Subscribe to Updates
Get the latest creative news from FooBar about art, design and business.
Author: kannadanewsnow05
ಕಲಬುರ್ಗಿ : ಆಳಂದ್ ಕ್ಷೇತ್ರದಲ್ಲಿ ಮತಗಳ್ಳತನ ವಿಚಾರಕ್ಕೆ ಸಂಬಂಧಪಟ್ಟಂತೆ ಬಗೆದಷ್ಟು ಕರಾಳತೆ ಬಯಲಾಗುತ್ತಿದೆ. ಇದೀಗ ಬಿಜೆಪಿಯ ಮಾಜಿ ಶಾಸಕ ಸುಭಾಷ್ ಗುತ್ತೇದಾರ್ ಒಡೆತನದ ಅಪ್ನಾ ಬಾರ್ & ರೆಸ್ಟೋರೆಂಟ್ ನಲ್ಲಿ ಮತದಾರರ ವೋಟರ್ ಲಿಸ್ಟ್ ಪತ್ತೆಯಾಗಿದೆ ಎಂದು ಎಸ್ಐಟಿ ಉನ್ನತ ಮೂಲಗಳಿಂದ ತಿಳಿದು ಬಂದಿದೆ ಎಸ್ಐಟಿ ದಾಳಿಯ ವೇಳೆ ಮತದಾರರ ಪಟ್ಟಿ ಪತ್ತೆಯಾಗಿದೆ. ರೇಡ್ ಆಗುತ್ತೆ ಅಂತ ಗೊತ್ತಾದ ತಕ್ಷಣವೇ ಬಾರ್ ನಲ್ಲಿಯೇ ಮತದಾರರ ಪಟ್ಟಿ ಡಿಲೀಟ್ ಗೆ ಪ್ಲಾನ್ ಮಾಡಿರುವ ಶಂಕೆ ವ್ಯಕ್ತವಾಗಿದೆ. ವೋಟ್ ಚೋರರಿಂದ 7 ಬಾರಿ ಬಾರ್ ನಲ್ಲಿ ಮೀಟಿಂಗ್ ನಡೆಸಲಾಗಿದೆ. ನಿನ್ನೆ ಅಪ್ನಾ ಬಾರ್ ಮೇಲೆ ಎಸ್ಐಟಿ ಅಧಿಕಾರಿಗಳು ದಾಳಿ ಮಾಡಿದ್ದಾರೆ, ದಾಳಿಯ ವೇಳೆ ಬಾರ್ ನಲ್ಲಿ ವೋಟರ್ ಲಿಸ್ಟ್ ಗಳು ಪತ್ತೆಯಾಗಿವೆ. ಅಲ್ಲದೆ ಮತದಾರರ ದಾಖಲೆಗಳನ್ನು ಸುಟ್ಟು ಹಾಕಿದ್ದ ವಿಚಾರವಾಗಿ ಕೂಡಿಸುವ ಹಣವನ್ನು ಆಳಂದ ಠಾಣೆ ಪೋಲಿಸಿರುವ ಶೆಕೆ ಪಡೆದುಕೊಂಡಿದ್ದು ಚಾಲಕ ವಿಶಾಲ್ ಪರಾರಿಯಾಗಿದ್ದಾನೆ. ಆತನ ಹುಡುಕಾಟಕ್ಕಾಗಿ ತೀವ್ರ ಶೋಧ ನಡೆಯುತ್ತಿದೆ. ಅಲ್ಲದೆ SIT…
ಮೈಸೂರು : ಚಿತ್ತಾಪುರದಲ್ಲಿ ನಾಳೆ ಆರ್ ಎಸ್ ಎಸ್ ಪಥಸಂಚಲನ ಹಿನ್ನೆಲೆಯಲ್ಲಿ ಅನುಮತಿ ಪಡೆಯದ ಕಾರಣ ಆರ್ ಎಸ್ ಎಸ್ ಬ್ಯಾನರ್ ಮತ್ತು ಭಗವಾಧ್ವಜಗಳನ್ನ ತೆರವುಗೊಳಿಸಲಾಗಿದೆ. ಈ ಕುರಿತು ನಾವು ಆರ್ ಎಸ್ ಎಸ್ ಟಾರ್ಗೆಟ್ ಮಾಡಿಲ್ಲ ಎಂದು ಮೈಸೂರಿನಲ್ಲಿ ಸಿಎಂ ಸಿದ್ದರಾಮಯ್ಯ ಹೇಳಿಕೆ ನೀಡಿದರು ಚಿತ್ತಾಪುರ ಗಲಾಟೆ ಬಗ್ಗೆ ನಾನು ಸಚಿವ ಪ್ರಿಯಾಂಕ ಖರ್ಗೆ ಅವರಿಂದ ಮಾಹಿತಿ ಪಡೆಯುತ್ತೇನೆ ಎಂದು ತಿಳಿಸಿದರು. ಮೈಸೂರಿನಲ್ಲಿ ಮಾತನಾಡಿದ ಅವರು ಯಾವುದೇ ಸಂಘಟನೆಗಳು ಕಾರ್ಯಕ್ರಮ ನಡೆಸಬೇಕಾದರೆ ಅನುಮತಿ ಪಡೆಯಬೇಕು. ಇದು 2013ರಲ್ಲಿ ಜಗದೀಶ್ ಶೆಟ್ಟರ್ ಸಿಎಂ ಆಗಿದ್ದಾಗಲೆ ಮಾಡಲಾಗಿತ್ತು. ಅದನ್ನ ನಾವು ಈಗ ರಿಪೀಟ್ ಮಾಡಿದ್ದೇವೆ. ಜಗದೀಶ ಶೆಟ್ಟರ್ ಮಾಡಿದಾಗ ಇವರು ಯಾಕೆ ವಿರೋಧ ಮಾಡಲಿಲ್ಲ? ಹಾಗಾಗಿ ನಾವು ಆರ್ಎಸ್ಎಸ್ ಟಾರ್ಗೆಟ್ ಮಾಡಿಲ್ಲ. ಬಿಜೆಪಿ ಯಾವಾಗಲೂ ರಾಜಕಾರಣನೇ ಮಾಡೋದು ಬಡವರ ಕೆಲಸ ಮಾಡಲ್ಲ ಅವರು ಯಾವಾಗಲೂ ರಾಜಕಾರಣ ಮಾಡುತ್ತಾರೆ ಎಂದರು.
ಕಲಬುರ್ಗಿ : ಆಳಂದ್ ಮಾಜಿ ಶಾಸಕ ಸುಭಾಷ್ ಗುತ್ತೇದಾರ್ ಮನೆಯ ಮೇಲೆ ಎಸ್ಐಟಿ ದಾಳಿ ವಿಚಾರಕ್ಕೆ ಸಂಬಂಧಪಟ್ಟಂತೆ, ಗೂಡ್ಸ್ ವಾಹನದಲ್ಲಿ ಮತದಾರರ ದಾಖಲೆಗಳನ್ನು ತಂದು ಸುಟ್ಟು ಹಾಕಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ, ಇದೀಗ ಗೂಡ್ಸ್ ವಾಹನವನ್ನು ಆಳಂದ ಠಾಣೆ ಪೊಲೀಸ್ರು ಅವಶ್ಯಕ ಪಡೆದುಕೊಂಡಿದ್ದು ಚಾಲಕ ವಿಶಾಲ್ ಪರಾರಿ ಆಗಿದ್ದಾನೆ. ಮತದಾರರ ದಾಖಲೆ ಬಂಡಲ್ ಗೆ ಬೆಂಕಿ ಹಚ್ಚಿ ನದಿಗೆ ಎಸೆದಿದ್ದ ಚಾಲಕ ಪರಾಗಿದ್ದಾನೆ. ಸದ್ಯ ಗೂಡ್ಸ್ ವಾಹಣವನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಚಾಲಕ ವಿಶಾಲ್ ಗಾಗಿ ಆಳಂದ ಠಾಣೆ ಪಡಿಸಲು ತೀವ್ರ ಹುಡುಕಾಟ ನಡೆಸಿದ್ದಾರೆ. SIT ಮತಗಳ್ಳತನ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದೆ. ಈ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ ಕಲಬುರ್ಗಿ ಜಿಲ್ಲೆಯ ಪೊಲೀಸರು ಎಲ್ಲ ಮಾಹಿತಿ ಸಂಗ್ರಹಿಸಿದ್ದಾರೆ.
ಬೆಂಗಳೂರು : ಆಳಂದದಲ್ಲಿ ಮತದಾರರ ದಾಖಲೆಗಳನ್ನು ಸುಟ್ಟು ಹಾಕಿದ ವಿಚಾರವಾಗಿ ಬಿಜೆಪಿ ಮೇಲೆ ಮತಗಳ್ಳತನ ಆರೋಪ ಮಾಡಿದ್ದು ಸಾಬೀತಾಗಿದೆ.ಆಳಂದದ ಮಾಜಿ ಶಾಸಕನ ಕೈವಾಡ ಇರುವುದು ಎದ್ದು ಕಾಣುತ್ತಿದೆ. ಲೋಕಸಭೆ ಚುನಾವಣೆಯಲ್ಲೂ ಕೂಡ ಕಳ್ಳತನದಿಂದ ಗೆದ್ದು ಸರ್ಕಾರ ರಚನೆ ಮಾಡಿದ್ದಾರೆ. ಕೇಂದ್ರದಲ್ಲಿ ಅಪವಿತ್ರ ಸರ್ಕಾರ ರಚಿಸಿದ್ದಾರೆ. ರಾಹುಲ್ ಗಾಂಧಿ ಆರೋಪ ನಿಜ ಎಂಬುದು ಸಾಬೀತು ಆಗಿದೆ. ಬಿಜೆಪಿಯವರು ಕಳ್ಳರು ಅವರಿಗೆ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಲ್ಲ ಎಂದು ಬಿಜೆಪಿ ವಿರುದ್ಧ ಶಾಸಕ ಪ್ರದೀಪ ಕಿಡಿ ಕಾರಿದರು. ಇನ್ನು ಕಲಬುರ್ಗಿ ಜಿಲ್ಲೆಯ ಚಿತಾಪುರದಲ್ಲಿ ನಾಳೆ ಆರ್ ಎಸ್ ಎಸ್ ಮತ ಸಂಚಲನ ವಿಚಾರವಾಗಿ ಆರ್.ಅಶೋಕ, ಛಲವಾದಿ ನಾರಾಯಣಸ್ವಾಮಿ, ಅಶ್ವಥ ನಾರಾಯಣ, ಸಿಟಿ ರವಿಯವರು ತಮ್ಮ ಮಕ್ಕಳಿಗೂ ಆರ್ ಎಸ್ ಎಸ್ ಗಣ ವೇಷ ಹಾಕಿಸಲಿ. ನಮಾಜ್ ನಿಷೇಧಿಸುವಂತೆ ಶಾಸಕ ಯತ್ನಾಳ್ ಪತ್ರ ಬರೆದಿದ್ದಾರೆ ಯತ್ನಾಳ್ ಸಾಹೇಬರೇ ಬ್ರೈನ್ ತಲೆ ಬುರುಡೆ ಒಳಗೆ ಇರುತ್ತದೆ ನಿಮ್ಮ ಬ್ರೈನ್ ಎಲ್ಲಿದೆ ಅಂತ ನನಗೆ ಡೌಟ್. ಅವರು ಮಸೀದಿ ಆವರಣದಲ್ಲಿ…
ಬೆಂಗಳೂರು : ಬೇಲೆಕೇರಿ ಬಂದರು ಮೂಲಕ ಅಕ್ರಮವಾಗಿ ಕಬ್ಬಿಣದ ಅದಿರನ್ನು ರಫ್ತು ಮಾಡಿ ಹಣ ಸಂಪಾದನೆ ಮಾಡಿದ ಆರೋಪ ಸಂಬಂಧ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿರುವ ED ಅಧಿಕಾರಿಗಳು, ಅದಿರು ರಫ್ತು ಮಾಡಿದ್ದ ಕಂಪೆನಿಗಳ ಮೇಲೆ ದಾಳಿ ನಡೆಸಿ ಬ್ಯಾಂಕ್ ಖಾತೆಯಲ್ಲಿದ್ದ 12.84 ಕೋಟಿ ಹಣವನ್ನು ಮುಟ್ಟುಗೋಲು ಹಾಕಿಕೊಂಡಿದ್ದಾರೆ. ಈ ಕುರಿತು ಟ್ವೀಟ್ ನಲ್ಲಿ ಮಾಹಿತಿ ನೀಡಿದ ED ಅಕ್ರಮವಾಗಿ ಅದಿರು ರಫ್ತು ಸಾಗಾಟ ಆರೋಪ ಸಂಬಂಧ ಅ.16ರಂದು ಬೆಂಗಳೂರು, ಹೊಸಪೇಟೆ, ಗುರುಗ್ರಾಮ ಸೇರಿದಂತೆ 20 ಕಡೆಗಳಲ್ಲಿ ಇ.ಡಿ ದಾಳಿ ನಡೆಸಿತ್ತು. ಶೋಧ ಕಾರ್ಯ ವೇಳೆ ಅಕ್ರಮವಾಗಿ ಸಾಗಾಟ ಮಾಡಿರುವ ಬಗ್ಗೆ ವಿವಿಧ ಮಹತ್ವದ ದಾಖಲಾತಿಗಳನ್ನು ಪತ್ತೆ ಹಚ್ಚಿತ್ತು. ಲಾಭ ಪಡೆದ ಕಂಪೆನಿಗಳ ಬ್ಯಾಂಕ್ ಖಾತೆಗಳನ್ನು ಪರಿಶೀಲಿಸಿ 12.84 ಕೋಟಿ ರೂ. ಹಣವನ್ನು ಸೀಜ್ ಮಾಡಿದೆ. ಅಲ್ಲದೆ, 42 ಲಕ್ಷ ರೂ. ನಗದನ್ನು ವಶಕ್ಕೆ ಪಡೆದುಕೊಂಡಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ. ಸುಪ್ರೀಂ ಕೋರ್ಟ್ ಆದೇಶದ ಮೇರೆಗೆ 50 ಟನ್ ಮೆಟ್ರಿಕ್…
ಹುಬ್ಬಳ್ಳಿ : ರಾಜ್ಯದಲ್ಲಿ ಸರ್ಕಾರಿ ಸ್ಥಳಗಳಲ್ಲಿ ಆರ್ ಎಸ್ ಎಸ್ ಚಟುವಟಿಕೆಗಳಿಗೆ ನಿರ್ಬಂಧ ಹೇರಿದ ಬೆನ್ನಲ್ಲೇ, ಇದೀಗ ಹುಬ್ಬಳ್ಳಿಯಲ್ಲಿ ಆರೆಸ್ಸೆಸ್ ವಿರುದ್ಧ ಯುವ ಕಾಂಗ್ರೆಸ್ ಪ್ರತಿಭಟನೆ ನಡೆಸಿದೆ. ಕೋಟಿಲಿಂಗೇಶ್ವರ ನಗರದಲ್ಲಿರುವ ಆರ್ ಎಸ್ ಎಸ್ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ್ದಾರೆ. ಹುಬ್ಬಳ್ಳಿಯಲ್ಲಿರುವ ಆರ್ ಎಸ್ ಎಸ್ ಕಚೇರಿಗೆ ಮುತ್ತಿಗೆ ಹಾಕಲು ಯುವ ಕಾಂಗ್ರೆಸ್ ಪ್ರತಿಭಟನಾಕಾರರು ಯತ್ನಿಸಿದರು. ಈ ವೇಳೆ ಗೋಕುಲ ರಸ್ತೆಯಲ್ಲಿಯೇ ಪೊಲೀಸರು ಪ್ರತಿಭಟನಾಕಾರರನ್ನು ತಡೆದಿದ್ದಾರೆ. ಸುಮಾರು ಮೂವತ್ತಕ್ಕೂ ಹೆಚ್ಚು ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಮಂಡ್ಯ :- ರೈತರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ರಾಜ್ಯ ರೈತ ಸಂಘದ ವತಿಯಿಂದ ಮದ್ದೂರು ನಗರದ ತಾಲೂಕು ಕಚೇರಿ ಆವರಣದಲ್ಲಿ ಶುಕ್ರವಾರ ಬೃಹತ್ ಪ್ರತಿಭಟನೆ ಹಮ್ಮಿಕೊಂಡು ತಾಲೂಕು ಹಾಗೂ ಜಿಲ್ಲಾಡಳಿತ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ರೈತ ಸಂಘದ ವಿಭಾಗೀಯ ಉಪಾಧ್ಯಕ್ಷ ಶಂಕರೇಗೌಡ ಮಾತನಾಡಿ, 2022-23 ನೇ ಸಾಲಿನಲ್ಲಿ ಕಬ್ಬು ಅರೆದಿರುವ ಹಂಗಾಮಿನಲ್ಲಿ ಅಂದಿನ ರಾಜ್ಯ ಸರ್ಕಾರ ಟನ್ ಕಬ್ಬಿಗೆ 150 ರೂ.ಗಳನ್ನು ಕಬ್ಬು ಬೆಳೆಗಳಿಗೆ ಪಾವತಿಸಲಾಗುವುದು ಎಂದು ಘೋಷಣೆ ಮಾಡಿತ್ತು. ಆದರೆ, ಇಲ್ಲಿಯವರೆಗೂ ಬಿಡುಗಡೆ ಮಾಡಿಲ್ಲ. ಈ ಕೂಡಲೇ ರಾಜ್ಯ ಸರ್ಕಾರ ಅದರ ಹಣವನ್ನು ಪಾವತಿ ಮಾಡಬೇಕು ಎಂದು ಆಗ್ರಹಿಸಿದರು. ಇನ್ನೊಂದು ತಿಂಗಳಲ್ಲಿ ಭತ್ತದ ಬೆಳೆ ಕಟಾವಿಗೆ ಬರುತ್ತಿದ್ದು, ಭತ್ತಕ್ಕೆ ಕ್ವಿಂಟಾಲ್ಗೆ ಕನಿಷ್ಟ 3500 ರೂ. ಬೆಲೆ ನಿಗದಿಗೊಳಿಸಬೇಕು ಹಾಗೂ ನವಂಬರ್ ತಿಂಗಳಲ್ಲೇ ಖರೀದಿ ಕೇಂದ್ರ ತೆರೆದು ರಾಗಿ, ಭತ್ತ ಖರೀಸಬೇಕು ಮತ್ತು ಶಾಶ್ವತವಾಗಿ ಖರೀದಿ ಕೇಂದ್ರಗಳನ್ನು ವರ್ಷ ಪೂರ್ತಿ ತೆರೆಯಬೇಕು. ಕೇಂದ್ರ ಸರ್ಕಾರ ಡಾ.ಸ್ವಾಮಿನಾಥನ್ ವರದಿಯನ್ನು…
ಬೆಂಗಳೂರು : ಇತ್ತೀಚೆಗೆ ಗೌರವಾನ್ವಿತ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ ಅವರ ಅಧಿಕೃತ ಸಾಮಾಜಿಕ ಜಾಲತಾಣದಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ(ಕೆಎಸ್ಆರ್‌ಟಿಸಿ)ಕ್ಕೆ ಲಂಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ವತಿಯಿಂದ ಎರಡು ಪ್ರಶಸ್ತಿಗಳನ್ನು ನೀಡಿರುವ ಕುರಿತು ಪೋಸ್ಟ್ ಒಂದನ್ನು ಹಂಚಿಕೊಳ್ಳಲಾಗಿತ್ತು.ಈ ವಿಚಾರವಾಗಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸ್ಪಷ್ಟನೆ ನೀಡಿದ್ದಾರೆ. ಈ ವಾಸ್ತವಾಂಶಗಳನ್ನು ನೆನಪಿನಲ್ಲಿಡಿ: 1997ರಿಂದ ಇಂದಿನವರೆಗೆ ಕೆಎಸ್ಆರ್‌ಟಿಸಿಯು ತನ್ನ ಕಾರ್ಯಕ್ಷಮತೆಗೆ 464 ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಪ್ರಶಸ್ತಿಗಳನ್ನು ಸ್ವೀಕರಿಸಿದೆ. ಮತ್ತು ಶಕ್ತಿ ಯೋಜನೆಯಡಿ ಮಹಿಳೆಯರಿಗೆ ಅತಿಹೆಚ್ಚು ಉಚಿತ ಟಿಕೆಟ್ ವಿತರಿಸುವ ಮೂಲಕ ಕರ್ನಾಟಕವು ಉನ್ನತ ಸಾಧನೆಯನ್ನು ತೋರಿದೆ. ಪೋಸ್ಟ್ ನ ಉದ್ದೇಶವು ಆಡಳಿತದಲ್ಲಿನ ಪ್ರಗತಿಗೆ ಮತ್ತು ಸಕ್ಷಮ ಸಾರ್ವಜನಿಕ ಸೇವೆಗೆ ಸಿಕ್ಕಿದ ಮಾನ್ಯತೆಯನ್ನು ಸಂಭ್ರಮಿಸುವುದಾಗಿತ್ತು. ಆದರೆ ದುರದೃಷ್ಟವಶಾತ್ ಪ್ರಶಸ್ತಿಯನ್ನು ನೀಡಿದ ಸಂಸ್ಥೆಯ ಇರುವಿಕೆಯ ಬಗ್ಗೆ ಕೆಲವರು ಅನುಮಾನಗಳನ್ನು ವ್ಯಕ್ತಪಡಿಸಿದ್ದರು. ಇದರಿಂದ ‘ಎಕ್ಸ್’ ಖಾತೆಯ ಆ ಪೋಸ್ಟ್ ನ ಅಡಿ ಸಾರ್ವಜನಿಕ ಟಿಪ್ಪಣಿಯನ್ನು (ಕಮ್ಯೂನಿಟಿ ನೋಟ್) ಸೇರಿಸಲಾಗಿತ್ತು. ಇದು ಹೆಚ್ಚಿನ ತಪ್ಪು ಗ್ರಹಿಕೆಗೆ…
ಬೆಂಗಳೂರು : ವೈದ್ಯಕೀಯ ಶಿಕ್ಷಣ ಇಲಾಖೆಯಲ್ಲಿ 422 ಸೀಟ್ ಗಳನ್ನು ಹೆಚ್ಚಳ ಮಾಡಲಾಗಿದೆ. ಪ್ರಸಕ್ತ ವರ್ಷದ ಸರ್ಕಾರಿ ಕೋಟದಲ್ಲಿ 422 ಸೀಟ್ ಹೆಚ್ಚಳ ಮಾಡಲಾಗಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾಕ್ಟರ್ ಶರಣ ಪ್ರಕಾಶ್ ಪಾಟೀಲ್ ಹೇಳಿಕೆ ನೀಡಿದರು. ಪ್ರಸಕ್ತ ವರ್ಷದಲ್ಲಿ ಕೆಇಎ ಸೀಟ್ ಗೆ ಅಳವಡಿಸಿಕೊಳ್ಳಲು ಸೂಚನೆ ನೀಡಲಾಗಿದೆ. 1,100 ಖಾಸಗಿ ಮೆಡಿಕಲ್ ಸೀಟ್ ಹೆಚ್ಚಳ ಮಾಡಲಾಗಿದೆ. ಕಳೆದ ವರ್ಷ 12395 ಸರ್ಕಾರಿ ಕೋಟ ಇತ್ತು.ಈ ಮೂಲಕ ಒಟ್ಟು 13945 ಸರ್ಕಾರಿ ಕೋಟ ಏರಿಕೆಯಾಗಿದೆ. ಈ ವರ್ಷದಲ್ಲಿ ಮೆಡಿಕಲ್ ಸೀಟ್ ಗಳಿಗೆ ತುಂಬಾ ಬೇಡಿಕೆ ಇತ್ತು. ಸರ್ಕಾರಿ ಕೋಟಾದ ಅಡಿ ಹೆಚ್ಚುವರಿಯಾಗಿ 572 ಪಿಜಿ ಸೀಟ್ ಕೇಳಿದ್ವಿ. ಈ ಬಾರಿ 422 ಪಿಡಿ ಸೀಟ್ ಸಿಕ್ಕಿರುವ ಮಾಹಿತಿ ಇದೆ ಎಂದು ಬೆಂಗಳೂರಿನಲ್ಲಿ ಸಚಿವ ಶರಣಪ್ರಕಾಶ್ ಪಾಟೀಲ್ ಹೇಳಿಕೆ ನೀಡಿದರು.
ಬೆಂಗಳೂರು : ಬೆಂಗಳೂರಲ್ಲಿ ಜಯನಗರ ಠಾಣೆ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು ಖೋಟಾ ನೋಟಿನ ಗ್ಯಾಂಗ್ ಒಂದನ್ನು ಅರೆಸ್ಟ್ ಮಾಡಿದ್ದಾರೆ. ಒರಿಜಿನಲ್ ನೋಟಿಗೆ ಖೋಟಾ ನೋಟಿನ ಆಫರ್ ನೀಡುತ್ತಿದ್ದ ಖದೀಮರನ್ನು ಅರೆಸ್ಟ್ ಮಾಡಿದ್ದಾರೆ. ಹೌದು 10 ಲಕ್ಷ ಅಸಲಿ ನೋಟಿಗೆ 30 ಲಕ್ಷ ಖೋಟಾ ನೋಟಿನ ಆಫರ್ ನೀಡಿದ್ದರು. ಖೋಟಾ ನೋಟು ಆಫರ್ ನೀಡಿ ಗ್ಯಾಂಗ್ ವಂಚನೆ ಎಸಗುತ್ತಿತ್ತು. ತಮಿಳುನಾಡಿನ ತಿರುನೆಲ್ವೇಲಿಯ ಗ್ಯಾಂಗ್ ಅನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಒಟ್ಟು 30 ಲಕ್ಷ ಕೊಟ್ಟ ಖೋಟಾ ನೋಟನ್ನು ವಶಕ್ಕೆ ಪಡೆದ ಪೊಲೀಸರು ಮೂವರು ಆರೋಪಿಗಳನ್ನು ಅರೆಸ್ಟ್ ಮಾಡಿದ್ದಾರೆ. ಈ ಒಂದು ಗ್ಯಾಂಗ್ ಸೂಟ್ಕೇಸ್ ಮೇಲ್ಭಾಗದಲ್ಲಿ ಅಸಲಿ ನೋಟುಗಳನ್ನು ಇಟ್ಟು ಮಧ್ಯದ ಭಾಗದಲ್ಲಿ ಮಾತ್ರ ಬಳಿ ಹಾಳೆಗಳನ್ನು ಇಟ್ಟು ಜನರಿಗೆ ವಂಚಿಸುತ್ತಿದ್ದರು. ಇವರು ಜಯನಗರದಲ್ಲಿ ಸೂಟ್ಕೇಸ್ ಸಮೇತ ನಿಂತಿದ್ದಾಗ ಖಚಿತ ಮಾಹಿತಿಯ ಮೇರೆಗೆ ಪೊಲೀಸರು ದಾಳಿ ಮಾಡಿ ತಮಿಳುನಾಡು ಮೂಲದ ಮೂವರು ಆರೋಪಿಗಳನ್ನು ಅರೆಸ್ಟ್ ಮಾಡಿದ್ದಾರೆ. ಬಳಿಕ ಸೂಟ್ಕೇಸ್ ನಲ್ಲಿದ್ದ ಹಣವನ್ನು ಜಪ್ತಿ…














