ಬೆಂಗಳೂರು : ಬೈಕ್ ನಲ್ಲಿ ತೆರಳುವಾಗ ಯುವತಿ ಜೊತೆಗೆ ಅಸಭ್ಯವಾಗಿ ವರ್ತಿಸಿದ್ದ ಘಟನೆ ಇತ್ತೀಚಿಗೆ ಹುಬ್ಬಳ್ಳಿಯಲ್ಲಿ ನಡೆದಿತ್ತು. ಇದೀಗ ಬೆಂಗಳೂರಿನ ಯಲಹಂಕದಲ್ಲಿ ನಡೆದುಕೊಂಡು ಹೋಗ್ತಿದ್ದ ಯುವತಿಗೆ ಬ್ಯಾಡ್ ಟಚ್ ಮಾಡಿದ್ದ ಘಟನೆ ವರದಿಯಾಗಿದೆ. ಯಲಹಂಕದ ಕೋಗಿಲು ಮುಖ್ಯರಸ್ತೆಯಲ್ಲಿ ಈ ಒಂದು ಘಟನೆ ನಡೆದಿದೆ.
ಹೌದು ಯಲಹಂಕದಲ್ಲಿ ಯುವತಿರಿಬ್ಬರೂ ರಸ್ತೆಯ ಮೇಲೆ ನಡೆದುಕೊಂಡು ಹೋಗ್ತಿದ್ದರು. ಈ ವೇಳೆ ಬೈಕ್ ಮೇಲೆ ಬಂದ ಪುಂಡರು ಯುವತಿಯರಿಗೆ ಅಸಹ್ಯವಾಗಿ ವರ್ತನೆ ಮಾಡಿದ್ದು ಹರೀಶ್ ಮತ್ತು ಪ್ರಜ್ವಲ್ ಎಂಬ ಕುಂಡವರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ ಬೆಂಗಳೂರಿನ ಯಲಹಂಕ ಪೋಲಿಸರಿಂದ ಇದೀಗ ಆರೋಪಿಗಳನ್ನು ಬಂಧಿಸಲಾಗಿದೆ. ಪುಂಡರು ಯುವತಿಯರನ್ನು ಅಸಭ್ಯವಾಗಿ ಟಚ್ ಮಾಡಿ ಎಸ್ಕೇಪ್ ಆಗಿರುವ ವಿಡಿಯೋ ಕೂಡ ಇದೀಗ ಬರಲಾಗಿದೆ.








