Subscribe to Updates
Get the latest creative news from FooBar about art, design and business.
Author: kannadanewsnow05
ಬೆಂಗಳೂರು : ರಾಜ್ಯದಲ್ಲಿ ಮತ್ತೊಂದು ಪೈಶಾಚಿಕ ಕೃತ್ಯ ನಡೆದಿದ್ದು, ರಸ್ತೆಯಲ್ಲಿ ಮಲಗಿದ್ದಂತಹ ಮೂರು ಹಸುಗಳ ಕೆಚ್ಚಲುಗಳನ್ನು ಕಿಡಿಗೇಡಿಗಳು ಕೊಯ್ದಿರುವ ಹೀನ ಕೃತ್ಯ ಬೆಂಗಳೂರು ಜಿಲ್ಲೆಯ ಚಾಮರಾಜಪೇಟೆಯಲ್ಲಿ ನಡೆದಿದೆ. ಹೌದು ಚಾಮರಾಜಪೇಟೆಯ ವಿನಾಯಕ ನಗರದಲ್ಲಿ ಒಂದು ಘಟನೆ ನಡೆದಿದೆ. ರಸ್ತೆಯಲ್ಲಿ ಮಲಗಿದ್ದಂತಹ ಮೂರು ಹಸುಗಳನ್ನು ಕೆಚ್ಚಲನ್ನು ಕಿಡಿಗೇಡಿಗಳು ಕೊಯ್ದಿದ್ದಾರೆ. ಸದ್ಯಕ್ಕೆ ಚಾಮರಾಜಪೇಟೆಯ ಬಸವ ಆಸ್ಪತ್ರೆಯಲ್ಲಿ ಮೂರು ಹಸುಗಳಿಗೂ ಚಿಕಿತ್ಸೆ ನೀಡಲಾಗುತ್ತಿದೆ. ನಿನ್ನೆ ರಾತ್ರಿ ಮೂರು ಹಸುಗಳ ಕೆಚ್ಚಲನ್ನು ಕಿಡಿಗೇಡಿಗಳು ಕೊಯ್ದಿದ್ದಾರೆ. ಮನುಷ್ಯರಿಗೆ ಒಂದು ಸಾರಿ ಸೂಜಿ ಚುಚ್ಚಿದರು ಸಾಕು ನೋವು ಎಂದು ಕಿರುಚಿ ಹೇಳುತ್ತೇವೆ. ಆದರೆ ಪಾಪ ಮಾತು ಬರದೇ ಇರುವಂತಹ ಮೂಕಪ್ರಾಣಿಗಳ ಕೆಚ್ಚಲು ಕೊಯ್ಯುವಾಗ ಎಷ್ಟು ವೇದನೆ ಅನುಭವಿಸಲಿಲ್ಲ? ಸದ್ಯ ಹಸುಗಳಿಗೆ ಪಶು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇಂಥ ವಿಕೃತಿ ಮೆರೆದ ಪಾಪಿಗಳನ್ನು ಒದ್ದು ಒಳಗೆ ಹಾಕಿ ಎಂದು ಸ್ಥಳೀಯ ನಿವಾಸಿಗಳು ಕಿಡಿ ಕಾರಿದ್ದಾರೆ.
ಬೆಂಗಳೂರು : ಬಹು ಮುಖ್ಯವಾದಂತಹ ಜಾತಿಗಣತಿ ವರದಿ ಜಾರಿ ಮಾಡುವ ಕುರಿತಂತೆ ಮುಂದಿನ ಸಂಪುಟ ಸಭೆಯಲ್ಲಿ ಅಂದರೆ ಜನೆವರಿ 16 ರಂದು ಈ ಒಂದು ಜಾದಿಗಣತಿ ವರದಿ ಮಂಡಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚಿಸಿದ್ದು, ಬಹುತೇಕ ಮುಂದೆ ನಡೆಯುವ ಕ್ಯಾಬಿನೆಟ್ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಚಿವರೊಂದಿಗೆ ಚರ್ಚಿಸಿ ಜಾತಿಗಣತಿ ವರದಿ ಜಾರಿಯಾಗುವ ಕುರಿತು ಮಹತ್ವದ ನಿರ್ಧಾರ ಕೈಗೊಳ್ಳಲಿದ್ದಾರೆ ಎನ್ನಲಾಗಿದೆ. ಹೌದು ಮುಂದಿನ ಕ್ಯಾಬಿನೆಟ್ ನಲ್ಲಿ ಜಾತಿಗಣತಿ ವರದಿ ಜಾರಿ ಕುರಿತು ಚರ್ಚೆ ಸಾಧ್ಯತೆ ಇದ್ದು, ಸಚಿವ ಸಂಪುಟದ ಮುಂದೆ ವರದಿ ಮಂಡಿಸಲು ಸೂಚನೆ ನೀಡಲಾಗಿದೆ. ಸಚಿವರೊಂದಿಗೆ ಚರ್ಚೆ ಮಾಡಲು ಸಿಎಂ ಸಿದ್ದರಾಮಯ್ಯ ನಿರ್ಧಾರ ಮಾಡಿದ್ದಾರೆ.ಕಾನೂನು ಇಲಾಖೆ ಸಲಹೆ ಪಡೆಯಲು ಬಹುತೇಕ ತೀರ್ಮಾನಿಸಲಾಗಿದ್ದು, ಸಚಿವ ಸಂಪುಟ ಸಮಿತಿ ರಚನೆ ಮಾಡುವ ಸಾಧ್ಯತೆ ಇದೆ. ಈಗಾಗಲೇ ಜಯಪ್ರಕಾಶ್ ಹೆಗಡೆಯವರು ಜಾತಿಗಣತಿ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದ್ದು ಸಂಪುಟ ಉಪ ಸಮಿತಿ ವರದಿ ಆಧರಿಸಿ ಮುಂದಿನ ನಿರ್ಧಾರ ಕೈಗೊಳ್ಳಲಾಗುತ್ತದೆ. ಸಿಎಂ ಸಿದ್ದರಾಮಯ್ಯ ಚರ್ಚೆ ಮಾಡಿ, ಸಂಪುಟ ಉಪ ಸಮಿತಿ…
ಹಾಸನ : ಪ್ರಿಯಕರನೊಬ್ಬ ತನ್ನ ಪ್ರಿಯತಮೆಯ ಕಾಟಕ್ಕೆ ಬೇಸತ್ತು, ಯುವಕನೊಬ್ಬ ಸೆಲ್ಫಿ ವಿಡಿಯೋ ಮಾಡಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನಲ್ಲಿ ನಡೆದಿದೆ. ವಿಷ ಸೇವಿಸಿದ ತಕ್ಷಣ ಯುವಕನನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು.ಆದರೆ ಚಿಕಿತ್ಸೆ ಫಲಿಸದೆ ಯುವಕ ಇದೀಗ ಸಾವನಪ್ಪಿದ್ದಾನೆ. ಕಳೆದ ಡಿಸೆಂಬರ್ 26ರಂದು ಯುವಕ ವಿಷ ಸೇವಿಸಿದ್ದ ತಕ್ಷಣ ಆತನನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.ಆದರೆ ಇಂದು ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾನೆ.ಪ್ರಿಯತಮೆಯ ಕಾಟಕ್ಕೆ ಬೇಸತ್ತು ಯುವಕ ಆತ್ಮಹತ್ಯೆಗೆ ಶರಣಾಗಿದ್ದಾನೆ. ವಿಡಿಯೋ ಮಾಡಿಟ್ಟು ಯುವಕನೊಬ್ಬ ಆತ್ಮಹತ್ಯೆಗೆ ಶರಣಾಗಿದ್ದಾನೆ. ಸೂಸೈಡ್ ಮಾಡಿಕೊಂಡ ಯುವಕನನ್ನು ಕವನ ಎಂದು ತಿಳಿದುಬಂದಿದೆ. ಸಕಲೇಶಪುರ ತಾಲೂಕಿನ ಮಾಳೆಗದ್ದೆಯಲ್ಲಿ ಈ ಒಂದು ಘಟನೆ ನಡೆದಿದ್ದು, ನನ್ನ ಸಾವಿಗೆ ಅಂಜಲಿ ಎಂಬ ಯುವತಿ ಕಾರಣ ವಿಡಿಯೋದಲ್ಲಿ ಯುವಕ ಆರೋಪಿಸಿದ್ದಾನೆ. 2021 ರಲ್ಲಿ ನನ್ನ ಮನೆಯ ಬಳಿ ಅಂಜಲಿ ವಾಸಿಸುತ್ತಿದ್ದಳು.ಆಗ ನನ್ನ ಲೈಫ್ ನಲ್ಲಿ ಅವಳು ಬಂದು ಇಬ್ಬರು ಪರಸ್ಪರ ಪ್ರೀತಿಸುತಿದ್ದೆವು. ನೀನು ನನಗೆ ಬೇಕೇ ಬೇಕು…
ಚಾಮರಾಜನಗರ : ಚಾಮರಾಜನಗರದಲ್ಲಿ ಘೋರವಾದ ದುರಂತ ಒಂದು ಸಂಭವಿಸಿದ್ದು, ಕಬ್ಬಿನ ಗದ್ದೆಯಲ್ಲಿ ಆಟ ಆಡುತ್ತಿರುವಾಗ ಎರಡು ವರ್ಷದ ಬಾಲಕನಿಗೆ ಹಾವು ಕಚ್ಚಿ ಧಾರಣವಾಗಿ ಸಾವನ್ನಪ್ಪಿರುವ ಘಟನೆ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ತೇರಂಬಳ್ಳಿ ಗ್ರಾಮದಲ್ಲಿ ನಡೆದಿದೆ. ಮೃತ ಬಾಲಕನನ್ನು ಬಳ್ಳಾರಿ ಜಿಲ್ಲೆಯ ಹೊಸಪೇಟೆ ನಗರದ ಶ್ರೀಧರ್ ಎಂಬವರ ಪುತ್ರ ಅಜಯ್ (2) ಎನ್ನುವ ಬಾಲಕ ಹಾವು ಕಚ್ಚಿ ಮೃತಪಟ್ಟಿದ್ದಾನೆ. ಶ್ರೀಧರ್ ಕುಟುಂಬಸ್ಥರು ಪ್ರತಿವರ್ಷ ತಮ್ಮ ಜಿಲ್ಲೆಯಿಂದ ಕಬ್ಬು ಕಟಾವು ಮಾಡಲು ಎರಡು ಮೂರು ತಿಂಗಳುಗಳ ಕಾಲ ಕುಟುಂಬ ಸಮೇತರಾಗಿ ಬಂದು ಇಲ್ಲೇ ವಾಸ್ತವ್ಯ ಹೂಡಿ, ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಅದೇ ರೀತಿಯಾಗಿ ಸುಮಾರು ನಾಲ್ಕರಿಂದ ಐದು ಕುಟುಂಬದವರು ಕೊಳ್ಳೇಗಾಲ ತಾಲೂಕಿನ ತೇರಂಬಳ್ಳಿ ಗ್ರಾಮದ ಕುಳ್ಳೇಗೌಡ ಎಂಬವರ ಜಮೀನಿನಲ್ಲಿ ಕಬ್ಬು ಕಟಾವು ಮಾಡುತ್ತಿದ್ದರು. ಈ ವೇಳೆ ಮೃತಪಟ್ಟ ಮಗು ಸೇರಿ 4-5 ಮಕ್ಕಳು ಕಬ್ಬಿನ ಗದ್ದೆಯಲ್ಲೇ ಆಟವಾಡುತ್ತಿದ್ದರು. ಈ ವೇಳೆ ಬಾಲಕ ಅಜಯನಿಗೆ ಹಾವು ಕಚ್ಚಿದೆ ಕೂಡಲೇ ಆದ ಜೋರಾಗಿ ಕಿರುಚಿಕೊಂಡಿದ್ದಾನೆ.…
ತುಮಕೂರು : ಅಧಿಕಾರಿಗಳು ಸರ್ಕಾರಿ ಜಮೀನು ಒತ್ತುವರಿಗೆ ಬಂದ ಹಿನ್ನೆಲೆಯಲ್ಲಿ ರೈತನೊಬ್ಬ ಜಮೀನಿನಲ್ಲಿಯೇ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ತುಮಕೂರು ಜಿಲ್ಲೆಯ ಶಿರಾ ನಗರದ ಕಲ್ಲುಕೋಟೆಯಲ್ಲಿ ಈ ಒಂದು ಘಟನೆ ನಡೆದಿದೆ. ಕಾಂತರಾಜು ಎನ್ನುವ ರೈತ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಸುಮಾರು 60-70 ವರ್ಷಗಳಿಂದ ಕಾಂತರಾಜು ಉಳುಮೆ ಮಾಡುತ್ತಿದ್ದ. ಸರ್ವೇ ನಂಬರ್ 118 ರಲ್ಲಿ ಕಾಂತರಾಜು ಉಳುಮೆ ಮಾಡುತ್ತಿದ್ದಾರೆ. ಒತ್ತುವರಿ ಭೂಮಿಯನ್ನು ತೆರವುಗೊಳಿಸಲು ನಗರ ಸಭೆಯ ಅಧಿಕಾರಿಗಳು ಬಂದಿದ್ದರು. ಈ ವೇಳೆ ನೋಟಿಸ್ ನೀಡದೆ ಏಕಾಏಕಿ ತೆರವುಗೊಳಿಸಲು ಬಂದಿದ್ದಕ್ಕೆ ಕಾಂತರಾಜು ವಿಷ ಸೇವಿಸಿ ಮಾತೆಗೆ ಯತ್ನಿಸಿದ್ದಾರೆ.ಜಮೀನಿನಲ್ಲಿ ರೈತ ಕಾಂತರಾಜು ಆತ್ಮಹತ್ಯೆಗೆ ಯತ್ನಿಸಿದ್ದಾರೆ ತಕ್ಷಣ ಕಾಂತರಾಜುವನು ಶಿರಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತು ಶಿರಾ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಒಂದು ಪ್ರಕರಣ ನಡೆದಿದೆ.
ಉತ್ತರಕನ್ನಡ : ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಬೇಣಗ ಬಳಿ ಇಂಡಸ್ಟ್ರಿಸ್ ಕಾರ್ಖಾನೆಯಲ್ಲಿ ವಿಷಕಾರಿ ರಸಾಯನಿಕ ಸೋರಿಕೆಯಾಗಿ ಕಾರ್ಮಿಕರು ಅಸ್ವಸ್ಥರಾಗಿರುವ ಘಟನೆಗೆ ಸಂಬಂಧಿಸಿದಂತೆ ಇದೀಗ ಅಸ್ವಸ್ಥ ಗೊಂಡ ಕಾರ್ಮಿಕರ ಸಂಖ್ಯೆ 18ಕ್ಕೆ ಏರಿಕೆಯಾಗಿದೆ. ಹೌದು ಕಾರ್ಖಾನೆಯಲ್ಲಿ ರಸಾಯನಿಕ ಸೋರಿಕೆಯಿಂದ 11ಕಾರ್ಮಿಕರು ಅಸ್ವಸ್ಥರಾಗಿದ್ದರು. ಇದೀಗ ಅಸ್ವಸ್ಥಗೊಂಡ ಕಾರ್ಮಿಕರ ಸಂಖ್ಯೆ 18ಕ್ಕೆ ಏರಿಕೆಯಾಗಿದೆ.ಆದಿತ್ಯ ಬಿರ್ಲಾ ಗ್ರೂಪ್ನ ಗ್ರಾಸಿಮ್ ಇಂಡಸ್ಟ್ರಿಯಲ್ಲಿ ಈ ಒಂದು ಘಟನೆ ನಡೆದಿದೆ. ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಬೆಣಗ ಬಳಿಯ ಇಂಡಸ್ಟ್ರೀಸ್ ನಲ್ಲಿ ಈ ಒಂದು ದುರಂತ ಸಂಭವಿಸಿದೆ. ಅಸ್ವಸ್ಥ ಕಾರ್ಮಿಕರಿಗೆ ಕಾರವಾರ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ, ಇದೀಗ ಚಿಕಿತ್ಸೆ ನೀಡಲಾಗುತ್ತಿದೆ. ಕಾಸ್ಟಿಕ್ ಸೋಡಾ ಉತ್ಪಾದಿಸುವ ಗ್ರಾಸಿಂ ಇಂಡಸ್ಟ್ರೀಸ್ ನಲ್ಲಿ ಘಟನೆ ನಡೆದಿದ್ದು, ಈ ಕುರಿತು ಕಾರವಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಂಪನಿ ಬೇ ಜವಾಬ್ದಾರಿಯನ್ನು ಖಂಡಿಸಿ ಸ್ಥಳೀಯರು ಪ್ರತಿಭಟನೆ ನಡೆಸುತ್ತಿದ್ದಾರೆ ಕಾರ್ಖಾನೆ ಸ್ಥಗಿತಗೊಳಿಸುವಂತೆ ಸ್ಥಳೀಯರು ಆಗ್ರಹಿಸುತ್ತಿದ್ದಾರೆ ಪ್ಲಾಂಟ್ ನಲ್ಲಿರುವ ಸಿಬ್ಬಂದಿಯನ್ನು ಹೊರ ಕಳಿಸುವಂತೆ ಒತ್ತಾಯಿಸುತ್ತಿದ್ದಾರೆ ಇಷ್ಟು…
ಧಾರವಾಡ : ರಾಜ್ಯದಲ್ಲಿ ಮತ್ತೊಂದು ಪೈಶಾಚಿಕ ಕೃತ್ಯ ನಡೆದಿದ್ದು, ಧಾರವಾಡದಲ್ಲಿ ಅಪ್ರಾಪ್ತ ಬಾಲಕಿ ಮೇಲೆ ಹಲ್ಲೆ ಮಾಡಿ ಕಾಮುಕನೊಬ್ಬ ಲೈಂಗಿಕ ದೌರ್ಜನ್ಯ ಎಸಗಿದ್ದ ಘಟನೆ ನಡೆದಿತ್ತು. ಇದೀಗ ಈ ಒಂದು ಪ್ರಕರಣಕ್ಕೆ ಸಂಬಂಧಪಟ್ಟಂತೆ ಧಾರವಾಡ ಉಪನಗರ ಠಾಣೆಯ ಪೊಲೀಸರು ಕಾಮುಕನನ್ನು ಅರೆಸ್ಟ್ ಮಾಡಿದ್ದಾರೆ. ಬಂಧಿತ ಆರೋಪಿಯನ್ನು ಪರ್ವೇಜ್ ಪಠಾಣ್ ಎಂದು ಗುರುತಿಸಲಾಗಿದ್ದು, ಕಳೆದ ಜನವರಿ 4ರಂದು ಕಾಲೇಜಿಗೆ ಬಿಡುವುದಾಗಿ ಅಪ್ರಾಪ್ತ ಬಾಲಕಿಯನ್ನು ಒತ್ತಾಯಪೂರ್ವಕವಾಗಿ ಬೈಕ್ ಮೇಲೆ ಕರೆದುಕೊಂಡು ಹೋಗಿದ್ದಾನೆ. ಧಾರವಾಡದ ಕ್ಲಾಸಿಕ್ ಇಂಟರ್ ನ್ಯಾಷನಲ್ ಕಾಲೇಜಿನ ಹಿಂದೆ ಇರುವ ಅಜ್ಞಾತ ಸ್ಥಳಕ್ಕೆ ಬಾಲಕಿಯನ್ನ ಒತ್ತಾಯ ಪೂರ್ವಕವಾಗಿ ಬೈಕ್ ಮೇಲೆ ಕರೆದುಕ್ಕೋಂಡು ಹೋಗಿದ್ದಾನೆ. ಈ ವೇಳೆ ಬಾಲಕಿಯ ದೇಹದ ಅಂಗಾಂಗಗಳನ್ನು ಅಸಭ್ಯವಾಗಿ ಮುಟ್ಟಿ, ಅವಳಿಗೆ ಮೊಬೈಲ್ ನಲ್ಲಿ ವಿಡಿಯೋ ಹಾಗೂ ಅಶ್ಲೀಲ ಫೋಟೋ ತೋರಿಸಿ ಪ್ರಚೋದನೆ ಆಗುವಂತೆ ನಡೆದುಕೊಂಡಿದ್ದಾನೆ. ಈ ವೇಳೆ ಅವಳು ಒಪ್ಪದೇ ಇದ್ದಾಗ ಆಕೆ ಮೇಲೆ ಹಲ್ಲೆ ಮಾಡಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಈ ವಿಷಯ ಯಾರಿಗಾದರೂ ಹೇಳಿದರೆ ಕೊಲೆ…
ವಿಜಯಪುರ : ಬೀದರ್ ಜಿಲ್ಲೆಯ ಯುವ ಗುತ್ತಿಗೆದಾರ ಸಚಿನ್ ಪಂಚಾಳ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ, ಇತ್ತೀಚಿಗೆ ಕಲಬುರ್ಗಿಯಲ್ಲಿ ಸಚಿವ ಪ್ರಿಯಾಂಕ ಖರ್ಗೆ ವಿರುದ್ಧ ಪ್ರತಿಭಟನೆ ನಡೆಯಿತು. ಆದರೆ ಈ ಒಂದು ಪ್ರತಿಭಟನೆಯಲ್ಲಿ ಬಿಜೆಪಿ ಬಿವೈ ವಿಜಯೇಂದ್ರ ಭಾಗಿಯಾಗಿರಲಿಲ್ಲ. ಈ ವಿಚಾರವಾಗಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಬಿವೈ ವಿಜಯೇಂದ್ರಗೆ ಸಚಿವ ಪ್ರಿಯಾಂಕ್ ಖರ್ಗೆ ಬೆದರಿಕೆ ಹಾಕಿದ್ದರು ಎಂದು ಸ್ಪೋಟಕ ಹೇಳಿಕೆ ನೀಡಿದ್ದಾರೆ. ವಿಜಯಪುರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕಲ್ಬುರ್ಗಿಯಲ್ಲಿ ಪ್ರಿಯಾಂಕ್ ಖರ್ಗೆ ವಿರುದ್ಧ ಹೋರಾಟ ನಡೆಯಿತು. ಆ ಹೋರಾಟಕ್ಕೆ ವಿಜಯೇಂದ್ರ ಯಾಕೆ ಬರಲಿಲ್ಲ? ಯಾಕೆ ಅಂದ್ರೆ ವಿಜಯೇಂದ್ರಗೆ ಪ್ರಿಯಾಂಕ ಖರ್ಗೆ ಬೆದರಿಕೆ ಹಾಕಿದ್ದರು. ನಿಮ್ಮ ತಂದೆಯವರದು ಎಲ್ಲಾ ತೆಗಿತೀನಿ ಅಂತ ಪ್ರಿಯಾಂಕ್ ಖರ್ಗೆ ವಿಜಯೇಂದ್ರಗೆ ಬೆದರಿಕೆ ಹಾಕಿದ್ದರು. ಹೀಗಾಗಿ ವಿಜಯೇಂದ್ರ ಕಲಬುರ್ಗಿ ಹೋರಾಟಕ್ಕೆ ಬರಲಿಲ್ಲ. ಹೋರಾಟಗೆ ಯಾಕೆ ಬರಲಿಲ್ಲ ಎಂದು ಬಿ ವೈ ವಿಜಯೇಂದ್ರ ಹೇಳಬೇಕು ಎಂದು ವಿಜೇಂದ್ರ ವಿರುದ್ಧ ಯತ್ನಾಳ್ ಹೊಸ ಬಾಂಬ್ ಸಿಡಿಸಿದ್ದಾರೆ. ಇನ್ನು ಸಿಟಿ ರವಿಗೆ…
ಬೆಂಗಳೂರು : ಕಳೆದ ಡಿಸೆಂಬರ್ 19 ರಂದು ಬೆಳಗಾವಿಯ ಸುವರ್ಣ ಸೌಧದಲ್ಲಿ ಕಲಾಪದ ವೇಳೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ ಬಿಜೆಪಿ ಎಂಎಲ್ಸಿ ಸಿಟಿ ರವಿ ಅವರು ಅಶ್ಲೀಲ ಪದ ಬಳಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ, ನಾನು ಮಹಿಳಾ ನ್ಯಾಯಾಧೀಶರ ಮುಂದೆ 164 ಹೇಳಿಕೆಯನ್ನು ದಾಖಲಿಸುತ್ತೇನೆ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ತಿಳಿಸಿದರು. ಹೌದು ಬಿಜೆಪಿ ನಾಯಕ ಸಿಟಿ ರವಿ ತಮ್ಮನ್ನು ಅವಾಚ್ಯವಾಗಿ ನಿಂದಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿಕೆ ದಾಖಲಿಸಲು ಸಿಐಡಿ ಮುಂದಾಗಿದೆ. ಎರಡು ದಿನಗಳ ಹಿಂದೆ ಸಿಐಡಿ ಸಿಟಿ ರವಿ ಅವರನ್ನು ವಿಚಾರಣೆಗೆ ಒಳಪಡಿಸಿತ್ತು. ಇದೀಗ ಸಿಐಡಿ ಲಕ್ಷ್ಮಿ ಹೆಬ್ಬಾಳಕರ್ ಸೆಕ್ಷನ್ 164 ಅಡಿ ಹೇಳಿಕೆ ದಾಖಲಿಸಲು ಮುಂದಾಗಿದೆ.ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ ಎಸಿಎಂಜೆ 4 ರ ನ್ಯಾಯಾಲಯದಲ್ಲಿ 164 ಹೇಳಿಕೆ ದಾಖಲಿಸಲು ಸಿದ್ಧತೆ ಮಾಡಲಾಗಿತ್ತು. ಆದರೆ ಅಲ್ಲಿ ಪುರುಷ ನ್ಯಾಯಾಧೀಶರಿರುವ ಕಾರಣ ಹೆಬ್ಬಾಳ್ಕರ್ ಮಹಿಳಾ ನ್ಯಾಯಾಧೀಶರ ಮುಂದೆ ಮಾತ್ರ 164 ಹೇಳಿಕೆ ನೀಡುತ್ತೇನೆ ಎಂದಿದ್ದಾರೆ. ಲಕ್ಷ್ಮಿ ಹೆಬ್ಬಾಳ್ಕರ್…
ಕಲಬುರ್ಗಿ : ಕಲಬುರ್ಗಿಯಲ್ಲಿ ಇಂದು ರಾಷ್ಟ್ರಧ್ವಜದ ಸ್ತಂಭದಲ್ಲಿ ಮುಸ್ಲಿಂ ಧ್ವಜ ಹಾರಿಸಿದ್ದ ಘಟನೆ ನಡೆದಿದ್ದು ಈ ಕುರಿತಾಗಿ ಕಲ್ಬುರ್ಗಿ ನಗರದ ಚೌಕ್ ಪೊಲೀಸ್ ಠಾಣೆಗೆ ಕೆಲವು ಮುಸ್ಲಿ ಮುಖಂಡರೇ ಈ ಕುರಿತು ದೂರು ನೀಡಿರುವ ಘಟನೆ ನಡೆದಿದೆ. ಹೌದು ಮುಸ್ಲಿಂ ಧ್ವಜದ ಕೆಳಗೆ ರಾಷ್ಟ್ರಧ್ವಜ ಇಟ್ಟು ಅಪಮಾನ ಮಾಡಿದ ಆರೋಪ ಇದೀಗ ಕೇಳಿಬಂದಿದ್ದು, ಈ ಕುರಿತು ಮುಸ್ಲಿಂ ಮುಖಂಡರೇ ಚೌಕ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಕಲ್ಬುರ್ಗಿ ಶೇಕ್ ರೋಜಾ ದರ್ಗಾದಲ್ಲಿ ಈ ಒಂದು ಘಟನೆ ನಡೆದಿದೆ. ನಿನ್ನೆ ಶೇಖ್ ರೋಜಾ ದರ್ಗಾದಲ್ಲಿ ಸಾಮೂಹಿಕ ವಿವಾಹ ವೇಳೆ ಧ್ವಜಾರೋಹಣ ನೆರವೇರಿಸಲಾಗಿತ್ತು. ಮುಸ್ಲಿಂ ಧ್ವಜದ ಕೆಳಗೆ ರಾಷ್ಟ್ರಧ್ವಜ ಇಟ್ಟು ಅವಮಾನ ಮಾಡಿದ್ದ ಆರೋಪ ಕೇಳಿ ಬಂದಿತ್ತು. ಈ ಬಗ್ಗೆ ಚೌಕ ಪೊಲೀಸ್ ಠಾಣೆಗೆ ಕೆಲವು ಮುಖಂಡರಿಂದಲೇ ದೂರು ಸಲ್ಲಿಕೆಯಾಗಿತ್ತು.














