Author: kannadanewsnow05

ಕಲಬುರ್ಗಿ : ಭಾರತ ಮತ್ತು ಪಾಕಿಸ್ತಾನದ ನಡುವೆ ಪರಿಸ್ಥಿತಿ ಉದ್ವಿಗ್ನ ವಾಗಿದ್ದು ಈಗಾಗಲೇ ಭಾರತ ಪಾಕಿಸ್ತಾನಕ್ಕೆ ಆಪರೇಷನ್ ಸಿಂಧೂರ್ ಮೂಲಕ ತಿರುಗೇಟು ನೀಡಿದೆ. ಅಲ್ಲದೆ ಈಗಾಗಲೇ ನೂರಕ್ಕೂ ಹೆಚ್ಚು ಉಗ್ರರು ಸಾವನಪ್ಪಿದ್ದು ಭಾರತಕ್ಕೆ ಬೇಕಾಗಿದ್ದ ಐವರು ಮೋಸ್ಟ್ ವಾಂಟೆಡ್ ಉಗ್ರರನ್ನು ಸಹ ಆಪರೇಷನ್ ಸಿಂಧೂರ ದಾಳಿಯಲ್ಲಿ ಭಾರತೀಯ ಸೇನೆ ಹತ್ಯೆಗೈದಿದೆ. ಇನ್ನು ನರೇಂದ್ರ ಮೋದಿ ಹೇಳಿದರೆ ಪಾಕಿಸ್ತಾನಕ್ಕೆ ಸುಯಿಸೈಡ್ ಬಾಂಬ್ ಹಾಕೊಂಡು ಹೋಗಲು ಸಿದ್ದ ಎಂದು ಸಚಿವ ಜಮೀರ್ ಅಹ್ಮದ್ ಮತ್ತೊಮ್ಮೆ ಪುನರುಚ್ಚಿಸಿದ್ದಾರೆ. ಕಲ್ಬುರ್ಗಿಯಲ್ಲಿ ವಕ್ಫ್ ಸಚಿವ ಜಮೀರ್ ಅಹ್ಮದ್ ಖಾನ್ ಹೇಳಿಕೆ ನೀಡಿದ್ದು, ಆಪರೇಷನ್ ಸಿಂಧೂರ್ ಯಶಸ್ವಿಗಾಗಿ ನಿನ್ನೆ ಪ್ರಾರ್ಥನೆ ಮಾಡಿದ್ದೇವೆ. ಪಾಕಿಸ್ತಾನದ ವಿರುದ್ಧ ಭಾರತ ಸರ್ಕಾರ ಉತ್ತಮ ನಿರ್ಧಾರ ಕೈಗೊಂಡಿದೆ. ನನ್ನ ದೇಶಕ್ಕಾಗಿ ಏನು ಬೇಕಾದರೂ ಮಾಡಲು ನಾನು ಸಿದ್ಧನಿದ್ದೇನೆ ಎಂದು ಕಲಬುರ್ಗಿ ಸಚಿವ ಜಮೀರ್ ಅಹ್ಮದ್ ಖಾನ್ ಹೇಳಿಕೆ ನೀಡಿದರು. ಪ್ರಧಾನಿ ನರೇಂದ್ರ ಮೋದಿಯವರು ಹೇಳಿದರೆ ತಕ್ಷಣ ಸುಸೈಡ್ ಬಾಂಬ್ ಹಾಕಿಕೊಂಡು ಪಾಕಿಸ್ತಾನಕ್ಕೆ ಹೋಗಲು ನಾನು ಸಿದ್ಧನಿದ್ದೇನೆ.…

Read More

ನವದೆಹಲಿ: ಮತ್ತೊಂದು ವಿಚಿತ್ರ ಹೇಳಿಕೆಯಲ್ಲಿ, ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಆಸಿಫ್ ಅವರು ಭಾರತದೊಂದಿಗೆ ಯುದ್ಧ ನಡೆದರೆ, ಮದರಸಾ ವಿದ್ಯಾರ್ಥಿಗಳು ಪಾಕಿಸ್ತಾನದ ಎರಡನೇ ಸಾಲಿನ ರಕ್ಷಣೆಯಾಗಿ ಕಾರ್ಯನಿರ್ವಹಿಸುತ್ತಾರೆ ಎಂದು ಹೇಳಿದ್ದಾರೆ. ಸಂಸತ್ತಿನಲ್ಲಿ ಮಾತನಾಡಿದ ಆಸಿಫ್, ಅಗತ್ಯವಿದ್ದಾಗ ಮದರಸಾ ವಿದ್ಯಾರ್ಥಿಗಳನ್ನು ನಿಯೋಜಿಸಲಾಗುವುದು ಎಂದು ಹೇಳಿದರು. ಮದರಸಾ ಮತ್ತು ಅದರ ವಿದ್ಯಾರ್ಥಿಗಳಿಗೆ ಸಂಬಂಧಿಸಿದಂತೆ, ಅವರು ನಮ್ಮ ಎರಡನೇ ಸಾಲಿನ ರಕ್ಷಣಾ ಪಡೆ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ. ಅಲ್ಲಿ ಅಧ್ಯಯನ ಮಾಡುವ ಯುವಕರು ಧರ್ಮದೊಂದಿಗೆ ಉತ್ತಮ ಸಂಪರ್ಕ ಹೊಂದಿದ್ದಾರೆ. ಅವರನ್ನು ನಗರಕ್ಕಾಗಿ ಅಥವಾ ಇತರ ಅಗತ್ಯಗಳಿಗಾಗಿ 100% ಬಳಸಬಹುದು ಎಂದು ಆಸಿಫ್ ಹೇಳಿದರು.

Read More

ಶ್ರೀನಗರ : ಪಹಲ್ಗಾಮ್ ಉಗ್ರರ ದಾಳಿಗೆ ಪ್ರತಿಕಾರವಾಗಿ ಭಾರತ ಇದೀಗ ಪಾಕಿಸ್ತಾನದ ಮೇಲೆ ದಾಳಿ ನಡೆಸಿದ್ದು, ಪಾಕಿಸ್ತಾನ ಕೂಡ ಭಾರತದ ಮೇಲೆ ನಿರಂತರವಾಗಿ ದಾಳಿ ನಡೆಸುತ್ತಿದೆ. ಆದರೆ ಭಾರತ ಪಾಕಿಸ್ತಾನದ ಎಲ್ಲಾ ಕ್ಷಿಪಣಿಗಳನ್ನು ಪುಡಿಗಟ್ಟಿದೆ. ಆದರೂ ಪಾಕಿಸ್ತಾನ ತನ್ನ ಹಳೆ ಚಟವನ್ನು ಬಿಡದೆ ಗಡಿಯಲ್ಲಿ ಮತ್ತೆ ಶೆಲ್ ದಾಳಿ ನಡೆಸಿದೆ. ಇದೀಗ ಜಮ್ಮು ಕಾಶ್ಮೀರದ ರಜೌರಿ ಸೆಕ್ಟರ್ ನಲ್ಲಿ ಪಾಕಿಸ್ತಾನದಿಂದ ಮತ್ತೆ ಶೆಲ್ ದಾಳಿ ನಡೆದಿದ್ದು, ಗಡಿಭಾಗದ ನಾಗರಿಕರನ್ನು ಗುರಿಯಾಗಿಸಿ ಪಾಕಿಸ್ತಾನ ಇದೀಗ ಮತ್ತೆ ಶಲ್ ದಾಳಿ ನಡೆಸಿದೆ. ಈ ಒಂದು ದಾಳಿಯಲ್ಲಿ ಹಲವು ನಾಗರೀಕರು ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಗಾಯಗೊಂಡವರನ್ನು ಸ್ಥಳೀಯರು ಆಂಬುಲೆನ್ಸ್ ನಲ್ಲಿ ಆಸ್ಪತ್ರೆಗೆ ಕರೆತಂದು ದಾಖಲಿಸಿದ್ದಾರೆ.

Read More

ನವದೆಹಲಿ : ಭಾರತ ಮತ್ತು ಪಾಕಿಸ್ತಾನದ ನಡುವೆ ಪರಿಸ್ಥಿತಿ ಉದ್ವಿಗ್ನವಾಗಿದ್ದು, ಈಗಾಗಲೇ ದೇಶದೆಲ್ಲೆಡೆ ಮಾಕ್ ಡ್ರಿಲ್ ಮೂಲಕ ಜನರಲ್ಲಿ ಜಾಗೃತೆ ಮೂಡಿಸಲಾಗುತ್ತಿದೆ. ಇದೇ ಸಂದರ್ಭದಲ್ಲಿ ಈ ನಾಲ್ಕು ರಾಜ್ಯಗಳ ಒಟ್ಟು 32 ವಿಮಾನ ನಿಲ್ದಾಣಗಳನ್ನು ಮೇ 14ರ ವರೆಗೆ ತಾತ್ಕಾಲಿಕವಾಗಿ ಬಂದ್ ಮಾಡಲಾಗುತ್ತಿದೆ. ಹೌದು ಭಾರತ ಮತ್ತು ಪಾಕಿಸ್ತಾನದ ನಡುವೆ ಯುದ್ಧದ ಕಾರ್ಮೋಡ ಕವಿದಿದ್ದು, ಹಾಗಾಗಿ ದೇಶದ ಜನರ ಸುರಕ್ಷತೆಯ ಹಿನ್ನೆಲೆಯಲ್ಲಿ, ಮೇ 14ರವರೆಗೆ ಭಾರತದ 32 ಏರ್ಪೋರ್ಟ್ ಗಳು ಬಂದ್ ಆಗಿರಲಿದೆ. ಈ ಬಗ್ಗೆ ಕೇಂದ್ರ ನಾಗರೀಕ ವಿಮಾನಯಾನ ಸಚಿವಾಲಯದಿಂದ ಈ ಕುರಿತು ಆದೇಶ ಹೊರಡಿಸಲಾಗಿದ್ದು, ಜಮ್ಮು ಕಾಶ್ಮೀರ, ಪಂಜಾಬ್ ರಾಜಸ್ಥಾನ ಹಾಗೂ ಗುಜರಾತ್ ಈ 4 ರಾಜ್ಯಗಳಲ್ಲಿನ ಒಟ್ಟು 32 ವಿಮಾನ ನಿಲ್ದಾಣಗಳು ತಾತ್ಕಾಲಿಕವಾಗಿ ಬಂದ್ ಆಗಲಿವೆ.

Read More

ನವದೆಹಲಿ : ಪಾಕಿಸ್ತಾನದ ವಿರುದ್ಧ ಭಾರತ ಪ್ರತಿ ದಾಳಿ ನಡೆಸುತ್ತಿದ್ದು, ಇದೀಗ ಭಾರತೀಯ ಸೇನೆಯಿಂದ ಮತ್ತೊಂದು ವಿಡಿಯೋ ರಿಲೀಸ್ ಆಗಿದೆ. ಪಾಕಿಸ್ತಾನದ ವಿರುದ್ಧ ಪ್ರತಿದಾಳಿಯ ವಿಡಿಯೋವನ್ನು ಭಾರತೀಯ ಸೇನೆ ರಿಲೀಸ್ ಮಾಡಿದೆ. ಗಡಿಯುದ್ದಕ್ಕೂ ಪಾಕಿಸ್ತಾನದ ಪೋಸ್ಟ್ಗಳನ್ನು ಭಾರತೀಯ ಸೇನೆ ದ್ವಂಸಗೊಳಿಸಿದೆ. ಪಾಕಿಸ್ತಾನದ ಪ್ರತಿಯೊಂದು ದಾಳಿಗೆ ಭಾರತ ಇದೀಗ ತಿರುಗೇಟು ನೀಡುತ್ತಿದೆ. ಭಾರತೀಯ ಸೇನೆಯು ಭಯೋತ್ಪಾದಕ ಉಡಾವಣಾ ನೆಲೆಗಳನ್ನು ಪುಡಿಪುಡಿ ಮಾಡಿದೆ ಜಮ್ಮು ಮತ್ತು ಕಾಶ್ಮೀರ ಮತ್ತು ಪಂಜಾಬ್‌ನ ಹಲವಾರು ನಗರಗಳಲ್ಲಿ 2025 ರ ಮೇ 08 ಮತ್ತು 09 ರ ರಾತ್ರಿ ಪಾಕಿಸ್ತಾನ ಡ್ರೋನ್ ದಾಳಿಗೆ ಯತ್ನಿಸಿದ್ದಕ್ಕೆ ಪ್ರತಿಕ್ರಿಯೆಯಾಗಿ, #ಭಾರತೀಯ ಸೇನೆಯು ಭಯೋತ್ಪಾದಕ ಉಡಾವಣಾ ನೆಲೆಗಳ ಮೇಲೆ ಸಂಘಟಿತ ಗುಂಡಿನ ದಾಳಿ ನಡೆಸಿ, ಅವುಗಳನ್ನು ಪುಡಿಪುಡಿ ಮಾಡಿ ನಾಶಮಾಡಿತು. ನಿಯಂತ್ರಣ ರೇಖೆಯ ಬಳಿ ಇರುವ ಭಯೋತ್ಪಾದಕ ಉಡಾವಣಾ ನೆಲೆಗಳು, ಹಿಂದೆ ಭಾರತೀಯ ನಾಗರಿಕರು ಮತ್ತು ಭದ್ರತಾ ಪಡೆಗಳ ವಿರುದ್ಧ ಭಯೋತ್ಪಾದಕ ದಾಳಿಗಳನ್ನು ಯೋಜಿಸುವ ಮತ್ತು ಕಾರ್ಯಗತಗೊಳಿಸುವ ಕೇಂದ್ರವಾಗಿತ್ತು. ಭಾರತೀಯ ಸೇನೆಯ ತ್ವರಿತ…

Read More

ನವದೆಹಲಿ : ಪಲ್ಗಾಂ ನಲ್ಲಿ ಉಗ್ರರ ದಾಳಿಯ ಪ್ರತೀಕಾರವಾಗಿ ಭಾರತ ಪಾಕಿಸ್ತಾನದ ಮೇಲೆ ನಿರಂತರವಾಗಿ ದಾಳಿ ನಡೆಸುತ್ತಿದ್ದು, ಇತ್ತೀಚೆಗೆ ಆಪರೇಷನ್ ಸಿಂಧೂರ್ ಮೂಲಕ ನೂರಕ್ಕೂ ಹೆಚ್ಚು ಉಗ್ರರನ್ನು ಭಾರತೀಯ ಸೇನೆ ಹತ್ಯೆಗೈದಿದೆ. ಇದೀಗ ಪಾಕಿಸ್ತಾನದ ಮೇಲೆ ಭಾರತದ ದಾಳಿ ಮುಂದುವರೆದಿದ್ದು, ಭಾರತೀಯ ವಾಯು ಸೇನೆಯು (IAF) ಪಾಕಿಸ್ತಾನದ 8 ಏರ್ ಬೇಸ್ ಗಳನ್ನು ಧ್ವಂಸಗೊಳಿಸಿದೆ. ಹೌದು ಪಾಕಿಸ್ತಾನದ 8 ವಾಯು ನೆಲೆಗಳನ್ನು ಭಾರತೀಯ ಸೇನೆ ಧ್ವಂಸ ಮಾಡಿದೆ. ಪಾಕಿಸ್ತಾನದ ನೂರ್ ಖಾನ್ ವಾಯು ನೆಲೆ, ಮುರಿದ್ ವಾಯುನೆಲೆ, ರಫೀಕಿ ಏರ್ ಬೇಸ್, ರಹ್ಮ್ ಯಾರ್ ಖಾನ್ ವಾಯುನೆಲೆ, ರಗೋದಾ ಏರ್ಬೇಸ್, ಸುಕ್ಕೂರು ವಾಯುನೆಲೆ, ಚೂನಿಯನ್ ವಾಯುನೆಲೆ ಹಾಗು ಸಿಯಾಲ್ ಕೋಟ್ ವಾಯುನೆಲೆಯನ್ನು ಭಾರತೀಯ ವಾಯು ಸೇನೆಯು ಏರ್ ಸ್ಟ್ರೈಕ್ ಮೂಲಕ ಪಾಕಿಸ್ತಾನದ 8 ವಾಯು ನೆಲೆಯನ್ನು ಐಎಎಫ್ ಇದೀಗ ಧ್ವಂಸಗೊಳಿಸಿದೆ.

Read More

ರಾಜಸ್ಥಾನ್ : ಭಾರತ ಮತ್ತು ಪಾಕಿಸ್ತಾನದ ನಡುವೆ ಇದೀಗ ಕ್ಷಿಪಣಿ ದಾಳಿ ಮುಂದುವರೆದಿದ್ದು, ಕಳೆದ ಕೆಲವು ದಿನಗಳಿಂದ ಗಡಿಯಲ್ಲಿ ಪಾಕಿಸ್ತಾನ ಕದನ ವಿರಾಮ ಉಲ್ಲಂಘನೆ ಮಾಡುತ್ತಿದೆ. ಬಳಿಕ ಭಾರತದ ಮೇಲೆ ದಾಳಿ ಮಾಡಿದ ಪಾಕಿಸ್ತಾನದ ಎಲ್ಲಾ ಡ್ರೋನ್ ಗಳನ್ನು ಭಾರತೀಯ ಸೇನೆ ಹೊಡೆದುರುಳಿಸಿದ್ದು, ಇದೀಗ ಪಾಕಿಸ್ತಾನ ತನ್ನ ಬಳಿ ಇರುವ ಅತ್ಯಾಧುನಿಕ ಮಿಸೈಲ್ ಅನ್ನು ಭಾರತದ ಮೇಲೆ ದಾಳಿ ಮಾಡಿದೆ. ಆದರೆ ಭಾರತೀಯ ಸೇನೆ ಅದನ್ನು ಸಹ ನಾಶ ಮಾಡಿದೆ. ಹೌದು ಅತ್ಯಾಧುನಿಕ ಅಬ್ದಾಲಿ ಮಿಸೈಲ್ ಅನ್ನು ಪಾಕಿಸ್ತಾನ ಇದೀಗ ಭಾರತದ ಮೇಲೆ ದಾಳಿ ಮಾಡಿದೆ. ತನ್ನ ಬಳಿ ಇರುವ ಅತ್ಯಾಧುನಿಕ ಮಿಸೈಲ್ ಅನ್ನು ಬಳಸಿ ಭಾರತದ ಮೇಲೆ ಪಾಕಿಸ್ತಾನ ದಾಳಿ ಮಾಡಿದೆ.ಆದರೆ ಅಬ್ದಾಲಿ ಮಿಸೈಲ್ ಅನ್ನು ಭಾರತೀಯ ಸೇನೆ ಉಡೀಸ್ ಮಾಡಿದೆ. ಸೇನಾ ನೆಲೆ ಲಾಜೆಸ್ಟಿಕ್ ಹಬ್ ಗಳನ್ನು ಟಾರ್ಗೆಟ್ ಮಾಡಿ ಪಾಕಿಸ್ತಾನ ಇದೀಗ ದಾಳಿ ಮಾಡಿದೆ. ರಾಜಸ್ಥಾನದ ಜೈಸಲ್ಮೆರ್ ನಲ್ಲಿ ಪಾಕಿಸ್ತಾನದ ಅಬ್ದಾಲಿ ಕ್ಷಿಪಣಿ ಇದೀಗ ಪುಡಿಪುಡಿ ಆಗಿದೆ.…

Read More

ವಿಜಯಪುರ : ವಿಜಯಪುರದಲ್ಲಿ ಘೋರವಾದ ದುರಂತವೊಂದು ಸಂಭವಿಸಿದ್ದು, ಮನೆಯ ಮುಂದೆ ಆಟವಾಡುತ್ತಿದ್ದ ಮೂರುವರೆ ವರ್ಷದ ಬಾಲಕನೋರ್ವ ತೆರೆದ ಬಾವಿಗೆ ಬಿದ್ದು ಮೃತಪಟ್ಟ ಘಟನೆ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನಲ್ಲಿ ನಡೆದಿದೆ. ಮೃತ ಬಾಲಕನನ್ನು ಮೂರುವರೆ ವರ್ಷದ ಬಾಲಕ ಹರ್ಷಿತ್ ಬಸವರಾಜ ಪಾಟೀಲ ಎಂದು ತಿಳಿದುಬಂದಿದೆ. ನಿನ್ನೆ ಸಂಜೆ ಮನೆ ಬಳಿ ಇರುವ ನಾಗಪ್ಪನ ಕಟ್ಟೆಯ ಸಮೀಪ ತೆರೆದ ಬಾವಿಗೆ ಬಿದ್ದಿದ್ದನು. ನಿನ್ನೆ ಸಂಜೆಯಿಂದಲೇ ಬಾಲಕ ಕಾಣೆಯಾಗಿದ್ದ. ಎಲ್ಲೆಡೆ ಹುಡುಕಿದರೂ ಸಿಕ್ಕಿರಲಿಲ್ಲ. ಸಂಶಯ ಬಂದು ಅಗ್ನಿಶಾಮಕ ಸಿಬ್ಬಂದಿ ಕರೆಸಿ ಬಾವಿಯಲ್ಲಿ ಇಳಿದು ಹುಡುಕಾಡಿದಾಗ ಶವ ಪತ್ತೆಯಾಗಿದೆ.ಘಟನೆ ಕುರಿತು ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ನವದೆಹಲಿ : ಪಹಲ್ಗಾಮ್ ಉಗ್ರ ದಾಳಿಗೆ ಪ್ರತೀಕಾರವಾಗಿ ಭಾರತ ಪಾಕಿಸ್ತಾನದ ಉಗ್ರರ ಕ್ಯಾಂಪ್ ಗಳ ಮೇಲೆ ಏಳರಂದು ಆಪರೇಷನ್ ಸಿಂಧೂರ ಹೆಸರಿನಲ್ಲಿ ದಾಳಿ ಮಾಡಿದ್ದು ಈ ಒಂದು ದಾಳಿಯಲ್ಲಿ ಭಾರತೀಯ ಸೇನೆ ಭಾರತಕ್ಕೆ ಬೇಕಾಗಿದ್ದ ಐವರು ಮೋಸ್ಟ್ ವಾಂಟೆಡ್ ಉಗ್ರರನ್ನು ಹತ್ಯೆಗೈದಿದೆ ಎಂದು ತಿಳಿದುಬಂದಿದೆ. ಹೌದು ಆಪರೇಷನ್ ಸಿಂಧೂರನಲ್ಲಿ ಹತ್ಯೆಯಾದಂತಹ ಉಗ್ರರ ಹೆಸರು ಇದೀಗ ಬಹಿರಂಗವಾಗಿದೆ. ಲಷ್ಕರ್-ಎ-ತೈಬಾದ ಮರ್ಕಜ್ ಇನ್ ಚಾರ್ಜ್ ಮುದಸೀರ್, ಜೈಶ್ ಎ ಮೊಹಮ್ಮದ್ ಉಗ್ರ ಹಫೀಜ್ ಮೊಹಮ್ಮದ್ ಜಮೀಲ್, ಬಹಾವಲ್ಪುರ್ ಮರ್ಕಜ್ ಸುಭಾನಲ್ಲಾದ ಇನ್ಚಾರ್ಜ್ ಆಗಿದಂತಹ ಜಮೀಲ್, ಜೈಶ್ ಎ ಮೊಹಮ್ಮದ್ ಉಗ್ರ ಮೊಹಮ್ಮದ್ ಯುಸುಫ್ ಕೂಡ ಹತ್ಯೆಯಾಗಿದ್ದಾನೆ. ಲಷ್ಕರ್-ಎ-ತೈಬಾ ಸಂಘಟನೆಯ ಉಗ್ರ ಖಾಲಿದ್ ಸಹ ಹತ್ಯೆಯಾಗಿದ್ದಾನೆ. ಮೇ ಏಳರಂದು ಭಾರತ ನಡೆಸಿದ ಆಪರೇಷನ್ ಸಿಂಧೂರದಲ್ಲಿ ಈ ಐದು ಮೋಸ್ಟ್ ವಾಂಟೆಡ್ ಉಗ್ರರ ಹತ್ಯೆಯಾಗಿದೆ. ಇನ್ನು ಮುಧಾಸೀರ್ ಖಾದಿಯಾನ್ ಖಾಸ್ ಅಲಿಯಾಸ್ ಅಬು ಜಿಂದಾಲ್, ಮೊಹಮ್ಮದ್ ಯೂಸುಫ್ ಅಜರ್ ಅಲಿಯಾಸ್ ಮೊಹಮ್ಮದ್ ಸಲೀಂ, ಅಬು ಆಕಾಶಾ ಅಲಿಯಾಸ್…

Read More

ದೊಡ್ಡಬಳ್ಳಾಪುರ : ದೊಡ್ಡಬಳ್ಳಾಪುರದಲ್ಲಿ ಭೀಕರವಾದ ಅಪಘಾತ ಸಂಭವಿಸಿದ್ದು, ತ್ರಿಬಲ್​​ ರೈಡ್​ ಮಾಡುತ್ತಿದ್ದ ಬೈಕ್​ ಅಪಘಾತಗೊಂಡು ಇಬ್ಬರು ಸವಾರರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಗುಂಡಮಗೆರೆ ಕ್ರಾಸ್ ಸಮೀಪದ ನೆಲ್ಲುಕುಂಟೆ ಸರ್ಕಲ್ ಬಳಿ ತಡರಾತ್ರಿ ನಡೆದಿದೆ. ಮೃತರನ್ನು ಗುಂಡಮಗೆರೆ ಗ್ರಾಮದ ವೆಂಕಟೇಶ್ (45), ಶಿವಪುರ ಗ್ರಾಮದ ರಕ್ಷಿತ್ (25) ಮೃತ ದುರ್ದೈವಿಗಳು. ಮುತ್ತೂರು ಗ್ರಾಮದ ವೆಂಕಟೇಶ್ (45)ಗೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಮಧ್ಯರಾತ್ರಿ ಒಂದೇ ಬೈಕಿನಲ್ಲಿ ಮೂವರು ಗುಂಡಮಗೆರೆ ಕ್ರಾಸ್​ನಿಂದ ನೆಲ್ಲುಕುಂಟೆ ಕಡೆ ಹೋಗುವಾಗ ಆಯತಪ್ಪಿ ಮರಕ್ಕೆ ಬೈಕ್​ ಡಿಕ್ಕಿ ಹೊಡೆದಿದೆ. ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Read More