Subscribe to Updates
Get the latest creative news from FooBar about art, design and business.
Author: kannadanewsnow05
ದಕ್ಷಿಣಕನ್ನಡ : ದಕ್ಷಿಣ ಕನ್ನಡದಲ್ಲಿ ಪ್ರಥಮ ವರ್ಷದ ಪಿಯುಸಿ ವಿದ್ಯಾರ್ಥಿನಿ ಒಬ್ಬಳು ಮನೆಯಲ್ಲಿ ಯಾರು ಇಲ್ಲದ ವೇಳೆ ನೀನು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವರದಿಯಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ, ನರಿಮೊಗರು ಬಳಿಯ ನಿವಾಸಿ, ಖಾಸಗಿ ಕಾಲೇಜೊಂದರ ಪ್ರಥಮ ಪಿಯುಸಿ ವಿದ್ಯಾರ್ಥಿನಿ ದೀಕ್ಷಿತಾ (17) ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಯಾವ ಕರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನುವುದು ತನಿಖೆಯ ಬಳಿಕವಷ್ಟೇ ತಿಳಿದು ಬರಬೇಕಿದೆ.
ತುಮಕೂರು : ತುಮಕೂರಿನಲ್ಲಿ ಘೋರವಾದ ದುರಂತ ಸಂಭವಿಸಿದ್ದು, ಮಾನಸಿಕ ಖಿನ್ನತೆಗೆ ಒಳಗಾಗಿದ್ದಂತಹ ತಾಯಿ ಹಾಗೂ ಮಗಳು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಅದಲಗೆರೆ ಗ್ರಾಮದಲ್ಲಿ ನಡೆದಿದೆ. ತಾಯಿ ಹಾಗೂ ಮಗಳು ಕೆರೆಗೆ ಹರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆ ಮಾಡಿಕೊಂಡಂತ ತಾಯಿ, ಮಗಳನ್ನು ವಿರುಪಾಕ್ಷಿಪುರದ ಪ್ರೇಮಕುಮಾರಿ (50) ಮತ್ತು ಪೂರ್ಣಿಮಾ (30) ಎಂದು ತಿಳಿದು ಬಂದಿದೆ. ಮಾನಸಿಕ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ಇದೀಗ ವ್ಯಕ್ತವಾಗುತ್ತಿದ್ದು, ಘಟನೆ ಕುರಿತಂತೆ ಚೇಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
BREAKING : ಮಂಗಳೂರು : ಫ್ಯುಯಲ್ ಬಂಕ್ ನ ‘ಕ್ಯೂ ಆರ್’ ಕೋಡ್ ಬದಲಿಸಿ, 58 ಲಕ್ಷ ನುಂಗಿದ ಸಿಬ್ಬಂದಿ : ಆರೋಪಿ ಅರೆಸ್ಟ್!
ಮಂಗಳೂರು : ಫ್ಯುಯಲ್ ಬಂಕ್ ನಲ್ಲಿ ಸೂಪರ್ ವೈಸರ್ಆಗಿ ಕೆಲಸ ಮಾಡುವ ಸಿಬ್ಬಂದಿ ಒಬ್ಬ, ಫ್ಯುಯಲ್ ಬಂಕ್ ಕ್ಯೂ ಆರ್ ಕೋಡ್ ಬದಲು ಮಾಡಿ, ತನ್ನ ವೈಯಕ್ತಿಕ ಬ್ಯಾಂಕ್ ಖಾತೆ ಕ್ಯೂ ಆರ್ ಕೋಡ್ ಇರಿಸಿ ಸುಮಾರು 58 ಲಕ್ಷಕ್ಕೂ ಹೆಚ್ಚು ಹಣ ವಂಚನೆ ಎಸಗಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ. ಹೌದು ಎರಡು ವರ್ಷದಲ್ಲಿ ಆರೋಪಿ ಮೋಹನ್ ದಾಸ್ ಎನ್ನುವವನು 58 ಲಕ್ಷ ದೋಚಿದ್ದಾನೆ. ಫ್ಯುಯಲ್ ಬಂಕ್ ನ ಸೂಪರ್ವೈಸರ್ ಆಗಿದ್ದ ಮೋಹನ್ದಾಸ್ ಈ ಕೃತ್ಯ ಎಸಗಿದ್ದಾನೆ. ಎರಡು ವರ್ಷದ ಬಳಿಕ ಆರೋಪಿಯ ಕೃತ್ಯ ಇದೀಗ ಬಯಲಾಗಿದೆ. ಮಂಗಳೂರಿನ ಬಜ್ಪೆ ನಿವಾಸಿ ಮೋಹನ್ ದಾಸ್ ಲಕ್ಷಾಂತರ ರು ವಂಚನೆ ಎಸೆಗಿದ್ದಾನೆ. ರಿಲಯನ್ಸ್ ಔಟ್ಲೆಟ್ ಫ್ಯುಯಲ್ ಬಂಕ್ ನಲ್ಲಿ ಈ ಘಟನೆ ನಡೆದಿದ್ದು, ಎರಡು ವರ್ಷಗಳ ಬಳಿಕ ಬೆಳಕಿಗೆ ಬಂದಿದೆ. ಗ್ರಾಹಕರಿಂದ ಮೋಹನ್ ದಾಸ್ ಖಾತೆಗೆ ಹಣ ವರ್ಗಾವಣೆ ಆಗುತ್ತಿತ್ತು. ಕಳೆದ 15 ವರ್ಷದಿಂದ ಮೋಹನ್ ದಾಸ್ ಸೂಪರ್ವೈಸರ್ ಆಗಿ ಫ್ಯುಯಲ್ ಬಂಕ್…
ಬೆಂಗಳೂರು : ಬೆಂಗಳೂರಿನಲ್ಲಿ ರಾಟ್ ವಿಲ್ಲರ್ ನಾಯಿಯೊಂದು 4 ವರ್ಷದ ಮಗುವಿನ ಮೇಲೆ ಡೆಡ್ಲಿ ಅಟ್ಯಾಕ್ ಮಾಡಿದೆ. ಪುಟ್ಟ ಕಂದಮ್ಮನ ಮೇಲೆ ನಾಯಿಂದ ಭೀಕರವಾದ ದಾಳಿ ನಡೆದಿರುವ ಘಟನೆ ಬೆಂಗಳೂರಿನ ಇಂದಿರಾನಗರದಲ್ಲಿ ನಡೆದಿದೆ . ಹೌದು 4 ವರ್ಷದ ಮಗುವಿನ ತಲೆಯ ಭಾಗಕ್ಕೆ ನಾಯಿ ಕಚ್ಚಿದೆ. ಇಂದ್ರಾ ನಗರದ ಗಣೇಶ ಟೆಂಪಲ್ ಬಳಿ ಈ ಒಂದು ಘಟನೆ ನಡೆದಿದೆ. ಮಗು ರಕ್ಷಣೆ ಮಾಡಿದವರ ಮೇಲು ಕೂಡ ನಾಯಿ ಭೀಕರ ದಾಳಿ ನಡೆಸಿದೆ. ನಾಯಿ ದಾಳಿ ಮಾಡಿದ ವೇಳೆ, ಮಗು ಜೋರಾಗಿ ಕಿರುಚಿಕೊಂಡಿದೆ ಈ ವೇಳೆ ಮಗುವಿನ ತಂದೆ ಮಗುವಿನ ರಕ್ಷಣೆಗೆ ಧಾವಿಸಿದಾಗ ಆತನ ಮೇಲೂ ಕೂಡ ನಾಯಿ ದಾಳಿ ಮಾಡಿದೆ ಘಟನೆ ಕುರಿತು ಇಂದಿರಾನಗರ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದೆ.
ಹಾಸನ : ಹಾಸನದಲ್ಲಿ ಘೋರ ದುರಂತ ಒಂದು ಸಂಭವಿಸಿದ್ದು, ಚಲಿಸುತ್ತಿದ್ದ ಕಾರಿನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ. ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಕಡೆಗರ್ಜೆ ಬಳಿ ಈ ಒಂದು ಘಟನೆ ನಡೆದಿದೆ. ಅದೃಷ್ಟವಶಾತ್ ಕಾರಿನಲ್ಲಿ ಚಲಿಸುತ್ತಿದ್ದ ದಂಪತಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಡಾ. ಶೇಷಾದ್ರಿ ಎಂಬವರಿಗೆ ಸೇರಿದ ಕಿಯಾ ಕಾರು ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ. ಚಿಕ್ಕಮಂಗಳೂರಿನಿಂದ ದಂಪತಿಗಳು ಕುಕ್ಕೆ ಸುಬ್ರಹ್ಮಣ್ಯಕ್ಕೆ ತೆರಳುತ್ತಿದ್ದರು. ಅರೆಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಬೆಳಗಾವಿ : ಬೆಳಗಾವಿಯಲ್ಲಿ ಅಪರಿಚಿತರಿಂದ ರೌಡಿಶೀಟರ್ ಮೇಲೆ ಫೈರಿಂಗ್ ನಡೆಸಿ ಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ. ರೌಡಿ ಶೀಟರ್ ಪ್ರಫುಲ್ ಪಾಟೀಲ್ ಹತ್ಯೆಗೆ ಯತ್ನಿಸಲಾಗಿದೆ. ಬೆಳಗಾವಿ ತಾಲೂಕಿನ ಗಣೇಶಪುರದ ಹೊರವಲಯದಲ್ಲಿ ಈ ಒಂದು ಘಟನೆ ನಡೆದಿದೆ. ಬೆಳಗುಂದಿ ಗ್ರಾಮದಿಂದ ಮನೆಗೆ ಹೋಗುವಾಗ ಪ್ರಫುಲ್ ಪಾಟೀಲ್ ಮೇಲೆ ಅಪರಿಚಿತರು ಫೈರಿಂಗ್ ಮಾಡಿದ್ದಾರೆ. ಚಲಿಸುವ ಕಾರಿನ ಮೇಲೆ ಗುಂಡಿನ ದಾಳಿ ಮಾಡಿ ಹತ್ಯೆಗೆ ಯತ್ನಿಸಿದ್ದಾರೆ. ಆದರೆ ಗುಂಡುಗಳು ಕಾರಿನ ಗ್ಲಾಸ್ ಗೆ ತಗುಲಿದ್ದರಿಂದ ಪ್ರಫುಲ್ ಪಾಟೀಲ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ.. ಕಾರಿನ ಗಾಜುಗಳು ಮುಖ ಹಾಗೂ ತಲೆಬಾಗಕ್ಕೆ ಸಿಡಿದ ಪರಿಣಾಮ ಪ್ರಫುಲ್ಲ್ ಪಾಟೀಲ್ ಗೆ ಗಂಭೀರವಾದ ಗಾಯಗಳಾಗಿವೆ. ರೌಡಿಶೀಟರ್ ಪ್ರಫುಲ್ ಪಾಟೀಲ್ ಗೆ ಸದ್ಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.ಘಟನೆ ಕುರಿತು ಬೆಳಗಾವಿಯ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಗಳೂರು : ರಾಜ್ಯ ಸರ್ಕಾರವು ಮದ್ಯಪ್ರಿಯರಿಗೆ ಶಾಕ್ ನೀಡಲು ಮುಂದಾಗಿದ್ದು, ಶೀಘ್ರವೇ ಬಿಯರ್ ದರ ಏರಿಕೆ ಸಿದ್ಧತೆ ನಡೆಸಿದೆ ಎಂದು ಮೂಲಗಳು ತಿಳಿಸಿವೆ.ರಾಜ್ಯ ಸರ್ಕಾರವು ಶೀಘ್ರವೆ ಬಿಯರ್ ಬೆಲೆಯಲ್ಲಿ 10 ರಿಂದ 50 ರೂ.ವರೆಗೆ ಹೆಚ್ಚಳ ಮಾಡಲು ನಿರ್ಧರಿಸಿದೆ ಎನ್ನಲಾಗಿದ್ದು, ಬಿಯರ್ ನಲ್ಲಿನ ಅಲ್ಕೋಹಾಲ್ ಅಂಶದ ಮೇಲೆ ದರ 10 ರಿಂದ 50 ರೂ.ವರೆಗೆ ಹೆಚ್ಚಳ ಮಾಡಲು ನಿರ್ಧರಿಸಿದೆ ಎಂದು ಹೇಳಲಾಗಿದೆ. ಕಡಿಮೆ ಆಲ್ಕೋಹಾಲ್ ಅಂಶವಿರುವ ಬಿಯರ್ ಗಳ ಬೆಲೆ ಯಥಾಸ್ಥಿತಿ ಇರಲಿದ್ದು, ಸ್ಟ್ರಾಂಗ್ ಬಿಯರ್ಗಳ ಬೆಲೆ ಏರಿಕೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಜನವರಿ 20 ರಿಂದ ದರ ಹೆಚ್ಚಳ ಆಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಈ ಮೂಲಕ ಬಿಯರ್ ಪ್ರಿಯರಿಗೆ ರಾಜ್ಯ ಸರ್ಕಾರವು ಬಿಗ್ ಶಾಕ್ ನೀಡಿದೆ. 2024-25ನೇ ಸಾಲಿನ ಬಜೆಟ್ನಲ್ಲಿ ಮುಖ್ಯಮಂತ್ರಿ ಐಎಂಎಲ್ ಹಾಗೂ ಬಿಯರ್ ಸ್ಪ್ಯಾಬ್ಗಳನ್ನು ಪರಿಷ್ಕರಿಸಲಾಗುವುದು ಎಂದು ಪ್ರಕಟಿಸಿದ್ದರು. ಅದರಂತೆ, ಐಎಂಎಲ್ ದರ ಪರಿಷ್ಕರಿಸಲಾಗಿತ್ತು. ಆದರೆ, ಬಿಯರ್ ಮೇಲಿನ ಹೆಚ್ಚುವರಿ ಅಬಕಾರಿ ಸುಂಕವನ್ನು ಅಲ್ಕೋಹಾಲ್…
ಬೆಂಗಳೂರು : ಇತ್ತೀಚಿಗೆ ವಿಚ್ಛೇದನ ಎನ್ನುವುದು ಒಂದು ಫ್ಯಾಶನ್ ಆಗಿಬಿಟ್ಟಿದೆ. ಅದರಲ್ಲೂ ಸ್ಟಾರ್ ನಟ-ನಟಿ ಹಾಗೂ ಸ್ಟಾರ್ ಆಟಗಾರರ ದಂಪತಿಗಳೇ ಇದರಲ್ಲಿ ಮುಂದಿದ್ದಾರೆ. ಕಳೆದ ಕೆಲ ದಿನಗಳಿಂದ ಸ್ಟಾರ್ ದಂಪತಿಗಳ ಸಂಸಾರದಲ್ಲಿ ಬಿರುಕು ಮೂಡುತ್ತಿದ್ದು, ವಿಚ್ಛೇದನದ ಮೊರೆ ಹೋಗುತ್ತಿದ್ದಾರೆ. ಯಜುವೇಂದ್ರ ಚಹಲ್ ಹಾಗೂ ಧನಶ್ರೀ ಡಿವೋರ್ಸ ವಿಚಾರ ಇನ್ನೂ ಮಾಸದಿರುವ ನಡುವೆಯೇ ಖ್ಯಾತ ಸ್ಟಾರ್ ಕ್ರಿಕೆಟಿಗರೊಬ್ಬರ ಸಂಸಾರದಲ್ಲಿ ಬಿರುಕು ಮೂಡಿದ್ದು, ವಿಚ್ಛೇದನ ಪಡೆಯಲಿದ್ದಾರೆ ಎಂದು ಹೇಳಲಾಗುತ್ತಿದೆ. ಹೌದು ಕರ್ನಾಟಕ ಮೂಲದ ಕ್ರಿಕೆಟಗ ಮನೀಷ್ ಪಾಂಡೆ ಹಾಗೂ ಅವರ ಪತ್ನಿ ಆಶ್ರಿತಾ ಶೆಟ್ಟಿ ದಾಂಪತ್ಯದಲ್ಲಿ ಬಿರುಕು ಮೂಡಿದ್ದು, ಈ ಇಬ್ಬರು ಪರಸ್ಪರ ಒಪ್ಪಿಗೆ ಮೇರೆಗೆ ವಿಚ್ಛೇದನ ಪಡೆಯಲು ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ. ಈ ವದಂತಿ ಇಷ್ಟು ವೇಗವಾಗಿ ಎಲ್ಲೆಡೆ ಹಬ್ಬಲು ಕಾರಣವೂ ಇದ್ದು, ಈ ಸ್ಟಾರ್ ಜೋಡಿ ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪರಸ್ಪರ ಅನ್ಫಾಲೋ ಮಾಡಿದ್ದಾರೆ. ಇದರ ಜೊತೆಗೆ ಇಬ್ಬರ ಖಾತೆಯಿಂದಲೂ ಇಬ್ಬರು ಜೊತೆಗಿರುವ ಫೋಟೋಗಳನ್ನು ಡಿಲೀಟ್ ಮಾಡಲಾಗಿದೆ. ಹೀಗಾಗಿ…
ಉತ್ತರಪ್ರದೇಶ : ಉತ್ತರ ಪ್ರದೇಶದಲ್ಲಿ ಬೆಚ್ಚಿ ಬೀಳಿಸುವಂತಹ ಘಟನೆ ನಡೆದಿದ್ದು, ಕಲ್ಲು ಕತ್ತರಿಸುವ ಯಂತ್ರದಿಂದ ದುಷ್ಕರ್ಮಿಗಳು ಮೂವರು ಮಕ್ಕಳು ಸೇರಿದಂತೆ ಒಂದೇ ಕುಟುಂಬದ ಐವರನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾರೆ.ಹೌದು ಉತ್ತರಪ್ರದೇಶದ ಮೀರತ್ನ ಲಿಸಾಡಿ ಗೇಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಒಂದೇ ಕುಟುಂಬದ ಐವರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಘಟನೆ ಪ್ರದೇಶದಲ್ಲಿ ಸಂಚಲನ ಮೂಡಿಸಿದೆ. ಮೀರತ್ನ ಲಿಸಾಡಿ ಪೊಲೀಸ್ ಠಾಣೆ ವ್ಯಾಪ್ತಿಯ ಸೊಹೈಲ್ ಗಾರ್ಡನ್ನಲ್ಲಿ ಒಂದೇ ಕುಟುಂಬದ ಐವರ ಮೃತದೇಹಗಳು ಪತ್ತೆಯಾಗಿವೆ. ಕೊಲೆಯ ನಂತರ, ಮೃತ ದೇಹಗಳನ್ನು ಗೋಣಿಚೀಲಗಳಲ್ಲಿ ಮುಚ್ಚಿ ಹಾಸಿಗೆಗಳಲ್ಲಿ ಮರೆಮಾಡಲಾಗಿದೆ. ಬುಧವಾರದಿಂದ ಇಡೀ ಕುಟುಂಬ ನಾಪತ್ತೆಯಾಗಿತ್ತು ಎನ್ನಲಾಗಿದೆ. ಗುರುವಾರ ರಾತ್ರಿ 9:30ಕ್ಕೆ ಅವರ ಸ್ವಂತ ಮನೆಯ ಕೊಠಡಿಯಲ್ಲಿ ಅವರ ಮೃತದೇಹ ಪತ್ತೆಯಾಗಿದ್ದು, ಹಾಸಿಗೆಯೊಳಗೆ ಚೀಲಗಳಲ್ಲಿ ತುಂಬಿತ್ತು. ಇವರಲ್ಲಿ ಮಕ್ಕಳೂ ಸೇರಿದ್ದಾರೆ. ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸುತ್ತಿದ್ದಾರೆ. ಪೋಲೀಸರ ತನಿಖೆಯಲ್ಲಿ ಕೊಲೆಯಾಗಿರುವುದು ಬೆಳಕಿಗೆ ಬಂದಿದೆ.ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಬುಧವಾರದಿಂದ ಇಡೀ ಕುಟುಂಬ ನಾಪತ್ತೆಯಾಗಿರುವುದಾಗಿ ನೆರೆಹೊರೆಯವರು…
ಕಲಬುರ್ಗಿ : ನ್ಯಾಯಾಲಯದ ಆವರಣದಲ್ಲಿ ಯುವಕನೊಬ್ಬನ ಮೇಲೆ ಮೂವರು ಮಾರಣಾಂತಿಕವಾಗಿ ಹಲ್ಲೆ ನಡೆಸಿರುವ ಘಟನೆ ಕಲಬುರ್ಗಿ ಜಿಲ್ಲೆಯ ಜೇವರ್ಗಿ ತಾಲೂಕಿನಲ್ಲಿ ನಡೆದಿದೆ. ಘಟನೆ ಸಂಬಂಧ ಪೊಲೀಸರು ಮೂವರನ್ನು ಅರೆಸ್ಟ್ ಮಾಡಿದ್ದಾರೆ. ನಿನ್ನೆ ಯಾತನೂರು ಗ್ರಾಮದ ನಿವಾಸಿ ದೇವೇಂದ್ರ (27) ಎನ್ನುವ ಯುವಕನ ಮೇಲೆ ಕೋರ್ಟ್ ಅವರಣದಲ್ಲೇ ಮೂವರು. ಯುವಕರಿಂದ ಹಲ್ಲೆ ನಡೆಸಲಾಗಿದೆ. ಸಿದ್ದು, ಶಿವಲಿಂಗಪ್ಪ ಹಾಗೂ ಶ್ರೀಶೈಲ್ ಎಂಬುವವರಿಂದ ಹಲ್ಲೆ ನಡೆಸಿರುವ ಆರೋಪ ಕೇಳಿ ಬಂದಿದೆ.ಗಾಯಗೊಂಡಿರುವ ದೇವ ಎಂದರೆ ಜೇವರ್ಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಾಲ್ಕು ವರ್ಷಗಳ ಹಿಂದೆ ದೇವಿಂದ್ರ ಹಲ್ಲೆ ಆರೋಪಿಗಳಲ್ಲಿ ಒಬ್ಬನಾದ ಶಿವಲಿಂಗಪ್ಪನ ಸಹೋದರ ಸಂಗಪ್ಪನನ್ನು ಕೊಲೆ ಮಾಡಿದ್ದ ಪ್ರಕರಣದಲ್ಲಿ ಜೈಲು ಸೇರಿದ್ದ. ತಾಯಿ ಅನಾರೋಗ್ಯದ ಕಾರಣದ ನೀಡಿ, ಜಾಮೀನಿನ ಮೇಲೆ ಎರಡ್ಮೂರು ತಿಂಗಳ ಹಿಂದೆ ಜೈಲಿನಿಂದ ಹೊರಗೆ ಬಂದಿದ್ದ. ಈ ನಡುವೆ ಶಿವಲಿಂಗಪ್ಪನ ಕುಟುಂಬದ ಯುವತಿಯೊಬ್ಬಳನ್ನು ದೇವಿಂದ್ರ ಪ್ರೀತಿಸುತ್ತಿದ್ದ ಎನ್ನಲಾಗಿದೆ. ಈ ಕಾರಣಕ್ಕೆ ಆರೋಪಿಗಳು ದೇವಿಂದ್ರನ ಮೇಲೆ ಹಲ್ಲೆ ಮಾಡಿ ಆಟೋದಲ್ಲಿ ಅಪಹರಿಸಲು ಯತ್ನಿಸಿದ್ದಾರೆ. ಪ್ರತಿರೋಧ…














