Author: kannadanewsnow05

ಶಾಸ್ತ್ರಾನುಸಾರ ಪ್ರಾಕ್ ಶಿರಾ ಶಯನೇ ವಿಂದ್ಯಾತ್ ಧನಮಾಯುಶ್ಚ ದಕ್ಷಿಣೇ | ಪಶ್ಚಿಮೇ ಪ್ರಬಲಾ ಚಿಂತಾ ಹಾನಿಮೃತ್ಯುರಥೋತ್ತರೇ || ಪೂರ್ವಕ್ಕೆ ತಲೆ ಇಟ್ಟುಕೊಂಡು ಮಲಗಿದರೆ ಧನ ಪ್ರಾಪ್ತಿಯಾಗುವುದು.ಲೌಕಿಕ ಐಶ್ವರ್ಯ ಬಯಸಿದರೆ ಆ ಪ್ರಕಾರ ಸಂಕಲ್ಪ ಮಾಡಿಕೊಂಡು ಪೂರ್ವಕ್ಕೆ ನಿತ್ಯ ರಾತ್ರಿಯಲ್ಲಿ ಮಲಗುವಾಗ ತಲೆಯನ್ನು ಹಾಕಬಹುದು. ದಕ್ಷಿಣಕ್ಕೆ ತಲೆ ಇಟ್ಟುಕೊಂಡು ಮಲಗಿದರೆ ಆಯುಸ್ಸು, ಮಾನಸಿಕ ನೆಮ್ಮದಿ, ಶಾಂತಿ ಹೆಚ್ಚುತ್ತದೆ. ಪಶ್ಚಿಮಕ್ಕೆ ತಲೆ ಮಾಡಿ ಮಲಗಿದರೆ,ಪ್ರಬಲವಾದ ಚಿಂತೆಗಳು ಯಾವಾಗಲೂ ಎಲ್ಲಾ ವಿಭಾಗಗಳಲ್ಲಿಯೂ ಬರುತ್ತಲೇ ಇರುತ್ತವೆ. ಉತ್ತರಕ್ಕೆ ತಲೆ ಇಟ್ಟು ಮಲಗಿದರೆ,ಧನ ನಷ್ಟ ಮತ್ತು ಮರಣ ಸಂಭವಿಸುತ್ತದೆ, ಅಂದರೆ ಆಯುಷ್ಯ ಹಾನಿಯಾಗುತ್ತದೆ. ಪೂರ್ವ ದಿಕ್ಕು ಸೂರ್ಯೋದಯದ ದಿಕ್ಕು. ಆರೋಗ್ಯಂ ಭಾಸ್ಕರಾದಿಚ್ಛೇತ್, ಸೂರ್ಯನಿಂದ ಆರೊಗ್ಯವನ್ನು ಬಯಸಿ, ಎಂಬುದು ಸ್ಮೃತಿ ವಾಕ್ಯ. ಸೂರ್ಯನು ಐಶ್ವರ್ಯಕ್ಕೆ, ಆರೋಗ್ಯಕ್ಕೆ ಪ್ರಧಾನ ದೇವತೆ. ಪೂರ್ವಕ್ಕೆ ತಲೆ ಮಾಡಿ ಮಲಗಿದರೆ, ಐಶ್ವರ್ಯ ಮತ್ತು ಆರೋಗ್ಯ ಸಿದ್ಧಿಸುತ್ತದೆ. ದಕ್ಷಿಣವು ಪಿತೃದೇವತೆಗಳು ಮತ್ತು ಯಮನ ದಿಕ್ಕು. ದಕ್ಷಿಣಕ್ಕೆ ತಲೆಮಾಡಿ ಮಲಗಿದರೆ ಆಯುಸ್ಸು ವೃದ್ಧಿಯಾಗುತ್ತದೆ. ಪಶ್ಚಿಮಕ್ಕೆ ತಲೆ ಇಟ್ಟು ಮಲಗಿದರೆ…

Read More

ಬೆಂಗಳೂರು : ಬೆಂಗಳೂರು ಪೊಲೀಸ್ ಕಮಿಷನರ್ ಹೆಸರಿನಲ್ಲಿ ನಕಲಿ ಫೇಸ್ಬುಕ್ ಖಾತೆ ಸೃಷ್ಟಿ ಮಾಡಲಾಗಿದೆ. ಕಮಿಷನರ್ ಸೀಮಂತ ಕುಮಾರ್ ಸಿಂಗ್ ಹೆಸರಿನಲ್ಲಿ ನಕಲಿ ಫೇಸ್ಬುಕ್ ಖಾತೆ ಸೃಷ್ಟಿಸಲಾಗಿದೆ. ಗಣ್ಯರ ಜೊತೆಗೆ ಇರುವ ಫೋಟೋ ಪೋಸ್ಟ್ ಮಾಡಿ ನಕಲಿ ಖಾತೆ ಸೃಷ್ಟಿ ಮಾಡಿದ್ದು ಹಿಂದಿ ಭಾಷೆಯ ಹೆಸರು ಇರುವ ಖಾತೆ ರಚನೆ ಮಾಡಿ ವಂಚನೆಗೆ ಯತ್ನಿಸಿದ್ದಾರೆ. ತಪ್ಪು ಸಂದೇಶ ನೀಡುವ ಮೆಸೇಜ್ ಮಾಡಿ ವಂಚಕರು ದಾರಿ ತಪ್ಪಿಸುತ್ತಿದ್ದಾರೆ ಆಯುಕ್ತರೆ ಪೋಸ್ಟ್ ಮಾಡುತ್ತಿದ್ದಾರೆ ಎಂದು ನಂಬಿ ಜನರು ಅದಕ್ಕೆ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಮೊದಲು ನಂಬಿಸಿ ನಂತರ ಹಣ ದೋಚುವ ಉದ್ದೇಶದಿಂದ ಖಾತೆ ರಚನೆ ಮಾಡಿದ್ದಾರೆ ಈ ಹಿಂದೆ ಆಲೋಕ ಕುಮಾರ್ ಹಾಗು ಭೀಮಶಂಕರ ಹೆಸರಿನಲ್ಲಿ ಕೂಡ ಖಾತೆ ಸೃಷ್ಟಿ ಮಾಡಲಾಗಿದ್ದು ನಕಲಿ ಫೇಸ್ಬುಕ್ ಖಾತೆ ಸೃಷ್ಟಿಸಿ ಕಿಡಿಗೇಡಿಗಳು ವಂಚನೆಗೆ ಯತ್ನಿಸುತ್ತಿದ್ದಾರೆ ಈ ಸಂಬಂಧ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.

Read More

ವಿಜಯನಗರ : ಐತಿಹಾಸಿಕ ಹಂಪಿ ಉತ್ಸವ ನಡೆಯುತ್ತಿದ್ದು, ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಹಂಪಿಯ ಜನತಾ ಪ್ಲಾಟ್ ನ್ ನ ಪ್ರದೇಶದಲ್ಲಿ ಇದೀಗ ಚಿರತೆ ಪ್ರತ್ಯಕ್ಷವಾಗಿದೆ. ಜನನಿಬೀಡ ಪ್ರದೇಶದಲ್ಲಿ ಚಿರತೆ ಕಾಣಿಸಿಕೊಂಡಿದ್ದು ಇದೀಗ ಆತಂಕಕ್ಕೆ ಎಡೆ ಮಾಡಿಕೊಟ್ಟಿದೆ. ವಿರೂಪಾಕ್ಷ ದೇಗುಲದ ಕೂಗಳತೆ ದೂರದಲ್ಲಿ ಚಿರತೆ ಒಂದು ಪ್ರತ್ಯಕ್ಷವಾಗಿದೆ. ಚಿರತೆ ಓಡಾಟದ ದೃಶ್ಯ ಮನೆಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ನಿನ್ನೆ ಸಿಸಿ ಟಿವಿ ದೃಶ್ಯವನ್ನು ನೋಡಿ ಸಾರ್ವಜನಿಕರು ಬೆಚ್ಚಿಬಿದ್ದಿದ್ದಾರೆ.

Read More

ಚಿಕ್ಕಮಗಳೂರು : ಚಿಕ್ಕಮಗಳೂರಲ್ಲಿ ಕಾಡಾನೆ ದಾಳಿ ಮುಂದುವರೆದಿದ್ದು, ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಕಾಡಾನೆ ದಾಳಿ ಮಾಡಿದೆ. ಕಾಡಾನೆ ದಾಳಿಯಿಂದ ಕಾರ್ಮಿಕ ಯಲ್ಲಪ್ಪ (50) ಸಾವನಪ್ಪಿದ್ದಾನೆ. ನಾಗೇಶ್ ಗೌಡ ಎಂಬುವವರ ತೋಟದಲ್ಲಿ ಕೆಲಸ ಮಾಡುತ್ತಿದ್ದಾಗ ಕಾಡಾನೆ ಏಕಾಏಕಿ ದಾಳಿ ಮಾಡಿದೆ. ಚಿಕ್ಕಮಂಗಳೂರು ಜಿಲ್ಲೆಯ ನರಸಿಂಹರಾಜಪುರ ತಾಲೂಕಿನ ಬಾಳೆಹೊನ್ನೂರು ಅರಣ್ಯ ವಿಭಾಗದ ವ್ಯಾಪ್ತಿಯಲ್ಲಿ ಈ ಒಂದು ಘಟನೆ ನಡೆದಿದೆ. ಘಟನಾ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ಮಾಡುತ್ತಿದ್ದಾರೆ.

Read More

ಹಾಸನ : ಹಾಸನದಲ್ಲಿ ಸೈಟ್ ವಿಚಾರಕ್ಕೆ ಸಂಬಂಧಪಟ್ಟಂತೆ ನಟ ಯಶ್ ತಾಯಿ ಅವರಿಗೆ ಕಾನೂನು ಹೋರಾಟದಲ್ಲಿ ಮುನ್ನಡೆ ಸಿಕ್ಕಿದೆ. ಪ್ರತಿವಾದಿ ಪರ ಬಂದಿದ್ದ ಆದೇಶಕ್ಕೆ ಕೋರ್ಟ್ ಇದೀಗ ತಡೆ ನೀಡಿದೆ ಹಾಸನದ ನಾಲ್ಕನೇ ಜೆ ಎಂ ಎಫ್ ಸಿ ಕೋರ್ಟ್ ಈ ಆದೇಶ ಹೊರಡಿಸಿದೆ. ಲಕ್ಷ್ಮಮ್ಮ ಅವರ ಜಿಪಿಎ ಹೋಲ್ಡರ್ ಹಾಕಿದ್ದ ಈ ಒಂದು ಕೆ ಎಸ್ ನಲ್ಲಿ ಸೈಟ್ ಮಾಲೀಕರು ಎಂದು ಹೇಳುತ್ತಿರುವ ಲಕ್ಷ್ಮಮ್ಮ ಕಕ್ಷಿದಾರರಾಗಿ ಪರಿಗಣಿಸದೆ ಆದೇಶ ಎಂದು ಪುಷ್ಪ ಅವರು ಅರ್ಜಿ ಸಲ್ಲಿಸಿದರು. ಆದೇಶವನ್ನು 90 ದಿನದ ಒಳಗೆ ಮೇಲ್ಮನವಿ ಹಾಕದ ಬಗ್ಗೆ ಅರ್ಜಿ ಸಲ್ಲಿಸಿದ್ದು ವಿಳಂಬ ಅರ್ಜಿ ಮಾನ್ಯ ಮಾಡಿ ಕಕ್ಷಿದಾರರಿಗೆ ಹಾಜರಾಗಲು ಅವಕಾಶ ನೀಡಿತು. ಫೆಬ್ರವರಿ 11ರಂದು ಹಾಸನದ 4ನೇ JMFC ಕೋರ್ಟ್ ಇದೀಗ ತೀರ್ಪು ಹೊರಡಿಸಿದೆ. ದಾವೆ ಇತ್ಯರ್ಥ ತನಕ ಆದೇಶ ಜಾರಿ ಅಥವಾ ಅನುಷ್ಠಾನಕ್ಕೆ ತಡೆ ನೀಡಿ ಆದೇಶ ಹೊರಡಿಸಿದೆ. ಜಾಗ ಪರಭಾರೆ ಮೂಲ ಸ್ವರೂಪ ಬದಲಾವಣೆ ಮಾಡದಂತೆ ನಿರ್ಬಂಧ ವಿಧಿಸಿ…

Read More

ಬೆಳಗಾವಿ : ಕರ್ನಾಟಕ ಗೋವಾ ಗಡಿಯಲ್ಲಿ 400 ಕೋಟಿ ದರೋಡೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಹಾರಾಷ್ಟ್ರ SIT ವರದಿಯಲ್ಲಿ ಸ್ಪೋಟಕ ಮಾಹಿತಿ ಬಹಿರಂಗವಾಗಿದ್ದು, 400ಕೋಟಿ ದರೋಡೆ ಆಗಿದೆ ಎಂಬುದೇ ಸುಳ್ಳು ಎಂದು ಮಹಾರಾಷ್ಟ್ರ ಎಸ್ಐಟಿ ತನಿಖೆಯಲ್ಲಿ ವರದಿ ಬಹಿರಂಗವಾಗಿದೆ. ಹೌದು 400 ಕೋಟಿ ದರೋಡೆ ಪ್ರಕರಣದ ತನಿಖೆಗೆ ಮಹಾರಾಷ್ಟ್ರ ಸರ್ಕಾರ ಎಸ್ಐಟಿ ರಚಿಸಿತ್ತು. ಒಂದು ತಿಂಗಳ ಕಾಲ ಎಸ್ಐಟಿ ಅಧಿಕಾರಿಗಳು ಈ ಒಂದು ಪ್ರಕರಣದ ತನಿಖೆ ನಡೆಸಿದ್ದರು. ಚೋರ್ಲ ಘಾಟ್ ಬಳಿ ಯಾವುದೇ ದರೋಡೆ ನಡೆದಿಲ್ಲ ಎಂದು ವರದಿ ಬಂದಿದೆ ಎಂದು ಸಂದೀಪ್ ಪಾಟೀಲ್ ನಾಸಿಕ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಇದೀಗ ದೂರುದಾರ ಸಂದೀಪ್ ಹೇಳಿಕೆಯಲ್ಲಿ ವ್ಯತ್ಯಾಸ ಕಂಡು ಬಂದಿದೆ. ಕೃತ್ಯದ ಸ್ಥಳ, ಸಮಯ ಕರೆ ವಿವರದ ನಿಖರ ಮಾಹಿತಿ ಲಭ್ಯವಾಗಿಲ್ಲ. ಚೋರ್ಲ ಘಾಟ್ ನಲ್ಲಿ ದರೋಡೆ ನಡೆದಿಲ್ಲವೆಂದು ಎಸ್ಐಟಿ ವರದಿ ಸಲ್ಲಿಸಿದೆ. ಸಾಕ್ಷಿ ಕೊರತೆಯಿಂದಾಗಿ ಆರೋಪಿಗಳ ಬಿಡುಗಡೆಗೆ ಕೋರ್ಟ್ ಆದೇಶ ಹೊರಡಿಸಿದೆ. ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯಗಳಲ್ಲಿ ಈ ಒಂದು…

Read More

ಚಿತ್ರದುರ್ಗ : ಚಿತ್ರದುರ್ಗದಲ್ಲಿ ಘೋರವಾದ ದುರಂತ ಸಂಭವಿಸಿದ್ದು ಕಟ್ಟಡದ ಮೂರನೇ ಮಹಡಿನ ಬಿದ್ದು ಎಸ್ ಎಸ್ ಎಲ್ ಸಿ ವಿದ್ಯಾರ್ಥಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ಡಿವಿಎಸ್ ವಸತಿ ಶಾಲೆಯ ವಿದ್ಯಾರ್ಥಿ ಕೊಟ್ರೇಶ್ (16) ಆತ್ಮಹತ್ಯೆ ಶರಣಾಗಿರುವ ವಿದ್ಯಾರ್ಥಿ ಎಂದು ತಿಳಿದುಬಂದಿದೆ. ಚಿತ್ರದುರ್ಗ ತಾಲೂಕಿನ ಭರಮಸಾಗರದ ಡಿವಿಎಸ್ ಶಾಲೆಯಲ್ಲಿ ಈ ಒಂದು ದುರಂತ ನಡೆದಿದೆ. ಚಿತ್ರದುರ್ಗದ ಕರಿಯಣ್ಣನಹಳ್ಳಿ ನಿವಾಸಿಯಾಗಿರುವ ವಿದ್ಯಾರ್ಥಿ ಕೊಟ್ರೇಶ್, ವಿದ್ಯಾರ್ಥಿ ಕೊಟ್ರೇಶ್ ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಕೊಟ್ರೇಶ್ ಶಾಲಾ ಕಟ್ಟಡದ 3ನೇ ಮಹಡಿಯಿಂದ ಕೆಳಕ್ಕೆ ಜಿಗಿದಿದ್ದಾನೆ. ಗಂಭೀರವಾಗಿ ಗಾಯಗೊಂಡಿದ್ದ ಆತನನ್ನು ತಕ್ಷಣವೇ ಆಸ್ಪತ್ರೆಗೆ ಕರೆದೊಯ್ಯುವ ಪ್ರಯತ್ನ ಮಾಡಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ. ವಿದ್ಯಾರ್ಥಿಯ ಈ ತೀವ್ರ ನಿರ್ಧಾರಕ್ಕೆ ನಿಖರವಾದ ಕಾರಣ ಇನ್ನೂ ತಿಳಿದುಬಂದಿಲ್ಲ. ಪರೀಕ್ಷೆಯ ಒತ್ತಡವೋ ಅಥವಾ ವೈಯಕ್ತಿಕ ಕಾರಣಗಳೋ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಘಟನಾ ಸ್ಥಳಕ್ಕೆ ಭರಮಸಾಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

Read More

ವಿಜಯಪುರ : ವಿಜಯಪುರದಲ್ಲಿ ಮಹಾಶಿವರಾತ್ರಿಯಂದೇ ದರೋಡೆ ನಡೆದಿದ್ದು, ಮನೆಯ ಮಾಲೀಕರು ಇಲ್ಲದೆ ವೇಳೆ ಕಳ್ಳರು ತಮ್ಮ ಕೈ ಚಳಕ ತೋರಿಸಿದ್ದಾರೆ. ಮಹಾಶಿವರಾತ್ರಿ ಜಾಗರಣೆಯನ್ನೇ ಬಂಡವಾಳ ಮಾಡಿಕೊಂಡ ಖದೀಮರು ಶಿವರಾತ್ರಿ ಜಾಗರಣೆಗೆ ಹೋಗಿದ್ದವರ ಮನೆ ಕಳ್ಳತನ ಮಾಡಿರುವ ಘಟನೆ ವಿಜಯಪುರ ನಗರದ ಶಾರದಾ ನಗರದಲ್ಲಿ ನಡೆದಿದೆ. ಸೋಮಶೇಖರ ಗಣಿ ಎಂಬವರ ಮನೆ ಕಳ್ಳತನ ಮಾಡಲಾಗಿದೆ. ಮನೆಯಲ್ಲಿದ್ದ 40 ಸಾವಿರ ನಗದು, 154 ಗ್ರಾಂ ಚಿನ್ನಾಭರಣ, 270 ಗ್ರಾಂ ಬೆಳ್ಳಿ ಆಭರಣ ಕದ್ದು ಖದೀಮರು ಪರಾರಿಯಾಗಿದ್ದಾರೆ. ಮನೆಗೆ ಬೀಗ ಹಾಕಿ ಶಿವಗಿರಿಗೆ ಕುಟುಂಬಸ್ಥರು ತೆರಳಿದ್ದರು. ಇಂಡಿಯಾ – ಪಾಕ್ ಟಿ20 ಕ್ರಿಕೆಟ್ ಮ್ಯಾಚ್ ಇದ್ದ ಕಾರಣ ಬೀದಿಯಲ್ಲೂ ಜನರಿರಲಿಲ್ಲ. ಇದನ್ನೇ ಬಂಡವಾಳ ಮಾಡಿಕೊಂಡು ಕಳ್ಳರು ಕಳ್ಳತನ ಮಾಡಿ ಪರಾರಿಯಾಗಿದ್ದಾರೆ.ಸದ್ಯ ಸ್ಥಳಕ್ಕೆ ಗೋಲಗುಂಬಜ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬೆರಳಚ್ಚು, ಶ್ವಾನದಳ ತಂಡಗಳಿಂದಲೂ ಪರೀಕ್ಷೆ ನಡೆದಿದೆ. ಗೋಲಗುಂಬಜ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Read More

ಹಾಸನ : ನಿನ್ನೆ ಹಾಸನದಲ್ಲಿ ಮದುವೆಗೆ ಬಂದಿದ್ದ ಮಹಿಳೆ (v) ನಿಗೂಢವಾಗಿ ನಾಪತ್ತೆಯಾಗಿದ್ದ ಪ್ರಕರಣವನ್ನು ಭೇದಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಫೆ.12 ರಂದು ರಾತ್ರಿ ಕುಣಿಗಲ್‌ನಿಂದ ಚಿಕ್ಕಮಗಳೂರಿಗೆ ಬಂದಿದ್ದ ಬೇಲೂರು ತಾಲೂಕಿನ, ಮತ್ತಾವರ ಗ್ರಾಮದ ಮಹಿಳೆ ಪ್ರಿಯಾಂಕ ನಿಗೂಢ ರೀತಿಯಲ್ಲಿ ಕಣ್ಮರೆಯಾಗಿದ್ದಳು. ಕಲ್ಕೆರೆ ಗ್ರಾಮದ ಬಳಿ ಆಕೆಯ ಒಳುಉಡುಪು, ವ್ಯಾನಿಟಿ ಬ್ಯಾಗ್, ವೇಲ್, ಟಾಪ್ ಪತ್ತೆಯಾಗಿದ್ದವು. ಇದನ್ನು ಕಂಡ ಆಕೆಯ ಕುಟುಂಬಸ್ಥರು ಅತ್ಯಾಚಾರ ಮಾಡಿ‌ ಕೊಲೆ ಮಾಡಲಾಗಿದೆ, ಚಿನ್ನಾಭರಣಕ್ಕಾಗಿ ಕೊಲೆ ಮಾಡಲಾಗಿದೆ. ಪೊಲೀಸರು ದೂರು ಸ್ವೀಕರಿಸಲಿಲ್ಲ ಎಂದು ಆರೋಪಗಳ ಸುರಿಮಳೆಗೈದಿದ್ದರು. ಪ್ರಕರಣವನ್ನು ಸವಲಾಗಿ ಸ್ವೀಕರಿಸಿದ ಎಸ್ಪಿ ಶುಭನ್ವಿತಾ ಪ್ರಕರಣದ ತನಿಖೆಗಾಗಿ ವಿಶೇಷ ತಂಡ ರಚನೆ ಮಾಡಿದ್ದರು. ಕಳೆದ ನಾಲ್ಕೈದು ವರ್ಷಗಳಿಂದ ಕುಣಿಗಲ್ ಬಳಿಯ ಕೆಮಿಕಲ್ ಫ್ಯಾಕ್ಟರಿಯಲ್ಲಿ ಪ್ರಿಯಾಂಕ ಹಾಗೂ ಡೇವಿಡ್ ಕೆಲಸ ಮಾಡುತ್ತಿದ್ದರು. ತನಗೆ ಮದುವೆಯಾಗಿ ಗಂಡು ಮಗುವಿದ್ದರು ಪ್ರಿಯಾಂಕ ಡೇವಿಡ್ ಪ್ರೀತಿಯ ಬಲೆಯಲ್ಲಿ ಬಿದ್ದಿದ್ದಳು. ಆನಂತರದಲ್ಲಿ ಇಬ್ಬರ ಸಂಬಂಧ ಹೊಂದಿದ್ದರು. ಈ ಬಗ್ಗೆ ಪತಿ ಹಾಗೂ ತಮ್ಮ ಕುಟುಂಬದವರಿಗೆ ಯಾವುದೇ ಅನುಮಾನ…

Read More

ಬೆಂಗಳೂರು : ಮೆಟ್ರೋ ಪ್ರಯಾಣದ ದರ ಏರಿಕೆ ಬೆನ್ನಲ್ಲೆ ರಾಜ್ಯದ ಜನತೆಗೆ ಮತ್ತೊಂದು ಶಾಕ್ ಎದುರಾಗಿದ್ದು, ನಾಳೆಯಿಂದ ಕೆಎಸ್ಆರ್ಟಿಸಿ ಬಸ್ಗಳಲ್ಲಿ ಲಗೇಜ್ ದರ ಹೆಚ್ಚಳ ಮಾಡಿ ಅದೇಶಿಸಲಾಗಿದೆ. ಪ್ರಯಾಣಿಕ ರಹಿತವಾಗಿ ಸಾಗಿಸುವ ಲಗೇಜ್ ದರದಲ್ಲಿ ಇದೀಗ ಪರಿಷ್ಕರಣೆ ಮಾಡಲಾಗಿದೆ. 1 ರಿಂದ 5 ಸ್ಟೇಜ್ ವರೆಗೆ 6 ರೂಪಾಯಿ, 6ರಿಂದ 12 ಸ್ಟೇಜ್ ವರೆಗೆ 12 ರೂಪಾಯಿ, 156 ರಿಂದ 160 ಸ್ಟೇಜ್ ವರೆಗೆ 145 ಗೆ ಹೆಚ್ಚಳ ಮಾಡಲಾಗಿದೆ. ಲಗೇಜ್ ದರ ಹೆಚ್ಚಿಸಿ ಕೆಎಸ್ಆರ್ಟಿಸಿ ಎಂಡಿ ಅಕ್ರಂ ಪಾಷಾ ಆದೇಶ ಹೊರಡಿಸಿದ್ದಾರೆ. 2021 ರಲ್ಲಿ ಪ್ರಯಾಣಿಕ ರಹಿತ ಲಗೇಜು ದರ ಏರಿಕೆಯಾಗಿತ್ತು. ಟಿಕೆಟ್ ದರ ಪರಿಷ್ಕರಣಿಯಾದಾಗ ಲಗೇಜ್ ದರ ಹೆಚ್ಚಿಸಿರಲಿಲ್ಲ. ಹಾಗಾಗಿ ಇದೀಗ ನಾಳೆಯಿಂದ ಲಗೇಜ್ ದರ ಹೆಚ್ಚಿಸಿ ಕೆಎಸ್ಆರ್ಟಿಸಿ ಎಂಡಿ ಅಕ್ರಂ ಪಾಷಾ ಆದೇಶ ಹೊರಡಿಸಿದ್ದಾರೆ.

Read More