗಳಲ್ಲಿ ಕನಿಷ್ಠ ತಾಪಮಾನ ಸುಮಾರು 12 ಡಿಗ್ರಿ ಸೆಲ್ಸಿಯಸ್ ಆಸುಪಾಸಿನಲ್ಲಿ ಇರಲಿದೆ. ಮುಂದಿನ ಎರಡು ದಿನಗಳಲ್ಲಿ ಇನ್ನೂ ಹೆಚ್ಚಿನ ಚಳಿ ಹಾಗೂ ಶೀತಗಾಳಿ ಇರಲಿದೆ.…

Read More

ಬೆಂಗಳೂರು : ಕಳೆದ ಕೆಲವು ದಿನಗಳ ಹಿಂದೆ ಗೋವಾದಲ್ಲಿ ಪಬ್ನಲ್ಲಿ ಭೀಕರ ಅಗ್ನಿ ಅವಘಡ ಸಂಭವಿಸಿ 25 ಜನರು ದುರ್ಮರಣ ಹೊಂದಿದ್ದರು. ಇದರ ಬೆನ್ನಲ್ಲೇ ಹೊಸ ವರ್ಷ ಆಚರಣೆಯಲ್ಲಿ ಬೆಂಗಳೂರಿನಲ್ಲಿ ಪೊಲೀಸರು ಫುಲ್ ಅಲರ್ಟ್ ಆಗಿದ್ದಾರೆ ಹೊಸ ವರ್ಷದ ಮುನ್ನ ಪೊಲೀಸರು ಬೆಂಗಳೂರಿನ ಎಲ್ಲಾ ಪಬ್ ಕ್ಲಬ್ಗಳ ಮೇಲೆ ಹದ್ದಿನ ಕಣ್ಣು ಇಟ್ಟಿದ್ದಾರೆ. ಹೌದು ಹೊಸ ವರ್ಷಾಚರಣೆಗೊ ಮುನ್ನ ಪೊಲೀಸರು ಇದೀಗ ಬೆಂಗಳೂರಿನಲ್ಲಿ ಹದ್ದಿನ ಕಣ್ಣು ಇಟ್ಟಿದ್ದಾರೆ. ಗೋವಾ ಅಗ್ನಿ ದುರಂತದ ಬೆನ್ನಲ್ಲೇ ಬೆಂಗಳೂರಿನಲ್ಲಿ ಪೊಲೀಸರು ಫುಲ್ ಅಲರ್ಟ್ ಆಗಿದ್ದಾರೆ. ಬೆಂಗಳೂರು ಪೊಲೀಸರಿಂದ ಇದೀಗ ಆಪರೇಷನ್ ಪಬ್ ಶುರು ಆಗಿದೆ ವಾಹನಗಳು, ಪಬ್ ರೆಸ್ಟೋರೆಂಟ್ ಗಳಲ್ಲಿ ಪರಿಶೀಲನೆ ನಡೆಸುತ್ತಿದ್ದಾರೆ ಹೊಸ ವರ್ಷ ಆಚರಣಿಗೆ ಇನ್ನೇನು ಕೆಲವೇ ದಿನಗಳು ಬಾಕಿ ಇದೆ ಬೆಂಗಳೂರು ಪೊಲೀಸರು ಅಲರ್ಟ್ ಆಗಿದ್ದಾರೆ. ಏಕೆಂದರೆ ಗೋವಾದಲ್ಲಿ ಅಗ್ನಿ ದುರಂತ ಬೆನ್ನಲ್ಲೇ ಪೊಲೀಸರು ಇದೀಗ ಬೆಂಗಳೂರಿನಲ್ಲಿ ಮುಂಜಾಗ್ರತೆ ವಹಿಸಿದ್ದಾರೆ.

Read More

ಚಾಮರಾಜನಗರ : ಮನೆಯಲ್ಲಿ ನೇಣು ಬಿಗಿದುಕೊಂಡು ನರ್ಸಿಂಗ್ ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಹೊಸ ಹಂಪಾಪುರದಲ್ಲಿ ಒಂದು ಘಟನೆ ನಡೆದಿದೆ. ಮನೆಯಲ್ಲಿ ನೇಣು ಬಿಗಿದುಕೊಂಡು ಅಂತಿಮ ವರ್ಷದ ನರ್ಸಿಂಗ್ ವಿದ್ಯಾರ್ಥಿನೀ ಪ್ರಿಯಾಂಕಾ ಆತ್ಮಹತ್ಯೆಗೆ ಶರಣಾಗಿದ್ದಾಳೆ.ಕೆ ಎಮ್ ದೊಡ್ಡಿ ನರ್ಸಿಂಗ್ ಕಾಲೇಜಿನಲ್ಲಿ ಪ್ರಿಯಾಂಕ ಓದುತ್ತಿದ್ದಳು. ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಕೆಎಂ ದೊಡ್ಡಿ ನರ್ಸಿಂಗ್ ಕಾಲೇಜಿನಲ್ಲಿ ಪ್ರಿಯಾಂಕ ಓದುತ್ತಿದ್ದಳು. ಇನ್ನು ಎರಡು ತಿಂಗಳಲ್ಲಿ ನರ್ಸಿಂಗ್ ಕೋರ್ಸ್ ಮುಗಿಯುತ್ತಿತ್ತು. ನಿನ್ನೆ ಸಂಜೆ ಮನೆಯಲ್ಲಿ ಯಾರು ಇಲ್ಲದ ವೇಳೆ ಪ್ರಿಯಾಂಕ ನೇಣಿಗೆ ಶರಣಾಗಿದ್ದಾಳೆ. ಘಟನಾ ಸ್ಥಳಕ್ಕೆ ಕೊಳ್ಳೇಗಾಲ ಪಟ್ಟಣ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ ಮರಣೋತ್ತರ ಪರೀಕ್ಷೆ ನಡೆಸಿ ಮೃತದೇಹವನ್ನು ಪೋಷಕರಿಗೆ ಹಸ್ತಾಂತರಿಸಲಾಗಿದೆ ಯೂಡಿಆರ್ ಕೇಸ್ ದಾಖಲಿಸಿಕೊಂಡು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

Read More

ಬೆಂಗಳೂರು : ಸದ್ಯ ಕರ್ನಾಟಕ ರಾಜ್ಯದಲ್ಲಿ ನಾಯಕತ್ವ ಬದಲಾವಣೆ ವಿಚಾರವಾಗಿ ಭಾರಿ ಚರ್ಚೆ ನಡೆಯುತ್ತಿದ್ದು, ಒಂದು ಕಡೆ ಸಿಎಂ ಸಿದ್ದರಾಮಯ್ಯ ಡಿಸಿಎಂ ಡಿಕೆ ಶಿವಕುಮಾರ್ ಬ್ರೇಕ್ ಫಾಸ್ಟ್ ಮೂಲಕ ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ ಎಂದು ಒಗ್ಗಟ್ಟಿನ ಮಂತ್ರ ಜಪಿಸುತ್ತಿದ್ದರೆ, ಮತ್ತೊಂದು ಕಡೆ ಸಿದ್ದರಾಮಯ್ಯ ಪುತ್ರ ಯತಿಂದ್ರ ಅವರು ಸದ್ಯ ರಾಜ್ಯದಲ್ಲಿ ಯಾವುದೇ ನಾಯಕತ್ವ ಬದಲಾವಣೆ ಇಲ್ಲ ಅಂತ ಹೇಳುತ್ತಿದ್ದಾರೆ. ಇನ್ನು ಮತ್ತೊಂದು ಕಡೆ ಇಕ್ಬಾಲ್ ಹುಸೇನ್ ಜನವರಿಯಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಸಿಎಂ ಆಗಲಿದ್ದಾರೆ ಎಂದು ಭವಿಷ್ಯ ನೋಡಿದಿದ್ದಾರೆ. ಇದರ ಮಧ್ಯ ಸಾಮಾಜಿಕ ಜಾಲತಾಣದಲ್ಲಿ ನಟ ದರ್ಶನ್ ಅವರೇ ಕರ್ನಾಟಕದ ನೆಕ್ಸ್ಟ್ ಸಿಎಂ ಎಂದು ಹಲವು ಪೋಸ್ಟ್ಗಳು ಹರಿದಾಡುತ್ತಿವೆ. ಹೌದು ಒಂದು ಕಡೆ ರಾಜ್ಯಾದ್ಯಂತ ಸಿನಿಮಾ ಭರ್ಜರಿ ಪ್ರದರ್ಶನ ಕಾಣುತ್ತಿದ್ದರೆ ಮತ್ತೊಂದು ಕಡೆ ಅವರ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ದರ್ಶನ್ ಅವರಿಗೆ ಸಿಎಂ ವೇಷ ತುದಿಸಿ ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಗು ರೀಲ್ಸ್ಗಳನ್ನು ಹಂಚಿಕೊಳ್ಳುತ್ತಿದ್ದಾರೆ.…

Read More

ಹಾವೇರಿ : ರಾಜ್ಯಾದ್ಯಂತ ಡೆವಿಲ್ ಸಿನೆಮಾ ಭರ್ಜರಿ ಪ್ರದರ್ಶನ ಕಾಣುತ್ತಿದ್ದೂ, ಇದರ ಮಧ್ಯ ದರ್ಶನ್ ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಕರ್ನಾಟಕದ ನೆಕ್ಸ್ಟ್ ಸಿಎಂ ದರ್ಶನ್ ಎಂದು ಪೋಸ್ಟ್ ಹಂಚಿಕೊಂಡು ಸಂಭ್ರಮಿಸುತ್ತಿದ್ದಾರೆ. ಇದೀಗ ಜನವರಿಯಲ್ಲಿ ದರ್ಶನ್‌ ಅಣ್ಣನಿಗೆ ಜಾಮೀನು ಸಿಗುವ ನಿರೀಕ್ಷೆಯಿದೆ. ಒಂದು ವೇಳೆ ಸಿಗದಿದ್ರೆ ನಾನೇ ಖುದ್ದು ಜೈಲಿಗೆ ಹೋಗಿ ಆಶೀರ್ವಾದ ಪಡೆದು ಬರ್ತೀನಿ ಎಂದು ನಟ ಹಾಗೂ ಸಚಿವ ಜಮೀರ್‌ ಪುತ್ರ ಝೈದ್‌ ಖಾನ್‌ ಹೇಳಿದ್ದಾರೆ. ಹಾವೇರಿಯಲ್ಲಿ ಕಲ್ಟ್‌ ಸಿನಿಮಾ ಪ್ರಮೋಷನ್‌ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನೋವಿನಲ್ಲೂ ದರ್ಶನ್‌ ಅಭಿಮಾನಿಗಳಿಗೆ ಸಕ್ಸಸ್‌ ಸಿನಿಮಾ ಕೊಟ್ಟಿದ್ದಾರೆ. ʻದರ್ಶನʼ ಎಂಬ ಹೆಸರಿನಿಂದ ಸಿನಿಮಾ ಸಕ್ಸಸ್ ಆಗೇ ಆಗುತ್ತದೆ. ಇವೆರಡನ್ನ ನಾನು ಡೆವಿಲ್ ನೋಡಿ ಕಲಿತುಕೊಂಡೆ. ಸಿನಿಮಾ ತುಂಬಾ ಚೆನ್ನಾಗಿ ಇದೆ. ದರ್ಶನ್‌ ಅಣ್ಣನಿಗೆ ಜನವರಿಯಲ್ಲಿ ಬೇಲ್‌ ಸಿಗುವ ನಿರೀಕ್ಷೆಯಿದೆ ಎಂದರು.

Read More

ಬೆಂಗಳೂರು : ಬೆಂಗಳೂರಿನಲ್ಲಿ ಪೊಲೀಸ್ ಕಾನ್ಸ್ಟೇಬಲ್ ನೊಂದಿಗೆ ಮಹಿಳೆ ಪರಾರಿಯಾಗಿರುವ ಘಟನೆ ವರದಿಯಾಗಿದೆ. ಪೊಲೀಸ್ ಕಾನ್ಸ್ಟೇಬಲ್ ರಾಘವೇಂದ್ರನ ಜೊತೆಗೆ ಮೋನಿಕಾ ಇದೀಗ ಪರಾರಿಯಾಗಿದ್ದಾಳೆ. ಎಚ್ಎಸ್ಆರ್ ಪೊಲೀಸ್ ಠಾಣೆಯ ಹೊಯ್ಸಳ ವಾಹನ ಓಡಿಸುತ್ತಿದ್ದ ರಾಘವೇಂದ್ರ ಹಾಗೂ ಮೊದಲ ಗಂಡನನ್ನು ಬಿಟ್ಟು ಮೋನಿಕಾ ಎರಡನೇ ಮದುವೆಯಾಗಿದ್ದಳು. ಇದೀಗ ಎರಡನೇ ಗಂಡನಿಗೂ ಕೈಕೊಟ್ಟು ಪ್ರಿಯಕರ ಕಾನ್ಸ್ಟೇಬಲ್ ಜೊತೆಗೆ ಮೋನಿಕ ಪರಾರಿಯಾಗಿದ್ದಾಳೆ. ಕಾನ್ಸ್ಟೇಬಲ್ ರಾಘವೇಂದ್ರ ನಿಗೂ ಕೂಡ ಮದುವೆಯಾಗಿ ಒಂದು ಮಗುವಿದೆ ಉತ್ತರ ಕರ್ನಾಟಕ ಮೂಲದ ರಾಘವೇಂದ್ರ ಹಾಗೂ ಮೈಸೂರು ಮೂಲದ ಮೋನಿಕಾ ಎಂದು ತಿಳಿದುಬಂದಿದ್ದು, 12 ವರ್ಷದ ಮಗನಿದ್ದರೂ ಕೂಡ ಪ್ರಿಯಕರನ ಜೊತೆಗೆ ಮೋನಿಕ ಪರಾರಿಯಾಗಿದ್ದಾಳೆ. ಇನ್ಸ್ಟಾಗ್ರಾಮ್ ನಲ್ಲಿ ಮೋನಿಕಾಗೆ ಪೊಲೀಸ್ ಕಾನ್ಸ್ಟೇಬಲ್ ರಾಘವೇಂದ್ರನ ಪರಿಚಯ ಆಗಿತ್ತು. ನಂತರ ಪ್ರತಿದಿನ ಕರೆ ಮಾಡಿ ರಾಘವೇಂದ್ರ ಮತ್ತು ಮೋನಿಕಾ ಮಾತನಾಡುತ್ತಿದ್ದರು. ಕಳೆದ ಮೂರು ತಿಂಗಳ ಹಿಂದೆ ಮೋನಿಕಾ ಠಾಣೆಗೆ ದೂರು ನೀಡಿರುತ್ತಾಳೆ. ಗಡನೆಗೆ ಕರೆಸಿ, ಬುದ್ಧಿ ಹೇಳಿ ಅಂತ ಮೋನಿಕ ದೂರು ನೀಡಿರುತ್ತಾಳೆ. ಪತಿ ವಿರುದ್ಧವಾಗಿ ಚಂದ್ರಾ…

Read More

ಬೆಂಗಳೂರು : ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಬಳಿ ಇರುವ ವಿಮಾನ ನಿಲ್ದಾಣ ಪ್ರಾಧಿಕಾರದ ಕಟ್ಟಡ ಉದ್ಘಾಟನೆಗೆ ಇಂದು ಡಿಸಿಎಂ ಡಿಕೆ ಶಿವಕುಮಾರ್ ತೆರಳಿದ್ದರು. ಈ ಒಂದು ಕಾರ್ಯಕ್ರಮದ ಬಳಿಯೇ ಕಾರು ಒಂದು ಏಕಾಏಕಿ ಹೊತ್ತಿ ಉರಿದಿರುವ ಘಟನೆ ನಡೆದಿದೆ. ಡಿಸಿಎಂ ಡಿಕೆ ಶಿವಕುಮಾರ್ ಅವರು ದೇವನಹಳ್ಳಿ ಬಳಿ ಇರುವ ವಿಮಾನ ನಿಲ್ದಾಣ ಪ್ರಾಧಿಕಾರದ ಕಟ್ಟಡ ಉದ್ಘಾಟನೆಗೆ ತೆರಳಿದ್ದರು. ಇದೇ ವೇಳೆ ಕಾರ್ಯಕ್ರಮದ ವೇದಿಕೆಯ ಸಮೀಪವೇ ಕಾರು ಹೊತ್ತಿ ಉರಿದಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯ ಅಂಬಿಕಾಲೇಔಟ್ ನಲ್ಲಿ ಕಾರು ಆಕಸ್ಮಿಕವಾಗಿ ಹೊತ್ತಿ ಉರಿದಿದೆ. ತಕ್ಷಣಕ್ಕೆ ಅಗ್ನಿಶಾಮಕದಳ ಸಿಬ್ಬಂದಿ ಬಂದು ಬೆಂಕಿಯನ್ನು ನಂದಿಸಿದ್ದಾರೆ.

Read More

ದಾವಣಗೆರೆ : ಶಾಸಕ ಇಕ್ಬಾಲ್ ಹುಸೇನ್ ಜನವರಿ 6ನೇ ತಾರೀಕು ಅಥವಾ 9ನೇ ತಾರೀಕಿನಂದು ಡಿಸಿಎಂ ಡಿಕೆ ಶಿವಕುಮಾರ್ ಮುಖ್ಯಮಂತ್ರಿ ಆಗಲಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ ಇವರ ಒಂದು ಹೇಳಿಕೆಗೆ ಶಾಸಕ ಶಿವಗಂಗಾ ಬಸವರಾಜ ಪ್ರತಿಕ್ರಿಯೆ ನೀಡಿದ್ದು ಡಿಕೆ ಶಿವಕುಮಾರ್ ಸಿಎಂ ಆದರೆ ಮೊದಲು ಖುಷಿಪಡುವುದು ನಾನೇ ಡಿಕೆ ಶಿವಕುಮಾರ್ ನನಗೆ ಆರಾಧ್ಯ ದೈವ ಎಂದು ತಿಳಿಸಿದ್ದಾರೆ. ದಾವಣಗೆರೆಯಲ್ಲಿ ಈ ವಿಚಾರವಾಗಿ ಮಾತನಾಡಿದ ಅವರು, ಸಿದ್ದರಾಮಯ್ಯ ಐದು ವರ್ಷ ಸಿಎಂ ಎಂದು ಯತಿಂದ್ರ ಹೇಳಿಕೆ ವಿಚಾರಕ್ಕೆ ಸಂಬಂಧಪಟ್ಟಂತೆ ಹೈಕಮಾಂಡ್ ಗೆ ತಿಳಿಸುವುದಾಗಿ ಹೀಗಾಗಿ ಕಲೆ ಡಿಸಿಎಂ ಡಿಕೆ ಶಿವಕುಮಾರ್ ಹೇಳಿಕೆ ನೀಡಿದ್ದಾರೆ. ಹೈಕಮಾಂಡ್ ಸೂಚನೆಯಂತೆ ಕ್ರಮದ ಬಗ್ಗೆ ತೀರ್ಮಾನ ಮಾತಾಡುತ್ತಾರೆ. ಯತೀಂದ್ರ ಮಾತನಾಡಿದರು ತಪ್ಪು ನಾನು ಮಾತನಾಡಿದರು ಕೂಡ ಅದು ತಪ್ಪೇ. ಈ ಹಿಂದೆ ಮಾತನಾಡಿದವರು ಈಗ ಅನುಭವಿಸುತ್ತಿದ್ದಾರೆ ಎಂದು ಪರೋಕ್ಷವಾಗಿ ಕೆಎನ್ ರಾಜಣ್ಣಗೆ ಶಾಸಕ ಶಿವಗಂಗಾ ಬಸವರಾಜ್ ಟಾಂಗ್ ನೀಡಿದರು. ಜನವರಿ 6 ರಂದು ಡಿಕೆ ಶಿವಕುಮಾರ್ ಪಟ್ಟಾಭಿಷೇಕ ಆದರೆ…

Read More

ಬೆಂಗಳೂರು : ಪ್ರೀತಿಸಿ ಮದುವೆಯಾಗಿದ್ದ ನವ ವಿವಾಹಿತೆ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಕ್ಷುಲ್ಲಕ ವಿಚಾರಕ್ಕೆ ಮನನೊಂದು ಐಶ್ವರ್ಯ (22) ನೇಣಿಗೆ ಶರಣಾಗಿರುವ ಘಟನೆ ಬೆಂಗಳೂರು ಉತ್ತರ ತಾಲೂಕಿನ ಶಾಮ ಭಟ್ಟರ ಪಾಳ್ಯದಲ್ಲಿ ನಡೆದಿದೆ ಏಳು ತಿಂಗಳ ಹಿಂದೆ ಲಕ್ಷ್ಮಿ ನಾರಾಯಣನ ಐಶ್ವರ್ಯ ಮದುವೆಯಾಗಿದ್ದಳು. ತಂಗಿಯ ಬರ್ತಡೇಗೆ ಕರೆದೋಯ್ಯಲಿಲ್ಲ ಎಂದು ಐಶ್ವರ್ಯ ನೊಂದಿದ್ದಾಳೆ . ಈಗ ಹಣವಿಲ್ಲ ಮುಂದಿನ ವರ್ಷ ಕರೆದುಕೊಂಡು ಹೋಗುತ್ತೇನೆ ಅಂತ ಪತಿ ಹೇಳಿದ್ದರು ಇದೇ ವಿಚಾರಕ್ಕೆ ಮನನೊಂದು ಐಶ್ವರ್ಯ ಆತ್ಮಹತ್ಯೆ ಶರಣಾಗಿದ್ದಾಳೆ.ಸ್ಥಳಕ್ಕೆ ಮಾದನಾಯಕನಹಳ್ಳಿ ಪೋಲಿಸಿರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

Read More