Author: kannadanewsnow05

ಬೆಂಗಳೂರು : ಗುಂಡಾಲ ಜಲಾಶಯದಲ್ಲಿ ಗಂಡು ಹುಲಿಯ ಮೃತ ದೇಹ ಒಂದು ಪತ್ತೆಯಾಗಿದೆ. ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಗುಂಡಾಲ ಜಲಾಶಯದಲ್ಲಿ ಗಂಡು ಹುಲಿಯ ಮೃತದೇಹ ಪತ್ತೆಯಾಗಿದೆ. ಡ್ಯಾಮ್ ನಲ್ಲಿ ಹುಲಿಯ ಶವ ತೇಲುತ್ತಿರುವುದನ್ನು ಪ್ರವಾಸಿಗರು ನೋಡಿದ್ದಾರೆ. ತಕ್ಷಣ ಪೊಲೀಸರಿಗೆ ಈ ಕುರಿತು ಮಾಹಿತಿ ನೀಡಿದ್ದಾರೆ. ಘಟನೆ ಸ್ಥಳಕ್ಕೆ ಕೊಳ್ಳೇಗಾಲ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡುತ್ತಿದ್ದಾರೆ. ಬಿಳಿಗಿರಿ ಟೈಗರ್ ರಿಸರ್ವ್ ಫಾರೆಸ್ಟ್ ಸಿಬ್ಬಂದಿಗೆ ಪೊಲೀಸರು ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಟೈಗರ್ ರಿಸರ್ವ್ ಫಾರೆಸ್ಟ್ ಸಿಬ್ಬಂದಿ ಕೂಡ ಭೇಟಿ ನೀಡಿದ್ದಾರೆ ಪಶು ವೈದ್ಯರಿಂದ ಸ್ಥಳದಲ್ಲಿಯೇ ಹುಲಿಯ ಮರಣೋತ್ತರ ಪರೀಕ್ಷೆ ನಡೆಯುತ್ತಿದ್ದು ಮೃತ ದೇಹದ ಸ್ಯಾಂಪಲ್ ಅನ್ನು ಅರಣ್ಯ ಸಿಬ್ಬಂದಿಗಳು ಸಂಗ್ರಹಿಸಿದ್ದಾರೆ. ಬಳಿಕ FSL ಲ್ಯಾಬ್ ಗೆ ಸ್ಯಾಂಪಲ್ ಕಳುಹಿಸಿದ್ದಾರೆ.

Read More

ಬೆಳಗಾವಿ : ಕರ್ನಾಟಕ ಗೋವಾ ಗಡಿಯಲ್ಲಿ 400 ಕೋಟಿ ದರೋಡೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ದೂರುದಾರ ಸಂದೀಪ್ ಬೆಳಗಾವಿ ಎಸ್ ಪಿ ಗೆ ಪತ್ರ ಬರೆದಿದ್ದು, FIR ದಾಖಳಿಸುವಂತೆ ಪತ್ರ ಬರೆದಿದ್ದಾನೆ. ಬೆಳಗಾವಿ ಎಸ್ಪಿ ಕೆ.ರಾಮರಾಜನಿಗೆ ದೂರು ದಾರಿ ಸಂದೀಪ್ ಪಾಟೀಲ್ ಪತ್ರ ಬರೆದಿದ್ದಾನೆ. ಮಹಾರಾಷ್ಟ್ರ ಎಸ್ಐಟಿ ಪೊಲೀಸ್ರಿಂದ ಪಾರದರ್ಶಕ ತನಿಖೆ ಆಗುತ್ತಿಲ್ಲ ಘಟನೆ ಸಂಭಂದ ಆಡಿಯೋ ದಾಖಲೆಗಳು ನನ್ನ ಬಳಿ ಇವೆ ಅವುಗಳ ಆಧಾರದ ಮೇಲೆ FIR ದಾಖಲಿಸುವಂತೆ ಸಂದೀಪ್ ಪಾಟೀಲ್ ಒತಾಯಿದ್ದಾನೆ. 400 ಕೋಟಿ ದರೋಡೆ ಪ್ರಕರಣದ ದೂರುದಾರ ಆಗಿರುವ ಸಂದೀಪ್ ಪಾಟೀಲ್, ಈ ಒಂದು ಪ್ರಕರಣ ಸಂಬಂಧಪಟ್ಟಂತೆ ಮಹಾರಾಷ್ಟ್ರ ಎಸ್ಐಟಿ ಅಧಿಕಾರಿಗಳು 8 ಆರೋಪಿಗಳನ್ನು ಅರೆಸ್ಟ್ ಮಾಡಿದ್ದಾರೆ. ಮಹಾರಾಷ್ಟ್ರ ಪೊಲೀಸ್ರ ತನಿಖೆಯ ಬಗ್ಗೆ ಸಂದೀಪ್ ಪಾಟೀಲ್ ಅನುಮಾನ ವ್ಯಕ್ತಪಡಿಸಿದ್ದು ಈಗಾಗಲೇ ಎಸ್ಐಟಿ ಮತ್ತು ಪೊಲೀಸ್ ಮಹಾ ನಿರ್ದೇಶಕರು ವಿರುದ್ಧ ದೂರು ದಾಖಲಿಸಿದ್ದಾನೆ. ಮಹಾರಾಷ್ಟ್ರ ಪೊಲೀಸ್ ನಿರ್ದೇಶಕರ ವಿರುದ್ಧ ಹೈಕೋರ್ಟಿಗೆ ದೂರು ಸಲ್ಲಿಸಿದ್ದಾನೆ. ಎಸ್ಐಟಿ ತಂಡದ ವಿರುದ್ಧವೇ ಸಂದೀಪ್ ಪಾಟೀಲ್…

Read More

ಗದಗ: ಮಹಾ ಶಿವರಾತ್ರಿಯ ಈ ದಿನದಂದೇ ಗದಗದಲ್ಲಿ ಕಿಡಿಗೇಡಿ ದುಷ್ಕರ್ಮಿಗಳು ಅಟ್ಟಹಾಸ ಮೆರೆದಿದ್ದಾರೆ. ಗದಗದಲ್ಲಿ ಶಿವಲಿಂಗ, ನಂದಿ ವಿಗ್ರಹವನ್ನು ಭಗ್ನಗೊಳಿಸಿ, ವಿರೂಪಗೊಳಿಸಿದ್ದಾರೆ. ಗದಗ ಜಿಲ್ಲೆಯ ಮುಂಡರಗಿ ತಾಲ್ಲೂಕಿನ ಶಿಂಗಟಾಲೂರಲ್ಲಿ ಈ ಘಟನೆ ನಡೆದಿದೆ. ಶಿಂಗಟಾಲೂರು ಗ್ರಾಮದ ಹೊರ ವಲಯದಲ್ಲಿರುವಂತ ಶ್ರೀರಾಮೇಶ್ವರ ಹಾಗೂ ನಂದಿ ವಿಗ್ರಹವನ್ನು ರಾತ್ರೋ ರಾತ್ರಿ ದುಷ್ಕರ್ಮಿಗಳು ಭಗ್ನಗೊಳಿಸಿ, ಹೊಡೆದು ಹಾಕಿದ್ದಾರೆ. ಇಂದು ಮಹಾ ಶಿವರಾತ್ರಿಯ ದಿನವಾದ ಕಾರಣ ಪೂಜೆಗೆಂದು ಅರ್ಚಕರು ದೇವಾಲಯಕ್ಕೆ ತೆರಳಿದಂತ ಸಂದರ್ಭದಲ್ಲಿ ಕೃತ್ಯ ಬೆಳಕಿಗೆ ಬಂದಿದೆ. ನಿನ್ನೆಯಷ್ಟೇ ಮಹಾ ಶಿವರಾತ್ರಿ ಪ್ರಯುಕ್ತ ದೇವಾಲಯಕ್ಕೆ ಸುಣ್ಣ-ಬಣ್ಣ ಬಳಿಯಲಾಗಿತ್ತು. ಆದರೇ ಇಂದು ಬೆಳಗ್ಗೆ ಶಿವಲಿಂಗ, ನಂದಿ ವಿಗ್ರಹವನ್ನು ವಿರೂಪಗೊಳಿಸಿದ್ದರಿಂದ ಗ್ರಾಮದಲ್ಲಿ ಉದ್ವಿಗ್ನತೆಯ ವಾತಾವರಣ ಉಂಟಾಗಿದೆ. ಕಿಡಿಗೇಡಿಗಳ ಈ ದುಷ್ ಕೃತ್ಯವನ್ನು ಶಿಂಗಟಾಲೂರು ಗ್ರಾಮಸ್ಥರು ಖಂಡಿಸಿದ್ದಾರೆ. ಅಲ್ಲದೇ ಕಿಡಿಗೇಡಿ ಕೃತ್ಯ ಎಸಗಿದಂತ ದುಷ್ಕರ್ಮಿಗಳನ್ನು ಬಂಧಿಸುವಂತೆಯೂ ಒತ್ತಾಯಿಸಿದ್ದಾರೆ.

Read More

ಕೊಲ್ಕತ್ತಾ : ಹಾಸ್ಟೆಲ್ ರೂಂ ನಲ್ಲಿ ಎಂಬಿಬಿಎಸ್ ವಿದ್ಯಾರ್ಥಿ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿದೆ. ದುರ್ಗಾಪುರದ ಖಾಸಗಿ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿನಿ ಯಾಗಿದ್ದ ಲಾವನ್ಯ ಪ್ರತಾಪ್ ಸಾವನ್ನಪ್ಪಿದ್ದಾರೆ. ಹಾಸ್ಟೆಲ್ ಕೋಣೆಯ ಬಾಗಿಲ್ ಲಾಕ್ ಆಗಿತ್ತು, ಸ್ನೇಹಿತರು ಕರೆ ಮಾಡಿದರೂ ಆಕೆ ಉತ್ತರಿಸದ ಕಾರಣ ಅನುಮಾನ ಬಂದು ಬಾಗಿಲು ಒಡೆದು ನೋಡಿದಾಗ ಆತ ನೇಣಿಗೆ ಶರಣಾಗಿರುವುದು ಕಂಡುಬಂದಿದೆ. ಮಾಹಿತಿ ಪಡೆದ ನಂತರ ದುರ್ಗಾಪುರ ಪೊಲೀಸ್ ಠಾಣೆಯ ಪೊಲೀಸರು ಕ್ಯಾಂಪಸ್‌ಗೆ ತಲುಪಿ ಹಾಸ್ಟೆಲ್ ಕೊಠಡಿಯಿಂದ ಶವವನ್ನು ವಶಪಡಿಸಿಕೊಂಡರು. ಆಸ್ಪತ್ರೆಯಲ್ಲಿ ಇರಿಸಿ ನಂತರ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಯಿತು. ಮೃತರನ್ನು ಬಿಹಾರದ ಪಾಟ್ನಾ ನಿವಾಸಿ ಲಾವಣ್ಯ ಪ್ರತಾಪ್ ಎಂದು ಗುರುತಿಸಲಾಗಿದೆ. ಅವರು ವೈದ್ಯಕೀಯ ಅಧ್ಯಯನ ಮಾಡುವಾಗ ಕಾಲೇಜು ಹಾಸ್ಟೆಲ್‌ನಲ್ಲಿ ತಂಗಿದ್ದರು. ಕಳೆದ ಕೆಲವು ಸೆಮಿಸ್ಟರ್‌ಗಳಲ್ಲಿ ಅನುತ್ತೀರ್ಣರಾದ ನಂತರ ವಿದ್ಯಾರ್ಥಿ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದ ಎಂದು ಅವರ ಸ್ನೇಹಿತರು ತನಿಖಾಧಿಕಾರಿಗಳಿಗೆ ತಿಳಿಸಿದ್ದಾರೆ. ಶನಿವಾರ ರಾತ್ರಿ ಸಹ ವಿದ್ಯಾರ್ಥಿಗಳು ಹಾಸ್ಟೆಲ್ ಶೌಚಾಲಯದಲ್ಲಿ ನೇತಾಡುತ್ತಿರುವ ಅವರ…

Read More

ಕಲಬುರ್ಗಿ : ಕಾಗಿಣಾ ನದಿಗೆ ಈಜಲು ತೆರಳಿದ್ದ ವೇಳೆ ಲಾರಿ ಚಾಲಕ ನೀರು ಪಾಲಾಗಿರುವ ಘಟನೆ ಕಲಬುರ್ಗಿ ಜಿಲ್ಲೆಯ ಸೇಡಂ ತಾಲೂಕಿನ ಬೀರನಳ್ಳಿ ಬಳಿ ಈ ಒಂದು ಘಟನೆ ನಡೆದಿದೆ. ಆಳಂದ ತಾಲೂಕಿನ ಬೆಳಮಂಗಿ ಗ್ರಾಮದ ಶಿವಪ್ರಕಾಶ್ (26) ಸಾವನಪ್ಪಿದ್ದು ಸ್ನೇಹಿತರೊಂದಿಗೆ ಈಜಲು ತೆರಳಿದ ಲಾರಿ ಚಾಲಕ ಶಿವಪ್ರಕಾಶ್ ಅಗ್ನಿಶಾಮಕದ ಸಿಬ್ಬಂದಿ ಹಾಗೂ ಪೊಲೀಸರಿಂದ ಶೋಧ ಕಾರ್ಯ ಮುಂದುವರಿದಿದೆ. ಮಳಖೆಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ

Read More

ಕಲಬುರ್ಗಿ : ಕಲ್ಬುರ್ಗಿ ನಗರದ ಹೃದಯ ಭಾಗದಲ್ಲಿ ಇರುವ ಬಹುಮಾನ ಕೋಟೆಯಲ್ಲಿ ಇರುವಂತಹ ಸೋಮೇಶ್ವರ ದೇವಸ್ಥಾನದ ಶಿವಲಿಂಗಕ್ಕೆ ಪೂಜೆ ಮಾಡಲು ಪೊಲೀಸರು ಅವಕಾಶ ನೀಡದ ಹಿನ್ನೆಲೆಯಲ್ಲಿ ಪೂಜೆಗೆ ಅವಕಾಶ ಕೊಡುವಂತೆ ಕಲ್ಬುರ್ಗಿ ಕೋಟೆಯ ಮುಂಭಾಗ ಹಿಂದೂ ಮುಖಂಡರು ಧರಣಿ ನಡೆಸಿದರು. ಕಲ್ಬುರ್ಗಿ ಕೋಟೆ ಆವರಣದಲ್ಲಿರುವ ಶಿವಲಿಂಗ ಪೂಜೆಗೆ ಯತ್ನಿಸಲಾಯಿತು. ಶಿವರಾತ್ರಿಯ ಅಂಗವಾಗಿ ಶಿವಲಿಂಗಕ್ಕೆ ಪೊಲೀಸರು ಪೂಜೆ ಮಾಡಲು ಅವಕಾಶ ನೀಡಲಿಲ್ಲ. ಬಹುಮನಿ ಕೋಟೆ ಒಳಗೆ ಇರುವ ಸೋಮೇಶ್ವರ ದೇಗುಲದಲ್ಲಿ ಈ ಒಂದು ಶಿವಲಿಂಗ ಇದೆ ಶಿವರಾತ್ರಿ ಅಂಗವಾಗಿ ಪೂಜೆಗೆ ಅವಕಾಶ ಕೊಡುವಂತೆ ಹಿಂದೂ ಮುಖಂಡರು ಪ್ರತಿಭಟನೆ ನಡೆಸುತ್ತಿದ್ದರು ಆದರೆ ಪೊಲೀಸರು ಅವಕಾಶ ಕೊಡದೆ ಇಂದು ಮುಖಂಡರನ್ನು ವಶಕ್ಕೆ ಪಡೆದಿದ್ದಾರೆ.

Read More

ಬೆಂಗಳೂರು : ರೌಡಿಶೀಟರ್ ಬಿಕ್ಲು ಶಿವ ಕೋಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಿಐಡಿ ಅಧಿಕಾರಿಗಳು ಜಡ್ಜ್ ಮುಂದೆ ಇಂದು ಭೈರತಿ ಬಸವರಾಜ್ ಅವರನ್ನು ಹಾಜರುಪಡಿಸಿದರು. ಕೋರಮಂಗಲದಲ್ಲಿರುವ 42ನೇ ACJM ಕೋರ್ಟ್ ನಿವಾಸದಲ್ಲಿ ಹಾಜರುಪಡಿಸಿದರು. ಸಿಐಡಿ ಪೊಲೀಸರ ಪರವಾಗಿ ಎಸ್‍ಪಿಪಿ ಅಶೋಕ್ ನಾಯಕ್ ಇದೆ ವೇಳೆ ಹಾಜರಾದರು. ವಿಚಾರಣೆಯ ವೇಳೆ ನ್ಯಾಯಾಧೀಶರು ಫೆಬ್ರವರಿ 21 ರವರೆಗೆ ಅಂದರೆ 7 ದಿನಗಳ ಕಾಲ ಬಿಜೆಪಿ ಶಾಸಕ ಭೈರತಿ ಬಸವರಾಜ ನೀಡಿ ಆದೇಶ ನೀಡಿದರು. ಈ ಒಂದು ಕೊಲೆ ಪ್ರಕರಣದಲ್ಲಿ ಅವರು ಕಳೆದ ಕೆಲವು ದಿನಗಳ ಹಿಂದೆ ತಲೆಮರಿಸಿಕೊಂಡಿದ್ದರು. ಅಜ್ಞಾತ ಸ್ಥಳದಿಂದಲೇ ತಮ್ಮ ವಕೀಲರ ಮೂಲಕ ಹೈಕೋರ್ಟ್ ಹಾಗೂ ಸುಪ್ರೀಂ ಕೋರ್ಟ್ ಗೆ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದ್ದರು. ಆದರೆ ಹೈ ಕೋರ್ಟ್ ಹಾಗೂ ಸುಪ್ರೀಂ ಕೋರ್ಟ್ ಎರಡು ಕಡೆ ನಿರೀಕ್ಷಣಾ ಜಾಮೀನು ಅರ್ಜಿ ವಜಾ ಆಗಿತ್ತು.

Read More

ಮಂಡ್ಯ : ಮಂಡ್ಯದಲ್ಲಿ ಘೋರವಾದ ದುರಂತ ಒಂದು ಸಂಭವಿಸಿದ್ದು, ಕೆಮಿಕಲ್ ಟ್ಯಾಂಕ್ ಸ್ಫೋಟಗೊಂಡು ಇಬ್ಬರು ಕಾರ್ಮಿಕರು ಸಾವನ್ನಪ್ಪಿರುವ ಘೋರ ಘಟನೆ, ಮಂಡ್ಯದ ಬಸರಾಳು ಸಮೀಪದ ಕಾರೆಕಟ್ಟೆಯ ಬಳಿಯ ಕೀರ್ತಿ ಕೆಮಿಕಲ್ ಕಾರ್ಖಾನೆಯಲ್ಲಿ ಸಂಭವಿಸಿದೆ. ಕಾರೆಕಟ್ಟೆಯಿಂದ ಬೇರೆ ಕಡೆಗೆ ಕಾರ್ಖಾನೆಯನ್ನು ಶಿಫ್ಟ್ ಮಾಡಲಾಗುತ್ತಿತ್ತು. ಬಿಹಾರ ಮೂಲಕ ಕಾರ್ಮಿಕರಿಂದ ಕಾರ್ಖಾನೆ ಸ್ಥಳಾಂತರ ಕಾರ್ಯ ನಡೆಯುತ್ತಿತ್ತು. ಕಳೆದ ಒಂದು ತಿಂಗಳಂದಲೂ ಸ್ಥಳಾಂತರದ ಕೆಲಸ ನಡೆಯುತ್ತಿತ್ತು. ಇಂದು ರಾಸಾಯನಿಕ ಟ್ಯಾಂಕ್ ತೆರವು ಮಾಡುತ್ತಿದ್ದ ಕಾರ್ಮಿಕರು, ಈ ವೇಳೆ ಟ್ಯಾಂಕ್ಸ್ ಸ್ಪೋಟಗೊಂಡು ಸ್ಥಳದಲ್ಲೇ ಇಬ್ಬರು ಸಾವನಪ್ಪಿದ್ದಾರೆ. ಘಟನೆಯಲ್ಲಿ ಮತ್ತಿಬ್ಬರು ಕಾರ್ಮಿಕರು ಅಸ್ವಸ್ಥರಾಗಿದ್ದು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

Read More

ಮಂಗಳೂರು : ಮಂಗಳೂರಿನಲ್ಲಿ ಪತಿಯ ಪ್ರೀತಿ ಪ್ರೇಮ ಪ್ರಣಯದಾಟಕ್ಕೆ ಪತ್ನಿಯೊಬ್ಬಳು ರೋಸಿ ಹೋಗಿದ್ದು ಪತಿಯ ವಿರುದ್ಧವೇ ಪತ್ನಿ ಇದಿ ದೂರು ಕೊಟ್ಟಿದ್ದಾಳೆ. ಮದುವೆ ಆಗಿದ್ದರೂ ಕೂಡ ಪತಿ ಬೇರೆ ಯುವತಿಯರ ಜೊತೆಗೆ ಪ್ರೀತಿ ಪ್ರೇಮ ನಾಟಕವಾಡುತ್ತಿದ್ದ. ವಿದೇಶದಲ್ಲಿಯ ಕುಳಿತು ಈತ ಯುವತಿಯರಿಗೆ ಗಾಳ ಹಾಕುತ್ತಾನೆ. ಕರಾವಳಿ ಮಂಗಳೂರು ಯುವತಿಯರೇ ಈತನ ನೇರ ಟಾರ್ಗೆಟ್ ಆಗಿದ್ದು, ಗಂಡನ ಪ್ರೇಮ, ಪ್ರೀತಿ ಪ್ರಣಯದಾಟಕ್ಕೆ ಪತ್ನಿ ಬೇಸತ್ತು ಹೋಗಿದ್ದಾಳೆ. ಮಂಗಳೂರಿನ ಬಜಪೆ ನಿವಾಸಿ ಮನಿಶ್ ವಿರುದ್ಧ ಪತ್ನಿ ಪ್ರೀತಿ ಇದೀಗ ದೂರು ಕೊಟ್ಟಿದ್ದಾಳೆ. ಮಂಗಳೂರು ಮಹಿಳಾ ಠಾಣೆಯಲ್ಲಿ ಮನಿಶ್ ವಿರುದ್ಧ ಎಫ್ಐಆರ್ ಕೂಡ ದಾಖಲಾಗಿದೆ. ಮದುವೆ ಆಗಿದ್ದರೂ ಕೂಡ ಹಿತ ಬೇರೆ ಯುವತಿಯರೊಂದಿಗೆ ನೌಟಂಕಿ ಆಟ ಆಡುತ್ತಿದ್ದ. ಫೇಸ್ಬುಕ್ ನಲ್ಲಿ ಪ್ರೀತಿಯನ್ನು ಪರಿಚಯ ಮಾಡಿಕೊಂಡಿದ್ದ ಮನೀಶ್ ಬ್ಲ್ಯಾಕ್ಮೇಲ್ ಮಾಡಿ ನನ್ನ ಮದುವೆಯಾಗಿದ್ದಾನೆ ಎಂದು ಆರೋಪ ಮಾಡಿದ್ದಾರೆ. ಮದುವೆಗೆ ಮೂರು ದಿನ ಇರುವಾಗ ಮನೀಶ್ ಆತ್ಮಹತ್ಯೆ ನಾಟಕ ಕೂಡ ಆಡಿದ್ದ ಎಲ್ಲ ಖರ್ಚು ಹಾಕಿ ಪ್ರೀತಿ ಪೋಷಕರು…

Read More

ಶಿವಮೊಗ್ಗ : ಕಾರಿನ ಬಾಡಿಗೆ ಹಣ ನೀಡಲು ಲಂಚ ಸ್ವೀಕರಿಸಿದ ಪ್ರಕರಣದಲ್ಲಿ ಕೆಎಎಸ್ ಅಧಿಕಾರಿ ಹಾಗೂ ನಾಡ ಕಚೇರಿ ಸಹಾಯಕ‌ ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ. ರಾಷ್ಟ್ರೀಯ ಹೆದ್ದಾರಿ 206 ವಿಶೇಷ ಭೂ ಸ್ವಾಧೀನಾಧಿಕಾರಿ ಸಿದ್ದಲಿಂಗ ರೆಡ್ಡಿ ಹಾಗೂ ಹೊಳಲೂರು ನಾಡಕಚೇರಿ ಸಹಾಯಕ ರಾಜೇಶ್ ಲೋಕಾಯುಕ್ತ ಪೊಲೀಸರಿಗೆ ರೆಡ್ ಹ್ಯಾಂಡ್ ಆಗಿ ಸಿಗಿಬಿದ್ದಿದ್ದಾರೆ. ಶಿವಮೊಗ್ಗ ಓತಿಘಟ್ಟ ಗ್ರಾಮ ನಿವಾಸಿ ಕೇಶವಮೂರ್ತಿ ಎಂಬುವರು ತಮ್ಮ ಎರ್ಟಿಗಾ ಕಾರನ್ನು ಕಳೆದ ಎರಡು ವರ್ಷಗಳಿಂದ ವಿಶೇಷ ಭೂ ಸ್ವಾಧೀನಾಧಿಕಾರಿಗಳ ಕಚೇರಿಗೆ ಬಾಡಿಗೆಗೆ ಬಿಟ್ಟಿದ್ದರು. ಕೇಶವಮೂರ್ತಿಗೆ ಕಳೆದ ವರ್ಷದ ನವೆಂಬರ್ ತಿಂಗಳ ಬಾಡಿಗೆ ಹಣದ ಬಾಕಿ ಬರಬೇಕಿತ್ತು. ಈ ಕುರಿತು ಬಾಡಿಗೆ ಕೇಳಿದಾಗ 40 ಸಾವಿರ ರೂ. ಹಣ ಲಂಚ ನೀಡುವಂತೆ ಸಿದ್ದಲಿಂಗ ರೆಡ್ಡಿ ಬೇಡಿಕೆ ಇಟ್ಟಿದ್ದಾರೆ ಎಂದು ಕೇಶವಮೂರ್ತಿ ಲೋಕಾಯುಕ್ತರಿಗೆ ದೂರು ನೀಡಿದ್ದರು. ಈ ದೂರಿನ ಅನ್ವಯ ಶನಿವಾರ 40 ಸಾವಿರ ರೂ. ಹಣ ಲಂಚ‌ ಪಡೆಯುವಾಗ ದಾಳಿ ನಡೆಸಲಾಗಿದೆ. ಸಿದ್ದಲಿಂಗ ರೆಡ್ಡಿ ಸೂಚನೆ ಮೇರೆಗೆ…

Read More