Author: ಸುರೇಶ್‌

"ಕನ್ನಡ ನ್ಯೂಸ್ ನೌ ಜಾಲತಾಣದ ಮುಖ್ಯ ಸಂಪಾದಕರಾದ ಸುರೇಶ್ ಅವರು ಕಳೆದ 4 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದಾರೆ. ಸರ್ಕಾರದ ಯೋಜನೆಗಳು, ಶಿಕ್ಷಣ ಮತ್ತು ಪ್ರಚಲಿತ ವಿದ್ಯಮಾನಗಳನ್ನು ಸಾಮಾನ್ಯ ಜನರಿಗೂ ಅರ್ಥವಾಗುವಂತೆ ವಿವರಿಸುವುದು ಇವರ ವಿಶೇಷತೆ. ಈ ಮೊದಲು ವಿವಿಧ ವೆಬ್‌ಸೈಟ್‌ಗಳಲ್ಲಿ ನಾಗರಿಕ ಸಮಸ್ಯೆಗಳ ಬಗ್ಗೆ ವರದಿಗಾರರಾಗಿ ಕೆಲಸ ಮಾಡಿರುವ ಇವರು, ಸಮಯೋಚಿತ ಹಾಗೂ ವಿಶ್ವಾಸಾರ್ಹ ಮಾಹಿತಿ ನೀಡುವ ಮೂಲಕ ಓದುಗರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಡಿಜಿಟಲ್ ಸಾಕ್ಷರತೆ ಇವರ ನೆಚ್ಚಿನ ವಿಷಯಗಳಲ್ಲೊಂದು

ಮೈಸೂರು: ವಿಧಾನಪರಿಷತ್ ಸದಸ್ಯ (MLC) ಎಚ್. ವಿಶ್ವನಾಥ್ ಅವರ ವಿರುದ್ಧ ಮೈಸೂರಿನ ದೇವರಾಜ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ (FIR) ದಾಖಲಾಗಿದೆ. ನ್ಯಾಯಾಲಯದ ಆದೇಶದ ಹಿನ್ನೆಲೆಯಲ್ಲಿ ಪೊಲೀಸರು ಈ ಕ್ರಮ ಕೈಗೊಂಡಿದ್ದು, ಹಿರಿಯ ರಾಜಕಾರಣಿಗೆ ಈಗ ಕಾನೂನು ಸಂಕಷ್ಟ ಎದುರಾಗಿದೆ. ಕಾಂಗ್ರೆಸ್ ಮುಖಂಡ ಕೋಟೆಹುಂಡಿ ಮಹದೇವ್ ಅವರು ನೀಡಿದ ದೂರಿನ ಮೇರೆಗೆ ಈ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಆರಂಭಿಸಿದ್ದಾರೆ. ಕೋಲಾರ ಅಥವಾ ಮೈಸೂರು ಭಾಗದ ಪ್ರಭಾವಿ ರಾಜಕಾರಣಿಯಾಗಿರುವ ಎಚ್. ವಿಶ್ವನಾಥ್ ಅವರು ತಮಗೆ ನೀಡಬೇಕಾಗಿದ್ದ ಸಾಲದ ಹಣವನ್ನು ವಾಪಸ್ ಕೇಳಲು ಹೋದಾಗ ತಮ್ಮ ಮೇಲೆ ಹಲ್ಲೆ ನಡೆಸಿ, ನಿಂದಿಸಿದ್ದಾರೆ ಎಂದು ಕೋಟೆಹುಂಡಿ ಮಹದೇವ್ ಗಂಭೀರ ಆರೋಪ ಮಾಡಿದ್ದಾರೆ. ಸಾಲದ ವ್ಯವಹಾರದ ಜಗಳವೀಗ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ರೂ. 55 ಲಕ್ಷ ಸಾಲದ ಹಿನ್ನೆಲೆ ದೂರಿನ ವಿವರಗಳ ಪ್ರಕಾರ, ಈ ವಿವಾದವು 2013ರ ಸಾಲದ ವ್ಯವಹಾರಕ್ಕೆ ಸಂಬಂಧಿಸಿದ್ದಾಗಿದೆ. ಅಂದು ಮೈಸೂರು ಲೋಕಸಭಾ ಕ್ಷೇತ್ರದ ಸಂಸದರಾಗಿದ್ದ ಎಚ್.…

Read More

ಬೀದರ್ : ರಾಜ್ಯಾದ್ಯಂತ ಮುಂಗಾರು ಎಂಟ್ರಿಗು ಮುನ್ನವೇ ವರುಣ ಅಬ್ಬರಿಸುತ್ತಿದ್ದು, ಬೀದರ್ ನಲ್ಲಿ ಮನೆಯ ಮೇಲ್ಚಾವಣಿ ಕುಸಿದು ಐದು ಜನರಿಗೆ ಗಂಭೀರವಾದ ಗಾಯಗಳಾಗಿರುವ ಘಟನೆ ವರದಿಯಾಗಿದೆ. ಇಬ್ಬರು ಮಕ್ಕಳ ಹಾಗೂ ಮಹಿಳೆ ಸೇರಿದಂತೆ ಐವರಿಗೆ ಗಂಭೀರವಾದ ಗಯಗಳಾಗಿರುವ ಘಟನೆ ನಡೆದಿದೆ. ಬೀದರ್ ನ ಕಮಠಾಣಾ ಎಂಬ ಗ್ರಾಮದಲ್ಲಿ ಮಳೆಯಿಂದ ಮನೆಯ ಮೇಲ್ಚಾವಣಿ ಕುಸಿದು ಮಕ್ಕಳು ಸೇರಿದಂತೆ ಐವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳಿಗೆ ಪ್ರಿನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅದೇ ರೀತಿಯಾಗಿ ರಾಯಚೂರಲ್ಲಿ ಕೂಡ ಹಲವಡೆ ಸುರಿದ ಮಳೆಯಿಂದಾಗಿ ಅವಾಂತರ ನಡೆದಿದ್ದು ಮಸ್ಕಿ ಪಟ್ಟಣದ ಹಲವು ಪ್ರದೇಶಗಳಲ್ಲಿ ವಿದ್ಯುತ್ ಕಂಬಗಳು ಹಾಗೂ ಮರಗಳು ಧರೆಗೆ ಉರುಳಿವೆ. ವಾಲ್ಮೀಕಿ ಮತ್ತು ಬಸವೇಶ್ವರ ನಗರದಲ್ಲಿ ಭಾರಿ ಮಳೆಯಿಂದಾಗಿ ವಿದ್ಯುತ್ ಕಂಬ ಧರೆಗೆ ಉರುಳಿವೆ.

Read More

ಹನುಮಾನ್ ಮಾಲಾ ಮಂತ್ರ ​ಓಂ ಐಂ ಹ್ರೀಂ ಶ್ರೀಂ ಹ್ರಾಂ ಹ್ರೀಂ ಹ್ರೂಂ ಹ್ರೈಂ ಹ್ರೌಂ ಹ್ರಃ ಓಂ ನಮೋ ಭಗವತೇ ಅಂಜನೇಯಾಯ ಮಹಾಬಲಾಯ ಸ್ವಾಹಾ, ಓಂ ಹನುಮತೇ ರುದ್ರಾತ್ಮಕಾಯ ಹುಂ ಫಟ್ ಸ್ವಾಹಾ, ರಾಜದ್ವಾರೇ ಬಿಲದ್ವಾರೇ ಸಭಾದ್ವಾರೇ ರಣದ್ವಾರೇ ಸರ್ವದ್ವಾರೇ ರಕ್ಷ ರಕ್ಷ ಸ್ವಾಹಾ, ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ವಿದ್ವಾನ್ ವಿದ್ಯಾಧರ್ ತಂತ್ರಿ ಜ್ಯೋತಿಷ್ಯರ ಮೊಬೈಲ್ ಸಂಖ್ಯೆ 9686268564 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ. ಬ್ರಹ್ಮಾಸ್ತ್ರಾಯ ನಮಃ, ಕಾಲಾಸ್ತ್ರಾಯ ನಮಃ, ತ್ರಿಶೂಲಾಸ್ತ್ರಾಯ ನಮಃ, ಸರ್ವಾಸ್ತ್ರಾಯ ನಮಃ, ಓಂ ಹನುಮತೇ ನಮಃ, ಓಂ ನಮೋ ಭಗವತೇ ಅಂಜನೇಯಾಯ ಮಹಾಬಲಾಯ ಪರಾಕ್ರಮಾಯ ಸರ್ವದುಷ್ಟಗ್ರಹ ನಿವಾರಣಾಯ ವಿಲಕ್ಷಣಲಕ್ಷಣಾಯ ಸರ್ವಲೋಕವಶಂಕರಾಯ ಜ್ಞಾನವೈರಾಗ್ಯಪ್ರದಾಯ ಆನಂದರಾಮಾಯಣ…

Read More

ಬೆಂಗಳೂರು : ಬೆಂಗಳೂರಿನಲ್ಲಿ ಹಲ್ಲೆ ಮಾಡಲು ಪೊಲೀಸರೇ ಡೀಲ್ ಕೊಟ್ಟ ಆರೋಪ ಕೇಳಿ ಬಂದಿದೆ. ಪೊಲೀಸರಿಂದಲೇ ಡೀಲ್ ತೆಗೆದುಕೊಂಡು ತಂದೆ ಮಗನ ಮೇಲೆ ಹಲ್ಲೆ ನಡೆಸಿರುವ ಆರೋಪ ಕೇಳಿಬಂದಿದೆ. ತಂದೆ ಮಂಜುನಾಥ ಮತ್ತು ಮಗ ವಿಶ್ವನಾಥ್ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಲಾಗಿದೆ. ಪ್ರಜ್ವಲ್ ಹಾಗೂ ಆತನ ಸ್ನೇಹಿತನಿಂದ ತಂದೆ ಮಗನ ಮೇಲೆ ಹಲ್ಲೆ ನಡೆದಿದೆ. ಕಾನ್ಸ್ಟೇಬಲ್ಗಳಾದ ಪ್ರಸನ್ನ ಮತ್ತು ನೇತಾಜಿ, ಹಲ್ಲೆ ಮಾಡಲು ಡೀಲ್ ಕೊಟ್ಟಿರುವ ಆರೋಪ ಕೇಳಿ ಬಂದಿದೆ. ಗೋವಿಂದರಾಜನಗರ ಪೊಲೀಸ್ ಠಾಣೆ ಸಿಬ್ಬಂದಿಗಳಾದ ಪ್ರಸನ್ನ ಮತ್ತು ನೇತಾಜಿ, ಕೊಲೆ ಪ್ರಕರಣದಲ್ಲಿ ಸ್ಪಾಟ್ ನಲ್ಲಿ ಇದ್ದೀಯ ಎಂದು ವಿಶ್ವನಾಥ್ ನನ್ನ ವಿಚಾರಣೆ ನಡೆಸಿರುತ್ತಾರೆ. ವಿಶ್ವನಾಥ್ ನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ತನಿಖೆಯ ವೇಳೆ ಕೇಸ್ನಲ್ಲಿ ಪಾತ್ರ ಇಲ್ಲ ಎಂದು ಪೊಲೀಸರು ಬಿಟ್ಟು ಕಳುಹಿಸಿದ್ದರು. ಬಿಟ್ಟು ಕಳುಹಿಸುವ ವೇಳೆ ಪೊಲೀಸರು ಹಣಕ್ಕೆ ಡಿಮ್ಯಾಂಡ್ ಮಾಡಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ. ಪೊಲೀಸರಿಂದ ಡೀಲ್ ಬಂದಿದೆ ಎಂದು ಮಾರಕಾಸ್ತ್ರಗಳಿಂದ ಮಂಜುನಾಥ್…

Read More

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಖದೀಮರ ಕೈಚಳಕ ಮುಂದುವರಿದಿದ್ದು, ಹೋಲ್‌ಸೇಲ್ ಆಗಿ ಚಿನ್ನ ಖರೀದಿಸುವ ನೆಪದಲ್ಲಿ ಬರೋಬ್ಬರಿ 3 ಕೋಟಿ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ದೋಚಿ ಪರಾರಿಯಾಗಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ನಗರದ ಪ್ರತಿಷ್ಠಿತ ಜ್ಯುವೆಲ್ಲರಿಯೊಂದಕ್ಕೆ ನಂಬಿಸಿ ವಂಚಿಸಿರುವ ಕಿರಾತಕರು, ಒಟ್ಟು 1.85 ಕೆಜಿ ಚಿನ್ನದೊಂದಿಗೆ ಎಸ್ಕೇಪ್ ಆಗಿದ್ದಾರೆ. ನಗರತ್‌ಪೇಟೆಯ ಜ್ಯುವೆಲ್ಲರಿಗೆ ಗಾಳ: ಬೆಂಗಳೂರಿನ ನಗರತ್‌ಪೇಟೆಯಲ್ಲಿರುವ ಪ್ರಸಿದ್ಧ ‘ಮೆಹ್ತಾ ಜುವೆಲ್ಲರಿ’ ಶಾಪ್ ಈ ವಂಚನೆಗೆ ತುತ್ತಾದ ಸಂಸ್ಥೆಯಾಗಿದೆ. ಆರೋಪಿಗಳು ತಮ್ಮನ್ನು ‘ಮಾಹಿ ಎಂಟರ್‌ಪ್ರೈಸಸ್’ ಸಂಸ್ಥೆಯ ಪ್ರತಿನಿಧಿಗಳು ಎಂದು ಪರಿಚಯಿಸಿಕೊಂಡಿದ್ದರು. ಆರೋಪಿಗಳ ಪೈಕಿ ಪರೇಶ್ ಎಂಬಾತ ಮೆಹ್ತಾ ಜುವೆಲ್ಲರಿ ಮಾಲೀಕರಿಗೆ ಕರೆ ಮಾಡಿ, ತಮಗೆ ಹೋಲ್‌ಸೇಲ್ ಆಗಿ ದೊಡ್ಡ ಪ್ರಮಾಣದಲ್ಲಿ ಚಿನ್ನದ ಆಭರಣಗಳು ಬೇಕಾಗಿವೆ ಮತ್ತು ಅವುಗಳ ಡಿಸೈನ್ ನೋಡಿ ಸೆಲೆಕ್ಟ್ ಮಾಡಿಕೊಳ್ಳುವುದಾಗಿ ನಂಬಿಸಿದ್ದಾನೆ. ಮಲ್ಲೇಶ್ವರಂ ಕಚೇರಿಗೆ ತರಿಸಿದ ಖದೀಮರು: ಗ್ರಾಹಕನ ಮಾತನ್ನು ನಿಜವೆಂದು ನಂಬಿದ ಜ್ಯುವೆಲ್ಲರಿ ಮ್ಯಾನೇಜರ್, ಸುಮಾರು 3 ಕೆಜಿ ತೂಕದ ವಿವಿಧ ಡಿಸೈನ್‌ಗಳ ಚಿನ್ನಾಭರಣಗಳನ್ನು ತೆಗೆದುಕೊಂಡು ಮಲ್ಲೇಶ್ವರಂನ ಸಂಪಿಗೆ…

Read More

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP/GBA) ಚುನಾವಣೆಯ ಕಣ ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ಪ್ರಾದೇಶಿಕ ಪಕ್ಷ ಜೆಡಿಎಸ್ ತನ್ನ ರಾಜಕೀಯ ತಂತ್ರಗಾರಿಕೆಯನ್ನು ಚುರುಕುಗೊಳಿಸಿದೆ. ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡು ಕಣಕ್ಕಿಳಿಯಲು ಒಲವು ತೋರಿರುವ ಬೆನ್ನಲ್ಲೇ, ಒಂದು ವೇಳೆ ಮಾತುಕತೆ ಮುರಿದುಬಿದ್ದರೆ ಸ್ವತಂತ್ರವಾಗಿ ಸ್ಪರ್ಧಿಸಲು ಕೂಡ ಜೆಡಿಎಸ್ ತೆರೆಮರೆಯಲ್ಲಿ ಭರ್ಜರಿ ಸಿದ್ಧತೆ ಮಾಡಿಕೊಂಡಿದೆ. 100 ವಾರ್ಡ್‌ಗಳ ಮೇಲೆ ಕಣ್ಣಿಟ್ಟ ದಳಪತಿಗಳು ನಿನ್ನೆ ನಡೆದ ಜೆಡಿಎಸ್ ಪ್ರಮುಖ ನಾಯಕರ ಮಹತ್ವದ ಸಭೆಯಲ್ಲಿ ಚುನಾವಣಾ ಕಾರ್ಯತಂತ್ರಗಳ ಕುರಿತು ಸುದೀರ್ಘ ಚರ್ಚೆ ನಡೆಸಲಾಗಿದೆ. ಈಗಾಗಲೇ ನಗರದ ಕನಿಷ್ಠ 100 ವಾರ್ಡ್‌ಗಳಲ್ಲಿ ಸ್ಪರ್ಧಿಸಲು ಜೆಡಿಎಸ್ ಬಲವಾದ ನಿರ್ಧಾರ ಮಾಡಿದೆ. ಬಿಜೆಪಿಯ ಸೀಟು ಹಂಚಿಕೆಯ ನಿರ್ಧಾರದ ಮೇಲೆಯೇ ಜೆಡಿಎಸ್‌ನ ಮುಂದಿನ ಭವಿಷ್ಯ ಮತ್ತು ಮೈತ್ರಿಯ ಆಯಸ್ಸು ನಿರ್ಧಾರವಾಗಲಿದೆ ಎಂದು ಸಭೆಯಲ್ಲಿ ವಿಶ್ಲೇಷಿಸಲಾಗಿದೆ. ಬಿಜೆಪಿ ಆಫರ್ ಮೇಲೆ ಮೈತ್ರಿ ಭವಿಷ್ಯ ಮೈತ್ರಿ ಮಾತುಕತೆಯ ವೇಳೆ ಬಿಜೆಪಿ ನೀಡುವ ಆಫರ್ ಜೆಡಿಎಸ್ ನಾಯಕರ ಮುಂದಿನ ನಡೆಗೆ ದಾರಿದೀಪವಾಗಲಿದೆ. ಬಿಜೆಪಿ ಕನಿಷ್ಠ 90 ರಿಂದ…

Read More

ಮಧ್ಯಪ್ರದೇಶ : ಮಧ್ಯಪ್ರದೇಶದಲ್ಲಿ ಅತ್ಯಂತ ಆಘಾತಕಾರಿ ಮತ್ತು ಮನಕಲಕುವ ಘಟನೆಯೊಂದು ಬೆಳಕಿಗೆ ಬಂದಿದ್ದು, ಕಾಮುಕನೊಬ್ಬನ ಬ್ಲ್ಯಾಕ್‌ಮೇಲ್ ಹಾಗೂ ದೌರ್ಜನ್ಯಕ್ಕೆ ಬೇಸತ್ತು ಪಿಎಚ್‌ಡಿ (PHD) ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಸಂತ್ರಸ್ತೆಗೆ ಮಾದಕ ವಸ್ತು ನೀಡಿ ಅತ್ಯಾಚಾರ ಎಸಗಿ, ಆಕೆಯ ಅಶ್ಲೀಲ ವಿಡಿಯೋಗಳನ್ನು ಚಿತ್ರೀಕರಿಸಿ ಬೆದರಿಕೆ ಹಾಕುತ್ತಿದ್ದ ಯೋಗೇಶ್ ರಾವತ್ ಎಂಬಾತನೇ ಈ ಕೃತ್ಯ ಎಸಗಿದ ಆರೋಪಿಯಾಗಿದ್ದಾನೆ. ಮಧ್ಯಪ್ರದೇಶದ ದಾಟಿಯಾ ಮೂಲದ ಈ ಯುವತಿ ಗ್ವಾಲಿಯರ್‌ನಲ್ಲಿ ಪಿಎಚ್‌ಡಿ ವ್ಯಾಸಂಗ ಮಾಡುತ್ತಿದ್ದಾಗ ಈ ದುರಂತ ಸಂಭವಿಸಿದೆ. ಪೊಲೀಸ್ ಮೂಲಗಳ ಪ್ರಕಾರ, ಸಂತ್ರಸ್ತ ವಿದ್ಯಾರ್ಥಿನಿಗೆ ಆಕೆಯ ಸ್ನೇಹಿತರೊಬ್ಬರ ಸಹೋದರನಾಗಿದ್ದ ಯೋಗೇಶ್ ರಾವತ್ ಎಂಬಾತನ ಪರಿಚಯವಾಗಿತ್ತು. ಈ ಸ್ನೇಹವನ್ನೇ ದುರುಪಯೋಗಪಡಿಸಿಕೊಂಡ ಆರೋಪಿ, ಗ್ವಾಲಿಯರ್‌ನ ಹೋಟೆಲೊಂದಕ್ಕೆ ಆಕೆಯನ್ನು ಕರೆಸಿಕೊಂಡಿದ್ದಾನೆ. ಅಲ್ಲಿ ಆಕೆಗೆ ಬಲವಂತವಾಗಿ ಮತ್ತು ಬರುವ ಔಷಧ (ಮಾದಕ ವಸ್ತು) ಕುಡಿಸಿದ್ದಾನೆ. ಯುವತಿ ಪ್ರಜ್ಞೆ ತಪ್ಪಿದ ಬಳಿಕ ಆಕೆಯ ಮೇಲೆ ಪೈಶಾಚಿಕವಾಗಿ ಅತ್ಯಾಚಾರ ಎಸಗಿದ್ದಲ್ಲದೆ, ಆ ಕೃತ್ಯದ ಅಶ್ಲೀಲ ವಿಡಿಯೋಗಳನ್ನು ತನ್ನ ಮೊಬೈಲ್‌ನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದಾನೆ. ಅಷ್ಟಕ್ಕೇ ನಿಲ್ಲದ ಕಾಮುಕ…

Read More

ಬೆಂಗಳೂರು: ರಾಜ್ಯಾದ್ಯಂತ ಮುಂಗಾರು ಪೂರ್ವ ಮಳೆ (ಪ್ರೀ-ಮಾನ್ಸೂನ್) ಮತ್ತಷ್ಟು ಚುರುಕಾಗಿದ್ದು, ಮುಂದಿನ ಕೆಲವು ದಿನಗಳ ಕಾಲ ಭಾರಿ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ದಕ್ಷಿಣ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಗುಡುಗು, ಮಿಂಚು ಹಾಗೂ ಬಲವಾದ ಗಾಳಿ ಸಹಿತ ಆಲಿಕಲ್ಲು ಮಳೆಯಾಗುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ಮತ್ತು ರೈತರು ಅಗತ್ಯ ಮುನ್ನೆಚ್ಚರಿಕೆ ಹಾಗೂ ಸುರಕ್ಷಿತ ಕ್ರಮಗಳನ್ನು ಕೈಗೊಳ್ಳುವಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ದಕ್ಷಿಣ ಒಳನಾಡಿಗೆ ‘ಆರೆಂಜ್ ಅಲರ್ಟ್’ ಭೀತಿ ದಕ್ಷಿಣ ಒಳನಾಡಿನ ಮಲೆನಾಡು ಮತ್ತು ಕಾವೇರಿ ಕೊಳ್ಳದ ಜಿಲ್ಲೆಗಳಲ್ಲಿ ಮಳೆಯ ತೀವ್ರತೆ ಹೆಚ್ಚಿರಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ. ಪ್ರಮುಖವಾಗಿ ಚಿಕ್ಕಮಗಳೂರು, ಹಾಸನ, ಕೊಡಗು, ಮಂಡ್ಯ ಮತ್ತು ಮೈಸೂರು ಜಿಲ್ಲೆಗಳಲ್ಲಿ ಗಂಟೆಗೆ 50 ರಿಂದ 60 ಕಿಲೋಮೀಟರ್ ವೇಗದಲ್ಲಿ ಬಲವಾದ ಗಾಳಿ ಬೀಸುವ ಸಾಧ್ಯತೆಯಿದೆ. ಇದರೊಂದಿಗೆ ಭಾರಿ ಮಳೆ ಹಾಗೂ ಆಲಿಕಲ್ಲು ಬೀಳುವ ಮುನ್ಸೂಚನೆ ಇರುವುದರಿಂದ ಈ ಜಿಲ್ಲೆಗಳಿಗೆ ‘ಆರೆಂಜ್ ಅಲರ್ಟ್’ ಘೋಷಿಸಲಾಗಿದೆ. ಬೆಂಗಳೂರು…

Read More

ಕೋಲಾರ: ಜಿಲ್ಲೆಯಲ್ಲಿ ಅತ್ಯಂತ ಘೋರ ಹಾಗೂ ಮನಕಲಕುವ ದುರಂತವೊಂದು ಸಂಭವಿಸಿದೆ. ಇಲ್ಲಿನ ಕುಟುಂಬವೊಂದರಲ್ಲಿ ನಡೆಯುತ್ತಿದ್ದ ತಿಥಿ (ಶುದ್ಧಿ ಕಾರ್ಯ) ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಬಾಲಕನೊಬ್ಬ ಆಕಸ್ಮಿಕವಾಗಿ ವಿದ್ಯುತ್ ತಂತಿ ತಗುಲಿ ಸ್ಥಳದಲ್ಲೇ ಸಾವನ್ನಪ್ಪಿರುವ ಧೃತಿಗೆಡಿಸುವ ಘಟನೆ ನಡೆದಿದೆ. ನೆರೆದಿದ್ದವರ ಸಮ್ಮುಖದಲ್ಲೇ ಈ ದುರ್ಘಟನೆ ನಡೆದಿರುವುದು ಇಡೀ ಜಿಲ್ಲೆಯನ್ನು ಕಣ್ಣೀರಿಡುವಂತೆ ಮಾಡಿದೆ. ಮೃತಪಟ್ಟ ಬಾಲಕನ ಗುರುತು: ಕರೆಂಟ್ ಶಾಕ್ ತಗುಲಿ ದುರಂತವಾಗಿ ಸಾವನ್ನಪ್ಪಿದ ಬಾಲಕನನ್ನು ಸಯ್ಯದ್ ರೆಹಮಾನ್ ಎಂದು ಗುರುತಿಸಲಾಗಿದೆ. ಹಬ್ಬ ಅಥವಾ ಕಾರ್ಯಕ್ರಮದ ಸಂಭ್ರಮದಲ್ಲಿದ್ದ ಬಾಲಕ ಹೀಗೆ ದಿಢೀರನೆ ಹೆಣವಾಗಿ ಮಾರ್ಪಟ್ಟಿರುವುದು ಆತನ ಹೆತ್ತವರಿಗೆ ಮತ್ತು ಸಂಬಂಧಿಕರಿಗೆ ಅರಗಿಸಿಕೊಳ್ಳಲಾಗದ ತೀವ್ರ ಆಘಾತವನ್ನು ಉಂಟುಮಾಡಿದೆ. ಮಗನನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಮೂವರು ಮಕ್ಕಳ ಪ್ರಾಣಾಪಾಯದಿಂದ ಪಾರು: ಅದೇ ಸಮಯದಲ್ಲಿ ಸಯ್ಯದ್ ರೆಹಮಾನ್ ಜೊತೆಯಲ್ಲಿದ್ದ ಇಮ್ರಾನ್, ಜಬಿ ಹಾಗೂ ಸಯ್ಯದ್ ಎಂಬ ಇನ್ನಿತರ ಮೂವರು ಮಕ್ಕಳು ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಒಂದೇ ಸ್ಥಳದಲ್ಲಿ ನಾಲ್ಕು ಮಕ್ಕಳು ಇದ್ದು, ಅವರಲ್ಲಿ ಒಬ್ಬ ಬಾಲಕ…

Read More

ಒಡಿಶಾ : ಮಂಗಳವಾರ ಸಂಜೆ ಬೆರ್ಹಾಂಪುರದಲ್ಲಿ ಸಾರ್ವಜನಿಕ ಹಿಂಸಾಚಾರದ ಆಘಾತಕಾರಿ ಘಟನೆ ವರದಿಯಾಗಿದ್ದು, ಇದು ಒಡಿಶಾದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯ ಬಗ್ಗೆ ಗಂಭೀರ ಕಳವಳವನ್ನುಂಟುಮಾಡಿದೆ.  ಪ್ರಾಥಮಿಕ ವರದಿಗಳ ಪ್ರಕಾರ, ಹಿಲ್ಪಟ್ನಾ ಪ್ರದೇಶದ ಮುಕ್ತೇಶ್ವರ್ ಕುಮಾರ್ ಸಾಹು ಮತ್ತು ಅವರ ಕಿರಿಯ ಸಹೋದರ ಆಶಿಸ್ ಕುಮಾರ್ ಸಾಹು, ಬೈದ್ಯನಾಥಪುರ ಪೊಲೀಸ್ ಠಾಣೆ ವ್ಯಾಪ್ತಿಯ ಗಿರಿ ರಸ್ತೆ ಛಾಕಾ ಬಳಿ ಉಮೇಶ್ ರಥ್ ಎಂಬ ಯುವಕನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ಘಟನೆಯ ವೀಡಿಯೊಗಳಲ್ಲಿ, ಇಬ್ಬರು ಸಹೋದರರು ಉಮೇಶ್ ಅವರನ್ನು ದಪ್ಪ ಮರದ ಕೋಲುಗಳಿಂದ ಸಾರ್ವಜನಿಕವಾಗಿ ನಿರ್ದಯವಾಗಿ ಹೊಡೆಯುವುದನ್ನು ತೋರಿಸಲಾಗಿದೆ. ಹಲ್ಲೆ ಮುಂದುವರಿದಂತೆ, ಬಲಿಪಶುವಿನ ಸ್ನೇಹಿತೆ ಎಂದು ಹೇಳಲಾದ ಯುವತಿಯೊಬ್ಬಳು ದಾಳಿಕೋರರನ್ನು ತಡೆಯಲು ಪ್ರಯತ್ನಿಸುತ್ತಿರುವುದು ಕಂಡುಬಂದಿದೆ. ಒಂದು ಹಂತದಲ್ಲಿ, ಹಲ್ಲೆಯನ್ನು ನಿಲ್ಲಿಸುವಂತೆ ಆರೋಪಿಗಳಲ್ಲಿ ಬೇಡಿಕೊಳ್ಳುತ್ತಾ ಉಮೇಶ್ ಅವರನ್ನು ರಕ್ಷಿಸಲು ಪ್ರಯತ್ನಿಸುತ್ತಾ ಅವಳು ಉಮೇಶ್ ಮೇಲೆ ಮಲಗಿದ್ದಳು ಎಂದು ವರದಿಯಾಗಿದೆ. ಆಕೆಯ ಪ್ರಯತ್ನಗಳ ಹೊರತಾಗಿಯೂ, ಹಿಂದಿನ ದ್ವೇಷದ ಕಾರಣಕ್ಕಾಗಿ…

Read More