Subscribe to Updates
Get the latest creative news from FooBar about art, design and business.
Author: kannadanewsnow05
ರಾಜಸ್ಥಾನ : ಇತ್ತೀಚಿಗೆ ಗುಜರಾತ್ನ ಅಹ್ಮದಾಬಾದ್ ಏರ್ಪೋರ್ಟ್ ಬಳಿ ವಿಮಾನ ಪತನಗೊಂಡು 270ಕ್ಕೂ ಹೆಚ್ಚು ಜನರು ಈ ಒಂದು ದುರಂತದಲ್ಲಿ ಸಾವನಪ್ಪಿದ್ದರು. ಈ ಒಂದು ಘಟನೆ ಮಾಸುವ ಮುನ್ನವೇ ರಾಜಸ್ಥಾನದಲ್ಲಿ ಮತ್ತೊಂದು ವಿಮಾನ ದುರಂತ ಸಂಭವಿಸಿದ್ದು ಭಾರತೀಯ ವಾಯುಪಡೆಯ ವಿಮಾನ ಒಂದು ಪತನಗೊಂಡಿರುವ ಘಟನೆ ರಾಜಸ್ಥಾನದ ಚುರುನಲ್ಲಿ ನಡೆದಿದೆ. ಹೌದು ರಾಜಸ್ಥಾನದಲ್ಲಿ ಭಾರತೀಯ ವಾಯು ಪಡೆಯ ವಿಮಾನ ಪತನವಾಗಿದೆ. ರಾಜಸ್ಥಾನದ ಚುರುನಲ್ಲಿ ವಾಯುಪಡೆಯ ವಿಮಾನ ಪತನವಾಗಿದ್ದು, ವಿಮಾನದ ಅವಶೇಷಗಳ ಅಡಿ ಒಬ್ಬನ ಮೃತದೇಹ ಪತ್ತೆಯಾಗಿದೆ ಎಂದು ತಿಳಿದುಬಂದಿದೆ. ರಾಜಸ್ಥಾನದ ಚುರುವಿನಲ್ಲಿ ಬುಧವಾರ ಭಾರತೀಯ ವಾಯುಪಡೆಯ ಜೆಟ್ ಅಪಘಾತಕ್ಕೀಡಾಗಿದೆ ಎಂದು ಪೊಲೀಸರು ದೃಢಪಡಿಸಿದ್ದಾರೆ. ರತನ್‌ಗಢ್ ತೆಹಸಿಲ್‌ನ ಭಾನೋಡಾ ಗ್ರಾಮದಲ್ಲಿರುವ ರಾಜಲ್ದೇಸರ್ ಪೊಲೀಸ್ ಠಾಣೆಯ ಅಧಿಕಾರಿಗಳು, ಇಬ್ಬರು ಪೈಲಟ್‌ಗಳು ಸ್ಥಳದಲ್ಲಿದ್ದರು ಎಂದು ತಿಳಿಸಿದ್ದಾರೆ. https://twitter.com/upuknews1/status/1942859343483003006?t=K8eH88vi04x85MP8vRmSOA&s=19
ಬೆಂಗಳೂರು : ಉಗ್ರ ಟಿ.ನಾಸಿರ್ ಗೆ ನೆರವು ನೀಡಿದ್ದ ಆರೋಪದ ಮೇಲೆ ಇಂದು NIA ಬೆಂಗಳೂರು ಸೇರಿ 5 ಕಡೆ ದಾಳಿ ನಡೆಸಿ ಒಟ್ಟು ಮೂವರನ್ನು ಅರೆಸ್ಟ್ ಮಾಡಿದ್ದಾರೆ. ಅನೀಸ್ ಫಾತಿಮಾ, ಡಾ. ನಾಗರಾಜ್, ಹಾಗು ASI ಚಾನ್ ಪಾಷಾನನ್ನು ಇದೀಗ ಸಿಟಿ ಸಿವಿಲ್ ಕೋರ್ಟ್ ಆವರಣದಲ್ಲಿರುವ NIA ಕೋರ್ಟ್ ಗೆ ಹಾಜರುಪಡಿಸಿದ್ದರು. ವಿಚಾರಣೆಯ ಬಳಿಕ ಇದೀಗ ಕೋರ್ಟ್ ಮೂವರು ಉಗ್ರರನ್ನು 6 ದಿನಗಳ ಕಾಲ NIA ಕಸ್ಟಡಿಗೆ ನೀಡಿ ಆದೇಶ ಹೊರಡಿಸಿದೆ. ಹೌದು ಇಂದು ರಾಜ್ಯದಲ್ಲಿ ಎನ್ ಐಎ ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಜೈಲಿನಲ್ಲಿರುವ ಶಂಕಿತ ಉಗ್ರರೊಂದಿಗೆ ನಿರಂತರ ಸಂಪರ್ಕ ಮತ್ತು ನೆರವು ನೀಡಿದ ಆರೋಪದಡಿ ಮೂವರನ್ನು ಬಂಧಿಸಿದೆ. ರಾಜ್ಯದ ಕೋಲಾರ ಮತ್ತು ಬೆಂಗಳೂರು ನಗರ ಜಿಲ್ಲೆಯ ಐದು ಸ್ಥಳಗಳ ಮೇಲೆ ರಾಷ್ಟ್ರೀಯ ತನಿಖಾ ದಳ(ಎನ್ಐಎ) ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಮನೋವೈದ್ಯ ಡಾ. ನಾಗರಾಜ್, ಉತ್ತರ ವಿಭಾಗದ ನಗರ ಶಶಸ್ತ್ರ ಮೀಸಲು ಪಡೆ ಎಎಸ್ಐ…
ನವದೆಹಲಿ : ಸದ್ಯ ರಾಜ್ಯ ರಾಜಕಾರಣದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷದಲ್ಲಿ ಹಲವು ಬದಲಾವಣೆಗಳು ಆಗುತ್ತಿದ್ದು, ರಾಜ್ಯ ಬಿಜೆಪಿ ಅಧ್ಯಕ್ಷರನ್ನು ನೇಮಕ ಮಾಡುವ ವಿಚಾರವಾಗಿ ರೆಬೆಲ್ ಟೀಮ್ ಪ್ರತ್ಯೇಕ ಸಭೆ ನಡೆಸುತ್ತಿದ್ದರೆ, ಇನ್ನೊಂದು ಕಡೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹಾಗೂ ಇದೀಗ ಇಂದು ಸಿಎಂ ಸಿದ್ದರಾಮಯ್ಯ ನವದೆಹಲಿಗೆ ತೆರಳಿದ್ದಾರೆ. ಇ ವೇಳೆ ಡಿಸಿಎಂ ಡಿಕೆ ಶಿವಕುಮಾರ್, ಯಾವುದೇ ಕಾರಣಕ್ಕೂ ಸಚಿವ ಸಂಪುಟ ಪುನರ್ ರಚನೆ ಇಲ್ಲ ಎಂದು ಸ್ಪಷ್ಟನೆ ನೀಡಿದರು. ನವದೆಹಲಿಯಲ್ಲಿ ಮಾತನಾಡಿದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು,ಸಚಿವ ಸಂಪುಟ ಪುನರ್ ರಚನೆ ಇಲ್ಲ. ಸಂಪುಟ ವಿಸ್ತರಣೆ ಎನ್ನುವ ಪ್ರಶ್ನೆಯೇ ಇಲ್ಲ. ಇಂದು ಸಿಎಂ ಸಿದ್ದರಾಮಯ್ಯ ನವದೆಹಲಿಗೆ ಬರುತ್ತಿದ್ದಾರೆ. ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರನ್ನು ಭೇಟಿ ಮಾಡುತ್ತೇವೆ. ದಸರಾದಲ್ಲಿ ಏರ್ ಶೋ ನಡೆಸುವ ಕುರಿತು ಚರ್ಚಿಸುತ್ತೇವೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ತಿಳಿಸಿದರು.
ಬೆಂಗಳೂರು : ಬೆಂಗಳೂರಿನಲ್ಲಿ ಮತ್ತೊಂದು ಭೀಕರ ಮರ್ಡರ್ ನಡೆದಿದ್ದು, ಶಾಪಿಂಗ್ ಗೆ ಹೋಗಿದ್ದಕ್ಕೆ ಪತ್ನಿಯನ್ನು ಪತಿಯೋಬ್ಬ ಭೀಕರವಾಗಿ ಕೊಲೆ ಮಾಡಿರುವ ಘಟನೆ ಬೆಂಗಳೂರಿನ ಬೊಮ್ಮನಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಪತಿ ಪದ್ಮಜ (29) ರನ್ನು ಪತಿ ಹರೀಶ್ ಕೊಲೆ ಮಾಡಿದ್ದಾನೆ. ಶಾಪಿಂಗ್ ಹೋಗಿದ್ದಕ್ಕೆ ಕುತ್ತಿಗೆ ಹಿಸುಕಿ ಕಾಲಿನಿಂದ ತುಳಿದು ಉಸಿರು ಗಟ್ಟಿಸಿ ಪತ್ನಿಯನ್ನು ಭೀಕರವಾಗಿ ಕೊಲೆ ಮಾಡಿದ್ದಾನೆ. ಕೋಲಾರ ಜಿಲ್ಲೆಯ ಶ್ರೀನಿವಾಸಪುರ ಮೂಲದ ದಂಪತಿಗಳು ಎಂದು ತಿಳಿದು ಬಂದಿದೆ. ಘಟನಾ ಸ್ಥಳಕ್ಕೆ ಬೊಮ್ಮನಹಳ್ಳಿ ಠಾಣೆ ಪೊಲೀಸ್ರು ಭೇಟಿ ನೀಡಿದ್ದು ಪ್ರಕರಣದ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.ದಂಪತಿಗಳು ಇಬ್ಬರು ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಇಬ್ಬರು ಬಿಇ ಮುಗಿಸಿಕೊಂಡಿದ್ದು, ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಕೋಲಾರದ ಶ್ರೀನಿವಾಸಪುರ ಮೂಲದವರು ಎಂದು ತಿಳಿದುಬಂದಿದ್ದು, ಕೆಲ ತಿಂಗಳಿನಿಂದ ಗಂಡ ಹರೀಶ್ ಕೆಲಸ ಬಿಟ್ಟು ಮನೆಯಲ್ಲಿಯೇ ಇದ್ದ. ಪತ್ನಿಯ ಜೊತೆಗೆ ನಿತ್ಯ ಗಲಾಟೆ ಮಾಡುತ್ತಿದ್ದ. ಆದರೆ ನಿನ್ನೆ ಶಾಪಿಂಗ್ ಗೆ ಹೋಗಿ ಬಂದಿದ್ದಕ್ಕೆ ಪತ್ನಿ ಜೊತೆಗೆ ಹರೀಶ್ ಗಲಾಟೆ…
ಬೆಳಗಾವಿ : ಬೆಳಗಾವಿಯಲ್ಲಿ ಇಂದು ಘೋರವಾದ ದುರಂತ ಒಂದು ಸಂಭವಿಸಿದ್ದು, ವಿಷ ಸೇವಿಸಿ ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆಗೆ ಯತ್ನಿಸಿದ್ದು, ಆತ್ಮಹತ್ಯೆಗೆ ಯತ್ನಿಸಿದ್ದ ಮೂವರು ಸಾವನಪ್ಪಿದ್ದು, ಅದರಲ್ಲಿ ಓರ್ವಳ ಸ್ಥಿತಿ ಗಂಭೀರವಾಗಿದ್ದು ಬೆಳಗಾವಿ ನಗರದ ಜೋಶಿಮಾಳ್ನಲ್ಲಿ ಈ ಒಂದು ದುರ್ಘಟನೆ ನಡೆದಿದೆ. ತಾಯಿ ಮಂಗಳಾ, ಮಗ ಸಂತೋಷ ಕುರುಡೇಕರ್ (44) ಹಾಗು ಮಗಳು ಸುವರ್ಣ ಮೃತ ದುರ್ದೈವಿಗಳಾಗಿದ್ದು, ಇನ್ನೊರ್ವ ಮಗಳು ಸುನಂದ ಕುರುಡೇಕರ್ ಸ್ಥಿತಿ ಗಂಭೀರವಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಶಹಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಒಂದು ಘಟನೆ ಸಂಭವಿಸಿದೆ. ಸದ್ಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು ಆತ್ಮಹತ್ಯೆಗೆ ಕಾರಣ ಏನು ಎಂಬುದನ್ನು ಪರಿಶೀಲನೆ ಮಾಡುತ್ತಿದ್ದಾರೆ. ಮೃತ ಸಂತೋಷ್ ಅಕ್ಕಸಾಲಿಗರಾಗಿ ಕೆಲಸ ಮಾಡುತ್ತಿದ್ದು, ಸಿಕ್ಕಾಪಟ್ಟೆ ಸಾಲ ಮಾಡಿಕೊಂಡಿದ್ದರು ಎಂದು ಮಾಹಿತಿ ತಿಳಿದು ಬಂದಿದೆ ಇನ್ನು ಬೆಳಿಗ್ಗೆ 9 ಗಂಟೆಗೆ 4 ಜನ ವಿಷ ಸೇವಿಸಿದ್ದಾರೆ. ತಾಯಿ ಇಬ್ಬರು ಹೆಣ್ಣುಮಕ್ಕಳ ಜೊತೆಗೆ ಮಗ ಸಂತೋಷ ಕೂಡ ಇದ್ದರು. ಇದರಲ್ಲಿ ಸಂತೋಷ್ ಸುವರ್ಣ…
ಮಂಡ್ಯ : ಮಂಡ್ಯದಲ್ಲಿ ನಿನ್ನೆ ತಡರಾತ್ರಿ ಘೋರ ದುರಂತ ನಡೆದಿದ್ದು, ಕಾವೇರಿ ಬ್ರಿಡ್ಜ್ ಮೇಲಿಂದ ನದಿಗೆ ಹಾರಿ ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಬಳಿ ತಡರಾತ್ರಿ ಒಂದು ಘಟನೆ ನಡೆದಿದೆ. ಹಾಸನ ಮೂಲದ ಸಿಂಚನ (23) ನದಿಗೆ ಹಾರಿದ ಯುವತಿ ಎಂದು ತಿಳಿದುಬಂದಿದೆ. ಯುವತಿ ನದಿಗೆ ಹಾರಿದ ಬಗ್ಗೆ ಸ್ಥಳೀಯರು ಕೂಡಲೇ ಪೊಲೀಸರಿಗೆ ತಿಳಿಸಿದರು. ಯುವತಿ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಬಗ್ಗೆ ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ.ಅಗ್ನಿಶಾಮಕ ದಳ ಹಾಗೂ ಪೋಲೀಸರು ಯುವತಿಗಾಗಿ ಶೋಧ ಕಾರ್ಯಕ್ರಮ ಮುಂದುವರೆಸಿದ್ದಾರೆ. ಯುವತಿಯ ಶೋಧ ಕಾರ್ಯಕ್ಕೆ ಭಾರಿ ಪ್ರಮಾಣದ ನೀರು, ಅಡ್ಡಿಯಾಗಿದೆ.
ಚಿಕ್ಕಬಳ್ಳಾಪುರ : ನನ್ನನ್ನು ಮದುವೆಯಾಗು ಎಂದು ಪೀಡಿಸುತ್ತಿದ್ದ ಯುವಕನೊಬ್ಬ ಮದುವೆಗೆ ನಿರಾಕರಿಸಿದ ಯುವತಿಗೆ ಟಾಯ್ಲೆಟ್ ಕ್ಲೀನರ್ ಎರಚಿ, ತಾನು ಕೂಡ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ ಭಗ್ನ ಪ್ರೇಮಿ ಒಬ್ಬ ಇದೀಗ ಚಿಕಿತ್ಸೆ ಫಲಕಾರಿ ಆಗದೆ ಸಾವನ್ನಪ್ಪಿರುವ ಘಟನೆ ಚಿಕ್ಕಬಳ್ಳಾಪುರ ಮಂಚನಬೆಲೆಯಲ್ಲಿ ನಡೆದಿದೆ. ಚಿಕ್ಕಬಳ್ಳಾಪುರದ ಮಂಚನಬೆಲೆಯಲ್ಲಿ ಯುವತಿಗೆ ಟಾಯ್ಲೆಟ್ ಕ್ಲೀನರ್ ಎರಚಿ ಆನಂದ್ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ. ತಕ್ಷಣ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಆನಂದ್ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗಿದೆ ಇಂದು ಆನಂದ್ ಸಾವನಪ್ಪಿದ್ದಾನೆ . ನನಗೆ ಸಿಗದ ಅವಳು ಯಾರಿಗೂ ಸಿಗಬಾರದು ಎಂದು ಟಾಯ್ಲೆಟ್ ಕ್ಲೀನರ್ ಎರಚಿದ್ದಾನೆ. ಅತ್ತೆ ಮಗಳನ್ನು ಆನಂದ್ ಕುಮಾರ್ ಪ್ರೀತಿ ಮಾಡುತ್ತಿದ್ದ.ವೈಶಾಲಿಯನ್ನು ಮದುವೆ ಮಾಡಿಕೊಡಿ ಎಂದು ಆನಂದ ವೈಶಾಲಿ ಪೋಷಕರ ಬಳಿ ಕೇಳಿದ್ದ. ಮದುವೆ ಮಾಡಿಕೊಡಲು ವೈಶಾಲಿ ಪೋಷಕರು ನಿರಾಕರಿಸಿದ್ದರು. ಇದರಿಂದ ಆಕ್ರೋಶಗೊಂಡು ಆಸಿಡ್ ಎರಚಿ ಬಳಿಕ ಆನಂದ ಆತ್ಮಹತ್ಯೆ ಯತ್ನಿಸಿದ್ದಾನೆ. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ…
ಕೊಡಗು : ಕೊಡಗು ಜಿಲ್ಲೆಯಲ್ಲಿ ಮಳೆಯಿಂದಾಗಿ ಹಲವು ಕಡೆ ಅವಾಂತರ ಸೃಷ್ಟಿಯಾಗಿದ್ದು, ಮಳೆಯಿಂದ ಅಂಗನವಾಡಿ ಕಟ್ಟಡದ ಮೇಲೆ ಬೃಹತ್ ಗಾತ್ರದ ಮರ ಬಿದ್ದು ಅವಾಂತರ ಆಗಿ ಅಂಗನವಾಡಿ ಸಹಾಯಕಿ ಬೇಬಿ (45) ಎನ್ನುವವರಿಗೆ ಗಂಭೀರವಾದ ಗಾಯಗಳಾಗಿರುವೆ. ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಗರ್ವಾಲಿ ಗ್ರಾಮದಲ್ಲಿ ಈ ಒಂದು ಘಟನೆ ನಡೆದಿದೆ. ಸದ್ಯ ಬೇಬಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಆದರೆ ಅದೃಷ್ಟವಶಾತ್ ಅನಾಹುತದಿಂದ 14 ಅಂಗನವಾಡಿ ಮಕ್ಕಳು ಪಾರಾಗಿದ್ದಾರೆ. ವ್ಯಾಕ್ಸಿನ್ಗಾಗಿ ಮಕ್ಕಳು ಸಮೀಪದ ಪಂಚಾಯಿತಿಗೆ ತೆರಳಿದ್ದರು. ಈ ವೇಳೆ ಅಂಗನವಾಡ ಕಟ್ಟಡದ ಮೇಲೆ ಮರ ಬಿದ್ದು ಅವಘಡ ಸಂಭವಿಸಿದೆ. ಮರ ತೆರವುಗೊಳಿಸುವಂತೆ ಅರಣ್ಯ ಇಲಾಖೆಗೆ ಗ್ರಾಮಸ್ಥರು ಹಲವು ಬಾರಿ ಮನವಿ ಮಾಡಿದ್ದರು ಆದರೂ ಕೂಡ ಇಲಾಖೆ ನಿರ್ಲಕ್ಷ ವಹಿಸಿದೆ ಎಂದು ಅರಣ್ಯ ಇಲಾಖೆಯ ವಿರುದ್ಧ ಘರ್ವಾಲೆ ಗ್ರಾಮಸ್ಥರು ಆರೋಪಿಸಿದ್ದಾರೆ
ಗದಗ : ಗದಗ ಜಿಲ್ಲೆಯಲ್ಲಿ ಘೋರ ಘಟನೆ ಒಂದು ನಡೆದಿದ್ದು, ಪ್ರೇಮಿಗಳಿಬ್ಬರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಆದರೆ ದುರಾದೃಷ್ಟವಶಾತ್ ಬಾಲಕಿಯೊಬ್ಬಳು ಚಿಕಿತ್ಸೆ ಫಲಿಸಿದೆ ಸಾವನ್ನಪ್ಪಿದ್ದು ಯುವಕನ ಸ್ಥಿತಿ ಗಂಭೀರವಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.ಈ ಒಂದು ಘಟನೆ ಗದಗ ಜಿಲ್ಲೆಯ ಗಜೇಂದ್ರಗಡದಲ್ಲಿ ನಡೆದಿದೆ. ಗಜೇಂದ್ರಗಡದಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಪ್ರೇಮಿಗಳು ಚಿಕಿತ್ಸೆ ಫಲಿಸದೆ ಅಪ್ರಾಪ್ತೆ ಸಾವನಪ್ಪಿದ್ದಾಳೆ. ಯುವಕನ ಸ್ಥಿತಿ ಗಂಭೀರವಾಗಿದೆ. ಗದಗ ಜಿಲ್ಲೆಯ ಗಜೇಂದ್ರಗಡ ಪೊಲೀಸ್ ಠಾಣೆಯಲ್ಲಿ ಈ ಒಂದು ಘಟನೆ ನಡೆದಿದ್ದು, ಗದಗದ ಜಿಮ್ಸ್ ಆಸ್ಪತ್ರೆಯಲ್ಲಿ ಪ್ರೇಮಿಗಳು ಚಿಕಿತ್ಸೆ ಪಡೆಯುತ್ತಿದ್ದರು. ನಿನ್ನೆ ರಾತ್ರಿ ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲೇ ಅಪ್ರಾಪ್ತ ಸಾವನಪ್ಪಿದ್ದಾಳೆ. 25 ವರ್ಷದ ಯುವಕನಿಗೆ ಆಸ್ಪತ್ರೆಯಲ್ಲಿ ಸದ್ಯ ಚಿಕಿತ್ಸೆ ಮುಂದುವರೆದಿದೆ ಎಂದು ಹೇಳಲಾಗುತ್ತಿದೆ.
ಕಲಬುರ್ಗಿ : ಕಳೆದ ಒಂದುವರೆ ತಿಂಗಳಿನಿಂದ ರಾಜ್ಯದಲ್ಲಿ ಹಾಸನ ಜಿಲ್ಲೆ ಒಂದರಲ್ಲಿ 40ಕ್ಕೂ ಹೆಚ್ಚು ಜನರು ಹೃದಯಘಾತಕ್ಕೆ ಬಲಿಯಾಗಿದ್ದಾರೆ. ಆದರೆ ಈ ಒಂದು ಹೃದಯಘಾತ ಹಾಸನ ಜಿಲ್ಲೆ ಅಷ್ಟೇ ಸೀಮಿತವಾಗದೆ, ವಿವಿಧ ಜಿಲ್ಲೆಗಳಲ್ಲೂ ಇದೀಗ ಹೃದಯಾಘಾತದಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ ಇದೀಗ ಹಿಂದೂ ಕಲ್ಬುರ್ಗಿಯಲ್ಲಿ ಮದುವೆಯಾದ ಒಂದೇ ವಾರಕ್ಕೆ ಹೃದಯಘಾತದಿಂದ ಯುವಕನೊಬ್ಬ ಸಾವನ್ನಪ್ಪಿರುವ ಘಟನೆ ವರದಿಯಾಗಿದೆ. ಹೌದು ಕಲ್ಬುರ್ಗಿಯಲ್ಲಿ ಹೃದಯಾಘಾತಕ್ಕೆ ಯುವಕನೊಬ್ಬ ಬಲಿಯಾಗಿದ್ದಾನೆ ಮೋಹಸೀನ್ ಪಟೇಲ್ (22) ಮೃತ ಯುವಕ ಎಂದು ತಿಳಿದುಬಂದಿದ್ದು, ಚಿಂಚೋಳಿ ತಾಲೂಕಿನ ಚಂದನಕೆರಾ ಗ್ರಾಮದಲ್ಲಿ ಈ ಒಂದು ಘಟನೆ ನಡೆದಿದೆ. ಮದುವೆಯಾಗಿ ಒಂದೇ ವಾರದಲ್ಲೇ ಯುವಕ ಹೃದಯಘಾತಕ್ಕೆ ಬಲಿಯಾಗಿದ್ದಾನೆ. ಲಾರಿ ಚಾಲಕನಾಗಿ ಮೋಹಸೀನ್ ಪಟೇಲ್ ಕೆಲಸ ಮಾಡುತ್ತಿದ್ದ. ಮೊಹರಂ ಹಬ್ಬಕ್ಕೆ ಎಂದು ಚಂದನಕೆರಾ ಗ್ರಾಮಕ್ಕೆ ತೆರಳಿದ್ದ ಮನೆಯಲ್ಲಿಯೇ ಕುಸಿದು ಬಿದ್ದಿದ್ದ ಮೊಸಿನ್ ಪಟೇಲ್ ನನ್ನು ಆಸ್ಪತ್ರೆಗೆ ಸಾಗಿಸುವಾಗ ಮಾರ್ಗಮಧ್ಯೆ ಸಾವನ್ನಪ್ಪಿದ್ದಾನೆ.












