Author: kannadanewsnow05

ಬೆಂಗಳೂರು : ಮಂಡ್ಯ ಜಿಲ್ಲೆ ಮದ್ದೂರಿನಲ್ಲಿ ಗಣೇಶ ವಿಸರ್ಜನೆ ವೇಳೆ ಕಿಡಿಗೇಡಿಗಳು ಗಣೇಶ ಮೆರವಣಿಗೆಯ ಮೇಲೆ ಕಲ್ಲೆಸೆತ ನಡೆಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ, ಮದ್ದೂರಿನಲ್ಲಿ ಭಾರಿ ಪ್ರತಿಭಟನೆ ನಡೆಸಲಾಗಿತ್ತು. ಹಿಂದೂ ಕಾರ್ಯಕರ್ತರು ಬೃಹತ್ ಪ್ರಮಾಣದಲ್ಲಿ ಪ್ರತಿಭಟನೆ ನಡೆಸಿದ್ದರು. ಈ ವೇಳೆ ಪೊಲೀಸರು ಕಾರ್ಯಕರ್ತ ಮೇಲೆ ಲಾಠಿ ಚಾರ್ಜ್ ಸಹ ನಡೆಸಿದ್ದರು. ಪ್ರಕರಣ ಗಂಭೀರ ಪಡೆದುಕೊಳ್ಳುತ್ತಿದ್ದಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ, ವಿಪಕ್ಷ ನಾಯಕ ಆರ್ ಅಶೋಕ್ ಸೇರಿದಂತೆ ಎಲ್ಲಾ ಬಿಜೆಪಿ ನಾಯಕರು ಮಂಡ್ಯ ಜಿಲ್ಲೆಯ ಮದ್ದೂರಿಗೆ ಭೇಟಿ ನೀಡಿ ಬೃಹತ್ ಶೋಭಾ ಯಾತ್ರೆಯಲ್ಲಿ ಪಾಲ್ಗೊಂಡರು. ಇದೀಗ ಈ ಒಂದು ಘಟನೆಗೆ ಸಂಬಂಧಿಸಿದಂತೆ ಮದ್ದೂರಿನಲ್ಲಿ ನಡೆದಂತಹ ಗಣೇಶ ಮೆಸವಣಿಗೆ ವೇಳೆ ಕಲ್ಲೇಸೆತ ಹಾಗೂ ಲಾಠಿ ಚಾರ್ಜ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸತ್ಯಶೋಧನಾ ಸಮಿತಿ ಬಿ.ವೈ ವಿಜಯೇಂದ್ರ ಗೆ ವರದಿ ಸಲ್ಲಿಸಿದೆ. ಬೆಂಗಳೂರಿನ ಮಲ್ಲೇಶ್ವರಂ ನಲ್ಲಿರುವ ಬಿಜೆಪಿ ಕಚೇರಿಯಲ್ಲಿ ವರದಿ ಸಲ್ಲಿಸಲಾಯಿತು. ರಾಜ್ಯ ಬಿಜೆಪಿ ಮುಖ್ಯ ವಕ್ತಾರ ಅಶ್ವಥ್ ನಾರಾಯಣ ನೇತೃತ್ವದ ಈ ಒಂದು ಸತ್ಯಶೋಧನಾ ಸಮಿತಿಯಲ್ಲಿ…

Read More

ಬೆಂಗಳೂರು : ಸೆಪ್ಟೆಂಬರ್ 29ರಿಂದ ಕನ್ನಡದ ಅತಿ ದೊಡ್ಡ ರಿಯಾಲಿಟಿ ಶೋ ಆಗಿರುವ ಬಿಗ್ ಬಾಸ್ ಸೀಸನ್ 12 ಶುರುವಾಗಲಿದೆ ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಇವರೇ ಈ ಬಾರಿಯ ಬಿಗ್ ಬಾಸ್ ಸ್ಪರ್ಧಿಗಳು ಅಂತ ಹೆಸರು ಫೋಟೋ ವೈರಲ್ ಆಗಿವೆ. ಆದರೆ ಇದರ ಮಧ್ಯ ಕಿಡಿಗಿಡಿ ಒಬ್ಬ ಬಿಗ್ ಬಾಸ್ ಗೆ ನನ್ನನ್ನು ಕರೆಯಲಿಲ್ಲ ಅಂದರೆ ಬಾಂಬ್ ಇಡುತ್ತೇನೆ ಎಂದು ಹೇಳಿಕೆ ನೀಡಿರುವ ವಿಡಿಯೋ ಒಂದು ವೈರಲ್ ಆಗಿದೆ. ಹೌದು ಇನ್ಸ್ಟಾಗ್ರಾಮ್ ಅಲ್ಲಿ ಯುವಕನಿಂದ ಬೆದರಿಕೆ ವಿಡಿಯೋ ವೈರಲ್ ಆಗಿದ್ದು ಬಿಗ್ ಬಾಸ್ ಗೆ ನನ್ನ ಕರೆದಿಲ್ಲ ಆದರೆ ನಾನು ಬಾಂಬ್ ಇಡುತ್ತೇನೆ ಮಮ್ಮಿ ಅಶೋಕ್ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ಒಂದು ವಿಡಿಯೋ ಪೋಸ್ಟ್ ಮಾಡಿದ್ದು ವಿಡಿಯೋ ಬಗ್ಗೆ ಕುಂಬಳಗೋಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಪೊಲೀಸರು ಸ್ವಯಂ ಪ್ರೇರಿತವಾಗಿ NCR ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅಶೋಕ್ ಎಂಬ ಯುವಕನನ್ನು ಕರೆದು ಪೊಲೀಸರು ಎಚ್ಚರಿಕೆ ಕೊಟ್ಟು ಕಳುಹಿಸಿದ್ದಾರೆ. ಫಾಲೋವರ್ಸ್ ಹೆಚ್ಚಿಸಿಕೊಳ್ಳಲು ಈ ರೀತಿ…

Read More

ದಕ್ಷಿಣಕನ್ನಡ : ದಕ್ಷಿಣ ಕನ್ನಡದ ಪುತ್ತೂರಿನಲ್ಲಿ ಬಿಜೆಪಿ ಮುಖಂಡನ ಪುತ್ರ ಕೃಷ್ಣ ಜೆ. ರಾವ್ ಯುವತಿಗೆ ಮದುವೆಯಾಗುವ ಭರವಸೆ ನೀಡಿ ದೈಹಿಕ ಸಂಪರ್ಕ ಬೆಳೆಸಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ಸ್ಪೋಟಕ ರಹಸ್ಯವೊಂದು ಬಯಲಾಗಿದ್ದು, ಡಿಎನ್‌ಎ ಪರೀಕ್ಷೆಯಲ್ಲಿ ಆತನೇ ಮಗುವಿನ ತಂದೆ ಎಂದು ದೃಢಪಟ್ಟಿದೆ. ಹೌದು ಬಿಜೆಪಿ ಮುಖಂಡ ಜಗನ್ನಿವಾಸ್ ರಾವ್ ಪುತ್ರ ಕೃಷ್ಣ ಜೆ.ರಾವ್ ಯುವತಿಯೊಬ್ಬಳನ್ನು ಮದುವೆಯಾಗುವುದಾಗಿ ದೈಹಿಕ ಸಂಪರ್ಕ ಬೆಳೆಸಿ ವಂಚಿಸಿದ್ದ ಪ್ರಕರಣ ಈಗ ಮಹತ್ವದ ಘಟ್ಟ ತಲುಪಿದೆ. ಯುವತಿಗೆ ಜನಿಸಿದ್ದ ಮಗುವಿನ ತಂದೆ ಆರೋಪಿ ಕೃಷ್ಣ ಜೆ.ರಾವ್ ಎಂಬುದು ಡಿಎನ್​ಎ ಪರೀಕ್ಷೆಯಿಂದ ದೃಢಪಟ್ಟಿರುವುದಾಗಿ ಯುವತಿಯ ಕುಟುಂಬದವರು ಹಾಗೂ ವಿಶ್ವಕರ್ಮ ಮಹಾಸಭಾ ಅಧ್ಯಕ್ಷ ಕೆಪಿ ನಂಜುಂಡಿ ತಿಳಿಸಿದ್ದಾರೆ. ಆರೋಪಿ ಕೃಷ್ಣ ಜೆ ರಾವ್ ಹಾಗೂ ಸಂತ್ರಸ್ತೆ ಶಾಲಾ ದಿನಗಳಿಂದಲೂ ಪರಿಚಿತರು ಎನ್ನಲಾಗಿದೆ. ಮದುವೆಯಾಗುವ ಭರವಸೆ ನೀಡಿ ಆರೋಪಿಯು ಯುವತಿ ಜತೆ ದೈಹಿಕ ಸಂಪರ್ಕ ಬೆಳೆಸಿದ್ದ. ಪರಿಣಾಮವಾಗಿ ಆಕೆ ಗರ್ಭವತಿಯಾಗಿದ್ದಳು. ನಂತರ ಕುಟುಂಬದವರು ಮಾತುಕತೆ ನಡೆಸಿ ಮದುವೆ ಮಾಡುವ ಭರವಸೆ ನೀಡಿದ್ದರು.…

Read More

ಉಡುಪಿ : ರಾಜ್ಯದಲ್ಲಿ ಮತ್ತೊಂದು ಘೋರವಾದ ಘಟನೆ ನಡೆದಿದ್ದು, ಉಡುಪಿ ತಾಲೂಕಿನ ಕೊಡವೂರು ಬಳಿ ಹಾಡಹಗಲೇ ಮನೆಗೆ ನುಗ್ಗಿ, ಮಾರಕಾಸ್ತ್ರಗಳಿಂದ ಕೊಚ್ಚಿ ರೌಡಿಶೀಟರ್ ನನ್ನು ಬರ್ಬರವಾಗಿ ಕೊಲೆ ಮಾಡಿದ್ದಾರೆ. ಹೌದು ಹಾಡಹಗಲೇ ಮನೆಗೆ ನುಗ್ಗಿ ರೌಡಿ ಶೀಟರ್ ಸೌಫುದ್ದೀನ್ ನನ್ನ ಭೀಕರವಾಗಿ ಹತ್ಯೆ ಗೈಯ್ಯಲಾಗಿದೆ. ಕೊಲೆಯಾದ ಸೌಫುದ್ದೀನ್ ಖಾಸಗಿ ಬಸ್ ಮಾಲೀಕನಾಗಿದ್ದ ಮಣಿಪಾಲದ ನಿವಾಸಿಯಾಗಿ ಅವನನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಹತ್ಯೆಗೈದು ಪರಾರಿಯಾಗಿದ್ದಾರೆ.

Read More

ನವದೆಹಲಿ : ರಾಜ್ಯದ ಜನತೆಗೆ ಕೇಂದ್ರ ಸರ್ಕಾರ ಇದೀಗ ಮತ್ತೊಂದು ಸಿಹಿ ಸುದ್ದಿಯೊಂದನ್ನು ನೀಡಿದ್ದು, ಬೆಂಗಳೂರು ಮತ್ತು ಮುಂಬೈ ನಡುವೆ ಹೊಸ ಸೂಪರ್‌ಫಾಸ್ಟ್ ರೈಲಿಗೆ ಕೇಂದ್ರ ರೈಲ್ವೆ ಸಚಿವಾಲಯ ಅನುಮೋದನೆ ನೀಡಿದೆ. ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಕರ್ನಾಟಕದ ಜನರಿಗೆ ಗುಡ್​ ನ್ಯೂಸ್​​ ನೀಡಿದ್ದಾರೆ. ಅದೇನೆಂದರೆ ಬೆಂಗಳೂರು ಟು ಮುಂಬೈಗೆ ಸೂಪರ್‌ ಫಾಸ್ಟ್ ರೈಲು ಘೋಷಣೆ ಮಾಡಿದ್ದಾರೆ. ಈ ವಿಚಾರವಾಗಿ ಮಾತನಾಡಿರುವ ಸಚಿವ ಅಶ್ವಿನಿ ವೈಷ್ಣವ್​​, ಶೀಘ್ರದಲ್ಲೇ ನಾವು ಬೆಂಗಳೂರು ಟು ಮುಂಬೈ ನಡುವೆ ಸೂಪರ್‌ಫಾಸ್ಟ್ ರೈಲು ಪ್ರಾರಂಭಿಸುತ್ತೇವೆ. ಎರಡೂ ನಗರಗಳು ಪ್ರಮುಖ ಆರ್ಥಿಕ ಕೇಂದ್ರಗಳಾಗಿವೆ. ಹಾಗಾಗಿ ಇದು ಪ್ರಮುಖ ಯೋಜನೆ ಆಗಿದೆ ಎಂದು ಹೇಳಿದರು. ಇನ್ನು ಸಂಸದ ತೇಜಸ್ವಿ ಸೂರ್ಯ ಕೂಡ ಈ ವಿಚಾರವಾಗಿ ಮಾತನಾಡಿದ್ದು, ಬೆಂಗಳೂರು ಮತ್ತು ಮುಂಬೈ ನಡುವೆ ಹೊಸ ಸೂಪರ್‌ಫಾಸ್ಟ್ ರೈಲಿಗೆ ಕೇಂದ್ರ ರೈಲ್ವೆ ಸಚಿವಾಲಯ ಅನುಮೋದನೆ ನೀಡಿದೆ. ಆ ಮೂಲಕ ಎರಡೂ ನಗರಗಳ ಜನರ 30 ವರ್ಷಗಳ ಬೇಡಿಕೆ ಈಡೇರಿದೆ ಎಂದಿದ್ದಾರೆ.…

Read More

ಬೆಂಗಳೂರು : ಧರ್ಮಸ್ಥಳ ಬುರುಡೆ ಗ್ಯಾಂಗ್‌ ಷಡ್ಯಂತ್ರದ ಕುರಿತು ಡಿಸಿಎಂ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ ನೀಡಿದ್ದಾರೆ. ಬುರುಡೆಯನ್ನ ದೆಹಲಿಗೆ ಎತ್ತಿಕೊಂಡು ಹೋಗಿದ್ದೂ ಗೊತ್ತು, ಸುಪ್ರೀಂ ಕೋರ್ಟ್‌ಗೆ ಹೋಗಿದ್ದೂ ಗೊತ್ತು ಎಂದು ಬಾಂಬ್‌ ಸಿಡಿಸಿದ್ದಾರೆ. ಬೆಂಗಳೂರಲ್ಲಿ ಮಾತನಾಡಿದ ಅವರು, ವಾಸ್ತವಾಂಶ ಜನರಿಗೆ ತಿಳಿಸಬೇಕು ಅನ್ನೋದು ನಮ್ಮ ಆಸೆ ಎಂದು ಅವರು ತಿಳಿಸಿದರು. ರಾಜಕೀಯ ಯಾರೂ ಏನ್ ಬೇಕಾದರೂ ಮಾತಾಡಬಹುದು. ನಾನು ಮಾತಾಡಿದ್ರೆ ಸರ್ಕಾರದ ಹೇಳಿಕೆ ಆಗುತ್ತೆ. ಅಂತಿಮ ವರದಿ ಬರಲಿ, ಮಾತಾಡ್ತೀನಿ. ಹೋಮ್ ಮಿನಿಸ್ಟರ್, ಸಿಎಂ ಅಧಿಕೃತ ಸ್ಟೇಟ್ಮೆಂಟ್ ಮಾಡ್ತಾರೆ. ಬುರುಡೆ ಡೆಲ್ಲಿಗೆ ಎತ್ತಿಕೊಂಡು ಹೋಗಿದ್ದು ಗೊತ್ತೂ, ನಮಗೆ ಆ ಮಾಹಿತಿ ಇದೆ. ಸುಪ್ರೀಂ ಕೋರ್ಟ್‌ಗೆ ಹೋಗಿದ್ದೂ ಗೊತ್ತು. ಪಿಐಎಲ್ ಹಾಕಿದ್ದು ಗೊತ್ತು, ಅಲ್ಲಿ ರಿಜೆಕ್ಟ್ ಆಗಿದ್ದು ಗೊತ್ತು. ಆದ್ರೆ ಪೊಲೀಸ್ ಇಲಾಖೆ ಅವರು ತನಿಖೆ ಮಾಡ್ತಿದ್ದಾರೆ, ವರದಿ ಕೊಡ್ತಾರೆ ಎಂದು ತಿಳಿಸಿದರು. ಇನ್ನು ದಕ್ಷಿಣ ಕನ್ನಡ ಎಸ್ಪಿಗೆ ದೂರು ನೀಡುವುದಕ್ಕೆ ಮುನ್ನವೇ ಚಿನ್ನಯ್ಯನ ಮೂಲಕ ಬುರುಡೆ ಗ್ಯಾಂಗ್‌ ಸುಪ್ರೀಂ ಕೋರ್ಟ್‌ಗೆ…

Read More

ಕಲಬುರ್ಗಿ : ಕಳೆದ 48 ಗಂಟೆಗಳಿಂದ ಕಲ್ಬುರ್ಗಿ ಜಿಲ್ಲೆಯಲ್ಲಿ ಭಾರಿ ಮಳೆ ಸುರಿಯುತ್ತಿದ್ದು, ಇದೀಗ ಪ್ರವಾಹದ ನೀರಿನಲ್ಲಿ ಜಾನುವಾರುಗಳು ಕೊಚ್ಚಿ ಹೋಗಿರುವ ಘಟನೆ ಕಲಬುರ್ಗಿಯಲ್ಲಿ ನಡೆದಿದೆ. ಕಲ್ಬುರ್ಗಿಯಲ್ಲಿ ವರುಣನ ಅಬ್ಬರಕ್ಕೆ ಜನ ಜೀವನ ಸಂಪೂರ್ಣ ತತ್ತರಿಸಿ ಹೋಗಿದೆ. ಇದೀಗ ಪ್ರವಾಹದ ನೀರಿನಲ್ಲಿ ಮೂರು ಜಾನುವಾರುಗಳು ಕೊಚ್ಚಿ ಹೋಗಿವೆ. ಕಲ್ಬುರ್ಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಚಂದ್ರಂಪಳ್ಳಿ ಡ್ಯಾಮ್ ಸಂಪೂರ್ಣವಾಗಿ ನೀರಿನಿಂದ ಬೋರ್ಗರೆಯುತ್ತಿದ್ದು ಚಂದ್ರಪ್ಪಳ್ಳಿ ಜಲಾಶಯದಿಂದ ಅಪಾರ ಪ್ರಮಾಣದಲ್ಲಿ ನೀರು ಬಿಡುಗಡೆ ಮಾಡಲಾಗಿದೆ ಈ ವೇಳೆ 3 ಜಾನುವಾರುಗಳು ಪ್ರವಾಹದ ನೀರಿನಲ್ಲಿ ಕೊಚ್ಚಿ ಹೋಗಿವೆ. ಈ ಒಂದು ದೃಶ್ಯ ವೈರಲಾಗಿದೆ.

Read More

ಕೊಡಗು : ಕೊಡಗಿನಲ್ಲಿ ಭೀಕರವಾದ ಅಪಘಾತ ಸಂಭವಿಸಿದ್ದು, ಸಾರಿಗೆ ಬಸ್ ಹಾಗು ಜೆಸಿಬಿ ಮುಖಾಮುಖಿ ಡಿಕ್ಕಿಯಾಗಿ 15 ಜನರಿಗೆ ಗಂಭೀರವಾದ ಗಾಯಗಳಾಗಿರುವ ಘಟನೆ ಕೊಡಗು ಜಿಲ್ಲೆಯ ಕುಶಲನಗರ ತಾಲೂಕಿನ ಮಾದಪಟ್ಟಣ ಬಳಿ ಒಂದು ಘಟನೆ ನಡೆದಿದೆ. ಘಟನೆಯಲ್ಲಿ ಹೋಂಗಾರ್ಡ್ಸ್ ಸೇರಿದಂತೆ 15 ಹೆಚ್ಚು ಜನರಿಗೆ ಗಂಭೀರವಾದ ಗಾಯಗಳಾಗಿವೆ. ಮಡಿಕೇರಿ ದಸರಾ ಡ್ಯೂಟಿಗೆ ಹೋಂ ಗಾರ್ಡ್ಸ್ ತೆರಳುತ್ತಿದ್ದರು. ಈ ವೇಳೆ ಸಾರಿಗೆ ಬಸ್ ಜೆಸಿಬಿ ಮುಖಾಮುಖಿ ಡಿಕ್ಕಿಯಾಗಿ ಈ ಅಪಘಾತ ಸಂಭಾವಿಸಿದೆ. ಕೂಡಲೇ ಗಾಯಳುಗಳನ್ನು ಕುಶಾಲನಗರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

Read More

ಯಾದಗಿರಿ : ಬೆಂಗಳೂರು ನಗರ ಸೇರಿದಂತೆ ಇಡೀ ರಾಜ್ಯಾದ್ಯಂತ ಭಾರಿ ಮಳೆ ಸುರಿಯುತ್ತಿದ್ದು ಅದರಲ್ಲೂ ಕಲಬುರ್ಗಿ, ವಿಜಯಪುರ,ಯಾದಗಿರಿಯಲ್ಲಿ ಕಳೆದ 48 ಗಂಟೆಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿದೆ. ಭಾರಿ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಕಲ್ಬುರ್ಗಿಯಲ್ಲಿ ಎರಡು ದಿನ ಹಾಗೂ ಯಾದಗಿರಿಯಲ್ಲಿ ಇಂದು ಎಲ್ಲಾ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಹೌದು ಯಾದಗಿರಿಯಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಇದೀಗ ಇಂದು ಎಲ್ಲ ಶಾಲೆಗೆಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಯಾದಗಿರಿ ಜಿಲ್ಲೆಯ ಆದಂತ ಭಾರಿ ಮಳೆ ಸುರಿಯುತ್ತಿದ್ದು, ರಜೆ ಘೋಷಣೆ ಮಾಡಿ ಡಿಡಿಪಿಐ ಚನ್ನಬಸಪ್ಪ ಅವರು ಆದೇಶ ಹೊರಡಿಸಿದ್ದಾರೆ. ಅದೇ ರೀತಿಯಾಗಿ ಕಲ್ಬುರ್ಗಿಯಲ್ಲಿ ಸಹ ಕಳೆದ 48 ಗಂಟೆಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿದೆ ಇದರಿಂದ ಜನ ಜೀವನ ಸಂಪೂರ್ಣವಾಗಿ ಅಸ್ತವ್ಯಸ್ತವಾಗಿದ್ದು, ಮಕ್ಕಳ ಹಿತ ದೃಷ್ಟಿಯಿಂದ ಮುಂಜಾಗ್ರತ ಕ್ರಮವಾಗಿ ರಜೆ ಘೋಷಿಸಿ ಡಿಸಿ ಎಂದು ಸೂಚಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಡಿಡಿಪಿಐ ಸೂರ್ಯಕಾಂತ್ ಮದಾನೆ ರಜೆ ಘೋಷಣೆ ಮಾಡಿ ಸುತ್ತೋಲೆ ಹೊರಡಿಸಿದ್ದಾರೆ.

Read More

ಮೈಸೂರು : ಕನ್ನಡದ ಖ್ಯಾತ ಕಾದಂಬರಿಕಾರ ಎಸ್ ಎಲ್ ಭೈರಪ್ಪನವರ ಚಿತಾಭಸ್ಮ ಇಂದು ವಿಸರ್ಜನೆ ಮಾಡಲಾಯಿತು. ಭೈರಪ್ಪ ಕುಟುಂಬ ಸದಸ್ಯರಿಂದ ಕಾವೇರಿ ನದಿಯಲ್ಲಿ ಭೈರಪ್ಪ ಅವರ ಅಸ್ತಿ ವಿಸರ್ಜನೆ ಮಾಡಲಾಯಿತು. ಶ್ರೀರಂಗಪಟ್ಟಣದ ರಂಗನಾಥ ಸ್ನಾನ ಘಟ್ಟದಲ್ಲಿ ಅಸ್ತಿ ವಿಸರ್ಜನೆ ಮಾಡಲಾಯಿತು. ಈ ವೇಳೆ ಪುತ್ರರಾದ ರವಿಶಂಕರ್, ಉದಯ್ ಶಂಕರ್ ಅವರು ಅಸ್ತಿ ವಿಸರ್ಜಸಿದರು. ಕಳೆದ ಬುಧವಾರ ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿರುವ ರಾಷ್ಟ್ರೋತ್ಥಾನ ಆಸ್ಪತ್ರೆಯಲ್ಲಿ ಹೃದಯಘಾತದಿಂದ ಎಸ್.ಎಲ್ ಭೈರಪ್ಪ ನಿಧನರಾಗಿದ್ದರು. ನಿನ್ನೆ ಮೈಸೂರಿನ ಚಾಮುಂಡಿ ಬೆಟ್ಟದಲ್ಲಿರುವ ಚಿರಶಾಂತಿ ಧಾಮದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಹಾಗು ಬ್ರಾಹ್ಮಣ ಸಂಪ್ರದಾಯದಂತೆ ಅಂತ್ಯಕ್ರಿಯೆ ನೆರವೇರಿತ್ತು.

Read More