Author: kannadanewsnow05

ಚಿಕ್ಕಬಳ್ಳಾಪುರ : ಚಿಕ್ಕಬಳ್ಳಾಪುರದಲ್ಲಿ ಭೀಕರವಾದ ಅಪಘಾತ ಸಂಭವಿಸಿದ್ದು, ಅಪಘಾತದಿಂದ ಬಿದ್ದು ಒದ್ದಾಡುತ್ತಿದ್ದರು, ಆಂಬುಲೆನ್ಸ್ ಹಾಗು ಪೊಲೀಸರು ಸ್ಥಳಕ್ಕೆ ಬಾರದೆ ಇದ್ದಿದರಿಂದ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಚಿಕ್ಕಬಳ್ಳಾಪುರ ನಗರದ ವಾಪಸಂದ್ರ ಬಳಿ ಈ ಒಂದು ಭೀಕರ ಅಪಘಾತ ಸಂಭವಿಸಿದ್ದು, ರಸ್ತೆ ಬದಿ ಮೈಲುಗಲ್ಲಿಗೆ ಬೈಕ್ ಡಿಕ್ಕಿಯಾಗಿ ಗಂಭೀರವಾಗಿ ಗಾಯಗೊಂಡಿದ್ದರು. ಇಶಾ ಫೌಂಡೇಶನ್ ನಿಂದ ಬೆಂಗಳೂರು ಕಡೆಗೆ ಯುವಕ ಯುವತಿ ತೆರಳುತ್ತಿದ್ದರು. ಅಪಘಾತದ ಸ್ಥಳಕ್ಕೆ ಸಂಚಾರಿ ಚಿಕ್ಕಬಳ್ಳಾಪುರ ಸಂಚಾರಿ ಠಾಣೆ ಪೊಲೀಸರು ಕೂಡ ಬಂದಿಲ್ಲ ಗಂಟೆಗಳ ಬಳಿಕ ಇಬ್ಬರನ್ನು ಸಾರ್ವಜನಿಕರು ಆಸ್ಪತ್ರೆಗೆ ದಾಖಲಿಸಿದ್ದಾರೆ.

Read More

ಬೆಂಗಳೂರು: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಕರ್ನಾಟಕ ಹೈಕೋರ್ಟ್ ಬಿಗ್ ರಿಲೀಫ್ ನೀಡಿದೆ. ಬಿಜೆಪಿ ವಿರುದ್ಧ ಅಪಪ್ರಚಾರದ ಪ್ರಕರಣವನ್ನು ರದ್ದುಗೊಳಿಸುವ ಮೂಲಕ, ರಿಲೀಫ್ ನೀಡಿದೆ. ವಿಧಾನಸಭೆ ಚುನಾವಣೆ ವೇಳೆಯಲ್ಲಿ ಬಿಜೆಪಿ ವಿರುದ್ಧ ಅಪಪ್ರಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರ ವಿರುದ್ಧ ಪ್ರಕರಣ ದಾಖಲಾಗಿತ್ತು. ಈ ಪ್ರಕರಣ ರದ್ದುಗೊಳಿಸುವಂತೆ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ವಿಚಾರಣೆ ನಡೆಸಿದಂತ ಹೈಕೋರ್ಟ್, ಅವರ ವಿರುದ್ಧದ ಖಾಸಗಿ ದೂರನ್ನು ರದ್ದುಪಡಿಸಿದೆ. ಅಂದಹಾಗೇ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಪಕ್ಷ ಬಿಡುಗಡೆ ಮಾಡಿದ್ದಂತ ಕರಪ್ಷನ್ ರೇಟ್ ಕಾರ್ಡ್ ಜಾಹೀರಾತು ಸಂಬಂಧ ಬಿಜೆಪಿ ಪರವಾಗಿ ಕೇಶವಪ್ರಸಾದ್ ಎಂಬುವರು ಖಾಸಗಿ ದೂರು ಸಲ್ಲಿಸಿದ್ದರು. ಈ ಪ್ರಕರಣ ರದ್ದುಪಡಿಸುವಂತೆ ಹೈಕೋರ್ಟ್ ಮೆಟ್ಟಿಲೇರಿದ್ದರು. ಹೀಗಾಗಿ ಅರ್ಜಿಯನ್ನು ವಿಚಾರಣೆ ನಡೆಸಿ ಪ್ರಕರಣ ರದ್ದುಪಡಿಸಿದೆ.

Read More

ಮಂಗಳೂರು : ಧರ್ಮಸ್ಥಳದ ವಿರುದ್ಧ ಷಡ್ಯಂತ್ರ ಅಪಪ್ರಚಾರ ಆರೋಪ ಪ್ರಕರಣಕ್ಕೆ ಸಂಬಂಧಪಟ್ಟಂತೆ ಎಸ್ಐಟಿ ಅಂತಿಮ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಬೇಕಾಗಿದೆ ಎಂದು ಮಂಗಳೂರಿನಲ್ಲಿ ಗೃಹ ಸಚಿವ ಡಾಕ್ಟರ್ ಜಿ ಪರಮೇಶ್ವರ್ ಹೇಳಿಕೆ ನೀಡಿದರು. SIT ಅಂತಿಮ ವರದಿಯನ್ನು ಕೋರ್ಟಿಗೂ ಸಲ್ಲಿಸಬೇಕಿದೆ ಅಂತಿಮ ವರದಿ ನೀಡುವವರೆಗೆ ಯಾವುದೇ ನಿರ್ಧಾರಕ್ಕೆ ಬರುವುದಿಲ್ಲ. ಅಂತಿಮ ವರದಿ ನೀಡುವಂತೆ ಎಸ್ಐಟಿ ಮುಖ್ಯಸ್ಥರಿಗೆ ಸೂಚಿಸಿದ್ದೇನೆ. ಬುರುಡೆ ಪ್ರಕರಣದಲ್ಲಿ ಈಗಾಗಲೇ ಮಧ್ಯಂತರ ವರದಿ ನೀಡಿದ್ದಾರೆ. ಪ್ರಕರಣದ ಬಗ್ಗೆ ಸದನದೊಳಗೆ ಮತ್ತು ಸದಾನಂದ ಹೊರಗೆ ಪ್ರತಿಕ್ರಿಯಿಸಿದ್ದೇನೆ. ಎಸ್ಐಟಿ ಅಂತಿಮ ವರದಿ ಬಂದ ನಂತರ ಕ್ಯಾಬಿನೆಟ್ ನಲ್ಲಿ ಇಡುತ್ತೇವೆ. ಕ್ಯಾಬಿನೆಟ್ ನಲ್ಲಿ ನಿರ್ಧರಿಸಿದ ನಂತರ ಬಹಿರಂಗಗೊಳಿಸುವ ಕೆಲಸ ನಡೆಯುತ್ತೆ ಎಂದು ತಿಳಿಸಿದರು.

Read More

ಚಾಮರಾಜನಗರ : ಕುಡಿದ ಮತ್ತಿನಲ್ಲಿ ವ್ಯಕ್ತಿಯೊಬ್ಬ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡ ಘಟನೆ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಬಸ್ತಿಪುರದದಲ್ಲಿ ಸಂಭವಿಸಿದೆ. ಬಸ್ತಿಪುರದ ಕಾಲುವೆಯ ಬಳಿ 45 ವರ್ಷದ ಆನಂದ ಎಂಬಾತ ಕುಡಿದ ನಶೆಯಲ್ಲಿ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾನೆ. ಎಣ್ಣೆ ಏಟಲ್ಲಿ ರಂಪಾಟ ಮಾಡಿ ಆನಂದ್ ಪೆಟ್ರೋಲ್ ಸುರಿದುಕೊಂಡಿದ್ದ. ತನ್ನ ಮೈ ಮೇಲೆ ಪೆಟ್ರೋಲ್ ಸುರಿದು ಆನಂದ್ ಬೆಂಕಿ ಹಚ್ಚಿಕೊಂಡಿದ್ದ. ಬೆಂಕಿಯ ಉರಿ ತಾಳಲಾರದೆ ಆನಂದ್ ಮತ್ತೆ ಕಾಲುವೆಗೆ ಹಾರಿದ್ದಾನೆ ಕೊಳ್ಳೇಗಾಲ ಸರ್ಕಾರಿ ಆಸ್ಪತ್ರೆಯಲ್ಲಿ ಸದ್ಯ ಆನಂದನೆಗೆ ಪ್ರಾಥಮಿಕ ಚಿಕಿತ್ಸೆ ನೀಡಲಾಗುತ್ತಿದೆ ಆನಂದನಿಗೆ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಕೆಆರ್ ಆಸ್ಪತ್ರೆಗೆ ಶಿಫ್ಟ್ ಮಾ

Read More

ಬೆಂಗಳೂರು : ಸಾರಿಗೆ ಸಿಬ್ಬಂದಿ ಬೆಂಗಳೂರು ಚಲೋ ಮತ್ತು ಮುಷ್ಕರಕ್ಕೆ ಸಿದ್ಧತೆ ಮಾಡಿಕೊಂಡಿರುವ ಹಿನ್ನೆಲೆಯಲ್ಲಿ ಇದೀಗ BMTC ಎಂ.ಡಿ ನೋ ವರ್ಕ್ ನೋ ಪೇ ಆದೇಶ ಜಾರಿ ಮಾಡಿದ್ದಾರೆ. ಕರ್ತವ್ಯಕ್ಕೆ ಗೈರಾಗುವ ಬಿಎಂಟಿಸಿ ಸಿಬ್ಬಂದಿಗೆ ಆದೇಶ ಜಾರಿ ಮಾಡಿದ್ದಾರೆ. ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕ ಕೆ ಬಿ ಶಿವಕುಮಾರ್ ಈ ಒಂದು ಆದೇಶ ಹೊರಡಿಸಿದ್ದಾರೆ. ವಿವಿಧ ಬೇಡಿಕೆಗಳು ಈಡೇರಿಸುವಂತೆ ಆಗ್ರಹಿಸಿ ಸಾರಿಗೆ ಸಿಬ್ಬಂದಿಗಳು ಮುಷ್ಕರ ಹಾಗೂ ಬೆಂಗಳೂರು ಚಲೋ ಸಿದ್ದತೆ ಮಾಡಿಕೊಂಡಿದ್ದ ಸಾರಿಗೆ ಸಿಬ್ಬಂದಿಗಳಿಗೆ ಇದೀಗ ಬಿಗ್ ಶಾಕ್ ಎದುರಾಗಿದೆ.

Read More

ಬೆಂಗಳೂರು : ಮಹಿಳೆಯರು ಹಾಗೂ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣಗಳಲ್ಲಿ ಗೌಪ್ಯತೆ ಕಾಪಾಡುವುದು ಕಡ್ಡಾಯ ಎಂದು ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಡಾಕ್ಟರ್ ಎಂ. ಎ ಸಲೀಂ ಆದೇಶ ಹೊರಡಿಸಿದ್ದಾರೆ. ಸುಪ್ರೀಂ ಕೋರ್ಟ್ ನಲ್ಲಿ ನಡೆದ ಪ್ರಕರಣವನ್ನು ಉಲ್ಲೇಖಿಸಿ ಈ ಒಂದು ಆದೇಶ ಹೊರಡಿಸಿದ್ದು, ನೊಂದ ಮಹಿಳೆಯರು ಹಾಗೂ ಅಪ್ರಾಪ್ತರ ವಿಳಾಸ ಗೌಪ್ಯತೆಗೆ ಡಾಕ್ಟರ್ ಎಂ.ಎ ಸಲೀಂ ಸೂಚನೆ ನೀಡಿದ್ದಾರೆ. ತನಿಖೆಯ ಸಂದರ್ಭದಲ್ಲಿ ಕೂಡ ಗೌಪ್ಯತೆ ಕಾಪಾಡುವಂತೆ ಸೂಚಿಸಿದ್ದಾರೆ. ಮೂಲ ದೂರು ಅರ್ಜಿಯನ್ನು ನೊಂದ ಮಹಿಳೆ ಅಥವಾ ಅಪ್ರಾಪ್ತರ ಹೆಸರು ವಿಳಾಸ ಹಾಗೂ ಗುರುತು ಇರಬೇಕು. ದೂರು ಸ್ವೀಕರಿಸಿದ ನಂತರ ಠಾಣಾಧಿಕಾರಿಯ ಅಥವಾ ತನಿಕಾಧಿಕಾರಿ ಗೌಪ್ಯತೆ ಕಾಪಾಡಲು ಮೂಲ ಹೆಸರು ಬದಲಾಯಿಸಬೇಕು. ಬದಲಾವಣೆಯ ಬಳಿಕ ನ್ಯಾಯಾಲಯಕ್ಕೆ ದೂರು ನೀಡಬೇಕು ಮತ್ತು ಬದಲಿ ಹೆಸರು ಇರುವ ದಾಖಲೆಗಳನ್ನು ಸಲ್ಲಿಸುವುದು ಕಡ್ಡಾಯ. ಮುಚ್ಚಿದ ಲಕೋಟೆಯಲ್ಲಿ ದಾಖಲೆಗಳನ್ನು ಸಲ್ಲಿಸುವುದು ಕಡ್ಡಾಯ ಎಂದು ಐಜಿ, ಡಿಸಿಪಿ ಸಲೀಂ ಆದೇಶ ಹೊರಡಿಸಿದ್ದಾರೆ.ಎಫ್ ಐ ಆರ್ ನಲ್ಲಿ ಹೆಸರು…

Read More

ಬೆಂಗಳೂರು : ರಾಜ್ಯದಲ್ಲಿ ಮತ್ತೊಂದು ಬೆಚ್ಚಿ ಬೀಳಿಸೋ ಕೃತ್ಯ ನಡೆದಿದ್ದು, ಆಸ್ತಿಗಾಗಿ ತಂದೆಯನ್ನೇ ಇಬ್ಬರು ಪಾಪಿ ಪುತ್ರರು ಹತ್ಯೆಗೈದ ಘಟನೆ ನಡೆದಿದೆ. ಬೆಂಗಳೂರಿನ ಇಂದಿರಾನಗರದ ದೂಪನಹಳ್ಳಿಯಲ್ಲಿ ಈ ಘಟನೆ ನಡೆದಿದ್ದು, ಮಕ್ಕಳಿಂದ ಹಲ್ಲೆಗೊಳಗಾಗಿದ್ದ ತಂದೆ ಮುನಿಕೃಷ್ಣ (70) ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಪುತ್ರರಾದ ಮೋಹನ್ ಕುಮಾರ್, ಗಜೇಂದ್ರ ಎಂಬುವರು ಆಸ್ತಿಗಾಗಿ ತಂದೆ ಮೇಲೆ ಮಾರಣಾಂತಿಕ ಹಲ್ಲೆ ನಡೆಸಲಾಗಿತ್ತು. ಬಳಿಕ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಆಸ್ತಿ ಹಂಚಿಕೆ ವಿಚಾರವಾಗಿ ಕಳೆದ ಕೆಲವು ದಿನಗಳಿಂದ ತಂದೆ ಮತ್ತು ಮಕ್ಕಳ ನಡುವೆ ತೀವ್ರ ಗಲಾಟೆ ನಡೆಯುತ್ತಿತ್ತು ಎನ್ನಲಾಗಿದೆ. ಇದೇ ವಿಚಾರವಾಗಿ ನಡೆದ ಜಗಳ ವಿಕೋಪಕ್ಕೆ ತಿರುಗಿ, ಪುತ್ರರು ತಂದೆಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದ ಮುನಿಕೃಷ್ಣ ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಿಸದೇ ಅವರು ಸಾವನ್ನಪ್ಪಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಇಂದಿರಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೃತ್ಯ ಎಸಗಿದ ಬಳಿಕ ಆರೋಪಿಗಳಾದ…

Read More

ಬೆಂಗಳೂರು: ಎಸ್​ಎಸ್​​ಎಲ್​ಸಿ (SSLC Exam) ಮತ್ತು ಪಿಯುಸಿ ಪರೀಕ್ಷೆಗಳಿಗೆ (PUC Exam) ಇನ್ನೇನು ಕೆಲವೇ ದಿನಗಳು ಉಳಿದಿದೆ. ಈ ನಡುವೆ ಇಂದು ಈ ಬಗ್ಗೆ ಶಿಕ್ಷಣ ಸಚಿವ ಮಧುಬಂಗಾರಪ್ಪ (Madhu Bangarappa) ಸುದ್ದಿಗೋಷ್ಠಿ (Press Meet) ನಡೆಸಿ 2026ರ ದ್ವಿತೀಯ ಪಿಯುಸಿ ಮತ್ತು ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ವೇಳಾಪಟ್ಟಿ ಮತ್ತು ಇತರ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಈ ಬಾರಿ ದ್ವಿತೀಯ ಪಿಯುಸಿ ಪರೀಕ್ಷೆಗೆ ಒಟ್ಟು 7,10,363 ವಿದ್ಯಾರ್ಥಿಗಳು ನೋಂದಣಿ ಮಾಡಿಸಿಕೊಂಡಿದ್ದಾರೆ. ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ 9,02,889 ವಿದ್ಯಾರ್ಥಿಗಳು ನೋಂದಣಿ ಮಾಡಿಸಿದ್ದಾರೆ ಎಂದು ಅವರು ತಿಳಿಸಿದರು. ಈ ವರ್ಷ ದ್ವಿತೀಯ ಪಿಯುಸಿ ಪರೀಕ್ಷೆ 1,217 ಕೇಂದ್ರಗಳಲ್ಲಿ ಮತ್ತು ಎಸ್‌ಎಸ್‌ಎಲ್‌ಸಿ ಪರೀಕ್ಷೆ 2,871 ಕೇಂದ್ರಗಳಲ್ಲಿ ನಡೆಯಲಿದೆ ಅಂತ ಅವರು ತಿಳಿಸಿದರು. ದ್ವಿತೀಯ ಪಿಯುಸಿ ಪರೀಕ್ಷೆಯ ಮೊದಲ ವೇಳಾಪಟ್ಟಿ ಪ್ರಕಾರ: ಫೆಬ್ರವರಿ 28: ಕನ್ನಡ, ಅರೇಬಿಕ್ ಮಾರ್ಚ್ 2: ಭೂಗೋಳಶಾಸ್ತ್ರ, ಸಂಖ್ಯಾಶಾಸ್ತ್ರ, ಮನಃಶಾಸ್ತ್ರ ಮಾರ್ಚ್ 3: ಇಂಗ್ಲಿಷ್ ಮಾರ್ಚ್ 4: ತಮಿಳು, ತೆಲುಗು, ಮಲಯಾಳಂ, ಮರಾಠಿ, ಉರ್ದು, ಸಂಸ್ಕೃತ, ಫ್ರೆಂಚ್…

Read More

ಬೆಂಗಳೂರು : ಬೆಂಗಳೂರಿನಲ್ಲಿ ಶಿವರಾತ್ರಿ ದಿನದಂದು ಮನೆ ಮಾಲೀಕರು ಜಾಗರಣೆಗೆ ತೆರಳಿದಾಗ ದರೋಡೆ ನಡೆದಿದೆ. 5 ಲಕ್ಷ ಮೌಲ್ಯ ಚೆನ್ನ ಹಾಗೂ 1 ಲಕ್ಷ ನಗದು ಹಣ ಕಳ್ಳತನ ಮಾಡಿದ್ದಾರೆ. ಬೆಂಗಳೂರು ಬನಶಂಕರಿ ಐದನೇ ಹಂತದ ಮನೆಯಲ್ಲಿ ಕಳ್ಳತನ ನಡೆದಿದೆ. ಜಾಗರಣೆಗಾಗಿ ಮನೆಯ ಮಾಲಿಕ ಮಂಜುನಾಥ್ ನೆಂಟರ ಮನೆಗೆ ತೆರಳಿದ್ದರು. ಕುಟುಂಬದ ಸಮೇತ ತೆರಳಿದ್ದರು. ಇದನ್ನು ಗಮನಿಸಿದ ಕಳ್ಳರು, ಕಬ್ಬಿಣದ ಸಲಕೆಯಿಂದ ಮನೆಯ ಬಾಗಿಲನ್ನು ಮುರಿದು ಕಳ್ಳತನ ಮಾಡಿದ್ದಾರೆ. ಸಿಸಿಟಿವಿ ಕ್ಯಾಮೆರಾ ಇಲ್ಲ ಅಂತ ಕಳ್ಳತನಕ್ಕೆ ಮನೆಗೆ ಬಂದಿದ್ದಾರೆ. ಆದರೆ ಮನೆಯ ಸಿಸಿಟಿವಿ ಕ್ಯಾಮೆರಾ ಕಂಡು ಖದಿಮರು ಪರಾರಿಯಾಗಿದ್ದಾರೆ. ಸ್ವಲ್ಪ ಸಮಯದ ನಂತರ ಮುಖಕ್ಕೆ ಮಾಸ್ಕ ಧರಿಸಿ ಬಂದಿದ್ದು ಸಿಸಿಟಿವಿ ಕ್ಯಾಮರಗೆ ಬಟ್ಟೆ ಕಟ್ಟಿ ಕಳ್ಳತನ ಮಾಡಿದ್ದಾರೆ. ಮನೆಯಲ್ಲಿ ಯಾರು ಇಲ್ಲದನ್ನು ಗಮನಿಸಿ, ಕಳ್ಳರು ತಮ್ಮ ಕೈಚಳಕ ತೋರಿಸಿದ್ದಾರೆ.

Read More

ಬೆಂಗಳೂರು : ಶೂ ರ್‍ಯಾಕ್ ನಲ್ಲಿ ಮನೆಯ ಬೀಗ ಇಟ್ಟು ಹೊರಗಡೆ ಹೋಗುತ್ತಾರೆ ಆದರೆ ಈ ರೀತಿ ಕೀ ಇಡುವವರು ಈ ಸುದ್ದಿಯನ್ನು ಒಮ್ಮೆ ನೋಡಲೇಬೇಕು. ಬೆಂಗಳೂರಿನಲ್ಲಿ ಕಿ ಇಟ್ಟಿದ್ದವರಿಗೆ ಬಿಗ್ ಶಾಕ್ ಎದುರಾಗಿದೆ. ಶೂ ರ್‍ಯಾಕ್ ನಲ್ಲಿ ಬೀಗ ಇಟ್ಟು ಹೋಗಿದ್ದ ಮನೆಯಲ್ಲಿಯೇ, ಇದೀಗ ಕಳ್ಳತನ ನಡೆದಿದೆ. ಶೂ ರ್‍ಯಾಕ್ ನಲ್ಲಿ ಕೀ ಇಟ್ಟಂತ ಮನೆಯಲ್ಲಿ ಈ ಒಂದು ಕಳ್ಳತನ ನಡೆದಿದೆ. 55 ಲಕ್ಷ ಮೌಲ್ಯದ 348 ಗ್ರಾಂ ಚಿನ್ನಾಭರಣ ಕಳ್ಳತನ ಮಾಡಿದ್ದಾರೆ. ಈಗಾಗಲೇ ಆರೋಪಿಯನ್ನು ಪೊಲೀಸರು ಅರೆಸ್ಟ್ ಕೂಡ ಮಾಡಿದ್ದಾರೆ. ವೈಟ್ ಫೀಲ್ಡ್ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಬಾಡಿಗೆ ಮನೆ ಹುಡುಕಲು ಬಂದ ಫೋಟೋಗ್ರಾಫರ್ ಕಳ್ಳರಾಗಿದ್ದಾರೆ. ನಾಗೊಂಡನಹಳ್ಳಿ ಬಾಡಿಗೆ ಮನೆಯನ್ನು ಆರೋಪಿ ಕಿರಣ್ ಹುಡುಕುತ್ತಿದ್ದ. To Let ಬೋರ್ಡ್ ನೋಡಿ ಬಿಲ್ಡಿಂಗ್ ಮೇಲೆ ಹೋಗಿದ್ದ ಈ ವೇಳೆ ಶೂ ರ್‍ಯಾಕ್ ನಲ್ಲಿ ಕೀ ಸಿಕ್ಕಿತ್ತು. ಕೀ ತೆಗೆದುಕೊಂಡು ಮನೆ ಡೋರ್ ಓಪನ್ ಮಾಡಿದ್ದ ಕಿರಣ್ ಮನೆಯಲ್ಲಿ ಇದ್ದ 55…

Read More