Subscribe to Updates
Get the latest creative news from FooBar about art, design and business.
Author: ಸುರೇಶ್
"ಕನ್ನಡ ನ್ಯೂಸ್ ನೌ ಜಾಲತಾಣದ ಮುಖ್ಯ ಸಂಪಾದಕರಾದ ಸುರೇಶ್ ಅವರು ಕಳೆದ 4 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದಾರೆ. ಸರ್ಕಾರದ ಯೋಜನೆಗಳು, ಶಿಕ್ಷಣ ಮತ್ತು ಪ್ರಚಲಿತ ವಿದ್ಯಮಾನಗಳನ್ನು ಸಾಮಾನ್ಯ ಜನರಿಗೂ ಅರ್ಥವಾಗುವಂತೆ ವಿವರಿಸುವುದು ಇವರ ವಿಶೇಷತೆ. ಈ ಮೊದಲು ವಿವಿಧ ವೆಬ್‌ಸೈಟ್‌ಗಳಲ್ಲಿ ನಾಗರಿಕ ಸಮಸ್ಯೆಗಳ ಬಗ್ಗೆ ವರದಿಗಾರರಾಗಿ ಕೆಲಸ ಮಾಡಿರುವ ಇವರು, ಸಮಯೋಚಿತ ಹಾಗೂ ವಿಶ್ವಾಸಾರ್ಹ ಮಾಹಿತಿ ನೀಡುವ ಮೂಲಕ ಓದುಗರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಡಿಜಿಟಲ್ ಸಾಕ್ಷರತೆ ಇವರ ನೆಚ್ಚಿನ ವಿಷಯಗಳಲ್ಲೊಂದು
ಶಿವಮೊಗ್ಗ : ಮದುವೆ ವಿಚಾರವಾಗಿ ಪ್ರೇಮಿಗಳ ನಡುವೆ ಗಲಾಟೆ ನಡೆದಿದೆ. ಈ ವೇಳೆ ಭದ್ರಾ ಕಾಲುವೆಗೆ ಪ್ರೇಯಸಿಯನ್ನು ತಳ್ಳಿ ಪ್ರಿಯಕರ ಹತ್ಯೆಗೈಯ್ದಿದ್ದಾನೆ. ಮೋಸದಿಂದ ಪ್ರಿಯತಮೆಯನ್ನು ಕರೆದೋಯ್ದು ಕೊಲೆ ಮಾಡಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ಯಕ್ಕುಂದದಲ್ಲಿ ನಡೆದಿದೆ. ನಿನ್ನೆ ಭದ್ರಾ ಕಾಲುವೆಯಲ್ಲಿ ಯುವತಿ ಸ್ವಾತೀ ಶವ ಪತ್ತೆಯಾಗಿದೆ. ತೆರೇನಹಳ್ಳಿಯ ಸ್ವಾತಿ ಹಾಗೂ ಸೂರ್ಯ ನಡುವೆ ಪ್ರೇಮಾಂಕುರವಾಗಿತ್ತು. ಇಬ್ಬರ ಮದುವೆಗೆ ಯುವತಿ ಸ್ವಾತಿ ಪೋಷಕರು ವಿರೋಧ ವ್ಯಕ್ತಪಡಿಸಿದ್ದಾರೆ. ವಿರೋಧ ಇದ್ದರೂ ಕೂಡ ಸ್ವಾತಿಗೆ ಮದುವೆಯಾಗಲು ಸೂರ್ಯ ಕಾಟ ಕೊಟ್ಟಿದ್ದಾನೇ. ಸೆಪ್ಟೆಂಬರ್ 21ರಂದು ಪ್ರಿಯಕರ ಸೂರ್ಯ ಸ್ವಾತಿಯನ್ನು ಕರೆದುಕೊಂಡು ಹೋಗಿದ್ದಾನೆ. ನಿನ್ನೆ ಸಂಜೆ ಭದ್ರಾ ಕಾಲುವೆಯಲ್ಲಿ ಸ್ವಾತಿಯ ಮೃತ ದೇಹ ಪತ್ತೆಯಾಗಿದೆ. ಯುವತಿ ಸಾವಿನ ಸುತ್ತ ಇದೀಗ ನೂರಾರು ಅನುಮಾನಗಳು ಹುಟ್ಟಿಕೊಂಡಿವೆ. ಮದುವೆ ವಿಚಾರಕ್ಕೆ ಸೂರ್ಯ ಮತ್ತು ಸ್ವಾತಿ ನಡುವೆ ಗಲಾಟೆ ಆಗಿದೆ. ಸೆಪ್ಟೆಂಬರ್ 21ರಂದು ಪ್ರಿಯಕರ ಸೂರ್ಯ ಮತ್ತು ಪ್ರೇಯಸಿ ಸ್ವಾತಿ ಗಲಾಟೆ ಮಾಡಿಕೊಂಡಿದ್ದಾರೆ. ಯುವತಿ ಸ್ವಾತಿ ಡಿಗ್ರಿ ಎರಡನೇ ವರ್ಷ ಓದುತ್ತಿದ್ದಳು.…
ಮೈಸೂರು : ವಿಶ್ವ ವಿಖ್ಯಾತ ನಾಡಹಬ್ಬ ದಸರಾ ಅತ್ಯಂತ ವಿಜೃಂಭಣೆಯಿಂದ ನಡೆಯುತ್ತಿದ್ದು ಈಗಾಗಲೇ ಯುವ ದಸರಾ ಸೇರಿದಂತೆ ಹಲವು ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಗಿದೆ. ನಗರದಲ್ಲಿಂದು ಮಹಿಷ ದಸರಾ ಆಚರಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಚಾಮುಂಡಿ ಬೆಟ್ಟದಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಚಾಮುಂಡಿ ಬೆಟ್ಟದಲ್ಲಿನ ಮಹಿಷಾಸುರ ಪ್ರತಿಮೆ ಸುತ್ತ 200 ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಮಾಡಿ ಪೊಲೀಸ್ ಆಯುಕ್ತರು ಆದೇಶಿಸಿದ್ದಾರೆ. ತಡರಾತ್ರಿ 12 ಗಂಟೆಯಿಂದಲೇ ಸೆ.25ರ ಬೆಳಗ್ಗೆ 6 ಗಂಟೆಯವರೆಗೂ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಯಾವುದೇ ಸಭೆ, ಸಮಾರಂಭ, ಮೆರವಣಿಗೆ ನಡೆಸುವಂತಿಲ್ಲ ಎಂದು ಆದೇಶಿಸಲಾಗಿದೆ. ಇನ್ನು ನಿನ್ನೆ ಯುವ ದಸರಾ 2025ಕ್ಕೆ ಚಾಲನೆ ಸಿಕ್ಕಿದ್ದು, 5 ದಿನಗಳ ಕಾಲ ಯುವದಸರಾ ಸಂಭ್ರಮಾಚರಣೆ ಇರಲಿದೆ. ನಿನ್ನೆ ಮೈಸೂರು ಉಸ್ತುವಾರಿ ಸಚಿವ ಹೆಚ್.ಸಿ ಮಹದೇವಪ್ಪ ಯುವ ದಸರಾ ಕಾರ್ಯಕ್ರಮಕ್ಕೆ ಚಾಲನೆ ಕೊಟ್ರು ಮೊದಲ ದಿನವಾದ ನಿನ್ನೆ ಅರ್ಜುನ್ ಜನ್ಯ ಮ್ಯೂಸಿಕ್ ಕಲರವ ಜೋರಾಗಿತ್ತು. ಬೆಂಗಳೂರು ಮೂಲದ ಲಗೋರಿ ಬ್ಯಾಂಡ್‌ಗೆ ಯುವಕರು ಕುಣಿದು ಕುಪ್ಪಳಿಸಿದ್ರು.
ಕಾಸರಗೋಡು : ಸಾಮಾನ್ಯವಾಗಿ ಊಟ ಮಾಡುವಾಗ, ಅಥವಾ ಏನೇ ತಿನ್ನುವಾಗಲು ನಿಧಾನಕ್ಕೆ ತಿನ್ಬೇಕು ಇಲ್ಲವಾದರೆ ನಮ್ಮ ಪ್ರಾಣಕ್ಕೆ ಕುತ್ತು ಬರುವ ಸಾಧ್ಯತೆ ಹೆಚ್ಚಿರುತ್ತದೆ. ಇದೀಗ ಅಂತದ್ದೆ ಘಟನೆಯೊಂದು ನಡೆದಿದ್ದು, ಆಮ್ಮೆಟ್ ತಿನ್ನುತ್ತಿದ್ದ ವೇಳೆ ಗಂಟಲಲ್ಲಿ ಸಿಲುಕಿ ವ್ಯಕ್ತಿಯೋರ್ವ ಮೃತಪಟ್ಟ ದಾರುಣ ಘಟನೆ ಕಾಸರಗೋಡಿನ ಬದಿಯಡ್ಕದಲ್ಲಿ ರವಿವಾರ ಸಂಜೆ ನಡೆದಿರುವುದು ವರದಿಯಾಗಿದೆ. ಬದಿಯಡ್ಕ ಚುಳ್ಳಿಕ್ಕಾನ ನಿವಾಸಿ, ಪ್ರಸಕ್ತ ಬಾರಡ್ಕದಲ್ಲಿ ವಾಸವಿದ್ದ ವಿನ್ಸೆಂಟ್ ಕ್ರಾಸ್ತಾ (52) ಮೃತ ದುರ್ದೈವಿ ಎಂದು ತಿಳಿದುಬಂದಿದೆ. ಅವರು ರವಿವಾರ ಸಂಜೆ ಮನೆ ಸಮೀಪದ ಗೂಡಂಗಡಿಯಿಂದ ಆಮ್ಮೆಟ್ ಸೇವಿಸುತ್ತಿದ್ದಾಗ ಘಟನೆ ನಡೆದಿದೆ.ಆಮ್ಮೆಟ್ ಗಂಟಲಲ್ಲಿ ಸಿಲುಕಿ ಒದ್ದಾಡುತ್ತಿದ್ದ ವಿನ್ಸೆಂಟ್ ರನ್ನು ತಕ್ಷಣ ಕುಂಬಳೆಯ ಆಸ್ಪತ್ರೆಗೆ ಕರೆದೊಯ್ಯಲಾತಾದರೂ ಅಷ್ಟರಲ್ಲಿ ಅವರು ಮೃತಪಾತ್ತಿರುವುದಾಗಿ ಅಲ್ಲಿನ ವೈದ್ಯರು ತಿಳಿಸಿದರು. ಬೇಳ ಕಟ್ಟತ್ತಂಗಡಿ ಎಂಬಲ್ಲಿ ವೆಲ್ಡಿಂಗ್ ಶಾಫ್ ನಲ್ಲಿ ಕೆಲಸ ನಿರ್ವಹಿಸುತ್ತಿದ್ದ ವಿನ್ಸೆಂಟ್ ಕ್ರಾಸ್ತಾ ಅವಿವಾಹಿತರಾಗಿದ್ದರು..ಬದಿಯಡ್ಕ ಠಾಣಾ ಪೊಲೀಸರು ಮಹಜರು ನಡೆಸಿ ಅಸಹಜ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಹಾಗಾಗಿ ಏನೇ ತಿನ್ನುವಾಗಲು ನಿಧಾನಕ್ಕೆ ತಿನ್ನಬೇಕು ಇಲ್ಲವಾದರೆ ಇಂತಹ ದುರ್ಘಟನೆಗಳು…
-ನೀವು ಸರಿಯಿದ್ದು ನಿಯತ್ತಾಗಿದ್ರು ತೊಂದರೆ ಇದ್ರೆ ಮಾಡಿ. -ನಿಜವಾಗ್ಲೂ ಶತ್ರು ಬಾಧೆ ಇದ್ರೆ ಮಾತ್ರ ಇದು ನಿಮ್ಮ ಪರ ಕೆಲಸ ಮಾಡುತ್ತೆ. -ಸುಳ್ಳು ಆರೋಪ, ಹೊಟ್ಟೆ ಕಿಚಿಂದ ಮಾಡಿದ್ರೆ ನಿಮ್ಮನೆ ಹಾಳು ಮಾಡುತ್ತದೆ ಜೋಪಾನ. -ಅನಗತ್ಯವಾಗಿ ನಿಮ್ಮ ವಿರುದ್ಧ ತೊಂದರೆ ನೀಡುವಂತಹ ಶತ್ರುಗಳು ಇರಬಹುದು ಅಥವಾ ಹಿತಶತ್ರುಗಳು ಇರಬಹುದು, ಇವರನ್ನು ಮಟ್ಟ ಹಾಕಲು ಇದು. -ಈ ಮಂತ್ರವನ್ನು ಒಂದು ನಿಂಬೆಹಣ್ಣನ್ನು ಎಡಗೈಯಲ್ಲಿ ಮುಷ್ಟಿ ಮಾಡಿ ಹಿಡಿದುಕೊಂಡು 21 ಬಾರಿ ಜಪಿಸಿ ನಂತರ ಮೂರು ದಾರಿ ಸೇರುವ ಸ್ಥಳದಲ್ಲಿ ಎಡಗಾಲಿನಿಂದ ತುಳಿದು ಹಿಂತಿರುಗಿ ನೋಡದೆ ನಡೆಯಿರಿ ಖಂಡಿತ ಇವರ ಉಪಟಳ ನಿಗ್ರಹವಾಗುತ್ತದೆ. ||ಓಂ ಅಸ್ಯ ಕ್ಲೀಂ ರೀಂ ಹ್ರೀಂ ಹ್ರೋಂ ಸರ್ವ ಶತ್ರು, ಗ್ರಹ ಪರಾಭವಾ ಪಟ್ ಸ್ವಾಹಾ|| ಚೌಡೇಶ್ವರಿ ಶಕ್ತಿ ಪೀಠ ಕ್ಷೇತ್ರ ಈ ಮಂತ್ರ ಇಂದ ನಿಮಗೆ ಅನುಕೂಲ ಆದಾಗ ಯಾರಾದ್ರೂ ಕನಿಷ್ಠ 4 ಜನ ಬಡವರಿಗೆ/ನಿರ್ಗತಿಕರಿಗೆ, ಕನಿಷ್ಠ ಒಂದು ಹೊತ್ತು ಊಟ ದಾನ ಮಾಡಿ ಶಕ್ತಿ ಇದ್ರೆ ಹೆಚ್ಚು…
ಹಾಸನ (ಹೊಯ್ಸಳ ಪಥ): ಜಿಲ್ಲಾ ಪ್ರಗತಿ ಪರಿಶೀಲನಾ ಸಭೆಯಲ್ಲಿ, ಕಂದಾಯ ಸಚಿವರೂ ಆದ ಕೃಷ್ಣ ಬೈರೇಗೌಡ ಅವರು ಜಿಲ್ಲಾ ಆರೋಗ್ಯಾಧಿಕಾರಿ (ಡಿಎಚ್‌ಒ) ಮತ್ತು ಹಿಮ್ಸ್ (HIMS) ನಿರ್ದೇಶಕರೊಂದಿಗೆ ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಸಮಗ್ರ ಮಾಹಿತಿ ಪಡೆದರು. ಈ ಸಂದರ್ಭದಲ್ಲಿ, ಅವರು ಆಧುನಿಕ ಜೀವನಶೈಲಿಯಿಂದ ಬರುವ ರೋಗಗಳ ಬಗ್ಗೆ ವಿಶೇಷ ಗಮನ ಹರಿಸುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದರು. ಹೃದಯಾಘಾತ ಮತ್ತು ಮರಣ ಪ್ರಮಾಣದ ಮಾಹಿತಿ: ಸಭೆಯಲ್ಲಿ ಸಚಿವರು ಹೃದಯಾಘಾತ (ಮಯೋಕಾರ್ಡಿಯಲ್ ಇನ್ಫಾರ್ಕ್ಷನ್ – MI) ಪ್ರಕರಣಗಳ ಬಗ್ಗೆ ಮಾಹಿತಿ ಪಡೆದರು. ಹಿಂದಿನ ವರ್ಷಕ್ಕೆ ಹೋಲಿಸಿದರೆ ಜಿಲ್ಲೆಯಲ್ಲಿ ಮರಣ ಪ್ರಮಾಣ (mortality rate) ಕಡಿಮೆಯಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು. ಕಳೆದ ವರ್ಷ ಒಟ್ಟು ದಾಖಲಾದ ರೋಗಿಗಳಲ್ಲಿ ಮರಣ ಪ್ರಮಾಣ 6.6% ಇದ್ದರೆ, ಈ ವರ್ಷ ಅದು 5.6% ಕ್ಕೆ ಇಳಿದಿದೆ. ವಿಶೇಷವಾಗಿ, ಹೃದಯಾಘಾತದಿಂದಾಗಿ ದಾಖಲಾದ 315 ಪ್ರಕರಣಗಳಲ್ಲಿ ಮರಣ ಪ್ರಮಾಣವು 6.03% ಇದೆ ಎಂದು ಸಚಿವರು ತಿಳಿದುಕೊಂಡರು. ಜೀವನಶೈಲಿ ಕಾಯಿಲೆಗಳ ಮೇಲೆ ಗಮನ…
ಮೈಸೂರು : ವಿಶ್ವವಿಖ್ಯಾತ ನಾಡಹಬ್ಬ ದಸರಾಕೆ ನಿನ್ನೆ ಸಾಹಿತಿ ಬಾನು ಮುಷ್ತಾಕ್ ತಾಯಿ ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಚಾಲನೆ ನೀಡಿದರು. ಸಿಎಂ ಸಿದ್ದರಾಮಯ್ಯ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿದ್ದರು. ಇದೀಗ ಚಾಮುಂಡಿ ಬೆಟ್ಟದಲ್ಲಿ ಸೇವೆ ಸಲ್ಲಿಸುತ್ತಿದ್ದ ಅರ್ಚಕರೊಬ್ಬರು ಹೃದಯಘಾತದಿಂದ ಸಾವನಪ್ಪಿದ್ದಾರೆ. ಹೌದು ಮೈಸೂರಿನ ಚಾಮುಂಡಿ ಬೆಟ್ಟದ ಅರ್ಚಕ ಇದೀಗ ನಿಧನರಾಗಿದ್ದಾರೆ. ಚಾಮುಂಡಿ ಬೆಟ್ಟದಲ್ಲಿ ತಾಯಿ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸುತ್ತಿದ್ದ ರಾಜು ಎನ್ನುವ ಅರ್ಚಕರು ದೇವಸ್ಥಾನದಲ್ಲಿ ಶಿವಾರ್ಚಕರಾಗಿದ್ದರು. ಹೃದಯಾಘಾತದಿಂದ ಅರ್ಚಕ ರಾಜು ಸಾವನಪ್ಪಿದ್ದಾರೆ. ಸದ್ಯ ಗರ್ಭಗುಡಿಗೆ ತೆರೆ ಎಳೆದು ಉತ್ಸವ ಮೂರ್ತಿ ದರ್ಶನಕ್ಕೆ ಅವಕಾಶ ಕಲ್ಪಿಸಿದ್ದು, ಇಂದು ರಾತ್ರಿಯವರೆಗೂ ಮೂಲ ವಿಗ್ರಹದ ದರ್ಶನಕ್ಕೆ ನಿಷೇಧಿಸಲಾಗಿದೆ.
ಬೆಂಗಳೂರು : ವಿಪಕ್ಷ ನಾಯಕ ಆರ್ ಅಶೋಕ್ ಅವರ ವಿರುದ್ಧ ಬಗರ್ ಹುಕುಂ ಭೂಮಿ ಹಂಚಿಕೆಯಲ್ಲಿ ಭ್ರಷ್ಟಾಚಾರ ಆರೋಪ ಪ್ರಕರಣಕ್ಕೆ ಸಂಬಂಧಪಟ್ಟಂತೆ ವಿಪಕ್ಷ ನಾಯಕ ಆರ್ ಅಶೋಕ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಒಂದು ವಾರಗಳ ಕಾಲ ಮುಂದೂಡಿದೆ. ತಮ್ಮ ವಿರುದ್ಧ ತನಿಖೆಗೆ ತಡೆ ಕೋರಿ ಆರ್ ಅಶೋಕ್ ಸುಪ್ರೀಂಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ 1 ವಾರಗಳ ಕಾಲ ಅರ್ಜಿ ವಿಚಾರಣೆ ಮುಂದೂಡಿದೆ. ಪ್ರಕರಣದ ತನಿಖೆಗೆ ತಡೆ ನೀಡಲು ಕರ್ನಾಟಕ ಹೈಕೋರ್ಟ್ ನಿರಾಕರಿಸಿತ್ತು . ಹಾಗಾಗಿ ವಿಪಕ್ಷ ನಾಯಕ ಆರ್ ಅಶೋಕ್ ಸುಪ್ರೀಂಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿದ್ದರು. ಇದೀಗ ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿಯ ಕುರಿತು ವಿಚಾರಣೆ ನಡೆಸಿ 1 ವಾರದ ವರೆಗೆ ವಿಚಾರಣೆಯನ್ನು ಮುಂದೂಡಿ ಆದೇಶ ಹೊರಡಿಸಿತು.
ಬೆಳಗಾವಿ : ಈಗಾಗಲೇ ನಿನ್ನೆಯಿಂದ ರಾಜ್ಯಾದ್ಯಂತ ಸಾಮಾಜಿಕ ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆ ಆರಂಭವಾಗಿದ್ದು, ಸಮೀಕ್ಷೆಗೆ ಸರ್ಕಾರ ಈಗಾಗಲೇ ಸರ್ಕಾರಿ ಶಿಕ್ಷಕರನ್ನು ನೇಮಕ ಮಾಡಿದೆ ಆದರೆ ಬೆಳಗಾವಿಯಲ್ಲಿ ಶಿಕ್ಷಣ ಇಲಾಖೆ ಎಡವಟ್ಟು ಮಾಡಿಕೊಂಡಿದ್ದು, ಈಗಾಗಲೇ ತೀರಿಹೋಗಿರುವ ಶಿಕ್ಷಕರ ಹೆಸರನ್ನು ನೇಮಕ ಮಾಡಿ ಎಡವಟ್ಟು ಮಾಡಿದೆ. ಹೌದು ಬೆಳಗಾವಿಯಲ್ಲಿ ಶಿಕ್ಷಣ ಇಲಾಖೆಯಿಂದ ಮಹಾ ಎಡವಟ್ಟು ಆಗಿದ್ದು, ಸತ್ತ ಶಿಕ್ಷಕರ ಹೆಸರನ್ನು ಗಣಿತಿ ಕಾರ್ಯಕ್ಕೆ ಆಯ್ಕೆ ಮಾಡಿದ್ದಾರೆ. ನಿವೃತ್ತಿ ಹೊಂದುತ್ತಿರುವ ಶಿಕ್ಷಕರು ಆಯ್ಕೆಯಾಗಿದ್ದು, 7 ತಿಂಗಳ ಗರ್ಭಿಣಿ, ವಿಶೇಷ ಚೇತನರನ್ನು ಕೂಡ ನೇಮಕ ಮಾಡಿದೆ. ಹಾಗಾಗಿ ಗೊಂದಲ ಸರಿ ಪಡಿಸುವಂತೆ ಶಿಕ್ಷಕರು ಇದೀಗ ಪ್ರತಿಭಟನೆ ನಡೆಸುತ್ತಿದ್ದಾರೆ. ಸಮಸ್ಯೆಗೆ ಸ್ಪಂದಿಸದಿದ್ದರೆ ಗಣತಿಗೆ ಬಹಿಷ್ಕಾರ ಹಾಕುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಬೆಂಗಳೂರು : ನಿನ್ನೆಯಿಂದ ರಾಜ್ಯಾದ್ಯಂತ ಸಾಮಾಜಿಕ ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆ ಆರಂಭವಾಗಿದ್ದು, ಆದರೆ ಸರ್ವರ್ ಸಮಸ್ಯೆ ಹಾಗೂ ಮೊಬೈಲ್ನಲ್ಲಿ ತಾಂತ್ರಿಕ ಸಮಸ್ಯೆಯಲ್ಲಿ ಇದುವರೆಗೂ ಕೇವಲ ರಾಜ್ಯಾದ್ಯಂತ 10642 ಕುಟುಂಬಗಳ ದತ್ತಾಂಶ ಸಂಗ್ರಹಿಸಲಾಗಿದೆ ಎಂದು ತಿಳಿದುಬಂದಿದೆ. ಇದೆ ವಿಚಾರವಾಗಿ ಬೆಂಗಳೂರಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಿಎಂ ಸಿಎದ್ದ್ ಸಾಮಾಜಿಕ ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆಗೆ ಸರ್ವರ್ ಡೌನ್ ವಿಚಾರವಾಗಿ, ಇಂದು ಮಧ್ಯಾಹ್ನ ಹೈಕೋರ್ಟ್ ನಲ್ಲಿ ಈ ಕುರಿತು ವಿಚಾರಣೆ ನಡೆಯಲಿದೆ ನಂತರ ನೋಡೋಣ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು. ರಾಜ್ಯಾದ್ಯಂತ ನಿನ್ನೆಯಿಂದ ಸಾಮಾಜಿಕ ಶೈಕ್ಷಣಿಕ ಸಮೀಕ್ಷೆ ಆರಂಭವಾಗಿದ್ದು, ನಿನ್ನೆ ಒಂದೇ ದಿನ ಕೇವಲ 10,642 ಕುಟುಂಬಗಳ ದತ್ತಾಂಶ ಸಂಗ್ರಹವಾಗಿದೆ ವಿಭಧ ಜಿಲ್ಲೆಗಳಲ್ಲಿ ದತ್ತಾಂಶ ಸಂಗ್ರಹ ಮಾಡುತ್ತಿರುವ ಸಮೀಕ್ಷೆಗಾರರು ಮೊದಲ ದಿನ ಬೆರಳಣಿಕೆ ಎಷ್ಟು ಮಾತ್ರ ದತ್ತಾಂಶ ಸಂಗ್ರಹಿಸಲಾಗಿದೆ 15 ಜಿಲ್ಲೆಗಳಲ್ಲಿ ಹತ್ತಕ್ಕಿಂತ ಕಡಿಮೆ ಮನೆಗಳಲ್ಲಿ ದತ್ತಾಂಶ ಸಂಗ್ರಹಿಸಲಾಗಿದೆ. ಜಿಲ್ಲಾವಾರು ಸಮೀಕ್ಷೆ ನೋಡುವುದಾದರೆ ಹಾವೇರಿಯಲ್ಲಿ 680 ಕುಟುಂಬಗಳ ದತ್ತಾಂಶ ಸಂಗ್ರಹವಾಗಿದೆ. ವಿಜಯಪುರದಲ್ಲಿ ಕೇವಲ 7,…
ಹಾಸನ : ಹಾಸನದಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಕಂದಾಯ ಸಚಿವ ಕೃಷ್ಣ ಬೈರೇಗೌಡರು ಕೃಷಿ ಇಲಾಖೆಯ ಅಧಿಕಾರಿಯೊಬ್ಬರಿಗೆ ತೀವ್ರ ತರಾಟೆ ತೆಗೆದುಕೊಂಡಿದ್ದು, ಅವರ ಆಳವಾದ ಕೃಷಿ ಜ್ಞಾನ ಮತ್ತು ಕಾರ್ಯಕ್ಷಮತೆಯ ಮೇಲಿನ ಬದ್ಧತೆ ಮತ್ತೊಮ್ಮೆ ಸಾಬೀತಾಗಿದೆ. ಕೇವಲ ಲೆಕ್ಕಾಚಾರಗಳು ಮತ್ತು ಅಂಕಿ-ಅಂಶಗಳ ವರದಿಯನ್ನು ಮಂಡಿಸಿದ ಅಧಿಕಾರಿಯ ವಿರುದ್ಧ, ‘ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ’ ವರದಿ ಕೊಟ್ಟರೆ ಯಾವುದೇ ಪ್ರಯೋಜನವಿಲ್ಲ ಎಂದು ಸಚಿವರು ಗುಡುಗಿದರು. ಅವರ ಈ ನೇರ ಮತ್ತು ಆಕ್ರಮಣಕಾರಿ ಶೈಲಿಯು ಸಭೆಯಲ್ಲಿ ಗಮನ ಸೆಳೆಯಿತು. ಬಿಳಿ ಸುಳಿ ರೋಗದ ನಿಜವಾದ ಸವಾಲು: ೫೬೫೫ ಹೆಕ್ಟೇರ್ ಪ್ರದೇಶದಲ್ಲಿ ಮೆಕ್ಕೆಜೋಳ ಬೆಳೆದು ನಿಂತಿದೆ. ಆದರೆ ಬಿಳಿ ಸುಳಿ ರೋಗ (white whorl disease) ರೈತರ ಬದುಕನ್ನೇ ಬೆಂಕಿ ಹಚ್ಚಿದಂತೆ ಹರಡುತ್ತಿದೆ. ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಬದಲು, ಕೃಷಿ ಅಧಿಕಾರಿ ಕೇವಲ ರೋಗ ಹರಡಿರುವ ವಿಸ್ತೀರ್ಣದ ಬಗ್ಗೆ ಮಾಹಿತಿ ನೀಡಿ ಕೈತೊಳೆದುಕೊಂಡರು. ಇದಕ್ಕೆ ಸಚಿವ ಬೈರೇಗೌಡರ ಪ್ರತಿಕ್ರಿಯೆ ತೀಕ್ಷ್ಣವಾಗಿತ್ತು. “ಇಷ್ಟು ಕೃಷಿ ವಿಶ್ವವಿದ್ಯಾಲಯಗಳು,…







