Subscribe to Updates
Get the latest creative news from FooBar about art, design and business.
Author: kannadanewsnow05
BREAKING : ತೆಲಂಗಾಣದಲ್ಲಿ ‘BRS’ ಗೆ ಹಿನ್ನಡೆ : ಕಾಂಗ್ರೆಸ್ ಸೇರಲಿರುವ ಸಂಸದ ಕೆ.ಕೇಶವ್ ರಾವ್, ಪುತ್ರಿ ವಿಜಯಲಕ್ಷ್ಮಿ
ಹೈದರಾಬಾದ್: ತೆಲಂಗಾಣದಲ್ಲಿ ಬಿಆರ್‌ಎಸ್‌ಗೆ ಹಿನ್ನಡೆಯಾಗಿದ್ದು, ಹಿರಿಯ ರಾಜಕಾರಣಿ ಮತ್ತು ರಾಜ್ಯಸಭಾ ಸದಸ್ಯ ಕೆ ಕೇಶವ ರಾವ್ ಅವರು ವಿರೋಧ ಪಕ್ಷವನ್ನು ತೊರೆದು ಕಾಂಗ್ರೆಸ್‌ಗೆ ಮರಳಲು ಸಿದ್ಧರಾಗಿದ್ದಾರೆ ಎಂದು ಹೇಳಲಾಗುತ್ತಿದೆ. ರಾಜಕೀಯ ವಲಯದಲ್ಲಿ ಕೆಕೆ ಎಂದೇ ಖ್ಯಾತರಾಗಿರುವ ಕೇಶವ ರಾವ್ ಅವರು ಗುರುವಾರ ಸಂಜೆ BRS ಮುಖ್ಯಸ್ಥ ಮತ್ತು ಮಾಜಿ ಮುಖ್ಯಮಂತ್ರಿ ಕೆ ಚಂದ್ರಶೇಖರ ರಾವ್ ಅವರನ್ನು ಭೇಟಿ ಮಾಡಿ ಅವರ ಪುತ್ರಿ, ಹೈದರಾಬಾದ್ ಮೇಯರ್, ಗದ್ವಾಲ್ ವಿಜಯಲಕ್ಷ್ಮಿ ಅವರೊಂದಿಗೆ ಕಾಂಗ್ರೆಸ್‌ಗೆ ಮರಳುವ ಇಂಗಿತವನ್ನು ತಿಳಿಸಿದರು.ಅವರು ಮತ್ತು ಪ್ರಸ್ತುತ ಬಿಆರ್‌ಎಸ್‌ನಲ್ಲಿರುವ ಅವರ ಪುತ್ರಿ ಗದ್ವಾಲ್ ವಿಜಯಲಕ್ಷ್ಮಿ ಅವರು ಹೈದರಾಬಾದ್‌ನ ಮೇಯರ್ ಆಗಿದ್ದು, ಮಾರ್ಚ್ 30 ರಂದು ಮುಖ್ಯಮಂತ್ರಿ ಮತ್ತು ಟಿಪಿಸಿಸಿ ಅಧ್ಯಕ್ಷ ಎ.ರೇವಂತ್ ರೆಡ್ಡಿ ಅವರ ಸಮ್ಮುಖದಲ್ಲಿ ಕಾಂಗ್ರೆಸ್‌ಗೆ ಸೇರುವ ನಿರೀಕ್ಷೆಯಿದೆ. ಆದಾಗ್ಯೂ, ಬಿಆರ್‌ಎಸ್ ತೊರೆಯುವ ನಿರ್ಧಾರಕ್ಕೂ ಪಕ್ಷದೊಂದಿಗಿನ ಯಾವುದೇ ಭಿನ್ನಾಭಿಪ್ರಾಯಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಕೇಶವ ರಾವ್ ಸ್ಪಷ್ಟಪಡಿಸಿದರು, ಆದರೆ ದಶಕಗಳ ಹಿಂದೆ ತಮ್ಮ ರಾಜಕೀಯ ವೃತ್ತಿಜೀವನವನ್ನು ಪ್ರಾರಂಭಿಸಿದ ಕಾಂಗ್ರೆಸ್‌ಗೆ ಮರಳುವ…
ಬೆಂಗಳೂರು : ಆಸ್ತಿಯಲ್ಲಿ ಪಾಲು ಕೇಳಿದ್ದಕ್ಕೆ ನಿವೃತ್ತ ಪಿಎಸ್ಐ ಒಬ್ಬರು ಮಗನ ಮೇಲೆ ಆಸಿಡ್ ದಾಳಿ ಮಾಡಿರುವ ಘಟನೆ ಬೆಂಗಳೂರಿನ ಟಿ ದಾಸರಹಳ್ಳಿಯಲ್ಲಿ ನಡೆದ ಘಟನೆ ಯಾಗಿದೆ. ನಿವೃತ ಪಿಎಸ್ಐ ಆಗಿರುವ ರಾಮಕೃಷ್ಣ ಅವರಿಂದ ಈ ಕೃತ್ಯ ನಡೆದಿದೆ. ಆಸಿಡ್ ದಾಳಿಯಿಂದ ಕಿರಣ್ ನ ಒಂದು ಕಣ್ಣಿಗೆ ಹಾನಿಯಾಗಿದೆ. ಅಣ್ಣ ಉಪೇಂದ್ರ ಅಕ್ಕ ಕಲಾವತಿ ವಿರುದ್ಧವು ಕೂಡ ಆರೋಪ ಕೇಳಿ ಬಂದಿದೆ. ಮೈ ಮೇಲೆ ಗಾಯಗಳಾಗಿ ಕಿರಣ್ ರೋಧಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.ಮಾರ್ಚ್ 25ರಂದು ನಡೆದ ಘಟನೆ ಇದೀಗ ತಡವಾಗಿ ಬಳಕೆಗೆ ಬಂದಿದೆ. ಇದೀಗ ಬಾಗಲಕುಂಟೆ ಪೊಲೀಸ್ ಠಾಣೆಯಲ್ಲಿ ಬರ್ಕೊಂಡು ದಾಖಲಾಗಿದ್ದು ಆರೋಪಿಗಳ ಪತ್ತೆಗಾಗಿ ಶೋಧ ಕಾರ್ಯ ನಡೆಯುತ್ತಿದೆ. https://kannadanewsnow.com/kannada/5-7-magnitude-earthquake-hits-greece-earthquake/ https://kannadanewsnow.com/kannada/big-news-another-mla-rebels-against-bjp-m-chandrappas-son-to-contest-as-independent-candidate-from-chitradurga/
ಚಿತ್ರದುರ್ಗ : ಲೋಕಸಭೆ ಚುನಾವಣೆಗೆ ಈಗಾಗಲೇ ಹಲವು ನಾಯಕರಿಗೆ ಬಿಜೆಪಿ ಟಿಕೆಟ್ ಕಟ್ ಮಾಡಿದ್ದು ಇದೀಗ ಚಿತ್ರದುರ್ಗ ಲೋಕಸಭಾ ಕ್ಷೇತ್ರಕ್ಕೆ ಶಾಸಕ ಎಂ ಚಂದ್ರಪ್ಪ ಅವರ ಪುತ್ರ ರಘು ಚಂದ್ರನ ಟಿಕೆಟ್ ಆಕಾಂಕ್ಷಿಯಾಗಿದ್ದರು ಆದರೆ ಗೋವಿಂದ ಕಾರಜೋಳ್ ಅವರಿಗೆ ಬಿಜೆಪಿ ಟಿಕೆಟ್ ನೀಡಿರುವ ಹಿನ್ನೆಲೆಯಲ್ಲಿ ಇದೀಗ ರಘು ಚಂದ್ರನ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದಾರೆ ಎಂದು ಅವರ ತಂದೆ ಶಾಸಕ ಎಂ ಚಂದ್ರಪ್ಪ ತಿಳಿಸಿದರು. https://kannadanewsnow.com/kannada/eshwarappa-is-angry-with-high-command-and-cant-say-it-directly-by-raghavendra/ ಚಿತ್ರದುರ್ಗದಲ್ಲಿ ಕಾರ್ಯಕರ್ತರೊಂದಿಗೆ ಸಭೆ ನಡೆಸಿದ ಹೊಳಲ್ಕೆರೆ ಶಾಸಕ ಎಂ ಚಂದ್ರಪ್ಪ ಅವರು, ಬಿಜೆಪಿ ಟಿಕೆಟ್ ಬದಲಿಸಿದರೆ ಪುತ್ರ ರಘು ಚಂದನ್ ಪಕ್ಷೇತರ ಸ್ಪರ್ಧೆಸುತ್ತಾರೆ ಎಂದು ಚಿತ್ರದುರ್ಗದಲ್ಲಿ ಹೊಳಲ್ಕೆರೆ ಬಿಜೆಪಿ ಶಾಸಕ ಎಂ ಚಂದ್ರಪ್ಪ ಹೇಳಿಕೆ ನೀಡಿದರು. ಏಪ್ರಿಲ್ 3 ರಂದು ರಘು ಚಂದನ್ ರಾಮಪತ್ರ ಸಲ್ಲಿಕೆಗೆ ಚಿಂತನೆ ನಡೆಸಲಾಗುತ್ತಿದೆ ಎಂದು ತಿಳಿದುಬಂದಿದೆ. ಚಿತ್ರದುರ್ಗದಲ್ಲಿರುವ ಬೆಂಬಲಿಗರು ನನ್ನ ನಿರ್ಧಾರಕ್ಕೆ ಬದ್ಧ ಅಂತ ಹೇಳಿದ್ದಾರೆ.ಸಾಧಕ ಬಾಧಕಗಳ ಬಗ್ಗೆ ಚರ್ಚಿಸಿ ಅಂತಿಮ ತೀರ್ಮಾನ ಮಾಡುತ್ತೇವೆ.ಇನ್ನೂ ಕಾಲ ಮಿಂಚಿಲ್ಲ ಆದರೆ ಬಿಜೆಪಿ…
ಶಿವಮೊಗ್ಗ : ಲೋಕಸಭಾ ಚುನಾವಣೆಯಲ್ಲಿ ತಮ್ಮ ಮಗನಿಗೆ ಟಿಕೆಟ್ ಸಿಗಲಿಲ್ಲವೆಂದು ಬಿಜೆಪಿಯ ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹಾಗೂ ಅವರ ಪುತ್ರರ ವಿರುದ್ಧ ವಾಗ್ದಾಳಿ ನಡೆಸುತ್ತಲೇ ಇದ್ದಾರೆ ಇದೀಗ ಅವರ ಹೇಳಿಕೆಗೆ ಸಂಸದ ಬಿ ವೈ ರಾಘವೇಂದ್ರ ಅವರು ಟಾಂಗ್ ನೀಡಿದ್ದಾರೆ. ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನಲ್ಲಿ ಮಾತನಾಡಿದ ಬಿ ವೈ ರಾಘವೇಂದ್ರ ಅವರು, ಕೆಎಸ್ ಈಶ್ವರಪ್ಪಗೆ ಸಿಟ್ಟು ಇರುವುದು ಹೈಕಮಾಂಡ್ ಮೇಲೆ ಅದನ್ನು ನೇರವಾಗಿ ಹೇಳಲು ಕೆಎಸ್ ಈಶ್ವರಪ್ಪ ಅವರಿಗೆ ಆಗುತ್ತಿಲ್ಲ ಎಂದು ಶಿವಮೊಗ್ಗ ಜಿಲ್ಲೆ ಸೊರಬದಲ್ಲಿ ಸಂಸದ ಬಿ ಇ ರಾಘವೇಂದ್ರ ಹೇಳಿಕೆ ನೀಡಿದರು. ಬಿಎಸ್ ಯಡಿಯೂರಪ್ಪ ಹೈಕಮಾಂಡ್ ಗೆ ಬುದ್ಧಿ ಕಲಿಸುತ್ತೇನೆ ಎಂದು ಹೇಳಿದ್ದಾರೆ.ಹಿಂದುತ್ವವನ್ನು ಯಡಿಯೂರಪ್ಪ ಜಾಹೀರಾತಿಗೆ ಬಳಕೆ ಮಾಡಿಲ್ಲ. ಹಿಂದುತ್ವ ನಮ್ಮ ರಕ್ತ ಹಾಗೂ ಜೀವನದ ಹೆಜ್ಜೆ ಹೆಜ್ಜೆಯಲ್ಲಿದೆ. ಸೊರಬದಲ್ಲಿ ಈಶ್ವರಪ್ಪಗೆ ಸಂಸದ ಬೀ ವೈ ರಾಘವೇಂದ್ರ ಟಾಂಗ್ ನೀಡಿದರು.
ಬೆಂಗಳೂರು : ಬೈಕ್ ಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಅರಣ್ಯ ಇಲಾಖೆಯ ಸಿಬ್ಬಂದಿ ಓರ್ವ ಮೃತಪಟ್ಟಿದ್ದು, ಹಿಂಬದಿ ಸ್ವವಾರನಾಗಿರುವ ಇನ್ನೂರುವ ಅರಣ್ಯ ಸಿಬ್ಬಂದಿ ಗಂಭೀರವಾಗಿ ಗಾಯಗೊಂಡಿರುವಂತಹ ಘಟನೆ ಬೆಂಗಳೂರು ಹೊರ ವಲಯ ಆನೇಕಲ್ ನ ನಿರ್ಜಾ ರಸ್ತೆಯಲ್ಲಿ ಘಟನೆ ನಡೆದಿದೆ. https://kannadanewsnow.com/kannada/bjp-jds-alliance-results-written-in-golden-letters-in-states-political-history-b-y-vijayendra/ ಘಟನೆಯಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ರಾಕೇಶ್ (28) ಮೃತಪಟ್ಟಿದ್ದು, ಮತ್ತೋರ್ವ ಅರಣ್ಯ ಇಲಾಖೆ ಸಿಬ್ಬಂದಿ ವಿನಯಗೆ ಗಂಭೀರವಾದಂತಹ ಗಾಯಗಳಾಗಿರುವ ಘಟನೆ ನಡೆದಿದೆ.ಚಿರತೆ ಕಾರ್ಯ ಪಡೆಯಲ್ಲಿ ಇವರು ಅರಣ್ಯ ಇಲಾಖೆ ಸಿಬ್ಬಂದಿಗಳು ಕೆಲಸ ಮಾಡುತ್ತಿದ್ದರು. ಎಟಿಎಂಗೆ ಹೋಗಿ ಬರುವುದಾಗಿ ಬೈಕ್ ನಲ್ಲಿ ತೆರಳಿದ್ದ ವೇಳೆ ಈ ಅಪಘಾತ ಸಂಭವಿಸಿದೆ. ಆನೇಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. https://kannadanewsnow.com/kannada/bengaluru-passenger-travelling-in-bmtc-bus-dies-of-heart-attack/
ಬೆಂಗಳೂರು : ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ಸಂದರ್ಭದಲ್ಲಿ ಪ್ರಯಾಣಿಕರು ಒಬ್ಬರು ತೀವ್ರ ಹೃದಯಘಾತದಿಂದ ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆ ನಡೆದಿದೆ. https://kannadanewsnow.com/kannada/how-to-change-your-credit-card-due-date-check-out-the-latest-guidelines-of-rbi/ ಕೃಷ್ಣ (60) ಮೃತಪಟ್ಟ ವ್ಯಕ್ತಿ ಎಂದು ಗುರುತಿಸಲಾಗಿದೆ. ಗುರುವಾರ ರಾತ್ರಿ 11 ಗಂಟೆಯ ಸುಮಾರಿಗೆ ಮೆಜೆಸ್ಟಿಕ್ ಬಸ್ ತಂಗುದಾಣದಲ್ಲಿ ಬಸ್ ಹತ್ತಿದ್ದ ಕೃಷ್ಣ, ನಂತರ ಬಸ್ ನವರಂಗ ಕಡೆಗೆ ಹೋಗುತ್ತಿದ್ದ ವೇಳೆ ಅವರಿಗೆ ತೀವ್ರ ಅರ್ಧವಾಗಿದೆ ತಕ್ಷಣ ಅವರು ಬಸ್ಸಿನಲ್ಲೇ ಕುಸಿದು ಬಿದ್ದಿದ್ದಾರೆ. ಈ ವೇಳೆ ತಕ್ಷಣ ಸಹ ಪ್ರಯಾಣಿಕರು ಅವರ ಕುಸಿದು ಬಿದ್ದಿದ್ದನ್ನು ಕಂಡು ಗಾಬರಿಯಾಗಿದ್ದು ಬಸ್ ನಿಲ್ಲಿಸಲು ತಿಳಿಸಿದ್ದಾರೆ.ಬಸ್ ಸೀಟ್‌ನಲ್ಲಿ ಕುಳಿತ ಹದಿನೈದು ನಿಮಿಷದಲ್ಲೇ ಕೃಷ್ಣ ಅವರಿಗೆ ಹೃದಯಾಘಾತವಾಗಿದೆ ಎಂದು ತಿಳಿದುಬಂದಿದೆ. https://kannadanewsnow.com/kannada/big-news-complaint-filed-against-ct-ravi-for-allegedly-abusing-minister-shivaraj-thangadagi-with-obscene-words/ ಬಸ್ನಲ್ಲಿ ಕೇವಲ 15 ನಿಮಿಷಗಳಲ್ಲಿ ಅವರಿಗೆ ಹೃದಯಾಘಾತ ವಾಗಿದ್ದರಿಂದ ನವರಂಗ ಸಮೀಪ ಇರುವ ಖಾಸಗಿ ಆಸ್ಪತ್ರೆಗೆ ಅವರನ್ನು ದಾಖಲಿಸಲಾಯಿತು. ಆದರೆ ವೈದ್ಯರು ಈಗಾಗಲೇ ಅವರು ಮೃತಪಟ್ಟಿದ್ದಾರೆಂದು ತಿಳಿಸಿದ್ದಾರೆ. ಮೃತಪಟ್ಟ ವ್ಯಕ್ತಿ ಕೃಷ್ಣ ಕುರಿತು ಇದೀಗ ಪೊಲೀಸರು ಯಾವ ಊರಿನವರು…
ಕೊಪ್ಪಳ : ಮೋದಿ ಮೋದಿ ಎನ್ನುವವರಿಗೆ ಕಪಾಳಕ್ಕೆ ಹೊಡೆಯಿರಿ ಎಂದು ಸಚಿವ ಶಿವ ತಂಗಡಗಿ ವಿವಾದಾತ್ಮಕ ಹೇಳಿಕೆ ನೀಡಿದರು ಇದಕ್ಕೆ ಪ್ರತಿಕ್ರಿಯೆಸಿದ ಬಿಜೆಪಿಯ ಮಾಜಿ ಸಚಿವ ಸಿಟಿ ರವಿ ಅವಾಚ್ಯ ಶಬ್ದಗಳಿಂದ ತಂಗಡಿಗೆ ಅವರನ್ನು ನಿಂದಿಸಿದ ಆರೋಪದ ಹಿನ್ನೆಲೆಯಲ್ಲಿ ಇದೀಗ ಸಿಟಿ ರವಿ ವಿರುದ್ಧ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೊಪ್ಪಳ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸಚಿವ ಶಿವರಾಜ ತಂಗಡಗಿ ಅವರನ್ನು ಅವಾಚ್ಯ ಪದಗಳಿಂದ ನಿಂದಿಸಿದ ಬಿಜೆಪಿ ಮುಖಂಡ, ಮಾಜಿ ಸಚಿವ ಸಿ.ಟಿ. ರವಿ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಪೂಜಾರ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಜನಾಂಗಗಳ ಮೇಲೆ ನಡೆದ ದೌರ್ಜನ್ಯಗಳ ಅಡಿಯಲ್ಲಿ ಜಾತಿನಿಂದನೆ ಮತ್ತು ಕೊಲೆಬೆದರಿಕೆ ಹಾಗೂ ಇತರ ಪ್ರಕರಣದಡಿಯಲ್ಲಿ ಮಾಜಿ ಸಚಿವ ಸಿ.ಟಿ. ರವಿ ಅವರ ವಿರುದ್ಧ ಪ್ರಕರಣ ದಾಖಲು ಮಾಡಬೇಕು ಎಂದು ದೂರು ಸಲ್ಲಿಸಿದ್ದಾರೆ. ಸಚಿವ…
ಬೆಂಗಳೂರು: ಪೊಲೀಸ್ ಸಬ್ ಇನ್‌ಸ್ಪೆಕ್ಟರ್ (ಪಿಎಸ್ಐ) ಹುದ್ದೆಗಳ ನೇಮಕಾತಿಗಾಗಿ ಜ.23ರಂದು ನಡೆಸಿದ್ದ ಮರುಪರೀಕ್ಷೆಗೆ ಹಾಜರಾಗಿದ್ದ ಅಭ್ಯರ್ಥಿಗಳು ಪತ್ರಿಕೆ-1 ಮತ್ತು 2ರಲ್ಲಿ ಗಳಿಸಿರುವ ಅಂಕಗಳ ಅಂತಿಮ ಪಟ್ಟಿಯನ್ನು ಪ್ರಕಟಿಸಲಾಗಿದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕಿ ಎಸ್.ರಮ್ಯಾ ಪತ್ರಿಕಾ ಪ್ರಕಟಣೆಯಲ್ಲಿ ಈ ವಿಷಯ ತಿಳಿಸಿದ್ದಾರೆ. ಒಟ್ಟು 545 ಹುದ್ದೆಗಳ ನೇಮಕಕ್ಕೆ ಕೆಇಎ ಮರು ಪರೀಕ್ಷೆ ನಡೆಸಿತ್ತು. ಅಭ್ಯರ್ಥಿಗಳು ಪಡೆದ ಅಂಕಗಳ ಮಾಹಿತಿಯನ್ನು ಸದ್ಯದಲ್ಲೇ ಗೃಹ ಇಲಾಖೆಗೆ ಸಲ್ಲಿಸಲಾಗುತ್ತದೆ. ಅದರ ನಂತರ ರೋಸ್ಟರ್ ಆಧಾರದ ಮೇಲೆ ಆಯ್ಕೆ ಪಟ್ಟಿ ಪ್ರಕಟಿಸಲಾಗುವುದು. ಸಿಇಟಿ: ಅರ್ಜಿ ಸಲ್ಲಿಕೆಗೆ ಮತ್ತೊಂದು ಅವಕಾಶ ಏ.18 ಮತ್ತು 19ರಂದು ನಡೆಸಲು ಉದ್ದೇಶಿಸಿರುವ ಸಿಇಟಿ ಪರೀಕ್ಷೆಗೆ ಆನ್ಲೈನ್ ಅರ್ಜಿ ಸಲ್ಲಿಸಲು ಮಾರ್ಚ್ 30ರ ಬೆಳಿಗ್ಗೆ 11 ಗಂಟೆಯಿಂದ ಏ.1ರ ಸಂಜೆ 4 ಗಂಟೆಯವರೆಗೆ ಮತ್ತೊಂದು ಅವಕಾಶ ಕೊಡಲಾಗಿದೆ. ಅರ್ಜಿ ಸಲ್ಲಿಸುವವರು ಏ.1ರ ರಾತ್ರಿ 8 ಗಂಟೆಯವರೆಗೂ ಶುಲ್ಕ ಪಾವತಿಸಬಹುದು. ಈ ಅವಕಾಶವನ್ನು ಬಳಸಿಕೊಳ್ಳುವ ವಿದ್ಯಾರ್ಥಿಗಳಿಗೆ ಬೆಂಗಳೂರಿನ ಕೇಂದ್ರಗಳಲ್ಲಿ ಮಾತ್ರ ಪರೀಕ್ಷೆ ಬರೆಯಲು ಅವಕಾಶ…
ಬೀದರ್ : ಪತ್ನಿಯೊಬ್ಬಳು ಮನೆ ಬಿಟ್ಟು ಹೋಗಿದ್ದರಿಂದ ಮನನೊಂದೂ ನೀರಿನ ಟ್ಯಾಂಕ್ ಗೆ ಬಿದ್ದು ಅಲೆಮಾರಿ ಜನಾಂಗದ ಯುವಕ ಒಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೀದರ್ ತಾಲೂಕಿನ ಅಣದೂರು ಗ್ರಾಮದಲ್ಲಿ ನಡೆದಿರುವ ಘಟನೆಯಾಗಿದೆ. https://kannadanewsnow.com/kannada/people-have-decided-that-they-want-dk-suresh-who-is-among-the-people-not-a-white-collar-doctor-cm/ ಹೌದು ನೀರಿನ ಟ್ಯಾಂಕಿಗೆ ಬಿದ್ದು ಅಲೆಮಾರಿ ಜನಾಂಗದ ರಾಜು ಎನ್ನುವ ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗುತ್ತಿದೆ. ಕಳೆದ ಹತ್ತು ವರ್ಷದಿಂದ ಅಣದೂರಿನಲ್ಲಿ ಅಲೆಮಾರಿ ಜನಾಂಗ ವಾಸವಿತ್ತು ಎನ್ನಲಾಗುತ್ತಿದೆ.ಕಳೆದ ಐದು ಆರು ದಿನಗಳ ಹಿಂದೆ ಟ್ಯಾಂಕಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗುತ್ತಿದೆ. https://kannadanewsnow.com/kannada/cm-siddaramaiah-has-started-saying-astrology-that-i-will-lose-in-mandya-hdk/ ಐದಾರು ದಿನಗಳಿಂದ ಗ್ರಾಮಸ್ಥರು ಕೂಡ ಅದೇ ನೀರನ್ನು ಕುಡಿಯುತ್ತಿದ್ದಾರೆ. ಕುಡಿಯುವ ನೀರು ವಾಸನೆ ಬಂದ ಹಿನ್ನೆಲೆಯಲ್ಲಿ ಟ್ಯಾಂಕ್ ಪರಿಶೀಲನೆ ನಡೆಸಿದ್ದಾರೆ. ಟ್ಯಾಂಕ್ ನಲ್ಲಿ ಶವ ಇರುವುದನ್ನು ನೋಡಿ ಹಣದೂರು ಗ್ರಾಮಸ್ಥರು ಶಾಕ್‌ಗೆ ಒಳಗಾಗಿದ್ದಾರೆ. ತಕ್ಷಣ ಸ್ಥಳಕ್ಕೆ ಆರೋಗ್ಯ ಇಲಾಖೆಯ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದೆ. ಧಹಣೆ ಕೋರಿದಂತೆ ಅಣದೂರು ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಮನಗರ : ಜನರ ಮಧ್ಯೆ ಇರುವ ಕ್ರಿಯಾಶೀಲ ರಾಜಕಾರಣಿ ಡಿ.ಕೆ.ಸುರೇಶ್ ಬೇಕೆ ಹೊರತು ವೈಟ್ ಕಾಲರ್ ರಾಜಕಾರಣಿ ಡಾ.ಸಿ.ಎನ್. ಮಂಜುನಾಥ್ ಬೇಡ ಎಂಬುದನ್ನು ಕ್ಷೇತ್ರದ ಮತದಾರರು ನಿರ್ಧರಿಸಿ ಆಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. https://kannadanewsnow.com/kannada/cm-siddaramaiah-has-started-saying-astrology-that-i-will-lose-in-mandya-hdk/ ನಗರದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು ನನಗೆ ಪ್ರತಿನಿತ್ಯ ಪ್ರತಿನಿತ್ಯ ನನಗೆ ಮಾಹಿತಿ ಬರುತ್ತಿದೆ. ಈ ಆಧಾರದಲ್ಲಿ ಹೇಳುತ್ತೇನೆ. ಡಿ.ಕೆ.ಸುರೇಶ್ ಅವರು ಗೆಲವು ಸಾಧಿಸುವುದು ಶತಸಿದ್ದ. ಸಂಸದರಾದರು ಡಿ.ಕೆ.ಸುರೇಶ್ ಪಂಚಾಯಿತಿ ಸದಸ್ಯನಂತೆ ಜನ ಸಂಪರ್ಕ ಸಾಧಿಸಿದ್ದಾರೆ. https://kannadanewsnow.com/kannada/big-news-rameswaram-cafe-blast-case-suspected-terrorist-sent-to-7-day-nia-custody/ ಕ್ಷೇತ್ರದ ಅಭಿವೃದ್ಧಿಗೆ ನಿರಂತರವಾಗಿ ದುಡಿಯುವ ಆ ವ್ಯಕ್ತಿಯನ್ನು ಪ್ರತಿನಿಧಿಯಾಗಿ ದೆಹಲಿಗೆ ಕಳುಹಿಸಿದರೆ ನಿಮ್ಮ ಧ್ವನಿಯಾಗಿ ಕೆಲಸ ಮಾಡುತ್ತಾರೆ ಎಂದು ತಿಳಿಸಿದರು. ಈ ಕ್ಷೇತ್ರದಲ್ಲಿ ಬಿಜೆಪಿಯವರಿಗೆ ಅಭ್ಯರ್ಥಿ ಸಿಗಲಿಲ್ಲ. ಮಾಜಿ ಪ್ರಧಾನಿ ದೇವೇಗೌಡರ ಅಳಿಯ ಅಂತ ಡಾ.ಸಿ.ಎನ್. ಮಂಜುನಾಥ್ ಅವರನ್ನು ಕರೆತಂದು ನಿಲ್ಲಿಸಿದ್ದಾರೆ. https://kannadanewsnow.com/kannada/uk-man-pays-rent-of-rs-40000-per-month-to-live-with-parents/ ಅವರು ಸರ್ಕಾರಿ ನೌಕರಿಯಲ್ಲಿದ್ದರೆ ಹೊರತು ರಾಜಕಾರಣದಲ್ಲಿ ಇರಲಿಲ್ಲ. ಎಂದಾದರು ಜನರ ಸೇವೆ ಮಾಡಿದ್ದಾರಾ ಎಂದು ಪ್ರಶ್ನಿಸಿದ ಸಿದ್ದರಾಮಯ್ಯ, ಜನರ…