Author: kannadanewsnow05

ದೊಡ್ಡಬಳ್ಳಾಪುರ : ದೊಡ್ಡಬಳ್ಳಾಪುರದಲ್ಲಿ ಘೋರ ಘಟನೆ ನಡೆದಿದ್ದು, ಒಣಗಲು ಹಾಕಲಾಗಿದ್ದ ಬಟ್ಟೆಯನ್ನ ತೆಗೆಯಲು ಹೋದ ತಾಯಿ ಹಾಗೂ ತಾಯಿಯನ್ನ ಉಳಿಸಲು ಹೋದ ಮಗನಿಗೂ ವಿದ್ಯುತ್ ಸ್ವರ್ಶಿಸಿ ಮೃತಪಟ್ಟಿದ್ದಾರೆ. ಮತ್ತೊಂದು ಕಡೆ ತಾಯಿ ಮತ್ತು ಅಣ್ಣನನ್ನ ರಕ್ಷಿಸಲು ಮುಂದಾಗ ತಂಗಿಗೂ ವಿದ್ಯುತ್ ತಗುಲಿದೆ. ವಿದ್ಯುತ್ ಅವಘಡದಲ್ಲಿ ತಾಯಿ – ಮಗ ದುರಂತ ಸಾವನ್ನಪ್ಪಿದ್ದು, ಗಾಯಗೊಂಡ ಮಗಳನ್ನು ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ದೊಡ್ಡಬಳ್ಳಾಪುರ ತಾಲೂಕಿನ ಕಾರನಾಳ ಗ್ರಾಮದಲ್ಲಿ ಇಂದು ರಾತ್ರಿ ಘಟನೆ ನಡೆದಿದ್ದು, ವಿದ್ಯುತ್ ಅವಘಡದಲ್ಲಿ ತಾಯಿ ಲಲಿತಮ್ಮ (55), ಮಗ ಸಂಜಯ್ (35) ಸಾವನ್ನಪ್ಪಿದ್ದಾರೆ. ವಿದ್ಯುತ್ ಸ್ವರ್ಶದಿಂದ ಸುಟ್ಟಗಾಯಕ್ಕೆ ತುತ್ತಾಗಿರುವ ಮಗಳು ಲಕ್ಷ್ಮೀದೇವಿ(32)ಯನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ರಾಮನಗರ : ಕಳೆದ ಕೆಲವು ತಿಂಗಳ ಹಿಂದೆ ಮಂಡ್ಯ ಮೈಸೂರು ಭಾಗದಲ್ಲಿ ಸಾವಿರಾರು ಹೆಣ್ಣು ‘ಭ್ರೂಣ ಹತ್ಯೆ’ ಪ್ರಕರಣ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿತ್ತು. ಇದೀಗ ರಾಮನಗರ ಜಿಲ್ಲೆಯಲ್ಲಿ ಭ್ರೂಣ ಲಿಂಗ ಪತ್ತೆ ಮಾಡಿರುವ ಆರೋಪದ ಹಿನ್ನೆಲೆಯಲ್ಲಿ ಜಿಲ್ಲಾಸ್ಪತ್ರೆಯಲ್ಲಿನ ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ ಸೆಂಟರ್ ಅನ್ನು ಸೀಜ್ ಮಾಡಲಾಗಿದೆ. ಹೌದು ಬೆಂಗಳೂರು ತಾತಗುಣಿ ಮೂಲದ ಪೋಷಕರಿಗೆ ಎರಡು ಹೆಣ್ಣು ಮಕ್ಕಳಿದ್ದು, ಮೂರನೇಯದು ಹೆಣ್ಣಾಗುತ್ತಿದೆ. ಆ ಮಗು ನಮಗೆ ಬೇಡ ಎಂದು ಪೋಷಕರು ಭ್ರೂಣ ಲಿಂಗ ಪತ್ತೆ ಮತ್ತು ಹತ್ಯೆ ಮಾಡಿಸಿದ್ದಾರೆ ಎಂದು ತಿಳಿದು ಬಂದಿದೆ. ಇದರ ಬೆನ್ನಲ್ಲೆ ಬೆಂಗಳೂರು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಇಲಾಖೆ ಉಪನಿರ್ದೇಶಕ ಡಾ.ವಿವೇಕ್ ದೊರೈ ಅವರು ಸ್ಕ್ಯಾನಿಂಗ್ ಕೇಂದ್ರವನ್ನು ಸೋಮವಾರ ಸಂಜೆ ಸೀಜ್ ಮಾಡಿದ್ದಾರೆ. ಈ ಘಟನೆಯಿಂದಾಗಿ ಭ್ರೂಣ ಪತ್ತೆ ಹಾಗೂ ಹತ್ಯೆ ಜಾಲ ರಾಮನಗರದಲ್ಲಿಯೂ ಸಕ್ರಿಯವಾಗಿರುವ ಅನುಮಾನಗಳು ದಟ್ಟವಾಗಿದೆ.

Read More

ಬೆಂಗಳೂರು : ರಾಜ್ಯದಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಪಂಚ ಗ್ಯಾರಂಟಿಗಳನ್ನು ಜಾರಿಗೊಳಿಸಿದೆ. ಇವುಗಳಲ್ಲಿ ಗೃಹಲಕ್ಷ್ಮಿ ಯೋಜನೆ ಕೂಡ ಒಂದಾಗಿದ್ದು, ಈ ಯೋಜನೆ ಅಡಿಯಲ್ಲಿ ಪ್ರತಿ ತಿಂಗಳು ಪ್ರತಿ ಮನೆ ಯಜಮಾನಿ ಬ್ಯಾಂಕ್‌ ಖಾತೆಗೆ 2,000 ರೂಪಾಯಿ ಹಾಕಲಾಗುತ್ತಿದೆ. ಈಗಾಗಲೇ ಗೃಹಲಕ್ಷ್ಮೀಯರ ಖಾತೆಗೆ 21ನೇ ಕಂತಿನ ಹಣ ಬಿಡುಗಡೆ ಮಾಡಲಾಗಿದೆ. ಇನ್ನು 22ನೇ ಕಂತಿನ ಹಣವನ್ನು ನಾಳೆ ಆಗಸ್ಟ್‌ 27ರ ಗಣೇಶ ಹಬ್ಬದಂದು ಬಿಡುಗಡೆ ಮಾಡುವ ಸಾಧ್ಯತೆಯಿದೆ. ಯಾಕಂದ್ರೆ 21ನೇ ಕಂತಿನ ಹಣವನ್ನು ವರಮಹಾಲಕ್ಷ್ಮೀ ಹಬ್ಬದಂದೇ ಹಾಕಲಾಗಿತ್ತು. ಇನ್ನು 23 ಹಾಗೂ 24ನೇ ಕಂತಿನ ಹಣ ಬಿಡುಗಡೆ ಯಾವಾಗ ಎನ್ನುವ ಪ್ರಶ್ನೆ ಬಹುತೇಕ ಮಂದಿಯ ಪ್ರಶ್ನೆಯಾಗಿದೆ. ಇದಕ್ಕೂ ಮುಂಚೆ ಯಾರಿಗೆಲ್ಲಾ ಎಷ್ಟು ಕಂತಿನ ಹಣ ಬಂದಿದೆ ಎನ್ನುವ ಮಹತ್ವದ ಮಾಹಿತಿಯನ್ನು ತಿಳಿಯುವುದೇಗೆ ಎಂದು ಇಲ್ಲಿ ನೀಡಲಾಗಿದೆ. ಪ್ರಸ್ತುತ ಈ ಯೋಜನೆ ಅಡಿಯಲ್ಲ ಅರ್ಹ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಹಣವನ್ನು ಜಮಾ ಮಾಡಲಾಗುತ್ತಿದೆ. ಅರ್ಹರ ಫಲಾನುಭವಿಗಳ ಖಾತೆಗೆ ಆಗಸ್ಟ್ 14ರಿಂದ 20ರ…

Read More

ಬೆಂಗಳೂರು : ಗ್ರೇಟರ್ ಬೆಂಗಳೂರು ಪ್ರಾಧಿಕಾರಕ್ಕೆ ರಾಜ್ಯ ಸರ್ಕಾರ ಕೊನೆಗೂ ಅಧ್ಯಕ್ಷ ಉಪಾಧ್ಯಕ್ಷರ ನೇಮಕ ಮಾಡಿದೆ. ರಾಜ್ಯ ಸರ್ಕಾರ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ಪದನಿಮಿತ್ತ ಸದಸ್ಯರನ್ನು ಇದೀಗ ನೇಮಕ ಮಾಡಿದೆ. ಅಧ್ಯಕ್ಷರಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಾಧ್ಯಕ್ಷರಾಗಿ ಡಿಸಿಎಂ ಡಿಕೆ ಶಿವಕುಮಾರ್ ನೇಮಕ ಮಾಡಲಾಗಿದೆ. ಕೇಂದ್ರದಲ್ಲಿನ ಬೆಂಗಳೂರಿನ ಸಚಿವರು, ರಾಜ್ಯ ಸರ್ಕಾರದ ಬೆಂಗಳೂರು ಸಚಿವರು, ಬೆಂಗಳೂರಿನ ಸಂಸದರು, ಶಾಸಕರು, ಎಂಎಲ್‌ಸಿಗಳು ಪದನಿಮಿತ್ತ ಸದಸ್ಯರಾಗಿ ನೇಮಕ ಮಾಡಲಾಗಿದೆ. ಸದಸ್ಯರಾಗಿ ವಿಧಾನ ಪರಿಷತ್ ಸದಸ್ಯ ಡಾ. ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ ನೀಡಲಾಗಿದೆ. ಜಿಬಿಎ ಮುಖ್ಯ ಆಯುಕ್ತರು ಪದ ನಿಮಿತ್ತ ಸದಸ್ಯ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿದೆ. ಜಿಬಿಎ ವ್ಯಾಪ್ತಿಯ 5 ಪಾಲಿಕೆಗಳ ಮೇಯರ್, ಆಯುಕ್ತರು, ಪದನಿಮಿತ್ತ ಸದಸ್ಯರು, ಅಧ್ಯಕ್ಷ, ಉಪಾಧ್ಯಕ್ಷ ಹಾಗು ಪದನಿಮಿತ್ತ ಸದಸ್ಯರು ಸೇರಿದಂತೆ ಒಟ್ಟು 75 ಜನರನ್ನು ಸರ್ಕಾರ ನೇಮಕ ಮಾಡಿದೆ.

Read More

ಬೆಂಗಳೂರು : ರಾಜ್ಯದಲ್ಲಿ ಇನ್ನು ಸಹ ಜೀತ ಪದ್ಧತಿ ಜೀವಂತವಾಗಿದ್ದು, ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ಅತ್ತಿಬೆಲೆ ಗುಂಜೂರು ಬಳಿ 8 ಬಾಲಕರು ಸೇರಿದಂತೆ 35 ಕಾರ್ಮಿಕರನ್ನು ರಕ್ಷಿಸಲಾಗಿದೆ. ಅತ್ತಿಬೆಲೆ ಹೋಬಳಿಯ ಉಪ ತಹಸೀಲ್ದಾರ್ ನವೀನ್ ಕುಮಾರ್ ಹಾಗು ಕಾರ್ಮಿಕ ಇಲಾಖೆ ಅಧಿಕಾರಿಗಳು, ಪೊಲೀಸ್ NGO ಸಿಬ್ಬಂದಿ ದಾಳಿ ಮಾಡಿದ್ದಾರೆ. ಹೌದು ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ಅತ್ತಿಬೆಲೆ ಗುಂಜೂರು ಬಳಿ 8 ಬಾಲಕರು ಸೇರಿದಂತೆ 35 ಕಾರ್ಮಿಕರನ್ನು ರಕ್ಷಿಸಲಾಗಿದೆ. ತೆಲಂಗಾಣದ ವನಪರ್ತಿ ಜಿಲ್ಲೆಯಿಂದ 36 ಕಾರ್ಮಿಕರನ್ನು ಕರೆತಂದಿದ್ರು. ಗುತ್ತಿಗೆದಾರ ಹಣ ನೀಡಿ ಕಾರ್ಮಿಕರನ್ನು ಖರೀದಿಸಿ ಜೀತಕ್ಕೆ ಕರೆತಂದಿದ್ದ. ಅತ್ತಿಬೆಲೆ, ಗುಂಜೂರು ಭಾಗದಲ್ಲಿ 2 ಗುಂಪುಗಳಾಗಿ ಇರಿ ಜೀತ ಪದ್ಧತಿ ನಡೆಸಲಾಗುತ್ತಿತ್ತು. ಅತ್ತಿಬೆಲೆ ಬಳಿ ಮೂವರು ಬಾಲಕರು ಸೇರಿದಂತೆ 11 ಕಾರ್ಮಿಕರನ್ನು ರಕ್ಷಣೆ ಮಾಡಲಾಗಿದೆ. ಇನ್ನು ಗುಂಜೂರು ಗ್ರಾಮದ ಬಳಿ 24 ಕಾರ್ಮಿಕರನ್ನು ರಕ್ಷಣೆ ಮಾಡಲಾಗಿದೆ. ರಾಮನಾಗಪ್ಪ ಶೆಟ್ಟಿ ಇನ್ಸ್ಪಾಸ್ಟೈಕ್ಚರ್ ಕಂಪನಿಯಲ್ಲಿ ಜೀತದಾಳಾಗಿ ಕೆಲಸ ಮಾಡುತ್ತಿದ್ದರು. ಯಾಕೂಬ್ ಎಂಬಾತ…

Read More

ಚಾಮರಾಜನಗರ : ಧರ್ಮಸ್ಥಳದಲ್ಲಿ ಶವ ಹೂತು ಹಾಕಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಅರೆಸ್ಟ್ ಆದಂತ ಚಿನ್ನಯ್ಯನ 2ನೇ ಹೆಂಡತಿ ಪ್ರತಿಕ್ರಿಯೆ ನೀಡಿದ್ದು, ನನ್ನ ಗಂಡ ಒಳ್ಳೆಯವರು, ಅವರ ಬಂಧನ ವಿಷಯ ಟಿವಿ ಮೂಲಕವೇ ತಿಳಿಯಿತು. ಚಿನ್ನಯ್ಯ ಒಳ್ಳೆಯವರು, ನಾವು ಕ್ರೈಸ್ತ ಧರ್ಮಕ್ಕೆ ಮತಾಂತರ ಆಗಿಲ್ಲ ಎಂದು ಧರ್ಮಸ್ಥಳ ಪ್ರಕರಣದಲ್ಲಿ ಬಂಧಿತನಾಗಿರುವ ಚಿನ್ನಯ್ಯನ ಎರಡನೇ ಪತ್ನಿ ಮಲ್ಲಿಕಾ ಹೇಳಿದರು. ತಮಿಳುನಾಡಿನ ಸತ್ಯಮಂಗಲಂ ತಾಲೂಕಿನ ಗ್ರಾಮವೊಂದರಲ್ಲಿ ಮಾತನಾಡಿದ ಅವರು, ಮೊದಲನೇ ಪತ್ನಿ ತೊರೆದು 6 ವರ್ಷದ ಬಳಿಕ ಅವರು ನನ್ನನ್ನು ವಿವಾಹವಾಗಿದ್ದರು. ವಿವಾಹದ ಸಂದರ್ಭದಲ್ಲಿ ಧರ್ಮಸ್ಥಳದ ಮ್ಯಾನೇಜರ್ ಒಬ್ಬರು ಚಿನ್ನಯ್ಯ ಒಳ್ಳೆಯವನು ಎಂದು ಲೆಟರ್ ಕೂಡ ಕೊಟ್ಟಿದ್ದರು. ನಾನೂ ಕೂಡ ಚಿನ್ನಯ್ಯನ ಜೊತೆ ಧರ್ಮಸ್ಥಳದಲ್ಲಿ ಸ್ವಚ್ಛ ಕಾರ್ಮಿಕಳಾಗಿ ಕೆಲಸ ನಿರ್ವಹಿಸುತ್ತಿದ್ದೆ ಎಂದರು. ಬಳಿಕ, ಧರ್ಮಸ್ಥಳದ ಕೆಲಸ ಬಿಟ್ಟು ತಮಿಳುನಾಡಿನಲ್ಲಿ 8 ವರ್ಷಗಳಿಂದ ವಾಸವಿದ್ದು ಕಳೆದ 2 ತಿಂಗಳಿನ ಹಿಂದೆ ಕೆಲಸಕ್ಕೆಂದು ಹೋದವರನ್ನು ಟಿವಿಯಲ್ಲೇ ನಾನು ನೋಡಿದ್ದು ಎಂದು ಕಣ್ಣೀರಿಟ್ಟರು. ನನ್ನ ಗಂಡ ಯಾವ ತಪ್ಪೂ ಮಾಡಿಲ್ಲ…

Read More

ದಕ್ಷಿಣಕನ್ನಡ : ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತು ಹಾಕಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಎಸ್ಐಟಿ ಅಧಿಕಾರಿಗಳು ಚೆನ್ನಯ್ಯನನ್ನು ಅರೆಸ್ಟ್ ಮಾಡಿ ತೀವ್ರ ತನಿಖೆ ನಡೆಸಿದ್ದಾರೆ ಅಲ್ಲದೆ ಇಂದು ಮಹೇಶ ಶೆಟ್ಟಿ ಮನೆಯಲ್ಲಿ ಚಿನ್ನಯ್ಯನ ಮೊಬೈಲ್ ಪತ್ತೆ ಮಾಡಿದ್ದು ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ ಇದೀಗ ಈ ಒಂದು ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್ ಸಿಕ್ಕಿದ್ದು, ಚಿನ್ನಯ ಇದು ಹೆಣ್ಣುಮಗಳ ತಲೆ ಬುರುಡೆ ಎಂದು ತಂದುಕೊಟ್ಟಿದ್ದ. ಇದೀಗ ಎಫ್ಎಸ್ಎಲ್ ವರದಿಯಲ್ಲಿ ಇದು ಪುರುಷರ ತಲೆ ಬುರುಡೆ ಎಂದು ಬೆಳಕಿಗೆ ಬಂದಿದೆ. ಹೌದು ಚಿನ್ನಯ್ಯ ತಂದ ಬುರುಡೆಯ ಎಫ್ ಎಸ್ ಎಲ್ ವರದಿ ಅಂಶ ಬಯಲಾಗಿದ್ದು FSL ಪರೀಕ್ಷೆಯಲ್ಲಿ ಸ್ಪೋಟಕವಾದ ಮಾಹಿತಿ ಬಯಲಾಗಿದೆ. ಅತ್ಯಾಚಾರ ಮಾಡಿ ಹೂತು ಹಾಕಿದ್ದೇನೆ ಅಂತ ಹೇಳಿದ್ದ ಅದು ಹೆಣ್ಣು ಮಗಳ ತಲೆ ಬುರುಡೆ ಅಂತ ಚಿನ್ನಯ ಹೇಳಿದ್ದ ಆದರೆ ಅದು ಪುರುಷನ ತಲೆ ಬುರುಡೆ ಎಂದು ತಿಳಿದುಬಂದಿದೆ. 25ರಿಂದ 30 ವರ್ಷದ ವ್ಯಕ್ತಿಯ ತಲೆ ಬುರುಡೆ ಎಂದು ವರದಿಯಲ್ಲಿ ತಿಳಿದು ಬಂದಿದೆ.

Read More

ಬೆಂಗಳೂರು : ಬೆಂಗಳೂರಲ್ಲಿ ಆಗಾಗ ನಮ್ಮ ಮೆಟ್ರೋ ಹಳಿಗೆ ಬಿದ್ದು ಆತ್ಮಹತ್ಯೆ ಮಾಡಿ ಕೊಳ್ಳುವವರ ಪ್ರಕರಣಗಳು ನಡೆದಿದೆ ಇದೀಗ ಮೆಟ್ರೋ ನಿಲ್ದಾಣದಲ್ಲಿ ಸಿಬ್ಬಂದಿ ಒಬ್ಬರು ಆಯತಪ್ಪಿ ಹಳಿಗೆ ಬಿದ್ದಿರುವ ಘಟನೆ ಬೆಂಗಳೂರಿನ ರಾಗಿಗುಡ್ಡ ಮೆಟ್ರೋದಲ್ಲಿ ನಡೆದಿದೆ. ಹೌದು ರಾಗಿ ಗುಡ್ಡ ಮೆಟ್ರೋ ಸ್ಟೇಷನ್ ನಲ್ಲಿ ಮೆಟ್ರೋ ಸಿಬ್ಬಂದಿ ಒಬ್ಬರು ಹಾಗೆ ಹಳಿಯ ಸಮೀಪ ನಡೆದುಕೊಂಡು ಹೋಗುವಾಗ ಆಯತಪ್ಪಿ ಮೆಟ್ರೋ ಹಳಿಯ ಮೇಲೆ ಬೀಳುತ್ತಾರೆ ಇದನ್ನು ನೋಡಿದ ತಕ್ಷಣ ಅಲ್ಲಿಯೇ ಇದ್ದ ಪ್ರಯಾಣಿಕನೊಬ್ಬ ಸಿಬ್ಬಂದಿಯನ್ನು ಕೈಹಿಡಿದು ಮೇಲಕ್ಕೆ ಎತ್ತುತ್ತಾನೆ. ಅದೃಷ್ಟಶಾತ್ ಈ ವೇಳೆ ಮೆಟ್ರೋ ರೈಲು ಸಂಚರಿಸಿಲ್ಲ. ಸಿಬ್ಬಂದಿ ಬಿದ್ದಾಗ ಮೆಟ್ರೋ ರೈಲ್ವೆ ಏನಾದ್ರು ಬಂದಿದ್ದರೆ ಸಿಬ್ಬಂದಿ ಜೀವಕ್ಕೆ ಅಪಾಯವಿತ್ತು. ಇದೀಗ ಈ ಒಂದು ವಿಡಿಯೋ ವೈರಲಾಗಿದೆ. https://twitter.com/DarshanDevaiahB/status/1960033278666457400?t=pox86QbO9Ym7p9z24EuFdA&s=19

Read More

ಬೆಂಗಳೂರು : ಬಾನು ಮುಷ್ತಾಕ್ ದಸರಾ ಉದ್ಘಾಟನೆಗೆ ಬಿಜೆಪಿ ವಿರೋಧ ವ್ಯಕ್ತಪಡಿಸುತ್ತಿರುವ ವಿಚಾರವಾಗಿ ಬೆಂಗಳೂರಿನಲ್ಲಿ ಕಾಂಗ್ರೆಸ್ ನಾಯಕ ಬಿಕೆ ಹರಿಪ್ರಸಾದ್ ಪ್ರತಿಕ್ರಿಯೆ ನೀಡಿದ್ದು ಬಾನು ಮುಷ್ತಾಕ್ ಅಂತವರು ದಸರಾ ಉದ್ಘಾಟನೆ ಮಾಡಿದರೆ ಸ್ವಾಗತ ಪ್ರಗತಿಪರ ಚಿಂತಕರು ಮತ್ತು ಹೋರಾಟಗಾರ್ತಿಯಾಗಿದ್ದಾರೆ. ವಿರೋಧ ಮಾಡುವ ಬಿಜೆಪಿಯವರ ಮನಸ್ಥಿತಿ ಗೊತ್ತಾಗುತ್ತದೆ ಮಹಿಳೆಯರನ್ನು ಬಿಜೆಪಿ ಅವರು ಯಾವತ್ತೂ ಒಪ್ಪುವುದಿಲ್ಲ ಪಾನಕ ಕೋಸಂಬರಿ ತಿಂದುಕೊಂಡಿರುವುದೇ ಒಳ್ಳೆಯದು ಎಂದು ಬಿಕೆ ಹರಿಪ್ರಸಾದ್ ಕಿಡಿ ಕಾರಿದ್ದಾರೆ. ಆರ್ ಎಸ್ ಎಸ್ ಗೀತೆ ಹಾಡಿದ್ದಕ್ಕೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಕ್ಷಮೆ ಕೇಳಿದ ವಿಚಾರವಾಗಿ ಡಿಸಿಎಂ ಆಗಿ ಗೀತೆ ಹೇಳಿದರೆ ತಪ್ಪಿಲ್ಲ ಪಕ್ಷದ ಅಧ್ಯಕ್ಷರಾಗಿ ಹೇಳಿದ್ದು ಗೀತೆ ಹೇಳಿದ್ದು ತಪ್ಪು ಡಿಕೆ ಶಿವಕುಮಾರ್ ನಾನು ಕಾಂಗ್ರೆಸ್ ಪಕ್ಷವನ್ನು ಕಟ್ಟಿದ್ದಲ್ಲ ಸುಮಾರು ದಶಕಗಳ ಹಿಂದೆ ಯಾರೂ ಕಟ್ಟಿದ ಪಕ್ಷ ಇದು. ತ್ರಿವರ್ಣ ಧ್ವಜದ ವಿರುದ್ಧ ವಿರುವವರು ಬಿಜೆಪಿ ಅವರು ಎಂದು ಆಕ್ರೋಶ ಹೊರಹಾಕಿದರು. ನಾನು ಕಾಂಗ್ರೆಸ್ ಕಾರ್ಯಕರ್ತನಾಗಿ ಆ ರೀತಿ ಹೇಳಬಾರದು. ಕೆ ಎನ್ ರಾಜಣ್ಣ…

Read More

ಬೆಂಗಳೂರು : ವಿಧಾನಸಭೆಯಲ್ಲಿ ಆರ್​ಎಸ್​ಎಸ್​ ಗೀತೆ ಹಾಡಿದ ವಿಚಾರವಾಗಿ ಕಾಂಗ್ರೆಸ್​​ನ ಅನೇಕ ನಾಯಕರು ಡಿಕೆ ಶಿವಕುಮಾರ್ ವಿರುದ್ಧ ಪರೋಕ್ಷವಾಗಿ ಟೀಕೆ ಮಾಡಿದ್ದರು. ರೀ ವಿಚಾರವಾಗಿ ಇಂದು ಪತ್ರಿಕಾಗೋಷ್ಠಿ ನಡೆಸಿದ ಡಿಸಿಎಂ ಡಿಕೆ ಶಿವಕುಮಾರ್ ಆರ್ ಎಸ್ ಎಸ್ ಗೀತೆ ಹಾಡಿದ್ದಕ್ಕೆ ಕ್ಷಮೆಯಾಚಿಸಿದ್ದಾರೆ. ನಾನು ಹುಟ್ಟಿದ್ದೇ ಕಾಂಗ್ರೆಸ್ಸಿಗನಾಗಿ. ನಾನು ಸಾಯುವುದೂ ಕಾಂಗ್ರೆಸ್ಸಿಗನಾಗಿಯೇ. ನನ್ನ ಪಕ್ಷ ನಿಷ್ಠೆಯನ್ನು ಪ್ರಶ್ನಿಸುವವರು ಮೂರ್ಖರು. ವಿಧಾನಸಭೆಯಲ್ಲಿ ಆಚಾರ ವಿಚಾರಗಳನ್ನು ಪಾಲನೆ ಮಾಡಿಕೊಂಡು ಬಂದಿದ್ದೇನೆ. ವಿದ್ಯಾರ್ಥಿ ಸಂಘಟನೆಯಲ್ಲಿಂದಲೇ ಗುರುತಿಸಿಕೊಂಡು ಬಂದಿದ್ದೇನೆ. ಹೊಸದಾಗಿ ಕಾಂಗ್ರೆಸ್ ಸೇರಿಲ್ಲ, ಯಾರ ಪಾಠವೂ ಅಗತ್ಯವಿಲ್ಲ. ನನಗೂ ಗಾಂಧಿ ಕುಟುಂಬಕ್ಕೂ ಭಕ್ತ ಭಗವಂತನ ನಡುವಿರುವ ಸಂಬಂಧ. ನಾನು ಎಂಎ ಪೊಲೀಟಿಕಲ್ ವಿದ್ಯಾರ್ಥಿ ಎಂದರು. ರಾಜಕಾರಣಕ್ಕೆ ಬರೋದಕ್ಕಿಂತಲೂ ಮುನ್ನ ಎಲ್ಲಾ ಪಕ್ಷಗಳ ಅಧ್ಯಯನ ಮಾಡಿದ್ದೇನೆ. ಕಮ್ಯೂನಿಸಂ, ಬಿಜೆಪಿ, ಆರ್​​ಎಸ್​​ಎಸ್, ದಳ ಎಲ್ಲ ಪಕ್ಷಗಳ ಬಗ್ಗೆ ತಿಳಿದಿದ್ದೇನೆ. ಮುಸ್ಲಿಂ ಲೀಗ್ ಸಮಾವೇಶದಲ್ಲೂ ಭಾಗಿಯಾಗಿದ್ದೆ. ಅವರ ಶಿಸ್ತಿಗೆ ಬೆರೆಗಾಗಿದ್ದೆ ಎಂದು ಡಿಕೆ ಶಿವಕುಮಾರ್ ಹೇಳಿದರು. ಅಲ್ಲದೆ, ಬೇಕಾದರೆ ಕ್ಷಮೆ ಕೇಳೋಣ. ಬಿಕೆ…

Read More