Subscribe to Updates
Get the latest creative news from FooBar about art, design and business.
Author: kannadanewsnow05
ಬೆಂಗಳೂರು : ಬೆಂಗಳೂರಿನಲ್ಲಿ ಸೈಕೋ ಪತಿಯ ವಿರುದ್ಧ ಪತ್ನಿ ಠಾಣೆಯ ಮೆಟ್ಟಿಲು ಏರಿದ್ದು, ಪತಿಯ ವರ್ತನೆಗೆ ಬೇಸತ್ತು ಇದೀಗ ಠಾಣೆಗೆ ಮಹಿಳೆ ದೂರು ನೀಡಿದ್ದಾರೆ. ಪತಿಯ ವಿರುದ್ಧ ಪತ್ನಿ ಬನಶಂಕರಿ ಠಾಣೆಗೆ ದೂರು ನೀಡಿದ್ದಾರೆ. ಯೂನಿಸ್ ಪಾಷಾ ಪತ್ನಿ ಹಲೀಮಾ ಸಾದಿ ದೂರು ನೀಡಿದ್ದಾರೆ. ರಾಜಕಾರಣಿಗಳು ಸಹಚರರೊಂದಿಗೆ ಮಲಗುವಂತೆಯೇ ಈತ ಪತ್ನಿಗೆ ಒತ್ತಾಯಿಸಿದ್ದಾನೆ. ಅದಕ್ಕೆ ಪತ್ನಿ ಒಪ್ಪದಿದ್ದಕ್ಕೆ ಹಿಂಸೆ ಕೊಟ್ಟು ಆರು ಬಾರಿ ತಲಾಕ್ ನೀಡಿರುವ ಆರೋಪ ಕೇಳಿ ಬಂದಿದೆ. ಅಲ್ಲದೆ ಅತ್ತೆ, ಮಾವನ ವಿರುದ್ಧವು ವರದಕ್ಷಿಣೆ ಕಿರುಕುಳ ಆರೋಪ ಕೇಳಿ ಬಂದಿದೆ. ಪತಿ ಅತ್ತೆ ಮಾವನ ವಿರುದ್ಧ ಮಹಿಳೆ ಸಾಲು ಸಾಲು ಆರೋಪ ಮಾಡಿದ್ದಾರೆ. ನ್ಯಾಯ ಕೊಡಿಸಿ ಎಂದು ಹಿರಿಯ ಪೊಲೀಸ್ ಅಧಿಕಾರಿಗಳಿಗೆ ದೂರು ಸಲ್ಲಿಸಿದ್ದಾರೆ. ಬನಶಂಕರಿ ಠಾಣೆಯಲ್ಲಿ ಯುನಿಸ್ ಮತ್ತು ತಂದೆ-ತಾಯಿ ವಿರುದ್ಧ FIR ದಾಖಲಾಗಿದೆ. ತಲೆಗೆ ಗನ್ ಇಟ್ಟು ಬೆದರಿಸಿರುವ ಯೂನಿಸ್ ಪಾಷ ಪತ್ನಿ ಮನೆಯವರಿಗೆಲ್ಲ ಮಚ್ಚು ತೋರಿಸಿ ಬೆದರಿಸುತ್ತಾನೆ. ಪತಿ ಮಾತ್ರವಲ್ಲ ಅತ್ತೆ ಮಾವನಿಂದಲೂ ನಿರಂತರವಾಗಿ…
ಬೆಂಗಳೂರು : ನಿನ್ನೆ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಒಲಂಪಿಕ್ ಚಿನ್ನದ ಪದಕ ವಿಜೇತ ನೀರಜ್ ಚೋಪ್ರಾ ಜೊತೆಗೆ 7ನೇ ತರಗತಿ ವಿದ್ಯಾರ್ಥಿ ಒಬ್ಬ ಫೋಟೋ ತೆಗೆಸಿಕೊಂಡ ಬಳಿಕ ನಾಪತ್ತೆಯಾಗಿರುವ ಘಟನೆ ನಡೆದಿದೆ. ನಾಪತ್ತೆಯಾದ ವಿದ್ಯಾರ್ಥಿಯನ್ನು ಗೊರಗುಂಟೆಪಾಳ್ಯ ನಿವಾಸಿ ಡಿಮನ್ ರಾಜ್ ಎಂದು ತಿಳಿದುಬಂದಿದೆ. ಏಳನೇ ತರಗತಿ ಓದುತ್ತಿದ್ದ ಡಿಮನ್ ರಾಜ್ ಎಂದಿನಂತೆ ಬೆಳಗ್ಗೆ ಮನೆಯಿಂದ ಟ್ಯೂಷನ್‌ಗೆ ಹೋಗಿದ್ದ. ಆದರೆ ಟ್ಯೂಷನ್‌ಗೆ ಹೋಗದೇ ಕಂಠೀರವ ಸ್ಟೇಡಿಯಂಗೆ ಬಂದಿದ್ದ. ಕಂಠೀರವ ಸ್ಟೇಡಿಯಂನಲ್ಲಿ ಜಾವೆಲಿನ್ ಥ್ರೋ ಪ್ರಾಕ್ಟಿಸ್ ನೋಡಲು ಬಂದಿದ್ದ ಡಿಮನ್ ರಾಜ್ ಸ್ಟೇಡಿಯಂನಲ್ಲಿ ನೀರಜ್ ಚೋಪ್ರಾ ಜೊತೆ ಪೋಟೋ ತೆಗೆಸಿಕೊಂಡಿದ್ದ. ಬಳಿಕ ಅಲ್ಲಿದ್ದ ವ್ಯಕ್ತಿಯೊಬ್ಬರ ಮೂಲಕ ಪೋಟೋವನ್ನ ತನ್ನ ತಾಯಿಗೆ ಕಳುಹಿಸಿದ್ದ. ಅನಂತರ ಯಾರ ಸಂಪರ್ಕಕ್ಕೂ ಸಿಗದೆ ನಾಪತ್ತೆಯಾಗಿದ್ದಾನೆ.ವಿದ್ಯಾರ್ಥಿ ನಾಪತ್ತೆ ಬಗ್ಗೆ ನಂದಿನಿ ಲೇಔಟ್ ಪೊಲೀಸರಿಗೆ ದೂರು ನೀಡಿದ್ದು, ಪೋಷಕರು ರಾತ್ರಿಯಿಡೀ ಹುಡುಕಾಟ ನಡೆಸಿದ್ದಾರೆ. ಮೆಜೆಸ್ಟಿಕ್, ಮಲ್ಲೇಶ್ವರಂ, ಕಂಠೀರವ ಸ್ಟೇಡಿಯಂ, ಮಾರ್ಕೆಟ್ ಸೇರಿದಂತೆ ಹಲವೆಡೆ ಹುಡುಕಾಟ ನಡೆಸಲಾಗಿದೆ. ಸಿಸಿಟಿವಿ ದೃಶ್ಯಾವಳಿ ಸಂಗ್ರಹಿಸಿ ಪೋಷಕರು ಹುಡುಕಾಟ…
ಚಿಕ್ಕಮಗಳೂರು : ರಾಜ್ಯದ ಹಾಸನ ಜಿಲ್ಲೆ ಒಂದರಲ್ಲಿ ಕಳೆದ 40 ದಿನಗಳಲ್ಲಿ ಒಟ್ಟು ಇದುವರೆಗೂ 25 ಜನರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಇದೀಗ ರಾಜ್ಯದಲ್ಲಿ ಹೃದಯಾಘಾತ ಸರಣಿ ಮುಂದುವರೆದಿದ್ದು ಚಿಕ್ಕಮಂಗಳೂರು ಜಿಲ್ಲೆಯಲ್ಲಿ ವ್ಯಕ್ತಿಯೊಬ್ಬರು ಮೆಡಿಕಲ್ ಶಾಪ್ ನಲ್ಲಿ ಮಾತ್ರೆ ತೆಗೆದುಕೊಳ್ಳುವಾಗಲೇ ಹೃದಯಾಘಾತದಿಂದ ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆ ವರದಿಯಾಗಿದೆ. ಹೌದು ಚಿಕ್ಕಮಂಗಳೂರಿನಲ್ಲೂ ಕೂಡ ಹೃದಯಾಘಾತ ಆತಂಕ ಸೃಷ್ಟಿಸಿದ್ದು, ಮೆಡಿಕಲ್ ನಲ್ಲಿ ಮಾತ್ರೆ ಖರೀದಿಸುವಾಗಲೇ ವ್ಯಕ್ತಿಯೊಬ್ಬರಿಗೆ ಹೃದಯಘಾತವಾಗಿದೆ. ಮಾತ್ರೆ ಸೇವಿಸಲು ನೀರು ಬೇಡುತ್ತಿದ್ದಂತೆ ವ್ಯಕ್ತಿ ಕುಸಿದು ಬಿದ್ದು ಸಾವನಪ್ಪಿದ್ದಾರೆ. ಮೃತರು ಕೋಟೆ ಬಡಾವಣೆಯ ವಿಶ್ವನಾಥ್ (50) ಸಾವನಪ್ಪಿದ್ದಾರೆ. ವಿಶ್ವನಾಥ್ ಅವರು ಕುಸಿದು ಬೀಳುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕಳೆದ ಜೂನ್ 26ರಂದು ದೀಪ ನರಸಿಂಗ್ ಹೋಂ ಬಳಿ ಈ ಒಂದು ಘಟನೆ ನಡೆದಿತ್ತು. ಹೃದಯಾಘಾರದಿಂದ ಸಾವನ್ನಪ್ಪಿದ್ದಾರೆ ಎಂದು ವೈದರು ಕೂಡ ದೃಢಪಡಿಸಿದ್ದಾರೆ. ಚಿಕ್ಕಮಗಳೂರಲ್ಲಿ ಎರಡು ತಿಂಗಳಲ್ಲಿ ಒಟ್ಟು 13 ಜನ ಹೃದಯಾಘಾತಕ್ಕೆ ಬಲಿಯಾಗಿದ್ದಾರೆ.
ಬೆಂಗಳೂರು : ಬೆಂಗಳೂರಲ್ಲಿ ಕೌಟುಂಬಿಕ ಕಲಹಕ್ಕೆ ಬೇಸತ್ತ ಗೃಹಿಣಿ ಒಬ್ಬರು ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರಿನ ಕೋಣನಕುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಿನ್ನೆ ನಡೆದಿದೆ. ಆತ್ಮಹತ್ಯೆಗೆ ಶರಣಾದ ಮಹಿಳೆಯನ್ನು ವಿಶಾಲಕ್ಷ್ಮೀ ಹಿರೇಮಠ (32) ಎಂದು ತಿಳಿದುಬಂದಿದೆ. ನಿನ್ನೆ ಮಧ್ಯಾಹ್ನ 2 ಗಂಟೆ ಸುಮಾರಿಗೆ ಮನೆಯಲ್ಲಿ ನೇಣಿಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮರಣೋತ್ತರ ಪರೀಕ್ಷೆಗಾಗಿ ಕಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಕೋಣನಕುಂಟೆಯಲ್ಲಿ ವಾಸವಾಗಿರುವ ವಿಶಾಲಕ್ಷ್ಮೀ 14 ವರ್ಷಗಳ ಹಿಂದೆ ಶಂಭುಲಿಂಗಯ್ಯ ಎಂಬುವರೊಂದಿಗೆ ಮದುವೆಯಾಗಿದ್ದು, ಮೂವರು ಮಕ್ಕಳಿದ್ದಾರೆ. ಮೃತರ ಪತಿ ಖಾಸಗಿ ಬ್ಯಾಂಕ್ ನಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದಾರೆ. ಮೃತ ಮಹಿಳೆ ಮೂಲತಃ ಹಾವೇರಿ ಮೂಲದ ಗೃಹಿಣಿಯಾಗಿದ್ದು, ಈಕೆಯ ಪೋಷಕರಿಗೆ ಮಾಹಿತಿ ನೀಡಲಾಗಿದೆ. ಆತ್ಮಹತ್ಯೆಗೆ ಕೌಟುಂಬಿಕ ಕಾರಣ ಎಂದು ವರದಿಯಾಗಿದೆ.
ಬೆಂಗಳೂರು : ಕಳೆದ 40 ದಿನಗಳಲ್ಲಿ ಇವತ್ತಿನವರೆಗೆ ಹಾಸನದಲ್ಲಿ ಒಟ್ಟು 22 ಜನರು ವರದಿಯಾಗೋದಕ್ಕೆ ಬಲಿಯಾಗಿದ್ದಾರೆ ಇದರ ಬೆನ್ನಲ್ಲೇ ರಾಜ್ಯದಲ್ಲಿ ಹೃದಯಾಘಾತ ಮರಣ ಮೃದಂಗ ಮುಂದುವರೆದಿದ್ದು, ಇದೀಗ ಬೆಂಗಳೂರಿನಲ್ಲಿ ವಿದ್ಯಾರ್ಥಿ ಒಬ್ಬ ಹೃದಯಘಾತದಿಂದ ಸಾವನ್ನಪ್ಪಿದ್ದಾನೆ. BVVS ಮೆಡಿಕಲ್ ಕಾಲೇಜ್ ವಿದ್ಯಾರ್ಥಿ ವೈಭವ್ ಹಾರ್ಟ್ ಅಟ್ಯಾಕ್ ನಿಂದ ಇದೀಗ ಸಾವನಪ್ಪಿದ್ದಾನೆ. ಹೌದು ಹೃದಯಘಾತದಿಂದ ವೈಭವ್ ಕುಲಕರ್ಣಿ (26) ಸಾವನ್ನಪ್ಪಿದ್ದಾನೆ ಎಂದು ತಿಳಿದುಬಂದಿದೆ. ಪ್ರವಾಸ ಮುಗಿಸಿ ವಾಪಸ್ ಬರುತ್ತಿದ್ದಾಗ ವೈಭವ್ ಗೆ ಉಸಿರಾಟದ ಸಮಸ್ಯೆ ಎದುರಾಗಿದೆ. ವೈಭವ್ ಕುಲಕರಣಿ ಉಸಿರಾಟದ ಸಮಸ್ಯೆ ಎದುರಿಸುತ್ತಿದ್ದ. ತಕ್ಷಣ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿ ಆಗದೆ ವೈಭವ್ ಸಾವನಪ್ಪಿದ್ದಾನೆ. ಮೂಲತಃ ವಿಜಯಪುರ ಜಿಲ್ಲೆಯ ಆಲಮೇಲ ತಾಲೂಕಿನ ಕುಮಸಗಿ ಗ್ರಾಮದವನಾಗಿದ್ದು, ಇದೀಗ ಮೃತದೇಹವನ್ನು ಸ್ವಗ್ರಾಮಕ್ಕೆ ತೆಗೆದುಕೊಂಡು ಹೋಗಲಾಗಿದೆ.
ಹಾಸನ : ಇತ್ತೀಚಿಗೆ ಹೃದಯಘಾತ ಪ್ರಕರಣಗಳು ಸಾಮಾನ್ಯವಾಗಿ ಬಿಟ್ಟಿವೆ. ಆದರೆ ಹಾಸನದಲ್ಲಿ ಮಾತ್ರ ಈ ಒಂದು ಹೃದಯಾಘಾತದಿಂದ ಸಾವನಪುತ್ತಿರುವವರ ಪ್ರಕರಣಗಳು ಜನರಲ್ಲಿ ಆತಂಕ ಹೆಚ್ಚಿಸಿದೆ. ಏಕೆಂದರೆ ಕಳೆದ 40 ದಿನಗಳಲ್ಲಿ ಇಂದಿನವರೆಗೆ ಒಟ್ಟು 22 ಜನರು ಈ ಒಂದು ಹೃದಯಘಾತಕ್ಕೆ ಬಲಿಯಾಗಿದ್ದಾರೆ. ಅಲ್ಲದೆ ಇಂದು ಒಂದೇ ದಿನ ಹಾಸನ ಜಿಲ್ಲೆಯಲ್ಲಿ ಒಟ್ಟು ನಾಲ್ವರು ಹೃದಯಾಘಾತದಿಂದ ಸಾವನಪ್ಪಿದ್ದಾರೆ. ಮನೆಯಲ್ಲೇ ಕುಸಿದು ಬಿದ್ದು ಮಹಿಳೆ ಸಾವು! ಹಾಸನದಲ್ಲಿ ಹೃದಯಾಘಾತದಿಂದ ಮರಣ ಮೃದಂಗ ಮುಂದುವರೆದಿದ್ದು ಕಳೆದ 40 ದಿನಗಳಲ್ಲಿ ಇದುವರೆಗೂ 21 ಜನರು ಹೃದಯಘಾತದಿಂದ ಸಾವನಪ್ಪಿದ್ದಾರೆ. ಇದೀಗ ಹಾಸನ ಜಿಲ್ಲೆಯ ಬೇಲೂರು ತಾಲೂಕಿನಲ್ಲಿ ಮಹಿಳೆ ಒಬ್ಬರು ಮನೆಯಲ್ಲಿಯೇ ಕುಸಿದು ಬಿದ್ದು ಸಾವನಪ್ಪಿದ್ದಾರೆ. ಹೌದು ಹಾಸನ ಜಿಲ್ಲೆಯ ಬೇಲೂರು ಪಟ್ಟಣದ ಜೆಪಿ ನಗರದ ಲೇಪಾಕ್ಷಿ (50) ಎನ್ನುವವರು ಬೆಳಿಗ್ಗೆ ಮನೆಯಲ್ಲಿದ್ದಾಗಲೇ ಸುಸ್ತು ಎಂದು ಕುಸಿದು ಬಿದಿದ್ದರು. ಲೇಪಾಕ್ಷಿ ಅವರನ್ನು ತಕ್ಷಣ ಆಸ್ಪತ್ರೆಗೆ ಶಿಫ್ಟ್ ಮಾಡಲಾಯಿತು.ಆದರೆ ಆಸ್ಪತ್ರೆಗೆ ಬರುವಷ್ಟರಲ್ಲಿ ಲೇಪಾಕ್ಷಿ ಸಾವನ್ನಪ್ಪಿದ್ದಾರೆ.ಹಾಸನ ಜಿಲ್ಲೆಯಲ್ಲಿ 40 ದಿನಗಳಲ್ಲಿ ಇದುವರೆಗು 21ಜನ…
ಬೆಂಗಳೂರು : ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಹರಡುವವರ ವಿರುದ್ಧ ಕ್ರಮ ಕೈಗೊಳ್ಳಲು ರಾಜ್ಯ ಸರ್ಕಾರ ಇದೀಗ ಹೊಸ ಕಾನೂನು ಜಾರಿಗೆ ತರಲು ಸಿದ್ಧತೆ ಮಾಡಿಕೊಂಡಿದೆ. ಇಂದು ವಿಧಾನಸೌಧದಲ್ಲಿ ಕಾನೂನು ಸಚಿವ ಹೆಚ್ ಕೆ ಪಾಟೀಲ್ ಹಾಗೂ ಐಟಿಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಈ ಕುರಿತು ಚರ್ಚಿಸಿದರು. ಹೌದು ಸುಳ್ಳು ಸುದ್ದಿ ಹರಡುವವರ ವಿರುದ್ಧ ಕಾನೂನು ತರುವ ವಿಚಾರವಾಗಿ ಕಾನೂನು ಸಚಿವ ಹೆಚ್ ಕೆ ಪಾಟೀಲ್ ಹಾಗೂ ಐಟಿಬಿಟಿ ಸಚಿವ ಪ್ರಿಯಾಂಕ ಖರ್ಗೆ ಇಂದು ಚರ್ಚಿಸಿದರು. ವಿಧಾನಸೌಧದಲ್ಲಿ ಎಚ್ ಕೆ ಪಾಟೀಲ್ ಕಚೇರಿಯಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಭೇಟಿಯಾಗಿ ಚರ್ಚೆ ಮಾಡಿದರು. ಸುಳ್ಳು ಸುದ್ದಿ ಹರಡುವ ವಿರುದ್ಧ ಕಠಿಣ ಕ್ರಮಕ್ಕೆ ಚಿಂತನೆ ನಡೆಸಿದ್ದು, ಸುಳ್ಳು ಸುದ್ದಿ ಹರಡುವವರೆಗೆ ಶಿಕ್ಷೆ ವಿಧಿಸುವ ಬಗ್ಗೆ ಪ್ರಸ್ತಾಪಿಸಲಾಯಿತು. ಸುಳ್ಳು ಸುದ್ದಿ ಹರಡುವವರ ತಪ್ಪಿತಸ್ಥಗೆ ಗರಿಷ್ಠ 7 ವರ್ಷ ಜೈಲು ಶಿಕ್ಷೆ ಹಾಗೂ 10 ಲಕ್ಷ ರೂಪಾಯಿ ದಂಡ ವಿಧಿಸುವ ಮೂಲಕ ಹೊಸ ಕಾನೂನು ತರುವ ಬಗ್ಗೆ…
ಮಂಗಳೂರು : ಮಂಗಳೂರಲ್ಲಿ ಇಂದು ಘೋರವಾದ ದುರಂತ ಸಂಭವಿಸಿದ್ದು, ಶಾಲೆಯ ಮೇಲ್ಚಾವಣಿ ಕುಸಿದು ಓರ್ವ ಯುಕೆಜಿ ವಿದ್ಯಾರ್ಥಿಗೆ ಗಂಭೀರವಾದ ಗಾಯಗಳಾಗಿರುವ ಘಟನೆ ಮಂಗಳೂರಿನ ಹೊರವಲಯದಲ್ಲಿರುವ ಕೆಂಜಾರು ಎಂಬ ಗ್ರಾಮದಲ್ಲಿ ನಡೆದಿದೆ. ಖಾಸಗಿ ಅನುದಾನಿತ ಪ್ರಾಥಮಿಕ ಶಾಲೆಯಲ್ಲಿ ಈ ಒಂದು ದುರಂತ ಸಂಭವಿಸಿದೆ.ಯುಕೆಜಿ ವಿದ್ಯಾರ್ಥಿ ಶೋನಿತ್ ಗೆ ಗಂಭೀರವಾದ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ತರಗತಿ ನಡೆಯುವಾಗ ಜೋರಾಗಿ ಗಾಳಿ ಬೀಸಿ ಶಾಲೆಯ ಮೇಲ್ಚಾವಣಿ ಕುಸಿದು ಬಿದ್ದಿದೆ. ಮೇಲ್ಚಾವಣಿ ಕುಸಿದು ಬೀಳುತ್ತಿದ್ದಂತೆ 21 ಮಕ್ಕಳು ಹೊರಗಡೆ ಓಡಿ ಬಂದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಬೆಂಗಳೂರು : ರಾಜ್ಯದಲ್ಲಿ ಬರುವ ನವೆಂಬರ್ ಡಿಸೆಂಬರ್ ನಲ್ಲಿ ಸಿಎಂ ಹಾಗೂ ಕೆಪಿಸಿಸಿ ಸ್ಥಾನ ಬದಲಾವಣೆ ಆಗಲಿದೆ ಎಂದು ಕೆಲ ಕಾಂಗ್ರೆಸ್ ನಾಯಕರೇ ಹೇಳಿಕೆ ನೀಡುತ್ತಿದ್ದಾರೆ. ಇದೀಗ ಡಿಕೆ ಶಿವಕುಮಾರ್ ಒಂದು ಬಾರಿ ಸಿಎಂ ಆಗಲಿ ಅನ್ನೋದು ನನ್ನ ಅಭಿಪ್ರಾಯ ಎಂದು ಮತ್ತಿಕೆರೆ ಗ್ರಾಮದಲ್ಲಿ ಮಾಗಡಿ ಶಾಸಕ ಎಚ್ ಸಿ ಬಾಲಕೃಷ್ಣ ಹೇಳಿಕೆ ನೀಡಿದರು. ಬೆಂಗಳೂರು ದಕ್ಷಿಣ ಜಿಲ್ಲೆಯ ಮಾಗಡಿ ತಾಲೂಕಿನ ಮತ್ತಿಕೆರೆ ಗ್ರಾಮದಲ್ಲಿ ಮಾತನಾಡಿದ ಅವರು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಪಕ್ಷವನ್ನು ಅಧಿಕಾರಕ್ಕೆ ತರಲು ಸಾಕಷ್ಟು ಶ್ರಮ ವಹಿಸಿದ್ದಾರೆ ಅವರ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗಬೇಕು ಎಂದು ಹೈಕಮಾಂಡ್ ಅವರಿಗೆ ಮನವಿ ಮಾಡುತ್ತೇನೆ ಡಿಕೆ ಶಿವಕುಮಾರ್ ಅವರಿಗೂ ಒಂದು ಬಾರಿ ಅಧಿಕಾರ ನೀಡಬೇಕೆಂಬುದು ನನ್ನ ಅಭಿಪ್ರಾಯವಾಗಿದೆ. ಇನ್ನು ರಾಜ್ಯದಲ್ಲಿ ಬದಲಾವಣೆ ಗಾಳಿ ಬೀಸುತ್ತದೆ ಎಂದು ಕೆಲ ನಾಯಕರು ಹೇಳಿಕೆ ನೀಡಿರುವ ವಿಚಾರವಾಗಿ, ಈಗ ಮಾತನಾಡುತ್ತಿರುವ ಕೆಲ ಮಂತ್ರಿಗಳು ಮುಂದಿನ ಚುನಾವಣೆಯಲ್ಲಿ ಸ್ಪರ್ಧೆ ಮಾಡಲ್ಲ. ಇದು ಚುನಾವಣೆಯಲ್ಲಿ ಸ್ಪರ್ಧಿಸುವವರ ಮೇಲೆ ಪರಿಣಾಮ…
ಹುಬ್ಬಳ್ಳಿ/ಧಾರವಾಡ : ಹುಬ್ಬಳ್ಳಿ, ಧಾರವಾಡ ಪಾಲಿಕೆಯಲ್ಲಿ ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ ಬಂದಿದ್ದು, ನೂತನ ಮೇಯರ್ ಆಗಿ ಬಿಜೆಪಿಯ ಜ್ಯೋತಿ ಪಾಟೀಲ್ ಆಯ್ಕೆ ಆಗಿದ್ದಾರೆ. 47 ಮತಗಳನ್ನು ಪಡೆದು ಜ್ಯೋತಿ ಪಾಟೀಲ್ ಮೇಯರ್ ಆಗಿ ಆಯ್ಕೆಯಾಗಿದ್ದಾರೆ. ಕಾಂಗ್ರೆಸ್ಸಿನ ಸುವರ್ಣ ಕಲಕುಂಟ್ಲಾ ವಿರುದ್ಧ ಜ್ಯೋತಿ ಪಾಟೀಲ್ಭರ್ಜರಿ ಜಯಗಳಿಸಿದ್ದಾರೆ. ಇನ್ನು ಉಪಮೇಯರಾಗಿ ಬಿಜೆಪಿಯ ಸಂತೋಷ ಚೌವ್ಹಾಣ್ ಆಯ್ಕೆಯಾಗಿದ್ದಾರೆ. ಸಂತೋಷ್ ಚೌವ್ಹಾಣ 47 ಮತಗಳನ್ನು ಪಡೆದು ಉಪಮೇಯರ್ ಆಗಿ ಆಯ್ಕೆಯಾಗಿದ್ದಾರೆ. ಕಾಂಗ್ರೆಸ್ ಶಂಭು ಸಾಲಮನಿ ವಿರುದ್ಧ ಸಂತೋಷ ಭರ್ಜರಿ ಜಯಗಳಿಸಿದ್ದಾರೆ. ಬೆಳಗಾವಿ ಪ್ರಾದೇಶಿಕ ಆಕ್ತರ ಸಮ್ಮುಖದಲ್ಲಿ ಈ ಒಂದು ಚುನಾವಣೆ ನಡೆಯಿತು. ಕೈ ಎತ್ತುವ ಮೂಲಕ ಮೇಯರ್ ಮತ್ತು ಉಪಮೇಯರ್ ಆಯ್ಕೆ ನಡೆಯಿತು. ಕೇಂದ್ರ ಸಚಿವ ಪ್ರಹಲ್ಲಾ ಜೋಷಿ, ಶಾಸಕರಾದ ಅರವಿಂದ ಬೆಲ್ಲದ, ಮಹೇಶ ತೆಂಗಿನಕಾಯಿ ಹಾಗು ಪ್ರಸಾದ್ ಅಬ್ಬಯ್ಯ ಭಾಗಿಯಾಗಿದ್ದರು.














