Author: kannadanewsnow05

ಹುಬ್ಬಳ್ಳಿ : ಅವರಿಬ್ಬರೂ 8 ವರ್ಷದಿಂದ ಪರಸ್ಪರವಾಗಿ ಪ್ರೀತಿಸಿ ಮನೆಯವರ ವಿರೋಧದ ನಡುವೆ ಕಳೆದ ಎರಡು ವರ್ಷದ ಹಿಂದೆ ರಿಜಿಸ್ಟರ್ ಮದುವೆಯಾಗಿದ್ದರು. ಆದರೆ ಮನೆಯವರು ಯುವಕನ ಮನೆಗೆ ಬಂದು ಬಲವಂತವಾಗಿ ಯುವತಿಯನ್ನು ಹೊತ್ತೋಯ್ದ ಘಟನೆ ಹುಬ್ಬಳ್ಳಿಯ ಭೈರಿಕೊಪ್ಪದಲ್ಲಿ ನಡೆದಿದೆ. ಹೌದು ನಿರಂಜನ ಮತ್ತು ಸುಷ್ಮಾ 8 ವರ್ಷಗಳ ಹಿಂದೆ ಪ್ರೀತಿಸುತ್ತಿದ್ದರು. ಕಳೆದ ಎರಡು ವರ್ಷದ ಹಿಂದೆ ಈ ಜೋಡಿ ರೆಜಿಸ್ಟರ್ ಮ್ಯಾರೇಜ್ ಆಗಿದ್ದರು. ಆದರೆ ಪೋಷಕರು ಇಂದು ಯುವತಿಯನ್ನು ಹೊತ್ತೊಯ್ದಿದ್ದಾರೆ. ಪೋಷಕರ ವಿರೋಧದ ನಡುವೆ ಯುವಕ, ಯುವತಿ ಮದುವೆಯಾಗಿ ಬೇರೆಯಾಗಿ ಒಟ್ಟಿಗೆ ಜೀವಿಸುತ್ತಿದ್ದರು. ಆದರೆ ಇಂದು ಪೋಷಕರು ಯುವತಿಯನ್ನು ಹೊತ್ತೋಯ್ದಿರುವ ಘಟನೆ ನಡೆದಿದೆ. ಪ್ರೇಮ ವಿವಾಹಕ್ಕೆ ಪೋಷಕರು ವಿರೋಧ ವ್ಯಕ್ತಪಡಿಸಿ ದೂರವಾಗಿ ದಂಪತಿ ವೇದನೆ ಅನುಭವಿಸಿದರು, ಪ್ರಿಯಕರ ಪತಿ ನಿರಂಜನನ್ನು ಬಿಟ್ಟಿರಲಾಗದೆ ಸುಷ್ಮಾ ಮತ್ತೆ ನಿರಂಜನ್ ಮನೆಗೆ ಬಂದಿದ್ದಾಳೆ. ಸುಷ್ಮಾಳ ಹುಡುಕಿಕೊಂಡು ತಂದೆ ಪರಶುರಾಮ್ ನಿರಂಜನ್ ಮನೆಗೆ ಬಂದಿದ್ದಾರೆ. ಸುಷ್ಮಾಳ ಮಾವಂದಿರಾದ ಮಹಾಂತೇಶ್ ಮತ್ತು ಮಂಜುನಿಂದ ದಂಪತಿಗೆ ಧಮ್ಕಿ ಹಾಕಿದ್ದಾರೆ. ಪತಿ…

Read More

ಚಿಕ್ಕಮಗಳೂರು : ರಾಜ್ಯಾದ್ಯಂತ ಭಾರಿ ಮಳೆ ಸುರಿಯುತ್ತಿದ್ದು ಚಿಕ್ಕಮಂಗಳೂರಿನಲ್ಲಿ ಚಂದ್ರದ್ರೋಣ ಪರ್ವತದ ಸಾಲಿನಲ್ಲಿ ವರುಣ ಅಬ್ಬರಿಸುತ್ತಿದ್ದಾನೆ. ಈ ನೆಲೆಯಲ್ಲಿ ಚಾಲಕನ ನಿಯಂತ್ರಣ ತಪ್ಪಿ, ಕಾರು ಪಲ್ಟಿಯಾದ ಪರಿಣಾಮ ಇಬ್ಬರಿಗೆ ಗಂಭೀರವಾದ ಗಾಯಗಳಾಗಿರುವ ಘಟನೆ ನಡೆದಿದೆ. ಚಿಕ್ಕಮಂಗಳೂರಿನ ಚಂದ್ರದ್ರೋಣ ಪರ್ವತದ ಸಾಲಿನಲ್ಲಿ ಭಾರಿ ಮಳೆ ಸುರಿಯುತ್ತಿದ್ದು. ಕವಿಕಲ್ ಗಂಡಿ ಬಳಿ ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿಯಾಗಿದೆ. ಚಂದ್ರದ್ರೋಣ ಪರ್ವತದ ಸಾಲಿನ ಕವಿಕಲ್ ಗಂಡಿ ಬಳಿ ಈ ಒಂದು ಘಟನೆ ಸಂಭವಿಸಿದೆ. ಕಾರಿನಲ್ಲಿದ್ದ ಇಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಘಟನೆ ಕುರಿತಂತೆ ಚಿಕ್ಕಮಗಳೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಶಿವಮೊಗ್ಗ : ಕಾಂತಾರ ಚಾಪ್ಟರ್ 1 ಸಿನಿಮಾ ಶೂಟಿಂಗ್ ನಡೆಸುವ ಆರಂಭದ ದಿನದಿಂದಲೂ ಹಲವಾರು ದುರಂತಗಳು ನಡೆದಿದೆ. ಈಗಾಗಲೇ ಚಿತ್ರತಂಡದ ಮೂರು ಕಲಾವಿದರು ಸಾವನ್ನಪ್ಪಿದ್ದು, ನಿನ್ನೆ ತಾನೆ ಶೂಟಿಂಗ್ ಮಾಡುವಾಗ ಹಡಗು ಮಗುಚಿ ಬಿದ್ದಿದ್ದು, ಚಿತ್ರದ ನಾಯಕರು ರಿಷಬ್ ಶೆಟ್ಟಿ ಸೇರಿದಂತೆ 30 ಕಲಾವಿದರು ಸೇಫ್ ಆಗಿದ್ದಾರೆ. ಇದೀಗ ಕಾಂತಾರ ಚಿತ್ರ ತಂಡಕ್ಕೆ ಮತ್ತೊಂದು ಶಾಕ್ ಎದುರಾಗಿದ್ದು ಶಿವಮೊಗ್ಗ ಜಿಲ್ಲಾ ಆಡಳಿತದಿಂದ ಚಿತ್ರಿಕರಣಕ್ಕೆ ಅನುಮತಿ ಪಡೆಯದಿದ್ದರಿಂದ ಶಿವಮೊಗ್ಗ ಜಿಲ್ಲಾಧಿಕಾರಿ ಗುರುದತ್ ಹೆಗಡೆಯವರು ನೋಟಿಸ್ ನೀಡಿ ಉತ್ತರ ನೀಡುವಂತೆ ತಿಳಿಸಿದ್ದಾರೆ. ಹೌದು ಅನುಮತಿ ಪಡೆಯದೆ ಕಾಂತಾರ ಸಿನಿಮಾ ಶೂಟಿಂಗ್ ನಡೆಸುತ್ತಿದ್ದು, ಸ್ಥಳೀಯ ಆಡಳಿತದಿಂದ ಅನುಮತಿ ಇಲ್ಲದೆ ಕಾಂತರಾ ಸಿನಿಮಾ ಶೂಟಿಂಗ್ ನಡೆಸುತ್ತಿದ್ದಾರೆ. ಹಾಗಾಗಿ ಚಿತ್ರತಂಡಕ್ಕೆ ನೋಟಿಸ್ ನೀಡುವುದಕ್ಕೆ ಜಿಲ್ಲಾಧಿಕಾರಿ ಸೂಚನೆ ನೀಡಿದ್ದಾರೆ. ಶಿವಮೊಗ್ಗದ ಜಿಲ್ಲಾಧಿಕಾರಿ ಗುರುದಟ್ ಹೆಗ್ಡೆ ಸೂಚನೆ ನೀಡಿದ್ದಾರೆ. ಮಾಸ್ತಿಕಟ್ಟೆ ಮಾಣಿ ಡ್ಯಾಮ್ ಬಳಿ ಕಾಂತಾರ ಚತ್ರಿಕರಣ ನಡೆಯುತ್ತಿದ್ದು, ತಹಶೀಲ್ದಾರ್ ರಶ್ಮಿ ಮೂಲಕ ನೋಟಿಸ್ ಜಾರಿ ಮಾಡಲಾಗಿದೆ ಎಂದು ತಿಳಿದುಬಂದಿದೆ. ಇನ್ನು…

Read More

ಮೈಸೂರು : ಆತ ಮೂರು ಮದುವೆಯಾಗಿದ್ದ ಮೊದಲನೇ ಪತ್ನಿಗೆ ವಿಚ್ಛೇದನ ನೀಡಿದ ಬಳಿಕ ಎರಡನೇ ಮದುವೆಯಾದ ಆದರೆ ವಿಚ್ಛೇದನ ನೀಡಿದ ಪತ್ನಿಯ ಹಾಗೂ ಮಕ್ಕಳಿಗೆ ಆಸ್ತಿಯನ್ನು ನೀಡಿದ್ದ. ಬಳಿಕ ಮೂರನೇ ಮದುವೆಯಾದ ಆತ ಎರಡನೇ ಪತ್ನಿಗೆ ಏನನ್ನು ನೀಡದೆ ನಡು ಬೀದಿಯಲ್ಲಿ ಕೈಬಿಟ್ಟಿದ್ದಾನೆ. ನ್ಯಾಯ ಕೇಳಲು ಹೋದ 2ನೇ ಪತ್ನಿಯ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿರುವ ಘಟನೆ ಮೈಸೂರು ಜಿಲ್ಲೆಯ ಮೂರು ಮದುವೆಯಾದವನಿಂದ ಎರಡನೇ ಪತ್ನಿಗೆ ಕಿರುಕುಳ ಆರೋಪ ಕೇಳಲು ಹೋಗಿದ್ದ ಎರಡನೇ ಪತಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ದಲ್ಲಾಳು ಗ್ರಾಮಲ್ಲಿ ನಡೆದಿದೆ. ಗ್ರಾಮದ ಮಹದೇವಪ್ಪ 2ನೇ ಪತ್ನಿ ನೇತ್ರಾವತಿ ಮೇಲೆ ಹಲ್ಲೆ ನಡೆಸಿರುವ ಆರೋಪ ಕೇಳಿ ಬಂದಿದೆ. ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ದಲ್ಲಾಳು ಗ್ರಾಮದಲ್ಲಿ ಮೊದಲ ಪತ್ನಿಗೆ ವಿಚ್ಛೇದನ ನೀಡಿ ಮಹದೇವಪ್ಪ ಆಕೆಯ ಮಕ್ಕಳಿಗೆ ಆಸ್ತಿ ನೀಡಿದ್ದಾನೆ. 2ನೇ ಪತ್ನಿಯನ್ನು ತೊರೆದು ಮೂರನೇ ಪತ್ನಿಯ ಜೊತೆಗೆ ಸದ್ಯ ಮಹಾದೇವಪ್ಪ ವಾಸಿಸುತ್ತಿದ್ದಾನೆ.…

Read More

ಕೋಲಾರ : ಕೇವಲ 4 ಗುಂಟೆ ಜಮೀನು ವಿಚಾರದಲ್ಲಿ ಅಣ್ಣ ತಮ್ಮಂದಿರ ನಡುವೆ ಗಲಾಟೆ ನಡೆದಿದೆ ಈ ವೇಳೆ ಗಲಾಟೆ ವಿಕೋಪಕ್ಕೆ ತಿರುಗಿ, ಅಣ್ಣಂದಿರು ತಮ್ಮನನ್ನು ಬರ್ಬರವಾಗಿ ಹತ್ಯೆಗೈದಿರುವ ಘಟನೆ, ಕೋಲಾರ ಜಿಲ್ಲೆಯ ಕೆ ಜಿ ಎಫ್ ತಾಲೂಕಿನ ಎನ್.ಜಿ ಹುಲ್ಕೂರು ಎಂಬ ಗ್ರಾಮದಲ್ಲಿ ನಡೆದಿದೆ. ಎನ್.ಜಿ ಹುಲ್ಕುರು ಗ್ರಾಮದಲ್ಲಿ 60 ವರ್ಷದ ರಮೇಶ್ ಎನ್ನುವವರನ್ನು ಸ್ವಂತ ಅಣ್ಣಂದಿರೆ ಕೊಲೆ ಮಾಡಿದ್ದಾರೆ. ಅಣ್ಣಂದಿರಾದ ಸಂಪಂಗಿ, ಸೀನಪ್ಪ ಮಟ್ಟು ರಘುಪತಿ ಯಿಂದ ರಮೇಶ್ ಅವರ ಹತ್ಯೆಯಾಗಿದೆ. ರಮೇಶ್ ತಲೆಗೆ ದೊಣ್ಣೆಯಿಂದ ಹೊಡೆದು ಅಣ್ಣಂದಿರು ಕೊಲೆ ಮಾಡಿದ್ದಾರೆ. ಘಟನೆ ಸಂಬಂಧ ಬೇತಮಂಗಲ ಠಾಣೆ ಪೊಲೀಸರಿಂದ ಆರೋಪಿ ಸೀನಪ್ಪನನ್ನು ಅರೆಸ್ಟ್ ಮಾಡಲಾಗಿದ್ದು ಇನ್ನೂ ತಲೆಮರೆಸಿಕೊಂಡಿರುವ ಸಂಪಂಗಿ ಮತ್ತು ರಘುಪತಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಘಟನೆ ಕುರಿತಂತೆ ಬೇತಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ದೊಡ್ಡಬಳ್ಳಾಪುರ : ದೊಡ್ಡಬಳ್ಳಾಪುರದಲ್ಲಿ ಗೌರವದ ದುರಂತ ಒಂದು ನಡೆದಿದ್ದು ಕೃಷಿ ಹೊಂಡಕ್ಕೆ ಬಿದ್ದು 8 ವರ್ಷದ ಬಾಲಕನೊಬ್ಬ ಸಾವನಪ್ಪಿರುವ ಘಟನೆ ದೊಡ್ಡಬಳ್ಳಾಪುರ ತಾಲ್ಲೂಕಿನ ಕೊಂಡಘಟ್ಟ ಗ್ರಾಮದಲ್ಲಿ ನಡೆದಿದೆ. ಮೃತ ಬಾಲಕನನ್ನು ನಾಗಚೈತನ್ಯ (8) ಎಂದು ತಿಳಿದುಬಂದಿದೆ. ಕಳೆದ ಜೂನ್ 11ರಂದು ಈ ಒಂದು ಘಟನೆ ನಡೆದಿದ್ದು, ಬಾಲಕ ಹೊಂಡಕ್ಕೆ ತೆರಳುತ್ತಿರುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

Read More

ಬೆಂಗಳೂರು : ಬೆಂಗಳೂರಿನಲ್ಲಿ ಹಳೇ ದ್ವೇಷಕ್ಕೆ ಯುವಕನನ್ನು ಬರ್ಬರವಾಗಿ ಹತ್ಯೆಗೈಯ್ಯಲಾಗಿದೆ. ಬೆಂಗಳೂರಿನ ಜೆ.ಜೆ ನಗರದ ಜನತಾ ಕಾಲೋನಿಯಲ್ಲಿ ಈ ಒಂದು ಭೀಕರ ಕೊಲೆ ನಡೆದಿದೆ. ಮಾತುಕತೆಗೆ ಅಂತ ಕರೆಸಿ ವಿಜಯ್ (26) ಎನ್ನುವ ಯುವಕನನ್ನು ಬರ್ಬರವಾಗಿ ಕೊಲೆ ಮಾಡಲಾಗಿದೆ. ಹತ್ಯೆಯಾದ ವಿಜಯ್ ನಿನ್ನ ಅಷ್ಟೆ ಜೈಲಿನಿಂದ ಹೊರಗಡೆ ಬಂದಿದ್ದ. ಸದ್ಯ ಘಟನಾ ಸ್ಥಳಕ್ಕೆ ಜೆ.ಜೆ ನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಕೊಲೆ ಕುರಿತಂತೆ ಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Read More

ಉತ್ತರಕನ್ನಡ : ವೃದ್ಧೆಯೊಬ್ಬರ ಅತ್ಯಾಚಾರ ಮಾಡಿ, ತಲೆ ಮರೆಸಿಕೊಂಡಿದ್ದ ಆರೋಪಿಯನ್ನು ನಗರಠಾಣೆ ಪೋಲಿಸರು ಶನಿವಾರ ಬಂಧಿಸಿದ್ದಾರೆ. ಬಂಧಿಸುವ ಸಮಯದಲ್ಲಿ ಆರೋಪಿ ಪೊಲೀಸರ ಮೇಲೆ ಹಲ್ಲೆ ಮಾಡಿದ ಕಾರಣಕ್ಕೆ ಆತನ ಕಾಲಿಗೆ ಗುಂಡು ಹಾರಿಸಿದ್ದಾರೆ. ಬಂಧಿತನನ್ನ ಫೈರೋಜ್ ಯರಗಟ್ಟಿ (23) ಎಂದು ತಿಳಿದುಬಂದಿದೆ. ವೃದ್ಧೆಯು ಅತ್ಯಾಚಾರ ಮಾಡಿದ ಆರೋಪಿಯನ್ನು ಪತ್ತೆ ಹಚ್ಚಲು ಸುಮಾರು ನೂರು ಜನರ ಪೋಟೋ ತೋರಿಸಿದ ನಂತರ ಆರೋಪಿಯನ್ನು ಗುರುತಿಸಿದ್ದರು. ತಲೆಮರೆಸಿಕೊಂಡಿದ್ದ ಆರೋಪಿಯನ್ನು ಕುಳಗಿ ಅರಣ್ಯ ಪ್ರದೇಶದಲ್ಲಿ ಎಸ್‌ಐ ಕಿರಣ್ ಪಾಟೀಲ ನೇತೃತ್ವದ ತಂಡವು ಪತ್ತೆ ಹಚ್ಚಿ ಕರೆದುಕೊಂಡು ಬರುತ್ತಿರುವಾಗ ಪೋಲಿಸರ ಮೇಲೆ ಏಕಾಏಕಿ ಕಲ್ಲು ಮತ್ತು ಚಾಕುವಿನಿಂದ ದಾಳಿ ಮಾಡಿದ್ದಾನೆ. ಪೊಲೀಸರು ಎಚ್ಚರಿಸಿದ್ದರೂ ದಾಳಿ ನಿಲ್ಲಿಸದ ಕಾರಣಕ್ಕೆ ಆತನ ಕಾಲಿಗೆ ಗುಂಡು ಹಾರಿಸಲಾಗಿದೆ. ಈತ ಗುರುವಾರ ಮಧ್ಯಾಹ್ನ ಬೈಲಪಾರು ಐ.ಪಿ.ಎಂ ಪ್ರದೇಶದ ಅರಣ್ಯ ಪ್ರದೇಶದಲ್ಲಿ 60 ವರ್ಷದ ಅಂಗವಿಕಲ ವೃದ್ಧೆಯನ್ನು ಅತ್ಯಾಚಾರ ಎಸಗಿದ್ದ ಆರೋಪ ಹೊತ್ತಿದ್ದಾನೆ. ಅತ್ಯಾಚಾರ ಮಾಡಿ ಮೊಬೈಲ್ ಹಾಗೂ ₹5,000 ಕಳವು ಮಾಡಿ ಪರಾರಿಯಾಗಿದ್ದಾಗಿ ಪೊಲೀಸರು…

Read More

ಕಲಬುರಗಿ : ರಾಜ್ಯದಲ್ಲಿ ಇತ್ತೀಚಿಗೆ ದಲಿತ ಸಿಎಂ ಕೂಗು ಕೇಳಿ ಬಂದಿತ್ತು. ಅಲ್ಲದೆ ಸಿಎಂ ಹಾಗೂ ಕೆಪಿಸಿಸಿ ಅಧ್ಯಕ್ಷ ಸ್ಥಾನ ಬದಲಾವಣೆ ಆಗುತ್ತದೆ ಎಂಬ ಊಹಾಪೋಹ ಹರಿದಾಡಿತ್ತು. ಇದೀಗ ದಲಿತ ಸಿಎಂ ವಿಚಾರವಾಗಿ ಕಲ್ಬುರ್ಗಿಯಲ್ಲಿ ಪಿಡಬ್ಲ್ಯೂಡಿ ಸಚಿವ ಸತೀಶ್ ಜಾರಕಿಹೊಳಿ ಪ್ರತಿಕ್ರಿಯೆ ನೀಡಿದ್ದು ಕಳೆದ ಒಂದು ವರ್ಷದಿಂದ ದಲಿತ ಸಿಎಂ ಕೂಗು ನಿಂತಿದೆ ಎಂದು ತಿಳಿಸಿದ್ದಾರೆ. ಕಲ್ಬುರ್ಗಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯ ಕಾಂಗ್ರೆಸ್ ನಲ್ಲಿ ದಲಿತ ಸಿಎಂ ಕೂಗು ವಿಚಾರವಾಗಿ ಪ್ರತಿಕ್ರಿಯಿಸಿದ ಅವರು ಕಳೆದು ಒಂದು ವರ್ಷದಿಂದ ದಲಿತ ಸಿಎಂ ಕೂಗು ನಿಂತಿದೆ. ಮುಂದಿನ ವಿಧಾನಸಭ ಚುನಾವಣೆ ಆದಮೇಲೆ ಆ ಕುರಿತು ನೋಡೋಣ. 2028 ರ ಚುನಾವಣೆಯಲ್ಲಿ ಆ ಬಗ್ಗೆ ಗಂಭೀರವಾದ ಚರ್ಚೆ ಮಾಡೋಣ ಎಂದು ಸಚಿವ ಸತೀಶ್ ಜಾರಕಿಹೊಳಿ, ಹೇಳಿಕೆ ನೀಡಿದರು. ನಮ್ಮ ತೆರಿಗೆ ಹಣದಿಂದ ಉತ್ತರಪ್ರದೇಶ ಬಿಹಾರ್ ರಾಜ್ಯಗಳಲ್ಲಿ ರಸ್ತೆಗಳು ಆಗುತ್ತಿವೆ. ಕೇಂದ್ರ ಸರ್ಕಾರಕ್ಕೆ ನಾವು 2 ಲಕ್ಷ ಕೋಟಿ ಜಿಎಸ್‌ಟಿ ಹಣ ಕೊಡುತ್ತೇವೆ ಅದರ ಅರ್ಧ…

Read More

ಉತ್ತರಕನ್ನಡ : ಉತ್ತರ ಕನ್ನಡ ಜಿಲ್ಲೆ ಸೇರಿದಂತೆ ಹಲವು ಪ್ರದೇಶಗಳಲ್ಲಿ ಭಾರಿ ಮಳೆಯಾಗುತ್ತಿದ್ದು ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ಮತ್ತೆ ಗುಡ್ಡ ಕುಸಿದಿದೆ. ಗುಡ್ಡ ಕುಸಿತದಿಂದ ಕುಮ್ಟ ಹಾಗೂ ಶಿರಸೆ ನಡುವೆ ರಸ್ತೆ ಸಂಪರ್ಕ ಸಂಪೂರ್ಣವಾಗಿ ಬಂದ್ ಆಗಿದೆ. ಶಿರಸಿ ತಾಲೂಕಿನ ದೇವಿಮನೆ ಘಟ್ಟದಲ್ಲಿ ಮತ್ತೆ ಗುಡ್ಡ ಕುಸಿದಿದೆ. ಉತ್ತರ ಕನ್ನಡದಲ್ಲಿ ಶಿರಸಿ ತಾಲೂಕಿನ ದೇವಿಮನೆ ಎಂಬಲ್ಲಿ ಗುಡ್ಡ ಕುಸಿದಿವೆ ರಾಷ್ಟ್ರೀಯ ಹೆದ್ದಾರಿ 766 (E) ನಲ್ಲಿ ಮತ್ತೆ ಗುಡ್ಡ ಕುಸಿದು ಬಿದ್ದಿದೆ. ದೊಡ್ಡ ಪ್ರಮಾಣದಲ್ಲಿ ಗುಡ್ಡ ಕುಸಿದು ರಸ್ತೆ ಸಂಚಾರ ಸಂಪೂರ್ಣವಾಗಿ ಬಂದ್ ಆಗಿದೆ. ಕುಮಟಾ ಶಿರಸಿ ಹೆದ್ದಾರಿ ಸಂಪರ್ಕ ಸಂಪೂರ್ಣ ಕಡಿತವಾಗಿದೆ. ಇನ್ನು ಚಿಕ್ಕಮಂಗಳೂರು ಜಿಲ್ಲೆಯ ನೆಮ್ರು ಬಳಿ ರಾಷ್ಟ್ರೀಯ ಹೆದ್ದಾರಿ 169 ರಲ್ಲಿ ಪದೇ ಪದೇ ಗುಡ್ಡ ಕುಸಿಯುತ್ತಿದೆ. ಬದಲಿ ಮಾರ್ಗದಲ್ಲಿ ತೆರಳಲು ಪೊಲೀಸರು ವಾಹನ ಸವಾರರಿಗೆ ಸೂಚನೆ ನೀಡಿದ್ದಾರೆ. ಒಂದೇ ಸ್ಥಳದಲ್ಲಿ ಗುಡ್ಡ ಪದೇ ಪದೇ ಕುಸಿಯುತ್ತಿದೆ. ಧಾರಾಕಾರವಾಗಿ ಸುರಿಯುತ್ತಿರುವ ಮಳೆಗೆ ನೆಮ್ಮಾರು ಬಳಿ ಗುಡ್ಡ…

Read More