ಬೆಂಗಳೂರು : ಬೆಂಗಳೂರಿನಲ್ಲಿ ಹಲ್ಲೆ ಮಾಡಲು ಪೊಲೀಸರೇ ಡೀಲ್ ಕೊಟ್ಟ ಆರೋಪ ಕೇಳಿ ಬಂದಿದೆ. ಪೊಲೀಸರಿಂದಲೇ ಡೀಲ್ ತೆಗೆದುಕೊಂಡು ತಂದೆ ಮಗನ ಮೇಲೆ ಹಲ್ಲೆ ನಡೆಸಿರುವ ಆರೋಪ ಕೇಳಿಬಂದಿದೆ. ತಂದೆ ಮಂಜುನಾಥ ಮತ್ತು ಮಗ ವಿಶ್ವನಾಥ್ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಲಾಗಿದೆ. ಪ್ರಜ್ವಲ್ ಹಾಗೂ ಆತನ ಸ್ನೇಹಿತನಿಂದ ತಂದೆ ಮಗನ ಮೇಲೆ ಹಲ್ಲೆ ನಡೆದಿದೆ.
ಕಾನ್ಸ್ಟೇಬಲ್ಗಳಾದ ಪ್ರಸನ್ನ ಮತ್ತು ನೇತಾಜಿ, ಹಲ್ಲೆ ಮಾಡಲು ಡೀಲ್ ಕೊಟ್ಟಿರುವ ಆರೋಪ ಕೇಳಿ ಬಂದಿದೆ. ಗೋವಿಂದರಾಜನಗರ ಪೊಲೀಸ್ ಠಾಣೆ ಸಿಬ್ಬಂದಿಗಳಾದ ಪ್ರಸನ್ನ ಮತ್ತು ನೇತಾಜಿ, ಕೊಲೆ ಪ್ರಕರಣದಲ್ಲಿ ಸ್ಪಾಟ್ ನಲ್ಲಿ ಇದ್ದೀಯ ಎಂದು ವಿಶ್ವನಾಥ್ ನನ್ನ ವಿಚಾರಣೆ ನಡೆಸಿರುತ್ತಾರೆ. ವಿಶ್ವನಾಥ್ ನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ತನಿಖೆಯ ವೇಳೆ ಕೇಸ್ನಲ್ಲಿ ಪಾತ್ರ ಇಲ್ಲ ಎಂದು ಪೊಲೀಸರು ಬಿಟ್ಟು ಕಳುಹಿಸಿದ್ದರು.
ಬಿಟ್ಟು ಕಳುಹಿಸುವ ವೇಳೆ ಪೊಲೀಸರು ಹಣಕ್ಕೆ ಡಿಮ್ಯಾಂಡ್ ಮಾಡಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ. ಪೊಲೀಸರಿಂದ ಡೀಲ್ ಬಂದಿದೆ ಎಂದು ಮಾರಕಾಸ್ತ್ರಗಳಿಂದ ಮಂಜುನಾಥ್ ಮತ್ತು ಮಗ ವಿಶ್ವನಾಥ್ ಮೇಲೆ ಇಬ್ಬರು ಹಲ್ಲೆ ಮಾಡಿದ್ದಾರೆ ಬೈಕ್ ನಲ್ಲಿ ಬಂದು ಲಾಂಗ್ ಮತ್ತು ಕಟ್ಟಿಗೆಯಿಂದ ಹಲ್ಲೆ ಮಾಡಿ ಪರಾರಿಯಾಗಿದ್ದಾರೆ. ಸದ್ಯ ಪೊಲೀಸರು ಹುಡುಗರಿಗೆ ಹೇಳಿ ಹಲ್ಲೆ ಮಾಡಿಸಿದ್ದಾರೆ ಎಂದು ಗೋವಿಂದರಾಜ ನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.








