Author: ಸುರೇಶ್‌

"ಕನ್ನಡ ನ್ಯೂಸ್ ನೌ ಜಾಲತಾಣದ ಮುಖ್ಯ ಸಂಪಾದಕರಾದ ಸುರೇಶ್ ಅವರು ಕಳೆದ 4 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದಾರೆ. ಸರ್ಕಾರದ ಯೋಜನೆಗಳು, ಶಿಕ್ಷಣ ಮತ್ತು ಪ್ರಚಲಿತ ವಿದ್ಯಮಾನಗಳನ್ನು ಸಾಮಾನ್ಯ ಜನರಿಗೂ ಅರ್ಥವಾಗುವಂತೆ ವಿವರಿಸುವುದು ಇವರ ವಿಶೇಷತೆ. ಈ ಮೊದಲು ವಿವಿಧ ವೆಬ್‌ಸೈಟ್‌ಗಳಲ್ಲಿ ನಾಗರಿಕ ಸಮಸ್ಯೆಗಳ ಬಗ್ಗೆ ವರದಿಗಾರರಾಗಿ ಕೆಲಸ ಮಾಡಿರುವ ಇವರು, ಸಮಯೋಚಿತ ಹಾಗೂ ವಿಶ್ವಾಸಾರ್ಹ ಮಾಹಿತಿ ನೀಡುವ ಮೂಲಕ ಓದುಗರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಡಿಜಿಟಲ್ ಸಾಕ್ಷರತೆ ಇವರ ನೆಚ್ಚಿನ ವಿಷಯಗಳಲ್ಲೊಂದು

ನವದೆಹಲಿ : ಮೇಕೆದಾಟು ಯೋಜನೇ ಸಂಬಂಧ ಕರ್ನಾಟಕಕ್ಕೆ ಸುಪ್ರೀಂ ಕೋರ್ಟ್ ನಲ್ಲಿ ಗೆಲುವು ಸಿಕ್ಕಿದೆ. ತಮಿಳುನಾಡು ಸಲ್ಲಿಸಿದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಇದೀಗ ವಜಾಗೊಳಿಸಿದೆ. ಹೌದು ಕಳೆದ 7 ವರ್ಷಗಳಿಂದ ತಮಿಳುನಾಡು ಮೆಕೇದಾಟು ಯೋಜನೆಗೆ ಅಡ್ಡಗಾಲು ಹಾಕಿತ್ತು. ಸುಪ್ರೀಂಕೋರ್ಟ್ ನಲ್ಲಿ ತಮಿಳುನಾಡು ಅರ್ಜಿ ಸಲ್ಲಿಸಿ ಅಡ್ಡಗಾಲು ಹಾಕಿತ್ತು. ಇದೀಗ ತಮಿಳುನಾಡು ಸಲ್ಲಿಸಿದ ರಿಟ್ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ. ಈ ಮೂಲಕ ಕರ್ನಾಟಕಕ್ಕೆ ಸುಪ್ರೀಂ ಕೋರ್ಟ್ ನಲ್ಲಿ ಜಯ ದೊರೆತಿದೆ. ಇದರಲ್ಲಿ ಮಧ್ಯ ಪ್ರವೇಶ ಮಾಡಲ್ಲ ಅಂತ ಸುಪ್ರೀಂ ಕೋರ್ಟ್ ವಿಚಾರಣೆ ವೇಳೆ ತಿಳಿಸಿದೆ. ಮೇಕೆದಾಟು ಯೋಜನೆ ಇನ್ನು ಆರಂಭಿಕ ಹಂತದಲ್ಲಿ ಇದೆ. ಯಾವುದೇ ನಿರ್ಮಾಣ ಕಾರ್ಯ ಪ್ರಾರಂಭವಾಗಿಲ್ಲ. ಈ ಯೋಜನೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಮತ್ತು ಕೇಂದ್ರ ಜಲ ಆಯೋಗದಂತಹ ತಜ್ಞ ಸಂಸ್ಥೆಗಳ ಪರಿಶೀಲನೆಯಲ್ಲಿದೆ. ಹೀಗಾಗಿ ಮಧ್ಯಪ್ರವೇಶ ಮಾಡಲ್ಲ ಎಂದು ಸುಪ್ರೀಂಕೋರ್ಟ್ ತಮಿಳುನಾಡು ಸಲ್ಲಿಸಿದ್ದ ಪರಿಟ್ ಅರ್ಜಿ ವಜಾ ಗೊಳಿಸಿ ಆದೇಶ ಹೊರಡಿಸಿದೆ.

Read More

ಬಾಗಲಕೋಟೆ : ಬಾಗಲಕೋಟೆಯಲ್ಲಿ ಭೀಕರವಾದ ಅಪಘಾತ ಸಂಭವಿಸಿದ್ದು, ಬೈಕ್ ಪಾದಚಾರಿಗೆ ಕಾರು ಡಿಕ್ಕಿಯಾಗಿ ಸ್ಥಳದಲ್ಲೇ ಮೂವರು ಸಾವನಪ್ಪಿದ್ದಾರೆ. ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಮುಗಳಖೋಡದಲ್ಲಿ ಈ ಒಂದು ಅಪಘಾತ ಸಂಭವಿಸಿದ್ದು ಬೈಕ್ ನಲ್ಲಿ ಓರ್ವ ಪಾದಚಾರಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೃತರನ್ನು ಗಣಪತಿ ಬತ್ತಿ (32) ಹಾಗೂ ತಾಪಸ್ ಕುಮಾರ್ (46) ಎಂದು ತಿಳಿದುಬಂದಿದ್ದು ಪೊಲೀಸರು ಮೃತ ಪಾದಚಾರಿ ಗುರುತು ಪತ್ತೆ ಹಚ್ಚುತ್ತಿದ್ದಾರೆ. ಕಾರು ಚಾಲಕ ಸುಭಾಷ್ ರಾಮತೀರ್ಥಗೆ ಗಾಯವಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

Read More

ಬೆಂಗಳೂರು : ಇತ್ತೀಚಿಗೆ AI ತಂತ್ರಜ್ಞಾನ ಬಳಸಿ ಸಿಎಂ ಸಿದ್ದರಾಮಯ್ಯ ಡಿಸಿಎಂ ಡಿಕೆ ಶಿವಕುಮಾರ್ ಬಗ್ಗೆ ಅವಹೇಳನಕಾರಿ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಅಲ್ಲದೇ ಹುಲಿ ಮನುಷರ ಮೇಲೆ ಅಟ್ಯಾಕ್ ಮಾಡುವ ವಿಡಿಯೋ ಸಹ ಹರಿದಾಡಿತ್ತು. ಇದೀಗ AI ತಂತ್ರಜ್ಞಾನ ಬಳಸಿ ಹುಲಿ ಇದೆ ಎಂದು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಮಾಡಿ ಹರಿಬಿಟ್ಟರೆ, ಫೋಟೋ, ವಿಡಿಯೋ ಶೇರ್ ಮಾಡಿದ್ರೆ ಕಠಿಣ ಕ್ರಮ ಕೈಗೊಳಲಾಗುತ್ತೆ. ಹುಲಿ ಬಂತು ಎಂದು ಸುದ್ದಿ ಹರಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತೆ ಎಂದು ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ಹುಲಿ ಬಂತು ಎಂದು ಸುಳ್ಳು ಫೋಟೋ ಹಂಚುವುದರಿಂದ ಭಯದ ವಾತಾವರಣ ಸೃಷ್ಟಿಸಲಾಗುತ್ತಿದೆ. AI ಹಾವಳಿಯಿಂದ ಕೆಲಸ ನಿರ್ವಹಿಸಲು ಸಾರ್ವಜನಿಕರಿಗೆ ತೊಂದರೆ ಹಿನ್ನೆಲೆ ಸುಳ್ಳು ಸುದ್ದಿ ಹರಡುವವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

Read More

ಬೆಂಗಳೂರು : ಬೆಂಗಳೂರಲ್ಲಿ ಬಿಜೆಪಿ ಕಾರ್ಯಕರ್ತ ವಿಡಿಯೋ ಮಾಡಿಟ್ಟು ಆತ್ಮಹತ್ಯೆಗೆ ಶರಣಾಗಿರುವ ಘಟನೆ ವರದಿಯಾಗಿದೆ. ಬಿಜೆಪಿ ಕಾರ್ಯಕರ್ತ ವೆಂಕಟೇಶ್ ಹಣಕಾಸಿನ ಸಂಕಷ್ಟದಿಂದ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಮಾಹಿತಿ ತಿಳಿದುಬಂದಿದೆ. ಮಲ್ಲೇಶ್ವರದ ಬಿಜೆಪಿ ಮಂಡಲದ ಕಾರ್ಯಕರ್ತನಾಗಿದ್ದ ವೆಂಕಟೇಶ್‌ ಮಾಜಿ ಡಿಸಿಎಂ ಅಶ್ವಥ್‌ ನಾರಾಯಣ್‌ ಅವರಿಗೂ ಆಪ್ತನಾಗಿದ್ದರು. ನಿನ್ನೆ ಸಂಜೆ ವೈಯಾಲಿಕಾವಲ್‌ನಲ್ಲಿರುವ ತಮ್ಮ ಟೂರ್ಸ್‌ ಅಂಡ್ ಟ್ರಾವೆಲ್ಸ್‌ ಕಚೇರಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವೆಂಕಟೇಶ್‌ ಕಳೆದ 2 ದಿನಗಳ ಹಿಂದೆಯೇ ಆತ್ಮಹತ್ಯೆ ಮಾಡಿಕೊಂಡಿದ್ದು, ಇಂದು ಶವ ಪತ್ತೆಯಾಗಿದೆ ಅಂತ ಹೇಳಲಾಗ್ತಿದೆ. ಹಣಕಾಸು ನಷ್ಟದಿಂದಾಗಿ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸದ್ಯ ಮೃತದೇಹವನ್ನ ಬೌರಿಂಗ್‌ ಆಸ್ಪತ್ರೆಯಲ್ಲಿ ಇರಿಸಲಾಗಿದೆ.

Read More

ನವದೆಹಲಿ : ದೆಹಲಿಯಲ್ಲಿ ಕೆಂಪು ಕೋಟೆಯ ಬಳಿ ಕಾರು ಸ್ಪೋಟ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮತ್ತೊಂದು ಸ್ಫೋಟಕ ತಿರುವ ಸಿಕ್ಕಿದ್ದು, ದೆಹಲಿ ಸ್ಫೋಟಕ್ಕೆ ಬಳಕೆ ಮಾಡಿದ್ದು ಎರಡು ಕಾರು ಅಲ್ಲ ಮೂರು ಕಾರು ಎಂದು ತನಿಖೆಯಲ್ಲಿ ಬಯಲಾಗಿದೆ. ಹೌದು ದೆಹಲಿ ಸ್ಫೋಟಕ್ಕೆ ಬಳಕೆ ಮಾಡಿದ್ದು ಮೂರು ಕಾರು ಎಂದು ತನಿಖೆಯಲ್ಲಿ ಬಯಲಾಗಿದೆ. ಕುಮಾರ್ ಗೆ ಸಂಬಂಧಿಸಿದ ಮೂರು ಕಾರುಗಳ ಜಾಲ ಈಗ ಬೆಳಕಿಗೆ ಬಂದಿದ್ದು, ಇಕೋ ಸ್ಪೋರ್ಟ್ಸ್ ಕಾರು ಸಿಕ್ಕ ಬಳಿಕ ಮತ್ತೊಂದು ಕಾರಿಗೆ ಶೋಧ ಕಾರ್ಯ ಮುಂದುವರಿದಿದೆ. ಸದ್ಯ ಇಕೋ ಸ್ಪೋರ್ಟ್ಸ್ ಕಾರು ಫರಿದಾದಾಬಾದ್ ನಲ್ಲಿ ಸಿಕ್ಕಿದ್ದು ಬಿಳಿ ಬಣ್ಣದ ಬ್ರಿಜಾ ಕಾರಿಗಾಗಿ ಪೊಲೀಸರು ನಿರಂತರ ಶೋಧ ನಡೆಸುತ್ತಿದ್ದಾರೆ. ಉಗ್ರ ಚಟುವಟಿಕೆಗೆ ಬಳಸಿರುವ ಹಿನ್ನೆಲೆ ಬಿಳಿ ಕಾರಿಗೆ ತೀವ್ರ ಶೋಧ ನಡೆಸುತ್ತಿದ್ದಾರೆ.

Read More

ಬೆಂಗಳೂರು : ಅರಣ್ಯ ಪ್ರದೇಶದಲ್ಲಿ ಕಾಡು ಪ್ರಾಣಿಗಳಿಗೆ ಇಟ್ಟಿದ್ದ ಸಿಡಿಮದ್ದು ಸ್ಪೋಟಗೊಂಡು ಕುರಿಗಾಹಿ ಮಹಿಳೆಯ ಕೈ ಬೆರಳು ಛಿದ್ರಗೊಂಡಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಗುಮ್ಮನಹಳ್ಳಿ ಅರಣ್ಯ ಪ್ರದೇಶದಲ್ಲಿ ನಡೆದಿದೆ. ಸಿಡಿಮದ್ದು ಸ್ಫೋಟಗೊಂಡು ಗುಮ್ಮನಹಳ್ಳಿ ಗ್ರಾಮದ ರಂಗಮ್ಮ (50) ಗೆ ಗಾಯವಾಗಿದೆ. ಕಾಡು ಹಂದಿ, ಇತರೆ ಪ್ರಾಣಿಗಳು ಹೊಲಕ್ಕೆ ಬರದಂತೆ ಇಟ್ಟಿದ್ದ ಸಿಡಿಮದ್ದು ಸ್ಫೋಟಗೊಂಡಿದೆ. ಈ ವೇಳೆ ಸಿಡಿಮದ್ದಿನ ವೈರ್ ಮೇಕೆಗೆ ಸುದ್ದಿಕೊಂಡಿದೆ. ಅದನ್ನು ತೆಗೆದು ಮೇಕೆ ಬಿಡಿಸಲು ಹೋದಾಗ ದುರ್ಘಟನೆ ಸಂಭವಿಸಿದೆ. ಸದ್ಯ ರಂಗಮ್ಮಗೆ ದೊಡ್ಡಬಳ್ಳಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಲಾಗುತ್ತಿದೆ. ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ಆಸ್ಪತ್ರೆಗೆ ಗಾಯಳು ರಂಗಮ್ಮ ರವಾನಿಸಲಾಗಿದೆ.

Read More

ಬೆಂಗಳೂರು : ‘EPFO’ ಸೊಸೈಟಿಯಲ್ಲಿ 70 ಕೋಟಿ ರೂಪಾಯಿ ವಂಚನೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬೆಂಗಳೂರಿನ ಅಂಜನಾಪುರದಲ್ಲಿರುವ ಅಕೌಂಟೆಂಟ್ ಜಗದೀಶ್ ಮನೆ ದಾಳಿ ಮಾಡಲಾಗಿದೆ. ಜಗದೀಶ್ ಮನೆ ಮೇಲೆ ಕಬ್ಬನ್ ಪಾರ್ಕ್ ಪೊಲೀಸರು ದಾಳಿ ನಡೆಸಿದ್ದಾರೆ.ಈ ವೇಳೆ ಹಲವು ದಾಖಲೆಗಳನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ. ದಾಳಿಯ ವೇಳೆ ಹಲವಾರು ಖಾಸಗಿ ಬ್ಯಾಂಕ್ ಖಾತೆಗಳ ಬಗ್ಗೆ ಮಾಹಿತಿ ಲಭ್ಯವಾಗಿದೆ. ಸುಮಾರು 20ಕ್ಕೂ ಹೆಚ್ಚು ಚೆಕ್ ಬುಕ್ 15ಕ್ಕೂ ಹೆಚ್ಚು ಎಟಿಎಂ ಕಾರ್ಡ್ ಗಳು ಪತ್ತೆಯಾಗಿದೆ. ಅಲ್ಲದೇ 10 ಎಕರೆಗೂ ಹೆಚ್ಚಿನ ಜಮೀನು ಪತ್ರ ಕೂಡ ಪತ್ತೆಯಾಗಿದೆ. ಜಗದೀಶ್ ಮತ್ತು ಪತ್ನಿ ಹೆಸರಲ್ಲಿ ಇರುವ ಜಮೀನು ಪತ್ರ ದೊರೆತಿದೆ. ದಾಳಿಯ ವೇಳೆ 4 BMW ಸೇರಿ 12 ಕಾರು 7 ಬೈಕ್ ಗಳನ್ನ ವಶಕ್ಕೆ ಪಡೆಯಲಾಗಿದೆ. ಸದ್ಯ ಪ್ರಕರಣವನ್ನು ಡಿಜಿ & ಐಜಿಪಿ CID ಗೆ ವರ್ಗಾವಣೆ ಮಾಡಿದ್ದಾರೆ. ಇಂದು ಕೇಸ್ ಫೈಲ್ CID ಅಧಿಕಾರಿಗಳಿಗೆ ವರ್ಗಾವಣೆ ಸಾಧ್ಯತೆ ಇದೆ. ಇದುವರೆಗೂ ನಡೆದಿರುವ…

Read More

ನವದೆಹಲಿ : ದೆಹಲಿಯಲ್ಲಿ ಕಾರು ಸ್ಪೋಟದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ತನಿಖೆಯಲ್ಲಿ ಮತ್ತಷ್ಟು ಸ್ಪೋಟಕ ಮಾಹಿತಿ ಬಯಲಾಗಿದ್ದು, ಭಾರತದಾದ್ಯಂತ ಹಲವು ನಗರಗಳಲ್ಲಿ ಸುಮಾರು 8 ಭಯೋತ್ಪಾದಕರು ಸರಣಿ ಸ್ಫೋಟ(Blast)ಗಳನ್ನು ನಡೆಸಲು ಸಂಚು ರೂಪಿಸಿದ್ದರು ಎನ್ನುವ ಮಾಹಿತಿ ಲಭ್ಯವಾಗಿದೆ. ತನಿಖಾ ಸಂಸ್ಥೆಗಳು ಗುರುವಾರ ತಿಳಿಸಿವೆ ಎಂದು ಮೂಲಗಳನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ಎಎನ್‌ಐ ವರದಿ ಮಾಡಿದೆ. ಭಯೋತ್ಪಾದಕರು ತಲಾ ಎರಡು ಗುಂಪುಗಳಾಗಿ ನಾಲ್ಕು ನಗರಗಳಿಗೆ ತೆರಳಲು ಯೋಜಿಸಿದ್ದರು, ಅವರು ತಮ್ಮೊಂದಿಗೆ ಬಹು ಐಇಡಿಗಳನ್ನು ಸಾಗಿಸಬೇಕಿತ್ತು. ಸುಮಾರು 8 ಶಂಕಿತರು ನಾಲ್ಕು ಸ್ಥಳಗಳಲ್ಲಿ ಸರಣಿ ಸ್ಫೋಟ ನಡೆಸಲು ಯೋಜಿಸಿದ್ದರು. ಅವರು ತಲಾ ಎರಡು ಗುಂಪುಗಳಾಗಿ ನಾಲ್ಕು ನಗರಗಳಿಗೆ ತೆರಳಲು ಯೋಜಿಸಿದ್ದರು ಎಂದು ತಿಳಿದುಬಂದಿದೆ. ಡಾ. ಮುಜಮ್ಮಿಲ್, ಡಾ. ಅದೀಲ್, ಉಮರ್ ಮತ್ತು ಶಾಹೀನ್ ಜಂಟಿಯಾಗಿ ಸುಮಾರು 20 ಲಕ್ಷ ರೂ. ನಗದನ್ನು ಸಂಗ್ರಹಿಸಿದ್ದು, ದೆಹಲಿ ಸ್ಫೋಟದ ಮೊದಲು ಅದನ್ನು ಉಮರ್‌ಗೆ ಹಸ್ತಾಂತರಿಸಲಾಗಿತ್ತು. ನಂತರ ಅವರು ಗುರುಗ್ರಾಮ, ನೂಹ್ ಮತ್ತು ಹತ್ತಿರದ ಪ್ರದೇಶಗಳಿಂದ ಐಇಡಿ ತಯಾರಿಕೆಗಾಗಿ…

Read More

ತುಮಕೂರು : ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಕೆ.ಎನ್ ರಾಜಣ್ಣ ಮಂಕಾಗಿದ್ದಾರೆ.ಅಲ್ಲದೇ ಸಿಎಂ ಸಿದ್ದರಾಮಯ್ಯ ಸೇರಿ ಕಾಂಗ್ರೆಸ್ ಪಕ್ಷದ ವಿರುದ್ಧವೆ ಬೇಸರ ಆಗಿದ್ದಾರೆ. ಇದೀಗ ರಾಜಣ್ಣ ಹೇಳೋಕೆಯೊಂದು ಭಾರಿ ವೈರಲ್ ಆಗಿದ್ದು, ಯಾವ ಪಕ್ಷದ ಬಾವುಟ ಹಿಡಿಬೇಕು ಎನ್ನುವುದನ್ನು ನಾನು ಮುಂದಿನ ದಿನದಲ್ಲಿ ತೀರ್ಮಾನ ಮಾಡುತ್ತೇನೆ ಎಂದು ಕೆ.ಎನ್ ರಾಜಣ್ಣ ಸಾರ್ವಜನಿಕ ಭಾಷಣದಲ್ಲಿ ಹೇಳಿರೋದು ರಾಜಕೀಯ ಚರ್ಚೆಗೆ ಗ್ರಾಸವಾಗಿದೆ. ಮಧುಗಿರಿ ತಾಲೂಕಿನ ದೊಡ್ಡೆರಿಯಲ್ಲಿ ನಡೆದ ಜನ ಸಂಪರ್ಕ ಸಭೆಯಲ್ಲಿ ಮಾತನಾಡಿದ ರಾಜಣ್ಣ, ನಾನು ಮಧುಗಿರಿ ಕ್ಷೇತ್ರಕ್ಕೆ ಬಂದಾಗ ಕಾರ್ಯಕರ್ತರು ಕಾಂಗ್ರೆಸ್ (Congress0 ಬಾವುಟ ಹಿಡಿದು ರ‍್ಯಾಲಿ ಮಾಡುತಿದ್ದರು. ಇವತ್ತಿನ ರ‍್ಯಾಲಿಯಲ್ಲಿ ಯಾರೂ ಕಾಂಗ್ರೆಸ್ ಬಾವುಟ ಹಿಡಿಯಲೇ ಇಲ್ಲ. ಅವರಿಗೂ ಕಾಂಗ್ರೆಸ್ ಪಕ್ಷದ ಮೇಲೆ ಬೇಸರ ತರಿಸಿದಂತಿದೆ. ಮುಂದಿನ ದಿನದಲ್ಲಿ ಯಾವ ಬಾವುಟ ಹಿಡಿಬೇಕು ಎನ್ನುವುದನ್ನು ತೀರ್ಮಾನ ಮಾಡುತ್ತೇನೆ ಎಂದರು. 2004 ರಲ್ಲಿ ಕಾಂಗ್ರೆಸ್ ಪಕ್ಷ ನನ್ನನ್ನು ಗೌರವದಿಂದ ನೋಡಿಕೊಂಡಿರಲಿಲ್ಲ. ಆಗ ನಾನು ಜೆಡಿಎಸ್‌ನಿಂದ ಸ್ಪರ್ಧಿಸಿ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ವೈಟ್…

Read More

ತುಮಕೂರು : ದೆಹಲಿಯಲ್ಲಿ ಕಾರು ಸ್ಫೋಟ ಪ್ರಕರಣ ಇಡೀ ದೇಶದ ಜನತೆಯನ್ನು ಬೆಚ್ಚಿಬಿಳಿಸಿದ್ದು,ಈ ಒಂದು ಪ್ರಕರಣದ ಬಳಿಕ ರಾಜ್ಯಕ್ಕೂ ರಾಷ್ಟ್ರ ರಾಜಧಾನಿ ದೆಹಲಿಗೂ ನಂಟು ಇದೆಯಾ ಎನ್ನುವ ಅನುಮಾನ ವ್ಯಕ್ತವಾಗುತ್ತಿದೆ. ಏಕೆಂದರೆ ತುಮಕೂರಿನಲ್ಲಿ ಶಂಕಿತ ವ್ಯಕ್ತಿಯನ್ನು ಪೊಲೀಸರು ಠಾಣೆಗೆ ಕರೆದು ಉಚ್ಚಾರಣೆ ಮಾಡಿ ಕಳುಹಿಸಿರುವ ಘಟನೆ ವರದಿಯಾಗಿದೆ. ಹೌದು ದೆಹಲಿ ಸ್ಫೋಟದ ಬಳಕೆ ತುಮಕೂರಿನಲ್ಲಿ ವ್ಯಕ್ತಿಯ ವಿಚಾರಣೆ ನಡೆಸಲಾಗುತ್ತಿದೆ. ಉಗ್ರ ಸಂಘಟನೆ ಜೊತೆಗೆ ಈ ಹಿಂದೆ ಈ ವ್ಯಕ್ತಿ ಉಗ್ರ ಸಂಘಟನೆಯ ಸಂಪರ್ಕದಲ್ಲಿ ಇದ್ದ ಎನ್ನಲಾಗುತ್ತಿದ್ದು ಆ ಕಾರಣ ಹಿನ್ನೆಲೆ ತುಮಕೂರಿನ ಪಿ ಎಚ್ ಕಾಲೋನಿ ನಿವಾಸಿಯ ವಿಚಾರಣೆ ನಡೆಸಲಾಗುತ್ತಿದೆ.ತುಮಕೂರಿನ ತಿಲಕ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ವ್ಯಕ್ತಿಯ ವಿಚಾರಣೆ ನಡೆಯುತ್ತಿದೆ ASI ಪುರುಷೋತ್ತಮ್ ವ್ಯಕ್ತಿಯ ವಿಚಾರಣೆ ನಡೆಸಿದ್ದರೆ. ಸುಮಾರು 2 ಗಂಟೆ ವಿಚಾರಣೆ ನಡೆಸಿ ನಂತರ ವ್ಯಕ್ತಿಯನ್ನು ಬಿಟ್ಟು ಕಳಿಸಿದ್ದಾರೆ ಎಂದು ತಿಳಿದು ಬಂದಿದೆ.

Read More