Author: kannadanewsnow05

ಬೆಂಗಳೂರು : ಐಶ್ವರ್ಯ ಗೌಡ ನಿವಾಸದಲ್ಲಿ 2.25 ಕೋಟಿ ನಗದು ಪತ್ತೆಯಾಗಿದೆ ಎಂದು ಇಡಿ ಅಧಿಕಾರಿಗಳು ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಐಶ್ವರ್ಯ ಗೌಡ, ಮಾಜಿ ಸಚಿವ ವಿನಯ್ ಕುಲಕರ್ಣಿ, ಹಾಗೂ ಶಿಲ್ಪಾಗೌಡ ನಿವಾಸ ಸೇರಿದಂತೆ 14 ಕಡೆ ಇತ್ತೀಚಿಗೆ ಇಡಿ ಅಧಿಕಾರಿಗಳು ದಾಳಿ ನಡೆಸಿದರು. ಕೋಟ್ಯಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ವಂಚಿಸಿದ್ದ ಐಶ್ವರ್ಯ ಗೌಡ. PMLA ಕಾಯ್ದೆಯ ಅಡಿ ಇಡಿ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡಿದ್ದರು. ಹಣ ವರ್ಗಾವಣೆ ಅಪರಾಧದಲ್ಲಿ ಭಾಗಿಯಾಗಿರುವುದು ಕಂಡುಬಂದ ಕಾರಣ ಬೆಂಗಳೂರಿನ ಇಡಿ, ಐಶ್ವರ್ಯ ಗೌಡ ಅವರನ್ನು 24.04.2025 ರಂದು ಪಿಎಂಎಲ್‌ಎ, 2002 ರ ಅಡಿಯಲ್ಲಿ ಬಂಧಿಸಿದೆ. ಬಂಧನದ ನಂತರ, ಅವರನ್ನು ಗೌರವಾನ್ವಿತ ವಿಶೇಷ ನ್ಯಾಯಾಲಯದ (ಪಿಎಂಎಲ್‌ಎ) ಮುಂದೆ ಹಾಜರುಪಡಿಸಲಾಯಿತು. ಮತ್ತು ಗೌರವಾನ್ವಿತ ನ್ಯಾಯಾಲಯವು ಆರೋಪಿಯ ಇಡಿ ಕಸ್ಟಡಿಗೆ ನೀಡಲು ಅದೇಶಿಸಿತು. ಪಿಎಂಎಲ್‌ಎ, 2002 ರ ನಿಬಂಧನೆಗಳ ಅಡಿಯಲ್ಲಿ ಐಶ್ವರ್ಯ ಗೌಡ ಮತ್ತು ಅವರ ಸಹಚರರಿಗೆ ಸಂಬಂಧಿಸಿದ 14 ಸ್ಥಳಗಳಲ್ಲಿ ಇಡಿ 24.04.2025 ಮತ್ತು 25.04.2025 ರಂದು…

Read More

ಬೆಂಗಳೂರು : ನನಗೆ ಜೀವ ಬೆದರಿಕೆ ನನಗೆ ಸೂಕ್ತ ಭದ್ರತೆ ಒದಗಿಸಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಮಹೇಶ್‌ ಜೋಶಿ ಅವರು ಹೈಕೋರ್ಟ್ ಗೆ ರಿಟ್ ಅರ್ಜಿ ಸಲ್ಲಿಸಿದ್ದರು. ಇದೀಗ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ್ಯ ಮಹೇಶ್ ಜೋಶಿ ಅವರಿಗೆ ಅಗತ್ಯವಿದ್ದರೆ ಸೂಕ್ತ ಭದ್ರತೆ ಒದಗಿಸಿ ಎಂದು ರಾಜ್ಯ ಸರ್ಕಾರಕ್ಕೆ ಮೌಖಿಕ ನಿರ್ದೇಶನ ನೀಡಿದೆ. ಕಳೆದ ವರ್ಷ ಮಂಡ್ಯದಲ್ಲಿ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಜರುಗಿದ ಗಳಿಗೆಯಿಂದ ನನಗೆ ಜೀವ ಬೆದರಿಕೆಯ ಆಡಿಯೊ-ವಿಡಿಯೊ ಕರೆಗಳು ಬರುತ್ತಿವೆ. ಇದರಿಂದ ನನ್ನ ಜೀವಕ್ಕೆ ಅಪಾಯವಿದ್ದು, 24×7 ಭದ್ರತೆ ಒದಗಿಸುವ ಗನ್‌ಮೆನ್‌ ಜೊತೆಗೆ ಸೂಕ್ತ ಪೊಲೀಸ್‌ ರಕ್ಷಣೆ ಒದಗಿಸಲು ಸರ್ಕಾರಕ್ಕೆ ನಿರ್ದೇಶಿಸಬೇಕು’ ಎಂದು ಮಹೇಶ್ ಜೋಶಿ ಕೋರಿದ್ದಾರೆ. ಜೋಶಿ ಪರ ಪದಾಂಕಿತ ಹಿರಿಯ ವಕೀಲ ಎಸ್‌.ಬಸವರಾಜು ವಾದ ಮಂಡಿಸಿದ್ದರು. ಈ ವೇಳೆ ವಿಚಾರಣೆ ವೇಳೆ, ಜೋಶಿ ಅವರಿಗೆ ಅಗತ್ಯವಿದ್ದರೆ ಸೂಕ್ತ ಭದ್ರತೆಯನ್ನು ಒದಗಿಸಿ ಎಂದು ಪ್ರಾಸಿಕ್ಯೂಷನ್…

Read More

ಚಾಮರಾಜನಗರ : ಚಾಮರಾಜನಗರದಲ್ಲಿ ಸಂಪುಟ ಸಭೆಯ ಬಳಿಕ ಸಿಎಂ ಸಿದ್ದರಾಮಯ್ಯ ಅವರಿಗೆ ಕೋವಿಡ್ ಸಂದರ್ಭದಲ್ಲಿನ ಕೆಲವು ಸಂತ್ರಸ್ತರು ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಎಂದು ಬೆದರಿಕೆ ಹಾಕಿರುವ ಘಟನೆ ಇದೀಗ ವರದಿಯಾಗಿದೆ. ಕಳೆದ 2021ರ ಮೇ 2 ರಂದು ಚಾಮರಾಜನಗರದಲ್ಲಿ ಈ ಘಟನೆ ನಡೆದಿದ್ದು, ಕೋವಿಡ್ ವೇಳೆ ಇಲ್ಲಿನ ಜಿಲ್ಲಾಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆಯಿಂದ 36 ಜನ ಸಾವನ್ನಪ್ಪಿದರು.ಇದೀಗ ದುರಂತದ ಮೃತರ ಸಂತ್ರಸ್ತ ಕುಟುಂಬಗಳು ರಾಜ್ಯದ ಕಾಂಗ್ರೆಸ್ ಸರಕಾರ ನೀಡಿದ್ದ ಸರಕಾರಿ ನೌಕರಿ ಮತ್ತು ಪರಿಹಾರದ ಭರವಸೆ ಈಡೇರದಿರುವುದರಿಂದ ಕುಟುಂಬಗಳು ಆಕ್ರೋಶ ವ್ಯಕ್ತಪಡಿಸಿವೆ. ಹೌದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರೆ ವೇಳೆ, ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸಂತ್ರಸ್ತ ಕುಟುಂಬಕ್ಕೆ ಸರಕಾರಿ ಉದ್ಯೋಗ ನೀಡುವ ಭರವಸೆ ನೀಡಿದ್ದರು. ಆದರೆ, ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದು ಎರಡು ವರ್ಷ ಕಳೆದರೂ ಈ ಭರವಸೆ ಈಡೇರದೆ ಇರೋದ್ರಿಂದ ಸಂತ್ರಸ್ತರು ಅಸಮಾಧಾನ ವ್ಯಕ್ತಪಡಿಸಿದ್ರು. ಅಲ್ಲದೆ ನಿನ್ನೆ ಸಿಎಂ ಸಿದ್ದರಾಮಯ್ಯ ಅವರು ಬಸವಣ್ಣನವರ ಪ್ರತಿಮೆ ಅಣಾವರಣಕ್ಕೆ…

Read More

ಉತ್ತರಕನ್ನಡ : ಜಮ್ಮು ಕಾಶ್ಮೀರದಲ್ಲಿ ನಡೆದ ಉಗ್ರರ ದಾಳಿಗೆ ಇದೀಗ ಭಾರತೀಯ ಭದ್ರತಾ ಪಡೆ ಸೈನಿಕರು ಪ್ರತಿಕಾರ ತೀರಿಸಿಕೊಳ್ಳಲು ಉಗ್ರರನ್ನು ಅಟ್ಟಾಡಿಸಿಕೊಂಡು ಹೋಗಿ ಹೊಡೆಯಲು ಕಾರ್ಯಾಚರಣೆ ನಡೆಸುತ್ತಿದ್ದಾರೆ. ಇನ್ನು ಇದ್ದ ಉತ್ತರ ಕನ್ನಡ ಜಿಲ್ಲೆಯ ಕಾರವಾರದ ನೌಕಾನೆಲೆಯಲ್ಲಿ ಯುದ್ಧ ಹಡಗುಗಳು ಸಿದ್ಧವಾಗಿದ್ದು, ನೌಕಾದಳದ ಸಿಬ್ಬಂದಿಗಳ ರಜೆಯನ್ನು ಸಹ ಇದೀಗ ಮೋಟಕುಗೊಳಿಸಲಾಗಿದೆ ಎಂದು ತಿಳಿದು ಬಂದಿದೆ. ಹೌದು ಕಾರವಾರ ಕದಂಬ ನೌಕಾನೆಲೆಯಲ್ಲಿ ನೌಕೆಗಳು ಯುದ್ಧಕ್ಕೆ ಸಿದ್ಧವಾಗಿವೆ. ಭಾರತದ ಗಡಿಗೆ ನಿಯೋಜಿಸಲು ಹಡಗುಗಳು ಮತ್ತು ಸಬ್ ಮೆರೀನುಗಳು ಸಿದ್ಧವಾಗಿವೆ. ಉತ್ತರ ಕನ್ನಡ ಜಿಲ್ಲೆಯ ಕಾರವಾರ ನೌಕ ನೆಲೆಯಲ್ಲಿ ಐಎನ್ಎಸ್ ವಿಕ್ರಾಂತ್, ಐಎನ್ಎಸ್ ವಿಶಾಖಪಟ್ಟಣಂ, ಸಬ್ ಮೇರಿನಗಳಾದ ಕಾಂಡೇರಿ ಕರಂಜೆ ಸಿದ್ಧವಾಗಿದೆ. ಕೇವಲ ಕಮಾಂಡರ್ ಸೂಚನೆಗಾಗಿ ಯುದ್ಧ ನೌಕೆಗಳು ಇದೀಗ ಕಾಯುತ್ತಿವೆ. ಸೂಚನೆ ಬಂದ್ರೆ ಸಾಕು ಹಡಗುಗಳು ಗಡಿಯತ್ತ ತೆರಳಲಿವೆ. ಹಡಗನ್ನು ಸಿಬ್ಬಂದಿಗಳು ಯುದ್ಧಕ್ಕೆ ಸಿದ್ಧಪಡಿಸುತ್ತಿವೆ. ಮೇ ಮೊದಲ ವಾರ ಕೊಚ್ಚಿಯಿಂದ ಯುದ್ಧ ಹಡಗುಗಳು ಗಡಿಯತ್ತ ತೆರಳಲಿವೆ. ಕದಂಬ ನೌಕ ನೆಲೆಯಲ್ಲಿ ಐ ಎನ್ ಎಸ್…

Read More

ಬೆಂಗಳೂರು : ಇತ್ತೀಚಿಗೆ ಡಿಜಿಟಲ್ ಅರೆಸ್ಟ್ ಮೂಲಕ ಸೈಬರ್ ವಂಚಕರು ಅನೇಕರನ್ನು ಮೋಸದ ಚಾಲಕ್ಕೆ ಸಿಲುಕಿಸಿ ಲಕ್ಷಾಂತರ ಕೋಟ್ಯಾಂತರ ರೂಪಾಯಿ ಕೊಳೆ ಹೊಡೆದಿದ್ದಾರೆ ಇದೀಗ ಬೆಂಗಳೂರಿನಲ್ಲಿ ಸಹ ಓರ್ವ ಯುವತಿ ಅರೆಸ್ಟ್ ಆಗುವ ಮೂಲಕ 84 ಲಕ್ಷ ರೂಪಾಯಿಯನ್ನು ಕಳೆದುಕೊಂಡಿದ್ದಾಳೆ. ಹೌದು ವಂಚನೆಗೆ ಒಳಗಾದ ಯುವತಿಯನ್ನು ಗರುಡುಚಾರಪಾಳ್ಯ ನಿವಾಸಿ ಕೊಂಡೂರು ಶ್ರೀಮತಿ ಎಂದು ತಿಳಿದುಬಂದಿದೆ. ವಂಚಕ ಆರ್‌ಬಿಐ ಅಧಿಕಾರಿ ಸೋಗಿನಲ್ಲಿ ಯುವತಿಗೆ ವಾಟ್ಸ್‌ಆಯಪ್‌ನಲ್ಲಿ ವಿಡಿಯೋ ಕರೆ ಮಾಡಿದ ಅಪರಿಚಿತ ವ್ಯಕ್ತಿ, ‘ನಿಮ್ಮ ಬ್ಯಾಂಕ್ ಖಾತೆ ಫ್ರೀಜ್ ಆಗಿದೆ’ ಎಂದು ಡಿಜಿಟಲ್ ಆರೆಸ್ಟ್ ಮಾಡಿ 84.56 ಲಕ್ಷ ರೂ. ಸುಲಿಗೆ ಮಾಡಿದ್ದಾನೆ. ಕಳೆದ ಡಿ.13ರಂದು ಶ್ರೀಮತಿಗೆ ಕರೆ ಮಾಡಿದ್ದ ಅಪರಿಚಿತ ವ್ಯಕ್ತಿ, ಆರ್‌ಬಿಐ ಅಧಿಕಾರಿ ಎಂದು ಪರಿಚಯ ಮಾಡಿಕೊಂಡು ‘ನಿಮ್ಮ ಬ್ಯಾಂಕ್ ಖಾತೆಯನ್ನು ಫ್ರೀಜ್ ಮಾಡಲಾಗಿದೆ. ನಿಮ್ಮ ಮೊಬೈಲ್ ನಂಬರ್ ಬಳಸಿಕೊಂಡು ಎಸ್‌ಬಿಐ ಕ್ರೆಡಿಟ್ ಕಾರ್ಡ್‌ನ್ನು ಉಪಯೋಗಿಸಿಕೊಂಡು ಹಣ ವರ್ಗಾವಣೆ ಮಾಡಿಕೊಂಡಿದ್ದಾರೆ. ಆದರಿಂದ ಮುಂಬೈ ಪೊಲೀಸರೊಂದಿಗೆ ಮಾತನಾಡಿ ಎಂದು ನಂಬರ್ ಕೊಟ್ಟಿದ್ದ. ಆ…

Read More

ಕಲಬುರ್ಗಿ : ಕಲಬುರ್ಗಿ : ಜಮ್ಮು ಕಾಶ್ಮೀರದಲ್ಲಿ ಉಗ್ರರ ದಾಳಿ ನಡೆದ ಪ್ರಕರಣಕ್ಕೆ ಸಂಬಂಧಪಟ್ಟಂತೆ ನಿನ್ನೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ದೇಶದ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಖಡಕ್ ಸೂಚನೆ ಕೊಟ್ಟಿದ್ದು ನಿಮ್ಮ ರಾಜ್ಯಗಳಲ್ಲಿನ ಪಾಕಿಸ್ತಾನ ಪ್ರಜೆಗಳನ್ನು ಗುರುತಿಸಿ ಅವರನ್ನು ವಾಪಸ್ ಕಳುಹಿಸಿ ಎಂದು ಸೂಚನೆ ನೀಡಿದ್ದರು. ಇದರ ಬೆನ್ನಲ್ಲೆ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೂಡ ಪಾಕಿಸ್ತಾನ ಪ್ರಜೆಗಳನ್ನು ಗುರುತಿಸಿ ವಾಪಸ್ ಕಳಿಸುತ್ತೇವೆ ಎಂದು ಹೇಳಿಕೆ ನೀಡಿದ್ದಾರೆ. ಇದರ ಬೆನ್ನಲ್ಲೆ ಇದೀಗ ಕಲ್ಬುರ್ಗಿಯಲ್ಲಿದ್ದ ಐವರು ಪಾಕಿಸ್ತಾನಿ ಪ್ರಜೆಗಳು ವಾಪಸ್ ಆಗಿದ್ದಾರೆ ಎಂದು ತಿಳಿದುಬಂದಿದೆ. ನಿನ್ನೆ ಸಂಜೆ ಕಲ್ಬುರ್ಗಿಯಿಂದ ಐವರು ಪಾಕಿಸ್ತಾನಿ ಪ್ರಜೆಗಳು ತೆರಳಿದ್ದಾರೆ. ಕಲ್ಬುರ್ಗಿಯ ಅಶೋಕ್ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪಾಕಿಸ್ತಾನ ಪ್ರಜೆಗಳು ವಾಸವಿದ್ದರು ಎನ್ನಲಾಗಿದೆ. ಇದೆ ವಿಚಾರವಾಗಿ ಕಲ್ಬುರ್ಗಿಯಲ್ಲಿ ಒಟ್ಟು 9 ಜನ ಪಾಕಿಸ್ತಾನಿ ಪ್ರಜೆಗಳು ಇದ್ದಾರೆ ಎಂದು ಕಲ್ಬುರ್ಗಿಗೆ ನಗರ ಪೊಲೀಸ್ ಆಯುಕ್ತ ಡಾ. ಶರಣಪ್ಪ ಮಾಹಿತಿ ನೀಡಿದರು. ಕಳೆದ 20…

Read More

ಬೆಂಗಳೂರು : ರಾಜೀವ್ ಗಾಂಧಿ ಅವರು ಕೊಟ್ಟ ಮೀಸಲಾತಿಯನ್ನು ವಿರೋಧಿಸಿ ನ್ಯಾಯಾಲಯದ ಮೆಟ್ಟಿಲೇರಿದ್ದು ಬಿಜೆಪಿಯ ರಾಮಾ ಜೋಯಿಸ್. ಆದರೆ ನ್ಯಾಯಾಲಯ ರಾಜೀವ್ ಗಾಂಧಿ ಅವರು ತಂದ ತಿದ್ದುಪಡಿಯನ್ನು ಎತ್ತಿ ಹಿಡಿದು, ಇದು ಸಂವಿಧಾನ ಬದ್ಧವಾಗಿದೆ ಎಂದು ಹೇಳಿತು. ಮೀಸಲಾತಿಯನ್ನು ವಿರೋಧಿಸಿದ್ದ ಬಿಜೆಪಿ ಮಂಡಲ್ ವರದಿಯನ್ನೂ ವಿರೋಧಿಸಿತು. ಹೀಗಾಗಿ ಇತಿಹಾಸ ಮತ್ತು ಸಿದ್ಧಾಂತದ ಬಗ್ಗೆ ನಿಮಗೆ ಸ್ಪಷ್ಟತೆ ಇದ್ದರೆ ಮುಂದೆ ಉತ್ತಮ‌ ನಾಯಕರಾಗಿ ಬೆಳೆಯುತ್ತೀರಿ. ಯುವ ಕಾಂಗ್ರೆಸ್ ಇಂದು ಇಲ್ಲಿ ಆಯೋಜಿಸಿರುವ ಇಂತಹ ಕಾರ್ಯಾಗಾರಗಳು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ನಡೆಯಬೇಕು ಎಂದು ಯುವ ಕಾಂಗ್ರೆಸ್ ಆಯೋಜಿಸಿದ್ದ “ಯುವ ಕ್ರಾಂತಿ” ಕಾರ್ಯಕರ್ತರ ತರಬೇತಿ ಶಿಬಿರದಲ್ಲಿ ಸಿಎಂ ಸಿದ್ದರಾಮಯ್ಯ ಯುವ ಕಾಂಗ್ರೆಸ್ ಕಾರ್ಯಕರ್ತರಿಗೆ ಕಿವಿಮಾತು ಹೇಳಿದರು. ಸಂಘ ಪರಿವಾರ ಯಾವತ್ತೂ ಸ್ವಾತಂತ್ರ್ಯ ಹೋರಾಟಕ್ಕೆ ಬರಲೇ ಇಲ್ಲ. ಈಗವರು ದೇಶಭಕ್ತಿ ಬಗ್ಗೆ ಮಾತಾಡುತ್ತಾರೆ. ಸಾವರ್ಕರ್ ಮತ್ತು ಗೋಲ್ವಾಲ್ಕರರು ಅಂಬೇಡ್ಕರ್ ಅವರ ಸಂವಿಧಾನದ ವಿರುದ್ಧ ಇದ್ದವರು ಎನ್ನುವ ಸ್ಪಷ್ಟ ತಿಳುವಳಿಕೆ ನಮ್ಮ ಕಾರ್ಯಕರ್ತರಿಗೆ ಇರಬೇಕು. ಸ್ವಾತಂತ್ರ್ಯ ಹೋರಾಟ ಮತ್ತು‌…

Read More

ಬೆಂಗಳೂರು : ಪಾಕಿಸ್ತಾನದ ಜೊತೆಗೆ ಯುದ್ಧ ಅನಿವಾರ್ಯತೆ ಇಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಆರ್ ಅಶೋಕ್ ವಾಗ್ದಾಳಿ ನಡೆಸಿದ್ದು, ಸಿಎಂ ಸಿದ್ದರಾಮಯ್ಯ ಮನಸ್ಥಿತಿ ಮುಸ್ಲಿಮರ ಮತ ಬಗ್ಗೆ ಯೋಚಿಸುತ್ತಿದೆ. ಹಾಗಾದರೆ ಸತ್ತಿರುವವರ ಪ್ರಾಣಕ್ಕೆ ಬೆಲೆಯೇ ಇಲ್ಲವೇ? ಹಮಾಸ್ ಉಗ್ರರು ಬಂದು ತರಬೇತಿ ನೀಡಿ ಕಳುಹಿಸಿರುವ ಮಾಹಿತಿ ಇದೆ. ಇದನ್ನು ಸಿದ್ದರಾಮಯ್ಯ ಮಾತ್ರ ಕ್ಷಮಿಸಬಹುದಷ್ಟೇ. ದೇಶಕ್ಕೆ ಏನೇ ಆದರೂ ಪರವಾಗಿಲ್ಲ ಮತ ಬಿದ್ದರೆ ಸಾಕು ಎಂಬ ಮನಸ್ಥಿತಿ ಇದೆ. ಸಿದ್ಧಾಂತವೇ ಇಲ್ಲದ ಸಿದ್ದರಾಮಯ್ಯ ಇಂದು ನಮ್ಮ ಮುಂದೆ ಇದ್ದಾರೆ ಎಂದು ವಾಗ್ದಾಳಿ ನಡೆಸಿದರು. 40 ವರ್ಷಗಳ ಸುದೀರ್ಘ ರಾಜಕೀಯ ಅನುಭವ ಇರುವ, ಎರಡೆರಡು ಬಾರಿ ಮುಖ್ಯಮಂತ್ರಿ ಆಗಿರುವ ಸಿಎಂ ಸಿದ್ದರಾಮಯ್ಯನವರಿಗೆ ಯಾವ ಸಂದರ್ಭದಲ್ಲಿ ಏನು ಮಾತನಾಡಬೇಕು ಎನ್ನುವ ಕನಿಷ್ಠ ಪರಿಜ್ಞಾನ ಇಲ್ಲದಿರುವುದು ಕರ್ನಾಟಕದ ದೌರ್ಭಾಗ್ಯ.ಮುಖ್ಯಮಂತ್ರಿ ಸಿದ್ದರಾಮಯ್ಯನವರೇ, ಜಮ್ಮು ಕಾಶ್ಮೀರದ ಪಹಲ್ಗಾಮ್ ನಲ್ಲಿ ಪಾಕಿಸ್ತಾನಿ ಪ್ರಾಯೋಜಿತ ಇಸ್ಲಾಮಿಕ್ ಉಗ್ರರ ದಾಳಿ ಆಗಿದೆ. ಗಡಿಯಾಚೆಗಿನ ನುಸುಳುಕೋರರು ನಡೆಸಿರುವ ಈ ಕೃತ್ಯ ಈಗ ಕೇವಲ ರಾಷ್ಟ್ರೀಯ…

Read More

ಮೈಸೂರು : ಪಾಕಿಸ್ತಾನದ ಜೊತೆ ಯುದ್ಧ ಮಾಡಬೇಕಾದ ಅಗತ್ಯ ಇಲ್ಲ. ಬಿಗಿ ಕ್ರಮಗಳನ್ನು ತೆಗೆದುಕೊಳ್ಳಬೇಕು. ಭದ್ರತಾ ವ್ಯವಸ್ಥೆಯನ್ನು ಬಿಗಿಗೊಳಿಸುವ ಕೆಲಸ ಮಾಡಬೇಕು. ನಾವು ಯುದ್ಧದ ಪರ ಇಲ್ಲ, ಶಾಂತಿ ಇರಬೇಕು, ಜನರಿಗೆ ಭದ್ರತೆ ಇರಬೇಕು. ಕೇಂದ್ರ ಸರ್ಕಾರ ಭದ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸಿಎಂ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ. ಕಾಶ್ಮೀರದ ಭದ್ರತೆ ವಿಚಾರದಲ್ಲಿ ಕೇಂದ್ರ ಸರ್ಕಾರ ಜನರಿಗೆ ಟೋಪಿ ಹಾಕಿದೆ. ಭದ್ರತೆ ಇದೆ ಎಂದು ನಂಬಿಕೊಂಡು ಜನ ಕಾಶ್ಮೀರಕ್ಕೆ ಹೋದರು. ಆದರೆ ಅಲ್ಲಿ ಭದ್ರತೆ ವೈಫಲ್ಯ ಉಂಟಾಗಿದೆ. ಹಾಗಾದರೆ ಇವರು ಮಾಡಿದ್ದು ಬರೀ ಭಾಷಣನಾ? ಈಗ ಏನೇ ಕ್ರಮ ಕೈಗೊಂಡರು? ಹೋದ 26 ಜೀವ ವಾಪಸ್ ತರಲು ಸಾಧ್ಯನಾ. ಪುಲ್ವಾಮ ಘಟನೆ ವಿಚಾರದಲ್ಲಿ ಮುಂದೆ ಏನಾಯಿತು? ಯಾರಿಗೆ ಗೊತ್ತಿದೆ ಹೇಳಿ. ಈಗ ಕೇಂದ್ರ ಸರ್ಕಾರ ಭದ್ರತಾ ವೈಫಲ್ಯವನ್ನು ಒಪ್ಪಿಕೊಂಡಿದೆ. ನಾನು ಮೊದಲೇ ಹೇಳಿದ್ದೆ ನನ್ನ ಮಾತು ನಿಜವಾಗಿದೆ ಎಂದರು. ರಾಜ್ಯದಲ್ಲಿರುವ ಪಾಕಿಸ್ತಾನ ಪ್ರಜೆಗಳನ್ನ ವಾಪಸ್ ಕಳುಹಿಸುವ ವಿಚಾರವಾಗಿ ಪ್ರತಿಕ್ರಿಯಿಸಿ, ಕೇಂದ್ರದ ಸೂಚನೆಗೆ ನಾವು…

Read More

ಪಂಜಾಬ್ : ಏಪ್ರಿಲ್ 22ರಂದು ಜಮ್ಮು ಕಾಶ್ಮೀರದಲ್ಲಿ ಪ್ರವಾಸಿಗರ ಮೇಲೆ ಉಗ್ರರು ದಾಳಿ ನಡೆಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ, ಭಾರತ ಉಗ್ರರ ವಿರುದ್ಧ ಪ್ರತಿಕಾರ ತೀರಿಸಿಕೊಳ್ಳಲು ಹವಣಿಸುತ್ತಿದ್ದು, ಇದೀಗ ಕಾಶ್ಮೀರದ ಕುಪ್ವಾರದಲ್ಲಿ ಉಗ್ರ ಅಡಗುದಾಣವನ್ನು ಭಾರತೀಯ ಸೇನೆ ಪತ್ತೆ ಮಾಡಿದೆ. ಹೌದು ಕಾಶ್ಮೀರದ ಕುಪ್ವಾರದಲ್ಲಿ ಉಗ್ರರು ಅಡಗಿರುವ ಶಂಕೆ ವ್ಯಕ್ತವಾಗಿದ್ದು, ಇದೀಗ ಭಾರತೀಯ ಸೈನಿಕರು ಉಗ್ರರ ಅಡಗುದಾಣವನ್ನು ಪತ್ತೆ ಮಾಡಿದ್ದಾರೆ ಎಂದು ಮಾಹಿತಿ ತಿಳಿದು ಬಂದಿದೆ. ತಕ್ಷಣವೇ ಉಗ್ರರ ಅಡಗುದಾಣದ ಮೇಲೆ ಭಾರತೀಯ ಸೈನಿಕರು ದಾಳಿ ಮಾಡುವ ಎಲ್ಲ ಸಾಧ್ಯತೆಗಳು ಇವೆ ಎಂದು ಹೇಳಲಾಗುತ್ತಿದೆ.

Read More