Author: kannadanewsnow05

ಬೆಂಗಳೂರು : ನಾಳೆಯಿಂದ ಬೆಂಗಳೂರಿನ ಯಲಹಂಕದ ಬಳಿ ಏರ್ ಶೋ ಆರಂಭವಾಗಲಿದ್ದು, ಫೆಬ್ರವರಿ 14ರ ವರೆಗೆ ಈ ಒಂದು ಏರ್ ಶೋ ನಡೆಯಲಿದೆ. ಈಗಾಗಲೇ ಏರ್ ಶೋ ಗೆ ಸಕಲ ಸಿದ್ಧತೆಗಳನ್ನು ಮಾಡಿಕೊಡಲಾಗಿದ್ದು, ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಫೆಬ್ರವರಿ 12ರವರೆಗೆ ರಾಜ್ಯ ಪ್ರವಾಸ ಕೈಗೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ. ಹೌದು ಫೆಬ್ರವರಿ 12ರ ವರೆಗೆ ರಕ್ಷಣಾ ಸಚಿವ ರಾಜನಾಥ ಸಿಂಗ್ ರಾಜ್ಯ ಪ್ರವಾಸಕ್ಕೆ ಗೊಳ್ಳಲಿದ್ದಾರೆ. ಹಾಗಾಗಿ ಇಂದು ಸಂಜೆ 5 ಗಂಟೆಗೆ ರಾಜನಾಥ್ ಸಿಂಗ್ ಸುದ್ದಿಗೋಷ್ಠಿ ನಡೆಸಲಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಹ ಭಾಗಿಯಾಗಲಿದ್ದಾರೆ. ನಾಳೆ ಬೆಳಗ್ಗೆ 9:30ಕ್ಕೆ ರಾಜನಾಥ್ ಸಿಂಗ್ ಏರ್ ಶೋ ಉದ್ಘಾಟಿಸಲಿದ್ದಾರೆ. ಫೆಬ್ರವರಿ 12ರವರೆಗೆ ಏರ್ ಶೋ ವಿವಿಧ ಕಾರ್ಯಕ್ರಮಗಳಲ್ಲಿ ರಾಜನಾಥ್ ಸಿಂಗ್ ಭಾಗಿಯಾಗಲಿದ್ದಾರೆ ಎಂದು ತಿಳಿದುಬಂದಿದೆ.

Read More

ಬೆಂಗಳೂರು : ಪ್ರಖ್ಯಾತ ಗಾಯಕ ಎಡ್ ಶೆರಾನ್ ಬೆಂಗಳೂರಿನ ಕಬ್ಬನ್ ಪಾರ್ಕ್ ಠಾಣೆ ವ್ಯಾಪ್ತಿಯ ಚರ್ಚ್ ಸ್ಟ್ರೀಟ್ ಫುಟ್ಪಾತ್ ನಲ್ಲಿ ಸಂಗೀತ ಕಾರ್ಯಕ್ರಮ ನಡೆಸುತ್ತಿದ್ದರು. ಅನುಮತಿ ಇಲ್ಲದೆ ಸಂಗೀತ ಕಾರ್ಯಕ್ರಮ ನಡೆಸುತ್ತಿದ್ದ ಹಿನ್ನೆಲೆಯಲ್ಲಿ ಪೊಲೀಸರು ಅರ್ಧಕ್ಕೆ ಹಾಡು ನಿಲ್ಲಿಸಿ ಕಳುಹಿಸಿರುವ ಘಟನೆ ನಡೆದಿದೆ. ಹೌದು ಪ್ರಖ್ಯಾತ ಗಾಯಕ ಎಡ್ ಶೆರಾನ್ ಸಂಗೀತ ಕಾರ್ಯಕ್ರಮ ನಡೆಸುತ್ತಿದ್ದರು. ಅನುಮತಿ ಇಲ್ಲದೆ ಈ ಒಂದು ಗಾಯಕ ಸಂಗೀತ ಹಾಡು ಹಾಡುತ್ತಿದ್ದ. ಈ ವೇಳೆ ಹೆಚ್ಚು ಜನ ಸೇರುತ್ತಿದ್ದಂತೆ ಮಧ್ಯದಲ್ಲಿ ಪೊಲೀಸರು ಎಂಟ್ರಿ ಕೊಟ್ಟಿದ್ದಾರೆ. ಈ ವೇಳೆ ಪೊಲೀಸರು ಅರ್ಧಕ್ಕೆ ಸಂಗೀತ ಕಾರ್ಯಕ್ರಮ ನಿಲ್ಲಿಸಿದ್ದಾರೆ. ರಸ್ತೆ ಬದಿಯಲ್ಲಿ ಸಂಗೀತ ಕಾರ್ಯಕ್ರಮ ನಡೆಸಲು ಯಾವುದೆ ರೀತಿಯಾದ ಅನುಮತಿ ಎಡ್ ಶೆರಾನ್ ಯಾವುದೇ ಅನುಮತಿ ಪಡೆದಿರಲಿಲ್ಲ. ಫುಟ್ಪಾತ್ ನಲ್ಲಿ ಹಾಡು ಹಾಡುತ್ತಿದ್ದ ಹಾಗಾಗಿ ಕೂಡಲೇ ಪೊಲೀಸರು ಸ್ಥಳಕ್ಕೆ ಆಗಮಿಸಿ ಅರ್ಧಕ್ಕೆ ಹಾಡು ನಿಲ್ಲಿಸಿ ಪೊಲೀಸರು ಅಲ್ಲಿಂದ ಕಳಿಸಿದ್ದಾರೆ. ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಬೆಂಗಳೂರು : ನಾಳೆಯಿಂದ ಫೆಬ್ರವರಿ 14 ರವರೆಗೆ ಬೆಂಗಳೂರಿನ ಯಲಹಂಕದ ಬಳಿ ಏರ್ ಶೋ ಹಮ್ಮಿಕೊಳ್ಳಲಾಗಿದೆ.ಈ ಹಿನ್ನೆಲೆಯಲ್ಲಿ ಈಗಾಗಲೇ ಸಕಲ ಸಿದ್ಧತೆ ಮಾಡಿಕೊಂಡಿದ್ದು, ಏರ್ ಶೋ ರಿಹರ್ಸಲ್ ಕೂಡ ನಡೆಯುತ್ತಿದೆ. ಇದೀಗ ರಿಹರ್ಸಲ್ ವೇಳೆ ಪೊಲೀಸರಿಗೆ ನೀಡಿದ ಊಟದಲ್ಲಿ ಜಿರಳೆ ಪತ್ತೆಯಾಗಿದೆ ಎಂದು ವರದಿಯಾಗಿದೆ. ಹೌದು ಬೆಂಗಳೂರಿನ ಯಲಹಂಕ ಸಮೀಪ ಇಂದು ಏರ್ ಶೋ ರಿಹರ್ಸಲ್ ನಡೆಯುತ್ತಿತ್ತು. ಈ ಸಂದರ್ಭದಲ್ಲಿ ಪೊಲೀಸ್ ಸಿಬ್ಬಂದಿಗಳಿಗೆ ನೀಡಿದ ಊಟದಲ್ಲಿ ಜಿರಳೆ ಪತ್ತೆಯಾಗಿದೆ. ಏರ್ ಶೋ ಗೆ ಬಂದಂತಹ ಪೊಲೀಸ್ ಸಿಬ್ಬಂದಿಗಳಿಗೆ ಇನ್ಸ್ಪೆಕ್ಟರ್ ಊಟದ ವ್ಯವಸ್ಥೆ ಮಾಡಿಸಿದ್ದರು. ಯಲಹಂಕ ಠಾಣೆ ಇನ್ಸ್ಪೆಕ್ಟರ್ ಕೃಷ್ಣಮೂರ್ತಿ ಊಟದ ವ್ಯವಸ್ಥೆ ಮಾಡಿಸಿದ್ದರು. ಯಲಹಂಕ ಪೊಲೀಸ್ ಠಾಣೆಯಿಂದ ಸಿಬ್ಬಂದಿಗಳಿಗೆ ಊಟ ನೀಡಲಾಗಿತ್ತು. ಜಿರಳೆ ಕಂಡುಬಂದ ಹಿನ್ನೆಲೆಯಲ್ಲಿ ಹಲವು ಪೊಲೀಸ್ ಸಿಬ್ಬಂದಿಗಳು ಊಟ ಬಿಟ್ಟಿದ್ದಾರೆ. ಒಂದು 200 ಊಟಕ್ಕೆ ನೀಡುವುದಾಗಿ ಆದೇಶ ಹೊರಡಿಸಲಾಗಿದೆ. ಪೊಲೀಸ್ ಮಹಾ ನಿರ್ದೇಶಕರ ಕಚೇರಿಯಿಂದ ಫೆಬ್ರವರಿ 4ರಂದು ಆದೇಶ ಪ್ರಕಟವಾಗಿದೆ ಆದೇಶವಾಗಿದ್ದು, ಕೆಲವೇ ದಿನಗಳಲ್ಲಿ ಗುಣಮಟ್ಟ ಮತ್ತು ಶುಚಿತ್ವ…

Read More

ರಾಯಚೂರು : ಸ್ನೇಹಿತರ ಮನೆಗೆ ಹೋಗಿ ಬರುತ್ತೇನೆ ಎಂದು ಪೋಷಕರಿಗೆ ತಿಳಿಸಿ ರಾಯಚೂರಿನ ರಿಮ್ಸ್ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿನಿಯೊಬ್ಬಳು ನಾಪತ್ತೆಯಾಗಿರುವ ಘಟನೆ ಇಂದು ನಡೆದಿದೆ. ನಾಪತ್ತೆಯಾದ ವಿದ್ಯಾರ್ಥಿನಿಯನ್ನು ಕಲಬುರಗಿ ಮೂಲದ MS ವಿದ್ಯಾರ್ಥಿನಿ ಡಾ.ಭಾಗ್ಯಲಕ್ಷ್ಮಿ ಕಾಣೆಯದ ವಿದ್ಯಾರ್ಥಿ ಎಂದು ತಿಳಿದುಬಂದಿದೆ. ಈಕೆ ಕಳೆದ 15 ದಿನಗಳ ಹಿಂದೆ ರಿಮ್ಸ್ ಮೆಡಿಕಲ್ ಕಾಲೇಜಿನಲ್ಲಿ ಸ್ನಾತಕೋತ್ತರ ಪದವಿಗೆ ಪ್ರವೇಶ ಪಡೆದಿದ್ದಳು. ಭಾಗ್ಯಲಕ್ಷ್ಮಿ ಸ್ನೇಹಿತರ ಮನೆ ಹೋಗುವುದಾಗಿ ಹೇಳಿ ತೆರಳಿದ್ದು, ಮರಳಿ ಬಂದಿಲ್ಲ. ಮಗಳ ಪೋನ್ ಸ್ವಿಚ್‌ ಆಫ್ ಆಗಿದಕ್ಕೆ ಆತಂಕಗೊಂಡ ಪೋಷಕರು ಮಾರ್ಕೆಟ್ ಯಾರ್ಡ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

Read More

ದಾವಣಗೆರೆ : ಬಿಎಸ್ ಯಡಿಯೂರಪ್ಪ ಹಾಗೂ ಬಿವೈ ವಿಜಯೇಂದ್ರ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಇದೀಗ ಎಂ ಪಿ ರೇಣುಕಾಚಾರ್ಯ ವಾಗ್ದಾಳಿ ಮುಂದುವರಿಸಿದ್ದು, ಯತ್ನಾಳ ಸುತ್ತಮುತ್ತಲು ಇರುವವರೇ ಅವರನ್ನು ಕೊಬ್ಬಿದ ಕೋಣ ಬಲಿಕೊಡುವ ಹಾಗೆ ಬಲಿಕೊಡುತ್ತಾರೆ ಎಂದು ವಾಗ್ದಾಳಿ ನಡೆಸಿದರು. ಇಂದು ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಜಾತ್ರೆಯಲ್ಲಿ ಮಾಜಿ ಸಚಿವ ಎಂಪಿ ರೇಣುಕಾಚಾರ್ಯ ಮಾತನಾಡಿ, ನಮ್ಮ ಬಗ್ಗೆ ಮಹಾನುಭಾವ ಯತ್ನಾಳ್ ಏನೇನೋ ಮಾತನಾಡುತ್ತಾರೆ. ಕೊಬ್ಬಿದ ಕೋಣ ಬಲಿ ಕೊಡುವಂತೆ ಶಾಸಕ ಯತ್ನಾಳ್ ಅವರನ್ನು ಬಲಿಕೊಡುತ್ತಾರೆ. ಅವರ ಜೊತೆಯಲ್ಲಿ ಇರುವವರೇ ಅವರನ್ನು ಬಲಿಕೊಡುತ್ತಾರೆ. ಎಂದು ವಾಗ್ದಾಳಿ ನಡೆಸಿದರು. ಶಾಸಕ ಯತ್ನಾಳ್ ಜೊತೆಗೆ ಒಂದು ತಂಡ ಇದೆ.ಅದೇ ತಂಡ ಯತ್ನಾಳ್ ಅವರನ್ನು ಮುಗಿಸುತ್ತದೆ. ಗ್ರಾಮೀಣ ಪ್ರದೇಶದಲ್ಲಿ ದೇವರಿಗೆ ಬಲಿ ಕೊಡಲು ಕೋಣವನ್ನು ಬಿಟ್ಟಿರುತ್ತಾರೆ. ಸುಣ್ಣದ ನೀರು ಹಾಗೂ ಉಪ್ಪಿನ ನೀರು ಕುಡಿಸಿ ಕೋಣ ಬಲಿಕೊಡುತ್ತಾರೆ. ಕೊಬ್ಬಿದ ಕೋಣವನ್ನು ಬಲಿ ಕೊಡುವಂತೆ ಯತ್ನಾಳನ್ನು ಬಲಿಕೊಡುತ್ತಾರೆ.ನನ್ನ…

Read More

ಬೆಂಗಳೂರು : ಮುಡಾ ಹಗರಣಕ್ಕೆ ಸಂಬಂಧಪಟ್ಟಂತೆ ಇತ್ತೀಚೆಗೆ ಹೈಕೋರ್ಟ್ ಸಿಎಂ ಸಿದ್ದರಾಮಯ್ಯ ಅವರಿಗೆ ಬಿಗ್ ರಿಲೀಫ್ ನೀಡಿತ್ತು. ಈ ಒಂದು ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕು ಎಂದು ಸ್ನೇಹಮಯಿ ಕೃಷ್ಣ ಅವರು ಸಲ್ಲಿಸಿದ್ದ ಅರ್ಜಿಯನ್ನು ಸಹ ವಜಾ ಗೊಳಿಸಿತ್ತು. ಇದೀಗ ಇದೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಲೋಕಾಯುಕ್ತ ಅಂತಿಮ ವರದಿಯಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಕುಟುಂಬಸ್ಥರೇ ಸಂತ್ರಸ್ತರಾಗಿದ್ದಾರೆ ಎಂದು ಉಲ್ಲೇಖಿಸಿದೆ. ಹೌದು ಎಂ ಮತ್ತು ಕುಟುಂಬದ ವಿರುದ್ಧದ ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಅಂತಿಮ ವರದಿ ತಯಾರಿಸಿದ್ದು, ವರದಿಯಲ್ಲಿ ಸಿಎಂ ಕುಟುಂಬಕ್ಕೆ ಕ್ಲೀನ್‌ಚಿಟ್‌ ಕೊಡುವ ಜೊತೆಗೆ ಸಿಎಂ ಕುಟುಂಬವೇ ಸಂತ್ರಸ್ತರು ಎಂದು ಲೋಕಾಯುಕ್ತ ಉಲ್ಲೇಖಿಸಿರುವುದಾಗಿ ಬಲ್ಲ ಮೂಲಗಳಿಂದ ತಿಳಿದುಬಂದಿದೆ. ಅಲ್ಲದೇ ಮುಡಾದ ಮಾಜಿ ಆಯುಕ್ತ ನಟೇಶ್ ಈ ಪ್ರಕರಣ ಪ್ರಮುಖ ಆರೋಪಿ ಎಂದು ಕೂಡ ಉಲ್ಲೆಖಿಸಿದೆ. ಮೈಸೂರಿನ ಕೆಸರೆಯಲ್ಲಿನ ತಮ್ಮ ಜಮೀನಿಗೆ ಬದಲಿಯಾಗಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ವಿಜಯನಗರದ 3 ಮತ್ತು 4ನೇ ಹಂತಗಳಲ್ಲಿ ವಿವಿಧ ಅಳತೆಯಲ್ಲಿ ಸಿಎಂ ಕುಟುಂಬಕ್ಕೆ 14 ನಿವೇಶನಗಳನ್ನ…

Read More

ಬೆಂಗಳೂರು : ಬೆಂಗಳೂರಿನಲ್ಲಿ ಮತ್ತೊಂದು ಭೀಕರ ವಾದಂತಹ ಅಪಘಾತ ಸಂಭವಿಸಿದ್ದು, ಕಾಂಕ್ರೀಟ್ ಲಾರಿ ಹಾಗೂ ಬೈಕ್ ನಡುವೆ ಅಪಘಾತ ಸಂಭವಿಸಿ ಬೈಕ್ ನಲ್ಲಿ ಚಲಿಸುತ್ತಿದ್ದ ದಂಪತಿಗಳು ಸ್ಥಳದಲ್ಲೇ ಸಾವನ್ನುಪ್ಪಿರುವ ಘಟನೆ ಬೆಂಗಳೂರಿನ ಉತ್ತರಹಳ್ಳಿಯ ಮಧು ಜಂಕ್ಷನ್ ಬಳಿ ಈ ಒಂದು ಘಟನೆ ನಡೆದಿದೆ. ಹೌದು ಕಾಂಕ್ರೀಟ್ ಮಿಕ್ಸರ್ ಲಾರಿ ಹಾಗೂ ಬೈಕ್ ನಡುವೆ ಭೀಕರವಾದ ಅಪಘಾತ ಸಂಭವಿಸಿದೆ ಡಿಕ್ಕಿ ರಬಸಕ್ಕೆ ಸ್ಥಳದಲ್ಲೇ ದಂಪತಿಗಳು ಉಸಿರು ಚೆಲ್ಲಿದ್ದಾರೆ. ಬೆಂಗಳೂರಿನ ಉತ್ತರಹಳ್ಳಿಯ ಮಧು ಜಂಕ್ಷನ್ ಬಳಿ ಈ ಒಂದು ಅಪಘಾತ ಸಂಭವಿಸಿದೆ.ಮೃತ ದಂಪತಿಗಳನ್ನು ಆಸಿಫ್ ಅಹಮದ್ ಹಾಗೂ ಶಬಾನಾ ಬೇಗಂ ಎಂದು ತಿಳಿದುಬಂದಿದೆ. ಟ್ಯಾನರಿ ರಸ್ತೆಯಿಂದ ಬೈಕ್ ನಲ್ಲಿ ದಂಪತಿಗಳು ದರ್ಗಾಕೆ ತೆರಳುತ್ತಿದ್ದರು. ಈ ವೇಳೆ ಕಾಂಕ್ರೀಟ್ ಮಿಕ್ಸರ್ ಲಾರಿ ವೇಗವಾಗಿ ಬಂದು  ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ. ಕೂಡಲೇ ಲಾರಿ ಚಾಲಕನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಸದ್ಯ ಘಟನಾ ಸ್ಥಳಕ್ಕೆ ಕೆಂಗೇರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ…

Read More

ಗದಗ : ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಕಿರುಕುಳದಿಂದ ಅನೇಕ ಜನರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಅಲ್ಲದೆ ಕೆಲವರು ಆತ್ಮಹತ್ಯೆಗೆ ಕೂಡ ಯತ್ನಿಸಿರುವ ಘಟನೆಗಳು ವರದಿಯಾಗಿವೆ. ಇದೀಗ ಗದಗ ಮತ್ತು ಬೆಟಗೇರಿಯಲ್ಲಿ ಪೊಲೀಸರು ಜಂಟಿ ಕಾರ್ಯಚರಣೆ ನಡೆಸಿದ್ದು, ಬಡ್ಡಿ ದಂಧೆಕೊರರ ಮನೆಯ ಮೇಲೆ ದಾಳಿ ಮಾಡಿ ನಗದು ಹಣ ಸೇರಿದಂತೆ ಹಲವು ವಸ್ತುಗಳನ್ನು ಜಪ್ತಿ ಮಾಡಿದ್ದಾರೆ. ಹೌದು ಗದಗ ಬೆಟಗೇರಿ ಅವಳಿ ನಗರದಲ್ಲಿ ಪೊಲೀಸರಿಂದ ಧಿಡೀರ್ ದಾಳಿ ನಡೆದಿದ್ದು, ಬಡ್ಡಿ ದಂಧೆಕೋರರ ಮನೆಗಳಲ್ಲಿ ನಗದು, ಬಾಂಡ್ ಮತ್ತು ಖಾಲಿ ಚೆಕ್ ಗಳನ್ನು ಜಪ್ತಿ ಮಾಡಿಕೊಂಡಿದ್ದಾರೆ. ಇದೆ ವೇಳೆ ನಗರದ ಸಂಗಮೇಶ್ ದೊಡ್ಡಣ್ಣನವರ ಮನೆಯಲ್ಲಿ 26 ಲಕ್ಷ ರೂಪಾಯಿ ನಗದು, ಖಾಲಿಬಾಂಡ್ ಚೆಕ್ ದಾಖಲೆಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ ರವಿ ಗೌಡ ಮನೆಯಲ್ಲಿ ಚೆಕ್ಬಾಂಡ್ ಹಣ ಎಣಿಸುವ ಮಷೀನ್ ಪತ್ತೆಯಾಗಿದೆ. ಕೆಲವರು ನೋಂದಣಿ ಮಾಡಿಸಿ ಅವ್ಯವಹಾರ ನಡೆಸುತ್ತಿದ್ದರೆ, ಇನ್ನು ಕೆಲವರು ಅನಧಿಕೃತವಾಗಿ ಬಡ್ಡಿ ದಂಧೆ ನಡೆಸುತ್ತಿದ್ದಾರೆ. ಧಮ್ಕಿ ಮತ್ತು ಬೆದರಿಕೆ ಹಾಕಿ ಸಾಲ ನೀಡಿದ ಜನರಿಂದ…

Read More

ಬೆಂಗಳೂರು : ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ರಾಜನಹಳ್ಳಿಯಲ್ಲಿ ವಾಲ್ಮೀಕಿ ಜಾತ್ರೆ ನಡೆಯುತ್ತಿದ್ದು ಇಂದು ಬಿಜೆಪಿ ರಾಜ್ಯೇಂದ್ರ ಆ ಒಂದು ಕಾರ್ಯಕ್ರಮದಲ್ಲಿ ಭಾಗಿಯಾಗಲು ಕೇಳುತ್ತಿದ್ದರು ಆದರೆ ದೆಹಲಿಯಿಂದ ಹೈಕಮಾಂಡ್ ಬುಲಾವ್ ಹಿನ್ನೆಲೆಯಲ್ಲಿ ಕಾರ್ಯಕ್ರಮವನ್ನು ದಿಢೀರ್ ಎಂದು ರದ್ದುಗೊಳಿಸಿ ದೆಹಲಿಗೆ ತೆರಳಿದ್ದಾರೆ. ಹೌದು ರಾಜನಹಳ್ಳಿಯ ವಾಲ್ಮೀಕಿ ಜಾತ್ರೆಗೆ ಬಿವೈ ವಿಜಯೇಂದ್ರ ತೆರಳುತ್ತಿದ್ದರು. ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ರಾಜನಹಳ್ಳಿ ವಾಲ್ಮೀಕಿ ಜಾತ್ರೆ ನಡೆಯುತ್ತಿದ್ದು ಈ ಒಂದು ಕಾರ್ಯಕ್ರಮಕ್ಕೆ ಬಿವೈ ವಿಜಯೇಂದ್ರ ತೆರಳುತ್ತಿದ್ದ ಸಂದರ್ಭದಲ್ಲಿ ದೆಹಲಿಯ ಹೈಕಮಾಂಡ್ ನಿಂದ ಬಲಾವ್ ಬಂದಿದೆ. ಈ ಹಿನ್ನೆಲೆಯಲ್ಲಿ ತಕ್ಷಣ ಬಿವೈ ವಿಜಯೇಂದ್ರ ವಾಪಸ್ ಮರಳಿದ್ದಾರೆ. ಬೆಂಗಳೂರಿನ ನೆಲಮಂಗಲದಿಂದಲೇ ರಾಜ್ಯ ಬಿಜೆಪಿ ಅಧ್ಯಕ್ಷ ಬಿ ವೈ ವೀಜೇಂದ್ರ ವಾಪಸ್ ಆಗಿದ್ದಾರೆ. ಹೈಕಮಾಂಡ್ ಭೇಟಿಗಾಗಿ ಕೂಡಲೇ ದಿಢೀರ್ ಎಂದು ದೆಹಲಿಗೆ ತೆರಳಿದ್ದಾರೆ ಎಂದು ತಿಳಿದುಬಂದಿದೆ.

Read More

ಕಲಬುರ್ಗಿ : ಸಿಗ್ನಲ್ ದಾಟುವಾಗ ಎಲೆಕ್ಟ್ರಿಕ್ ಬೈಕ್ ಗೆ ಲಾರಿ ಢಿಕ್ಕಿ ಹೊಡೆದು ಓರ್ವ ವ್ಯಕ್ತಿ ಮೃತಪಟ್ಟಿರುವ ಘಟನೆ ಶನಿವಾರ ರಾತ್ರಿ ಕಲಬುರ್ಗಿ ನಗರದ ಹೊರವಲಯದ ಹಾಗರಗಾ ಕ್ರಾಸ್ ಬಳಿ ನಡೆದಿದೆ. ಮೃತರನ್ನು ನಗರದ ನೂರಾನಿ ಮೊಹಲ್ಲಾದ ನಿವಾಸಿ ಅಬ್ದುಲ್ ನಬಿ (65) ಎಂದು ತಿಳಿದುಬಂದಿದೆ.ಕಟಲರಿ ವ್ಯಾಪಾರಿಯಾಗಿದ್ದು, ಇವರು ಅಂಗಡಿಯ ಸಾಮಾನುಗಳನ್ನು ತೆಗೆದುಕೊಂಡು ಹಾಗರಗಾ ಕ್ರಾಸ್ ನಲ್ಲಿ ಸಿಗ್ನಲ್ ದಾಟುವಾಗ ಅಪಘಾತ ಸಂಭವಿಸಿದೆ.ಸಂಚಾರಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More