Author: kannadanewsnow05

ಯಾದಗಿರಿ : ಯಾದಗಿರಿಯಲ್ಲಿ ಹೃದಯ ವಿದ್ರಾವಕ ಘಟನೆ ಒಂದು ನಡೆದಿದ್ದು, ಜಾತಿ ನಿಂದನೆ ಪ್ರಕರಣಕ್ಕೆ ಹೆದರಿ ಯುವಕನೊಬ್ಬ ಆತ್ಮಹತ್ಯೆಗೆ ಶರಣಾಗಿದ್ದು, ಮಹಿಬೂಬ್ (22) ಎನ್ನುವ ನೇಣು ಬಿಗಿಸಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಮಗನ ಆತ್ಮಹತ್ಯೆ ವಿಷಯ ತಿಳಿದು ತಂದೆಗೆ ಹೃದಯಘಾತವಾಗಿದೆ. ಒಂದೇ ದಿನ ಒಂದೇ ಮನೆಯಲ್ಲಿ ಎರಡು ಸಾವು ಆಗಿವೆ ಯಾದಗಿರಿ ಜಿಲ್ಲೆಯ ವಡಗೇರಾ ಪಟ್ಟಣದಲ್ಲಿ ಈ ಒಂದು ಘಟನೆ ನಡೆದಿದೆ. ಜಮೀನಿನಲ್ಲಿ ದಾರಿಯ ವಿಚಾರಕ್ಕೆ ಜಗಳ ಆಗಿತ್ತು. ಹಿರಿಯರು ನ್ಯಾಯ ಪಂಚಾಯತಿ ಮಾಡಿ ಬಗೆಹರಿಸಿದ್ದರು. ಆದರೂ ಬೇರೆ ಊರಿನ ಮುಖಂಡ ಜಾತಿ ನಿಂದನೆ ಪ್ರಕರಣ ದಾಖಲಿಸಲು ಮುಂದಾಗಿದ್ದ. ಜಾತಿನಿಂದನೆ ಕೇಸ್ ದಾಖಲಿಸಿ, ಜೈಲಿಗೆ ಕಳುಹಿಸುತ್ತೇನೆ ಎಂದು ಆತ ಬೆದರಿಕೆ ಹಾಕಿದ್ದ. ಜೈಲಿಗೆ ಹೋದರೆ ಮರ್ಯಾದೆ ಹೋಗುತ್ತದೆ ಎಂದು ಮೆಹಬೂಬ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇತ್ತ ಮಗ ಆತ್ಮಹತ್ಯೆ ಮಾಡಿಕೊಂಡಿದ್ದಕ್ಕೆ ತಂದೆ ಸೈಯದ್ ಅಲಿ ಅವರಿಗೆ ಹೃದಯಾಘಾತ ಆಗಿದೆ. ಸೈಯದ್ ಅಲಿ ಅವರನ್ನು ತಕ್ಷಣ ಕಲ್ಬುರ್ಗಿಯ ಜಯದೇವ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ…

Read More

ಕಲಬುರಗಿ : ರಾಜ್ಯದಲ್ಲಿ ಹೃದಯಾಘಾರದಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆ ಹೆಚ್ಚುತ್ತಿದ್ದು ನಿನ್ನೆ ತಾನೇ ಹೃದಯಾಘಾತಕೆ ಓರ್ವ ಬಾಲಕ ಸೇರಿದಂತೆ ಒಟ್ಟು ಎಂಟು ಜನರು ಹೃದಯಾಘಾತದಿಂದ ಸಾವನ್ನಪ್ಪಿದ್ದ ಘಟನೆ ನಡೆದಿತ್ತು. ಇದೀಗ ಕಲ್ಬುರ್ಗಿಯಲ್ಲಿ ಹೃದಯಘಾತಕ್ಕೆ ಕಾಲೇಜು ಉಪ ಪ್ರಾಂಶುಪಾಲರು ಒಬ್ಬರು ಸಾವನ್ನಪ್ಪಿದ್ದಾರೆ. ಹೌದು ಕಲ್ಬುರ್ಗಿಯಲ್ಲಿ ಹೃದಯಾಘಾತದಿಂದ ಉಪರಂಶುಪಾಲ ಸಾವನ್ನಪ್ಪಿದ್ದಾರೆ. ಕಲಬುರ್ಗಿಯ ಬಿದ್ದಾಪುರ ಕಾಲೋನಿಯ ಗುರುಬಸಯ್ಯ ಸಾಲಿಮಠ್ (53) ಎನ್ನುವವರು ಸಾವನಪ್ಪಿದ್ದಾರೆ ಕಲಬುರ್ಗಿ ನಗರದಲ್ಲಿ ಖಾಸಗಿ ಪದವಿ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಗುರುಬಸಯ್ಯ ಸೇವೆ ಸಲ್ಲಿಸುತ್ತಿದ್ದರು . ವಾಕಿ ಮುಗಿಸಿ ಮನೆಯಲ್ಲಿ ನೀರು ಕುಡಿದು ಕುರ್ಬಸಯ್ಯ ಕುಳಿತಿದ್ದಾಗ ತೀವ್ರ ಹೃದಯಾಘಾತ ಸಂಭವಿಸಿ ಸಾವನಪ್ಪಿದ್ದಾರೆ. ನಿನ್ನೆ ಮಧ್ಯಾಹ್ನ ಕಾಲೇಜಿನಲ್ಲಿದ್ದಾಗಲೇ ಗುರುಬಸಯ್ಯ ಅವರಿಗೆ ಎದೆ ನೋವು ಕಾಣಿಸಿಕೊಂಡಿತ್ತು. ಆದರೆ ಅವರು ಯಾವುದೇ ಚಕಪ್ ಮಾಡಿಸಿಕೊಳ್ಳಲಿಲ್ಲ. ಆದರೆ ಇಂದು ಬೆಳಿಗ್ಗೆ ವಾಕಿಂಗ್ ಮುಗಿಸಿ ಮನೆಗೆ ಬಂದು ನೀರು ಕುಡಿದು ಕುಳಿತುಕೊಂಡಾಗಲೇ ಏಕಾಏಕಿ ಹೃದಯಘಾತದಿಂದ ಸಾವನಪ್ಪಿದ್ದಾರೆ.

Read More

ಚಿಕ್ಕಬಳ್ಳಾಪುರ : ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಸುಬ್ಬಾರೆಡ್ಡಿ ಮನೆಗಳ ಮೇಲೆ ಇಂದು ಬೆಳ್ಳಂ ಬೆಳಿಗ್ಗೆ ಇಡಿ ದಾಳಿ ನಡೆಸಿದೆ. ಬೆಂಗಳೂರಿನಲ್ಲಿ ಇಡಿ ಅಧಿಕಾರಿಗಳು 5 ಕಡೆ ದಾಳಿ ನಡೆಸಿದ್ದಾರೆ. ಶಾಸಕ ಸುಬ್ಬಾರೆಡ್ಡಿ ಮತ್ತು ಸಂಬಂಧಿಕರಿಗೆ ಸೇರಿದ ಮನೆಗಳಲ್ಲಿ ಇಡಿ ಅಧಿಕಾರಿಗಳು ದಾಳಿ ನಡೆಸಿ ಶೋಧ ನಡೆಸುತ್ತಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ಕ್ಷೇತ್ರದ ಶಾಸಕ ಸುಬ್ಬಾರೆಡ್ಡಿ ಮನೆಗಳ ಮೇಲೆ ಇದೀಗ ಜಾರಿ ನಿರ್ದೇಶನಾಲಯ ಅಧಿಕಾರಿಗಳು ದಾಳಿ ಮಾಡಿದ್ದು, ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ ಉಲ್ಲಂಘನೆ ಮಾಡಿದ ಆರೋಪದ ಅಡಿ ದಾಳಿ ನಡೆಸಲಾಗಿದೆ.ವಿದೇಶಗಳಲ್ಲಿ ಶಾಸಕ ಸುಬ್ಬಾರೆಡ್ಡಿ ಕುಟುಂಬದ ಸದಸ್ಯರು ಆಸ್ತಿ ಹೊಂದಿದ್ದಾರೆ ಎನ್ನಲಾಗಿದ್ದು, ಶಾಸಕ ಸುಬ್ಬಾರೆಡ್ಡಿ ಬಿಜಿನೆಸ್ ಪಾರ್ಟ್ನರ್ ಗಳಿಗೆ ಸೇರಿದ ಆಸ್ತಿ ಎನ್ನಲಾಗಿದೆ. ಹಾಗಾಗಿ ಅಧಿಕಾರಿಗಳು ದಾಳಿ ನಡೆಸಿ ದಾಖಲೆ ಪರಿಶೀಲನೆ ಮಾಡುತ್ತಿದ್ದಾರೆ.

Read More

ಬೆಂಗಳೂರು : ಸಹ ಕಲಾವಿದೆಯ ಮೇಲೆ ಅತ್ಯಾಚಾರ ಎಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅತ್ಯಾಚಾರ ಆರೋಪದಲ್ಲಿ ದಾಖಲಾಗಿರುವ ಎಫ್ಐಆರ್ ರದ್ದು ಕೋರಿ ನಟ ಮಡೆನೂರು ಮನು ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದಾರೆ. ಪ್ರಕರಣ ಸಂಬಂಧ ತನ್ನ ವಿರುದ್ಧ ಅನ್ನಪೂರ್ಣೇಶ್ವರಿ ಪೊಲೀಸ್ ಠಾಣೆಯಲ್ಲಿ 2025ರ ಮೇ 22ರಂದು ದಾಖಲಾಗಿರುವ ಎಫ್ಐಆರ್ ಮತ್ತು ನಗರದ 6ನೇ ಎಸಿಜೆಎಂ ನ್ಯಾಯಾಲಯದ ವಿಚಾರಣೆ ರದ್ದುಪಡಿಸುವಂತೆ ಕೋರಿ ಮನು ಹೈಕೊರ್ಟ್​ಗೆ ಕ್ರಿಮಿನಲ್ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿ ಸಂಬಂಧ ಬುಧವಾರ ಕೆಲಕಾಲ ಮನು ಮತ್ತು ಪ್ರಕರಣದ ದೂರುದಾರೆಯ ಪರ ವಕೀಲರ ವಾದ, ಪ್ರತಿವಾದ ಆಲಿಸಿದ ನ್ಯಾಯಮೂರ್ತಿ ಎಸ್.ಆರ್. ಕೃಷ್ಣ ಕುಮಾರ್ ಅವರ ಪೀಠ ವಿಚಾರಣೆಯನ್ನು ಮುಂದೂಡಿತು.

Read More

ಬೆಂಗಳೂರು : ರಾಜ್ಯದಲ್ಲಿ ಹೃದಯಾಘಾತ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದ್ದು, ಇಂದು ಒಂದೇ ದಿನ ಓರ್ವ ಬಾಲಕ ಸೇರಿದಂತೆ 7 ಜನರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಬೆಳಗಾವಿ ಜಿಲ್ಲೆಯಲ್ಲಿ ಹೃದಯಾಘಾತದಿಂದ ಗೂಡ್ಸ್ ವಾಹನ ಚಾಲಕ ಸಾವು ಬೆಳಗಾವಿ ಜಿಲ್ಲೆಯ ಸೌದತ್ತಿ ಪಟ್ಟಣದ ಎಪಿಎಂಸಿಯಲ್ಲಿ ಆವರಣದಲ್ಲಿ ಈ ಒಂದು ಘಟನೆ ನಡೆದಿದ್ದು, ಹೃದಯಾಘಾತದಿಂದ ಅಶೋಕ್ ಜೀರಿಗವಾಡ (40) ಎನ್ನುವ ವ್ಯಕ್ತಿ ಸಾವನಪ್ಪಿದ್ದಾರೆ. ಮೃತ ಅಶೋಕ್ ಸೌದತ್ತಿ ತಾಲೂಕಿನ ಚಿಕ್ಕ ಉಳ್ಳಿಗೇರಿ ಗ್ರಾಮದ ನಿವಾಸಿ ಎಂದು ತಿಳಿದುಬಂದಿದೆ. ಸೌದತಿ ಪಟ್ಟಣದ ಎಪಿಎಂಸಿ ಮಾರುಕಟ್ಟೆಗೆ ಅಶೋಕ್ ಹೆಸರು ಕಾಳು ತಂದಿದ್ದರು. ಈ ವೇಳೆ ಎದೆನೋವಿನಿಂದ ಕುಸಿದು ಬಿದ್ದು ಚಾಲಕ ಅಶೋಕ್ ಸಾವನಪ್ಪಿದ್ದಾರೆ. ಸವದತ್ತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದಾವಣಗೆರೆಯಲ್ಲಿ 22 ವರ್ಷದ ಯುವಕ ಸಾವು ದಾವಣಗೆರೆಯಲ್ಲಿ ಹೃದಯಾಘಾತದಿಂದ 22 ವರ್ಷದ ಯುವಕ ಮೃತಪಟ್ಟಿದ್ದಾನೆ. ಉದ್ಯಮಿ ರೇಖಾ ಮುರುಗೇಶ್ ಅವರ ಪುತ್ರ ಅಕ್ಷಯ್ ಮೃತಪಟ್ಟ ಯುವಕ ಎಂದು ತಿಳಿದುಬಂದಿದೆ. ಮನೆಯಲ್ಲಿ ಏಕಾಏಕಿ ಕುಸಿದು ಬಿದ್ದ ಅಕ್ಷಯ್ ನನ್ನು…

Read More

ಬೆಂಗಳೂರು : ರಾಜ್ಯದಲ್ಲಿ ಹೃದಯಾಘಾತ ಮರಣ ಮೃದಂಗ ಮುಂದುವರೆದಿದ್ದು, ಇಂದು ಒಂದೇ ದಿನ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಒಟ್ಟು ಆರು ಜನರು ಹೃದಯಾಘಾತಕ್ಕೆ ಬಲಿಯಾಗಿದ್ದಾರೆ. ಇದೀಗ ಬೆಂಗಳೂರಿನಲ್ಲಿ ಕೂಡ ಯುವಕನೊಬ್ಬ ಹೃದಯಘಾತದಿಂದ ಸಾವನ್ನಪ್ಪಿದ್ದಾನೆ ಹೌದು ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ ಹೃದಯಾಘಾತಕ್ಕೆ ಮತ್ತೊಬ್ಬ ಯುವಕ ಬಲಿಯಾಗಿದ್ದು, ಹೃದಯಾಘಾತದಿಂದ ಗೊಲ್ಲರದೊಡ್ಡಿ ನಿವಾಸಿ ಗಿರೀಶ್ (25) ಇದೀಗ ಸಾವನಪ್ಪಿದ್ದಾನೆ. ದನ ಮೇಯಿಸಲು ತಳ್ಳಿದ್ದಾಗ ಗಿರೀಶ್ ಹೃದಯಘಾರದಿಂದ ಸವನ್ನಪಿದ್ದಾನೆ ಕಳೆದ ಮೂರು ದಿನಗಳಿಂದ ಗಿರೀಶ್ ಗೆ ಎದೆ ನೋವು ಕಾಣಿಸಿಕೊಂಡಿತ್ತು. ಇದೀಗ ಇಂದು ಹಾರ್ಟ್ ಅಟ್ಯಾಕ್ ಗೆ ಗಿರೀಶ್ ಬಲಿಯಾಗಿದ್ದಾನೆ.

Read More

ರಾಮನಗರ : ರಾಮನಗರದಲ್ಲಿ ಇಂದು ಭೀಖರವಾದ ಕೊಲೆ ನಡೆದಿದ್ದು ಮನೆಯಲ್ಲಿ ಯಾರು ಇಲ್ಲದ ವೇಳೆ ದುಷ್ಕರ್ಮಿಗಳು ಮನೆಗೆ ನುಗ್ಗಿ, 14 ವರ್ಷದ ಬಾಲಕಿಯನ್ನ ಭೀಕರವಾಗಿ ಹತ್ಯೆ ಮಾಡಿದ್ದಾರೆ. ಮನೆಯಲ್ಲಿಯೇ ಮಾರಕಾಸ್ತ್ರಗಳಿಂದ ಹೊಡೆದು ಅರುಣ (14) ಎನ್ನುವ ಬಾಲಕಿಯನ್ನು ದುಷ್ಕರ್ಮಿಗಳು ಕೊಲೆ ಮಾಡಿದ್ದಾರೆ. ಬೆಂಗಳೂರು ಹೊರವಲಯದ ತಾವರೆಕೆರೆಯಲ್ಲಿ ಈ ಒಂದು ಕೃತ್ಯ ನಡೆದಿದೆ. ಬೆಂಗಳೂರು ದಕ್ಷಿಣ ತಾಲೂಕಿನ ತಾವರೆಕೆರೆ ಗ್ರಾಮದಲ್ಲಿ ತಂದೆ ತಾಯಿ ಕೆಲಸಕ್ಕೆ ಹೋಗಿದ್ದಾಗ ಬಾಲಕಿಯನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿದೆ. ಶಾಲೆಗೆ ಹೋಗದೆ ಮನೆಯಲ್ಲಿ ಇದ್ದಂತಹ ಬಾಲಕಿಯ ಮೇಲೆ ಹಂತಕರು ಹಲ್ಲೆ ಮಾಡಿದ್ದಾರೆ. ಆದರೆ ಒಂದು ಭೀಕರ ಕೊಲೆಗೆ ಕಾರಣ ತಿಳಿದು ಬಂದಿಲ್ಲ. ತಾವರೆಗೆರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಒಂದು ಘಟನೆ ನಡೆದಿದೆ.

Read More

ಬೆಂಗಳೂರು : ಬೆಂಗಳೂರಲ್ಲಿ ಮತ್ತೊಂದು ಐಶ್ವರ್ಯ ಗೌಡ ಮಾದರಿ ವಂಚನೆ ನಡೆದಿದೆ. ಕಿಟ್ಟಿ ಪಾರ್ಟಿಯಲ್ಲಿ ಪರಿಚಯವಾದವರಿಗೆ ಕೋಟಿ ಕೋಟಿ ರೂಪಾಯಿ ವಂಚನೆ ಎಸಗಿದ್ದು, ಸುಮಾರು 20ಕ್ಕೂ ಹೆಚ್ಚು ಮಹಿಳೆಯರಿಗೆ 30ಕ್ಕೂ ಹೆಚ್ಚು ಕೋಟಿ ವಂಚನೆ ಎಸಗಲಾಗಿದೆ. ಕಿಟ್ಟಿ ಪಾರ್ಟಿಯಲ್ಲಿ ಹಣದ ಹಿನ್ನೆಲೆ ಇರುವ ಮಹಿಳೆಯರಿಗೆ ಗಾಳ ಹಾಕಲಾಗಿದ್ದು, ಸ್ನೇಹಿತೆಯರಿಗೆ ವಂಚನೆ ಮಾಡಿದ ಮಹಿಳೆಯನ್ನು ಸದ್ಯ ಪೋಲೀಸರು ಅರೆಸ್ಟ್ ಮಾಡಿದ್ದಾರೆ. ಬಸವೇಶ್ವರನಗರ ಪೊಲೀಸರಿಂದ ಆರೋಪಿ ಸವಿತಾ ಎನ್ನುವ ಮಹಿಳೆಯನ್ನು ಬಂಧಿಸಲಾಗಿದೆ. ಕಿಟ್ಟಿ ಪಾರ್ಟಿಯಲ್ಲಿ ಸವಿತಾ ಮಹಿಳೆಯರನ್ನು ಪರಿಚಯ ಮಾಡಿಕೊಂಡಿದ್ದಳು. ಈ ವೇಳೆ ಮಹಿಳೆಯರ ಹಿನ್ನೆಲೆ ಬಗ್ಗೆ ಆರೋಪಿ ಸವಿತಾ ವಿಚಾರಿಸುತ್ತಿದ್ದಳು. ಬಳಿಕ ಬಗೆ ಬಗೆಯ ತಿಂಡಿ ಊಟ ಕೊಡಿಸಿ ನಂಬಿಕೆ ಬರಿಸುತ್ತಿದ್ದಳು. ಹಲವು ರಾಜಕಾರಣಿಗಳು ಪರಿಚಯ ಎಂದು ಹೇಳಿಕೊಳ್ಳುತ್ತಿದ್ದಳು. ಸಿದ್ದರಾಮಯ್ಯ ಡಿಸಿಎಂ ಡಿಕೆ ಶಿವಕುಮಾರ್ ಸಚಿವ ಎಂ ಬಿ ಪಾಟೀಲ್ ಹೆಸರು ದುರ್ಬಳಕೆ ಮಾಡಿಕೊಂಡಿದ್ದು, ನಂತರ ನಿಧಾನವಾಗಿ ಹೂಡಿಕೆ ನೆಪದಲ್ಲಿ ಹಣ ಪಡೆದುಕೊಳ್ಳುತ್ತಿದ್ದಳು. ಹಣ ಹೂಡಿಕೆ ಮಾಡಿದ ಮಹಿಳೆಯರಿಗೆ ಹಣ ಡಬಲ್ ಮಾಡಿ…

Read More

ಕಲಬುರ್ಗಿ : ಸಿಸಿರಸ್ತೆ ಕಾಮಗಾರಿ ಬಿಲ್ ಮಂಜೂರಾತಿಗೆ ಲಂಚಕ್ಕೆ ಬೇಡಿಕೆ ಇಟ್ಟಂತಹ ಪಿ.ಆರ್.ಇ ಜೆಇ ಶ್ರೀಪಾದ ಕುಲಕರ್ಣಿ ಹಾಗು ಪಿಡಿಒ ಮಂಜುಶ್ರೀ ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ. ಕಲ್ಬುರ್ಗಿ ಜಿಲ್ಲಾ ಪಂಚಾಯತ್ ಸಿಇಒ ಭಂವರ್ ಸಿಂಗ್ ಮೀನಾ ಆದೇಶ ಹೊರಡಿಸಿದ್ದಾರೆ.ಸಚಿವ ಪ್ರಿಯಾಂಕ ಖರ್ಗೆ ಸೂಚನೆಯ ಮೇರೆಗೆ ಅಮಾನತು ಮಾಡಿ ಅದೇಶಿಸಲಾಗಿದೆ. ಇಲಾಖೆಯ ವಿಚಾರಣೆ ಬಾಕಿ ಇಟ್ಟು ಅಮಾನತು ಅಮಾನತುಗೊಳಿಸಲಾಗಿದೆ. ಕಲ್ಬುರ್ಗಿ ಜಿಲ್ಲೆಯ ಚಿತ್ತಾಪುರ ತಾಲ್ಲೂಕಿನ ಗುಂಡಗುರ್ತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಿಸಿ ರಸ್ತೆ ಕಾಮಗಾರಿ ನಡೆದಿತ್ತು. ಈ ಕಾಮಗಾರಿ ಬಿಲ್ ಮಂಜೂರಾತಿಗೆ ಲಂಚಕ್ಕೆ ಬೇಡಿಕೆ ಇಟ್ಟಿರುವ ವಿಡಿಯೋ ವೈರಲ್ ಆದ ಬೆನ್ನಲ್ಲೇ ಇಬ್ಬರನ್ನು ಅಮಾನತುಗೊಳಿಸಲಾಗಿದೆ. ಇನ್ನು ವೈರಲ್ ಆದ ವಿಡಿಯೋ ದಲ್ಲಿ 15ನೇ ಹಣಕಾಸಿನ ಯೋಜನೆ ಅಡಿ ಕಾಮಗಾರಿ ನಡೆದಿತ್ತು. ಕಾಮಗಾರಿಗಳಿಗೆ ಜೆಇ ಶ್ರೀಪಾದ್ ಕುಲಕರ್ಣಿ 5% ಲಂಚ ಕೇಳಿದ್ದಾರೆ. ಪಿಡಿಒ ಅವರಿಗೆ 3% ಕೊಡಬೇಕು. ನಾವೇ ಎಸ್ಟಿಮೇಟ್ ಮಾಡುತ್ತೇವೆ. ಎಂಬಿ ಬರೀತೀವಿ. ಎಲ್ಲ ಮಾಡುತ್ತೇವೆ ಟೈಪ್ ಮಾಡಿಸೋದು ಗೊತ್ತು, ಕೆಲಸಕ್ಕೆ…

Read More

ಚಾಮರಾಜನಗರ : ರಾಜ್ಯದಲ್ಲಿ ಕಳೆದ ಹಲವು ತಿಂಗಳಿನಿಂದ ಹೃದಯಾಘಾತದಿಂದ ಸರಣಿ ಸಾವುಗಳು ಸಂಭವಿಸುತ್ತಿದ್ದು ಹಾಸನ ಜಿಲ್ಲೆಯ ಒಂದರಲ್ಲಿ ಇದುವರೆಗೂ ನಲವತ್ತಕ್ಕೂ ಹೆಚ್ಚು ಜನರು ಹೃದಯಘಾತಕ್ಕೆ ಬಲಿಯಾಗಿದ್ದಾರೆ ಅದರಲ್ಲೂ ಯುವಜನತೆ ಹೆಚ್ಚು ಬಳಿಯಾಗಿದ್ದು ಇದೀಗ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆಯಲ್ಲಿ ಪಾಠ ಕೇಳುತ್ತಲೇ ಕುಸಿದು ಬಿದ್ದು 4ನೇ ತರಗತಿ ವಿದ್ಯಾರ್ಥಿ ಒಬ್ಬ ಸಾವನ್ನಪ್ಪಿದ್ದಾನೆ. ಹೌದು ಪಾಠ ಕೇಳುವಾಗಲೇ ಹೃದಯಾಘಾತದಿಂದ ವಿದ್ಯಾರ್ಥಿ ಸಾವನಪ್ಪಿದ್ದಾನೆ. ಕುರುಬಗೆರ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಒಂದು ಘಟನೆ ನಡೆದಿದ್ದು, ಚಾಮರಾಜನಗರ ಗುಂಡ್ಲುಪೇಟೆ ತಾಲೂಕಿನ ಕುರುಬಗ್ಗೇರಿ ಎಂಬಲ್ಲಿ ನಾಲ್ಕನೇ ತರಗತಿ ವಿದ್ಯಾರ್ಥಿ 10 ವರ್ಷದ ಮನೋಜ್ ಕುಮಾರ್ ಸಾವನಪ್ಪಿದ್ದಾನೆ. ಪಾಠ ಕೇಳುತ್ತಿದ್ದಾಗ ಕುಸಿದು ಬಿದ್ದು ಮನೋಜ್ ಸಾವನಪ್ಪಿದ್ದಾನೆ. ಈತ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಹೃದಯದಲ್ಲಿ ರಂದ್ರ ಇತ್ತು ಎಂಬ ಮಾಹಿತಿ ತಿಳಿದು ಬಂದಿದೆ.

Read More