Subscribe to Updates
Get the latest creative news from FooBar about art, design and business.
Author: kannadanewsnow05
ಶಿವಮೊಗ್ಗ : ಶಿವಮೊಗ್ಗದಲ್ಲಿ ಬೆಳ್ಳಂಬೆಳಗ್ಗೆ ಭೀಕರವಾದ ಅಪಘಾತ ಸಂಭವಿಸಿದ್ದು, ಕೆಎಸ್ಆರ್ಟಿಸಿ ಬಸ್ ಕ್ಯಾಂಟರ್ ನಡುವೆ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಬಸ್ಸಿನಲ್ಲಿದ್ದ 30ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಂಭೀರವಾದ ಗಾಯಗಳಾಗಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಹೊಂಬಾಳು ಬಳಿ ಈ ಒಂದು ಭೀಕರ ಅಪಘಾತ ಸಂಭವಿಸಿದೆ. ಹೌದು ಕೆಎಸ್ಆರ್ಟಿಸಿ ಬಸ್ ಮತ್ತು ಕ್ಯಾಂಟರ್ ನಡುವೆ ಮುಖಾಮುಖಿ ಡಿಕ್ಕಿ ಹೊಡೆದಿದ್ದು, ಈ ವೇಳೆ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ 30ಕ್ಕೂ ಹೆಚ್ಚು ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಗೊಂಡ ಪ್ರಯಾಣಿಕರಿಗೆ ಕೂಡಲೇ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಅಪಘಾತದ ಕುರಿತು ಆನಂದಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇನ್ನಷ್ಟು ಮಾಹಿತಿಯನ್ನು ನಿರೀಕ್ಷಿಸಲಾಗುತ್ತಿದೆ.
ಬೆಂಗಳೂರು : ಇಡೀ ದೇಶದಲ್ಲಿ ಹಿಂದುಳಿದ ವರ್ಗಗಳ ಅತಿ ದೊಡ್ಡ ನಾಯಕ ಅಂದರೆ ಮುಖ್ಯಮಂತ್ರಿ ಸಿದ್ದರಾಮಯ್ಯ. ಸಿಎಂ ಸಿದ್ದರಾಮಯ್ಯ ಎಂದೂ ಕೂಡ ರಾಷ್ಟ್ರ ರಾಜಕಾರಣಕ್ಕೆ ಬರಲ್ಲ ಎಂದು ಒಬಿಸಿ ಘಟಕದ ಸದಸ್ಯ ಹಾಗು ಕಾಂಗ್ರೆಸ್ MLC ಬಿಕೆ ಹರಿಪ್ರಸಾದ್ ಹೇಳಿಕೆ ನೀಡಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ದೇಶದಲ್ಲಿ ರಾಹುಲ್ ಗಾಂಧಿ ಮಾತ್ರ ಹಿಂದುಳಿದವರ ಮಾತಾಡುತ್ತಿರುವುದು. ದೇಶದಲ್ಲಿ ಓಬಿಸಿ ನಾಯಕ ಸಿಎಂ ಆಗಿರುವುದು ಸಿದ್ದರಾಮಯ್ಯ ಒಬ್ಬರೇ. ರಾಹುಲ್ ಗಾಂಧಿಗೆ ಬೆಂಬಲ ನೀಡಲು ಸಿದ್ದರಾಮಯ್ಯ ದೆಹಲಿಗೆ ತೆರಳುತ್ತಿದ್ದಾರೆ. ಸಿದ್ದರಾಮಯ್ಯನವರ ಕಾರ್ಯಕ್ರಮಗಳು ಜನರಿಗೆ ಮುಟ್ಟಿದೆ ಈ ವರ್ಚಸ್ಸು ಬಳಸಿಕೊಂಡು ಧೈರ್ಯ ತುಂಬ ಕೆಲಸ ಆಗುತ್ತದೆ ಎಂದು ಎಂಎಲ್‌ಸಿ ಬಿಕೆ ಹರಿಪ್ರಸಾದ್ ತಿಳಿಸಿದರು. ಇಡೀ ದೇಶದಲ್ಲಿ ದೊಡ್ಡ ಹಿಂದುಳಿದ ನಾಯಕರು ಅಂದರೆ ಸಿಎಂ ಸಿದ್ದರಾಮಯ್ಯ ಇವರ ವರ್ಚಸ್ಸನ್ನು ಬಳಸಿಕೊಂಡು ಕಾಂಗ್ರೆಸ್ ಪಕ್ಷದ ಬೇರೆ ಕಾರ್ಯಕರ್ತರಿಗೂ ಸಹ ಒಂದು ಧೈರ್ಯ ತುಂಬುವ ಕೆಲಸ ಕಾಂಗ್ರೆಸ್ ಪಕ್ಷ ಸಕ್ರಿಯವಾಗಿ ಮಾಡುತ್ತಿದೆ ದೇಶದಲ್ಲಿ ಇರುವಂತಹ ಜನಸಾಮಾನ್ಯರ ನಾಯಕ ಎಂದು ರಾಜ್ಯಗಳಲ್ಲಿ ಗುರುತಿಸಿಕೊಂಡು…
ಬಾಗಲಕೋಟೆ : ಬಾಗಲಕೋಟೆ ಜಿಲ್ಲೆಯ ಕೂಡಲಸಂಗಮದ ಪಂಚಮಸಾಲಿ ಪೀಠಾಧ್ಯಕ್ಷರಾಗಿರುವ ಜಯ ಮೃತ್ಯುಂಜಯ ಶ್ರೀ ಆಹಾರದಲ್ಲಿ ವಿಷ ಹಾಕಿದ ಅನುಮಾನ ಆರೋಪದ ಕುರಿತಂತೆ ಶಾಸಕ ಬೆಲ್ಲದ್ ಆರೋಪಕ್ಕೆ ವಿಜಯಾನಂದ ಕಾಶಪ್ಪನವರು ಪ್ರತಿಕ್ರಿಯೆ ನೀಡಿದ್ದು, ಅರವಿಂದ ಬೆಲ್ಲದ್ ನನಗೆ ಈ ವಿಚಾರವಾಗಿ ಕರೆ ಮಾಡಿ ಕ್ಷಮೆಯಾಚನೆ ಮಾಡಿದ್ದಾರೆ ಎಂದು ತಿಳಿಸಿದರು. ಬಾಗಲಕೋಟೆಯಲ್ಲಿ ಮಾತನಾಡಿದ ಕಾಶಪ್ಪನವರ್ , ಅರವಿಂದ ಬೆಲ್ಲದ್ ನನಗೆ ಈ ವಿಚಾರವಾಗಿ ಕರೆ ಮಾಡಿ ಕ್ಷಮೆಯಾಚನೆ ಮಾಡಿದ್ದಾರೆ. ಜಯ ಮೃತ್ಯುಂಜಯ ಶ್ರೀಗಳಿಗೆ ಶ್ರೀಗಳಿಗೆ ವಿಷ ಪ್ರಾಶನ ಅಂತ ತಪ್ಪು ಕಲ್ಪನೆಯಿಂದ ನಾನು ಹೇಳಿಬಿಟ್ಟೆ ಕ್ಷಮೆ ಇರಲಿ ಎಂದು ಬೆಲ್ಲದ ಹೇಳಿದರು. ಬಾಯಿಗೆ ಬಂದಂಗೆ ಮಾತನಾಡಿದರೆ ಬಗ್ಗುತ್ತಾನೆ ಅಂದುಕೊಂಡಿರಬಹುದು. ಅರವಿಂದ್ ಬೆಲ್ಲದ ಅವರು ವಿರೋಧ ಪಕ್ಷದ ಉಪನಾಯಕ. ತನಿಖೆಗೆ ಒಂದು ಸಮಿತಿ ಮಾಡಿ ಅಂತ ಮೊನ್ನೆ ಹೇಳಿದ್ದೇನೆ. ನನ್ನ ಕೈಯಲ್ಲಿ ಕೆಲಸ ಮಾಡುತ್ತಿದ್ದ ಜಾಫರ್ ಹಾಗೂ ಮಾಲತೇಶ್ ಇಬ್ಬರು ಹುಡುಗರನ್ನು ಮಠ ಕಾಯಲು ಹಾಕಿದ್ದೆ. ಬಾಗಲಕೋಟೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರಲ್ಲ ಸ್ವಾಮೀಜಿಗಳು, ಅಲ್ಲಿಗೆ ಹೋಗಿ…
🕉️,ಭೀಮನ ಅಮಾವಾಸ್ಯೆ,🕉️ 🌑,ಭೀಮನ ಅಮಾವಾಸ್ಯೆ ಒಂದು ಹಿಂದೂ ಹಬ್ಬವಾಗಿದ್ದು, ಇದನ್ನು ಆಷಾಢ ಮಾಸದ ಅಮಾವಾಸ್ಯೆಯಂದು ಆಚರಿಸಲಾಗುತ್ತದೆ.ಈ ಹಬ್ಬವನ್ನು”ಜ್ಯೋತಿರ್ಭೀಮೇಶ್ವರವ್ರತ”ಎಂದುಸಹಕರೆಯಲಾಗುತ್ತದೆ.ಈ ದಿನ, ವಿವಾಹಿತ ಮಹಿಳೆಯರುತಮ್ಮಗಂಡಂದಿರ ಆಯುಷ್ಯ, ಆರೋಗ್ಯ ಮತ್ತು ಯೋಗಕ್ಷೇಮಕ್ಕಾಗಿ ಉಪವಾಸ ಮಾಡುತ್ತಾರೆ ಮತ್ತು ಶಿವ ಮತ್ತು ಪಾರ್ವತಿಯನ್ನುಪೂಜಿಸುತ್ತಾರೆ. ಅವಿವಾಹಿತ ಹುಡುಗಿಯರು ಉತ್ತಮಗಂಡನನ್ನುಪಡೆಯಲು ಈ ಹಬ್ಬವನ್ನು ಆಚರಿಸುತ್ತಾರೆ. ಭೀಮನ ಅಮಾವಾಸ್ಯೆಯ ಆಚರಣೆಗಳು:, 🕉️,ಉಪವಾಸ:- ಮಹಿಳೆಯರು ಉಪವಾಸ ಮಾಡುತ್ತಾರೆ, 🕉️,ಪೂಜೆ:- ಶಿವ ಮತ್ತು ಪಾರ್ವತಿಯನ್ನು ಪೂಜಿಸಲಾಗುತ್ತದೆ,ವಿಶೇಷ ವಾಗಿಜ್ಯೋತಿರ್ಭೀಮೇಶ್ವರ ರೂಪದಲ್ಲಿ, 🕉️,ಗೌರಿ ದಾರ:- 9 ಗಂಟುಗಳಿರುವ ಗೌರಿ ದಾರವನ್ನು ಪೂಜಿಸಿ, ನಂತರ ಕೈಗೆ ಕಟ್ಟಿಕೊಳ್ಳುತ್ತಾರೆ, 🕉️,ಕಡುಬು ನೈವೇದ್ಯ:- ಕರಿಗಡುಬು ಅಥವಾ ಕಡುಬುಗಳನ್ನು ತಯಾರಿಸಿ ನೈವೇದ್ಯ ಮಾಡಲಾಗುತ್ತದೆ, 🕉️,ಪಾದ ಪೂಜೆ:- ಪೂಜೆಯ ನಂತರ, ಗಂಡಂದಿರ ಪಾದಗಳನ್ನು ತೊಳೆದು ಪೂಜಿಸಲಾಗುತ್ತದೆ, 🕉️,ದಾನ:- ಈ ದಿನ ದಾನ ಮಾಡುವುದು ಮತ್ತು ಪವಿತ್ರ ನದಿಗಳಲ್ಲಿ ಸ್ನಾನ ಮಾಡುವುದು ಪುಣ್ಯವೆಂದು ಪರಿಗಣಿಸಲಾಗಿದೆ, 🙏🪷
ಬೆಂಗಳೂರು : ಕೆಂಪೇಗೌಡ ಏರ್ಪೋರ್ಟ್ ರಾಮೇಶ್ವರಂ ಕೆಫೆ ತಿಂಡಿಯಲ್ಲಿ ಜಿರಳೆ ಪತ್ತೆಯಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನ ಹಳ್ಳಿ ಬಳಿ ಇರುವ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿರುವ ರಾಮೇಶ್ವರಂ ಕೆಫೆಯಲ್ಲಿ ಗ್ರಾಹಕ ಖರೀದಿಸಿದ ಪೊಂಗಲ್ ನಲ್ಲಿ ಜಿರಳೆ ಒಂದು ಪತ್ತೆಯಾಗಿದೆ. ಕೆಫೆಯಲ್ಲಿ ಪ್ರಯಾಣಿಕ ಲೋಕನಾಥ್ ಎನ್ನುವವರು ಪೊಂಗಲ್ ಖರೀದಿಸಿದ್ದರು. ಪೊಂಗಲ್ ತಿನ್ನುತ್ತಿರುವಾಗ ತಿಂಡಿಯಲ್ಲಿ ಜಿರಳೆ ಕಾಣಿಸಿಕೊಂಡಿದೆ. ಜಿರಳೆ ಪತ್ತೆಯ ಬಗ್ಗೆ ಲೋಕನಾಥ್ ಅವರು ಹೋಟೆಲಿ ಸಿಬ್ಬಂದಿಗಳಿಗೆ ಪ್ರಶ್ನಿಸಿದ್ದಾರೆ. ಈ ವೇಳೆ ಕೈಮುಗಿದು ತಪ್ಪಾಯಿತು ಎಂದು ಹೋಟೆಲ್ ಸಿಬ್ಬಂದಿಗಳು ಕೇಳಿಕೊಂಡಿದ್ದಾರೆ. ಈ ವೇಳೆ ಅಲ್ಲಿಯೇ ಇದ್ದ ಇತರೆ ಪ್ರಯಾಣಿಕರು ಬೇಸರ ವ್ಯಕ್ತಪಡಿಸಿದ್ದು, ಇತ್ತೀಚಿಗೆ ಅಷ್ಟೇ ಏರ್ಪೋರ್ಟ್ ನಲ್ಲಿ ರಾಮೇಶ್ವರಂ ಕೆಫೆ ಓಪನ್ ಆಗಿದೆ.
ಚಿಕ್ಕಮಗಳೂರು : ಚಿಕ್ಕಮಗಳೂರಲ್ಲಿ ಕಾಡಾನೆ ದಾಳಿ ಮುಂದುವರೆದಿದ್ದು ಇಂದು ಸಹ ಚಿಕ್ಕಮಗಳೂರಿನಲ್ಲಿ ಕಾಡಾನೆ ದಾಳಿಗೆ ಮತ್ತೊಬ್ಬರು ಬಲಿಯಾಗಿದ್ದಾರೆ. ಕೂಲಿ ಕಾರ್ಮಿಕ ಮಹಿಳೆ ಅನಿತಾ ಕಾಡಾನೆ ದಾಳಿಗೆ ಬಲಿಯಾದವರು ಎಂದು ತಿಳಿದುಬಂದಿದೆ. ಚಿಕ್ಕಮಗಳೂರು ಜಿಲ್ಲೆ ಎನ್.ಆರ್. ಪುರ ತಾಲೂಕಿನ ಬನ್ನೂರು ಗ್ರಾಮದಲ್ಲಿ ಘಟನೆ ನಡೆದಿದೆ. ಕೂಲಿಕಾರ್ಮಿಕ ಮಹಿಳೆ ಅನಿತಾ ಕೆಲಸ ಮುಗಿಸಿ ಮನೆಗೆ ಬರುವಾಗ ಕಾಡಾನೆ ದಾಳಿ ನಡೆಸಿದೆ. ದಾಳಿಗೊಳಗಾದ ಅನಿತಾ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು, ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆ ಕುಡಿದಂತೆ ಗ್ರಾಮಸ್ಥರು ಅರಣ್ಯ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಾಸನ : ಉಪ ಮುಖ್ಯಮಂತ್ರಿ ಅಡಿಕೆ ಶಿವಕುಮಾರ್ ಅವರು ಅನಾರೋಗ್ಯದಿಂದ ಬಳಲುತ್ತಿದ್ದು ಮೂರು ದಿನಗಳ ಕಾಲ ವಿಶ್ರಾಂತಿ ಅಲ್ಲಿ ಇದ್ದಾರೆ ಎಂದು ಹೇಳಲಾಗಿತ್ತು ಆದರೆ ಇದೀಗ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹಾಸನದ ನಾಗರ ನವಿಲೇ ದೇಗುಲಕ್ಕೆ ಗುಟ್ಟಾಗಿ ಭೇಟಿ ನೀಡಿದ್ದು ಮುನ್ನ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿರುವುದು ತೀವ್ರ ಕುತೂಹಲ ಕೆರಳಿಸಿದೆ. ಹೌದು ಹಾಸನದ ನಾಗರ ನವಿಲೇ ದೇವಸ್ಥಾನಕ್ಕೆ ಉಪಮುಖ್ಯಮಂತ್ರಿಯ ಡಿಕೆ ಶಿವಕುಮಾರ್ ಭೇಟಿ ನೀಡಿದ್ದಾರೆ. ಪೊಲೀಸ್ ಭದ್ರತೆ ಬೆಂಗಾವಲು ಪಡೆಯಿಲ್ಲದೆ ಭೇಟಿ ನೀಡಿದ್ದು ದೆಹಲಿಗೆ ತೆರಳುವ ಮುನ್ನವೇ ದೇಗುಲದಲ್ಲಿ ಡಿಕೆ ಶಿವಕುಮಾರ್ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಎರಡು ದಿನಗಳ ಕಾಲ ವಿಶ್ರಾಂತಿ ಎಂದಿದ್ದರು. ಆದರೆ ಈಗ ಗುಟ್ಟಾಗಿ. ತೆರಳಿ ಏಕಾಂಗಿಯಾಗಿ ಡಿಕೆ ಶಿವಕುಮಾರ್ ಪೂಜೆ ಸಲ್ಲಿಸಿದ್ದಾರೆ. ಹಾಸನದ ನಾಗರನವಿಲೆ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.
ಗೋವಾ : ಗೋವಾದಲ್ಲಿ ಕನ್ನಡಿಗರ ಮೇಲೆ ಹಲ್ಲೆ ಮುಂದುವರೆದಿದ್ದು, ಕರ್ನಾಟಕದವರು ಮತ್ತು ಕನ್ನಡಿಗರನ್ನು ಟಾರ್ಗೆಟ್ ಮಾಡಿ ಹಲ್ಲೆ ಮಾಡಿರುವ ಆರೋಪ ಇದೀಗ ಕೇಳಿ ಬಂದಿದೆ. ಕನ್ನಡಿಗ ಲಾರಿ ಚಾಲಕ ಅನಿಲ್ ರಾಠೋಡ್ ಎನ್ನುವವರ ಮೇಲೆ ಗೋವಾದಲ್ಲಿ ಹಲ್ಲೆ ನಡೆಸಲಾಗಿದೆ. ವಿಜಯಪುರ ಜಿಲ್ಲೆಯ ಕಲಕೇರಿ ಗ್ರಾಮದ ನಿವಾಸಿಯಾಗಿರುವ ಅನಿಲ್ ರಾಠೋಡ್ ಗೋವಾದ ಪ್ರೆಡ್ನೆ ಬಳಿಯ ರಸ್ತೆಯಲ್ಲಿ ಅನೀಲ್ ಟ್ರಕ್ ಅಡ್ಡಗಟಿ ಗೂಂಡಾಗಿರಿ ನಡೆಸಲಾಗಿದೆ. ಕಾರು ಜೀಪ್ನಲ್ಲಿ ಬಂದಿದ್ದ ದುಷ್ಕರ್ಮಿಗಳ ಗ್ಯಾಂಗ್ ಅನಿಲ್ ರಾಠೋಡ್ ಮೇಲೆ ಹಲ್ಲೆ ಮಾಡಿದೆ. ಕನ್ನಡಿಗ ಚಾಲಕ ಅನಿಲ್ ಗೆ ನಿಂದಿಸಿದ್ದು ಅಲ್ಲದೆ ಹಲ್ಲೆ ನಡೆಸಿದ್ದಾರೆ. ಅನಿಲ್ ಮಹಾರಾಷ್ಟ್ರದಿಂದ ಗೋವಾಕ್ಕೆ ಕಲ್ಲು ಸಾಗಿಸುತ್ತಿದ್ದರು. ಈ ವೇಳೆ ಚಾಲಕ ಅನಿಲ್ ನನ್ನು ಅಡ್ಡಗಟ್ಟಿ ದುಷ್ಕರ್ಮಿಗಳು ಹಲ್ಲೆ ನಡೆಸಿದ್ದಾರೆ. ಹಲ್ಲೆ ಮಾಡಿರುವ ದೃಶ್ಯವನ್ನು ಅನಿಲ್ ತನ್ನ ಮೊಬೈಲ್ ನಲ್ಲಿ ಚಿತ್ರೀಕರಿಸಿದ್ದಾರೆ. ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಗೋವಾ ಪೊಲೀಸರ ವಿರುದ್ಧ ಚಾಲಕ ಅನಿಲ್ ಆರೋಪಿಸಿದ್ದಾರೆ. ಗೋವಾದಲ್ಲಿ ಕನ್ನಡಿಗರ ಮೇಲೆ ನಿರಂತರ ಹಲ್ಲೆ…
ದಾವಣಗೆರೆ : ಇಂದು ಮುಖ್ಯಮಂತ್ರಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಅವರು ದೆಹಲಿಗೆ ತೆರಳಲಿದ್ದಾರೆ. ಇಂದು ದೆಹಲಿಯಲ್ಲಿ ಸಿಎಂ ಸಿದ್ದರಾಮಯ್ಯ ವಾಸ್ತವ್ಯ ಹೂಡಲಿದ್ದಾರೆ. ಬಳಿಕ ನಾಳೆ ಭಾಗಿಧಾರಿ ನ್ಯಾಯ ಸಮ್ಮೇಳನದಲ್ಲಿ ಸಿಎಂ ಸಿದ್ದರಾಮಯ್ಯ ಭಾಗಿಯಾಗಲಿದ್ದಾರೆ. ಇದರ ಬೆನ್ನಲ್ಲೇ ಡಿಸಿಎಂ ಡಿಕೆ ಶಿವಕುಮಾರ್ ಡಿಸೆಂಬರ್ ನಲ್ಲಿ ಸಿಎಂ ಅಗಲಿದ್ದಾರೆ ಎಂದು ಮತ್ತೊಬ್ಬ ಕಾಂಗ್ರೆಸ್ ಶಾಸಕ ಹೇಳಿಕೆ ನೀಡಿದ್ದಾರೆ. ಹೌದು ಶಾಸಕ ಶಿವಗಂಗಾ ಬಸವರಾಜ್ ಅವರು ಸದ್ಯ ಅನಾರೊಗ್ಯ ಹಿನ್ನೆಲೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೊರಗೆ ಹೆಚ್ಚು ಕಾಣಿಸಿಕೊಳ್ಳುತ್ತಿಲ್ಲ. ಡಿಸೆಂಬರ್‌ವರೆಗೆ ಇನ್ನೂ ಸಮಯವಿದೆ ಎಂದು ಚನ್ನಗಿರಿ ಶಾಸಕ ಬಸವರಾಜ ವಿ.ಶಿವಗಂಗಾ ಹೇಳಿದರು. ಈ ಮೂಲಕ ಡಿಕೆಶಿಗೆ ಮುಖ್ಯಮಂತ್ರಿ ಪಟ್ಟ ಎಂದು ಡಿಕೆಶಿ ಆಪ್ತ ಬಳಗದ ಶಾಸಕ ಶಿವಗಂಗಾ ಪರೋಕ್ಷವಾಗಿ ಹೇಳಿಕೆ ನೀಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿ, ಐದು ವರ್ಷದಲ್ಲಿ ಡಿಸೆಂಬರ್ ಸಹ ಇದೆಯಲ್ಲವೇ? ಕಾದು ನೋಡಿ ಅಷ್ಟೇ. ಎಲ್ಲರೂ ಒಗ್ಗಟ್ಟಾಗಿದ್ದರೆ ಏನೂ ಸಮಸ್ಯೆ ಇಲ್ಲ. ನಮ್ಮ ಪಕ್ಷದಲ್ಲಿ ವಾಕ್ ಸ್ವಾತಂತ್ರ್ಯವಿದೆ. ಬಿಜೆಪಿ ರೀತಿಯ ಪರಿಸ್ಥಿತಿ ನಮ್ಮಲ್ಲಿಲ್ಲವೆಂದು…
ಧಾರವಾಡ : ಧಾರವಾಡದಲ್ಲಿ ಗುಂಡಿನ ಸದ್ದು ಕೇಳಿಸಿದ್ದು, ಕಳ್ಳತನ ಮಾಡಿ, PSI ಮೇಲೆ ಹಲ್ಲೆ ನಡೆಸಿ, ಪರಾರಿಯಾಗುತ್ತಿದ್ದ ಇಬ್ಬರು ಕಳ್ಳರ ಮೇಲೆ ಫೈರಿಂಗ್ ನಡೆಸಲಾಗಿದೆ. ಧಾರವಾಡದ ವಿದ್ಯಗಿರಿ ಪೊಲೀಸ್ ತಣ ವ್ಯಾಪ್ತಿಯಲ್ಲಿ ಈ ಒಂದು ಘಟನೆ ನಡೆದಿದೆ. ಧಾರವಾಡ ನಗರದಲ್ಲಿ ಗಿರಿನಗರದ ಬಡಾವಣೆಯ ಮನೆ ಒಂದರಲ್ಲಿ ಕಳ್ಳರು ಕಳ್ಳತನ ಮಾಡಿದ್ದರು. ಬಳಿಕ ಪರಾರಿ ಆಗುವ ವೇಳೆ ಪೊಲೀಸರ ಕೈಗೆ ಇಬ್ಬರು ಕಳ್ಳರು ಸಿಕ್ಕಿ ಬಿದ್ದಿದ್ದಾರೆ. ಆರೋಪಿಗಳಾದ ಮುಜಾಮಿಲ್ ಮತ್ತು ವಿಜಯ್ ಪರಾರಿ ಆಗುವ ವೇಳೆ ಪೊಲೀಸರು ಸೆರೆ ಹಿಡಿದಿದ್ದಾರೆ. ಪಿಎಸ್ಐ ಮೇಲೆ ಹಲ್ಲಿ ನಡೆಸಿ ಕಳ್ಳರು ಪರಾರಿಗೆ ಯತ್ನಿಸಿದ್ದಾರೆ. ಈ ವೇಳೆ ಪಿಎಸ್ಐ ಮಲ್ಲಿಕಾರ್ಜುನ್ ಇಬ್ಬರ ಮೇಲು ಗುಂಡಿನ ದಾಳಿ ನಡೆಸಿದ್ದಾರೆ. ಆರೋಪಿಗಳಾದ ಮುಜಾಮಿಲ್ ಮತ್ತು ವಿಜಯ್ ಗೆ ಕಾಲಿಗೆ ಗುಂಡೇಟು ತಗುಲಿದ್ದು, ಗಾಯಾಳುಗಳನ್ನು ಧಾರವಾಡ ಜಿಲ್ಲಾ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.