Subscribe to Updates
Get the latest creative news from FooBar about art, design and business.
Author: kannadanewsnow05
ಬಾಗಲಕೋಟೆ : ನೋಡುತ್ತೀರಿ ನನ್ನ ಹಣೆಬರಹದಲ್ಲಿ ಸಿಎಂ ಆಗುತ್ತೇನೆ ಎಂದು ಬರೆದಿದೆ. ಮುಂದಿನ ಸಿಎಂ ನಾನೇ ಎಂದು ಬಿಜೆಪಿಯಿಂದ ಉಚ್ಛಾಟಿತರಾಗಿರುವ ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಹೇಳಿಕೆ ನೀಡಿದ್ದಾರೆ. ಈ ಒಂದು ಹೇಳಿಕೆಗೆ ಶಾಸಕ ವಿಜಯಾನಂದ ಕಾಶಪ್ಪನವರ್, ಯತ್ನಾಳ ಸಿಎಂ ಆಗೋದಿರಲಿ 2028ಕ್ಕೆ ಶಾಸಕನಾಗಿ ಗೆದ್ದು ಬರಲಿ ನೋಡೋಣ ಎಂದು ಸವಾಲು ಹಾಕಿದ್ದಾರೆ. ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಕೂಡಲಸಂಗಮದಲ್ಲಿ ಮಾತನಾಡಿದ ಅವರು, ಯತ್ನಾಳ್ ಮತ್ತೆ ಗೆಲ್ಲುತ್ತೇನೆ ಅನ್ನೋದು ತಿರುಕನ ಕನಸು. 2028ಕ್ಕೆ ಗೆದ್ದು ವಿಧಾನಸೌಧಕ್ಕೆ ಬರಲಿ ನೋಡೋಣ. ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಕೂಡಲಸಂಗಮದಲ್ಲಿ ವಿಜಯಾನಂದ ಕಾಶಪ್ಪನವರು ಹೇಳಿಕೆ ನೀಡಿದ್ದು ಹತ್ನಾಳ ಸಿಎಂ ಆಗುವುದಿಲ್ಲ ಶಾಸಕನಾಗಿ ಗೆದ್ದು ಬರಲಿ ಎಂದು ಸವಾಲು ಹಾಕಿದರು.
ಬೆಂಗಳೂರು : ಬೆಂಗಳೂರು ಚೆನ್ನೈ ಹೆದ್ದಾರಿಯಲ್ಲಿ ವ್ಹಿಲಿಂಗ್ ಪುಂಡರ ಹಾವಳಿ ಹೆಚ್ಚಾಗಿದ್ದು, ಇದೀಗ ತಮಿಳುನಾಡಿನ ಹೊಸೂರಿನ ರಾಮನಗರದ ಇಬ್ಬರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಬಂಧಿತರನ್ನು ಉಮೇಶ್ (20) ಮತ್ತು ಇಮ್ರಾನ್ (19) ಎನ್ನುವವರನ್ನು ಬಂಧಿಸಿದ್ದಾರೆ. ಹೆದ್ದಾರಿಯಲ್ಲಿ ವ್ಹಿಲಿಂಗ್ ಮಾಡಿ ಇತರೆ ಸವಾರರಿಗೆ ಸಂಕಷ್ಟ ತಂದೊಡ್ಡಿದ್ದರು. ವ್ಹಿಲಿಂಗ್ ಮಾಡಿ ಜಾಲತಾಣದಲ್ಲಿ ವಿಡಿಯೋ ಅಪ್ಲೋಡ್ ಮಾಡಿದ್ದರು. ಸಾಮಾಜಿಕ ಜಾಲತಾಣದ ವಿಡಿಯೋ ಆಧಾರದಲ್ಲಿ ಇದೀಗ ಪೊಲೀಸರು ಇಬ್ಬರನ್ನು ಅರೆಸ್ಟ್ ಮಾಡಿದ್ದಾರೆ. ಹೊಸೂರು ಟೌನ್ ಪೊಲೀಸರಿಂದ ವೀಲಿಂಗ್ ಪುಂಡರ ಬಂಧನವಾಗಿದೆ.
ಹುಬ್ಬಳ್ಳಿ : ಬಿಜೆಪಿ ಪಕ್ಷದಿಂದ 6 ವರ್ಷಗಳ ಕಾಲ ಉಚ್ಛಾಟನೆಯಾದರು, ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಬಿಎಸ್ ಯಡಿಯೂರಪ್ಪ ಮತ್ತು ಕುಟುಂಬದ ವಿರುದ್ಧ ವಾಗ್ದಾಳಿ ಮುಂದುವರಿಸಿದ್ದಾರೆ. ಈಗ ಬಿಎಸ್ ಯಡಿಯೂರಪ್ಪ ವಿರುದ್ಧ ಮತ್ತೊಂದು ಆರೋಪ ಮಾಡಿರುವ ಶಾಸಕ ಯತ್ನಾಳ್ ನನ್ನನ್ನು ಸೋಲಿಸಲು ಬಿಎಸ್ ಯಡಿಯೂರಪ್ಪ ಪ್ರಯತ್ನಿಸಿದ್ದರು ಎಂದು ಆರೋಪಿಸಿದರು. ಮಧ್ಯಮಗಳೊಂದಿಗೆ ಮಾತನಾಡಿದ ಅವರು, ಬಸವಜಯ ಮೃತ್ಯುಂಜಯ ಸ್ವಾಮೀಜಿ ಬಗ್ಗೆ ಮಾತನಾಡಿದರೆ ಸರಿ ಇರಲ್ಲ. ಶ್ರೀಗಳ ಬಗ್ಗೆ ಯಾರಾದರೂ ಮಾತನಾಡಿದರೆ ಪರಿಣಾಮ ಸರಿ ಇರಲ್ಲ. ನನ್ನನ್ನು ಸೋಲಿಸುವುದಕ್ಕೂ ಯಡಿಯೂರಪ್ಪ ಪ್ರಯತ್ನ ಮಾಡಿದ್ದರು. ನಾನು ಕೇವಲ ಹಿಂದುಗಳ ಮತಗಳಿಂದ ಗೆದ್ದಿದ್ದು. ಯಡಿಯೂರಪ್ಪ ಬ್ಲಾಕ್ಮೇಲ್ ಮಾಡಿ ದೊಡ್ಡ ವ್ಯಕ್ತಿ ಆಗಿದ್ದಾನೆ. ಭ್ರಷ್ಟಾಚಾರದಿಂದಾಗಿ ಸಿಎಂ ಸ್ಥಾನದಿಂದ ಬಿಎಸ್ ಯಡಿಯೂರಪ್ಪ ಕೆಳಗಿಳಿದರು ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕಿಡಿ ಕಾರಿದ್ದಾರೆ. ಇನ್ನು ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಪಕ್ಷದಿಂದ 6 ವರ್ಷಗಳ ಕಾಲ ಉಚ್ಚಾಟನೆ ಮಾಡಿರುವ ವಿಚಾರವಾಗಿ, ವಿಜಯಪುರದಲ್ಲಿ ಯತ್ನಾಳ್ ಬೆಂಬಲಿಗರ ಪ್ರತಿಭಟನೆ…
ನವದೆಹಲಿ : ಇಂದು ದೇಶದಾದ್ಯಂತ ರಾಮನವಮಿ ಹಿನ್ನೆಲೆ ದೇಶದಾದ್ಯಂತ ರಾಮನವಮಿಯನ್ನು ಸಂಭ್ರಮ ಸಡಗರದಿಂದ ಆಚರಿಸಲಾಯಿತು. ಇದೇ ವೇಳೆ ಶ್ರೀಲಂಕಾ ಪ್ರವಾಸವನ್ನು ಯಶಸ್ವಿಯಾಗಿ ಮುಗಿಸಿ ಹಿಂತಿರುಗುವ ವೇಳೆ ಪ್ರಧಾನಿ ನರೇಂದ್ರ ಮೋದಿ ವಿಮಾನದಿಂದಲೇ ರಾಮಸೇತು ದರ್ಶನ ಪಡೆದಿದ್ದಾರೆ. ರಾಮ ನವಮಿಯಂದೇ ಪ್ರಧಾನಿ ಮೋದಿ ರಾಮಸೇತು ದರ್ಶನ ಪಡೆದಿದ್ದು, ಈ ಸಂಬಂಧ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.ಸ್ವಲ್ಪ ಸಮಯದ ಹಿಂದೆ ಶ್ರೀಲಂಕಾದಿಂದ ಮರಳುವಾಗ ರಾಮಸೇತುವಿನ ದರ್ಶನ ಪಡೆಯುವ ಸೌಭಾಗ್ಯ ದೊರಕಿತು. ದೈವಿಕ ನಿದರ್ಶನ ಎಂಬಂತೆ ಅಯೋಧ್ಯೆಯಲ್ಲಿ ಸೂರ್ಯ ತಿಲಕದ ಸಂದರ್ಭದಲ್ಲೇ ಈ ದರ್ಶನ ಪಡೆದಿದ್ದೇನೆ. ಶ್ರೀರಾಮ ದೇವರು ನಮ್ಮೆಲ್ಲರನ್ನು ಒಗ್ಗೂಡಿಸುವ ಶಕ್ತಿಯಾಗಿದ್ದು, ದೇವರ ಆಶೀರ್ವಾದ ಸದಾ ಇರಲಿ ಎಂದು ಬರೆದುಕೊಂಡಿದ್ದಾರೆ. https://twitter.com/narendramodi/status/1908784112720122344?t=ll6TUFlYhlOsO81KBytRbg&s=19
ಬೆಂಗಳೂರು : ಸಚಿವ ಈಶ್ವರ್ ಖಂಡ್ರೆ ಪುತ್ರ ಹಾಗು ಕಾಂಗ್ರೆಸ್ ಸಂಸದ ಸಾಗರ್ ಖಂಡ್ರೆ ಅವರ ಬೆಂಗಳೂರಿನ ಮನೆಯ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಿದ ಕೃಷ್ಣ ಅಪಾರ್ಟಮೆಂಟ್‌ನ ಮ್ಯಾನೇಜರ್ ಚಂದ್ರಕುಮಾರ ಅವರ ವಿರುದ್ಧ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಮನೆ ನವೀಕರಣ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಹೌದು ಶ್ರೀ ಕೃಷ್ಣ ಅರ್ಪಾಟಮೆಂಟ್ ನಲ್ಲಿ ಅರಣ್ಯ ಇಲಾಖೆ ಸಚಿವ ಈಶ್ವರ ಖಂಡ್ರೆ ಪುತ್ರ ಹಾಗೂ ಸಂಸದ ಸಾಗರ ಖಂಡ್ರೆ ವಾಸವಾಗಿದ್ದಾರೆ. ಪ್ರಸ್ತುತ ಈ ಮನೆಯನ್ನು ಕೃಷ್ಣ ಅರ್ಪಾಟಮೆಂಟ್ಸೊ ಸೈಟಿಯಿಂದ ಪೂರ್ವಾನುಮತಿಯನ್ನು ಪಡೆದುಕೊಂಡು ನವೀಕರಣಮಾಡಲಾಗುತ್ತಿದೆ. ನವೀಕರಣದ ವೇಳೆ ಮೆಟ್ಟಿಲುಗಳಿಗೆ ಬೆಳಕಿನ ವ್ಯವಸ್ಥೆ ಮಾಡಲು ವೈರ್ನ್ನು ಎಳೆಯಲಾಗಿದೆ. ಈ ವಿಚಾರವನ್ನು ಮುಂದಿಟ್ಟುಕೊಂಡು ಏಪ್ರಿಲ್ 2 ರಂದು ಮಧ್ಯಾಹ್ನ ಸುಮಾರು 04:30 ಗಂಟೆ ಸಮಯದಲ್ಲಿ ಅಪಾರ್ಟಮೆಂಟ್‌ನ ಮ್ಯಾನೇಜರ್ ಚಂದ್ರಕುಮಾರ ಎಂಬುವರು ನವೀಕರಣ ಕಾಮಗಾರಿ ಮಾಡುತ್ತಿರುವ ಕಾರ್ಮಿಕರನ್ನು ಅಡ್ಡಗಟ್ಟಿ, ಕಾರ್ಮಿಕರಿಗೆ ಮನಬಂದಂತೆ ಅವಾಚ್ಯ ಶಬ್ದಗಳಿಂದ ಬೈದಿದಿದ್ದಾರೆ.ಈ ಬಗ್ಗೆ ಮನೆಯ ಮಾಲೀಕ ಸಾಗರ ಖಂಡ್ರೆ ಅಥವಾ ಈಶ್ವರ ಖಂಡ್ರೆ…
ಹುಬ್ಬಳ್ಳಿ : ರಾಜ್ಯದಲ್ಲಿ ಇಂದು ಮತ್ತೊಂದು ಭೀಕರವಾದ ಅಪಘಾತ ಸಂಭವಿಸಿದ್ದು ಹುಬ್ಬಳ್ಳಿಯಲ್ಲಿ, ಹೊರವಲಯದ ನೂಲ್ವಿ ಕ್ರಾಸ್ ನಲ್ಲಿ ರಸ್ತೆ ಡಿವೈಡರ್ಗೆ ಕಾರು ಡಿಕ್ಕಿಯಾಗಿ ಸ್ಥಳದಲ್ಲಿ ನಾಲ್ವರು ವೃದ್ಧೆಯರು ಸಾವನಪ್ಪಿದ್ದಾರೆ. ಮೃತರನ್ನು ಸುಜಾತ ಹಿರೇಮಠ (60), ಗಾಯತ್ರಿ ಮಹಾಂತನಮಠ (67), ಶಕುಂತಲಾ ಹಿರೇಮಠ (72) ಹಾಗು ಸಂಪತಕುಮಾರಿ ಕಲ್ಮಠ (63) ಎಂದು ತಿಳಿದುಬಂದಿದೆ. ಕಾರು ವರೂರ ಗ್ರಾಮದಿಂದ ಹುಬ್ಬಳ್ಳಿಯ ತ್ತ ಬರುತ್ತಿತ್ತು. ಈ ವೇಳೆ ಕಾರಿನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಡಿವೈಡರ್ ಗೆ ಡಿಕ್ಕಿ ಹೊಡೆದಿದೆ. ಕಾರಿನಲ್ಲಿದ್ದ ನಾಲ್ವರು ವೃದ್ಧೆಯರು ಸ್ಥಳದಲ್ಲಿ ಸಾವನ್ನಪ್ಪಿದ್ದಾರೆ. ಮೃತರು ಹುಬ್ಬಳ್ಳಿಯ ಲಿಂಗರಾಜ ನಗರದ ನಿವಾಸಿಗಳು ಎಂದು ತಿಳಿದು ಬಂದಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ತನಿಖೆ ನಡೆಸುತ್ತಿದ್ದಾರೆ
ತುಮಕೂರು : ಅತ್ತೆ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಮನನೊಂದ ಸೊಸೆಯೊಬ್ಬಳು ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನ ವೀರಸಂದ್ರದಲ್ಲಿ ಈ ಒಂದು ಘಟನೆ ನಡೆದಿದೆ. ಕ್ರಿಮಿನಾಶಕ ಸೇವಿಸಿ ಸುಮಲತಾ (37)ಎನ್ನುವ ಸೊಸೆ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ತಕ್ಷಣ್ ಸುಮಲತಾಳನ್ನು ಕೆ.ಬಿ ಕ್ರಾಸ್ ನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಕಳೆದ 18 ವರ್ಷಗಳ ಹಿಂದೆ ನರಸಿಂಹಮೂರ್ತಿ ಜೊತೆಗೆ ಸುಮಲತಾ ವಿವಾಹವಾಗಿದ್ದರು. ಒಂದುವರೆ ವರ್ಷದ ಹಿಂದೆ ಅನಾರೋಗ್ಯದಿಂದ ಪತಿ ನರಸಿಂಹಮೂರ್ತಿ ಸಾವನ್ನಪ್ಪಿದ್ದಾರೆ. ಪತಿ ಮೃತಪಟ್ಟ ನಂತರ ಅತ್ತೆ ಲಕ್ಕಮ್ಮ ಸೇರಿದಂತೆ ಹಲವರು ಸುಮಲತಾಗೆ ಕಿರುಕುಳ ನೀಡುತ್ತಿದ್ದಾರೆ. ಕಿಬ್ಬನಹಳ್ಳಿ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.
SHOCKING : ರಾಜ್ಯದಲ್ಲಿ ಪತ್ನಿಯ ಕಾಟಕ್ಕೆ ಮತ್ತೊಂದು ಬಲಿ : ಬೆಂಗಳೂರಲ್ಲಿ ಅಪಾರ್ಟ್ಮೆಂಟ್ ನಲ್ಲಿ ನೇಣಿಗೆ ಶರಣಾದ ಪತಿ!
ಬೆಂಗಳೂರು : ಇತ್ತೀಚಿಗೆ ಪತ್ನಿಯರ ಕಾಟಕ್ಕೆ ಬೇಸತ್ತು, ಅದೆಷ್ಟೋ ಗಂಡಂದಿರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಇತ್ತೀಚಿಗೆ ಬೆಂಗಳೂರಿನಲ್ಲಿ ಟೆಕ್ಕಿ ಸುಭಾಷ್ ಆತ್ಮಹತ್ಯೆ ಇಡೀ ದೇಶದಾದ್ಯಂತ ಭಾರಿ ಚರ್ಚೆಯಾಗಿತ್ತು. ಇದೀಗ ಬೆಂಗಳೂರಿನಲ್ಲಿ ಮತ್ತೊರ್ವ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿದ್ದು, ಪತ್ನಿಯ ಕಿರುಕುಳಕ್ಕೆ ಮನನೊಂದು ಅಪಾರ್ಟ್ಮೆಂಟ್ ನಲ್ಲಿ ನೇಣು ಬಿಗಿದುಕೊಂಡು ಪತಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಹೌದು ಬೆಂಗಳೂರು ನಗರದಲ್ಲಿ ಮತ್ತೊಂದು ದಾರುಣ ಘಟನೆ ಬೆಳಕಿಗೆ ಬಂದಿದೆ. ಲಿನೋವೋ ಕಂಪನಿಯ ಹಿರಿಯ ಉದ್ಯೋಗಿಯಾಗಿದ್ದ ಪ್ರಶಾಂತ್ ನಾಯರ್ (40) ಅವರು ಪತ್ನಿಯ ಕಿರುಕುಳದಿಂದ ಮನನೊಂದು ಚಿಕ್ಕಬಾಣಾವರದ ಡಿ.ಎಕ್ಸ್ ಸ್ಮಾರ್ಟ್ ನೆಸ್ಟ್ ಅಪಾರ್ಟ್‌ಮೆಂಟ್‌ನಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪ್ರಶಾಂತ್ ಅವರು ಮನೆಯ ಫ್ಯಾನಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದು,ತಂದೆ ಎಮ್ ಎನ್ ಕುಟ್ಟಿ ಮಗನಿಗೆ ಕರೆ ಮಾಡಿದ್ರು ಎಷ್ಟು ಬಾರಿ ಕರೆ ಸ್ವೀಕರಿಸಿದ ಹಿನ್ನೆಲೆಯಲ್ಲಿ ಮನೆಗೆ ಬಂದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ,ಸದ್ಯ ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ. ಈ ಸಂಬಂಧ ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು…
ಹುಬ್ಬಳ್ಳಿ : ಸಹಕಾರ ಸಚಿವ ಕೆ.ಎನ್ ರಾಜಣ್ಣ ಮೇಲೆ ಹನಿಟ್ರ್ಯಾಪ್ ನಡೆದಿದೆ ಎನ್ನಲಾದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಈಗಾಗಲೇ ರಾಜ್ಯ ಸರ್ಕಾರ ಈ ಒಂದು ಪ್ರಕರಣವನ್ನು ಸಿಐಡಿ ತನಿಖೆಗೆ ನೀಡಿದೆ. ಇದರ ಬೆನ್ನಲ್ಲೇ ಬಿಜೆಪಿ ಉಚ್ಛಾಟಿತ ಶಾಸಕ ಬಸನಗೌಡ ಪಾಟೀಲ ಹನಿಟ್ರ್ಯಾಪ್ ಸಂಬಂಧಪಟ್ಟಂತೆ ನನ್ನ ಬಳಿ ಹಲವು ದಾಖಲೆಗಳಿವೆ ಎಂದು ಸ್ಪೋಟಕ ಹೇಳಿಕೆ ನೀಡಿದ್ದಾರೆ. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಎಸ್‌ಸಿ/ಎಸ್‌ಟಿ ನಾಯಕರನ್ನು ಮುಗಿಸಿದ್ದೆ ಕಾಂಗ್ರೆಸ್ ಪಕ್ಷ. ಕೆ.ಎನ್ ರಾಜಣ್ಣ, ರಮೇಶ್ ಜಾರಕಿಹೊಳಿ ಮುಗಿಸಿದ್ದು ಯಾರು? ಹಾಗಾಗಿ ರಾಜಕಾರಣ ಹೀಗಾಗಬಾರದು. ಹನಿಟ್ರ್ಯಾಪ್ ಹಿಂದೆ ಮಹಾನ್ ನಾಯಕರ ಕೈವಾಡವಿದೆ. ಎರಡು ಪಕ್ಷದ ಮಹಾನ್ ನಾಯಕರ ಕೈವಾಡ ಇದೆ. ನನ್ನ ಬಳಿಯೂ ಕೆಲವು ದಾಖಲೆಗಳು ಇವೆ. ನನಗೆ ಹಾಯ್ ಅಂದರೆ ನಾನು ಬಾಯ್ ಎಂದು ಹೇಳುತ್ತೇನೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸ್ಪೋಟಕ ಹೇಳಿಕೆ ನೀಡಿದರು. ನನ್ನ ವಿರುದ್ಧವು ಶತ್ರು ಸಂಹಾರ ಯಾಗ ನಡೆದಿದೆ. ಕೇರಳದ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಯಾಗ ನಡೆದಿದೆ. ಹುಬ್ಬಳ್ಳಿಯಲು ಕೂಡ ಒಂದು…
ಬೆಂಗಳೂರು : ರಾಜ್ಯದ ಕೆಲ ಜಿಲ್ಲೆಗಳಲ್ಲಿ ಮಳೆಯಾಗುತ್ತಿದೆ. ಇನ್ನು ಕೆಲ ಜಿಲ್ಲೆಗಳಲ್ಲಿ ರಣಬಿಸಿಲು ಹೆಚ್ಚುತ್ತಿದೆ. ಇಂದು ದಕ್ಷಿಣ ಒಳನಾಅಡಿನ ಬಹುತೇಕ ಜಿಲ್ಲೆಗಳಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಚಾಮರಾಜನಗರ, ಕೊಡಗು, ಮೈಸೂರು ಜಿಲ್ಲೆಗಳಲ್ಲಿ ಭಾರಿ ಮಳೆಯಾಗಲಿದ್ದು, ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ವಿಜಯನಗರ, ಮಂಡ್ಯ, ಕೋಲಾರ, ತುಮಕೂರು, ಶಿವಮೊಗ್ಗ, ರಾಮನಗರ, ಹಾಸನ, ದಾವಣಗೆರೆ, ಚಿತ್ರದುರ್ಗ, ಚಿಕ್ಕಮಗಳೂರು, , ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಕೊಪ್ಪಳ, ಹಾವೇರಿ, ಗದಗ, ಧಾರವಾಡ ಜಿಲ್ಲೆಗಳಲ್ಲಿ ಮಳೆಯಾಗಲಿದೆ.














