Author: ಸುರೇಶ್‌

"ಕನ್ನಡ ನ್ಯೂಸ್ ನೌ ಜಾಲತಾಣದ ಮುಖ್ಯ ಸಂಪಾದಕರಾದ ಸುರೇಶ್ ಅವರು ಕಳೆದ 4 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದಾರೆ. ಸರ್ಕಾರದ ಯೋಜನೆಗಳು, ಶಿಕ್ಷಣ ಮತ್ತು ಪ್ರಚಲಿತ ವಿದ್ಯಮಾನಗಳನ್ನು ಸಾಮಾನ್ಯ ಜನರಿಗೂ ಅರ್ಥವಾಗುವಂತೆ ವಿವರಿಸುವುದು ಇವರ ವಿಶೇಷತೆ. ಈ ಮೊದಲು ವಿವಿಧ ವೆಬ್‌ಸೈಟ್‌ಗಳಲ್ಲಿ ನಾಗರಿಕ ಸಮಸ್ಯೆಗಳ ಬಗ್ಗೆ ವರದಿಗಾರರಾಗಿ ಕೆಲಸ ಮಾಡಿರುವ ಇವರು, ಸಮಯೋಚಿತ ಹಾಗೂ ವಿಶ್ವಾಸಾರ್ಹ ಮಾಹಿತಿ ನೀಡುವ ಮೂಲಕ ಓದುಗರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಡಿಜಿಟಲ್ ಸಾಕ್ಷರತೆ ಇವರ ನೆಚ್ಚಿನ ವಿಷಯಗಳಲ್ಲೊಂದು

ಬೆಂಗಳೂರು : ಕನ್ನಡ ಸಾಹಿತ್ಯ ಪರಿಷತ್ ನಲ್ಲಿ ಹಣಕಾಸಿನ ವಿಚಾರದಲ್ಲಿ ವ್ಯವಹಾರದಲ್ಲಿ ಭಾರಿ ಅಕ್ರಮ ನಡೆದಿದ್ದು, ಶೀಘ್ರದಲ್ಲೆ ಕನ್ನಡ ಸಾಹಿತ್ಯ ಪರಿಷತ್ತು ಸೂಪರ್ ಸೀಡ್ ಮಾಡಲು ರಾಜ್ಯ ಸರ್ಕಾರ ಚಿಂತನೆ ನಡೆಸುತ್ತಿದೆ. ಕನ್ನಡ ಸಾಹಿತ್ಯ ಪರಿಷತ್ ಕಸಾಪ ಆಡಳಿತಾಧಿಕಾರಿ ನೇಮಕಕ್ಕೆ ಸರ್ಕಾರ ಇದೀಗ ಚಿಂತನೆ ನಡೆಸುತ್ತಿದೆ. ಹಾಗಾಗಿ ಹಾಲಿ ಅಧ್ಯಕ್ಷರಾಗಿರುವ ಮಹೇಶ್ ಜೋಶಿ ಅವರ ಅಧ್ಯಕ್ಷ ಸ್ಥಾನಕ್ಕೆ ಕುತ್ತು ಬರುವ ಸಾಧ್ಯತೆ ಇದೆ. ಹೌದು ಕನ್ನಡ ಸಾಹಿತ್ಯ ಪರಿಷತ್ ನಲ್ಲಿ ಆರ್ಥಿಕ ಅವ್ಯವಹಾರ ತನಿಖೆಗೆ ವಿಚಾರಣಾಧಿಕಾರಿ ನೇಮಕ ಮಾಡಿತ್ತು. ತನಿಖೆಗೆ ವಿಚಾರಣಾಧಿಕಾರಿ ನೇಮಿಸಿ ಸಹಕಾರ ಇಲಾಖೆ ಆದೇಶ ಹೊರಡಿಸಿತ್ತು. 2002 ರಿಂದ ಇಲ್ಲಿಯ ತನಕ ನಿರಂತರವಾಗಿ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಕೋಟ್ಯಾಂತರ ರೂಪಾಯಿ ಹಣಕಾಸಿನ ಅವ್ಯವಹಾರ ನಡೆದಿವೆ ಎನ್ನುವ ಗಂಭೀರವಾದ ಆರೋಪ ಕೇಳಿ ಬಂದಿದೆ. ಅದಕ್ಕೆ ಸಂಬಂಧಪಟ್ಟಂತೆ ಸಹಕಾರ ಇಲಾಖೆ ವಿಚಾರಣಾಧಿಕಾರಿ ನೇಮಕ ಮಾಡಿದ್ದು ವಿಚಾರಣೆ ಬಳಿಕ ಆಡಿಟ್ ವರದಿಗಳನ್ನು ಸರ್ಕಾರ ಪಡೆದುಕೊಂಡಿತ್ತು. ಹಿರಿಯ ಅಧಿಕಾರಿಗಳಿಂದ ಆಡಿಟ್ ಪರಿಶೀಲನೆ ಆದ ಬಳಿಕ…

Read More

ಹಾಸನ : ಹಾಸನದಲ್ಲಿ ನಿನ್ನೆ ರಾತ್ರಿ ನಿಗೂಢವಾದ ಸ್ಪೋಟ ಸಂಭವಿಸಿ ಹಲವರು ಗಂಭೀರವಾಗಿ ಗಾಯಗೊಂಡಿದ್ದ ಘಟನೆ ನಡೆದಿತ್ತು. ನಿಗೂಢ ಸ್ಫೋಟಕ್ಕೆ ಸ್ಥಳೀಯ ನಿವಾಸಿಗಳಲ್ಲಿ ಆತಂಕ ಸೃಷ್ಟಿಯಾಗಿದೆ. ನಿಗೂಢ ಸ್ಫೋಟ ಸಿಡಿದು ದುರಂತ ಸಂಭವಿಸಿರುವ ಅನುಮಾನ ವ್ಯಕ್ತವಾಗಿದೆ. ಹಾಸನ ಜಿಲ್ಲೆಯ ಆಲೂರು ಪಟ್ಟಣದಲ್ಲಿ ಸ್ಪೋಟಕ್ಕೆ ಇಡೀ ಮನೆ ಛಿದ್ರ ಛಿದ್ರವಾಗಿದೆ. ಮನೆಯಲ್ಲಿದ್ದ ಸಿಲಿಂಡರ್ ನಿಂದ ಯಾವುದೇ ಅನಿಲ ಸೋರಿಕೆ ಆಗಿಲ್ಲ. ಅಥವಾ ಗ್ಯಾಸ್ ಗೀಸರ್ ಕೂಡ ಹಿಡಿದಿಲ್ಲ ಅನ್ನುವ ಬಗ್ಗೆ ಸದ್ಯ ಹಾಸನ ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಇದೀಗ ಬಯಲಾಗಿದೆ.ಇನ್ನು ಸ್ಫೋಟದ ಕುರಿತು ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ.

Read More

ಬೆಂಗಳೂರು : ಮಹಿಳೆಯೊಬ್ಬರ ಖಾಸಗಿ ವಿಡಿಯೋ ಇಟ್ಟುಕೊಂಡು ಬ್ಲ್ಯಾಕ್ ಮಾಡುತ್ತಿರುವ ಆರೋಪದ ಹಿನ್ನೆಲೆ ಇದೀಗ ಇಬ್ಬರ ವಿರುದ್ಧ ಬೆಂಗಳೂರಿನ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದೆ. ರೌಡಿ ಅರಸಯ್ಯನ ಗ್ಯಾಂಗ್‌ನಲ್ಲಿ ಗುರುತಿಸಿಕೊಂಡಿರುವ ಶೂಟ್ ಗಿರಿ ಹಾಗೂ ಸ್ವರೂಪ್ ಎಂಬವರ ವಿರುದ್ಧ ಪ್ರಕರಣ ದಾಖಲಾಗಿದೆ. 2022ರಲ್ಲಿ ಸ್ವರೂಪ್ ಎಂಬಾತನಿಗೆ ಫೇಸ್‌ಬುಕ್‌ನಲ್ಲಿ ಮಹಿಳೆ ಪರಿಚಯವಾಗಿದ್ದಳು. ನಂತರ ಮಹಿಳೆ ಬಳಿ ಸ್ವರೂಪ್, ಕಷ್ಟ ಎಂದು ಹೇಳಿಕೊಂಡು, 4 ಲಕ್ಷ ರೂ. ಹಣ ಪಡೆದಿದ್ದ. ಮಹಿಳೆ ಹಣ ವಾಪಸ್ ಕೇಳಿದಾಗ ಆಕೆಯ ಖಾಸಗಿ ವೀಡಿಯೋ ಹಾಗೂ ಫೋಟೋ ಇಟ್ಟುಕೊಂಡು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವುದಾಗಿ ಬೆದರಿಕೆ ಹಾಕಿದ್ದ. ನೊಂದ ಮಹಿಳೆ ಪೊಲೀಸ್‌ ಠಾಣೆಗೆ ದೂರು ಕೊಡಲು ಮುಂದಾದಾಗ ಶೂಟ್ ಗಿರಿ ಹಣ ಕೊಡುವುದಾಗಿ ಮಹಿಳೆಯನ್ನು ತಡೆದಿದ್ದ. ಬಳಿಕ ಹಣ ಕೊಡದೇ, ಸ್ವರೂಪ್‌ ನಮ್ಮ ಹುಡುಗ ಅವನ ತಂಟೆಗೆ ಬಂದ್ರೆ ಸರಿ ಇರಲ್ಲ ಎಂದು ಬೆದರಿಕೆ ಹಾಕಿದ್ದ ಎಂದು ಆರೋಪಿಸಲಾಗಿದೆ. ಅಲ್ಲದೇ ವೀಡಿಯೋ ಹರಿಬಿಡುವುದಾಗಿ ಬೆದರಿಕೆ ಹಾಕಿದ್ದರು ಎನ್ನಲಾಗಿದೆ.

Read More

ಬೆಂಗಳೂರು : ರಾಜ್ಯದಲ್ಲಿ ಈಗಾಗಲೇ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆ ಆರಂಭವಾಗಿದ್ದು, ಮೊದಲೆರಡು ದಿನಗಳ ಕಾಲ ಸರ್ವರ್ ಹಾಗೂ ಮೊಬೈಲ್ನಲ್ಲಿ ಹಲವು ತಾಂತ್ರಿಕ ದೋಷಗಳು ಕಂಡು ಬಂದಿದ್ದವು. ಆದರೆ ಇದೀಗ ಜಾತಿ ಗಣತಿ ಸಮೀಕ್ಷೆ ವೇಗ ಪಡೆದುಕೊಂಡಿದೆ. ಈ ವಿಚಾರವಾಗಿ ಗೃಹ ಸಚಿವ ಜಿ ಪರಮೇಶ್ವರ್ ಪ್ರತಿಕ್ರಿಯ ನೀಡಿದ್ದು, ನಿಗದಿತ ಸಮಯದೊಳಗೆ ಜಾತಿಗಣತಿ ಸಮೀಕ್ಷೆ ಪೂರ್ಣಗೊಳಿಸುತ್ತೇವೆ ಎಂದು ತಿಳಿಸಿದರು. ಬೆಂಗಳೂರನಲ್ಲಿ ಮಾತನಾಡಿದ ಅವರು, ಜಾತಿ ಗಣತಿ ಬಗ್ಗೆ ಗೊಂದಲದ ಹೇಳಿಕೆ ಕೊಡಬೇಡಿ ಎಂದು ಬಿಜೆಪಿಯವರಿಗೆ ಮನವಿ ಮಾಡಿದರು. ಈ ಸಮೀಕ್ಷೆಯ ಮೂಲಕ ಸಮುದಾಯಗಳ ಸ್ಥಿತಿ-ಗತಿ ಗೊತ್ತಾಗುತ್ತದೆ. ಸಮೀಕ್ಷೆಯಿಂದ ಇನ್ನೇನು ದುರ್ಬಳಕೆ ಮಾಡಿಕೊಳ್ಳಲು ಸಾಧ್ಯ? ಕೇಂದ್ರ ಸರ್ಕಾರವು ಜಾತಿಗಣತಿ ಮಾಡುತ್ತದೆ ಆಗ ಗತಿಯಲ್ಲಿ ಭಾಗವಹಿಸಲು ಅಂದರೆ ಗೊಂದಲ ಆಗಲ್ವಾ? ರಾಜ್ಯ ಬಿಜೆಪಿ ನಾಯಕರು ಇದನ್ನು ಅರ್ಥ ಮಾಡಿಕೊಳ್ಳಬೇಕು.ನಿಗದಿತ ಸಮಯದೊಳಗೆ ಸಮೀಕ್ಷೆ ಮುಗಿಸುತ್ತೇವೆ. ತುಮಕೂರು ಜಿಲ್ಲೆಯಲ್ಲೂ ಕೂಡ ಸಮೀಕ್ಷೆ ವೇಗ ಪಡೆದುಕೊಂಡಿದೆ ಎಂದು ತಿಳಿಸಿದರು. ಇನ್ನು ನಿಗಮ ಮಂಡಳಿ ನೇಮಕದಲ್ಲಿ ಪರಿಷ್ಕರಣೆಯಾದ ವಿಚಾರವಾಗಿ…

Read More

ಹುಬ್ಬಳ್ಳಿ : ಸಮಾಜದಲ್ಲಿ ಎಂತೆಂತಹ ವಿಕೃತ ಮನಸ್ಸು ಹೊಂದಿರುವವರು, ಕಾಮುಕಗಳು ಇರುತ್ತಾರೆ ಎಂದರೆ ಹುಬ್ಬಳ್ಳಿಯಲ್ಲಿ ಬೆಚ್ಚಿ ಬೀಳಿಸುವಂತಹ ಘಟನೆ ಇದೀಗ ನಡೆದಿದೆ ಕಾಮುಕನೊಬ್ಬ ತಡರಾತ್ರಿ ಮನೆಗಳಿಗೆ ನುಗ್ಗಿ, ಮಹಿಳೆಯರ ಒಳಉಡುಪು ಕದ್ದು ಪರಾರಿಯಾಗಿರುವ ಘಟನೆ ವರದಿಯಾಗಿದೆ. ಹೌದು ಹುಬ್ಬಳ್ಳಿಯಲ್ಲಿ ಮಹಿಳೆಯರ ಒಳಉಡುಪು ಕಳ್ಳತನ ನಡೆದಿದೆ. ಸಿಸಿಟಿವಿ ಕ್ಯಾಮೆರಾದಲ್ಲಿ ಸೈಕೋಪಾತ್ ಕೃತ್ಯ ಸೆರೆಯಾಗಿದೆ. ಹುಬ್ಬಳ್ಳಿಯ ವೀರಾಪುರ ಓಣಿಯಲ್ಲಿ ಈ ಒಂದು ಘಟನೆ ನಡೆದಿದೆ. ರಾತ್ರಿ ಕಳ್ಳಬೆಕ್ಕಿನಂತೆ ಬಂದು ಕಿರಾತಕ ಒಳಉಡುಪು ಕದ್ದಿದ್ದಾನೆ. ಕೇವಲ ಮಹಿಳೆಯರ ಒಳಉಡುಪು, ಕದಿಯುತ್ತಿದ್ದ ಕಾಮುಕ ಪರಾರಿಯಾಗುತ್ತಿದ್ದ. ಇದೀಗ ಕಾಮುಕನ ಬಂಧನಕ್ಕೆ ಸ್ಥಳೀಯರು ಆಗ್ರಹಿಸಿದ್ದಾರೆ.

Read More

ಚಿಕ್ಕಮಗಳೂರು : ರಾಜ್ಯದ ಪ್ರತಿಷ್ಠಿತ ದೇವಾಲಯಗಳ ಹೆಸರಿನಲ್ಲಿ ನಕಲಿ ವೆಬ್ಸೈಟ್ ತೆರೆದು ಕೋಟ್ಯಾಂತರ ರೂಪಾಯಿ ವಂಚನೆ ಎಸಗುತ್ತಿದ್ದ ತೆಲಂಗಾಣ ಮೂಲದ ಇಬ್ಬರು ಆರೋಪಿಗಳನ್ನು ಇದೀಗ ಚಿಕ್ಕಮಂಗಳೂರು ಸೆನ್ ಠಾಣೆ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಹೊರನಾಡು ಅನ್ನಪೂರ್ಣೇಶ್ವರಿ ದೇವಾಲಯ, ಶೃಂಗೇರಿ ಮಠ ಸೇರಿದಂತೆ ರಾಜ್ಯದ ಪ್ರತಿಷ್ಠಿತ ದೇವಾಲಯಗಳ ಪ್ರಸಾದ, ಪೂಜ್ಯ ಹೆಸರಲ್ಲಿ ಈ ಇಬ್ಬರು ಆರೋಪಿಗಳು ನಕಲಿ ವೆಬ್ಸೈಟ್ ಓಪನ್ ಮಾಡಿ, ಹಣ ಪಡೆದು ವಂಚನೆ ಎಸಗುತ್ತಿದ್ದರು. ಹಣ ಪಡೆದು ವಂಚನೆ ಎಸಗುತ್ತಿದ್ದ ತೆಲಂಗಾಣದ ಮೂಲದ ಇಬ್ಬರು ಆರೋಪಿಗಳನ್ನ ಅರೆಸ್ಟ್ ಮಾಡಲಾಗಿದೆ. ತೆಲಂಗಾಣ ಮೂಲದ ಸುದೀಪ್ ಮತ್ತು ಅನಿಲ್ ಕುಮಾರ್ ಬಂಧಿತ ಆರೋಪಿಗಳು. ಚಿಕ್ಕಮಗಳೂರು ಸೆನ್ ಪೊಲೀಸ್ ಠಾಣೆ ಡಿವೈಎಸ್ಪಿ ನೇತೃತ್ವದಲ್ಲಿ ಅರೆಸ್ಟ್ ಮಾಡಲಾಗಿದೆ. www.devaraseve.com ಹೆಸರಿನಲ್ಲಿ ಪ್ರತಿಷ್ಠಿತ ದೇವಾಲಯಗಳ ಹೆಸರು ಬಳಕೆ ಮಾಡುತ್ತಿದ್ದರು. ರಾಜ್ಯ ಮತ್ತು ದೇಹದ ಪ್ರತಿಷ್ಠಿತ ದೇಗುಲಗಳ ಬಗ್ಗೆ ವೆಬ್ಸೈಟ್ನಲ್ಲಿ ಪೋಸ್ಟ್ ಹಂಚಿಕೊಳ್ಳುತ್ತಿದ್ದು, ವಿಶೇಷ ಪೂಜೆ, ಪ್ರಸಾದ ಮತ್ತು ವಿಶೇಷ ಸೇವೆ ಹೆಸರಿನ ಲಿಂಕ್ ಅಲ್ಲಿ ವಂಚನೆ ಎಸಗುತ್ತಿದ್ದರು.…

Read More

ಬೆಂಗಳೂರು : ಬೆಂಗಳೂರಲ್ಲಿ ಘೋರವಾದ ದುರಂತ ಒಂದು ಸಂಭವಿಸಿದ್ದು, ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಪತ್ನಿಯನ್ನು ಕೊಂದ ಬಳಿಕ ಪತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದಲ್ಲಿ ತಡವಾಗಿ ಬೆಳಕಿಗೆ ಬಂದಿದೆ. ಮಂಜು (27) ಕೊಲೆಯಾದ ಪತ್ನಿ ಧರ್ಮಶೀಲನ್ (29) ಆತ್ಮಹತ್ಯೆಗೆ ಶರಣಾದ ಪತಿ ಎಂದು ತಿಳಿದುಬಂದಿದೆ. ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕೊಲೆಯಾದ ಮಹಿಳೆ ತಂದೆ ದೂರು ನೀಡಿದ್ದು, ಪೆರಿಯಸ್ವಾಮಿ ಅವರು ಮೂಲತಃ ತಮಿಳುನಾಡಿನವರು. ನಗರದ ಉಲ್ಲಾಳು ಮುಖ್ಯರಸ್ತೆಯಲ್ಲಿ ಕುಟುಂಬಸಮೇತ ವಾಸವಾಗಿದ್ದರು. ಇವರ ನಾಲ್ವರು ಹೆಣ್ಣು ಮಕ್ಕಳ ಪೈಕಿ ಎರಡನೇ ಮಗಳಾದ ಮಂಜು ಅವರಿಗೆ 2022ರಲ್ಲಿ ಧರ್ಮಶೀಲನ್ ಎಂಬಾತನೊಂದಿಗೆ ಮದುವೆ ಮಾಡಲಾಗಿತ್ತು. ಮದುವೆಯ ಬಳಿಕ ಧರ್ಮಶೀಲನ್ ದುಬೈನಲ್ಲಿ ಕೆಲಸ ಮಾಡುತ್ತಿದ್ದರೆ, ಮಂಜು ನಗರದ ಖಾಸಗಿ ಆಸ್ಪತ್ರೆಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಸೆ.28ರಂದು ನನ್ನ ತಂಗಿಯ ಮಗ ಪ್ರಶಾಂತ್ ಜೊತೆ ಮಗಳ ಮನೆಗೆ ಹೋದಾಗ ಬಾಗಿಲು ಹಾಕಿತ್ತು. ನಿರಂತರವಾಗಿ ಬಾಗಿಲು ಬಡಿದರೂ ಪ್ರತಿಕ್ರಿಯೆ ಬರದ ಕಾರಣ ಮತ್ತೊಂದು ಕೀ ಮೂಲಕ ಬೀಗ ತೆರೆದು ಒಳಗೆ ಪ್ರವೇಶಿಸಿದಾಗ…

Read More

ಗದಗ : ಗದಗ ತಹಸೀಲ್ದಾರ್ ಕಚೇರಿಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆದಿದ್ದು, ಬೆಟಿಗೇರಿಯ ನಾಡಕಚೇರಿ ಉಪ ತಹಸೀಲ್ದಾರ್ ಅಮಾನತುಗೊಳಿಸಿ ಜಿಲ್ಲಾಧಿಕಾರಿ ಈ ಕುರಿತು ಆದೇಶ ಹೊರಡಿಸಿದ್ದಾರೆ. ತಹಸಿಲ್ದಾರ್ ಕಚೇರಿಗೆ ಕಾನೂನು ಸಚಿವ ಹೆಚ್ ಕೆ ಪಾಟೀಲ್ ಏಕಾಏಕಿ ಭೇಟಿ ನೀಡಿದ್ದರು. ಕಾನೂನು ಸಚಿವ ಹೆಚ್ ಕೆ ಪಾಟೀಲ್ ದಿಢೀರ್ ಭೇಟಿ ನೀಡಿದ್ದ ವೇಳೆ, ಪತಿ ಬದುಕಿದ್ದರು ಸಹ ವಿಧವಾ ವೇತನ ಮಂಜೂರು ಮಾಡಿದ ಹಿನ್ನೆಲೆಯಲ್ಲಿ, ಪರಿಶೀಲನೆ ವೇಳೆ ದಾಖಲೆ ಸಮೇತ ಅಧಿಕಾರಿ ಸಿಕ್ಕಾಕಿಕೊಂಡಿದ್ದಾರೆ. ಕೂಡಲೇ ಅಧಿಕಾರಿ ಅಮಾನತು ಗೊಳಿಸುವಂತೆ ಸಚಿವ HK ಪಾಟೀಲ್ ಸೂಚನೆ ನೀಡಿದ್ದಾರೆ. ಸಚಿವರ ಸೂಚನೆಯ ಮೇರೆಗೆ ಇದೀಗ ತಹಶೀಲ್ದಾರ್ ಸಸ್ಪೆಂಡ್ಡ್ ಮಾಡಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.

Read More

ರಾಮನಗರ : ರಾಜ್ಯದಲ್ಲಿ ಈಗಾಗಲೇ ಸಾಮಾಜಿಕ ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಆರಂಭವಾಗಿದ್ದು, ಸಮೀಕ್ಷೆ ಮೊದಲ ದಿನದಿಂದಲೇ ಸರ್ವರ್ ಹಾಗೂ ಮೊಬೈಲ್ ತಾಂತ್ರಿಕ ದೋಷಗಳು ಕಂಡುಬಂದಿದ್ದವು. ಹೀಗಾಗಿ ಸಮೀಕ್ಷೆ ಸ್ವಲ್ಪ ಕುಂಠಿತವಾಗಿತ್ತು. ಆದರೆ ಇನ್ನೊಂದಡೆ ಶಿಕ್ಷಕಿ ಒಬ್ಬರು ಕೇವಲ 7 ದಿನಗಳಲ್ಲಿ ಶೇ. 100ರಷ್ಟು ಸಮೀಕ್ಷೆ ಪೂರ್ಣಗೊಳಿಸಿದ್ದಾರೆ. ಹೌದು ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಅಂಬಾಡಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿರುವ ಶಾಂತಮ್ಮ ಅವರು ರಾಜ್ಯ ಸರ್ಕಾರದಿಂದ ಕೈಗೊಳ್ಳಲಾಗಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಕಾರ್ಯವನ್ನು ಕೇವಲ 7 ದಿನಗಳಲ್ಲಿಯೇ ಪೂರ್ಣಗೊಳಿಸಿ ಶೇ.100ರಷ್ಟು ಸಾಧನೆ ಮಾಡಿದ್ದಾರೆ. ಇಂದು ಅವರನ್ನು ಜಿಲ್ಲಾಡಳಿತದ ವತಿಯಿಂದ ಜಿಲ್ಲಾಧಿಕಾರಿ ಯಶವಂತ್ ವಿ. ಗುರುಕರ್ ಅವರು ತಮ್ಮ ಕಚೇರಿಯಲ್ಲಿ ಅಭಿನಂದಿಸಿ, ವೈಯಕ್ತಿವಾಗಿ 1,001 ರೂ.ಗಳ ನಗದು ಬಹುಮಾನ ನೀಡಿ ಶ್ರೀಮತಿ ಶಾಂತಮ್ಮ ಅವರ ಕಾರ್ಯವನ್ನು ಪ್ರಶಂಸಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಅಭಿನಂದನಾ ಪತ್ರ ಸಹ ನೀಡಿದ್ದಾರೆ. ಸಮೀಕ್ಷೆಯಲ್ಲಿ ನೀವು ತೋರಿದ ಆಸಕ್ತಿ, ಉತ್ಸಾಹ ಮತ್ತು ಪ್ರಾಮಾಣಿಕ ಪ್ರಯತ್ನವು…

Read More

ಚಿಕ್ಕಬಳ್ಳಾಪುರ : ರಾಜ್ಯದಲ್ಲಿ ಸಾಮಾಜಿಕ ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆ ನಡೆಯುತ್ತಿದ್ದು, ಈ ಒಂದು ಶೈಕ್ಷಣಿಕ ಸಮೀಕ್ಷೆಗೆ ಸರ್ಕಾರಿ ಶಾಲೆಯ ಶಿಕ್ಷಕರನ್ನು ನೇಮಿಸಲಾಗಿದೆ. ಇದೀಗ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿಯಲ್ಲಿ ಸಮೀಕ್ಷೆ ನಡೆಸುವಾಗಲೇ ಮುಖ್ಯ ಶಿಕ್ಷಕರೊಬ್ಬರು ಹೃದಯಾಘಾತದಿಂದ ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆ ವರದಿಯಾಗಿದೆ. ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿಯಲ್ಲಿ ಹೆಚ್. ಎಂ ರಾಮಕೃಷ್ಣಪ್ಪ (57) ಎನ್ನುವ ಮುಖ್ಯ ಶಿಕ್ಷಕ ಸಾವನ್ನಪ್ಪಿದ್ದಾರೆ. ರಾಮಕೃಷ್ಣಪ್ಪ ಅವರು ದಿಗಬಕೋಟೆ ಗ್ರಾಮದ ಶಾಲೆಯ ಮುಖ್ಯ ಶಿಕ್ಷಕರಾಗಿದ್ದಾರೆ. ಚಿಂತಾಮಣಿಯ 25ನೇ ವಾರ್ಡ್ನಲ್ಲಿ ಸಮೀಕ್ಷೆ ವೇಳೆ ಅವರಿಗೆ ಏಕಾಏಕಿ ಹೃದಯಾಘಾತ ಆಗಿದೆ ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಿತ್ತಾದರು, ಚಿಕಿತ್ಸೆ ಫಲಿಸದೇ ಹೆಚ್ ಎಂ ರಾಮಕೃಷ್ಣಪ್ಪ ಸಾವನಪ್ಪಿದ್ದಾರೆ. ಕೆಲಸದ ಒತ್ತಡದಿಂದ ಹೃದಯಘಾತವಾಗಿದೆ ಎಂದು ಸಂಬಂಧಿಕರು ಆರೋಪಿಸಿದ್ದಾರೆ.

Read More