Author: kannadanewsnow05

ನವದೆಹಲಿ : ಪಾಕಿಸ್ತಾನ ಡ್ರೋನ್ ಮತ್ತು ಕ್ಷಿಪಣಿಗಳ ಮೂಲಕ ಭಾರತದ ಮೇಲೆ ದಾಳಿ ಮಾಡುತ್ತಿದ್ದು ಎಲ್ಲಾ ಡ್ರೋನ್ ಮತ್ತು ಕ್ಷಿಪಣಿಗಳನ್ನು ಭಾರತ ಹೊಡೆದುರುಳಿಸಿದೆ. ಇದುವರೆಗೂ ಪಾಕಿಸ್ತಾನದ 50 ಡ್ರೋನ್ ಗಳನ್ನು ಭಾರತ ಹೊಡೆದುರುಳಿಸಿದೆ. ಈ ಮೂಲಕ ಪಾಕಿಸ್ತಾನಕ್ಕೆ ಭಾರತ 6 ಮರ್ಮಘಾತ ನೀಡಿದೆ. ಹೌದು ಭಾರತವನ್ನು ಕೆಣಕಿದ ಪಾಕಿಸ್ತಾನಕ್ಕೆ ಭಾರತೀಯ ಸೈನಿಕರು 6 ಮರ್ಮಾಘಾತ ನೀಡಿದ್ದಾರೆ. ಪಾಕಿಸ್ತಾನದ ಕ್ಷಿಪಣಿ ದಾಳಿಗೆ ಭಾರತೀಯ ಸೈನಿಕರು ಕೂಡ ತಕ್ಕ ಪ್ರತ್ಯುತ್ತರ ನೀಡಿದ್ದು, ಇದುವರೆಗೂ ಪಾಕಿಸ್ತಾನ ಭಾರತದ ಮೇಲೆ ಎಲ್ಲಾ ರೀತಿಯಲ್ಲಿ ದಾಳಿ ಮಾಡಿದೆಯೋ, ಅವೆಲ್ಲವನ್ನು ಭಾರತೀಯ ಸೇನಾ ಪಡೆ ವಿಫಲಗೊಳಿಸಿದೆ. 1) ಪಾಕಿಸ್ತಾನದ ಫೈಟರ್ ಜೆಟ್ ಗಳು ಧ್ವಂಸವಾಗಿವೆ. 2) ಪಾರ್ಕ್ ನ AWACS ಸರ್ವೇಕ್ಷಣ ವಿಮಾನ ಧ್ವಂಸವಾಗಿದೆ. 3) ಪಾಕಿಸ್ತಾನದ 4 ಕಡೆಯ ಏರ್ ಡಿಫೆನ್ಸ್ ಸಿಸ್ಟಮ್ ಧ್ವಂಸ 4) ಪಾಕಿಸ್ತಾನದ ಡ್ರೋನ್ ಗಳನ್ನು ಸಹ ಭಾರತ ಧ್ವಂಸಗೊಳಿಸಿದೆ. 5) ಲಾಹೋರ್, ಸಿಯಾಲ್ ಕೋಟ್ ಸೇರಿ 4 ಕಡೆ ದಾಳಿ ನಡೆಸಿದೆ. 6)…

Read More

ಬೆಂಗಳೂರು : ಪಹಲ್ಗಾಮ್ ಉಗ್ರ ದಾಳಿಯಿಂದ ದೇಶ ತೊರೆಯುವಂತೆ ಕೇಂದ್ರ ಸರ್ಕಾರ ಪಾಕಿಸ್ತಾನ ಪ್ರಜೆಗಳಿಗೆ ಗಡುವು ನೀಡಿತ್ತು. ಈ ವಿಚಾರವಾಗಿ ನಮ್ಮ ವಿರುದ್ಧ ಬಲವಂತದ ಕ್ರಮ ಕೈಗೊಳ್ಳದಂತೆ ಮೈಸೂರು ಮೂಲದ ತಾಯಿಯೊಬ್ಬಳು ತನ್ನ ಮೂವರು ಪಾಕಿಸ್ತಾನ ಮಕ್ಕಳ ಪರವಾಗಿ ಹೈಕೋರ್ಟಿಗೆ ಅರ್ಜಿ ಸಲ್ಲಿಸಿದರು.ಇದೀಗ ಕೇಂದ್ರ ಸರ್ಕಾರ ದೇಶದ ಪ್ರಜೆಗಳ ರಕ್ಷಣೆಯಿಂದಾಗಿ ಪಾಕಿಸ್ತಾನಿ ನಿವಾಸಿಗಳು ದೇಶ ತೊರೆಯಲು ಕೇಂದ್ರ ಸರ್ಕಾರ ಸೂಚನೆ ನೀಡಿದೆ. ಈ ಹಂತದಲ್ಲಿ ನಾವು ಮಧ್ಯಪ್ರವೇಶ ಮಾಡಲಾಗುವುದಿಲ್ಲ ಎಂದು ಹೈಕೋರ್ಟ್ ನ್ಯಾಯಪೀಠ ತಿಳಿಸಿದೆ. ಕಾಶ್ಮೀರದ ಪಹಲ್ಗಾಮ್​​ನಲ್ಲಿ ಪ್ರವಾಸಿಗರ ಮೇಲೆ ನಡೆದ ಉಗ್ರರ ಗುಂಡಿನ ದಾಳಿ ಹಿನ್ನೆಲೆಯಲ್ಲಿ ಭಾರತದಲ್ಲಿರುವ ಎಲ್ಲ ಪಾಕಿಸ್ತಾನದ ಪ್ರಜೆಗಳು ದೇಶ ತೊರೆಯಬೇಕೆಂಬ ಕೇಂದ್ರ ಸರ್ಕಾರದ ಆದೇಶದಲ್ಲಿ ಮಧ್ಯಪ್ರವೇಶಿಸಲು ಹೈಕೋರ್ಟ್ ನಿರಾಕರಿಸಿದೆ. ಜೊತೆಗೆ ತಮ್ಮ ವಿರುದ್ಧ ಬವಲವಂತದ ಕ್ರಮ ಕೈಗೊಳ್ಳದಂತೆ ಸರ್ಕಾರಕ್ಕೆ ನಿರ್ದೇಶನ ಕೋರಿ ಭಾರತೀಯ ತಾಯಿ ಮತ್ತು ಪಾಕಿಸ್ತಾನದ ತಂದೆಗೆ ಜನಿಸಿದ ಪಾಕಿಸ್ತಾನದ ಮೂವರು ಅಪ್ರಾಪ್ತ ಮಕ್ಕಳು ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿ ಆದೇಶಿಸಿದೆ. ಪಾಕಿಸ್ತಾನದ ಬಲೂಚಿಸ್ತಾನದ 8…

Read More

ಇಸ್ಲಾಮಾಬಾದ್ : ಭಾರತ ಪಾಕಿಸ್ತಾನದ ವಿರುದ್ಧ ಆಪರೇಷನ್ ಸಿಂಧೂರ್ ಕಾರ್ಯಾಚರಣೆ ನಡೆಸಿದ ಬೆನ್ನಲ್ಲೇ ಪಾಕಿಸ್ತಾನ ಸಹ ನಾವು ಭಾರತದ ಹಲವು ಯುದ್ಧ ವಿಮಾನಗಳನ್ನು ಹೊಡೆದುರುಳಿಸಿದ್ದೇವೆ ಎಂದು ಸುಳ್ಳು ಸುದ್ದಿಗಳನ್ನು ಪ್ರಚಾರ ಮಾಡಿತ್ತು. ಇದೇ ವಿಚಾರವಾಗಿ ಇದೀಗ ಪಾಕಿಸ್ತಾನ ಪ್ರಜೆ ಭಾರತದ ದಾಳಿಯನ್ನು ಶ್ಲಾಘನೆ ಮಾಡಿದ್ದು, ತಮ್ಮ ದೇಶದ ಸುಳ್ಳುಗಳನ್ನು ಬಯಲಿಗೆಳೆದು, ಭಾರತದ ನಿಖರ ದಾಳಿಗಳನ್ನು ಶ್ಲಾಘಿಸಿದ್ದಾನೆ. ವೈರಲ್ ಆಗಿರುವ ವಿಡಿಯೊದಲ್ಲಿ ಈ ಪಾಕಿಸ್ತಾನದ ವ್ಯಕ್ತಿ ಭಾರತವು 24 ಕ್ಷಿಪಣಿಗಳನ್ನು ಉಡಾಯಿಸಿದ್ದು, ಪಾಕಿಸ್ತಾನವು ಒಂದೇ ಒಂದು ಕ್ಷಿಪಣಿಯನ್ನು ತಡೆಯಲು ವಿಫಲವಾಯಿತು ಎಂದು ಹೇಳಿದ್ದಾನೆ . ಪಾಕಿಸ್ತಾನದ ಮಾಧ್ಯಮಗಳು ಭಾರತೀಯ ವಿಮಾನಗಳನ್ನು ಹೊಡೆದುರುಳಿಸಿದ್ದೇವೆ ಎಂದು ಹರಡಿದ್ದ ಮಾಹಿತಿಯನ್ನು ಸುಳ್ಳು ಎಂದು ಈ ವ್ಯಕ್ತಿ ಹೇಳಿದ್ದಾನೆ. ಅವೆಲ್ಲವೂ ತಪ್ಪು ವರದಿಗಳು ಎಂದು ಪಾಕಿಸ್ತಾನದ ವ್ಯಕ್ತಿಯೇ ಖಂಡಿಸಿದ್ದಾನೆ. ಭಾರತ ತನ್ನ ಎಲ್ಲ ಗುರಿಗಳನ್ನು ಯಶಸ್ವಿಯಾಗಿ ಹೊಡೆದಿದೆ. ಪಾಕಿಸ್ತಾನದ ರಕ್ಷಣಾ ವ್ಯವಸ್ಥೆ ಒಂದು ಕ್ಷಿಪಣಿಯನ್ನೂ ತಡೆಯಲಿಲ್ಲ. ಭಾರತ ನಮ್ಮ ಮನೆಯೊಳಕ್ಕೆ ಒಳನುಗ್ಗಿ ದಾಳಿ ಮಾಡಿತು, ಇದು ಸತ್ಯ. ಇರಾನ್…

Read More

ನವದೆಹಲಿ : ಭಾರತದ ಮೇಲೆ ಪಾಕಿಸ್ತಾನ ತಡರಾತ್ರಿ ಇಂದಲೂ ಕ್ಷಿಪಣಿ ದಾಳಿ ಮತ್ತು ಡ್ರೋನ್ ದಾಳಿ ನಡೆಸುತ್ತಿದೆ ಆದರೆ ಭಾರತ ಮಾತ್ರ ಪಾಕಿಸ್ತಾನದ ಯಾವುದೇ ಡ್ರೋನ್ ಗಳನ್ನು ಗಡಿಯಿಂದ ಒಳಗಡೆ ಪ್ರವೇಶಕ್ಕೆ ಬಿಡದೆ, ಎಲ್ಲ ಡ್ರೋನ್ ಗಳನ್ನು ಹೊಡೆದುರುಳಿಸಿದೆ ಎಂದು ಭಾರತೀಯ ಸೇನೆಯಿಂದ ಮಾಹಿತಿ ಲಭ್ಯವಾಗಿದೆ. ಹೌದು ಭಾರತದ ಮೇಲೆ ಪಾಕಿಸ್ತಾನ ಇದುವರೆಗೂ 50 ಡ್ರೋನ್ ಗಳ ಮೂಲಕ ದಾಳಿ ಮಾಡಿತ್ತು. ಇದೀಗ ಎಲ್ಲಾ 50 ಡ್ರೋನ್ ಗಳನ್ನು ನಿಷ್ಕ್ರಿಯಗೊಳಿಸುವಲ್ಲಿ ಭಾರತೀಯ ಸೇನೆ ಯಶಸ್ವಿಯಾಗಿದೆ. ಪಾಕಿಸ್ತಾನದ ದಾಳಿಗೆ ಭಾರತೀಯ ಸೇನಾಪಡೆ ತಕ್ಕ ಪ್ರತ್ಯುತ್ತರ ನೀಡಿ 50 ಡ್ರೋನ್ ಗಳನ್ನು ನಿಷ್ಕ್ರಿಯಗೊಳಿಸುವಲ್ಲಿ ಯಶಸ್ವಿಯಾಗಿದೆ. ಪಾಕಿಸ್ತಾನದ ಡ್ರೋನ್ ಗಳು ಕಂಪ್ಲೀಟ್ ಆಗಿ ನಿಷ್ಕ್ರಿಯಗೊಂಡಿವೆ ಎಂದು ತಿಳಿದುಬಂದಿದೆ.

Read More

ಬೆಂಗಳೂರು : ಪಹಲ್ಗಾಮ್ ಉಗ್ರರು ನಡೆಸಿದ ನರಮೇಧಕ್ಕೆ ಪ್ರತೀಕಾರವಾಗಿ ‘ಆಪರೇಷನ್ ಸಿಂದೂರ’ ಕಾರ್ಯಾಚರಣೆ ನಡೆಸುತ್ತಿರುವ ಭಾರತೀಯ ಯೋಧರಿಗೆ ಬೆಂಬಲ ಸೂಚಿಸಲು ಕಾಂಗ್ರೆಸ್ ನೇತೃತ್ವದಲ್ಲಿ ಪಕ್ಷಾತೀತವಾಗಿ ಶುಕ್ರವಾರ ಬೆಳಗ್ಗೆ 9.30 ಗಂಟೆಗೆ ಬೆಂಗಳೂರಿನಲ್ಲಿ ‘ತಿರಂಗಾ ಯಾತ್ರೆ’ ಹಮ್ಮಿಕೊಳ್ಳಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಶುಕ್ರವಾರ ಬೆಳಗ್ಗೆ ಕೆ.ಆರ್.ವೃತ್ತದಿಂದ ಚಿನ್ನಸ್ವಾಮಿ ಕ್ರಿಕೆಟ್ ಸ್ಟೇಡಿಯಂ ಬಳಿ ಇರುವ ಮಿನ್ಸ್‌ಸ್ಟ್‌ರ್‌ವರೆಗೆ ಬೃಹತ್ ತಿರಂಗಾ ಯಾತ್ರೆ ನಡೆಯಲಿದೆ. ಈ ವೇಳೆ ಎಲ್ಲಾ ಸಚಿವರು, ಶಾಸಕರು, ಕೆಪಿಸಿಸಿ ಮುಂಚೂಣಿ ಘಟಕಗಳ ಪದಾಧಿಕಾರಿ ಗಳು, ಯುವ ಕಾಂಗ್ರೆಸ್ ಕಾರ್ಯಕರ್ತರು ಕಡ್ಡಾಯವಾಗಿ ಭಾಗವಹಿಸಬೇಕು ಎಂದು ಪಕ್ಷ ಸೂಚಿಸಿದೆ. ಸಾರ್ವಜನಿಕರಿಗೂ ಕರೆ  ಪಕ್ಷದ ನಾಯಕರು, ಪದಾಧಿಕಾರಿಗಳು, ಕಾರ್ಯಕರ್ತರ ಜೊತೆಗೆ ‘ದೇಶಪ್ರೇಮ ಮೆರೆಯೋಣ, ಐಕ್ಯತೆ ಸಾರೋಣ’ ಎಂಬ ಘೋಷವ್ಯಾಕ್ಯ ದಡಿ ಸರ್ಕಾರಿ, ಖಾಸಗಿ ನೌಕರರು, ಚಿತ್ರರಂಗದವರು, ಪಕ್ಷ ಭೇದ ಮರೆತು ಎಲ್ಲಾ ಸಾರ್ವಜನಿಕರು ಭಾಗವಹಿಸ ಬೇಕೆಂದು ಕರೆ ನೀಡಿದೆ. ಪಕ್ಷದ ಕಾಯಕರ್ತರು ಹಾಗೂ ಸಾರ್ವಜನಿಕರು ಭಾಗವಹಿಸಿ ಕಡ್ಡಾಯವಾಗಿ ಭಾರತದ ಧ್ವಜ ಮಾತ್ರ ಪ್ರದರ್ಶಿಸುವಂತೆ ಸೂಚನೆ ನೀಡಲಾಗಿದೆ. ಬೆಂಬಲ…

Read More

ನವದೆಹಲಿ : ಕಳೆದ ಎರಡು ದಿನಗಳಿಂದ ಪಾಕಿಸ್ತಾನ ಭಾರತದ ಮೇಲೆ ಮೀಸಲ್ ದಾಳಿಗೆ ಯತ್ನಿಸುತ್ತಿದ್ದು ಎಲ್ಲಾ ಕ್ಷಿಪಣಿಗಳನ್ನು ಭಾರತದ ಸೇನಾಪಡೆ ಹೊಡೆದರು ಉಳಿಸಿದೆ ಇದೀಗ ಪಾಕಿಸ್ತಾನ ಮತ್ತೆ ಕ್ಷಿಪಣಿ ದಾಳಿಗೆ ಯತ್ನಿಸಿದ್ದು, ಶಿರಾ ಪಡೆ ಮತ್ತೆ ಅವುಗಳನ್ನು ಹೊಡೆದುರುಳಿಸುವಲ್ಲಿ ಯಶಸ್ವಿಯಾಗಿದೆ. ಹೌದು ಪಾಕಿಸ್ತಾನ ಡ್ರೋನ್ ಕ್ಷಿಪಣಿ ದಾಳಿ ವಿಫಲಗೊಳಿಸಿದ ಭಾರತ. ಜಮ್ಮು-ಕಾಶ್ಮೀರ್, ಪಠಾನ್ ಕೋಟ್, ಉಧಂಪುರ್ ಮೇಲೆ ದಾಳಿಗೆ ಯತ್ನಿಸಲಾಗಿತ್ತು. ಸೇನಾ ನೆಲೆಗಳನ್ನು ಗುರಿಯಾಗಿಸಿಕೊಂಡು ಪಾಕಿಸ್ತಾನ ಕ್ಷಿಪಣಿ ದಾಳಿಗೆ ಯತ್ನಿಸಿದೆ ಪಾಕಿಸ್ತಾನದ ಡ್ರೋನ್ ಕ್ಷಿಪಣಿ ದಾಳಿಯನ್ನು ಭಾರತೀಯ ಸೇನಾ ಪಡೆ ವಿಫಲಗೊಳಿಸಿದೆ.

Read More

ನವದೆಹಲಿ : ಪಾಕಿಸ್ತಾನ ಹಾಗೂ ಭಾರತದ ನಡುವೆ ಯುದ್ಧದ ಉದ್ಭಗ್ನತೆ ಹಿನ್ನೆಲೆಯಲ್ಲಿ ಇದೀಗ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕೂಡ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ. ಹೌದು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಹೈ ಅಲರ್ಟ್ ಘೋಷಿಸಿದ್ದು, ಭಾರತ ಮತ್ತು ಪಾಕಿಸ್ತಾನದೊಂದಿಗಿನ ಉದ್ವಿಗ್ನತೆಯ ಹಿನ್ನೆಲೆ ಧೈರ್ಯಲಿ ಘೋಷಣೆ ಮಾಡಲಾಗಿದ್ದು, ಹಾಗಾಗಿ

Read More

ಇಸ್ಲಾಮಾಬಾದ್ : ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಅವರ ಅಧಿಕೃತ ನಿವಾಸದಿಂದ 20 ಕಿ.ಮೀ. ದೂರದಲ್ಲಿ ಸ್ಫೋಟ ಸಂಭವಿಸಿದೆ. ಅಲ್ಲದೆ, ಭಾರತವು ಇಸ್ಲಾಮಾಬಾದ್‌ ಮೇಲೆವಾಯು ದಾಳಿ ನಡೆಸಿದೆ. ಹೀಗಾಗಿ ಷರೀಫ್ ಅವರನ್ನು ಸುರಕ್ಷಿತವಾಗಿ ಬಂಕರ್‌ಗೆ ಸ್ಥಳಾಂತರಿಸಲಾಗಿದೆ ಎಂದು ವರದಿಗಳು ಹೇಳಿವೆ. ಇಸ್ಲಾಮಾಬಾದ್‌ನ ಹೈ-ಸೆಕ್ಯುರಿಟಿ ವಲಯಗಳ ಬಳಿ ಸ್ಫೋಟಗಳು ವರದಿಯಾದ ನಂತರ ಪ್ರಧಾನಿ ಷರೀಫ್, ಸೇನಾ ಮುಖ್ಯಸ್ಥ ಅಸೀಂ ಮುನೀರ್, ಸಚಿವರು ಹಾಗೂ ಪ್ರಮುಖ ಸೇನಾಧಿಕಾರಿಗಳು ಸೇರಿದಂತೆ ಪ್ರಮುಖ ಸರ್ಕಾರಿ ವ್ಯಕ್ತಿಗಳ ಸುತ್ತ ಭದ್ರತೆಯನ್ನು ಗಮನಾರ್ಹವಾಗಿ ತೀವ್ರಗೊಳಿಸಲಾಗಿದೆ ಎಂದು ಹೇಳಲಾಗುತ್ತಿದೆ. ಪ್ರಧಾನಿಯವರ ಪ್ರಸ್ತುತ ಸ್ಥಳದ ಬಗ್ಗೆ ಯಾವುದೇ ಪಾಕಿಸ್ತಾನ ಸರ್ಕಾರದಿಂದ ಯಾವುದೇ ಅಧಿಕೃತ ದೃಢೀಕರಣ ಬಂದಿಲ್ಲವಾದರೂ, ಸಂಭವನೀಯ ಪ್ರತೀಕಾರದ ಕ್ರಮಗಳು ಅಥವಾ ಸ್ಥಿತಿ ಬಿಗಡಾಯಿಸುವ ಭೀತಿಯಿಂದ ದೃಷ್ಟಿಯಿಂದ ಮುನ್ನೆಚ್ಚರಿಕೆ ಪ್ರೋಟೋಕಾಲ್‌ಗಳನ್ನು ಸಕ್ರಿಯಗೊಳಿಸಲಾಗಿದೆ ಎಂದು ಮೂಲಗಳು ಸೂಚಿಸುತ್ತವೆ.

Read More

ಪಂಜಾಬ್ : ಪಾಕಿಸ್ತಾನ ಭಾರತದ ಮಳೆ ಕ್ಷಿಪಣಿ ದಾಳಿ ನಡೆಸುತ್ತಿದೆ ಆದರೆ ಭಾರತ ಕೂಡ ಪಾಕಿಸ್ತಾನದ ಕ್ಷಿಪಣಿಗಳನ್ನು ಹೊಡೆದುರುಳಿಸುವಲ್ಲಿ ಯಶಸ್ವಿಯಾಗಿದೆ. ಇದೀಗ ಭಾರತದ ಮೇಲೆ ಪಾಕಿಸ್ತಾನ ಕ್ಷಿಪಣಿ ದಾಳಿ ನಡೆಸುತ್ತಿರುವ ಹಿನ್ನೆಲೆಯಲ್ಲಿ ಪಂಜಾಬ್ ನಲ್ಲಿ ಮೂರು ದಿನಗಳ ಕಾಲ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಹೌದು ಪಂಜಾಬ್ ಶಿಕ್ಷಣ ಸಚಿವ ಹರ್ಜೋತ್ ಸಿಂಗ್ ಈ ಕುರಿತು ಪ್ರಕಟಣೆ ಹೊರಡಿಸಿದ್ದು, ಮೂರು ದಿನಗಳ ಕಾಲ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಿದ್ದಾರೆ. ರಾಜ್ಯದ ಶಾಲಾ ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳಿಗೆ ಮೂರು ದಿನ ರಜೆ ಘೋಷಿಸಲಾಗಿದೆ.

Read More

ಬೆಂಗಳೂರು : ಪಹಲ್ಗಾಮ್ ಉಗ್ರ ದಾಳಿಯ ಪ್ರತಿಕಾರವಾಗಿ ಇದೀಗ ಭಾರತ ಪಾಕಿಸ್ತಾನದ ಮೇಲೆ ದಾಳಿ ಮಾಡಿದ್ದು, ಈಗಾಗಲೇ ಪಾಕಿಸ್ತಾನದಲ್ಲಿರುವ ಉಗ್ರರ ಕ್ಯಾಂಪ್‌ಗಳನ್ನು ಭಾರತೀಯ ಸೇನೆ ದ್ವಂಸಗೊಳಿಸಿದೆ. ಅಲ್ಲದೆ ಭಾರತದ ಮೇಲೆ ಕ್ಷಿಪಣಿಯ ದಾಳಿ ಮಾಡುತ್ತಿದ್ದ ಪಾಕಿಸ್ತಾನದ ಮಿಸೆಲ್ ಗಳನ್ನು ಭಾರತ ಹೊಡೆದುರುಳಿಸಿದೆ. ಇನ್ನು ಈ ಒಂದು ಸನ್ನಿವೇಶದಲ್ಲಿ ಬೆಂಗಳೂರಿನ HAL ನಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಹೌದು ಪಾಕಿಸ್ತಾನ ದಾಳಿಯಿಂದ ಉದ್ವಿಗ್ನ ಸ್ಥಿತಿ ಹಿನ್ನೆಲೆಯಲ್ಲಿ ಬೆಂಗಳೂರಿನ ಹೆಚ್‌ಎಎಲ್ ನಲ್ಲಿ ಹೈಅಲರ್ಟ್ ಘೋಷಿಸಲಾಗಿದೆ. ಓವರ್ ಟೈಮ್ ಕೆಲಸಕ್ಕೆ ಸಿದ್ಧವಾಗಿರುವಂತೆ ಸಿಬ್ಬಂದಿಗಳಿಗೆ ಸೂಚನೆ ನೀಡಲಾಗಿದ್ದು, HAL ನ ಎಲ್ಲಾ ಸಿಬ್ಬಂದಿಯ ರಜೆಯನ್ನು ರದ್ದುಗೊಳಿಸಿ ಆದೇಶಿಸಿದ್ದು, ಫೈಟರ್ ಫ್ಲೈಟ್ ಗಳ ನಿರ್ವಹಣೆ ಹಿನ್ನಲೆ ಕಡ್ಡಾಯವಾಗಿ ಹಾಜರಿರುವಂತೆ ಎಲ್ಲಾ ತಂತ್ರಜ್ಞರಿಗೆ ಸೂಚನೆ ನೀಡಲಾಗಿದೆ.

Read More