Subscribe to Updates
Get the latest creative news from FooBar about art, design and business.
Author: kannadanewsnow05
ಬೆಳಗಾವಿ : ತನ್ನ ಪಾಡಿಗೆ ತಾನು ಎಗ್ ರೈಸ್ ಅಂಗಡಿ ನಡೆಸಿಕೊಂಡು ಹೋಗುತ್ತಿದ್ದ ಯುವಕನನ್ನು ಐವರು ಯುವಕರ ಗ್ಯಾಂಗ್ ಒಂದು ಭೀಕರವಾಗಿ ಕೊಲೆ ಮಾಡಿರುವ ಘಟನೆ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಮುರಗೋಡ ಗ್ರಾಮದಲ್ಲಿ ನಡೆದಿದೆ. ಮುರಗೋಡ ಗ್ರಾಮದಲ್ಲಿ ಸೋಹೇಲ್ ಅಹಮದ್ (17) ಎನ್ನುವ ಯುವಕನನ್ನು ಕೊಲೆ ಮಾಡಲಾಗಿದೆ. ಊರಿನಲ್ಲಿ ಸೋಹೇಲ್ ಅಹ್ಮಫ್ ಎಗ್ ರೈಸ್ ಅಂಗಡಿಯನ್ನು ನಡೆಸಿಕೊಂಡು ಹೋಗುತ್ತಿದ್ದ. ಐವರು ಯುವಕರ ಗ್ಯಾಂಗ್ ನಿಂದ ಸೋಹೈಲ್ ಅಹ್ಮದ್ ಕೊಲೆ ನಡೆದಿರುವ ಶಂಕೆ ವ್ಯಕ್ತವಾಗಿದೆ ಕೊಲೆಗೂ ಮುನ್ನ ಸೋಹಲ್ ಗೆ ಜೀವ ಬೆದರಿಕೆ ಹಾಕಿರುವ ಕುರಿತು ಮಾಹಿತಿ ಬಂದಿದೆ. ಸೋಹೈಲ್ ಅಹ್ಮದ್ ಕೊಲೆಗೆ ಸಂಬಂಧಪಟ್ಟಂತೆ ಮುರಗೋಡ ಪೊಲೀಸ್ ಠಾಣೆಯಲ್ಲಿ ಇದೀಗ ಪ್ರಕರಣ ದಾಖಲಾಗಿದ್ದು, ಘಟನಾ ಸ್ಥಳಕ್ಕೆ ಶ್ವಾನದಳ, ಬೆರಳುಚ್ಚು ತಜ್ಞರ ತಂಡ ಭೇಟಿ ನೀಡಿದ್ದು, ಪರಿಶೀಲನೆ ನಡೆಸುತ್ತಿದ್ದರೆ ಎಂದು ತಿಳಿದುಬಂದಿದೆ.
ಮಂಗಳೂರು : ಇತ್ತೀಚಿಗೆ ಕಾಫಿ ನಾಡು ಕೃಷ್ಣ ನಗರಿಯಲ್ಲಿ ನಕ್ಸಲರ ಹೆಜ್ಜೆ ಗುರುತು ಸಿಕ್ಕ 15 20 ದಿನದಲ್ಲಿ ನಕ್ಸಲ್ ನಾಯಕ ವಿಕ್ರಂ ಗೌಡ ಎಎನ್ಎಫ್ ಗುಂಡಿಗೆ ಕಾಡಿನಲ್ಲಿಯೇ ಹತನಾಗಿದ್ದ, ಇದೀಗ ಚಿಕ್ಕಮಂಗಳೂರು ಜಿಲ್ಲೆ ಸುತ್ತಮುತ್ತ ಇನ್ನು ಕರ್ನಾಟಕದ ಇವರು ನಕ್ಸಲರಿಗಾಗಿ ಶೋಧ ನಡೆಸುತ್ತಿದೆ. ಇದರ ಬೆನ್ನಲ್ಲೇ ಗೃಹ ಸಚಿವ ಜಿ ಪರಮೇಶ್ವರ್ ಅವರು ನಕ್ಸಲರು ಶರಣಾದರೆ ಅವರಿಗೆ ಪ್ಯಾಕೇಜ್ ನೀಡುತ್ತೇವೆ ಎಂದು ತಿಳಿಸಿದರು. ಮಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ನಕ್ಸಲರು ಶರಣಾಗತಿ ಆದರೆ ಅವರಿಗೆ ಪ್ಯಾಕೇಜ್ ನೀಡುತ್ತೇವೆ. ಶರಣಾದ ಬಳಿಕ ಸರಳ ಜೀವನ ನಡೆಸಲು ಅವರಿಗೆ ಪ್ಯಾಕೇಜ್ ನೀಡಲಾಗುತ್ತದೆ.ನಕ್ಸಲರು ಮತ್ತು ಅವರ ಜೊತೆಗೆ ಇರೋರನ್ನು ಶರಣಾಗವುಂತೆ ಹೇಳಿದ್ದೇವೆ. ಒಂದು ವೇಳೆ ಏನಾದರೂ ಸರಳ ಜೀವನ ನಡೆಸಲು ಪ್ಯಾಕೇಜ್ ನೀಡುತ್ತೇವೆ ಎಂದು ತಿಳಿಸಿದರು. ಮುಂದುವರೆದ ‘ಕೂಂಬಿಂಗ್’ ಕಾರ್ಯಾಚರಣೆ ಒಂದೂವರೆ ತಿಂಗಳ ಹಿಂದೆ ಕೇರಳದಿಂದ ಬಂದ ನಕ್ಸಲರು 2 ತಂಡ ಮಾಡಿಕೊಂಡು ಉಡುಪಿ-ಚಿಕ್ಕಮಗಳೂರು ಸೇರಿದ್ದರು. ಮುಂಡಗಾರು ಲತಾ ಕಾಡಲ್ಲಿ ಕಾಣೆಯಾದ ಬೆನ್ನಲ್ಲೇ ವಿಕ್ರಂಗೌಡ…
ಮೈಸೂರು : ಈ ಬಾರಿ ರಾಜ್ಯದಲ್ಲಿ ನಡೆದಂತಹ ಮೂರು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಬಿಜೆಪಿ ಹೀನಾಯವಾಗಿ ಸೋಲು ಕಂಡಿದೆ. ಮೂರು ಕ್ಷೇತ್ರಗಳಲ್ಲಿ ಬಿಜೆಪಿ ಹೀನಾಯವಾಗಿ ಸೋಲಲು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಹರಕು ಬಾಯಿಯೆ ಕಾರಣ. ಯತ್ನಾಳ ಅವರ ಬೇಕಾಬಿಟ್ಟಿ ಹೇಳಿಕೆಯಿಂದಲೇ ಮೂರೂ ಕ್ಷೇತ್ರಗಳಲ್ಲಿ ಬಿಜೆಪಿಗೆ ಸೋಲಾಯಿತು ಹಾಗಾಗಿ ಶೀಘ್ರದಲ್ಲಿ ಪಕ್ಷದಿಂದ ಅವರ ಉಚ್ಚಾಟನೆ ಆಗಲಿದೆ ಕಾದು ನೋಡಿ ಎಂದು ಬಿಜೆಪಿ ಮಾಜಿ ಶಾಸಕ ಎಂ ಪಿ ರೇಣುಕಾಚಾರ್ಯ ತಿಳಿಸಿದರು. ಬಿ ಎಸ್ ಯಡಿಯೂರಪ್ಪ ರಾಜಕಾರಣಕ್ಕೆ ಬಂದಾಗ ಇವರು ಇನ್ನು ಕಣ್ಣು ಬಿಟ್ಟಿರಲಿಲ್ಲ ಬಿಎಸ್ ಯಡಿಯೂರಪ್ಪ ಅವರ ಕಾಲಿನ ಧೂಳಿಗೂ ಇವರು ಸಮ ಅಲ್ಲ ಬಿಎಸ್ ಯಡಿಯೂರಪ್ಪ ಗೆ ತೊಂದರೆ ಕೊಡಲು ಕೆಲವರು ಶಕುನಿಗಳಿದ್ದಾರೆ.ಬಿಜೆಪಿಯನ್ನು ಕಟ್ಟಿ ಬೆಳೆಸಿದಿ ಕಾರ್ಯಕರ್ತದ್ದು ಬಿಎಸ್ ಯಡಿಯೂರಪ್ಪ. ವಿಜೇಂದ್ರ ಬಿಜೆಪಿ ಅಧ್ಯಕ್ಷರನ್ನಾಗಿ ಮಾಡಿದ್ದು ಬಿ ಎಸ್ ಯಡಿಯೂರಪ್ಪ ಅಲ್ಲ. ಹೈಕಮಾಂಡ್ ವಿಜಯೇಂದ್ರ ಅವರನ್ನು ಪಕ್ಷದ ಅಧ್ಯಕ್ಷರನ್ನಾಗಿ ಮಾಡಿದೆ. ವಿಜಯೇಂದ್ರಗೆ ಬೈದರೆ ಪಕ್ಷದ ಹಿರಿಯ ನಾಯಕರಿಗೆ ಬೈದಂತೆ.…
ಮಂಗಳೂರು : ಭಾರತದಲ್ಲಿ ಮುಸ್ಲಿಮರಿಗೆ ಮತದಾನದ ಹಕ್ಕು ನೀಡಬಾರದು ಎಂದು ವಿಶ್ವ ಒಕ್ಕಲಿಗರ ಮಠದ ಚಂದ್ರಶೇಖರನಾಥ ಸ್ವಾಮೀಜಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಈ ಕುರಿತಂತೆ ಸ್ವಾಮೀಜಿ ವಿರುದ್ಧ ಎಫ್ಐಆರ್ ಕೂಡ ದಾಖಲಾಗಿದ್ದು, ಪೊಲೀಸರು ವಿಚಾರಣೆಗೆ ಬರುವಂತೆ ನೋಟಿಸ್ ನೀಡಿದ್ದಾರೆ. ಈ ವಿಚಾರವಾಗಿ ಗೃಹ ಸಚಿವ ಪರಮೇಶ್ವರ್ ಮಾತನಾಡಿದ್ದು ಸ್ವಾಮೀಜಿ ಅವರ ವಿಚಾರಣೆಯ ಕುರಿತು ಹಾಗೂ ಬಂಧನದ ಕುರಿತಂತೆ ಪೊಲೀಸರು ತೀರ್ಮಾನಿಸುತ್ತಾರೆ ಎಂದು ತಿಳಿಸಿದರು. ಮಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾನೂನಿನ ಎದುರು ಚಂದ್ರಶೇಖರನಾಥ ಶ್ರೀಗಳು ದೊಡ್ಡವರಲ್ಲ. ಕಾನೂನಿನ ಎದುರು ನಾನು ಸೇರಿ ಸ್ವಾಮೀಜಿಯು ಒಂದೇ. ಈ ದೇಶದಲ್ಲಿರುವ ಎಲ್ಲರಿಗೂ ಕಾನೂನು ಒಂದೇ. ಕಾನೂನಿನ ಚೌಕಟ್ಟಿನಲ್ಲಿ ಪೊಲೀಸರು ಕ್ರಮ ಕೈಗೊಳ್ಳುತ್ತಾರೆ. ಬಂಧನ ಪ್ರಕ್ರಿಯೆ ಬಗ್ಗೆಯೂ ಪೊಲೀಸರು ನೋಡಿಕೊಳ್ಳುತ್ತಾರೆ ಎಂದು ಮಂಗಳೂರಿನಲ್ಲಿ ಗೃಹ ಇಲಾಖೆಯ ಸಚಿವ ಪರಮೇಶ್ವರ್ ಹೇಳಿಕೆ ನೀಡಿದರು. ಹಾಸನ ಸಮಾವೇಶದ ಕುರಿತು ಮಾತನಾಡಿದ ಅವರು, ಅನಾಮಧೇಯ ಪತ್ರವನ್ನು ಬಿಜೆಪಿಯವರೇ ಏಕೆ ಬರೆದಿರಬಾರದು? ಬಿಜೆಪಿಯವರೇ ಅನಾಮಧೇಯ ಪತ್ರ ಬರಿತಾರೆ. ಅದು ನಮಗೆ ಲೆಕ್ಕಕ್ಕೆ…
ಬೆಂಗಳೂರು : ಮುಸ್ಲಿಮರಿಗೆ ಭಾರತದಲ್ಲಿ ಮತದಾನದ ಹಕ್ಕು ನೀಡಬಾರದು ಎಂದು ವಿವಾದಾತ್ಮಕ ಹೇಳಿಕೆ ನೀಡಿದ ವಿಶ್ವ ಒಕ್ಕಲಿಗರ ಮಠದ ಚಂದ್ರಶೇಖರನಾಥ ಸ್ವಾಮೀಜಿಗಳಿಗೆ ಪೊಲೀಸರು ಡಿಸೆಂಬರ್ 2ರಂದು ವಿಚಾರಣೆಗೆ ಹಾಜರಾಗಿ ಎಂದು ನೋಟಿಸ್ ನೀಡಿದ್ದಾರೆ. ಈ ವಿಚಾರವಾಗಿ ಚಂದ್ರಶೇಖರನಾಥ ಸ್ವಾಮೀಜಿಗಳು ನನಗೆ ಆರೋಗ್ಯ ಸರಿ ಇಲ್ಲ ನನಗೆ ವಿಚಾರಣೆಗೆ ಹೋಗಲು ಆಗೋಲ್ಲ ಬೇಕಾದರೆ ಅವರೇ ಇಲ್ಲಿ ಬಂದು ಸ್ಪಷ್ಟನೆ ತೆಗೆದುಕೊಳ್ಳಲಿ ಎಂದು ತಿಳಿಸಿದರು. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಭಾರತ ಎಲ್ಲ ಧರ್ಮದವರ ದೇಶ. ನಮ್ಮ ಮಠಕ್ಕೂ ಮುಸ್ಲಿಂ ಭಕ್ತರಿದ್ದಾರೆ, ನಾನು ಸಹ ಮುಸ್ಲಿಂ ಸಮುದಾಯದ ಮದುವೆಗಳಿಗೆ ಹೋಗ್ತಿನಿ. ಇದಾದ್ಮೇಲೆ ಯಾಕೇ ದೂರು ದಾಖಲಿಸಿಕೊಂಡಿದ್ದಾರೋ ಗೊತ್ತಿಲ್ಲ ಎಂದು ಉಲ್ಟಾ ಹೊಡೆದಿದ್ದಾರೆ.ನೋಟಿಸ್ ನೀಡಿರೋದು ಗೊತ್ತಿಲ್ಲ, ನನಗೆ ಆರೋಗ್ಯ ಸರಿಯಿಲ್ಲ, ನಾನು ವಿಶ್ರಾಂತಿಯಲ್ಲಿದ್ದೆ.ವಿಚಾರಣೆಗೆ ಹೋಗಲು ಆಗೋಲ್ಲ, ಅವ್ರೇ ಇಲ್ಲೇ ಬಂದ್ರೇ ನನ್ನ ಹೇಳಿಕೆಗೆ ಸ್ಪಷ್ಟನೆ ನೀಡ್ತೇನೆ ಎಂದಿದ್ದಾರೆ. ಜೈಲಿಗೆ ಹಾಕ್ತರಾ? ಹಾಕ್ಲಿ ಬಿಡಿ, ಅಲ್ಲೇ ಇರ್ತಿನಿ. ದೇವರ ಮೇಲೆ ಭಾರ ಹಾಕಿದ್ದೀನಿ, ರೈತರ ಪರ ಹೋರಾಟದಲ್ಲಿ ಭಾಗಿಯಾಗಿದ್ದೆ.…
ಮೈಸೂರು : ರಾಜ್ಯ ಬಿಜೆಪಿಯ ಬಣ ಬಡಿದಾಟ ಇದೀಗ ಪೂರ್ತಿ ಬೀದಿಗೆ ಬಂದಿದ್ದು, ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ವಿರುದ್ಧ, ಬಿಜೆಪಿ ಕಾರ್ಯಕರ್ತರೇ ಕಿಡಿ ಕಾರಿದ್ದಾರೆ. ಇಂದು ಮೈಸೂರಿನಲ್ಲಿ ಬಿಜೆಪಿಯ ಹಲವು ಹಿರಿಯ ನಾಯಕರು ಸುದ್ದಿಗೋಷ್ಠಿ ನಡೆಸುವ ಸಂದರ್ಭದಲ್ಲಿ ಯತ್ನಾಳನ್ನು ಉಚ್ಚಾಟನೆ ಮಾಡಿ ಉಗಿದು ಆಚೆ ಹಾಕಿ ಎಂದು ಕೆಂಡಾಮಂಡಲಗೊಂಡರು. ಇಂದು ಬಿ ವೈ ವಿಜಯೇಂದ್ರ ಬಣದ ಎಂಪಿ ರೇಣುಕಾಚಾರ್ಯ ಬಿಸಿ ಪಾಟೀಲ್ ಸೇರಿದಂತೆ ಹಲವು ನಾಯಕರು ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ತೆರಳಿ ಪೂಜೆ ಸಲ್ಲಿಸಿದರು ಬಳಿಕ ಸುದ್ದಿಗೋಷ್ಠಿ ಆರಂಭಿಸಿದಾಗ ಬಿಜೆಪಿ ಹಲವು ಕಾರ್ಯಕರ್ತರು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಆಕ್ರೋಶ ಹೊರ ಹಾಕಿದರು. ಆತನ ಹೇಳಿಕೆಗಳಿಂದ ಪಕ್ಷಕ್ಕೆ ಡ್ಯಾಮೇಜ್ ಆಗುತ್ತಿದೆ ಅಲ್ಲದೆ ಕಾರ್ಯಕರ್ತರ ಹುಮ್ಮಸ್ಸು ಕುಗ್ಗಿಸುತ್ತಿದ್ದಾರೆ ಎಂದು ಏಕವಚನದಲ್ಲೇ ವಾಗ್ದಾಳಿ ನಡೆಸಿದರು. ಅವನು ಮುಖವಾಡ ಹಾಕಿಕೊಂಡಿರುವ ಹಿಂದುತ್ವ ನಾಯಕ. ಅವನನ್ನು ಉಗಿದು ಆಚೆ ಹಾಕಿ ಎಂದು ಕಾರ್ಯಕರ್ತರು ಕೆಂಡಮಂಡಲವಾಗಿದ್ದಾರೆ. ಏಕವಚನದಲ್ಲಿ ಯತ್ನಾಳ್ ವಿರುದ್ಧ ಬಿಜೆಪಿ ಕಾರ್ಯಕರ್ತರು ಕಿಡಿಕಾರಿದ್ದಾರೆ.…
ಹುಬ್ಬಳ್ಳಿ : ವ್ಯವಸ್ಥೆ ತುಂಬಾ ಕೆಟ್ಟಿದೆ ಸಚಿವರ ಭ್ರಷ್ಟಾಚಾರ ನೋಡಿ ಏನಪ್ಪಾ ಇದು ಅಂತ ಅನಿಸುತ್ತಿದೆ ಹಾಗಾಗಿ ವ್ಯವಸ್ಥೆ ಸುಧಾರಣೆ ಮಾಡಬೇಕಿದೆ ಎಂದು ಸಚಿವರು ಆರ್.ಬಿ ತಿಮ್ಮಪೂರ್ ತಿಳಿಸಿದರು. ಈ ಒಂದು ಹೇಳಿಕೆ ಮೂಲಕ ತಿಮ್ಮಾಪುರ್ ಅವರು ಮಂತ್ರಿಗಳ ಭ್ರಷ್ಟಾಚಾರವನ್ನು ಒಪ್ಪಿಕೊಂಡರಾ? ಎನ್ನುವ ಪ್ರಶ್ನೆ ಇದೀಗ ಕಾಡುತ್ತಿದೆ. ಹುಬ್ಬಳ್ಳಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ವ್ಯವಸ್ಥೆ ಕೆಟ್ಟಿದೆ ಸುಧಾರಣೆ ಮಾಡಬೇಕಿದೆ. ಸುಧಾರಣೆ ಮಾಡುವ ಕೆಲಸಕ್ಕೆ ನಾನು ಕೈ ಹಾಕಿದ್ದೇನೆ. ಹೀಗಾಗಿ ನಾವು ಹೊಸ ಯೋಜನೆ ತರಬೇಕಾಗಿದೆ. ಮಂಡ್ಯದಲ್ಲಿ ನಡೆದ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಪಟ್ಟಂತೆ, ಇಬ್ಬರು ಅಧಿಕಾರಿಗಳನ್ನು ಸಸ್ಪೆಂಡ್ ಮಾಡಿದ್ದೇವೆ ಎಂದು ಸಚಿವ ಆರ್ ಬಿ ತಿಮಾಪುರ್ ಭ್ರಷ್ಟಾಚಾರ ನಡೆದಿದ್ದನ್ನು ಒಪ್ಪಿಕೊಂಡ್ರಾ ಎನ್ನುವ ಪ್ರಶ್ನೆ ಮೂಡಿದೆ. ಮಂತ್ರಿಗಳ ಭ್ರಷ್ಟಾಚಾರ ನೋಡಿ ಏನಪ್ಪಾ ಅಂತ ಅನಿಸುತ್ತಿದೆ. ಎಲ್ಲಾ ಮಂತ್ರಿಗಳ ಭ್ರಷ್ಟಾಚಾರ ಇದೆ ವ್ಯವಸ್ಥೆ ಕೆಟ್ಟಿದೆ. ಸುಧಾರಣೆ ಮಾಡಬೇಕಿದೆ ವ್ಯವಸ್ಥೆ ಹಾಗೆ ಇದ್ದರೆ ಟೀಕೆಗಳು ಬರುತ್ತವೆ. ಸುಧಾರಣೆ ಮಾಡುವ ಕೆಲಸಕ್ಕೆ ನಾನು ಕೈ ಹಾಕಿದ್ದೇನೆ ಹೀಗಾಗಿ ಹೊಸ…
ಕಲಬುರ್ಗಿ : ಬಿಜೆಪಿಯವರು ಕ್ರಿಮಿನಲ್ ಕೆಲಸ ಮಾಡುತ್ತಾರೆ. ಅದಾದ ಮೇಲೆ ಜೈ ಶ್ರೀ ರಾಮ್ ಎಂದು ಘೋಷಣೆ ಕೂಗುತ್ತಾರೆ. ಇಂತಹ ಕ್ರಿಮಿನಲ್ ಕೆಲಸಗಳನ್ನು ಮಾಡಿ ಆಮೇಲೆ ಜೈ ಶ್ರೀರಾಮ್ ಎಂದು ಕೂಗಿದರೆ ಮಾಡಿರುವ ಕೆಲಸಗಳು ಮುಚ್ಚಿ ಹೋಗುತ್ತಾ? ಎಂದು ಐಟಿ ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. ಕಲಬುರ್ಗಿಯಲ್ಲಿ ಮಾತನಾಡಿದ ಅವರು, ಸ್ವಾಮೀಜಿ ಆದ ತಕ್ಷಣ ಕಾನೂನು ಬರಲ್ವಾ? ಆರ್. ಅಶೋಕ್ ಸ್ವಾಮೀಜಿಯವರಿಗೆ ಈ ನೆಲದ ಕಾನೂನು ಅನ್ವಯ ಆಗಲ್ವಾ? ತಮ್ಮ ಹೇಳಿಕೆಗೆ ಖುದ್ದು ಚಂದ್ರಶೇಖರನಾಥ ಸ್ವಾಮೀಜಿ ವಿಷಾದ ವ್ಯಕ್ತಪಡಿಸಿದ್ದಾರೆ. ಆದರೆ ಬಿಜೆಪಿ ಸ್ವಾಮೀಜಿಯವರ ಹೇಳಿಕೆ ಸಮರ್ಥನೆ ಮಾಡಿಕೊಳ್ಳುತ್ತಿದೆ. ನಮಗೆ ಬೇರೆ ಕಾನೂನು ನಿಮಗೆ ಬೇರೆ ಕಾನೂನ? ಬಸವಣ್ಣವರನ್ನು ಬಿಜೆಪಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ ಹೇಡಿ ಅಂತಾರೆ. ಇದಕ್ಕೆ ಬಿಜೆಪಿಯವರು ಏನು ಹೇಳುತ್ತಾರೆ? ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ಬಿ ವೈ ವಿಜಯೇಂದ್ರ ಎಲ್ಲಿದ್ದಾರೆ? ಬಸವಣ್ಣ ಅಂದರೆ ನಿಮಗೆ ಅಲರ್ಜಿನ ಎಂದು ಪ್ರಿಯಾಂಕ್ ಖರ್ಗೆ ವಾಗ್ದಾಳಿ…
ಬೆಂಗಳೂರು : ಬೆಂಗಳೂರಿನಲ್ಲಿ ಹಣಕಾಸಿನ ವಿಚಾರಕ್ಕೆ ವ್ಯಕ್ತಿಯ ಬರ್ಬರ ಕೊಲೆ ನಡೆದಿದ್ದು, ಮಾರಾಕಸ್ತ್ರಗಳಿಂದ ಕೊಚ್ಚಿ ಹಲ್ಲೆ ಮಾಡಿ ಅಭಿಷೇಕ್ (36) ಎನ್ನುವ ವ್ಯಕ್ತಿಯನ್ನು ಭೀಕರವಾಗಿ ಕೊಲೆ ಮಾಡಲಾಗಿದೆ. ಎರಡು ದಿನದ ಹಿಂದೆ ಅಂದ್ರಳ್ಳಿಯ ಶಾಲೆಯ ಬಳಿ ಈ ಒಂದು ಗಲಾಟೆ ನಡೆದಿತ್ತು. ಮಾರಕಾಸ್ತ್ರಗಳಿಂದ ಅಭಿಷೇಕ್ ತಲೆಗೆ ಕಾರ್ತಿಕ್ ಎನ್ನುವವ ಹೊಡೆದಿದ್ದ. ಬಳಿಕ ಗಾಯಗೊಂಡಿದ್ದ ಅಭಿಷೇಕ್ ನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಅಭಿಷೇಕ್ ಈಗ ಸಾವನಪ್ಪಿದ್ದಾನೆ. ಆರೋಪಿಗಳಾದ ಕಾರ್ತಿಕ್ ಹಾಗೂ ಚೇತನ್ ಆರೋಪಿಗಳನ್ನು ಇದೀಗ ಪೊಲೀಸರು ಬಂಧಿಸಿದ್ದಾರೆ. ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೈಸೂರು : ರಾಜ್ಯ ಬಿಜೆಪಿಯ ಆಂತರಿಕ ಹಾಗೂ ಬಣ ಬಡಿದಾಟ ಇದೀಗ ಬೀದಿಗೆ ಬಂದಿದ್ದು, ಒಂದೆಡೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ರಾಜ್ಯ ಕಾಂಗ್ರೆಸ್ ಸರ್ಕಾರ ಹಾಗೂ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಹಾಗೂ ಬಿವೈ ವಿಜಯೇಂದ್ರ ವಿರುದ್ಧ ವಾಗ್ದಾಳಿ ಮಾಡುತ್ತಿದ್ದರೆ, ಇನ್ನು ಇತ್ತ ಬಿವೈ ವಿಜಯೇಂದ್ರ ಬೆಂಬಲಿಗರಾದಂತಹ ಎಂ.ಪಿ ರೇಣುಕಾಚಾರ್ಯ, ಬಿಸಿ ಪಾಟೀಲ್ ಸೇರಿದಂತೆ ಹಲವರು ಯತ್ನಾಳ್ ವಿರುದ್ಧ ಕಿಡಿ ಕಾರಿದ್ದಾರೆ. ಕಾದು ನೋಡಿ ಯತ್ನಾಳ್ ಪಕ್ಷದಿಂದ ಉಚ್ಚಾಟನೆ ಆಗ್ತಾರೆ ಎಂದು ಹೊಸ ಬಾಂಬ್ ಸಿಡಿಸಿದರು. ಮೈಸೂರಿನಲ್ಲಿ ಎಂಪಿ ರೇಣುಕಾಚಾರ್ಯ ಹೊಸ ಬಾಂಬ್ ಸಿಡಿಸಿದ್ದು, ಯತ್ನಾಳ ರನ್ನು ಬಿಜೆಪಿ ಪಕ್ಷದಿಂದ ಉಚ್ಚಾಟನೆ ಮಾಡುತ್ತಾರೆ. ಈ ಕೆಲಸ ಅತಿ ಶೀಘ್ರದಲ್ಲಿ ಆಗುತ್ತದೆ ನಮ್ಮ ಪಕ್ಷದಲ್ಲಿ ಆಂತರಿಕ ಶತ್ರುಗಳ ಸಂಖ್ಯೆ ಜಾಸ್ತಿಯಾಗಿದೆ. ಶತ್ರುಗಳ ನಾಶ ಆಗಲೇಬೇಕು ಅದಕ್ಕಾಗಿ ಪೂಜೆ ಮಾಡಿದ್ದೇವೆ ನಾನು ಸ್ಪಷ್ಟವಾಗಿ ಹೇಳುತ್ತಿದ್ದೇವೆ ಯತ್ನಾಳ್ ಉಚ್ಚಾಟನೆ ಆಗುತ್ತಾರೆ ಎಂದು ಮೈಸೂರಿನಲ್ಲಿ ಮಾಜಿ ಶಾಸಕ ಎಂ ಪಿ ರೇಣುಕಾಚಾರ್ಯ ತಿಳಿಸಿದರು. ಚಾಮುಂಡೇಶ್ವರಿ ದೇವಿಯಲ್ಲಿ…
 
		



 









