Subscribe to Updates
Get the latest creative news from FooBar about art, design and business.
Author: kannadanewsnow05
BREAKING : ಧಾರವಾಡದಲ್ಲಿ ಹಾಡಹಗಲೇ ದರೋಡೆ : ಮನೆಗೆ ನುಗ್ಗಿ ವೃದ್ದೆಗೆ ಥಳಿಸಿ ಚಿನ್ನ, ನಗದು ದೋಚಿ ಪರಾರಿಯಾದ ಕಳ್ಳರು!
ಧಾರವಾಡ : ಧಾರವಾಡದಲ್ಲಿ ಹಾಡಹಗಲೇ ಬೆಚ್ಚಿ ಬೀಳಿಸೋ ಘಟನೆ ನಡೆದಿದ್ದು, ಮನೆಗೆ ನುಗ್ಗಿದ ಖದೀಮರು ವೃದ್ದೆಗೆ ಥಳಿಸಿ ಚಿನ್ನಾಭರಣ, ನಗದು ಹಣ ಕದ್ದು ಪರಾರಿಯಾಗಿರುವ ಘಟನೆ ಮಾಳಮಡ್ಡಿ ಬಡಾವಣೆಯ ಕಬ್ಬೂರ ರಸ್ತೆಯಲ್ಲಿ ಒಂದು ಘಟನೆ ನಡೆದಿದೆ. ಮನೆಯಲ್ಲಿದ್ದ ವೃದ್ದೆ ವಿನೋದಿನಿಗೆ ಥಳಿಸಿ ಪರಾರಿಯಾಗಿದ್ದಾರೆ. ಮಾಂಗಲ್ಯ ಸರ, 25,000 ನಗದು ದೋಚಿದ ಕಳ್ಳರು ಮನೆಯ ಸಿಸಿ ಕ್ಯಾಮೆರಾ, ಡಿವಿಆರ್ ಸಹ ದೋಚಿಕೊಂಡು ಪರಾರಿಯಾಗಿದ್ದಾರೆ. ಹಲ್ಲೆಗೆ ಒಳಗಾದ ವೃದ್ದೆ ವಿನೋದಿನಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನಾ ಸ್ಥಳಕ್ಕೆ ಡಿಸಿಪಿ ಮಹಾಲಿಂಗ ನಂದಗಾವಿ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.ಧಾರವಾಡ ವಿದ್ಯಾಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಯಚೂರು : ರಾಯಚೂರು ಜಿಲ್ಲೆಯ ಲಿಂಗಸೂಗೂರಿನಲ್ಲಿ ಎರಡು ಬೈಕುಗಳ ನಡುವೆ ಬೀಕರ ಅಪಘಾತ ಸಂಭವಿಸಿದ್ದು, ಗಂಭೀರವಾಗಿ ಗಾಯಗೊಂಡು ಒದ್ದಾಡುತ್ತಿದ್ದರು. ಆದರೆ ಅಂಬುಲೆನ್ಸ್ ಸಿಬ್ಬಂದಿ ಬರದ ಹಿನ್ನೆಲೆಯಲ್ಲಿ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಯಚೂರು ಜಿಲ್ಲೆಯ ಲಿಂಗಸುಗೂರಿನ ಬೈಪಾಸ್ ರಸ್ತೆಯಲ್ಲಿ ಎರಡು ಬೈಕ್ ಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ. ಈ ವೇಳೆ ಗಂಭೀರವಾಗಿ ಗಾಯಕೊಂಡು ಇಬ್ಬರು ಬೈಕ್ ಸವಾರರು ರಸ್ತೆಯಲ್ಲಿ ನರಳಾಡಿದ್ದಾರೆ. ಈ ವೇಳೆ ಘಟನೆ ನಡೆದ ಒಂದುವರೆ ಗಂಟೆ ಬಳಿಕ ಆಂಬುಲೆನ್ಸ್ ಸ್ಥಳಕ್ಕೆ ಬಂದಿದೆ ಸದ್ಯ ಇಬ್ಬರು ಗಾಯಗಳು ಲಿಂಗಸುಗೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಲಿಂಗಸುಗೂರು ಠಾಣೆಯ ಪೊಲೀಸರು ಭೇಟಿ ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ
ಬೆಳಗಾವಿ : ತನ್ನ ಅನೈತಿಕ ಸಂಬಂಧಕ್ಕೆ ಪತಿ ಅಡ್ಡಿಯಾಗುತ್ತಾನೆ ಎಂದು ಪ್ರಿಯಕರನ ಜೊತೆ ಸೇರಿ ಪತಿಯನ್ನು ಕಲ್ಲಿನಿಂದ ಜಜ್ಜಿ ಭೀಕರವಾಗಿ ಕೊಲೆ ಮಾಡಿರುವ ಘಟನೆ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಬಾವನಸವದತ್ತಿ ಎಂಬ ಗ್ರಾಮದಲ್ಲಿ ನಡೆದಿದೆ. ಕೊಲೆಯಾದ ವ್ಯಕ್ತಿಯನ್ನು ಬಸ್ತವಾಡ ಗ್ರಾಮದ ನಿವಾಸಿ ಮಹೇಂದ್ರ ಓಲೆಕಾರ್ (45) ಕೊಲೆಯಾದ ವ್ಯಕ್ತಿ ಎಂದು ತಿಳಿದು ಬಂದಿದೆ. ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಬಾವನಸೌದತ್ತಿಯಲ್ಲಿ ಈ ಒಂದು ಘಟನೆ ನಡೆದಿದ್ದು, ಘಟನೆಗೆ ಸಂಬಂಧಿಸಿದಂತೆ ಪತ್ನಿ ಸಿದ್ದವ್ವ ಮತ್ತು ಗಣಪತಿ ಕಾಂಬಳೆಯನ್ನು ಇದೀಗ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಜನವರಿ 5ರಂದು ಸೌಗಂಧದೇವಿ ದರ್ಶನಕ್ಕೆ ಪತ್ನಿ ಪತಿಯನ್ನು ಕರೆದುಕೊಂಡು ಹೋಗಿದ್ದಾಳೆ.ಈ ವೇಳೆ ಕೃಷ್ಣಾ ನದಿ ದಂಡೆಯ ಮೇಲೆ ಸ್ನಾನ ಮಾಡುವಾಗ ಪತಿಯನ್ನು ಹತ್ಯೆಗಯ್ಯಲಾಗಿದೆ. ಕಲ್ಲಿನಿಂದ ಜಜ್ಜಿ ಪತ್ನಿ ಸಿದ್ದವ್ವ ಹಾಗೂ ಗಣಪತಿಯಿಂದ ಕೊಲೆ ಮಾಡಲಾಗಿದೆ. ಬಳಿಕ ಶವವನ್ನು ಕೃಷ್ಣಾ ನದಿಗೆ ಎಸೆದು ಆರೋಪಿಗಳು ಪರಾರಿಯಾಗಿದ್ದರು. ಬಳಿಕ ಕೊಲೆ ಕೇಸ್ ದಾಖಲಿಸಿದ್ದ ರಾಯಭಾಗ ಪೊಲೀಸರು ತನಿಖೆ ಬೆಳೆ ಹೆಂಡತಿ…
ಗದಗ : ಗದಗದಲ್ಲಿ ಘೋರವಾದ ದುರಂತ ಸಂಭವಿಸಿದ್ದು, ಟಿಪ್ಪರ್ ಹರಿದು 6 ವರ್ಷದ ಬಾಲಕ ಸಾವನ್ನಪ್ಪಿದ ಘಟನೆ ನಡೆದಿದೆ. ಗದಗ ತಾಲೂಕಿನ ಹರ್ತಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಹರ್ತಿ ಗ್ರಾಮದ ಬಸ್ ನಿಲ್ದಾಣದ ಮುಂದೆ ಈ ದುರ್ಘಟನೆ ನಡೆದಿದ್ದು, ಮೃತ ಬಾಲಕನನ್ನು ಧಾರವಾಡ ಜಿಲ್ಲೆ ಕಲಘಟಗಿ ತಾಲೂಕಿನ ಹಿಂಡಸಗೇರಿ ಗ್ರಾಮದ ಬಾಲಕ ಪ್ರೀತಂ ಹರಿಚನ ಅನ್ನೋ ಬಾಲಕ ಸಾವನ್ನಪ್ಪಿದ್ದಾನೆ.ಈತ ಗದಗ ಜಿಲ್ಲೆಯ ಯತ್ನಳ್ಳಿಗೆ ಆಗಮಿಸಿದ್ದ. ಈ ವೇಳೆ ಬಸ್ ನಿಲ್ದಾಣದ ಬಳಿ ವೇಗವಾಗಿ ಬಂದಿದ್ದ ಟಿಪ್ಪರ್ ಡಿಕ್ಕಿ ಹೊಡೆದು ಬಾಲಕ ಮೃತಪಟ್ಟಿದ್ದಾನೆ. ಹರ್ತಿ ಗ್ರಾಮಸ್ಥರು ಗದಗ- ಲಕ್ಷ್ಮೇಶ್ವರ ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ ನಡೆಸಿದ್ದಾರೆ. ಟೈರ್‌ಗೆ ಬೆಂಕಿ ಹಚ್ಚಿ ಗ್ರಾಮಸ್ಥರು ಆಕ್ರೋಶ ಹೊರಹಾಕಿದ್ದು, RTO ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.ಘಟನೆ ಕುರಿರು ಗದಗ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಗಳೂರು : ಕ್ಯಾಸಿನೋದಲ್ಲಿ ಹೂಡಿಕೆ ಮಾಡಿಸಿ ಲಾಭದ ಆಸೆ ತೋರಿಸಿ ವಂಚನೆ ಎಸಗಿದ್ದು, ಬೆಂಗಳೂರಿನ ಉದ್ಯಮಿ ವಿವೇಕ್ ಹೆಗ್ಡೆಗೆ 25.5 ಕೋಟಿ ರೂಪಾಯಿ ವಂಚಿಸಲಾಗಿದೆ. ಸ್ಯಾಂಡಲ್ ವುಡ್ ಡ್ರಗ್ ಕೇಸ್ ಆರೋಪಿ ರಾಹುಲ್ ತೊನ್ಸೆಯಿಂದ ವಂಚನೆ ಎಸಗಿದ್ದು ಪ್ರಕರಣ ಕುರಿತು ಐವರ ವಿರುದ್ಧ FIR ದಾಖಲಾಗಿದೆ. ಹೌದು ಆರೋಪಿ ರಾಹುಲ್ ತೊನ್ಸೆ ಅಪ್ಪ ರಾಮಕೃಷ್ಣ ರಾವ್ ತಾಯಿ ರಾಜೇಶ್ವರಿ ಸೇರಿ ಐವರ ವಿರುದ್ಧ FIR ದಾಖಲಾಗಿದೆ. ಬೆಂಗಳೂರಿನ ಬಸವೇಶ್ವರನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. Lಪ್ರಕರಣಕ್ಕೆ ಸಂಬಂಧಿಸಿದಂತೆ ರಾಹುಲ್ ತೊನ್ಸೆ ಅಪ್ಪ A1 ಆರೋಪಿ ರಾಮಕೃಷ್ಣ ರಾವ್ ನನ್ನು ಪೋಲೀಸರು ಅರೆಸ್ಟ್ ಮಾಡಿದ್ದಾರೆ. ಈ ಹಿಂದೆ ಇಂದಿರಾನಗರದಲ್ಲಿ ತೊನ್ಸೇ ವಿರುದ್ಧ ಸಂಜನಾ ದೂರು ನೀಡಿದ್ದರು. ಹೂಡಿಕೆ ನೆನಪದಲ್ಲಿ ವಂಚನೆ ಮಾಡಿದ್ದಾನೆ ಎಂದು ಸಂಜನಾ ದೂರು ನೀಡಿದ್ದರು. ಈಗ ವಿವೇಕ್ ಹೆಗಡೆ ಮತ್ತು ಅವರ ಸ್ನೇಹಿತರಿಗೆ 25.5 ಕೋಟಿ ವಂಚನೆ ಎಸಗಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.ಕ್ಯಾಸಿನೊದಲ್ಲಿ ಹೂಡಿಕೆ ಮಾಡುವುದಾಗಿ ನಂಬಿಸಿ ಕೋಟ್ಯಾಂತರ…
ಬೀದರ್ : ರಾಜ್ಯದಲ್ಲಿ ಮತ್ತೊಂದು ಪೈಶಾಚಿಕ ಕೃತ್ಯ ನಡೆದಿದ್ದು, ಯುವಕನ ಪ್ರೀತಿಸಿದ್ದಕ್ಕೆ ಮಗಳನ್ನೇ ಹತ್ಯೆ ಮಾಡಿರುವ ಘಟನೆ ಬೀದರ್ ಜಿಲ್ಲೆಯ ನಡೆದಿದೆ. ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ಬರಗೇನ್ ತಾಂಡಾದಲ್ಲಿ ಯುವಕನನ್ನು ಪ್ರೀತಿ ಮಾಡಿದ್ದಕ್ಕೆ ರೊಚ್ಚಿಗೆದ್ದು ತಂದೆಯೇ ದೊಣ್ಣೆಯಿಂದ ಮಗಳನ್ನ ಹೊಡೆದು ಬರ್ಬರ ಹತ್ಯೆ ಮಾಡಿದ್ದಾನೆ. ಕೊಲೆಯಾದವರನ್ನು ಮೋನಿಕಾ ಮೋತಿರಾಮ ಜಾಧವ್ ಎಂದು ಗುರುತಿಸಲಾಗಿದೆ. ಮೋನಿಕಾ ಒಬ್ಬ ಹುಡುಗನನ್ನು ಪ್ರೀತಿ ಮಾಡುತ್ತಿದ್ದಳು. ಪ್ರೀತಿಯ ವಿಷಯವನ್ನು ತನ್ನ ತಂದೆಯ ಎದುರು ಪ್ರಸ್ತಾಪ ಮಾಡಿದ್ದಳು. ಆದರೆ ಮೋತಿರಾಮ ಪ್ರೀತಿ -ಪ್ರೇಮದಿಂದ ದೂರವಿರುವಂತೆ ಮಗಳಿಗೆ ಹೇಳಿ, ನಿನಗೆ ಒಳ್ಳೆಯ ಹುಡುಗನನ್ನು ನೋಡಿ ಮದುವೆ ಮಾಡುತ್ತೇನೆ ಎಂದು ತಿಳುವಳಿಕೆ ಹೇಳಿದ್ದನು. ಮೋತಿರಾಮ ಬುದ್ದಿಮಾತು ಹೇಳಿದ್ದರೂ, ಸಹ ಮೋನಿಕಾ ನಾನು ಅವನನ್ನೇ ಮದುವೆ ಆಗುತ್ತೇನೆ ಎಂದು ಹಠ ಮಾಡಿದ್ದಳಂತೆ. ತಂದೆ ಏನೆ ಬುದ್ದಿಮಾತು ಹೇಳಿದ್ರೂ ಕೇಳದ ಹಿನ್ನೆಲೆ ಕೋಪಗೊಂಡ ಮೋತಿರಾಮ, ಮನೆಯಲ್ಲಿ ಯಾರು ಇಲ್ಲದ ವೇಳೆ ಅಡುಗೆ ಮಾಡುತ್ತಿದ್ದ ಮಗಳ ಕುತ್ತಿಗೆಗೆ ಹಗ್ಗ ಬಿಗಿದು ಹತ್ಯೆಗೈದಿದ್ದಾನೆ. ತೀವ್ರ ರಕ್ತಸ್ರಾವದಿಂದ…
ಚಿತ್ರದುರ್ಗ : ಗಳಿಸಿರುವ ಹಣ, ಆಸ್ತಿಯನ್ನು ದುಂದು ವೆಚ್ಚ ಮಾಡಿ ಹಾಳು ಮಾಡಬೇಡ ಎಂದು ಪತ್ನಿ ಬುದ್ಧಿ ಹೇಳಿದಕ್ಕೆ ಕುಪಿತಗೊಂಡ ಪತಿರಾಯ ಒಬ್ಬ ಕತ್ತು ಹಿಸುಕಿ ಹತ್ಯೆಗೈದಿರುವ ಘಟನೆ ಚಿತ್ರದುರ್ಗ ತಾಲ್ಲೂಕಿನ ಮೆದೇಹಳ್ಳಿ ಗ್ರಾಮದಲ್ಲಿ ನಡೆದಿದೆ. ಕೊಲೆಯಾದ ಮಹಿಳೆಯನ್ನು ಶ್ರೀದೇವಿ (48) ಎಂದು ತಿಳಿದುಬಂದಿದೆ. ಇನ್ನು ಹತ್ಯೆಗೈದ ಪತಿಯನ್ನು ಉಮಾಪತಿ ಎಂದು ತಿಳಿದುಬಂದಿದೆ. ಉಮಾಪತಿ ತನ್ನ ಜಮೀನು ಮಾರಾಟದಿಂದಾಗಿ ಬಂದ ಹಣವನ್ನೆಲ್ಲಾ ಮನಬಂದಂತೆ ಖರ್ಚು ಮಾಡುತ್ತಾನೆಂಬ ಹಿನ್ನೆಲೆ ಪತ್ನಿ ಶ್ರೀದೇವಿ ಆಗಾಗ್ಗೆ ಎಚ್ಚರಿಸುತಿದ್ದಳು. ಈ ವಿಚಾರಕ್ಕೆ ಇಬ್ಬರ ಮಧ್ಯೆ ಕಲಹ ಆಗಾಗ ನಡೆಯುತ್ತಿತ್ತು. ಇದರಿಂದ ಬೇಸತ್ತ ಪತ್ನಿ ಉಳಿದ ಜಮೀನು ಆದರೂ ನನ್ನ ಹಾಗೂ ಮಕ್ಕಳ ಹೆಸರಲ್ಲಿ ಮಾಡಿ ಎಂದು ಗಲಾಟೆ ಮಾಡುತ್ತಿದ್ದರು. ಇದರಿಂದಾಗಿ ಆಕ್ರೋಶಗೊಂಡ ಉಮಾಪತಿ ಮನೆಯಲ್ಲಿ ಯಾರೂ ಇಲ್ಲದ ವೇಳೆ ಸ್ಕೆಚ್ ಹಾಕಿ, ಫೆಬ್ರವರಿ 7 ರಂದು ಬೆಳಗ್ಗೆ ಶ್ರೀದೇವಿ ಮನೆಯಲ್ಲಿ ಪೂಜೆ ಮಾಡುತ್ತಿದ್ದಾಗ, ಆಕೆಯ ಸೀರೆಯಿಂದ ಕೊರಳಿಗೆ ಸುತ್ತಿ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ. ಕೊಡಲೇ ಅಕ್ಕಪಕ್ಕದ ಮನೆಯವರನ್ನೆಲ್ಲಾ…
ತುಮಕೂರು : ರಾಜ್ಯದಲ್ಲಿ ಮತ್ತೊಂದು ಭೀಕರವಾದ ಅಪಘಾತ ಸಂಭವಿಸಿದ್ದು, ಬೈಕ್ ಗೆ ವೇಗವಾಗಿ ಬಂದಂತಹ ಕೆಎಸ್ಆರ್ಟಿಸಿ ಬಸ್ ಒಂದು ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಇಬ್ಬರು ಸವಾರರು ಸಾವನ್ನಪ್ಪಿರುವ ಘಟನೆ ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನ ನೊಣವಿನಕೆರೆ ಬಳಿ ಆಲ್ಬುರಿನಲ್ಲಿ ನಡೆದಿದೆ. ಮೃತರನ್ನು ಬಿದರೆಕೆರೆ ಗ್ರಾಮದ ಯೋಗೇಶ್(23), ದಯಾನಂದ್(25) ಎಂದು ತಿಳಿದುಬಂದಿದೆ.ನಿನ್ನೆ ರಾತ್ರಿ ಯೋಗೇಶ್ ಮತ್ತು ದಯಾನಂದ್ ಒಂದೇ ಬೈಕ್‌ನಲ್ಲಿ ಬಿದರೆಕೆರೆ ಕಡೆಯಿಂದ ತುರುವೇಕೆರೆ ಕಡೆಗೆ ತೆರಳುತ್ತಿದ್ದರು. ಈ ವೇಳೆ ತುರುವೇಕೆರೆ ಕಡೆಯಿಂದ ಬಂದ ಕೆಎಸ್‌ಆರ್‌ಟಿಸಿ ಬಸ್ ಬೈಕ್‌ಗೆ ಡಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ಬೈಕ್‌ನಲ್ಲಿದ್ದ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೃತ ಯೋಗೇಶ್ ಮತ್ತು ದಯಾನಂದ ಗ್ಯಾರೇಜ್ ಒಂದರಲ್ಲಿ ಕೆಲಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ ಘಟನಾ ಸ್ಥಳಕ್ಕೆ ನೊಣವಿನಕೆರೆ ಪೊಲೀಸ್ ಠಾಣೆಯ ಪೊಲೀಸರು ಭೇಟಿ ನೀಡಿದ್ದು ಪರಿಶೀಲನೆ ನಡೆಸುತ್ತಿದ್ದಾರೆ. ಅಪಘಾತದ ಕುರಿತು ನೊಣವಿನಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಯಾದಗಿರಿ : ಯಾದಗಿರಿಯಲ್ಲಿ ಭೀಕರವಾದಂತಹ ಅಪಘಾತ ಸಂಭವಿಸಿದ್ದು, ಬೈಕ್ ಸ್ಕಿಡ್ ಆಗಿ ಸವಾರ ರಸ್ತೆ ಮೇಲೆ ಬಿದ್ದಿದ್ದ. ಈ ವೇಳೆ ಬೈಕ್ ಸವಾರನನ್ನು ತಪ್ಪಿಸಲು ಬಸ್ ಚಾಲಕ ನಿಯಂತ್ರಣ ಕಳೆದುಕೊಂಡು ಬಸ್ ಪಲ್ಟಿ ಆಗಿ ಬಿದ್ದ ಪರಿಣಾಮ 15 ಜನರು ಗಾಯಗೊಂಡಿರುವ ಘಟನೆ ಯಾದಗಿರಿ ಜಿಲ್ಲೆಯ ವಡಗೇರಾ ಪಟ್ಟಣದಲ್ಲಿ ನಡೆದಿದೆ. ಹೌದು ಯಾದಗಿರಿ ಜಿಲ್ಲೆ ವಡಗೇರ ಪಟ್ಟಣದ ಸಮೀಪ ಚಾಲಕನ ನಿಯಂತ್ರಣ ತಪ್ಪಿ ಕೆಕೆಆರ್ಟಿಸಿ ಬಸ್ ಪಲ್ಟಿಯಾಗಿದೆ. 15ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಯಾದಗಿರಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ರಸ್ತೆ ಮಧ್ಯೆ ಸ್ಕೀಡ್ ಆಗಿ ಬೈಕ್ ಸವಾರ ಬಿದ್ದಿದ್ದನು. ಬಸ್ ಚಾಲಕ ಬೈಕ್ ಸವಾರರನ್ನು ತಪ್ಪಿಸಲು ಹೋಗಿದ್ದನು. ಈ ವೇಳೆ ಸಾರಿಗೆ ಬಸ್ ರಸ್ತೆ ಕೆಳಗೆ ಇಳಿದು ಪಲ್ಟಿಯಾಗಿದೆ. ವಡಗೇರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ತುಮಕೂರು : ಸಾಮಾನ್ಯವಾಗಿ ಈ ಡೆಂಘಿ ಕಾಯಿಲೆ ಮಳೆಗಾಲದಲ್ಲಿ ಕಂಡುಬರುತ್ತದೆ. ಆದರೆ ಈಗ ಬೇಸಿಗೆ ಕಾಲ ಸಮೀಪಸುತ್ತಿದ್ದೂ, ಈಗಲೂ ಡೆಂಘಿ ಜ್ವರದಿಂದ 7 ವರ್ಷದ ಬಾಲಕನೊಬ್ಬ ಸಾವನ್ನಪ್ಪಿರುವ ಘಟನೆ ತುಮಕೂರು ಜಿಲ್ಲೆಯ ಪಾವಗಡದಲ್ಲಿ ನಡೆದಿದೆ. ಹೌದು ಪಾವಗಡ ಪಟ್ಟಣದ ಬಾಬೈಯನ ಗುಡಿ ಬೀದಿ ನಿವಾಸಿ ಕರುಣಾಕರ್ ಈಗ ಡೆಂಘಿಗೆ ಬಲಿಯಾಗಿದ್ದು, ಬಾಲಕನ ಸಾವು ಜನರಲ್ಲಿ ಭಯ ಮೂಡಿಸಿದೆ. ಹರೀಶ್ ಕುಮಾರ್ ಪುತ್ರ ಕರುಣಾಕರ್ ತೀವ್ರವಾಗಿ ಬಳಲಿ ಪಾವಗಡ ಖಾಸಗಿ ಕ್ಲಿನಿಕ್ ಒಂದರಲ್ಲಿ ಕಳೆದ 8 ದಿನದಿಂದ ಚಿಕಿತ್ಸೆ ಪಡೆಯುತಿದ್ದ. ಆದರೆ ಚಿಕಿತ್ಸೆ ಫಲಿಸದೆ ಬಾಲಕ ಮೃತಪಟ್ಟಿದ್ದಾನೆ. ಬಾಲಕನಿಗೆ ಡೆಂಘಿ ಜ್ವರ ಇರುವ ಕುರಿತು ಕೊನೇ ಕ್ಷಣದವರೆಗು ವೈದ್ಯರು ಪೋಷಕರಿಗೆ ತಿಳಿಸಿಲ್ಲ ಎನ್ನುವ ಆರೋಪ ಕೇಳಿಬಂದಿದೆ. ವೈದ್ಯರ ನಿರ್ಲಕ್ಷ್ಯಕ್ಕೆ ಮಗ ಸಾವನ್ನಪ್ಪಿದ್ದಾನೆ ಎಂದು ಮೃತ ಬಾಲಕನ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದು, ಕ್ಲಿನಿಕ್ ಎದುರು ಇದೀಗ ಪ್ರತಿಭಟನೆ ನಡೆಸಿ ಕ್ರಮಕ್ಕೆ ಅಗ್ರಹಿಸಿದ್ದಾರೆ.














