Subscribe to Updates
Get the latest creative news from FooBar about art, design and business.
Author: kannadanewsnow05
ಬೆಂಗಳೂರು : ಕರ್ತವ್ಯದ ಲೋಪದ ಆರೋಪದ ಮೇರೆಗೆ ನಗರದ ಮತ್ತಿಬ್ಬರು ಪೊಲೀಸ್ ಅಧಿಕಾರಿಗಳು ಅಮಾನತುಗೊಂಡಿದ್ದಾರೆ. ಡಿಸಿಪಿ ಅವರ ಆದೇಶ ಆಧರಿಸಿ ಆಯುಕ್ತ ಸೀಮಂತ್ ಕುಮಾರ್ಸಿಂಗ್ ಶಿಸ್ತು ಕ್ರಮ ಜರುಗಿಸಿದ್ದಾರೆ ಎಂದು ತಿಳಿದು ಬಂದಿದೆ. ಹಲಸೂರು ಗೇಟ್ ಠಾಣೆ ಪಿಐ ಹನುಮಂತ ಭಂಜತ್ರಿ ಹಾಗೂ ಕೋರಮಂಗಲ ಠಾಣೆಯ ಪಿಐ ಎಸ್.ಎಲ್.ಆರ್.ರೆಡ್ಡಿ ಅಮಾನತುಗೊಂಡಿವರು. ಕೆಲ ದಿನಗಳ ಹಿಂದಷ್ಟೇ ಡ್ರಗ್ಸ್ ಪೆಡ್ಲರ್ಗಳ ಜೊತೆ ಸ್ನೇಹ ಹೊಂದಿದ್ದ ಆರೋಪದ ಮೇರೆಗೆ 11 ಪೊಲೀಸರನ್ನು ಸಸ್ಪೆಂಡ್ ಮಾಡಲಾಗಿತ್ತು. ಕಾನೂನು ಸುವ್ಯವಸ್ಥೆ ಅಸಮರ್ಪಕ ನಿರ್ವಹಣೆ ಹಾಗೂ ಅಪರಾಧ ಪ್ರಕರಣಗಳ ಪತ್ತೆದಾರಿಕೆಯಲ್ಲಿ ದೋಷ ಮಾಡಿದ್ದರು ಎಂದು ಹಲಸೂರು ಗೇಟ್ ಠಾಣೆ ಪಿಐ ಹನುಮಂತ ಮೇಲೆ ಆರೋಪ ಬಂದಿತ್ತು. ಹಾಗೆ ತಮ್ಮ ಠಾಣಾ ಸರಹದ್ದಿನಲ್ಲಿ ಪಬ್ಗಳು ಅವಧಿ ಮೀರಿ ವಹಿವಾಟು ನಡೆಸಿದ ಹಾಗೂ ನಿಯಮ ಉಲ್ಲಂಘಿಸಿ ಧ್ವನಿವರ್ಧಕ ಬಳಕೆ ಮಾಡಿದರು ನಿಯಂತ್ರಿಸದೆ ನಿರ್ಲಕ್ಷ್ಯ ತೋರಿದರು ಎಂಬ ಆಪಾದನೆಗೆ ಕೋರಮಂಗಲ ಠಾಣೆ ಪಿಐ ರೆಡ್ಡಿ ತುತ್ತಾಗಿದ್ದರು ಎನ್ನಲಾಗಿದೆ. ಈ ಸಂಬಂಧ ಆಯುಕ್ತರಿಗೆ ಭಜಂತ್ರಿ ವಿರುದ್ಧ…
ಬೆಂಗಳೂರು : ರಾಜ್ಯ ಸರ್ಕಾರದ ಜಾತಿಗಣತಿ ಸಮೀಕ್ಷೆ ಇಂದಿನಿಂದ ಆರಂಭಗೊಂಡಿದೆ. ಈ ಜಾತಿಗಣತಿ ಪ್ರಶ್ನಿಸಿ ಹೈಕೋರ್ಟ್ ಗೆ ಸಾರ್ವಜನಿಕ ಹಿತಾಸಕ್ತಿಯ ಅರ್ಜಿಯನ್ನು ಸಲ್ಲಿಸಲಾಗಿತ್ತು. ಈ ಅರ್ಜಿಯನ್ನು ವಿಚಾರಣೆ ನಡೆಸಿದಂತ ಹೈಕೋರ್ಟ್ ನ್ಯಾಯಪೀಠವು ಇಂದು ಮಧ್ಯಾಹ್ನ 2.30ಕ್ಕೆ ವಿಚಾರಣೆ ನಡೆಸಲಿದೆ. ನಿನ್ನೆ ಜಾತಿಗಣತಿ ಪ್ರಶ್ನಿಸಿ ಸಲ್ಲಿಸಿದ್ದಂತ ಪಿಐಎಲ್ ಅನ್ನು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು, ನ್ಯಾಯಮೂರ್ತಿ ಸಿ.ಎಂ ಜೋಶಿ ಅವರಿದ್ದ ಪೀಠದಲ್ಲಿ ವಿಚಾರಣೆ ನಡೆಯಿತು. ಅರ್ಜಿದಾರರ ಪರವಾಗಿ ಹಿರಿಯ ವಕೀಲ ಪ್ರಭುಲಿಂಗ್ ನಾದವಗಿ ವಾದ ಮಂಡಿಸಿದರು. ಅರ್ಜಿದಾರರ ಪರ ಹಿರಿಯ ವಕೀಲ ಜಯಕುಮಾರ್ ಎಸ್ ಪಾಟೀಲ್ ವಾದ ಮಂಡಿಸಿ, ಜನಗಣತಿಗಿಂತ ಈ ಸರ್ವೆ ಯಾವ ರೀತಿಯಲ್ಲೂ ಕಡಿಮೆಯಲ್ಲ. ಜನಗಣತಿಯನ್ನು ಕೇಂದ್ರ ಸರ್ಕಾರವಷ್ಟೇ ಮಾಡಬೇಕೆಂದು ವಾದಿಸಿದರು. ರಾಜ್ಯದೆಲ್ಲೆಡೆ ಸರ್ಕಾರ ಜಾತಿ ಗಣತಿಗೆ ಆದೇಶಿಸಿದೆ. ಸಂವಿಧಾನದ ಆರ್ಟಿಕಲ್ 342ಎ(3)ಗೆ ವಿರುದ್ಧವಾಗಿದೆ. ಹಿಂದುಳಿದ ವರ್ಗಗಳ ಆಯೋಗದ ಹಿಂದಿನ ವರದಿ ಪರಿಗಣಿಸದೇ ಹೊಸ ಪ್ರಕ್ರಿಯೆ ಆರಂಭಿಸಲಾಗಿದೆ ಎಂದರು. ಜಾತಿಗಣತಿಯ ಅಂಕಿ ಅಂಶಗಳನ್ನು ಆಧಾರ್ ಗೆ ಲಿಂಕ್ ಮಾಡ್ತಿದ್ದಾರೆ.…
ಬೆಂಗಳೂರು : ಇಡಿ ಭಾರತವೇ ಎದುರು ನೋಡುತ್ತೀರುವ ರಿಷಬ್ ಶೆಟ್ಟಿ ನಟನೆಯ ಕಾಂತಾರ ಚಾಪ್ಟಟ್-1 ಸಿನೆಮಾ ಟ್ರೈಲರ್ ನಿನ್ನೆ ರಿಲೀಸ್ ಆಗಿದೆ. ಪ್ರೇಕ್ಷಕರಿಂದ ಇದಕ್ಕೆ ಭರ್ಜರಿ ರೆಸ್ಪೋನ್ಸ್ ಸಹ ಸಿಕ್ಕಿದೆ. ಟ್ರೈಲರ್ ರಿಲೀಸ್ ಬಳಿಕ ಪ್ರೆಸ್ಮೀಟ್ನಲ್ಲಿ ಮಾತನಾಡಿರುವ ನಟ ರಿಷಬ್ ಶೆಟ್ಟಿ ಸಿನಿ ಜರ್ನಿ ಬಗ್ಗೆ ಹೇಳಿಕೊಂಡಿದ್ದಾರೆ. ಕಾಂತಾರ ಸಿನಿಮಾ 5 ವರ್ಷದ ದೊಡ್ಡ ಜರ್ನಿ. ಈ ಸಿನಿಮಾ ಕಂಪ್ಲೀಟ್ ಮಾಡೋಕೆ ಆಗ್ತಿರಲಿಲ್ಲ, ಅಷ್ಟು ಅಡೆತಡೆಗಳು ಎದುರಿಸಿದ್ದೀನಿ. ನನ್ನ ಹೆಂಡ್ತಿ ಅದೆಷ್ಟು ಹರಕೆ ಹೊತ್ತಿದ್ದಾಳೋ. ನಾನು ಶೂಟಿಂಗ್ ಹೋಗ್ತಿದ್ರೆ ದೇವರ ಮುಂದೆ ಪ್ರಾರ್ಥನೆ ಮಾಡ್ತಿದ್ಲು. ಇನ್ನೊಂದು ಸಲ ಹೇಗಿದ್ದೀರ ಅಂತ ಕೇಳಿದ್ರೆ ಅತ್ತೆ ಬಿಡ್ತೀನಿ, ಅಷ್ಟೊಂದು ಎಮೋಷನಲ್ ಜರ್ನಿ ಇದು ಅಂತ ಹೇಳಿಕೊಂಡ್ರು. ನನ್ನ ಮಕ್ಕಳು ಸ್ಕೂಲ್ಗೆ ಹೋಗೋದನ್ನ ನೋಡೋಕು ಟೈಮ್ ಸಿಗ್ತಿರ್ಲಿಲ್ಲ. ಫಾರೆಸ್ಟ್ ಮಿನಿಸ್ಟರ್ ಇಂದ ಎಲ್ರು ನನಗೆ ಈ ಚಿತ್ರಕ್ಕೆ ಸಹಕಾರ ನೀಡಿದ್ದಾರೆ. ಅಲ್ಲದೇ ಸರಿಯಾಗಿ ಮಲಗಿ ಮೂರು ತಿಂಗಳಾಯ್ತು. ಕೇವಲ 2 ಗಂಟೆ ಅಷ್ಟೇ ಮಲಗ್ತಿದ್ದೆ. ಲೆಕ್ಕ…
ಬೆಂಗಳೂರು : ಕಳೆದ ಕೆಲವು ದಿನಗಳ ಹಿಂದೆ ಅಷ್ಟೆ ಕೇಂದ್ರ ಸರ್ಕಾರ GST ದರ ಕಡಿತಗೋಳಿಸಿತ್ತು. GST ದರ ಕಡಿತ ವಿಚಾರವಾಗಿ GST ದರ ಕಡಿತಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ. ಆದರೆ, ಇದರಿಂದ ದೇಶದ ಎಲ್ಲಾ ರಾಜ್ಯಗಳಿಗೆ ಒಟ್ಟಾರೆ ಒಂದೂವರೆ ಲಕ್ಷ ಕೋಟಿ ರು.ನಷ್ಟು ವರಮಾನ ನಷ್ಟವಾ ಗಲಿದ್ದು, ಈ ನಷ್ಟಕ್ಕೆ ಪರಿಹಾರ ಸೂತ್ರವನ್ನು ಕೇಂದ್ರ ಸರ್ಕಾರ ರೂಪಿಸಬೇಕು ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಆಗ್ರಹಿಸಿದ್ದಾರೆ. ಬೆಂಗಳೂರಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಜಿಎಸ್ಟಿ ಕೇಂದ್ರ ಸರ್ಕಾರದವರು ಜಿಎಸ್ಟಿ ದರ ಕಡಿತವನ್ನು ರಾಜ್ಯಗಳಿಗೆ ಬಹಳ ಅನ್ಯಾಯವಾಗುವ ರೀತಿಯಲ್ಲಿ ಮಾಡಿದ್ದಾರೆ. ಇದರಿಂದ ರಾಜ್ಯಗಳು ಒಂದೂವರೆ ಲಕ್ಷ ಕೋಟಿ ರು.ನಷ್ಟು ವರಮಾನ ನಷ್ಟ ಅನುಭವಿಸಲಿವೆ. ಕರ್ನಾಟಕಕ್ಕೆ ರು.ನಷ್ಟು 15ರಿಂದ 16 ಸಾವಿರ ಕೋಟಿ ಆದಾಯ ಆಗುವ ವರಮಾನ ನಷ್ಟಕ್ಕೆ ಪರಿಹಾರ ಸೂತ್ರವನ್ನು ಕೇಂದ್ರ ಸರ್ಕಾರ ರೂಪಿಸದೆ ಹೋದರೆ ರಾಜ್ಯಗಳು ಮುಂದೆ ಸರ್ಕಾರ ಯನ್ನು ಕೇಂದ್ರವೇ ಎಂದು ನಷ್ಟವಾಗಲಿದೆ. ರಾಜ್ಯಗಳಿಗೆ ನಡೆಸುವುದೇ ಕಷ್ಟವಾಗಲಿದೆ. ಇದರ ಹೊಣೆ…
ಬೆಂಗಳೂರು : ಕರ್ನಾಟಕ ರಾಜ್ಯದ ನಾಗರೀಕರ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗಳ ಸಮೀಕ್ಷೆ ಕಾರ್ಯಕ್ಕಾಗಿ ಬಿ ಮತ್ತು ‘ಸಿ ವೃಂದದ’ ಅಧಿಕಾರಿ/ಸಿಬ್ಬಂದಿಗಳನ್ನು ನಿಯೋಜಿಸುವ ಬಗ್ಗೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಮೇಲೆ ಓದಲಾದ ಅರೆ ಸರ್ಕಾರಿ ಪತ್ರದಲ್ಲಿ, ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ಕರ್ನಾಟಕ ರಾಜ್ಯದ ನಾಗರೀಕರ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಗಳನ್ನು ಅಧ್ಯಯನ ಮಾಡಲು ಸಮೀಕ್ಷೆಯನ್ನು ನಡೆಸಲು ಉದ್ದೇಶಿಸಲಾಗಿರುವ ಹಿನ್ನೆಲೆಯಲ್ಲಿ, ಈ ಸಮೀಕ್ಷೆ ಕಾರ್ಯಕ್ಕಾಗಿ ‘ಬಿ’ ಮತ್ತು ‘ಸಿ’ ವೃಂದದ ಅಧಿಕಾರಿ/ಸಿಬ್ಬಂದಿಗಳನ್ನು ನಿಯೋಜಿಸಿಕೊಳ್ಳುವ ಇಲಾಖೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸಲುವಾಗಿ ಎಲ್ಲಾ ಗ್ರೂಪ್-‘ಬಿ’ ಮತ್ತು ಗ್ರೂಪ್-‘ಸಿ’ ವೃಂದದ ಅಧಿಕಾರಿ/ಸಿಬ್ಬಂದಿಗಳ ವಿವರಗಳನ್ನು ಪಡೆಯಲಾಗಿದ್ದು, ನೇಮಕಾತಿ ಆದೇಶ ಹೊರಡಿಸಿ, ಜಾರಿ ಮಾಡಲು ಕ್ರಮ ಜರುಗಿಸಲಾಗುವುದರಿಂದ, ಮುಖ್ಯ ಆಯುಕ್ತರು, ಗ್ರೇಟರ್ ಬೆಂಗಳೂರು ಪ್ರಾಧಿಕಾರ, ಇವರು ಈ ಕೆಳಕಂಡ ಅಂಶಗಳಿಗೆ ಅನುಮೋದನೆ ಕೋರಿರುತ್ತಾರೆ:- 1. ಮೇಲೆ ಓದಲಾದ ಪತ್ರದ ಅನುಬಂಧದಲ್ಲಿ ನಮೂದಿಸಿರುವ ಇಲಾಖೆಗಳಲ್ಲಿನ ಅಧಿಕಾರಿ/ನೌಕರರುಗಳನ್ನು ಸಮೀಕ್ಷೆ ಕಾರ್ಯಕ್ಕೆ ನಿಯೋಜಿಸಿಕೊಳ್ಳಲು ಅನುಮೋದನೆ. 2. ಸಮೀಕ್ಷಾ ಕಾರ್ಯಕ್ಕೆ ನಿಯೋಜನೆಗೊಂಡಿರುವ…
ದಕ್ಷಿಣಕನ್ನಡ : ಮನೆಯಲ್ಲಿ ಅಕ್ರಮ ಶಸ್ತ್ರಾಸ್ತ್ರ ಸಂಗ್ರಹ ಆರೋಪ ಹಿನ್ನೆಲೆಯಲ್ಲಿ ಮಹೇಶ್ ತಿಮರೊಡಿಗೆ ಸಂಕಷ್ಟ ಎದುರಾಗಿದೆ. ಬಂಧನದ ಭೀತಿಯಲ್ಲಿ ಮಹೇಶ್ ಶೆಟ್ಟಿ ತಿಮ್ಮ ರೌಡಿ ಇದೀಗ ಇದ್ದಿದ್ದು ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಕೆಗೆ ತಿಮರೋಡಿ ಈಗಾಗಲೇ ತಯಾರು ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಹೌದು ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಪಟ್ಟಂತೆ ಎಸ್ಐಟಿ ಅಧಿಕಾರಿಗಳು ಮಹೇಶ್ ಶೆಟ್ಟಿ ತಿಮರೊಡಿ ಮನೆಯಲ್ಲಿ ಶೋಧ ನಡೆಸಿದರು. ಈ ವೇಳೆ ಅಕ್ರಮವಾಗಿ ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸಿದ ಆರೋಪದ ಅಡಿ ಅವರಿಗೆ ಇದೀಗ ಬಂಧನದ ಭೀತಿ ಎದುರಾಗಿದೆ. ಅಕ್ರಮಶಸ್ತ್ರ ಆಸ್ತ್ರ ಸಂಗ್ರಹ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸರು ಈಗಾಗಲೇ ವಿತರಣೆ ಹಾಜರಾಗಿ ಎಂದು ಎರಡು ಬಾರಿ ನೋಟಿಸ್ ನೀಡಿದ್ದರು ವಿಚಾರಣೆಗೆ ತಿಮ್ಮರೋಡಿ ಹಾಜರಾಗಿರಲಿಲ್ಲ. ಹಾಗಾಗಿ ಮಹೇಶ್ ಶೆಟ್ಟಿ ಮರೋಡಿ ಕೋರ್ಟಿಗೆ ಜಾಮೀನು ಅರ್ಜಿ ಸಲ್ಲಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಇನ್ನು ಮಹೇಶೆಟ್ಟಿ ತಿಮರೋಡಿ ಹಾಗೂ ಮಾಸ್ಕ್ ಮ್ಯಾನ್ ಚಿನ್ನಯ ಸೌಜನ್ಯ ಪ್ರಕರಣದ ಕುರಿತು ಮಾತನಾಡಿರುವ ವಿಡಿಯೋ ಸಹ 12ನೇ ವಿಡಿಯೋ ವೈರಲ್ ಆಗಿದೆ.ಸೌಜನ್ಯಳನ್ನು…
ಬೆಂಗಳೂರು : ಇತ್ತೀಚಿಗೆ ವಿಜಯಪುರ ಜಿಲ್ಲೆಯ ಚಡಚಣ ಪಟ್ಟಣದಲ್ಲಿ ಎಸ್ ಬಿ ಐ ಬ್ಯಾಂಕ್ ನಲ್ಲಿ ಬ್ಯಾಂಕ್ ಮ್ಯಾನೇಜರ್ ಹಾಗೂ ಸಿಬ್ಬಂದಿಗಳನ್ನು ರೂಂನಲ್ಲಿ ಕೂಡಿಹಾಕಿ ಕೋಟ್ಯಾಂತರ ರೂಪಾಯಿ ನಗದು, 20 ಕೆಜಿ ಚಿನ್ನ ದರೋಡೆ ಪ್ರಕರಣ ಭಾರಿ ಸದ್ದು ಮಾಡಿತ್ತು. ಇದೀಗ ಬೆಂಗಳೂರಿನಲ್ಲಿ ಸಹ ಮನೆಯೊಂದರಲ್ಲಿ ಇದ್ದಂತಹ ಒಂದೂವರೆ ಕೋಟಿ ರೂಪಾಯಿಯನ್ನು ದರೋಡೆ ಮಾಡಿರುವ ಘಟನೆ ವರದಿಯಾಗಿದೆ. ಹೌದು ಬೆಂಗಳೂರಿನಲ್ಲಿ ಒಂದೂವರೆ ಕೋಟಿ ರೂಪಾಯಿ ದರೋಡೆ ಮಾಡಲಾಗಿದ್ದು ಯಲಹಂಕದಲ್ಲಿ ಮನೆಗೆ ನುಗ್ಗಿ ಒಂದೂವರೆ ಕೋಟಿ ಲೂಟಿ ಮಾಡಿದ್ದಾರೆ. ಗಿರಿರಾಜು ಎಂಬುವವರ ಮನೆಗೆ ಬಂದ ನಾಲ್ವರು ಖದೀಮರು ಇನ್ನೋವಾ ಕಾರಿನಲ್ಲಿ ಬಂದು ಒಂದುವರೆ ಕೋಟಿ ರೂಪಾಯಿ ಕದ್ದು ಪರಾರಿಯಾಗಿದ್ದಾರೆ. ಸರ್ಕಾರಿ ಅಧಿಕಾರಿಗಳು ಎಂದು ಹೇಳಿ ಒಂದುವರೆ ಕೋಟಿ ರೂಪಾಯಿ ರಾಬರಿ ಮಾಡಿದ್ದಾರೆ. ಬಳಿಕ ಪೊಲೀಸರಿಗೆ ಕುರಿತು ದೂರು ನೀಡಿದ್ದಾರೆ. ಜಮೀನು ಖರೀದಿಗೆ ಗಿರಿರಾಜು ಹಣ ತಂದುಕೊಂಡು ಇಟ್ಟಿದ್ದರು. ನಾಲ್ವರು ಮನೆಗೆ ಬರುತ್ತಿದ್ದ ಮನೆಯವರಿಗೆ ಪ್ರಶ್ನೆ ಮಾಡಿದ್ದಾರೆ ನಿಮ್ಮ ಮನೆಯಲ್ಲಿ ಹಣ ಎಲ್ಲಿದೆ ಎಂದು…
ನವದೆಹಲಿ : ನವೆಂಬರ್ ನಲ್ಲಿ ಶೇಕಡ 50ರಷ್ಟು ಸಚಿವರ ಬದಲಾವಣೆಯ ಸಾಧ್ಯತೆ ಇದೆ. ನವೆಂಬರ್ ನಲ್ಲಿ ಸಂಪುಟ ಪುನರ್ ರಚನೆ ಆಗಲಿದೆ ಹೊಸಬರಿಗೆ ಸಂಪುಟದಲ್ಲಿ ಅವಕಾಶ ನೀಡುವ ಸಾಧ್ಯತೆ ಇದೆ ಎಂದು ದೆಹಲಿಯಲ್ಲಿ ಎಂಎಲ್ಸಿ ಸಲೀಂ ಅಹಮದ್ ಹೊಸ ಬಾಂಬ್ ಸಿಡಿಸಿದ್ದಾರೆ. ನವೆಂಬರ್ ನಲ್ಲಿ ನಮ್ಮ ಸರ್ಕಾರ ಆಡಳಿತಕ್ಕೆ ಬಂದು ಎರಡೂವರೆ ವರ್ಷ ಆಗುತ್ತದೆ. ಹಾಗಾಗಿ ಸಂಪುಟ ಬದಲಾವಣೆ ಆಗಲಿದೆ ಸುಮಾರು ಶೇ.50 ರಷ್ಟು ಹೊಸಬರಿಗೆ ಸ್ಥಾನ ನೀಡಲಾಗುತ್ತದೆ. ಅದರ ಜೊತೆಗೆ ಪಕ್ಷ ಸಂಘಟನೆ ಮಾಡಲಾಗುತ್ತದೆ ಮುಂದಿನ 2028 ರಲ್ಲಿ ಕೂಡ ರಾಜ್ಯದಲ್ಲಿ ನಾವೇ ಅಧಿಕಾರಕ್ಕೆ ಬರುತ್ತೇವೆ ಹಾಗಾಗಿ ಹೊಸಬರಿಗೆ ಅವಕಾಶ ಮಾಡಿಕೊಡಬೇಕು ಅಂತ ಹೇಳಿದ್ದೇವೆ. ಸಂಪುಟ ಬದಲಾವಣೆ ಸಾಧ್ಯತೆ ಇದೆ ಎಂದು ಸ್ಪೋಟಕ ಹೇಳಿಕೆ ನೀಡಿದರು.
ಬೆಳಗಾವಿ : ಬೆಳಗಾವಿಯಲ್ಲಿ ಹಾಸ್ಟೆಲ್ ನಲ್ಲಿ ನರ್ಸಿಂಗ್ ವಿದ್ಯಾರ್ಥಿನಿ ಓರ್ವಳು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಳಗಾವಿಯ ಸದಾಶಿವನಗರದ ವಸತಿ ನಿಲಯದಲ್ಲಿ ಈ ಒಂದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಬೆಳಿಗ್ಗೆ ಕೊಡಡಿಯಲ್ಲಿ ಸುಮಿತ್ರಾ ಗೋಕಾಕ್ (19) ನೇಣಿಗೆ ಶರಣಾದ ನರ್ಸಿಂಗ್ ವಿದ್ಯಾರ್ಥಿನಿ ಎಂದು ತಿಳಿದು ಬಂದಿದೆ. ಸಹಪಾಠಿ ಬಂದು ಬಾಗಿಲು ಬಡಿದು ನೋಡಿದಾಗ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.
ತುಮಕೂರು : ಬೆಂಗಳೂರಲ್ಲಿ ಇಂದು ಬೆಳಿಗ್ಗೆ 35 ವರ್ಷದ ಮಹಿಳೆಗೆ ಲೋಕೇಶ್ ಅಲಿಯಾಸ್ ಲೋಹಿತಾಶ್ವ ಎಂಬ ಆರೋಪಿ 11 ಬಾರಿ ಚಾಕು ಇರಿದು ಕೊಲೆಗೆ ಯತ್ನಿಸಿದ್ದ. ಚಾಕು ಇರಿತದಿಂದ ಗಂಭೀರವಾಗಿ ಗಾಯಗೊಂಡಿದ್ದ ಮಹಿಳೆ ಇದೀಗ ಸಾವನ್ನಪ್ಪಿದ್ದಾರೆ. ಚಿಕಿತ್ಸೆ ಫಲಿಸದೆ ಖಾಸಗಿ ಆಸ್ಪತ್ರೆಯಲ್ಲಿ ರೇಖಾ (35) ಸಾವನಪ್ಪಿದ್ದಾರೆ. ಬೆಂಗಳೂರಿನ ಸುಂಕದಕಟ್ಟೆ ಬಳಿ ಲೋಕೇಶ್ ಎಂಬಾತ ರೇಖಾಗೆ ಚಾಕು ಇರಿದಿದ್ದ ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ನಿವಾಸಿ ಆಗಿರುವ ರೇಖಾಗೆ ಲೋಕೇಶ್ 11 ಬಾರಿ ಚಾಕು ಇರಿದಿದ್ದ. ಗಾಯಗೊಂಡ ರೇಖಾಳನ್ನು ಪೊಲೀಸರು ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ದರು. ತಲೆಮರೆಸಿಕೊಂಡ ಆರೋಪಿ ಲೋಕೇಶ್ ಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಘಟನೆ ಕುರಿತು ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.