Subscribe to Updates
Get the latest creative news from FooBar about art, design and business.
Author: kannadanewsnow05
ಬೆಂಗಳೂರು : ಮೂರು ದಿನಗಳಲ್ಲಿ ಮೂರು ಪ್ರತ್ಯೇಕ ಜಿಲ್ಲೆಗಳಲ್ಲಿ ದರೋಡೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ವಿಪಕ್ಷ ನಾಯಕ ಆರ್ ಅಶೋಕ್ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದು, ರಾಜ್ಯ ಪೊಲೀಸ್ ಇಲಾಖೆಯಲ್ಲಿ ವರ್ಗಾವಣೆ ದಂಧೆ ನಡೆಯುತ್ತಿದೆ ಎಂದು ಗಂಭೀರವಾಗಿ ಆರೋಪಿಸಿದರು. ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕರ್ನಾಟಕ ರಾಜ್ಯವು ಕೂಡ ಬಿಹಾರ್ ರಾಜ್ಯದಂತೆ ದರೋಡೆಕೋರರ ರಾಜ್ಯವಾಗಿದೆ. ಬೀದರ್ ನಲ್ಲಿ ಹಾಡು ಹಗಲೇ ದರೋಡೆ ನಡೆದಿದೆ. ಇಲ್ಲಿ ದರೋಡೆ ಮಾಡಿ ವಿಮಾನ ರೈಲುಗಳಲ್ಲಿ ಹೋಗುತ್ತಿದ್ದಾರೆ.ರಾಜ್ಯದಲ್ಲಿ ದರೋಡೆ ಕೋರರ ಜಾತ್ರೆ ನಡೆಯುತ್ತಿದೆ. ಪೊಲೀಸರು ಬಿಟ್ ನಲ್ಲಿ ಇದ್ದರೂ ಕೂಡ ಯಾರನ್ನು ಬಂಧಿಸಿಲ್ಲ. ಟೋಲ್ ಗಳಲ್ಲಿ ಏನು ಆಗಿದೆ ಅಂತ ಸ್ವತಃ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಪೊಲೀಸ್ ಇಲಾಖೆಯಲ್ಲಿ ವರ್ಗಾವಣೆ ದಂಧೆ ನಡೆಯುತ್ತಿದೆ. ಪೊಲೀಸರು ರಾಜ್ಯದ ಗೌರವವನ್ನು ಮಣ್ಣು ಪಾಲು ಮಾಡಿದ್ದಾರೆ. ಎಷ್ಟಾದರೂ ಕೂಡ ಸಿಎಂ ಸಿದ್ದರಾಮಯ್ಯ ಪೊಲೀಸ್ ಅಧಿಕಾರಿಗಳ ಸಭೆ ಮಾಡಿಲ್ಲ. ಇನ್ಮುಂದೆ ಯಾದರೂ ಕುರ್ಚಿ ಜಗಳ ಬಿಟ್ಟು ಕೆಲಸ ಮಾಡಬೇಕು ಎಂದು…
ಬೀದರ್ : ಬೀದರ್ ನಲ್ಲಿ ರೈಲಿಗೆ ತಲೆಕೊಟ್ಟು ಯುವ ಗುತ್ತಿಗೆದಾರ ಸಚಿನ್ ಪಂಜಾಳ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಂದು ಸಿಐಡಿ ಅಧಿಕಾರಿಗಳು ರಾಜು ಕಪನೂರ್ & ಗ್ಯಾಂಗ್ ಅನ್ನು ಬೀದರ್ ನ JMFC ಕೋರ್ಟ್ ಗೆ ಹಾಜರುಪಡಿಸಿದ್ದರು. ಈ ವೇಳೆ ವಿಚಾರಣೆ ನಡೆಸಿದ ನ್ಯಾಯಾಧೀಶ ಎನ್.ರಾಮಾಮೂರ್ತಿ ಎಲ್ಲಾ ಆರೋಪಿಗಳಿಗೆ 14 ದಿನ ನ್ಯಾಯಾಂಗ ಬಂಧನಕ್ಕೆ ನೀಡಿ ಆದೇಶ ಹೊರಡಿಸಿದ್ದಾರೆ. ಆರೋಪಿಗಳನ್ನು ಕೋರ್ಟಿಗೆ ಹಾಜರುಪಡಿಸಿದ ಸಿಐಡಿ ಅಧಿಕಾರಿಗಳು ಆರೋಪಿಗಳಾದ ರಾಜು ಕಪನೂರ್ ಮತ್ತು ಗ್ಯಾಂಗ್ ಕೋರ್ಟಿಗೆ ಹಾಜರುಪಡಿಸಿದ್ದರು. ಬೀದರ್ ನ JMFC ಕೋರ್ಟಿಗೆ ಸೇಡಿ CID ಅಧಿಕಾರಿಗಳ ತಂಡ ಹಾಜರುಪಡಿಸಿದ್ದರು. ಇದೀಗ ನ್ಯಾಯಾಧೀಶರು ರಾಜು ಕಪನೂರ್ ಮತ್ತು ಗ್ಯಾಂಗ್ ಗೆ ನ್ಯಾಯಾಂಗ ಬಂಧನ ವಿಧಿಸಿ ಆದೇಶ ಹೊರಡಿಸಿದ್ದಾರೆ. ಗುತ್ತಿಗೆದಾರ ಸಚಿನ್ ಪಾಂಚಾಳ್ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದ. ಆತ್ಮಹತ್ಯೆಗು ಮುನ್ನ ಡೆತ್ ನೋಟ್ ನಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ಅವರ ಆಪ್ತ ರಾಜು ಸೇರಿದಂತೆ ಹಲವರ ಹೆಸರು ಉಲ್ಲೇಖಿಸಿದ್ದ ಈ…
ಮೈಸೂರು : ಮುಡಾ ಹಗರಣಕ್ಕೆ ಸಂಬಂಧಪಟ್ಟಂತೆ ED ಅಧಿಕಾರಿಗಳಿಂದ ಯಾವುದೇ ಕ್ಷಣದಲ್ಲಾದರೂ ಕೂಡ ಸಿಎಂ ಸಿದ್ದರಾಮಯ್ಯ ಹಾಗೂ ಅವರ ಪತ್ನಿ ಪಾರ್ವತಿ ಅವರಿಗೆ ಇಡಿ ಅಧಿಕಾರಿಗಳು ನೋಟಿಸ್ ನೀಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಹೌದು ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಚುರುಕುಗೊಳಿಸಿದ್ದ ಇಡಿ ಅಧಿಕಾರಿಗಳು ನಿನ್ನೆ ಪತ್ರಿಕ ಪ್ರಕಟಣೆ ಹೊರಡಿಸಿದ್ದು, ಪ್ರಕರಣಕ್ಕೆ ಸಂಬಂಧಪಟ್ಟಂತೆ ಈಗಾಗಲೇ 300 ಕೋಟಿ ಮೌಲ್ಯದ ಹಣ ಜಪ್ತಿ ಮಡಿಕೊಂಡಿದ್ದು, ಈ ಹಗರಣದಲ್ಲಿ ರಿಯಲ್ ಎಸ್ಟೇಟ್ ಉದ್ಯಮಿಗಳು, ರಾಜಕೀಯ ನಾಯಕರು ಸೇರಿ ಬೇರೆ ಬೇರೆ ವ್ಯಕ್ತಿಗಳು ಬೇನಾಮಿ ನಿವೇಶನ ಪಡೆದುಕೊಂಡಿರುವ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿತ್ತು. ಹಾಗಾಗಿ ಇದೀಗ ಯಾವುದೇ ಕ್ಷಣದಲ್ಲಾದರೂ ಕೂಡ ಸಿಎಂ ಸಿದ್ದರಾಮಯ್ಯ ಹಾಗೂ ಅವರ ಪತ್ನಿ ಪಾರ್ವತಿ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ.
ವಿಜಯಪುರ : ಶೀಘ್ರದಲ್ಲಿ ರಾಜ್ಯ ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಹೇಳಿಕೆ ನೀಡಿದ್ದಾರೆ. ಒಳ್ಳೆಯ ಅಧ್ಯಕ್ಷ ಆಗಬೇಕಾದರೆ ಚುನಾವಣೆ ಆಗಲಿ. ಬ್ಲಾಕ್, ತಾಲೂಕು & ಜಿಲ್ಲಾಧ್ಯಕ್ಷರ ಚುನಾವಣೆ ಪಾರದರ್ಶಕವಾಗಿರಲಿ. ನಮಗೆ ಓಟ್ ಹಾಕುವಂತೆ ಒತ್ತಾಯ ಹೇರುವಂತೆ ಇರಬಾರದು. ಇದಕ್ಕೆ ಅವಕಾಶ ನೀಡಬಾರದು ಎಂದು ಚೌಹಾಣ್ಗೆ ಮನವಿ ಮಾಡುತ್ತೇನೆ ಪ್ರತಿ ಜಿಲ್ಲೆಗೆ ಬೇರೆ ರಾಜ್ಯದ ಮುಖಂಡರನ್ನು ಉಸ್ತುವಾರಿಯನ್ನಾಗಿ ಮಾಡಿ ಎಂದು ಬಸನಗೌಡ ಪಾಟೀಲ್ ಯತ್ನಾಳ್ ಒತ್ತಾಯಿಸಿದರು. ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ವಿಜಯೇಂದ್ರ ಸ್ಪರ್ಧೆ ಮಾಡುವ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಪ್ರಜಾತಂತ್ರ ವ್ಯವಸ್ಥೆಯಲ್ಲಿ ಎಲ್ಲರಿಗೂ ಸ್ಪರ್ಧೆ ಮಾಡುವ ಅವಕಾಶವಿದೆ.ಸಾಮಾನ್ಯ ಕಾರ್ಯಕರ್ತರು ಕೂಡ ಸ್ಪರ್ಧೆ ಮಾಡಲಿ. ಚುನಾವಣೆಗೆ ನಾವು ಸಕಲ ಸಿದ್ಧತೆ ಮಾಡಿಕೊಂಡಿದ್ದೇವೆ ಎಂದು ವಿಜಯಪುರದಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ತಿಳಿಸಿದರು. ಇನ್ನು ರಾಜ್ಯಾಧ್ಯಕ್ಷ ಸ್ಥಾನಕ್ಕೆ ನೀವು ಸ್ಪರ್ಧಿಸುತ್ತೀರಾ ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು ಯಾರು…
ಚಿಕ್ಕಮಗಳೂರು : ತನ್ನ ಪತಿ ನನಗೆ ಮಾನಸಿಕ ಹಿಂಸೆ ನೀಡುತ್ತಿದ್ದೂ, ವರದಕ್ಷಿಣೆ ಕಿರುಕುಳ ನೀಡುತ್ತಿದ್ದಾನೆ. ಅಲ್ಲದೆ ಆತನಿಗೆ ಬೇರೆ ಮಹಿಳೆಯೊಂದಿಗೆ ಅನೈತಿಕ ಸಂಬಂಧ ಇದೆ ಎಂದು ಆರೋಪಿಸಿ ಚಿಕ್ಕಮಗಳೂರು ಜಿಲ್ಲೆಯ ಕಳಸ ಠಾಣೆಯ ಪಿಎಸ್ಐ ನಿತ್ಯಾನಂದ ಎನ್ನುವ ಅಧಿಕಾರಿಯ ಪತ್ನಿ ಇದೀಗ ದೂರು ನೀಡಿದ್ದಾರೆ. ಹೌದು ಪಿಎಸ್ಐ ನಿಂದ ಪತ್ನಿಯ ಮೇಲೆ ಹಲ್ಲೆ, ವರದಕ್ಷಿಣೆ ಕಿರುಕುಳ ಆರೋಪ ಕೇಳಿಬಂದಿದ್ದು, ಚಿಕ್ಕಮಗಳೂರು ಜಿಲ್ಲೆಯ ಕಳಸ ಠಾಣೆಯ ಪಿಎಸ್ಐ ನಿತ್ಯಾನಂದ ವಿರುದ್ಧ ಇದೀಗ ಎಫ್ಐಆರ್ ದಾಖಲಾಗಿದೆ. ಪಿಎಸ್ಐ ನಿತ್ಯಾನಂದ ಪತ್ನಿ ಅಮಿತಾ ದೂರು ಆಧರಿಸಿ ಇದೀಗ FIR ದಾಖಲಾಗಿದೆ. ಕಳಸ ಪೊಲೀಸ್ ಕ್ವಾರ್ಟರ್ಸ್ ನಲ್ಲಿ ಹಲ್ಲೆ ಮಾಡಿದ್ದಾನೆ ಎಂದು ಪಿಎಸ್ಐ ನಿಂದ ಮಾನಸಿಕ ಹಿಂಸೆ ನೀಡುತ್ತಾನೆ ಎಂದು ಆರೋಪಿಸಿದ್ದಾರೆ. ಅಲ್ಲದೇ ಬೇರೆ ಮಹಿಳೆಯೊಂದಿಗೆ ಆತ ಅನೈತಿಕ ಸಂಬಂಧ ಇಟ್ಟುಕೊಂಡಿದ್ದಾನೆ. ವರದಕ್ಷಿಣೆ ಕಿರುಕುಳ ನೀಡುತ್ತಿದ್ದಾನೆ ಎಂದು ಪಿ ಎಸ್ ಐ ವಿರುದ್ಧ ಪತ್ನಿ ಅಮಿತಾ ದೂರು ನೀಡಿದ್ದಾರೆ.ಪಿಎಸ್ಐ ನಿತ್ಯಾನಂದ ಸೇರಿ ಮುವರ ವಿರುದ್ಧ ಪತ್ನಿಮಿತ ಇದೀಗ…
ಬೆಂಗಳೂರು : ಬೆಂಗಳೂರಿನಲ್ಲಿ ಪ್ರೇಯಸಿಯನ್ನು ಪ್ರಿಯಕರನೊಬ್ಬ ವಿಷ ಹಾಕಿ ಕೊಂದಿದ್ದು ಇದೀಗ ಪೋಲೀಸರ ತನಿಖೆಯ ಬೆಳಕಿಗೆ ಬಂದಿದೆ. ಜನವರಿ 1 ರಂದು ಬೆಂಗಳೂರಿನ ಎಚ್ಎಎಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಒಂದು ಕೊಲೆ ನಡೆದಿದ್ದು, ಘಟನೆಯ ಬಳಿಕ ಪೊಲೀಸರು ಇದು ಅಸಹಜ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿದ್ದರು. ಆದರೆ ತನಿಖೆ ಕೈಗೊಂಡಾಗ ಪ್ರಿಯಕರನೇ ಪ್ರೇಯಸಿಗೆ ವಿಷ ನೀಡಿ ಕೊಲೆ ಮಾಡಿದ್ದಾನೆ ಎಂದು ಬಹಿರಂಗವಾಗಿದೆ.. ಹೌದು ಬೆಂಗಳೂರಿನ ಹೆಚ್ಎಎಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ದೀಪಂ ನಿವಾಸದ ಅಪಾರ್ಟ್ಮೆಂಟ್ ಜನೆವರಿ 1 ರಂದು ಈ ಒಂದು ಕೊಲೆಯಾಗಿದೆ. ಆದರೆ ಈಗ ಸಾವಿನ ಸೀಕ್ರೆಟ್ ಇದೀಗ ರಿವಿಲ್ ಆಗಿದೆ. ಮೃತಳನ್ನು ಉಜ್ಮಾ ಖಾನ್ ಎಂದು ತಿಳಿದುಬಂದಿದ್ದು, ಇನ್ನು ಪ್ರಿಯಕರನನ್ನು ಇಮ್ದಾದ್ ಭಾಷಾ ಎಂದು ತಿಳಿದುಬಂದಿದೆ. ಬೇರೆ ಬೇರೆ ಮದುವೆಯಾಗಿ ಇಬ್ಬರು ಡೈವೋರ್ಸ್ ಪಡೆದಿದ್ದರು. ಕುಂದಲಹಳಿಯ ಮನೆ ಒಂದರಲ್ಲಿ ಉಜ್ವಾ ಖಾನ್ ಮೃತಪಟ್ಟಿದ್ದಳು. ಈಕೆಯ ಪ್ರಿಯಕರ ಇಮ್ದಾದ್ ಭಾಷಾ ಆಕೆಗೂ ವಿಷ ನೀಡಿ ತಾನು ಕೂಡ ವಿಷ…
ಮೈಸೂರು : ಮುಡಾದಲ್ಲಿ ಅಕ್ರಮ ನಿವೇಶನಗಳ ಮಾರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಈ ಒಂದು ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಪ್ರಕರಣಕ್ಕೆ ಸಂಬಂಧಪಟ್ಟಂತೆ ಬೆಂಗಳೂರಿನ ಬಿಲ್ಡರ್ ಜಯರಾಮ್ ಅವರ ಮೊಬೈಲ್ ಅನ್ನು ಪರಿಶೀಲಿಸಿದ ED ಅಧಿಕಾರಿಗಳು, ಅವರ ಮೊಬೈಲಿನಿಂದ ಕೊಕೊನಟ್ ಕೋಡ್ ವರ್ಡ್ ನೋಡಿ ಅಧಿಕಾರಿಗಳೇ ಬೆಚ್ಚಿ ಬಿದ್ದಿದ್ದಾರೆ. ಹೌದು ಮುಡಾ ಹಗರಣಕ್ಕೆ ಸಂಬಂಧಪಟ್ಟಂತೆ ಕೋಟಿ ಕೋಟಿ ಕಳ್ಳ ವ್ಯವಹಾರಕ್ಕೆ ಕೋಕನಟ್ ಎಂದು ಕೋಡ್ ವರ್ಡ್ ಬಳಕೆ ಮಾಡಲಾಗಿತ್ತು. ಬೇನಾಮಿ ಡೀಲ್ ಗೆ ಬಿಲ್ಡರ್ ಜಯರಾಮ್ ಈ ಒಂದು ಕೋಡ್ ವರ್ಡ್ ಇಟ್ಟಿದ್ದ ಎಂದು ಇದೀಗ ಇಡೀ ಅಧಿಕಾರಿಗಳ ತನಿಖೆಯಲ್ಲಿ ಬಯಲಾಗಿದೆ. ED ಅಧಿಕಾರಿಗಳ ವಿಚಾರಣೆಯ ವೇಳೆ ಬಿಲ್ಡರ್ ಜಯರಾಮ್ ಅಸಲಿ ಸತ್ಯವನ್ನು ಬಾಯಿಬಿಟ್ಟಿದ್ದಾನೆ. ಅಧಿಕಾರಿಗಳಿಗೆ, ರಾಜಕಾರಣಿಗಳ ಜೊತೆಗೆ ಕೋಕನಟ್ ಸಂದೇಶದ ಮೂಲಕ ಬಿಲ್ಡರ್ ಜಯರಾಮ್ ಕೋಟ್ಯಾಂತರ ರೂಪಾಯಿ ವ್ಯವಹಾರ ನಡೆಸುತ್ತಿದ್ದ. 1 ಕೋಕನಟ್ ಅಂದರೆ 1 ಲಕ್ಷ, 50 ಕೋಕನಟ್ ಅಂದ್ರೆ 50 ಲಕ್ಷ ಎಂದು ಜಯರಾಮ್ ಕೊಕೊನಟ್ ಕೋಡ್…
ಬೆಂಗಳೂರು : ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ವಿಚಾರವಾಗಿ ರಾಜ್ಯ ಕಾಂಗ್ರೆಸ್ ಸಚಿವರ ಬಹಿರಂಗ ಹೇಳಿಕೆಯಿಂದ ಉಂಟಾಗಿದ್ದ ಗೊಂದಲಕ್ಕೆ ಇದೀಗ ಸ್ವತಃ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತೆರೆ ಎಳೆದಿದ್ದಾರೆ. ಎಲರೂ ಬಾಯಿ ಮುಚ್ಚಿಕೊಂಡು ಇರಬೇಕು ಎಂದು ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ವಾರ್ನಿಂಗ್ ನೀಡಿದ ಬೆನ್ನಲ್ಲೆ ಕೈ ನಾಯಕರು ಇದೀಗ ಫುಲ್ ಸೈಲೆಂಟಾಗಿದ್ದಾರೆ. ಇನ್ನು ಈ ವಿಚಾರವಾಗಿ ಬೆಂಗಳೂರಲ್ಲಿ ಮಲ್ಲಿಕಾರ್ಜುನ ಖರ್ಗೆ ಪುತ್ರ ಸಚಿವ ಪ್ರಿಯಾಂಕ್ ಖರ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ್ದು, ಮೊದಲು ಸಿದ್ದರಾಮಯ್ಯ ಡಿಕೆ ಶಿವಕುಮಾರ್ ಅವರು ಸೂಚಿಸಿದ್ದರು. ಅದನ್ನು ಎ ಐ ಸಿ ಸಿ ಅಧ್ಯಕ್ಷರು ಮತ್ತೆ ಪುನರುಜ್ಜಾರ ಮಾಡಿದ್ದಾರೆ ಅಷ್ಟೇ. ಯಾರ ಬಾಯಿಗೂ ಕೂಡ ಬೀಗ ಹಾಕಲು ಆಗಲ್ಲ. ವಿವೇಚನೆ ಬಳಸಿ ಮಾತನಾಡಬೇಕು. ಮಾತಿನಿಂದ ಪಕ್ಷಕ್ಕೆ ಹಾನಿಯಾಗುತ್ತಾ ಎಂದು ಯೋಚಿಸಬೇಕು. ಬಿ ಫಾರಂ ಕೊಡಲು ಪಕ್ಷ ಬೇಕು ಬಳಿಕ ಅಧ್ಯಕ್ಷರು ಯಾರು? ರಾಹುಲ್ ಗಾಂಧಿ ಯಾರು? ಹೈಕಮಾಂಡ್ ಏನು ಮಾಡುತ್ತದೆ ಅಂತ ಹೇಳುವುದು ಸರಿಯಲ್ಲ. ಸಿಎಂ, ಡಿಸಿಎಂ…
ಬೆಂಗಳೂರು : ಶಾಲಾ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ಡ್ರಗ್ಸ್ ಗಾಂಜಾ ಮಾರಾಟ ಮಾಡುತ್ತಿದ್ದ ಆಫ್ರಿಕಾ ಮೂಲದ ಡ್ರಗ್ ಪೆಡ್ಲರ್ ನನ್ನು ಇದೀಗ ಬೆಂಗಳೂರಿನ ಸೋಲದೇವನಹಳ್ಳಿ ಪೊಲೀಸರು ಅರೆಸ್ಟ್ ಮಾಡಿದ್ದು, ಆತನಿಂದ ಸುಮಾರು 48 ಲಕ್ಷಕ್ಕೂ ಹೆಚ್ಚಿನ ಗಾಂಜಾ ಹಾಗೂ ಡ್ರಗ್ಸ್ ಅನ್ನು ಜಪ್ತಿ ಮಾಡಿದ್ದಾರೆ. ಆಫ್ರಿಕಾ ಮೂಲದ ಡ್ರಗ್ ಪೆಡ್ಲರ್ ಬಂಧನವಾಗಿದ್ದು, ಬೆಂಗಳೂರಿನ ಉತ್ತರ ತಾಲೂಕಿನ ಚಿಕ್ಕಬಾಣಾವರದ ವಿನಾಯಕ ನಗರದಲ್ಲಿ ಆರೋಪಿಯನ್ನು ಅರೆಸ್ಟ್ ಮಾಡಲಾಗಿದೆ.ಸೋಲದೇವನಹಳ್ಳಿ ಪೊಲೀಸರಿಂದ ಆರೋಪಿ ಓಕೆಕೆ ಕ್ರಿಸ್ಟೋಫರ್ ಎನ್ನುವ ಆರೋಪಿಯನ್ನು ಸೆರೆ ಹಿಡಿದಿದ್ದಾರೆ. ಆತನಿಂದ 48 ಲಕ್ಷ ಮೌಲ್ಯದ 250 ಗ್ರಾಂ ಹೈಡ್ರೋ ಗಾಂಜಾ, ಹಾಗೂ 165 ಗ್ರಾಂ ಎಂಡಿಎಂಎ ಡ್ರಗ್ಸ್ ಅನ್ನು ಜಪ್ತಿ ಮಾಡಿದ್ದಾರೆ. ಈತ ಹೊರ ರಾಜ್ಯದ ವಿದ್ಯಾರ್ಥಿಗಳಿಗೆ ಆರೋಪಿ ಗಾಂಜಾ ಮಾರುತಿದ್ದ ಎನ್ನಲಾಗಿದೆ. ಈ ಕುರಿತು ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಉಡುಪಿ : ಕೆಲವೊಂದು ವಿಚಿತ್ರವಾದ ಅಂತಹ ಘಟನೆಗಳನ್ನು ನಾವು ನೋಡಿರುತ್ತೇವೆ. ಕೇಳಿರುತ್ತೇವೆ. ಅದರಂತೆ ಇದೀಗ ಇಲ್ಲೊಂದು ಅಂಥದ್ದೇ ವಿಚಿತ್ರವಾದ ಘಟನೆ ನಡೆದಿದ್ದು, ತಮ್ಮ ಸ್ವಂತ ಬಸ್ ಅನ್ನು ತಾವೇ ಮಾರಾಟ ಮಾಡಿ, ಬಳಿಕ ಅಪ್ಪ ಮಗ ಇಬ್ಬರು ಸೇರಿ ಅದೇ ಬಸ್ ಅನ್ನು ಕದ್ದಿರುವಂತಹ ವಿಚಿತ್ರವಾದಂತಹ ಘಟನೆ ಉಡುಪಿಯಲ್ಲಿ ನಡೆದಿದೆ.ಸದ್ಯ ತಂದೆ ಮಗನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ ಹೌದು ಅಪ್ಪ ಮಗ ತಮ್ಮ ಬಸ್ ಅನ್ನು ತುಮಕೂರಿನ ಉದ್ಯಮಿಯೊಬ್ಬರಿಗೆ ಸೇಲ್ ಮಾಡಿ ಮತ್ತೆ ಅದನ್ನು ಕದ್ದು ತಂದಿದ್ದರೆ. ತುಮಕೂರಿನ ಉದ್ಯಮಿ ಸೆಕೆಂಡ್ ಹ್ಯಾಂಡ್ ಬಸ್ ಖರೀದಿಸಿ ಇದೀಗ ಕಕ್ಕಾಬಿಕ್ಕಿಯಾಗಿದ್ದಾರೆ. ಈ ಕುರಿತು ಉಡುಪಿ ಜಿಲ್ಲೆಯ ಕಾಪುವಿನಲ್ಲಿ ತಂದೆ ಮಗನ ವಿರುದ್ಧ ಇದೀಗ ‘FIR’ ದಾಖಲಾಗಿದೆ. ತುಮಕೂರಿನ ಕೊರಟಗೆರಿಯ ಸೈಯದ್ ಎನ್ನುವವರು ಬಸ್ ಖರೀದಿಸಿದ್ದರು. ಕಾಪುವಿನ ಸಮೀರ್ ಮಾಲೀಕತ್ವದ ಬಸ್ ಅನ್ನು ಖರೀಸಿದಿದ್ದರು. ಸೈಯದ್ ಮಗ ಸಿದ್ದಿಕ್ ಹಾಗೂ ಸ್ನೇಹಿತ ಜಾವೇದ ಜೊತೆ ಬಸ್ ಖರೀದಿಗೆ ಹೋಗಿದ್ದರು. 9,50,000 ನೀಡಿ ಬಸ್ ಖರೀದಿಸಿದ್ದರು.…













