Subscribe to Updates
Get the latest creative news from FooBar about art, design and business.
Author: ಸುರೇಶ್
"ಕನ್ನಡ ನ್ಯೂಸ್ ನೌ ಜಾಲತಾಣದ ಮುಖ್ಯ ಸಂಪಾದಕರಾದ ಸುರೇಶ್ ಅವರು ಕಳೆದ 4 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದಾರೆ. ಸರ್ಕಾರದ ಯೋಜನೆಗಳು, ಶಿಕ್ಷಣ ಮತ್ತು ಪ್ರಚಲಿತ ವಿದ್ಯಮಾನಗಳನ್ನು ಸಾಮಾನ್ಯ ಜನರಿಗೂ ಅರ್ಥವಾಗುವಂತೆ ವಿವರಿಸುವುದು ಇವರ ವಿಶೇಷತೆ. ಈ ಮೊದಲು ವಿವಿಧ ವೆಬ್‌ಸೈಟ್‌ಗಳಲ್ಲಿ ನಾಗರಿಕ ಸಮಸ್ಯೆಗಳ ಬಗ್ಗೆ ವರದಿಗಾರರಾಗಿ ಕೆಲಸ ಮಾಡಿರುವ ಇವರು, ಸಮಯೋಚಿತ ಹಾಗೂ ವಿಶ್ವಾಸಾರ್ಹ ಮಾಹಿತಿ ನೀಡುವ ಮೂಲಕ ಓದುಗರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಡಿಜಿಟಲ್ ಸಾಕ್ಷರತೆ ಇವರ ನೆಚ್ಚಿನ ವಿಷಯಗಳಲ್ಲೊಂದು
ನವದೆಹಲಿ : ಸುಪ್ರೀಂ ಕೋರ್ಟ್ ನಲ್ಲಿ ಜಯನಗರ ಶಾಸಕ ರಾಮಮೂರ್ತಿಗೆ ಭಾರಿ ಹಿನ್ನಡೆಯಾಗಿದೆ ಚುನಾವಣಾ ವಿವಾದ ಸಂಬಂಧ ಸಲ್ಲಿಸಿದ ರಾಮಮೂರ್ತಿ ಅರ್ಜಿಯನ್ನು ಇದೀಗ ಸುಪ್ರೀಂ ಕೋರ್ಟ್ ವಜಾ ಗೊಳಿಸಿದೆ. ಪ್ರಕರಣದ ಟ್ರಯಲ್ ತಡೆ ಕೋರಿ ಶಾಸಕ ರಾಮಮೂರ್ತಿ ಅರ್ಜಿ ಸಲ್ಲಿಸಿದ್ದರು. ಇದೀಗ ಸುಪ್ರೀಂ ಕೋರ್ಟ್ ರಾಮಮೂರ್ತಿ ಅವರ ಅರ್ಜಿಯನ್ನು ವಜಾಗೊಳಿಸಿದೆ. ಸುಪ್ರೀಂಕೋರ್ಟ್ ನ್ಯಾಯಮೂರ್ತಿ ವಿಕ್ರಮನಾಥ್ ಅವರಿದ್ದಾ ಪೀಠ ಅರ್ಜಿ ವಜಾಗೊಳಿಸಿ ಆದೇಶ ಹೊರಡಿಸಿದೆ.
ಧಾರವಾಡ : ಧಾರವಾಡದಲ್ಲಿ ಹುಚ್ಚುನಾಯಿ ಭೀಕರವಾಗಿ ದಾಳಿ ಮಾಡಿದ್ದು, ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ 9 ಜನರ ಮೇಲೆ ಹುಚ್ಚು ನಾಯಿ ದಾಳಿ ಮಾಡಿದೆ ಶಿರಡಿ ನಗರ ಬಡಾವಣೆಯಲ್ಲಿ ಈ ಒಂದು ಘಟನೆ ಸಂಭವಿಸಿದೆ. ಬಡಾವಣೆಯ ವಿವಿಧ ಕೆಲಸಕ್ಕೆ ಬರೋವರ ಮೇಲೆ ಹುಚ್ಚು ನಾಯಿ ದಾಳಿ ಮಾಡಿದೆ ಕ್ಯಾರಕೊಪ್ಪ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಬರುವ ಈ ಒಂದು ಬಡಾವಣೆಯಲ್ಲಿ ಬೀದಿ ನಾಯಿ ದಾಳಿಗೆ ಜನರು ಹೊರಗಡೆ ಬರುವುದಕ್ಕೂ ಹೆದರುತ್ತಿದ್ದಾರೆ. ಹುಚ್ಚುನಾಯಿ ದಾಳಿಗೆ ಮಹಿಳೆಯರ ಕೈ ಕಾಲಿಗೆ ಕಚ್ಚಿದ್ದು, ಅಲ್ಲದೆ ಮಕ್ಕಳ ಮೇಲು ದಾಳಿ ಮಾಡಿದೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸ್ಥಳೀಯರು ಹುಚ್ಚುನಾಯಿಯನ್ನು ಹೊಡೆದು ಕೊಂದಿದ್ದಾರೆ.
ಬೆಳಗಾವಿ : ಪತ್ನಿ ಹೆರಿಗೆಗೆ ತೆರಳಿದಾಗ ಹಳೆ ಪ್ರಿಯತಮೆಯ ಜೊತೆ ಪ್ರಿಯಕರ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಮಲ್ಲಾಪುರ ಎಂಬಲ್ಲಿ ನಡೆದಿದೆ. ಹಳೆ ಪ್ರಿಯತಮೆ ಜೊತೆಗೆ ಮಲಪ್ರಭಾ ನದಿಗೆ ಹಾರಿ ಜಗದೀಶ್ ಕವಳೇಕರ್ ಆತ್ಮಹತ್ಯೆಗೆ ಶರಣಾಗಿದ್ದಾರೆ. ಮಲ್ಲಾಪುರ ಗ್ರಾಮದ ಜಗದೀಶ್ ಕವಳೇಕರ್ (27) ಹಾಗು ಗಂಗಮ್ಮ (26) ಆತ್ಮಹತ್ಯೆಗೆ ಶರಣಾಗಿದ್ದಾರೆ. ಮೊದಲಿಂದಲೂ ಗಂಗಮ್ಮ ಮತ್ತು ಜಗದೀಶ್ ಪರಸ್ಪರ ಪ್ರೀತಿಸುತ್ತಿದ್ದರು. ಪತ್ನಿ ಹೆರಿಗೆಗೆ ತವರಿಗೆ ತೆರಳಿದ ನಂತರ ಪ್ರಿಯತಮೆಯ ಜೊತೆಯ ಜಗದೀಶ್ ವಾಸಿಸುತ್ತಿದ್ದ. ಎರಡು ತಿಂಗಳಿಂದ ಗಂಗಮಗಳನ್ನು ಜಗದೀಶ್ ಮನೆಗೆ ತಂದು ಇರಿಸಿಕೊಂಡಿದ್ದ.ಜಗದೀಶನನ್ನು ಪ್ರೀತಿಸುತಿದ್ದ ಗಂಗಮ್ಮ ಇನ್ನೂ ಮದುವೆಯಾಗಿರಲಿಲ್ಲ. ನಿನ್ನೆ ಸಂಜೆ ಬೈಕ್ ನಲ್ಲಿ ಗಂಗಮ್ಮ ಜಗದೀಶ್ ಜೊತೆ ತೆರಳಿದ್ದಾಳೆ, ನದಿಯ ದಡದಲ್ಲಿ ಮೊಬೈಲ್ ಬೈಕ್ ಬಿಟ್ಟು ನದಿಗೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಪರಸ್ಪರ ಅಪ್ಪಿಕೊಂಡು ವೇಲ್ ನಿಂದ ಪ್ರೇಮಿಗಳು ಕಟ್ಟಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ, ಬೆಳಿಗ್ಗೆ ನದಿ ದಡದಲ್ಲಿ ಶವಗಳನ್ನು ಕೊಂಡು ಪೊಲೀಸರಿಗೆ ಗ್ರಾಮಸ್ಥರು ಮಾಹಿತಿ ನೀಡಿದ್ದು, ಸ್ಥಳಕ್ಕೆ…
ಬೀದರ್ : ಬೀದರ್ ನಲ್ಲಿ ಭೀಕರವಾದ ಅಪಘಾತ ಸಂಭವಿಸಿದ್ದು ಜಾತ್ರೆಗೆ ತೆರಳುವಾಗಲೇ ನಿಂತಿದ್ದ ಲಾರಿಗೆ ಕಾರು ಡಿಕ್ಕಿಯಾಗಿ ಉದ್ಯಮಿಯೊಬ್ಬರು ದುರಂತ ಸಾವು ಕಂಡಿದ್ದಾರೆ. ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ರಾಜೇಶ್ವರ ಗ್ರಾಮದ ಬಳಿ ಎನ್‌ಹೆಚ್-65ರಲ್ಲಿ ನಡೆದಿದೆ.ನಿಂತಿದ್ದ ಲಾರಿಗೆ ಹಿಂಬದಿಯಿಂದ ಕಾರು ಡಿಕ್ಕಿ ಹೊಡದ ಪರಿಣಾಮ 30 ವರ್ಷದ ಬಸವಕಲ್ಯಾಣ ಪಟ್ಟಣದ ನಿವಾಸಿ ವಿಶ್ವಜೀತ್ ಸಾವನ್ನಪ್ಪಿದ್ದಾರೆ. ಎರ್ಟಿಗಾ ಕಾರ್‌ನಲ್ಲಿ ತೆರಳುತ್ತಿದ್ದಾಗ ಡೆಡ್ಲಿ ಆಕ್ಸಿಡೆಂಟ್ ಆಗಿ ವಿಶ್ವಜೀತ್ ಸಾವನ್ನಪ್ಪಿದ್ದಾರೆ. ಇಂದು ನಸುಕಿನ ಜಾವ ವೀರಭದ್ರೇಶ್ವರ ಜಾತ್ರೆಗೆಂದು ಬಸವಕಲ್ಯಾಣ ಕಡೆಯಿಂದ ಹುಮನಾಬಾದ್‌ಗೆ ತೆರಳುತ್ತಿದ್ದಾಗ ಭೀಕರ ಅಪಘಾತವಾಗಿ ಉದ್ಯಮಿ ಸಾವನ್ನಪ್ಪಿದ್ದಾರೆ.ಬಸವಕಲ್ಯಾಣ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆ ಸಂಬಂಧ ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.
ಬೆಂಗಳೂರು : ಬೆಂಗಳೂರಲ್ಲಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಸುಮಾರು 4 ಕೋಟಿ ಮೌಲ್ಯದ ಮಾದಕ ವಸ್ತುಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಕೇರಳ ಮೂಲದ 7 ಆರೋಪಿಗಳು ಸೇರಿದಂತೆ ಒಟ್ಟು 10 ಆರೋಪಿಗಳನ್ನು ಅರೆಸ್ಟ್ ಮಾಡಲಾಗಿದೆ ಎಂದು ಬೆಂಗಳೂರು ಕಮಿಷನರ್ ಸೀಮಂತ್ ಕುಮಾರ್ ಸಿಂಗ್ ಮಾಹಿತಿ ನೀಡಿದ್ದಾರೆ. 3 ಕೆಜಿ ಹೈಡ್ರೋಗಾಂಜಾ, 50 ಗ್ರಾಂ MDMA, 500 ಚರಸ್, 500 LSD ಮಾತ್ರೆ, 10 ಕೆಜಿ ಗಾಂಜಾ, ಎರಡು ಕಾರು ಹಾಗೂ 14 ಮೊಬೈಲ್ ಗಳನ್ನು ವಶಕ್ಕೆ ಪಡೆಯಲಾಗಿದೆ. ಕೇರಳ ಮೂಲದ 7 ಜನ ಸೇರಿ 10 ಆರೋಪಿಗಳನ್ನು ಬೆಂಗಳೂರಿನ ಅಮೃತಹಳ್ಳಿ ಠಾಣಾ ವ್ಯಾಪ್ತಿಯ ಪೊಲೀಸರು ಅರೆಸ್ಟ್ ಮಾಡಿದ್ದಾರೆ ಎಂದು ಬೆಂಗಳೂರು ಕಮಿಷನರ್ ಸೀಮಂತ್ ಕುಮಾರ್ ಸಿಂಗ್ ಮಾಹಿತಿ ನೀಡಿದ್ದಾರೆ.
ಬೆಂಗಳೂರು : ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಸಾಲು ಸಾಲು ದರೋಡೆ ಪ್ರಕರಣಗಳು ಬೆಳಕಿಗೆ ಬಂದಿವೆ. ಬೆಂಗಳೂರಿನ ನೆಲಮಂಗಲದಲ್ಲಿ ಮತ್ತೊಂದು ದರೋಡೆ ಪ್ರಕರಣ ನಡೆದಿದ್ದು, ದಾಸನಪುರದ ರಾಮದೇವ್ ಜ್ಯುವೆಲ್ಲರಿಗೆ ನುಗ್ಗಿ ದರೋಡೆಕೋರರು ಗನ್ ತೋರಿಸಿ ದರೋಡೆ ಮಾಡಿದ್ದಾರೆ. ಖದೀಮರು ಸಂಚು ಮಾಡಿ ದರೋಡೆ ಮಾಡಿರುವ ಶಂಕೆ ವ್ಯಕ್ತವಾಗಿದ್ದು, ನಿನ್ನೆ ಸಂಜೆ ವೇಳೆ ಚಿನ್ನಾಭರಣ ಅಂಗಡಿಗೆ ನುಗ್ಗಿ ದರೋಡೆ ಮಾಡಿದ್ದಾರೆ. ಗನ್ ತೋರಿಸಿ ಚಿನ್ನದ ಬಿಸ್ಕೆಟ್ ಗಳನ್ನು ಖದಿಮರು ದೋಚಿದ್ದಾರೆ. ಬೈಕ್ ನಲ್ಲಿ ಬಂದಿದ್ದ ಇಬ್ಬರು ದರೋಡೆಕೋರರಿಂದ ಈ ಒಂದು ಕೃತ್ಯ ನಡೆದಿದ್ದು, ದರೋಡೆ ಮಾಡುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಕಳ್ಳರು ಕೈಗೆ ಸಿಕ್ಕಿದಷ್ಟು ಚಿನ್ನಾಭರಣ ಮತ್ತು ನಗದು ಹಣವನ್ನು ದೋಚಿ ಇಬ್ಬರು ಪರಾಗಿದ್ದಾರೆ. ಈ ವೇಳೆ ದರೋಡೆಕೋರನಿಗೆ ಬಾಲಕರು ಅಲ್ಲಿಯೇ ಪಂಚ್ ಮಾಡಿದ್ದಾರೆ. ಅಂಗಡಿಯಲ್ಲಿ ಇದ್ದವರು ತಿರುಗಿ ಬೀಳುತ್ತಿದ್ದಂತೆ ಇಬ್ಬರು ದರೋಡೆಕರರು ಹೆದರಿದ್ದಾರೆ. ಆಗ ಓಡಿ ಹೋಗುವಾಗ ಕೆಳಗೆ ಬಿದ್ದು ಓರ್ವ ಕಳ್ಳನ ಮೊಬೈಲ್ ಫೋನ್ ಬಿದ್ದಿದ್ದು, ಉತ್ತರಪ್ರದೇಶದ ಮೂಲದ ದರೋಡೆಕೋರರಿಂದ…
ಮಂಡ್ಯ : ಮಂಡ್ಯ ಜಿಲ್ಲಾ ಪ್ರವೇಶಿಸದಂತೆ ಪ್ರಮೋದ್ ಮುತಾಲಿಕ್ ಗೆ ನಿರ್ಬಂಧ ವಿಧಿಸಿ ಮಂಡ್ಯ ಡಿಸಿ ಡಾ.ಕುಮಾರ ಆದೇಶ ಹೊರಡಿಸಿದ್ದಾರೆ. ಇಂದು ಕೆರಗೋಡು ಪ್ರವಾಸ ಹಮ್ಮಿಕೊಂಡಿದ್ದ ಮುತಾಲಿಕ್, ಹನುಮಧ್ವಜ ವಿವಾದಿತ ಮಂಡ್ಯದ ಕೆರಗೋಡು ಗ್ರಾಮ. ಹನುಮಧ್ವಜ ಇಳಿಸಿ ಎರಡು ವರ್ಷ ಹಿನ್ನೆಲೆ, ಇಂದು 2ನೇ ವರ್ಷದ ಕರಾಳ ದಿನ ಹಾಗೂ ಪಂಜಿನ ಮೆರವಣಿಗೆ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ ಆಗಮಿಸಲು ನಿರ್ಧರಿಸಿ, ಹಿಂದೂ ಕಾರ್ಯಕರ್ತರಿಗೆ ಮುತಾಲಿಕ್ ಆಹ್ವಾನ ನೀಡಿದ್ದರು. ಮುತಾಲಿಕ್, ಆಗಮನ, ಭಾಷಣದಿಂದ ಪ್ರಚೋದನೆ ಹೇಳಿಕೆ, ಶಾಂತಿ ಸುವ್ಯವಸ್ಥೆ, ಕೋಮು ಸೌಹಾರ್ದತೆ ಕದಡುವ ಸಾಧ್ಯತೆ ಇದೆ. ಈ ಹಿನ್ನೆಲೆ, ಮುತಾಲಿಕ್ ಗೆ ಮಂಡ್ಯ ಜಿಲ್ಲೆ ಪ್ರವೇಶಿಸದಂತೆ ನಿರ್ಬಂಧ ವಿಧಿಸಲಾಗಿದೆ. ಈಗಾಗಲೇ ರಾಜ್ಯಾದ್ಯಂತ ಮುತಾಲಿಕ್ ವಿರುದ್ಧ 39ಕ್ಕೂ ಹೆಚ್ಚು ಪ್ರಕರಣ ದಾಖಲಾಗಿರುವ ಹಿನ್ನೆಲೆ, ನಿರ್ಬಂಧಿಸುವಂತೆ ಮಂಡ್ಯ ಎಸ್ಪಿ ಶೋಭಾರಾಣಿ ಡಿಸಿಗೆ ಪತ್ರ ಬರೆದಿದ್ದರು. ಎಸ್ಪಿ ಪತ್ರದ ಹಿನ್ನೆಲೆ ಜಿಲ್ಲೆಗೆ ಪ್ರವೇಶ ನಿರ್ಬಂಧಿಸಿ ಡಿಸಿ ಆದೇಶಿಸಿದ್ದಾರೆ. BNSS 2023 ಸೆಕ್ಷನ್ 163 ಅಡಿ ಮಂಡ್ಯ ಜಿಲ್ಲೆಗೆ…
ಉಡುಪಿ : ಉಡುಪಿಯಲ್ಲಿ ಟೂರಿಸ್ಟ್ ಬೋಟ್ ಪಲ್ಟಿಯಾಗಿ ಇದುವರೆಗೂ ಮೂವರು ಸಾವನ್ನಪ್ಪಿದ್ದು ಅದರಲ್ಲಿ ಮೈಸೂರು ಮೂಲದ ಯೂಟ್ಯೂಬರ್ ಆದಂತಹ ನಿಶಾ ಮತ್ತು ಮಧುಗೌಡ ಸ್ನೇಹಿತೆ ದಿಶಾ ಕೂಡ ಇದೀಗ ಸಾವನ್ನಪ್ಪಿದ್ದಾರೆ. ಮೈಸೂರಿನ ಉದಯಗಿರಿಯ ಜಲಾಪುರಿ ನಿವಾಸಿ ದಿಶಾ (23) ಮೃತ ದುರ್ದೈವಿ. ಘಟನೆಯಲ್ಲಿ ಸಿಂಧು, ಶಂಕರಪ್ಪ, ದಿಶಾ ಕೊನೆಯುಸಿರೆಳೆದಿದ್ದಾರೆ. ಧರ್ಮ ರಾಜ್ ಎಂಬ ಯುವಕನಿಗೆ ಚಿಕಿತ್ಸೆ ಮುಂದುವರಿದಿದೆ. ಡೆಲ್ಟಾ ಬೀಚ್‌ನಿಂದ ಟೂರಿಸ್ಟ್ ಬೋಟ್‌ನಲ್ಲಿ 28 ಮಂದಿ ಪ್ರವಾಸಿಗರು ತೆರಳಿದ್ದರು. ಮೈಸೂರಿನ ಬಿಪಿಓ ಒಂದರಲ್ಲಿ 28 ಮಂದಿ ಸಹೋದ್ಯೋಗಿಗಳು ಕೆಲಸ ಮಾಡುತ್ತಿದ್ದರು. ಎರಡು ಪ್ರತ್ಯೇಕ ಬೋಟ್ ಗಳಲ್ಲಿ ತಲಾ 14 ಮಂದಿ ಯುವಕ-ಯುವತಿಯರು ತೆರಳಿದ್ದರು. ಒಂದು ಬೋಟ್ ಮಗುಚಿ ಸಮುದ್ರ ಪಾಲಾಗಿತ್ತು.
ನವದೆಹಲಿ : ಭಾರತದಲ್ಲಿ ಹಲವು ಪ್ರಮುಖ ರಾಜಕಾರಣಿಗಳು ಮತ್ತು ಗಣ್ಯರು ವಿಮಾನ ಅಥವಾ ಹೆಲಿಕಾಪ್ಟರ್ ಅಪಘಾತಗಳಲ್ಲಿ ದುರಂತ ಅಂತ್ಯ ಕಂಡಿದ್ದಾರೆ. ಸಂಜಯ್ ಗಾಂಧಿ, ವೈ.ಎಸ್. ರಾಜಶೇಖರ ರೆಡ್ಡಿ, ಮಾಧವರಾವ್ ಸಿಂಧಿಯಾ, ಜಿಎಂಸಿ ಬಾಲಯೋಗಿ, ದೋರ್ಜಿ ಖಂಡು ಮತ್ತು ಜನರಲ್ ಬಿಪಿನ್ ರಾವತ್ ಅವರಂತಹ ಪ್ರಮುಖ ನಾಯಕರು ವಾಯು ದುರಂತಗಳಲ್ಲಿ ಸಾವನ್ನಪ್ಪಿದವರಲ್ಲಿ ಸೇರಿದ್ದಾರೆ. ಇಂದು ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರು ಕೂಡ ವಿಮಾನ ಸಾವನಪ್ಪಿದ್ದಾರೆ. ಹೌದು ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ವಿಮಾನ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಇದು ಸಂಜಯ್ ಗಾಂಧಿ ಮತ್ತು ವಿಜಯ್ ರೂಪಾನಿ ಅವರಂತಹ ನಾಯಕರ ದುರಂತ ಸಾವುಗಳನ್ನು ನೆನಪಿಸುವಂತಿದೆ. ವಿಮಾನ, ಹೆಲಿಕಾಪ್ಟರ್ ದುರಂತದಲ್ಲಿ ದುರ್ಮರಣಕ್ಕೀಡಾದ ಪ್ರಮುಖ ರಾಜಕೀಯ ನಾಯಕರು ಯಾರ‍್ಯಾರು ಎಂಬ ಬಗ್ಗೆ ವಿವರ ಇಲ್ಲಿದೆ. ಪ್ರಮುಖ ರಾಜಕಾರಣಿಗಳು: * ಹೋಮಿ ಭಾಭಾ (1966) ಭಾರತದ ಪ್ರವರ್ತಕ ಪರಮಾಣು ಭೌತಶಾಸ್ತ್ರಜ್ಞ ಹೋಮಿ ಜಹಾಂಗೀರ್ ಭಾಭಾ ಅವರು ಜನವರಿ 24, 1966 ರಂದು ಏರ್ ಇಂಡಿಯಾ ಫ್ಲೈಟ್ 101 ರಲ್ಲಿ…
ಬೆಂಗಳೂರು : ನೂತನ ನೀತಿಯಲ್ಲಿ ಜವಳಿ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಮಹಿಳಾ ಕಾರ್ಮಿಕರಿಗೆ ಹಾಗೂ ಕೈಮಗ್ಗ ನೇಕಾರರಿಗೆ 2ರಿಂದ 3 ಸಾವಿರ ಸಹಾಯಧನ ಸೇರಿದಂತೆ ಇನ್ನಿತರ ಅಂಶಗಳು ಒಳಗೊಂಡ ನೂತನ ಜವಳಿ ಹಾಗೂ ಸಿದ್ಧ ಉಡುಪು ನೀತಿಯನ್ನು ಪರಿಷ್ಕರಿಸಲಾಗಿದ್ದು, ಶೀಘ್ರದಲ್ಲಿ ಇದನ್ನು ಘೋಷಿಸಿ ಅನುಷ್ಠಾನಕ್ಕೆ ತರಲಾಗುವುದು ಎಂದು ಜವಳಿ ಸಚಿವ ಶಿವಾನಂದ ಎಸ್. ಪಾಟೀಲ್ ತಿಳಿಸಿದರು. ವಿಧಾನಪರಿಷತ್ನಲ್ಲಿ ಮಂಗಳವಾರ ಬಿಜೆಪಿ ಸದಸ್ಯ ಎಂ. ನಾಗರಾಜ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಈ ಹಿಂದಿನ ಮೂರು ಜವಳಿ ನೀತಿಗಳ ಸಾಧಕ-ಬಾಧಕಗಳ ಅಧ್ಯಯನ ಮಾಡಿ, ಎಲ್ಲರ ಸಲಹೆ ಸೂಚನೆಗಳನ್ನು ಪರಿಗಣಿಸಿ, 2025ರಿಂದ 2030ರ ವರೆಗೆ ಹೊಸ ಜವಳಿ ನೀತಿ ರೂಪಿಸಲಾಗಿದೆ. ಶೀಘ್ರದಲ್ಲಿ ಇದನ್ನು ಘೋಷಿಸಿ, ಕಾರ್ಯಾರೂಪಕ್ಕೆ ತರಲಾಗುವುದು ಎಂದರು. 2024-25ನೇ ಸಾಲಿನ ಬಜೆಟ್ನಲ್ಲಿ 2024ರಿಂದ 29ರ ಅವಧಿಯಲ್ಲಿ 10 ಸಾವಿರ ಕೋಟಿ ಬಂಡವಾಳ ಹೂಡಿ 2 ಲಕ್ಷ ಮಂದಿಗೆ ಉದ್ಯೋಗ ಸೃಷ್ಟಿಸುವುದಾಗಿ ತಿಳಿಸಲಾಗಿದೆ. ಇದಕ್ಕೆ ಪೂರಕವಾಗಿ ಹೊಸ ಜವಳಿ ನೀತಿಯನ್ನು ಅನುಷ್ಠಾನಕ್ಕೆ ತರಲಾಗುತ್ತಿದೆ.ನೇಕಾರ ಸನ್ಮಾನ…














