Author: ಸುರೇಶ್‌

"ಕನ್ನಡ ನ್ಯೂಸ್ ನೌ ಜಾಲತಾಣದ ಮುಖ್ಯ ಸಂಪಾದಕರಾದ ಸುರೇಶ್ ಅವರು ಕಳೆದ 4 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದಾರೆ. ಸರ್ಕಾರದ ಯೋಜನೆಗಳು, ಶಿಕ್ಷಣ ಮತ್ತು ಪ್ರಚಲಿತ ವಿದ್ಯಮಾನಗಳನ್ನು ಸಾಮಾನ್ಯ ಜನರಿಗೂ ಅರ್ಥವಾಗುವಂತೆ ವಿವರಿಸುವುದು ಇವರ ವಿಶೇಷತೆ. ಈ ಮೊದಲು ವಿವಿಧ ವೆಬ್‌ಸೈಟ್‌ಗಳಲ್ಲಿ ನಾಗರಿಕ ಸಮಸ್ಯೆಗಳ ಬಗ್ಗೆ ವರದಿಗಾರರಾಗಿ ಕೆಲಸ ಮಾಡಿರುವ ಇವರು, ಸಮಯೋಚಿತ ಹಾಗೂ ವಿಶ್ವಾಸಾರ್ಹ ಮಾಹಿತಿ ನೀಡುವ ಮೂಲಕ ಓದುಗರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಡಿಜಿಟಲ್ ಸಾಕ್ಷರತೆ ಇವರ ನೆಚ್ಚಿನ ವಿಷಯಗಳಲ್ಲೊಂದು

ಉತ್ತರಕನ್ನಡ : ಉತ್ತರಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಅಳ್ವೆಕೋಡಿಯಲ್ಲಿ ಕಪ್ಪೆಚಿಪ್ಪು ಹೆಕ್ಕಲು ಹೋಗಿ ಸಮುದ್ರದ ನೀರಿನ ಅಬ್ಬರಕ್ಕೆ ಸಿಲುಕಿ ನಾಪತ್ತೆಯಾಗಿದ್ದ ಮಾದೇವ್ ನಾಯ್ಕ್ ಎಂಬುವವರ ಮೃತದೇಹ ಕೊನೆಗೂ ಪತ್ತೆಯಾಗಿದೆ. ಇದರೊಂದಿಗೆ ಈ ಭೀಕರ ಜಲ ದುರಂತದಲ್ಲಿ ಮೃತಪಟ್ಟವರ ಒಟ್ಟು ಸಂಖ್ಯೆ 11ಕ್ಕೆ ಏರಿಕೆಯಾಗಿದ್ದು, ಇಡೀ ಜಿಲ್ಲೆಯೇ ಕಣ್ಣೀರಿನಲ್ಲಿ ಮುಳುಗುವಂತಾಗಿದೆ. ಘಟನೆ ನಡೆದ ದಿನದಿಂದಲೂ ನಾಪತ್ತೆಯಾಗಿದ್ದವರಿಗಾಗಿ ತೀವ್ರ ಹುಡುಕಾಟ ನಡೆಸಲಾಗುತ್ತಿತ್ತು. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (NDRF) ಮತ್ತು ಪ್ರಸಿದ್ಧ ಮುಳುಗುತಜ್ಞ ಈಶ್ವರ ಮಲ್ಪೆ ಅವರ ನೇತೃತ್ವದ ತಂಡ ಜಂಟಿಯಾಗಿ ಭರ್ಜರಿ ಕಾರ್ಯಾಚರಣೆ ನಡೆಸಿದ್ದವು. ತೀವ್ರ ಶೋಧದ ಬಳಿಕ ಇಂದು ಮಾದೇವ್ ನಾಯ್ಕ್ ಅವರ ಮೃತದೇಹವನ್ನು ಪತ್ತೆ ಹಚ್ಚಿ ಹೊರತೆಗೆಯುವಲ್ಲಿ ರಕ್ಷಣಾ ತಂಡಗಳು ಯಶಸ್ವಿಯಾಗಿವೆ. ಕಣ್ಣೀರು ತರಿಸುತ್ತಿದೆ ಕುಟುಂಬಗಳ ಕಥೆ ಈ ಭೀಕರ ದುರಂತದಲ್ಲಿ ಜಲಸಮಾಧಿಯಾದ 11 ಜನರ ಪೈಕಿ ನಿನ್ನೆಯಷ್ಟೇ 10 ಮಂದಿಯ ಶವಗಳು ಸಿಕ್ಕಿದ್ದವು. ಇಂದು ಮಾದೇವ್ ಅವರ ದೇಹ ಪತ್ತೆಯಾಗುವುದರೊಂದಿಗೆ ಇಡೀ ಕಾರ್ಯಾಚರಣೆ ಮುಕ್ತಾಯಗೊಂಡಂತಾಗಿದೆ. ಆದರೆ, ಈ ದುರಂತದಲ್ಲಿ…

Read More

ಬೆಂಗಳೂರು: ಕಿರುತೆರೆ ಹಾಗೂ ಬಿಗ್ ಬಾಸ್ ರಿಯಾಲಿಟಿ ಶೋ ಮೂಲಕ ಮನೆಮಾತಾಗಿದ್ದ ಖ್ಯಾತ ನಿರೂಪಕಿ ಜಾಹ್ನವಿ ಅವರು ತಮ್ಮ ಜೀವನದ ಹೊಸ ಅಧ್ಯಾಯವನ್ನು ಆರಂಭಿಸಿದ್ದಾರೆ. ಕನ್ನಡಿಗರ ಮನಗೆದ್ದಿದ್ದ ಈ ಕಿರುತೆರೆ ತಾರೆ, ಈಗ ಬಣ್ಣದ ಲೋಕದಿಂದ ರಾಜಕೀಯದತ್ತ ಮುಖ ಮಾಡಿದ್ದಾರೆ. ರಾಜಕೀಯ ಅಖಾಡಕ್ಕೆ ಅಧಿಕೃತವಾಗಿ ಧುಮುಕುವ ಮೂಲಕ ತಮ್ಮ ಅಭಿಮಾನಿಗಳಿಗೆ ಸರ್ಪ್ರೈಸ್ ನೀಡಿದ್ದಾರೆ. ವರ್ಷಗಳ ಕಾಲ ಈಟಿವಿ ಸೇರಿದಂತೆ ವಿವಿಧ ಪ್ರಮುಖ ವಾಹಿನಿಗಳಲ್ಲಿ ಆ್ಯಂಕರ್ ಆಗಿ ಕೆಲಸ ನಿರ್ವಹಿಸಿದ್ದ ಜಾಹ್ನವಿ, ಆನಂತರ ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋನಲ್ಲಿ ಸ್ಪರ್ಧಿಯಾಗಿ ಭಾಗವಹಿಸಿದ್ದರು. ಬಿಗ್ ಬಾಸ್ ಮನೆಯಲ್ಲಿ ತಮ್ಮ ಚಾಣಾಕ್ಷತನ ಮತ್ತು ಮಾತುಗಾರಿಕೆಯಿಂದ ಅಪಾರ ಜನಪ್ರಿಯತೆ ಗಳಿಸಿದ್ದ ಅವರು, ಆ ಬಳಿಕ ಹಲವು ಟಿವಿ ಶೋಗಳು ಹಾಗೂ ಸಿನಿಮಾಗಳಲ್ಲೂ ಕಾಣಿಸಿಕೊಂಡು ಸೈ ಎನಿಸಿಕೊಂಡಿದ್ದರು. ಜೆಡಿಎಸ್ ಪಕ್ಷಕ್ಕೆ ಅಧಿಕೃತ ಸೇರ್ಪಡೆ ಮನರಂಜನಾ ರಂಗದಲ್ಲಿ ಸಕ್ರಿಯರಾಗಿದ್ದ ಜಾಹ್ನವಿ, ಇದೀಗ ಪ್ರಾದೇಶಿಕ ಪಕ್ಷವಾದ ಜನತಾದಳ (ಜಾತ್ಯತೀತ) ಸೇರ್ಪಡೆಯಾಗುವ ಮೂಲಕ ಸಕ್ರಿಯ ರಾಜಕಾರಣಕ್ಕೆ ಪ್ರವೇಶಿಸಿದ್ದಾರೆ. ಬೆಂಗಳೂರಿನ ಜೆ.ಪಿ. ಭವನದಲ್ಲಿ…

Read More

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ನಾಯಕತ್ವ ಬದಲಾವಣೆ ಹಾಗೂ ಮುಂದಿನ ಮುಖ್ಯಮಂತ್ರಿ ಯಾರು ಎಂಬ ಚರ್ಚೆಗಳು ದಿನಕ್ಕೊಂದು ತಿರುವು ಪಡೆಯುತ್ತಿರುವ ಬೆನ್ನಲ್ಲೇ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ರಾಜಕೀಯ ಭವಿಷ್ಯದ ಕುರಿತು ಮಹತ್ವದ ಭವಿಷ್ಯವಾಣಿಯೊಂದು ಹೊರಬಿದ್ದಿದೆ. ಡಿ.ಕೆ. ಶಿವಕುಮಾರ್ ಅವರ ಆರಾಧ್ಯ ಗುರುಗಳಾದ ನೊಣವಿನಕೆರೆಯ ಕಾಡಸಿದ್ದೇಶ್ವರ ಮಠದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಅವರು, “ಡಿಕೆಶಿ ರಾಜ್ಯದ ಮುಖ್ಯಮಂತ್ರಿ ಆಗುವುದು ನೂರಕ್ಕೆ ನೂರು ನಿಶ್ಚಿತ” ಎಂದು ದೃಢವಾಗಿ ನುಡಿದಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯಲ್ಲಿ ಆಯೋಜಿಸಲಾಗಿದ್ದ ಖಾಸಗಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮಾತನಾಡಿದ ಶ್ರೀಗಳು, ಈ ಸ್ಪೋಟಕ ಹೇಳಿಕೆಯನ್ನು ನೀಡಿದ್ದಾರೆ. ಸದ್ಯದ ರಾಜಕೀಯ ವಿದ್ಯಮಾನಗಳ ನಡುವೆ ಸ್ವಾಮೀಜಿಯವರ ಈ ಹೇಳಿಕೆ ತೀವ್ರ ಕುತೂಹಲ ಮೂಡಿಸಿದ್ದು, ಕಾಂಗ್ರೆಸ್ ವಲಯ ಸೇರಿದಂತೆ ರಾಜ್ಯ ರಾಜಕೀಯ ಅಖಾಡದಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಿದೆ. ನಾಯಕತ್ವ ಬದಲಾವಣೆಯ ಗುಸುಗುಸು ಚರ್ಚೆಗಳಿಗೆ ಈ ಭವಿಷ್ಯ ಮತ್ತಷ್ಟು ತುಪ್ಪ ಸುರಿದಂತಾಗಿದೆ. ಕಾಲ ಕೂಡಿಬರಬೇಕಿದೆ ಅಷ್ಟೇ! ಕಾರ್ಯಕ್ರಮದಲ್ಲಿ ಡಿ.ಕೆ. ಶಿವಕುಮಾರ್ ಅವರ ರಾಜಕೀಯ ಯೋಗದ ಬಗ್ಗೆ ಮಾತನಾಡಿದ…

Read More

ಶಿವಮೊಗ್ಗ: ಭದ್ರಾವತಿಯಲ್ಲಿ ಬಿಜೆಪಿ ಯುವ ಮೋರ್ಚಾ ಮುಖಂಡ ಹಾಗೂ ವಕೀಲರೊಬ್ಬರ ವಿರುದ್ಧ ಅತ್ಯಾಚಾರ ಮತ್ತು ಬ್ಲ್ಯಾಕ್‍ಮೇಲ್ ಆರೋಪ ಕೇಳಿಬಂದಿದ್ದು, ಸಂತ್ರಸ್ತೆ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ. ಬಿಜೆಪಿ ಮುಖಂಡ, ವಕೀಲ ಭರತ್ ಬಿ.ಎಸ್. ಎಂಬುವವರ ವಿರುದ್ಧ ಈ ಗಂಭೀರ ಆರೋಪ ಕೇಳಿಬಂದಿದ್ದು, ಸದ್ಯ ಭದ್ರಾವತಿಯ ಪೇಪರ್ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿ ಭರತ್, 23 ವರ್ಷದ ವಿವಾಹಿತ ಮಹಿಳೆಗೆ ಇನ್ಸ್ಟಾಗ್ರಾಮ್ ಮೂಲಕ ಪರಿಚಯವಾಗಿದ್ದ. ತಾನು ಆಕೆಯ ಪತಿಯ ಸ್ನೇಹಿತ ಎಂದು ಹೇಳಿಕೊಂಡು ಆಕೆಗೆ ಹತ್ತಿರವಾಗಿದ್ದ ಎನ್ನಲಾಗಿದೆ. ಅಲ್ಲದೆ, ಮಹಿಳೆ ನಡೆಸುತ್ತಿದ್ದ ದಿನಸಿ ಅಂಗಡಿಗೆ ಪದೇ ಪದೇ ಬರುತ್ತಿದ್ದ ಈತ, ಆಕೆಯ ಮೈ ಕೈ ಮುಟ್ಟಿ ವಿಕೃತ ಆನಂದ ಪಡುತ್ತಾ ನಿರಂತರವಾಗಿ ಲೈಂಗಿಕ ಕಿರುಕುಳ ನೀಡುತ್ತಿದ್ದ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಕಳೆದ ಏಪ್ರಿಲ್ 11 ರಂದು ಸಂತ್ರಸ್ತೆಯ ಪತಿಯು ತನಗೆ ಹಣದ ತುರ್ತು ಇದ್ದಿದ್ದರಿಂದ, “ನನ್ನ ಸ್ನೇಹಿತ ಭರತ್ ಮನೆಗೆ ಬರುತ್ತಾನೆ, ಆತನಿಗೆ ಹಣ ನೀಡು” ಎಂದು ಪತ್ನಿಗೆ ತಿಳಿಸಿದ್ದರು. ಪತಿಯ…

Read More

ಉತ್ತರಕನ್ನಡ : ಉತ್ತರಕನ್ನಡ ಜಿಲ್ಲೆಯ ಭಟ್ಕಳದಲ್ಲಿ ಕಪ್ಪೆ ಚಿಪ್ಪಿನ ಆಸೆಗೆ ನದಿಗೆ ಇಳಿದ ಒಂದೇ ಕುಟುಂಬದ 8 ಜನರು ಸಾವನಪ್ಪಿರುವ ಘಟನೆ ಇಂದು ನಡೆದಿದ್ದು, ಈ ಒಂದು ಘಟನೆಯ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಆಘಾತ ವ್ಯಕ್ತಪಡಿಸಿದ್ದು, ಮೃತರ ಕುಟುಂಬಸ್ಥರಿಗೆ ರಾಜ್ಯ ಸರ್ಕಾರದಿಂದ 5 ಲಕ್ಷ ಪರಿಹಾರ ನೀಡಲಾಗುತ್ತೆ ಎಂದು ಘೋಷಣೆ ಮಾಡಿದ್ದಾರೆ. ಈ ಬಗ್ಗೆ ಟ್ವೀಟ್ ನಲ್ಲಿ ಮಾಹಿತಿ ಹಂಚಿಕೊಂಡ ಅವರು, ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ಸಮೀಪದ ತಟ್ಟೆಹಕ್ಕಲು ಕಡಲ ತೀರದಲ್ಲಿ ಕಪ್ಪೆಚಿಪ್ಪು ತರಲು ಹೋದವರ ಪೈಕಿ ಒಂದೇ ಕುಟುಂಬದ ಎಂಟು ಮಂದಿ ನೀರಿನಲ್ಲಿ ಮುಳುಗಿ ಸಾವಿಗೀಡಾಗಿದ ಸುದ್ದಿ ತಿಳಿದು ಸಂಕಟವಾಯಿತು. ಮೃತರ ಆತ್ಮಕ್ಕೆ ಚಿರಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ. ಇದೊಂದು ಅತ್ಯಂತ ದುರದೃಷ್ಟಕರ ಮತ್ತು ನೋವಿನ ಘಟನೆ. ದುರಂತದಲ್ಲಿ ಮಡಿದವರ ಕುಟುಂಬಕ್ಕೆ ಮಾನವೀಯ ನೆಲೆಯಲ್ಲಿ ರಾಜ್ಯ ಸರ್ಕಾರದಿಂದ ತಲಾ 5 ಲಕ್ಷ ರೂಪಾಯಿ ಪರಿಹಾರ ನೀಡಲಾಗುವುದು. ಇನ್ನೂ ಕೆಲವರು ಈ ದುರ್ಘಟನೆಯಲ್ಲಿ ಕಾಣೆಯಾಗಿರುವ ಮಾಹಿತಿಯಿದ್ದು, ಅವರಿಗಾಗಿ ತೀವ್ರ ಹುಡುಕಾಟ…

Read More

ಉತ್ತರ ಕನ್ನಡ : ಜಿಲ್ಲೆಯ ಭಟ್ಕಳ ತಾಲೂಕಿನಲ್ಲಿ ಅತ್ಯಂತ ಹೃದಯವಿದ್ರಾವಕ ದುರಂತವೊಂದು ಸಂಭವಿಸಿದೆ. ನದಿಯಲ್ಲಿ ಕಪ್ಪೆಚಿಪ್ಪು (ಚಿಪ್ಪುಮೀನು) ಸಂಗ್ರಹಿಸಲು ಹೋಗಿದ್ದ ಒಂದೇ ಕುಟುಂಬದ ಎಂಟು ಜನರು ನೀರಿನಲ್ಲಿ ಮುಳುಗಿ ಜಲಸಮಾಧಿಯಾಗಿದ್ದಾರೆ. ಭಟ್ಕಳ ಸಮೀಪದ ತಟ್ಟೆಹಕ್ಕಲು ನದಿಯಲ್ಲಿ ಈ ಭೀಕರ ಘಟನೆ ನಡೆದಿದ್ದು, ಇಡೀ ಜಿಲ್ಲೆಯನ್ನೇ ಕಣ್ಣೀರಿನಲ್ಲಿ ಮುಳುಗಿಸಿದೆ. ಮೂಲಗಳ ಪ್ರಕಾರ, ಉತ್ತರ ಕನ್ನಡ ಜಿಲ್ಲೆಯ ಶಿರಾಲಿಯ ಒಂದೇ ಕುಟುಂಬಕ್ಕೆ ಸೇರಿದ ಸುಮಾರು 14 ಜನರು ತಟ್ಟೆಹಕ್ಕಲು ನದಿಗೆ ಕಪ್ಪೆಚಿಪ್ಪುಗಳನ್ನು ಆಯ್ದುಕೊಳ್ಳಲು ತೆರಳಿದ್ದರು. ಸ್ಥಳೀಯವಾಗಿ ಆಹಾರ ಮತ್ತು ಜೀವನೋಪಾಯಕ್ಕಾಗಿ ನದಿಯ ತಟದಲ್ಲಿ ಚಿಪ್ಪುಗಳನ್ನು ಆರಿಸುವುದು ಸಾಮಾನ್ಯವಾಗಿದೆ. ಎಂದಿನಂತೆ ಈ ಕುಟುಂಬದ ಸದಸ್ಯರು ಕೂಡ ನದಿಗೆ ಇಳಿದಿದ್ದಾರೆ. ಆದರೆ, ದುರದೃಷ್ಟವಶಾತ್ ಈ ಬಾರಿ ವಿಧಿ ಬೇರೆಯದೇ ಆಟವಾಡಿದೆ. ನದಿಯಲ್ಲಿ ನೀರಿನ ಆಳ ಮತ್ತು ಹರಿವಿನ ಪ್ರಮಾಣ ಎಷ್ಟಿದೆ ಎಂಬ ಕನಿಷ್ಠ ಅಂದಾಜಿಲ್ಲದೆ ಕುಟುಂಬದ ಸದಸ್ಯರು ನದಿಯ ಆಳದ ಪ್ರದೇಶಕ್ಕೆ ಇಳಿದಿದ್ದಾರೆ ಎನ್ನಲಾಗಿದೆ. ನೀರಿನ ರಭಸ ಹಾಗೂ ಆಳವನ್ನು ಅರಿಯದೆ ಮುನ್ನಡೆದಾಗ ಈ ಭೀಕರ ದುರಂತ…

Read More

ಉತ್ತರಕನ್ನಡ : ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನಲ್ಲಿ ಭಾನುವಾರ ಅತ್ಯಂತ ದ್ರಾವಕ ಹಾಗೂ ಘೋರ ದುರಂತವೊಂದು ಸಂಭವಿಸಿದೆ. ಇಲ್ಲಿನ ತಟ್ಟೆಹಕ್ಕಲು ನದಿಯಲ್ಲಿ ಕಪ್ಪೆಚಿಪ್ಪು (ಶಂಖ/ಸಿಂಪಿ) ಸಂಗ್ರಹಿಸಲು ಹೋಗಿದ್ದ ಸ್ಥಳೀಯ ಗ್ರಾಮಸ್ಥರ ಪೈಕಿ ಮೂವರು ನೀರಿನಲ್ಲಿ ಮುಳುಗಿ ಜಲಸಮಾಧಿಯಾಗಿದ್ದಾರೆ. ಇನ್ನುಳಿದಂತೆ ನದಿಯ ಸೆಳತಕ್ಕೆ ಸಿಲುಕಿ ತೀವ್ರ ಅಸ್ವಸ್ಥಗೊಂಡಿರುವ ಒಂಬತ್ತು ಜನರ ಪರಿಸ್ಥಿತಿ ಗಂಭೀರವಾಗಿದ್ದು, ಅವರನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಲಭ್ಯವಾಗಿರುವ ಮಾಹಿತಿ ಪ್ರಕಾರ, ರವಿವಾರದ ರಜೆಯ ದಿನದ ಹಿನ್ನೆಲೆಯಲ್ಲಿ ಶಿರಾಲಿ ಮೂಲದ ಸುಮಾರು 14 ಜನರ ತಂಡವೊಂದು ಕಪ್ಪೆಚಿಪ್ಪುಗಳನ್ನು ಆಯ್ದುಕೊಳ್ಳಲು ತಟ್ಟೆಹಕ್ಕಲು ನದಿಯ ತೀರಕ್ಕೆ ತೆರಳಿತ್ತು. ಸ್ಥಳೀಯವಾಗಿ ಆಹಾರ ಹಾಗೂ ವಾಣಿಜ್ಯ ಬಳಕೆಗೆ ಕಪ್ಪೆಚಿಪ್ಪುಗಳನ್ನು ಸಂಗ್ರಹಿಸುವುದು ವಾಡಿಕೆಯಾಗಿದ್ದು, ಅದರಂತೆ ಇವರು ಕೂಡ ನದಿಗೆ ಇಳಿದಿದ್ದರು ಎನ್ನಲಾಗಿದೆ. ಆದರೆ, ನದಿಯ ಆಳ ಮತ್ತು ನೀರಿನ ರಭಸ ಹಾಗೂ ಪ್ರಮಾಣದ ಬಗ್ಗೆ ಸರಿಯಾದ ಮುನ್ಸೂಚನೆ ಇಲ್ಲದೆ ಈ ತಂಡದ ಸದಸ್ಯರು ನದಿಯ ಮಧ್ಯಭಾಗದತ್ತ ಮುನ್ನಡೆದಿದ್ದಾರೆ. ಇದ್ದಕ್ಕಿದ್ದಂತೆ ನೀರಿನ ಸೆಳವು ಹೆಚ್ಚಾದ ಪರಿಣಾಮ,…

Read More

ಚಾಮರಾಜನಗರ : ಇಂದು ಬೆಳಿಗ್ಗೆ ತಾನೇ ಚಾಮರಾಜನಗರ ಜಿಲ್ಲೆಯ ಮಲೆ ಮಹದೇಶ್ವರ ಬೆಟ್ಟದಲ್ಲಿ ಚಿರತೆ ಒಂದನ್ನು ಅರಣ್ಯ ಅಧಿಕಾರಿಗಳು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದರು. ಇದೀಗ ಮಲೆ ಮಹದೇಶ್ವರ ಬೆಟ್ಟದ ನಾಗಮಲೆಯಲ್ಲಿ ಮತ್ತೆ ಚಿರತೆ ಪ್ರತ್ಯಕ್ಷವಾಗಿದೆ. ಹಾಡಿ ಜನತೆ ಮತ್ತು ಮಾದಪ್ಪ ಭಕ್ತರಲ್ಲಿ ಮತ್ತೆ ಚಿರತೆ ದಾಳಿಯ ಆತಂಕ ಶುರುವಾಗಿದೆ. ಒಂದು ಹೆಣ್ಣು ಚಿರತೆ ಇಂದು ಬೋನಿಗೆ ಬಿದ್ದಿತ್ತು. ಇದೀಗ ಮತ್ತೊಂದು ಚಿರತೆ ಪ್ರತ್ಯಕ್ಷವಾಗಿದೆ. ಬೆಳಿಗ್ಗೆ ಮೇಕೆಗೆ ಸೊಪ್ಪು ತರಲು ಹೋಗಿದ್ದ ನಾಗಮಲೆ ಹಾಡಿ ನಿವಾಸಿ. ಹಾಡಿ ನಿವಾಸಿ ಬೆನ್ನಟ್ಟಿ ಚಿರತೆ ಬಂದಿತ್ತು. ಆ ವ್ಯಕ್ತಿ ಜೋರಾಗಿ ಕೂಗಿದ್ದಾರೆ. ವ್ಯಕ್ತಿಯ ಕೂಗಾಟದಿಂದ ಚಿರತೆ ಕಾಡಿನಲ್ಲಿ ಮರೆಯಾಗಿದೆ. ಚಿರತೆ ದಾಳಿಯಿಂದ ವ್ಯಕ್ತಿ ಇದೀಗ ಬಚಾವ್ ಆಗಿದ್ದಾರೆ.

Read More

ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ‘ಅನ್ನಭಾಗ್ಯ’ ಯೋಜನೆಗೆ ಮೇ ತಿಂಗಳಿನಲ್ಲಿ ದಿಢೀರ್ ಬ್ರೇಕ್ ಬಿದ್ದಿದೆ. ಈ ತಿಂಗಳು ರಾಜ್ಯ ಸರ್ಕಾರ ನೀಡಬೇಕಾಗಿದ್ದ ತನ್ನ ಪಾಲಿನ ಉಚಿತ ಅಕ್ಕಿಯನ್ನು ವಿತರಿಸಿಲ್ಲ ಎನ್ನಲಾಗುತ್ತಿದ್ದು, ಇದು ಪಡಿತರ ಚೀಟಿದಾರರಲ್ಲಿ ತೀವ್ರ ನಿರಾಶೆ ಮೂಡಿಸಿದೆ. ಪ್ರಸ್ತುತ ಪಡಿತರ ಕೇಂದ್ರಗಳಲ್ಲಿ ಕೇವಲ ಕೇಂದ್ರ ಸರ್ಕಾರದ ಪಾಲಿನ ಪಡಿತರವನ್ನು ಮಾತ್ರ ಸಾರ್ವಜನಿಕರಿಗೆ ವಿತರಣೆ ಮಾಡಲಾಗುತ್ತಿದೆ. ರಾಜ್ಯ ಸರ್ಕಾರದ ಅನ್ನಭಾಗ್ಯ ಯೋಜನೆಯಡಿ ಪ್ರತಿ ಫಲಾನುಭವಿಗೆ ತಲಾ 5 ಕೆಜಿ ಹೆಚ್ಚುವರಿ ಅಕ್ಕಿಯನ್ನು ನೀಡಬೇಕಾಗಿತ್ತು. ಆದರೆ, ಮೇ ತಿಂಗಳಿನಲ್ಲಿ ಈ ಹೆಚ್ಚುವರಿ ಅಕ್ಕಿ ವಿತರಣೆಯಾಗದೆ ಇರುವುದು ಸಾರ್ವಜನಿಕರ ವಲಯದಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ. ಸದ್ಯಕ್ಕೆ ಲಭ್ಯವಿರುವ ಮಾಹಿತಿ ಪ್ರಕಾರ, ನ್ಯಾಯಬೆಲೆ ಅಂಗಡಿಗಳಲ್ಲಿ ಕೇವಲ ಕೇಂದ್ರ ಸರ್ಕಾರದ ಅನ್ನ ಸುರಕ್ಷಾ ಕಾಯ್ದೆಯಡಿಯ ಕೋಟಾವನ್ನು ಮಾತ್ರ ಗ್ರಾಹಕರಿಗೆ ತಲುಪಿಸಲಾಗುತ್ತಿದೆ. ರಾಮನಗರ ಜಿಲ್ಲೆಯ ನ್ಯಾಯಬೆಲೆ ಅಂಗಡಿಗಳಲ್ಲಿ ಈಗಾಗಲೇ ಪಡಿತರ ಹಂಚಿಕೆ ಪ್ರಕ್ರಿಯೆ ಆರಂಭವಾಗಿದ್ದು, ಅಲ್ಲಿ ಮೇ ಹಾಗೂ ಜೂನ್ ತಿಂಗಳ ಪಡಿತರವನ್ನು ಒಟ್ಟಿಗೆ…

Read More

ಚಿಕ್ಕಬಳ್ಳಾಪುರ : ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಇಡೀ ಸಮಾಜವೇ ತಲೆತಗ್ಗಿಸುವಂತಹ ಮತ್ತೊಂದು ಪೈಶಾಚಿಕ ಕೃತ್ಯ ಬೆಳಕಿಗೆ ಬಂದಿದೆ. ಕೇವಲ 8 ವರ್ಷದ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿರುವ ಅಮಾನುಷ ಘಟನೆ ನಡೆದಿದ್ದು, ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಸದ್ಯ ಸಂತ್ರಸ್ತ ಬಾಲಕಿಯನ್ನು ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಪುಸಲಾಯಿಸಿ ಕರೆದೊಯ್ದ ಪಾಪಿ ಆರೋಪಿಯು ಬಾಲಕಿಗೆ ಆಮಿಷ ಒಡ್ಡಿ, ಪುಸಲಾಯಿಸಿ ತನ್ನ ಬೈಕ್‌ನಲ್ಲಿ ಕೂರಿಸಿಕೊಂಡು ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿದ್ದಾನೆ. ಅಲ್ಲಿ ಬಾಲಕಿಯ ಮೇಲೆ ದೌರ್ಜನ್ಯ ಎಸಗಲು ಯತ್ನಿಸಿದ್ದಾನೆ. ಬಾಲಕಿಯ ದೇಹದ ಮೇಲೆ ತೀವ್ರ ಸ್ವರೂಪದ ಗಾಯಗಳಾಗಿದ್ದು, ಆಕೆಯ ಕಿರುಚಾಟ ಅಥವಾ ಪ್ರತಿರೋಧವನ್ನು ಹತ್ತಿಕ್ಕಲು ಮತ್ತು ಬರುವ ಇಂಜೆಕ್ಷನ್ ನೀಡಲಾಗಿರಬಹುದು ಎಂಬ ಬಲವಾದ ಶಂಕೆ ವ್ಯಕ್ತವಾಗಿದೆ. ಎಫ್‌ಎಸ್‌ಎಲ್‌ಗೆ ರಕ್ತದ ಮಾದರಿ ರವಾನೆ ಪ್ರಜ್ಞಾವಸ್ಥೆಗೆ ಬಂದ ಬಾಲಕಿ ನೀಡಿದ ಪ್ರಾಥಮಿಕ ಹೇಳಿಕೆಯನ್ನು ಆಧರಿಸಿ ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದಾರೆ. ಬಾಲಕಿಗೆ ಮತ್ತು ಬರುವ ಇಂಜೆಕ್ಷನ್ ನೀಡಲಾಗಿದೆಯೇ ಎಂಬ ಸಂಶಯವನ್ನು ಖಚಿತಪಡಿಸಿಕೊಳ್ಳಲು ವೈದ್ಯರ ಸಲಹೆಯ…

Read More