Subscribe to Updates
Get the latest creative news from FooBar about art, design and business.
Author: ಸುರೇಶ್
"ಕನ್ನಡ ನ್ಯೂಸ್ ನೌ ಜಾಲತಾಣದ ಮುಖ್ಯ ಸಂಪಾದಕರಾದ ಸುರೇಶ್ ಅವರು ಕಳೆದ 4 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದಾರೆ. ಸರ್ಕಾರದ ಯೋಜನೆಗಳು, ಶಿಕ್ಷಣ ಮತ್ತು ಪ್ರಚಲಿತ ವಿದ್ಯಮಾನಗಳನ್ನು ಸಾಮಾನ್ಯ ಜನರಿಗೂ ಅರ್ಥವಾಗುವಂತೆ ವಿವರಿಸುವುದು ಇವರ ವಿಶೇಷತೆ. ಈ ಮೊದಲು ವಿವಿಧ ವೆಬ್‌ಸೈಟ್‌ಗಳಲ್ಲಿ ನಾಗರಿಕ ಸಮಸ್ಯೆಗಳ ಬಗ್ಗೆ ವರದಿಗಾರರಾಗಿ ಕೆಲಸ ಮಾಡಿರುವ ಇವರು, ಸಮಯೋಚಿತ ಹಾಗೂ ವಿಶ್ವಾಸಾರ್ಹ ಮಾಹಿತಿ ನೀಡುವ ಮೂಲಕ ಓದುಗರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಡಿಜಿಟಲ್ ಸಾಕ್ಷರತೆ ಇವರ ನೆಚ್ಚಿನ ವಿಷಯಗಳಲ್ಲೊಂದು
ಬೆಂಗಳೂರು : ನಿನ್ನೆಯಿಂದ ರಾಜ್ಯಾದ್ಯಂತ ಸಾಮಾಜಿಕ ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆ ಆರಂಭವಾಗಿದ್ದು, ಆದರೆ ಸರ್ವ ಸಮಸ್ಯೆ ಹಾಗೂ ಮೊಬೈಲ್ನಲ್ಲಿ ತಾಂತ್ರಿಕ ಸಮಸ್ಯೆಯಲ್ಲಿ ಇದುವರೆಗೂ ಕೇವಲ ರಾಜ್ಯಾದ್ಯಂತ 10642 ಕುಟುಂಬಗಳ ದತ್ತಾಂಶ ಸಂಗ್ರಹಿಸಲಾಗಿದೆ ಎಂದು ತಿಳಿದುಬಂದಿದೆ. ಹೌದು ರಾಜ್ಯಾದ್ಯಂತ ನಿನ್ನೆಯಿಂದ ಸಾಮಾಜಿಕ ಶೈಕ್ಷಣಿಕ ಸಮೀಕ್ಷೆ ಆರಂಭವಾಗಿದ್ದು, ನಿನ್ನೆ ಒಂದೇ ದಿನ ಕೇವಲ 10,642 ಕುಟುಂಬಗಳ ದತ್ತಾಂಶ ಸಂಗ್ರಹವಾಗಿದೆ ವಿಭಧ ಜಿಲ್ಲೆಗಳಲ್ಲಿ ದತ್ತಾಂಶ ಸಂಗ್ರಹ ಮಾಡುತ್ತಿರುವ ಸಮೀಕ್ಷೆಗಾರರು ಮೊದಲ ದಿನ ಬೆರಳಣಿಕೆ ಎಷ್ಟು ಮಾತ್ರ ದತ್ತಾಂಶ ಸಂಗ್ರಹಿಸಲಾಗಿದೆ 15 ಜಿಲ್ಲೆಗಳಲ್ಲಿ ಹತ್ತಕ್ಕಿಂತ ಕಡಿಮೆ ಮನೆಗಳಲ್ಲಿ ದತ್ತಾಂಶ ಸಂಗ್ರಹಿಸಲಾಗಿದೆ. ಜಿಲ್ಲಾವಾರು ಸಮೀಕ್ಷೆ ನೋಡುವುದಾದರೆ ಹಾವೇರಿಯಲ್ಲಿ 680 ಕುಟುಂಬಗಳ ದತ್ತಾಂಶ ಸಂಗ್ರಹವಾಗಿದೆ. ವಿಜಯಪುರದಲ್ಲಿ ಕೇವಲ 7, ಕುಟುಂಬಗಳ ದತ್ತಾಂಶ ಸಂಗ್ರಹವಾಗಿದೆ. ಉತ್ತರ ಕನ್ನಡದಲ್ಲಿ ಕೂಡ 7 ಕುಟುಂಬಗಳ ದತ್ತಾಂಶ ಸಂಗ್ರಹಿಸಲಾಗಿದೆ. ದಾವಣಗೆರೆಯಲ್ಲಿ 7 ಕುಟುಂಬಗಳ ದತ್ತಾಂಶ ಸಂಗ್ರಹವಾಗಿದ್ದು, ಕೊಪ್ಪಳದಲ್ಲಿ 6 ಕುಟುಂಬಗಳ ದತ್ತಾಂಶಸಂಗ್ರಹವಾಗಿದೆ. ಉಡುಪಿಯಲ್ಲಿ ಸಹ 7 ಕುಟುಂಬಗಳ ದತ್ತಾಂಶ ಸಂಗ್ರಹವಾಗಿದೆ.
ಬೆಂಗಳೂರು : ರಾಜ್ಯದಲ್ಲಿ ನಿನ್ನೆಯಿಂದ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಸಮೀಕ್ಷೆ ಆರಂಭವಾಗಿದ್ದು ಕೆಲವು ತಾಂತ್ರಿಕ ದೋಷಗಳಿಂದ ಕೇವಲ ಇದುವರೆಗೂ 10,000 ಜನರ ಸಮೀಕ್ಷೆ ಮಾತ್ರ ಮಾಡಲಾಗಿದೆ ಎಂದು ತಿಳಿದುಬಂದಿದೆ. ಈ ವಿಚಾರವಾಗಿ ಕಾಂಗ್ರೆಸ್ ಎಂಎಲ್ಸಿ ಬಿಕೆ ಹರಿಪ್ರಸಾದ್ ಪ್ರತಿಕ್ರಿಯೆ ನೀಡಿದ್ದು, ಇದು ಜಾತಿಗಣತಿ ಅಲ್ಲ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಅಷ್ಟೇ ಎಂದು ತಿಳಿಸಿದರು. ಬೆಂಗಳೂರಿನಲ್ಲಿ ಈ ವಿಚಾರವಾಗಿ ಮಾತನಾಡಿದ ಅವರು ಸಮೀಕ್ಷೆ ವೇಳೆ ಎಲ್ಲರೂ ಅವರವರ ಜಾತಿಗಳ ಹೆಸರು ಬರೆಸಲಿ. ಯಾರೂ ಕೂಡ ಅವರ ಜಾತಿಗಳ ಹೆಸರು ಬರಿಸಲು ಅಡ್ಡಿಪಡಿಸುತ್ತಿಲ್ಲ. ಕಳೆದ 75 ವರ್ಷಗಳಿಂದ ಕೆಲವರು ಮಾತ್ರ ಬೆಣ್ಣೆ ತುಪ್ಪ ತಿನ್ನುತ್ತಿದ್ದಾರೆ. ಅದು ಎಲ್ಲಿ ತಪ್ಪಿ ಹೋಗುತ್ತೋ ಅಂತ ಕೆಲವರು ವಿರೋಧಿಸುತ್ತಿದ್ದಾರೆ. ವಿರೋಧ ಮಾಡುತ್ತಿರುವ ಅವರ ಹೆಸರನ್ನು ಸಿಎಂ ಸಿದ್ದರಾಮಯ್ಯ ಬಹಿರಂಗಪಡಿಸಲಿ. ಜಾತಿ ಹೆಸರಿನಲ್ಲಿ ಕೆಲವರು ಸಾಮ್ರಾಜ್ಯ ಕಟ್ಟಿಕೊಂಡಿದ್ದಾರೆ. ಅದಕ್ಕೆ ತೊಂದರೆ ಆಗುತ್ತದೆ ಎಂದು ರಾಜಕೀಯ ಮಾಡುತ್ತಿದ್ದಾರೆ. ಆರ್ಥಿಕ ಶೈಕ್ಷಣಿಕ ಸಮೀಕ್ಷೆ ಮಾಡುತ್ತೇವೆ ಎಂದು ನಾವು ಹೇಳಿದ್ವಿ. ನಮ್ಮ…
ಬೆಂಗಳೂರು : ನಿನ್ನೆ ಬೆಂಗಳೂರಿನಲ್ಲಿ 11 ಬಾರಿ ಚಾಕು ಇರಿದು ವಿವಾಹಿತ ಮಹಿಳೆ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ಹಂತಕ ಲೋಹಿತಾಶ್ವ ಅಲಿಯಾಸ್ ಲೊಕೇಶನನ್ನು ಅರೆಸ್ಟ್ ಮಾಡಿದ್ದಾರೆ. ನಿನ್ನೆ ಬೆಂಗಳೂರಿನ ಸುಂಕದಕಟ್ಟೆಯಲ್ಲಿ ವಿವಾಹಿತ ಮಹಿಳೆ ರೇಖಾಳನ್ನು ಆರೋಪಿ ಲೋಹಿತಾಶ್ವ 11 ಬಾರಿ ಚಾಕುವಿನಿಂದ ಇರಿದು ಭೀಕರವಾಗಿ ಕೊಲೆ ಮಾಡಿದ್ದ. ತುಮಕೂರು ಜಿಲ್ಲೆಯ ಶಿರಾ ಮೂಲದ ರೇಖಾ (35) ಎನ್ನುವ ವಿವಾಹಿತ ಮಹಿಳೆಯನ್ನು ಲೋಹಿತಾಶ್ವ ಕೊಲೆ ಮಾಡಿದ್ದಾನೆ. ಕೊಲೆಯಾದ ರೇಖಾಳಿಗೆ 12 ವರ್ಷದ ಮಗಳು ಇದ್ದಾಳೆ. ಇನ್ನೂ ಲೋಹಿತಾಶ್ವನಿಗೂ ಕೂಡ ಮದುವೆಯಾಗಿ ಪತ್ನಿಯಿಂದ ಆತ ವಿಚ್ಛೇದನ ಪಡೆದುಕೊಂಡಿದ್ದ. ಬಳಿಕ ರೇಖಾ ಜತೆಗೆ ಆರೋಪಿ ಲೋಹಿತಾಶ್ವ ಮದುವೆಯಾಗಿದ್ದ. ಪೊಲೀಸರ ವಿಚಾರಣೆ ವೇಳೆ ಆಕೆಯ ಮೇಲೆ ಅನುಮಾನಪಟ್ಟು ಕೊಲೆಗೈದಿದ್ದಾಗಿ ಮಾಹಿತಿ ನೀಡಿದ್ದಾನೆ. ರೇಖಾ ಮದುವೆ ಬಳಿಕ ಶಿರಾದಿಂದ ಬೆಂಗಳೂರಿಗೆ ಕರೆಸಿಕೊಂಡಿದ್ದರು. ಆಕೆ ಕೆಲಸ ಮಾಡುತ್ತಿದ್ದ ಕಂಪನಿಯಲ್ಲಿಯೇ ಲೋಹಿತಾಶ್ವನಿಗೆ ಡ್ರೈವರ್ ಕೆಲಸ ಕೊಡಿಸಿದ್ದಳು. ಎರಡನೇ ಮದುವೆ ಆಗಿದ್ದರು ಕೂಡ ಇಬ್ಬರು ಒಂದೇ ಮನೆಯಲ್ಲಿ…
ಬೆಂಗಳೂರು : ಮಲ್ಟಿಪ್ಲೆಕ್ಸ್ ಸೇರಿ ರಾಜ್ಯ ಎಲ್ಲಾ ಚಿತ್ರಮಂದಿರಗಳಲ್ಲಿ ಎಲ್ಲಾ ಭಾಷೆಯ ಚಿತ್ರಗಳ ಪ್ರದರ್ಶನಕ್ಕೆ ತೆರಿಗೆ ಹೊರತುಪಡಿಸಿ ಗರಿಷ್ಠ 200 ರೂ.ಗಳ ಏಕರೂಪ ದರ ನಿಗದಿಪಡಿಸಿದ ರಾಜ್ಯ ಸರ್ಕಾರ ಹೊರಡಿಸಿದ ಆದೇಶಕ್ಕೆ ಮಧ್ಯಂತರ ತಡೆ ನೀಡುವ ಕುರಿತಂತೆ ಮನವಿಯ ವಿಚಾರಣೆ ಪೂರ್ಣಗೊಳಿಸಿರುವ ಹೈಕೋರ್ಟ್ ಏಕ ಸದಸ್ಯ ಪೀಠ ಇಂದು ಈ ಕುರಿತು ಮಧ್ಯಂತರ ತಡೆಯಾಜ್ಞೆ ನೀಡಿ ಆದೇಶ ಹೊರಡಿಸಿದೆ. ಮಲ್ಟಿಪ್ಲೆಕ್ಸ್ ಗಳಲ್ಲಿ ರಾಜ್ಯ ಸರ್ಕಾರ 200 ರೂಪಾಯಿ ಟಿಕೆಟ್ ದರ ನಿಗದಿ ಮಾಡಿತ್ತು. ಇದೀಗ ರಾಜ ಸರ್ಕಾರದ ನಿರ್ಧಾರಕ್ಕೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ಮಲ್ಟಿಪ್ಲೆಕ್ಸ್ ಅಸೋಸಿಯೇಷನ್ ಆಫ್ ಇಂಡಿಯಾ, ಹೊಂಬಾಳೆ ಫಿಲಂನ ವಿಜಯ್ ಕಿರಗಂದೂರು, ಪಿವಿಆರ್ ಐನಾಕ್‌ಸ್ ಲಿಮಿಟೆಡ್, ವಿಕೆ ಫಿಲಂಸ್, ಕೀ ಸ್ಟೋನ್ ಎಂಟರ್‌ಟೇನ್ಮೆಂಟ್ ಪ್ರವೈಟ್ ಲಿಮಿಟೆಡ್ ಮತ್ತಿತರರು ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ರವಿ ಹೊಸಮನಿ ಅವರಿದ್ದ ಏಕಸದಸ್ಯಪೀಠ ಈ ಆದೇಶ ನೀಡಿದೆ.
ಬೆಳಗಾವಿ : ಐನಾಪುರ ಮಾರ್ಗವಾಗಿ ಹೈದರಾಬಾದ್ ಕಡೆಗೆ ನಾಲ್ಕು ಬೃಹತ್ ಲಾರಿಗಳಲ್ಲಿ ಗೋಮಾಂಸ ಸಾಗಾಟ ಮಾಡುತ್ತಿದ್ದಾರೆ ಎಂದು ಆರೋಪಿಸಿ ಕೆಲವು ಸಂಘಟನೆಗಳ ಕಾರ್ಯಕರ್ತರು ವಾಹನಗಳನ್ನು ತಡೆದು ಒಂದು ವಾಹನಕ್ಕೆ ಬೆಂಕಿ ಹಚ್ಚಿ ಆಕ್ರೋಶ ಹೊರ ಹಾಕಿರುವ ಘಟನೆ ತಡರಾತ್ರಿ ಸಂಭವಿಸಿದೆ. ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಐನಾಪುರ ಗ್ರಾಮದಲ್ಲಿ ತಡರಾತ್ರಿ ಈ ಘಟನೆ ಸಂಭವಿಸಿದೆ. ಕೆಲವು ಸಂಘಟನೆಗಳ ಕಾರ್ಯಕರ್ತರು ಜೊತೆಯಾಗಿ ಗೋಮಾಂಸ ಸಾಗಾಟ ಮಾಡುತ್ತಿದ್ದ ಬೃಹತ್ ಲಾರಿಗಳನ್ನು ತಡೆದು ಅವುಗಳನ್ನು ಪರಿಶೀಲನೆ ಮಾಡಿ ಲಾರಿಯಲ್ಲಿರುವ ಚಾಲಕ ಮತ್ತು ನಿರ್ವಾಹಕನನ್ನು ತೀವ್ರ ತರಾಟೆ ತೆಗೆದುಕೊಂಡು ತಮ್ಮ ಆಕ್ರೋಶ ಹೊರ ಹಾಕಿದ್ದಾರೆ. ಕುಡಚಿ ಪಟ್ಟಣದಿಂದ ಗೋಮಾಂಸ ತುಂಬಿಕೊಂಡು 4 ಲಾರಿಗಳು ಐನಾಪುರ ಮಾರ್ಗವಾಗಿ ಹೈದರಾಬಾದ್ ಕಡೆಗೆ ತೆರಳುತ್ತಿದ್ದವು. ಈ ನಾಲ್ಕು ಲಾರಿಗಳಲ್ಲಿ ಗೋಮಾಂಸ ಸಾಗಾಟ ಮಾಡಲಾಗುತ್ತಿದೆ ಎನ್ನುವ ಮಾಹಿತಿ ಆಧರಿಸಿ ಕಾರ್ಯಕರ್ತರು ಒಂದು ಲಾರಿಯನ್ನು ತಡೆದು ಪರಿಶೀಲಿಸಿದಾಗ ಗೋಮಾಂಸ ಸಾಗಾಟ ಬಯಲಾಗಿದೆ. KA 71 2045 ಸಂಖ್ಯೆಯ ಲಾರಿಯಲ್ಲಿ ಗೋಮಾಂಸ ಸಾಗಾಟ ಮಾಡಲಾಗುತ್ತಿತ್ತು. ಇದನ್ನು…
ಬೆಂಗಳೂರು : ರಾಜ್ಯದಲ್ಲೊಂದು ಮನಕಲಕುವ ಘಟನೆಯೊಂದು ನಡೆದಿದ್ದು ಬೆಂಗಳೂರಲ್ಲಿ ದಂಪತಿಗಳ ನಿರ್ಲಕ್ಷಕ್ಕೆ ಮೂರು ನವಜಾತ ಶಿಶುಗಳು ಬಲಿಯಾಗಿವೆ. ಹೌದು ಬನ್ನೇರುಘಟ್ಟ ಗೊಲ್ಲಹಳ್ಳಿಯಲ್ಲಿ ಈ ಒಂದು ಮನಕಲಕುವ ಘಟನೆ ನಡೆದಿದೆ. ಸೂಕ್ತ ಸಪಾಸಣೆ ಮತ್ತು ಪೋಷಣೆ ಇಲ್ಲದೆ ಮೂವರು ನವಜಾತ ಶಿಶುಗಳು ಇದೀಗ ಸಾವನ್ನಪ್ಪಿವೆ. ಮಂಜುಳಾ ಮತ್ತು ಆನಂದ ದಂಪತಿಗಳ ಮೂವರು ನವಜಾತಶಿಗಳು ಇದೀಗ ಬಲಿಯಾಗಿವೆ. ಮೊದಲು ಹೊಟ್ಟೆ ನೋವು ಕಾಣಿಸಿಕೊಂಡಾಗ ಇವರು ಜಿಗಣಿ ಆಸ್ಪತ್ರೆಗೆ ದಾಖಲಾಗಿದ್ದರು. ಅದಾದ ನಂತರ ಜಿಗಣಿ ಬಳಿಕ ಆನೇಕಲ್ ತಾಲೂಕು ಆಸ್ಪತ್ರೆಗೆ ದಾಖಲಾಗಿದ್ದಾರೆ. ಹೊಟ್ಟೆಯಲ್ಲಿ ಎರಡು ಶಿಶುಗಳು ಸಾವನ್ನಪ್ಪಿರುವುದು ಬೆಳಕಿಗೆ ಬಂದಿದೆ. ಎರಡು ಶಿಶುಗಳನ್ನು ಹೊರ ತೆಗೆದು ವೈದ್ಯರು ಮಹಿಳೆಗೆ ಚಿಕಿತ್ಸೆ ನೀಡಿದ್ದಾರೆ. ಸದ್ಯ ತಾಯಿ ಮಂಜುಳಾ ಆರೋಗ್ಯವಾಗಿದ್ದಾರೆ. ಆನಂದ್ ಮತ್ತು ಮಂಜುಳಾ ದಂಪತಿ ಪ್ರೀತಿಸಿ ಮದುವೆಯಾಗಿದ್ದರು. ಏಪ್ರಿಲ್ ತಿಂಗಳಿನಲ್ಲಿ ದಂಪತಿಗಳು ತಾಯಿ ಕಾರ್ಡ್ ಮಾಡಿಸಿದ್ದಾರೆ. ಅಣ್ಣನ ಜೊತೆ ಗಲಾಟೆ ಮಾಡಿದ ಬಳಿಕ ಆನಂದ್ ದಂಪತಿ ಮನೆ ಬಿಟ್ಟಿದ್ದಾರೆ. ಇತ್ತ ಮಂಜುಳಾ ಪೋಷಕರಿಂದಲೂ ಕೂಡ ಇವರಿಬ್ಬರೂ ನಿರ್ಲಕ್ಷಕ್ಕೆ…
ಬಾಗಲಕೋಟೆ : ಬಾಗಲಕೋಟೆಯಲ್ಲಿ ಬೆಚ್ಚಿ ಬೆಳಿಸುವ ಘಟನೆ ಯೊಂದು ನಡೆದಿದ್ದು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಸೋದರ ಮಾವನ ಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಅಕ್ಕಿ ಮರಡಿ ಎಂಬ ಗ್ರಾಮದಲ್ಲಿ ತಡರಾತ್ರಿ ಒಂದು ಘಟನೆ ನಡೆದಿದೆ. ನಿತ್ಯ ಮದ್ಯ ಸೇವಿಸಿ ಬಂದು ಈರಪ್ಪ ನಡುವಿನಮನಿ ಜಗಳವಾಡುತ್ತಿದ್ದ ಅಷ್ಟೇ ಅಲ್ಲದೆ ಮಹಿಳೆಯರಿಗೆ ಈರಪ್ಪ ಶಬ್ದಗಳಿಂದ ನಿಂದಿಸುತ್ತಿದ್ದ ಸೋದರ ಮಾವ ಈರಪ್ಪನ ಕಾಟ ಸಹಿಸದೆ ಬೆಂಕಿ ಹಚ್ಚಿಸಲಾಗಿದೆ ಅಳಿಯಂದಿರಾದ ಸುನಿಲ್ ನಡುವಿನಮನಿ ಹಾಗೂ ಮರಿಯಪ್ಪನಿಂದ ಈ ಒಂದು ಕೃತ್ಯ ಎಸೆಗಲಾಗಿದ್ದು ವೀರಪ್ಪನ ಕೈಕಾಲು ಮತ್ತು ಮುಖದ ಬಹುತೇಕ ಭಾಗಗಳು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ ಮನೆಯ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಆರೋಪಿಗಳದ ಸೋಲಿಲ್ಲ ಮತ್ತು ಮರೆಪ್ಪನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಬೆಂಗಳೂರು : ರಾಜಾಜಿನಗರದ ಬಿಜೆಪಿ ಶಾಸಕ ಸುರೇಶ್ ಕುಮಾರ್ ಗೆ ಮಾತೃಯೋಗವಾಗಿದ್ದು, ಇಂದು ಬೆಳಿಗ್ಗೆ ರಾಜಾಜಿನಗರದಲ್ಲಿರುವ ನಿವಾಸದಲ್ಲಿ ಶಾಸಕ ಸುರೇಶ್ ಕುಮಾರ್ ಅವರ ತಾಯಿ ಸುಶೀಲಮ್ಮ ನಿಧನರಾದರು. ಕಳೆದ ಹಲವು ದಿನಗಳಿಂದ ಸುಶೀಲಮ್ಮ ಅನಾರೋಗ್ಯದಿಂದ ಬಳಲುತ್ತಿದ್ದರು. ಈ ಕುರಿತು ಸ್ವತಃ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ನೀಡಿರುವ ಸುರೇಶ್ ಕುಮಾರ್, ನನ್ನನ್ನು ಹೊತ್ತು, ಹೆತ್ತು ಸಾಕಿ, ತಿದ್ದಿ ತೀಡಿ ಬೆಳೆಸಿದ ನನ್ನಮ್ಮ, ಎಲ್ಲರ ಸುಶೀಲಮ್ಮ ಟೀಚರ್ ಇನ್ನಿಲ್ಲ. ಇಂದು ಬೆಳಗಿನ ಜಾವ ನನ್ನನ್ನು ಬಿಟ್ಟು ಹೊರಟು ಬಿಟ್ಟರು ಎಂದು ಬರೆದಿದ್ದಾರೆ. ಶಿಕ್ಷಕಿಯಾಗಿದ್ದ ಸುಶೀಲಮ್ಮ ಅವರು ನಿವೃತ್ತಿ ಬಳಿಕ ಬೆಂಗಳೂರಿನ ಲಕ್ಷ್ಮಿ ನಾರಾಯಣ ಕೋ ಆಪರೇಟಿವ್ ಬ್ಯಾಂಕ್ನ ನಿರ್ದೇಶಕರಾಗಿ ಕೆಲಸ ಮಾಡಿದ್ದರು. ಒಟ್ಟು 8 ಬಾರಿ ನಿರ್ದೇಶಕರಾಗಿ ಆಯ್ಕೆಯಾಗಿದ್ದರು. https://twitter.com/nimmasuresh/status/1970313881756278853?t=abOa-KMb5MgEwelI8DJRtQ&s=19
ಬೆಂಗಳೂರು : ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಸದ್ಯಕ್ಕೆ ನಟ ದರ್ಶನ್ ಬೆಂಗಳೂರಿನ ಪರಪ್ಪನ ಅಗ್ರಹಾರ ಜೇಲಿನಲ್ಲಿ ಇದ್ದಾರೆ. ನಟ ದರ್ಶನ್ ಗೆ ಜೈಲಿನಲ್ಲಿ ಹಾಸಿಗೆ ದಿಂಬು ಸೇರಿದಂತೆ ಕನಿಷ್ಠ ಸೌಲಭ್ಯ ನೀಡುವಂತೆ ಅರ್ಜಿ ಸಲ್ಲಿಸಿದ್ದು, ಈ ಕುರಿತು ಇಂದು ಕೋರ್ಟ್ ನಲ್ಲಿ ನಟ ದರ್ಶನ್ ಭವಿಷ್ಯ ನಿರ್ಧಾರವಾಗಲಿದೆ. ಇಂದು ಬೆಂಗಳೂರಿನ 57ನೇ ಸೆಷನ್ಸ್ ಕೋರ್ಟ್ ನಲ್ಲಿ ನಟ ದರ್ಶನ್ ಪರ ವಕೀಲರಿಂದ ಕೋರ್ಟ್ ಆದೇಶ ಉಲ್ಲಂಘನೆ ಆರೋಪ ಕೇಳಿಬಂದಿದ್ದು, ಹಾಸಿಗೆ ದಿಂಬು ಸೇರಿದಂತೆ ಕನಿಷ್ಠ ಸೌಲಭ್ಯ ನೀಡದೆ, ಜೈಲಾಧಿಕಾರಿಗಳು ಕೋಟ್ ಆದೇಶವನ್ನು ಉಲ್ಲಂಘಿಸಿದ್ದಾರೆ ಎಂದು ದರ್ಶನ್ ಪರ ವಕೀಲರು ಈ ಹಿಂದಿನ ವಿಚಾರಣೆಯಲ್ಲಿ ವಾದಿಸಿದ್ದರು. ಇದೀಗ ದರ್ಶನ್ ಭವಿಷ್ಯ ಇಂದು ಕೋರ್ಟ್ ನಲ್ಲಿ ನಿರ್ಧಾರವಾಗಲಿದೆ ಹಾಸಿಗೆ ದಿಂಬು ಸೇರಿದಂತೆ ಕನಿಷ್ಠ ಸೌಲಭ್ಯ ಒದಗಿಸುತ್ತಾರೆ ಎಂದು ಕಾದು ನೋಡಬೇಕಾಗಿದೆ.
ಬೆಂಗಳೂರು : ಬೆಂಗಳೂರಿನಲ್ಲಿ ರಸ್ತೆ ಗುಂಡಿಗಳನ್ನು ಮುಚ್ಚಲು ಡೆಡ್ ಲೈನ್ ವಿಚಾರವಾಗಿ ಪ್ರತಿನಿತ್ಯ ಜಿಬಿಎ ನವರು ದಿನಕ್ಕೆ 1000 ಗುಂಡಿಗಳನ್ನು ಮುಚ್ಚುತ್ತಿದ್ದಾರೆ. ಮಳೆಗಾಲ ಹಿನ್ನೆಲೆಯಲ್ಲಿ ಗುಂಡಿ ಮುಚ್ಚುವ ಕಾರ್ಯವಿಧಾನ ಆಗುತ್ತಿದೆ. ಗ್ರೇಟರ್ ಬೆಂಗಳೂರು ಅಥಾರಿಟಿಯವರು ಗುಂಡಿ ಮುಚ್ಚುತ್ತಿದ್ದಾರೆ. ಕೇವಲ ಬೆಂಗಳೂರಿನಲ್ಲಿ ಮಾತ್ರ ರಸ್ತೆಗಳು ಗುಂಡಿಗಳಿವೆಯ? ಎಲ್ಲಾ ರಾಜ್ಯಗಳಲ್ಲೂ ರಸ್ತೆಗಳಲ್ಲಿ ಗುಂಡಿಗಳ ಸಮಸ್ಯೆ ಇದೆ. ದೆಹಲಿಯಲ್ಲಿ ಪ್ರಧಾನ ಮಂತ್ರಿ ನಿವಾಸದ ರಸ್ತೆ ನೋಡಿದ್ದೀರಾ? ಬಿಜೆಪಿಯವರು ಅಧಿಕಾರದಲ್ಲಿದ್ದಾಗ ಸರಿಯಾಗಿ ರಸ್ತೆ ಮಾಡಿದ್ರಾ? ಚುನಾವಣೆ ಬರುತ್ತಿದೆ ಅಂತ ಹೇಗೆ ಮಾಡ್ತಿದ್ದಾರೆ ಎಂದು ಬೆಂಗಳೂರಿನಲ್ಲಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿಕೆ ನೀಡಿದರು









